ಚಿಕ್ಕಮಗಳೂರು: ತಾಲೂಕಿನ ಬಯಲು ಸೀಮೆಯ ದೇವರಗೊಂಡನಹಳ್ಳಿ ಗ್ರಾಮದ ಜನ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. 1500 ಕ್ಕೂ ಹೆಚ್ಚು ಮಂದಿಯಿರುವ ಗ್ರಾಮದಲ್ಲಿ 800 ಕ್ಕೂ ಅಧಿಕ ಜನರು ಒಂದೇ ಕಾಯಿಲೆಯಿಂದ ನರಳುತ್ತಿದ್ದಾರೆ. ಆದರೆ ಗ್ರಾಮದಲ್ಲಿ ಒಂದೇ ಒಂದು ಡೆಂಗ್ಯೂ (Dengue) ಅಥವಾ ಇತರೆ ಮಾರಕ ಕಾಯಿಲೆ ದೃಢಪಟ್ಟಿಲ್ಲದಿರುವುದು ಅಚ್ಚರಿ ಮೂಡಿಸಿದೆ.
ಎರಡು ತಿಂಗಳ ಹಿಂದೆ ಗ್ರಾಮದ ಕೆಲವರಲ್ಲಿ ಕಾಣಿಸಿಕೊಂಡ ಜ್ವರ, ಮೈ-ಕೈ ನೋವು, ಮಂಡಿನೋವು, ಮೈತುರಿಕೆ ಇಡೀ ಗ್ರಾಮಕ್ಕೆ ಆವರಿಸಿದೆ. ಒಂದೊಂದು ಮನೆಯಲ್ಲಿ ಇಬ್ಬರು ರೋಗಿಗಳು ನರಳುತ್ತಿದ್ದಾರೆ. ಮನೆಗೊಬ್ಬರಂತೆ ದಿನಕ್ಕೊಬ್ಬರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಬರ್ಗರ್ ಕಿಂಗ್ ರೆಸ್ಟೋರೆಂಟ್ ಶೂಟೌಟ್ ಕೇಸ್ – ಮೂವರು ಗ್ಯಾಂಗ್‍ಸ್ಟರ್‌ಗಳ ಎನ್‍ಕೌಂಟರ್
ನಿಗೂಢ ಜ್ವರಕ್ಕೆ ಒಬ್ಬೊಬ್ಬರು 15 ಸಾವಿರ ಹಣ ಖರ್ಚು ಮಾಡಿದ್ದಾರೆ. ಆದರೆ ಕಾಯಿಲೆ ಯಾವುದು ಎಂಬುದು ಮಾತ್ರ ಗೊತ್ತಾಗುತ್ತಿಲ್ಲ. ಅಲ್ಲದೇ ಯಾರಲ್ಲಿಯೂ ಡೆಂಗ್ಯೂ ಆಗಲಿ, ಚಿಕನ್‌ಗುನ್ಯಾ ಆಗಲಿ ಕಾಣಿಸಿಕೊಂಡಿಲ್ಲ. ಇದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಈಗಾಗಲೇ ಖಾಸಗಿ ಹಾಗೂ ಸರ್ಕಾರಿ ಅಸ್ಪತ್ರೆಗೆ ಅಲೆದು ಅಲೆದು ಗ್ರಾಮದ ಜನ ಸುಸ್ತಾಗಿದ್ದಾರೆ. ಮೊದಲು ಜ್ವರ ಬಳಿಕ ಮೈ-ಕೈ ನೋವು, ತುರಿಕೆ-ಉರಿ ಬಾಧಿಸುತ್ತಿದೆ. ಆದರೆ ಮೆಡಿಸನ್ ತೆಗೆದುಕೊಂಡರೂ ಸಾಂಕ್ರಾಮಿಕ ರೋಗದಿಂದ ಮುಕ್ತಿ ಸಿಕ್ಕಿಲ್ಲ.
ಪ್ರಕರಣ ತಿಳಿದ ಕೂಡಲೇ ಆರೋಗ್ಯ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಊರಿನ ಮನೆಯಲ್ಲಿ ಇದ್ದ ನೀರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಅದರಲ್ಲಿ ಡೆಂಗ್ಯೂ, ಚಿಕನ್‌ಗುನ್ಯಾ ಬರುವಂತಹ ಸೊಳ್ಳೆಗಳ ಮಾದರಿ ಕೂಡ ಪತ್ತೆಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಲಾರ್ವ ಕೊಂಡೊಯ್ದಿದ್ದಾರೆ. ಅದರ ವರದಿ ಏನು ಬರುತ್ತೋ ಎಂದು ಹಳ್ಳಿಗರು ಅತಂತ್ರಕ್ಕೀಡಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಪರಿಷತ್ ಸದಸ್ಯ ಸಿ.ಟಿ.ರವಿ ಜಿಲ್ಲಾಡಳಿತ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ 6 ದಿನ ಇ.ಡಿ ಕಸ್ಟಡಿಗೆ
ದೇವಗೊಂಡನಹಳ್ಳಿಯ ಜನರ ಜ್ವರ, ಮೈ-ಕೈ ನೋವು, ಮಂಡಿನೋವಿಗೆ ಕಾರಣವೇನು ಎಂಬುದೇ ಗೊತ್ತಾಗುತ್ತಿಲ್ಲ. ಊರಿಗೆ ಊರೇ ಮಲಗಿದರೂ ಯಾರಿಗೂ ಡೆಂಗ್ಯೂ, ಚಿಕನ್‌ಗುನ್ಯಾ ಪಾಸಿಟಿವ್ ಬಂದಿಲ್ಲ. ಇದು ಜನರ ಆತಂಕಕ್ಕೆ ಕಾರಣವಾಗಿದೆ.
ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಹೊಸ ಸಂಶೋಧನೆಗಳು ಅಚ್ಚರಿ ಮೂಡಿಸುತ್ತಿದ್ದರೆ, ಹೊಸ ಮಾದರಿಯ ವೈರಸ್‌ಗಳು ವಿಶ್ವದಾದ್ಯಂತ ಜನರ ನಿದ್ದೆಗೆಡಿಸಿವೆ. ಈಚೆಗೆ ಚೀನಾದಲ್ಲಿ ನ್ಯುಮೋನಿಯಾ ಮಾದರಿಯ ವೈರಸ್ ಪತ್ತೆಯಾಗಿತ್ತು. ಇದೀಗ ಜಪಾನ್‌ನಲ್ಲಿ (Japan) ಅತ್ಯಂತ ಭಯಾನಕವಾದ ಮಾಂಸ ತಿನ್ನುವ ವೈರಸ್‌ವೊಂದು (Flesh Eating Bacteria) ಕಾಣಿಸಿಕೊಂಡಿದೆ. ಈ ವೈರಸ್‌ನಿಂದ ಭಾರತಕ್ಕೆ ಯಾವುದೇ ಆತಂಕ ಸದ್ಯಕ್ಕೆ ಇಲ್ಲ. ಆದ್ರೆ ನಿರ್ಲಕ್ಷ್ಯ ವಹಿಸಿದ್ರೆ ಸಂಕಷ್ಟ ಕಟ್ಟಿಟ್ಟಬುತ್ತಿ ಎಂದು ಸಾಂಕ್ರಾಮಿಕ ರೋಗತಜ್ಞರು ಹೇಳುತ್ತಾರೆ.
2020-2021ರ ವೇಳೆಗೆ ಚೀನಾದ (China) ವುಹಾನ್ ಲ್ಯಾಬ್‌ವೊಂದರಲ್ಲಾದ ಯಡವಟ್ಟಿನಿಂದ ಇಡೀ ವಿಶ್ವವನ್ನೇ ಕೊರೊನಾ ವೈರಸ್ ಕಾಡಿತ್ತು. ಆದ್ರೆ ಇದಕ್ಕೂ ಮುನ್ನವೇ ಎಬೋಲಾ, ಮಾರ್ಬರ್ಗ್, ರೇಬಿಸ್ ಹಾಗೂ ಸಿಡುಬು, ಹಂಟಾ ದಂತಹ ವೈರಸ್‌ಗಳು ವಿಶ್ವವವನ್ನು ಕಾಡಿದ್ದವು. ಈ ಎಲ್ಲ ವೈರಸ್‌ಗಳಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲೇ ಜಪಾನ್‌ನಲ್ಲಿ ಹುಟ್ಟಿಕೊಂಡ ವೈರಸ್‌ವೊಂದು ಜನರ ನಿದ್ದೆಗೆಡಿಸಿದೆ. ಮನುಷ್ಯನ ದೇಹದ ಮಾಂಸ ತಿನ್ನುವ ವೈರಸ್ ಇದಾಗಿದ್ದು, ಬೇರೆ ದೇಶಗಳಿಗೂ ಹರಡುವ ಆತಂಕ ಹುಟ್ಟಿಸಿದೆ. 2022ರಲ್ಲಿ ಕನಿಷ್ಠ 5 ಯುರೋಪಿಯನ್ ದೇಶಗಳಲ್ಲಿ ಈ ವೈರಸ್ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ವೈರಸ್‌ಗೆ ಹೊಸ ಔಷಧಿಯನ್ನು ಕಂಡುಹಿಡಿಯುವತ್ತ ಚಿತ್ತ ಹರಿಸಿದ್ದಾರೆ.
ಹೌದು. ಮಾಂಸ ತಿನ್ನುವ ಬ್ಯಾಕ್ಟೀರಿಯಾ ಹೊಸ ಆತಂಕ ಸೃಷ್ಟಿಸಿದೆ. ಜಪಾನ್‌ನಲ್ಲಿ ಹರಡುತ್ತಿರುವ ಈ ಅಪರೂಪದ ಬ್ಯಾಕ್ಟೀರಿಯಾ, ಗಂಭೀರ ಕಾಯಿಲೆ ಉಂಟುಮಾಡುತ್ತಿದ್ದು, 48 ಗಂಟೆಗಳಲ್ಲಿ ಸಾವಿಗೆ ಕಾರಣವಾಗುವಷ್ಟು ಅಪಾಯಕಾರಿಯಾಗಿದೆ. ಇದು ವೈದ್ಯಕೀಯ ಲೋಕಕ್ಕೆ ಹೊಸ ಸವಾಲೊಡ್ಡಿದೆ. ಕೋವಿಡ್ ಸಮಯದ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಜಪಾನ್‌ನಲ್ಲಿ ಇದು ಕಾಣಿಸಿಕೊಂಡಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ. ಜಪಾನ್‌ನಲ್ಲಿ ಸ್ಟ್ರೆಪ್ಟೋಕೊಕ್ಕಾಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ (ಎಸ್‌ಟಿಎಸ್‌ಎಸ್ – Streptococcal Toxic Shock Syndrome) ಎಂಬ ಹೊಸ ವೈರಸ್ ಹುಟ್ಟಿಕೊಂಡಿದ್ದು, ಇದು ಇತ್ತೀಚಿನ ದಿನಗಳಲ್ಲಿ ಏರಿಕೆ ಕಂಡಿದೆ.
ಕಳೆದ ವರ್ಷ 941 ಪ್ರಕರಣಗಳು ದಾಖಲಾಗಿತ್ತು. ಆದ್ರೆ ಪ್ರಸಕ್ತ ವರ್ಷದಲ್ಲಿ ಈಗಾಗಲೇ ಪ್ರಕರಣಗಳ ಸಂಖ್ಯೆ 1,000ಕ್ಕೂ ಹೆಚ್ಚಿದೆ. ಈ ವರ್ಷಾಂತ್ಯಕ್ಕೆ ಇದರ ಸಂಖ್ಯೆ ಇನ್ನಷ್ಟು ದುಪ್ಪಟ್ಟಾಗಲಿದೆ ಎಂದು ತಜ್ಞ ವೈದ್ಯರು (Doctors) ಅಂದಾಜಿಸಿರುವುದಾಗಿ ಸಾಂಕ್ರಾಮಿಕ ಕಾಯಿಲೆಗಳ ರಾಷ್ಟ್ರೀಯ ಸಂಸ್ಥೆ ವರದಿ ಮಾಡಿದೆ.
ಅಷ್ಟಕ್ಕೂ ಈ ವೈರಸ್ ಹುಟ್ಟಿಕೊಂಡಿದ್ದು ಹೇಗೆ? ಇದರ ಅಪಾಯದ ತೀವ್ರತೆ ಎಷ್ಟು? ಇದು ಕೊರೊನಾದಂತೆ ವಿಶ್ವಕ್ಕೆ ವ್ಯಾಪಿಸುವ ಸಾಧ್ಯತೆ ಇದೆಯೇ? ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ಟಾಕ್ಸಿಕ್ ಶಾಕ್ ಸಿಂಡ್ರೋಮ್ ಲಕ್ಷಣಗಳೇನು?
ಈ ಕಾಯಿಲೆಯಲ್ಲಿ ಮರಣ ದರ ಶೇ.30ರಷ್ಟು ಇದ್ದು, ಅಪಾಯದ ಕರೆಗಂಟೆ ಬಾರಿಸಿದೆ. ಗ್ರೂಪ್ ಎ ಸ್ಟ್ರೆಪ್ಟೋಕೊಕ್ಕಸ್ (GAS), ಮಕ್ಕಳಲ್ಲಿ ಸ್ಟ್ರೆಪ್ ಥ್ರೋಟ್ ಎಂದು ಕರೆಯಲಾಗುವ ಲಘು ಕಾಯಿಲೆಯನ್ನು ಉಂಟುಮಾಡುತ್ತದೆ. ಇದರಲ್ಲಿ ಗಂಟಲು ನೋವು ಮತ್ತು ಊದುವಿಕೆ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಅಂಗಾಂಗ ನೋವು, ಊತ, ಜ್ವರ ಹಾಗೂ 24 ರಿಂದ 48 ಗಂಟೆಯೊಳಗೆ ಕಡಿಮೆ ರಕ್ತದೊತ್ತಡದಂತಹ ಲಕ್ಷಣಗಳನ್ನು ತ್ವರಿತವಾಗಿ ಉಂಟುಮಾಡಬಹುದು. ಇದು ಜೀವಕೋಶಗಳ ಸಾವು, ಉಸಿರಾಟದ ತೊಂದರೆ, ಅಂಗಾಂಗ ವೈಫಲ್ಯ ಹಾಗೂ ಸಾವಿಗೆ ಕೂಡ ಕಾರಣವಾಗಬಹುದು. ವಯಸ್ಕರು, ಮುಖ್ಯವಾಗಿ 50 ವರ್ಷ ದಾಟಿದವರಿಗೆ ಈ ಕಾಯಿಲೆ ಹೆಚ್ಚು ಅಪಾಯಕಾರಿಯಾಗಿದೆ. ಅಲ್ಲದೇ ಈ ವೈರಸ್ ಕಾಣಿಸಿಕೊಂಡ 48 ಗಂಟೆಗಳಲ್ಲಿ ಮನುಷ್ಯ ಸಾಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಟೋಕಿಯೋ ಮಹಿಳಾ ವೈದ್ಯಕೀಯ ಕಾಲೇಜಿನ ಸಾಂಕ್ರಾಮಿಕ ಕಾಯಿಲೆ ವಿಭಾಗದ ಪ್ರೊಫೆಸರ್ ಕೆನ್ ಕಿಕುಚಿ ತಿಳಿಸಿದ್ದಾರೆ.
ಚಿಕಿತ್ಸೆ ಏನು?
ಟಾಕ್ಸಿಕ್ ಶಾಕ್ ಸಿಂಡ್ರೋಮ್ ವೈರಸ್‌ಗೆ ನಿಖರ ಚಿಕಿತ್ಸೆ ಇಲ್ಲವಾದರೂ ತಾತ್ಕಾಲಿಕ ಚಿತ್ಸೆಗಾಗಿ ʻIV ʼ ಆಂಟಿಬಯೊಟಿಕ್ ಕಂಡುಹಿಡಿಯಲಾಗಿದೆ. ಇದು ರಕ್ತದೊತ್ತಡ ಕಡಿಮೆ ಮಾಡುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ವೈರಸ್ ವಿರುದ್ಧ ಹೋರಾಟುವ ಶಕ್ತಿ ಒದಗಿಸುತ್ತದೆ. ಅಲ್ಲದೇ ಅಂಗಾಗ ವೈಫಲ್ಯತೆ ಮತ್ತು ಪ್ರಾಣಹಾನಿಯಂತಹ ತೀವ್ರ ಸಮಸ್ಯೆಗೆ ಸಿಲುಕದಂತೆ ನೋಡಿಕೊಳ್ಳುತ್ತದೆ.
ರೋಗ ನಿರ್ಣಯಿಸುವುದು ಹೇಗೆ?
ಅಪಾಯಕಾರಿ ಟಾಕ್ಸಿಕ್ ಶಾಕ್ ಸಿಂಡ್ರೋಮ್ ನಿರ್ಣಯಿಸಲು ಕೆಲವು ಪರೀಕ್ಷಾ ವಿಧಾನಗಳಿವೆ. ಮೊದಲನೆಯದ್ದಾಗಿ ರಕ್ತ ಪರೀಕ್ಷೆ ನಡೆಸಲಾಗುತ್ತದೆ. ಇದರೊಂದಿಗೆ ಕಿಡ್ನಿ, ಕಡಿಮೆ ರಕ್ತದೊತ್ತಡ, ಪಿತ್ತಜನಕಾಂಗ ಸಮಸ್ಯೆಗಳಿರುವ ಬಗ್ಗೆ ಗುರುತಿಸಲಾಗುತ್ತದೆ. ಜೊತೆಗೆ ಅಂಗಾಗ ವೈಫಲ್ಯಗಳು ಕಂಡುಬಂದಿದ್ದರೆ ಆಗ ಕಾಯಿಲೆಗೆ ತುತ್ತಾಗಿರುವ ಬಗ್ಗೆ ದೃಢೀಕರಿಸಲಾಗುತ್ತದೆ.
ಮುಂಜಾಗ್ರತಾ ಕ್ರಮ ಏನು?
* ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟುಕೊಳ್ಳಬೇಕು
* ಯಾವುದೇ ವಸ್ತುಗಳನ್ನು ಮುಟ್ಟುವ ಮುನ್ನ ಕೈಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು.
* ಕೆಮ್ಮುವಾಗ ಸೀನುವಾಗ ಬಾಯಿ, ಮೂಗನ್ನು ಕೈನಿಂದ ಮುಚ್ಚಿಕೊಳ್ಳಬೇಕು ಅಥವಾ ಬಟ್ಟೆಯನ್ನು ಅಡ್ಡಲಾಗಿಟ್ಟುಕೊಳ್ಳಬೇಕು.
* ದೇಹದಲ್ಲಿ ಗಾಯಗೊಂಡ ಭಾಗಗಳನ್ನು ಸೂಕ್ಷವಾಗಿ- ನೋಡಿಕೊಳ್ಳಬೇಕು, ಸೆಪ್ಟಿಕ್‌ಗೆ ಅವಕಾಶ ನೀಡಬಾರದು.
* ಸೋಂಕಿನ ಬಗ್ಗೆ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬುದು ತಜ್ಞರ ಸಲಹೆ.
ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ (Kangana Ranaut) ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಕುರಿತು ಅವರೇ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಈ ಹನ್ನೆರಡು ತಿಂಗಳಲ್ಲಿ ಒಟ್ಟು ನಾಲ್ಕು ಬಾರಿ ಅವರು ವಿವಿಧ ಕಾಯಿಲೆಗಳಿಗೆ ತುತ್ತಾಗಿದ್ದು, ಯಾವೆಲ್ಲ ಕಾಯಿಲೆಗಳು ಅವಾಗಿದ್ದವು ಎನ್ನುವುದನ್ನೂ ಅವರು ಹೇಳಿಕೊಂಡಿದ್ದಾರೆ.
ಕೋವಿಡ್, ಡೆಂಘಿ, ಹಂದಿ ಜ್ವರ, ಕೋವಿಡ್ ಒಮಿಕ್ರಾನ್ ಹೀಗೆ ಸಾಲು ಸಾಲು ರೋಗಗಳು ಕಂಗನಾ ಅವರನ್ನು ಬಾಧಿಸಿವೆಯಂತೆ. ಯಾಕೆ ಈ ಮಾಹಿತಿಯನ್ನು ಕಂಗನಾ ಹಂಚಿಕೊಂಡಿದ್ದಾರೆ ಎನ್ನುವ ಕುರಿತು ಅವರು ಬರೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಎಷ್ಟೋ ಜನರು ಕುಸಿದು ಹೋಗುತ್ತಾರೆ, ಹತಾಶೆ ಕಾಣಿಸಿಕೊಳ್ಳುತ್ತದೆ. ಆದರೆ, ಅದರಿಂದ ಶರವೇಗದಲ್ಲಿ ಆಚೆ ಬರಬೇಕು ಎಂದು ಉತ್ಸಾಹ ತುಂಬಿದ್ದಾರೆ.
ಸದ್ಯ ಕಂಗನಾ ರಣಾವತ್ ಚಂದ್ರಮುಖಿ 2 ಸಿನಿಮಾದ ಪ್ರಚಾರದಲ್ಲೂ ಭಾಗಿಯಾಗುತ್ತಿದ್ದಾರೆ. ಈ ಸಿನಿಮಾ ಕುರಿತು ಅವರು ಮಾತನಾಡಿ, ‘ನನ್ನ ನಟನಾ ವೃತ್ತಿಜೀವನದಲ್ಲಿ ನಾನು ಚಂದ್ರಮುಖಿ 2 ಚಿತ್ರ ಮಾಡಿಲ್ಲ. ಅಸಲಿ ವಿಷಯವೆಂದರೆ, ನಾನು ಯಾರನ್ನೂ ಆಫರ್ ಕೇಳಿಲ್ಲ. ಮೊದಲ ಬಾರಿಗೆ ನಾನು ನಿರ್ದೇಶಕ ಪಿ. ವಾಸು ಅವರನ್ನು ಕೇಳಿದೆ. ಈ ಚಿತ್ರದಲ್ಲಿ ವಾಸು ಅವರು ನನ್ನ ಪಾತ್ರದ ಜೊತೆಗೆ ಪ್ರತಿ ಪಾತ್ರಕ್ಕೂ ಸಮಾನ ಪ್ರಾಮುಖ್ಯತೆ ನೀಡಿದ್ದಾರೆ.ಇಡೀ ಕ್ರೆಡಿಟ್ ಅವರಿಗೆ ಸಲ್ಲುತ್ತದೆ. ಲಾರೆನ್ಸ್ ಮಾಸ್ಟರ್ ಅನೇಕರಿಗೆ ಸ್ಫೂರ್ತಿ’ ಎಂದಿದ್ದಾರೆ.
ಸಿಯೋಲ್: ಉತ್ತರ ಕೊರಿಯಾದಲ್ಲಿ ಏಕಾಏಕಿ ಕೋವಿಡ್ ಪ್ರಕರಣಗಳ ಏರಿಕೆ ನಡುವೆಯೇ ಇನ್ನೊಂದು ಸಾಂಕ್ರಾಮಿಕ ರೋಗವೊಂದು ಸ್ಫೋಟಿಸಿರುವುದಾಗಿ ಗುರುವಾರ ವರದಿಯಾಗಿದೆ. ಈ ಹೊಸ ಕಾಯಿಲೆಯಿಂದ ಬಳಲುತ್ತಿರುವವರಿಗೆ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ತಮ್ಮ ಖಾಸಗಿ ಔಷಧಿಗಳನ್ನು ದಾನಮಾಡಿದ್ದಾರೆ ಎನ್ನಲಾಗಿದೆ.
ಹೊಸ ರೋಗ ಎಷ್ಟು ಗಂಭೀರವಾಗಿದೆ ಎಂಬುದು ಅಸ್ಪಷ್ಟವಾಗಿದೆ. ಆದರೆ ಹೊರಗಿನವರು ಹೇಳುವ ಪ್ರಕಾರ ಕಿಮ್ ಜಾಂಗ್ ಉನ್ ನಾಯಕನಾಗಿ ತನ್ನ ಮೇಲಿರುವ ಕಳಂಕವನ್ನು ನಿವಾರಿಸಲು ಸಾರ್ವಜನಿಕರ ಕಾಳಜಿ ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮೆಟ್ರೋ ಸಂಚಾರ ರಾತ್ರಿ 1.30ರ ವರೆಗೂ ವಿಸ್ತರಣೆ – ಯಾಕೆ ಗೊತ್ತೇ?
ಹೊಸ ರೋಗ ಖಚಿತಪಡಿಸಿಕೊಂಡವರಿಗೆ ಕಿಮ್ ಬುಧವಾರ ತನ್ನ ಕುಟುಂಬದವರಿಗೆ ಮೀಸಲುಪಡಿಸಿದ್ದ ಔಷಧಿಗಳನ್ನು ನೀಡಿದ್ದಾರೆ ಎಂದು ಅಧಿಕೃತ ಕೊರಿಯಾದ ಕೇಂದ್ರ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದರೊಂದಿಗೆ ಕಿಮ್ ಹಾಗೂ ಅವರ ಪತ್ನಿ ರಿ ಸೋಲ್ ಜು ದಾನಮಾಡುವ ಔಷಧಿಗಳನ್ನು ಪರಿಶೀಲಿಸುತ್ತಿದ್ದ ಫೋಟೋವನ್ನು ರೋಡಾಂಗ್ ಸಿನ್ಮುನ್ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿದೆ. ಇದನ್ನೂ ಓದಿ: ಎಟಿಎಂನಲ್ಲಿ ಬಂತು 5 ಪಟ್ಟು ಹೆಚ್ಚು ಕ್ಯಾಶ್! – ಸುದ್ದಿ ಕೇಳುತ್ತಲೇ ಮುಗಿಬಿದ್ರು ಜನ
ಉತ್ತರ ಕೊರಿಯಾದಲ್ಲಿ ಯಾವ ರೋಗ ಹರಡುತ್ತಿದೆ ಹಾಗೂ ಎಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಕೆಲವು ವೀಕ್ಷಕರ ಪ್ರಕಾರ ಟೈಫಾಯಿಡ್, ಭೇದಿ ಅಥವಾ ಕಾಲಾರಾದಂತಹ ರೋಗ ಇರಬಹುದು ಎನ್ನಲಾಗಿದೆ.
ಬರ್ನ್: ಮಂಕಿಪಾಕ್ಸ್ ವೈರಸ್ ಹರಡುವಿಕೆ ಬಗ್ಗೆ ಜಾಗತಿಕವಾಗಿ ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ(WHO) ಲಸಿಕೆ ಸೇರಿದಂತೆ ಇತರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮಂಕಿಪಾಕ್ಸ್ ವೈರಸ್ ಜಾಗತಿಕವಾಗಿ ಹರಡುತ್ತಿದ್ದು, ಇದನ್ನು ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ವರ್ಗೀಕರಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ನಿರ್ಧರಿಸಲು ಮುಂದಿನ ವಾರ ತುರ್ತು ಸಭೆ ನಡೆಸಲಾಗುವುದು ಎಂದು ತಿಳಿಸಿದೆ.
ಈ ಬಗ್ಗೆ ತಿಳಿಸಿದ WHO ಮಹಾನಿರ್ದೇಶಕ ಟೆಡ್ರೋಸ್ ಅಧಾನೋಮ್ ಘೆಬ್ರೆಯೆಸಸ್, ಮಂಕಿಪಾಕ್ಸ್ ಹೆಸರನ್ನು ಬದಲಾಯಿಸಲು ಪ್ರಪಂಚದಾದ್ಯಂತ ತಜ್ಞರು ಚರ್ಚೆ ನಡೆಸಿದ್ದಾರೆ. ಈ ಹೆಸರು ಜನ ಸಮುದಾಯದಲ್ಲಿ ತಾರತಮ್ಯ ಹಾಗೂ ಕಳಂಕಿತವಾಗಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಮಂಕಿಪಾಕ್ಸ್ ಹೆಸರು ಬದಲಾವಣೆ ಬಗ್ಗೆ ನಾವು ಪ್ರಪಂಚದಾದ್ಯಂತ ತಜ್ಞರೊಂದಿಗೆ ಚರ್ಚೆ ನಡೆಸಿದ್ದೇವೆ. ಈ ಬಗ್ಗೆ WHO ಶೀಘ್ರವೇ ಹೊಸ ಹೆಸರನ್ನು ಘೋಷಿಸಲಿದೆ ಎಂದು ತಿಳಿಸಿದರು.
ಸಾಮೂಹಿಕ ವ್ಯಾಕ್ಸಿನೇಷನ್ ಅಗತ್ಯವಿಲ್ಲ:
ಮಂಕಿಪಾಕ್ಸ್ ವೈರಸ್‌ಗೆ ಜನರು ಸಾಮೂಹಿಕವಾಗಿ ಲಸಿಕೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಕೇವಲ ಮಂಕಿಪಾಕ್ಸ್ ಹರಡುವಿಕೆಯ ಅಪಾಯದಲ್ಲಿರುವ ಪ್ರದೇಶಗಳಲ್ಲಿ ಆರೋಗ್ಯ ಕಾರ್ಯಕತರು, ಆರ್ಥೋಪಾಕ್ಸ್ ವೈರಸ್‌ಗಳೊಂದಿಗೆ ಕೆಲಸ ಮಾಡುವ ಪ್ರಯೋಗಾಲಯದ ಸಿಬ್ಬಂದಿ, ಪರೀಕ್ಷೆಯನ್ನು ನಡೆಸುವ ಕ್ಲಿನಿಕಲ್ ಸಿಬ್ಬಂದಿ ಮಾತ್ರವೇ ಲಸಿಕೆಗಳನ್ನು ತೆಗೆದುಕೊಳ್ಳಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ಸತತ 8ನೇ ಬಾರಿಗೆ ಪರಿಷತ್‍ನಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದ ಹೊರಟ್ಟಿ
ಆದರೂ ಅಪಾಯವಿರುವ ಗರ್ಭಿಣಿಯರು, ಮಕ್ಕಳು ಹಾಗೂ ಹೆಚ್‌ಐವಿ ಸೋಂಕಿತರು ಲಸಿಕೆಗಳನ್ನು ಪಡೆಯಬಹುದು ಎಂದು WHO ತಿಳಿಸಿದೆ.
ಬರ್ನ್: ಯುರೋಪ್ ಸೇರಿದಂತೆ ಹಲವು ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(WHO) ಕಳವಳ ವ್ಯಕ್ತಪಡಿಸಿದೆ. ವೈರಸ್ ಹರಡದಂತೆ ಕಣ್ಗಾವಲು ಹೆಚ್ಚಿಸುವಂತೆ ರೋಗ ಪೀಡಿತ ದೇಶಗಳಿಗೆ ಮನವಿ ಮಾಡಿದೆ.
ರೋಗ ಹರಡುವಿಕೆ ಬಗ್ಗೆ ತನಿಖೆ ನಡೆಯುತ್ತಿದೆ. ಆದರೂ ಒಂದೇ ಸಮಯದಲ್ಲಿ ಏಕಾಏಕಿಯಾಗಿ ಹಲವು ದೇಶಗಳಿಗೆ ವೈರಸ್ ಹರಡುತ್ತಿರುವುದು ಆತಂಕಕಾರಿಯಾಗಿದೆ. ವೈರಸ್‌ನ ಹಠಾತ್ತನೆಯ ಗೋಚರಿಸುವಿಕೆ ಹೀಗೆಯೇ ಸ್ವಲ್ಪ ಸಮಯದ ವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸ್ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ಆಸ್ಪತ್ರೆ ಆವರಣದಲ್ಲಿಯೇ ಗುಂಡಿನ ದಾಳಿ – ನಾಲ್ವರು ಸಾವು
ಮೇ 7 ರಂದು ಬ್ರಿಟನ್‌ನಲ್ಲಿ ಮಂಕಿಪಾಕ್ಸ್ ಮೊದಲ ಪ್ರಕರಣ ವರದಿಯಾಗಿತ್ತು. ಇದೀಗ ಪಶ್ಚಿಮ ಹಾಗೂ ಮಧ್ಯ ಆಫ್ರಿಕಾದ 30 ದೇಶಗಳಲ್ಲಿ 550ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ ಎಂದು WHO ತಿಳಿಸಿದೆ.
– ಕೋಟಿ ಜನರಲ್ಲಿ ಒಬ್ಬರಿಗೆ ಬರುವ ಕಾಯಿಲೆಯಿಂದ ಬಳಲುತ್ತಿರುವ ಯುವತಿ
ಚಿಕ್ಕಮಗಳೂರು: ಹುಟ್ಟಿದಾಗಿನಿಂದ ಶಾಲಾ-ಕಾಲೇಜು ಮೆಟ್ಟಿಲು ಹತ್ತದ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅರಳಿಕೊಪ್ಪ ಗ್ರಾಮದ ಯುವತಿ ಮೊದಲ ಬಾರಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಪಾಸ್ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾಳೆ.
ಶಾಲಾ-ಕಾಲೇಜಿಗೆ ಹೋಗದೆ, ಮನೆಯಲ್ಲೇ ಓದಿ ದೀಪಿಕಾ ಮೊದಲ ಬಾರಿಗೆ ದ್ವಿತೀಯ ಪಿಯುಸಿ ಪಾಸ್ ಮಾಡಿದ್ದಾಳೆ. ಕೋಟಿ ಜನರಲ್ಲಿ ಒಬ್ಬರಿಗೆ ಬರುವ ಕಾಯಿಲೆಯಿಂದ ಈಕೆ ಬಳಲುತ್ತಿದ್ದಾಳೆ. ಶಾಲಾ-ಕಾಲೇಜು ಸೇರಿದಂತೆ ಮನೆಯಿಂದ ಹೊರ ಹೋಗುವಂತಿಲ್ಲ. ಈಕೆಯದ್ದು ಮನೆಯೊಳಗಿನ ಜೀವನ. ಆದರೂ ಬಾಳೆಹೊನ್ನೂರು ಸಮೀಪದ ಅರಳಿಕೊಪ್ಪ ಗ್ರಾಮದ ಸುಧಾಕರ್-ಪ್ರತಿಮಾ ದಂಪತಿಯ ಪುತ್ರಿ ದೀಪಕಾ ಮೊದಲ ಸಲವೇ ಪಿಯುಸಿ ಪಾಸ್ ಮಾಡಿ ಮಾದರಿಯಾಗಿದ್ದಾಳೆ. ಇದನ್ನೂ ಓದಿ: ರಾಜ್ಯ ಸರ್ಕಾರಗಳು ಜಿಎಸ್‍ಟಿಗೆ ಸೇರಿಸಲು ಒಪ್ಪದ ಹೊರತು ಪೆಟ್ರೋಲ್ ಬೆಲೆ ಇಳಿಯಲ್ಲ: ಹರ್ದೀಪ್ ಸಿಂಗ್ ಪುರಿ
ಈಕೆ ಹುಟ್ಟಿದಾಗಿನಿಂದ ಯಾವುದೇ ಶಾಲಾ-ಕಾಲೇಜಿಗೆ ಹೋಗಿಲ್ಲ. ಯಾವ ಶಿಕ್ಷಕರ ಪಾಠವನ್ನೂ ಕೇಳಿಲ್ಲ. ಯಾವ ಟ್ಯೂಷನ್‍ಗೂ ಹೋಗಿಲ್ಲ. ತಾನೇ ಓದಿ, ತನ್ನ ಗ್ರಹಿಕಾ ಶಕ್ತಿಯಿಂದ ಮೊದಲ ಸಲ ಪರೀಕ್ಷೆ ಎದುರಿಸಿ ಪಿಯುಸಿ ಪಾಸ್ ಮಾಡಿದ್ದಾಳೆ. ಕಳೆದ ಎರಡು ವರ್ಷದ ಹಿಂದೆ ಸರ್ಕಾರ ಖಾಸಗಿಯಾಗಿ ನಡೆಸಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನೂ ಕೂಡ ಪಾಸ್ ಮಾಡಿದ್ದಳು. ಓದಿನ ಜೊತೆಗೆ ಚಿತ್ರಕಲೆ, ಎಂಬ್ರಾಯ್ಡಿಂಗ್, ಕಂಪ್ಯೂಟರ್, ಟೈಲರಿಂಗ್ ಕೂಡ ಮಾಡಿದ್ದಾಳೆ.
ತನ್ನಂತೆ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ತನ್ನ ತಂಗಿಗೂ ತಾನೇ ಪಾಠ ಮಾಡುತ್ತಿದ್ದಾಳೆ. ಹೆತ್ತವರು ಕೂಡ ಕಳೆದ 20 ವರ್ಷಗಳಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮಕ್ಕಳನ್ನು ಯಾವುದೇ ಕೀಳಿರಿಮೆ ಬಾರದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳುತ್ತಿದ್ದಾರೆ. ಓದಿ ದೊಡ್ಡವಳಾಗಿ ತನ್ನಂತೆ ಅಪರೂಪದ ಕಾಯಿಲೆಯಿಂದ ಬಳಲುವವರ ಸೇವೆ ಮಾಡಬೇಕೆಂಬ ಆಸೆ ದೀಪಿಕಾಳದ್ದಾಗಿದೆ. ಹೆತ್ತವರು ಕೂಡ ಮಗಳಿಗೆ ಯಾವುದಾದರೂ ಒಂದು ಕೆಲಸ ಸಿಕ್ಕರೆ ಅವಳ ಜೀವನಕ್ಕೂ ಸಹಕಾರಿಯಾಗಲಿದೆ. ಜೊತೆಗೆ ನಮಗೂ ತುಸು ನೆಮ್ಮದಿ ಸಿಗಲಿದೆ ಎಂದಿದ್ದಾರೆ.
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇಂದಿಗೂ ಕೊರೊನಾ ಪಾಸಿಟಿವ್ ಪ್ರಮಾಣ ಏರಿಳಿತ ಅಗುತ್ತಿದೆ. ಕೋವಿಡ್ ಸೋಂಕಿನಿಂದ ತತ್ತರಿಸಿದ ಜಿಲ್ಲೆಯಲ್ಲಿ ಈಗ ಚಿಕ್ಕ ಮಕ್ಕಳಿಗೆ ವಿಚಿತ್ರ ಕಾಯಿಲೆ ಬರಲಾರಂಭಿಸಿದೆ. ವಿಪರೀತ ಜ್ವರ, ಮೈಯೆಲ್ಲ ಕಜ್ಜಿ, ತುರಿಕೆ, ಆಗಾಗ್ಗೆ ವಾಂತಿಯಂತಹ ಲಕ್ಷಣಗಳಿರುವ ಕಾಯಿಲೆ ಜಿಲ್ಲೆಯ ಹಲವೆಡೆ ಕಾಣಿಸಿಕೊಂಡಿದೆ. ಹೀಗಾಗಿ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.
ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಿಸಿದರೂ ನೆಗೆಟಿವ್ ಬರುತ್ತಿದೆ. ಡೇಂಘೀ, ಚಿಕನ್ ಗುನ್ಯಾ ವರದಿ ಸಹ ನೆಗೆಟಿವ್. ಆದರೆ ಈ ಕಾಯಿಲೆಗಳ ಸಾಮಾನ್ಯ ಲಕ್ಷಣಗಳು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿವೆ. ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಲವು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಬಗೆಯ ಲಕ್ಷಣಗಳಿರುವ ರೋಗಿಗಳು ಕಂಡು ಬರುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಈಚೆಗೆ ಇಲ್ಲಿನ ಸುಮಾರು ಮಕ್ಕಳು ಮೈಸೂರಿನ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಕಾಯಿಲೆ ಸೊಳ್ಳೆಗಳಿಂದ ಹರಡುತ್ತಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇದನ್ನೂ ಓದಿ: ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್, ರಬ್ಬರ್ ಮಾದರಿಯ ಅಕ್ಕಿ ಪತ್ತೆ- ಕಲಬೆರಕೆ ಅರೋಪ
ಇದಕ್ಕೆ ಸಾಕ್ಷಿಯಾಗಿ ಸೊಳ್ಳೆಗಳು ಹೆಚ್ಚು ಇರುವ ಪ್ರದೇಶಗಳಿಂದಲೇ ಜಾಸ್ತಿ ಪ್ರಕರಣಗಳು ವರದಿಯಾಗುತ್ತಿವೆ. ಒಂದು ವಾರಕ್ಕೂ ಹೆಚ್ಚು ಕಾಲ ಜ್ವರ, ಕಜ್ಜಿ, ತುರಿಕೆಯಿಂದ ಕಾಡುವ ಈ ರೋಗ ಸ್ವಲ್ಪ ಹೆಚ್ಚಾದಾಗ ವಾಂತಿಯೂ ಶುರುವಾಗುತ್ತದೆ. ಮಕ್ಕಳಿಗೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ ಬಳಿಕ ಗುಣಮುಖರಾಗುತ್ತಿದ್ದಾರೆ ಎಂದು ಪೋಷಕರು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿಂದು 818 ಕೊರೊನಾ ಕೇಸ್- 21 ಸಾವು, 1,414 ಡಿಸ್ಚಾರ್ಜ್
ಕುಶಾಲನಗರ ಮತ್ತು ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸೊಳ್ಳೆ ಹಾವಳಿ ಹೆಚ್ಚಾಗಿದ್ದು, ಡೆಂಘೀ ಮಾದರಿಯ ಈ ಹೊಸ ರೋಗ ಇಂತಹ ಭಾಗಗಳಲ್ಲೇ ಕಂಡುಬರುತ್ತಿದೆ. ಈ ಎರಡೂ ಪ್ರದೇಶದ ಸ್ಥಳೀಯ ಆಡಳಿತಗಳು ಎಚ್ಚೆತ್ತುಕೊಂಡು ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಸಂಪೂರ್ಣ ಕುಶಾಲನಗರ ತಾಲೂಕಿನಲ್ಲಿ ರೋಗ ಪೀಡಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನುವ ಆತಂಕದ ಮಾತುಗಳು ಗ್ರಾಮದಲ್ಲಿ ಕೇಳಿಬರುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಅರೋಗ್ಯಧಿಕಾರಿ ಡಾಕ್ಟರ್ ವೆಂಕಟೇಶ್, ಈ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿಲ್ಲ. ಚಿಕಿತ್ಸೆ ನೀಡಿರುವ ಮೈಸೂರಿನ ಖಾಸಗಿ ಆಸ್ಪತ್ರೆಯನ್ನು ಸಂಪರ್ಕಿಸಿ ಈ ಸಂಬಂಧ ಮಾಹಿತಿ ಪಡೆಯಲಾಗುವುದು. ಕೆಲವೊಮ್ಮೆ ಖಾಸಗಿ ಆಸ್ಪತ್ರೆಗಳು ಸುಳ್ಳು ಹೇಳಿ ಭಯಪಡಿಸಿರುವ ಸಾಧ್ಯತೆಯೂ ಇರುತ್ತದೆ. ಈಗಾಗಲೇ ಮಾಹಿತಿ ಬಂದ ತಕ್ಷಣವೇ ಒಂದು ತಂಡ ರಚನೆ ಮಾಡಿ, ರೋಗ ಲಕ್ಷಣದ ಬಗ್ಗೆ ಮಾಹಿತಿ ಕಲೆ ಹಾಕಲು ಗ್ರಾಮೀಣ ಭಾಗಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಚಿತ್ರದುರ್ಗ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಈರುಳ್ಳಿ. ಈ ಭಾಗದ ಈರುಳ್ಳಿ ಹೊರರಾಜ್ಯಗಳಿಗೂ ರಫ್ತಾಗುತ್ತದೆ. ಆದರೆ ಈ ಬಾರಿ ಜಿಲ್ಲೆಯ ಹೊಸದುರ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು ಸಾವಿರ ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿರುವ ಈರುಳ್ಳಿಗೆ ಬುಡಕೊಳೆರೋಗ ಕಾಣಿಸಿಕೊಂಡಿದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಭಾಗದ ರೈತರು ವಿವಿಧ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ. ಕಳೆದ ವರ್ಷ ಈರುಳ್ಳಿ ಬೆಲೆ ಕುಸಿತದಿಂದಾಗಿ ಕಂಗಾಲಾಗಿದ್ದರು. ಈ ವರ್ಷ ಉತ್ತಮ ಮಳೆ ಹಾಗೂ ನೀರಿನ ಪ್ರಮಾಣ ಹೆಚ್ಚಿದೆ ಎಂದು ಸಂತಸದಿಂದ ಈರುಳ್ಳಿ ಬಿತ್ತನೆ ಮಾಡಿದ್ದಾರೆ. ಆದರೆ ಇದೀಗ ಬುಡಕೊಳೆ ರೋಗ ಬಿಗ್ ಶಾಕ್ ನೀಡಿದೆ.
ಇದರಿಂದಾಗಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಈರುಳ್ಳಿ ಬೀಜ ತಂದು ಬಿತ್ತನೆ ಮಾಡಿರುವ ಅನ್ನದಾತರು ಭಾರೀ ಆತಂಕಗೊಂಡಿದ್ದಾರೆ. ಹಾನಿಯಾದ ಪ್ರದೇಶಕ್ಕೆ ಇಂದು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ, ಸಲಹೆ ನೀಡಿದರು. ಹೊಸದುರ್ಗ ತಾಲೂಕಿನ ಹೊಸಕುಂದೂರು, ಶ್ರೀರಂಗಪುರ, ಬಾಗೂರು, ಆನಿವಾಳ, ನಾಗೇನಹಳ್ಳಿ ಗ್ರಾಮಗಳ ಸುಮಾರು ಸಾವಿರ ಎಕರೆ ಪ್ರದೇಶದಲ್ಲಿ ಈರುಳ್ಳಿಗೆ ಬುಡಕೊಳೆ ರೋಗ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಓಂಕಾರಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಶೋಭಾ ಅವರು ಹಾನಿಯಾದ ಪ್ರದೇಶದಲ್ಲಿ ಭೇಟಿ ಮಾಡಿ ರೈತರಿಗೆ ರೋಗದ ಬಗ್ಗೆ ಮಾಹಿತಿ ನೀಡಿದರು.
ಈ ರೋಗ ಉಲ್ಬಣಗೊಳ್ಳದಿರಲು ಮ್ಯಾಂಕೊಜೆಟ್ ಮತ್ತು ಮೆಟಾಲಾಕ್ಸಿಲ್ ಅಥವಾ ಮ್ಯಾಂಕೊಜೆಟ್ ಮತ್ತು ಕಾರ್ಜಿಡಿಜಂ ಸಿಂಪರಣೆ ಮಾಡಲು ಸೂಚಿಸಿದರು. ರೈತರೊಂದಿಗೆ ಸಂವಾದ ನಡೆಸಿದರು. ಅನ್ನದಾತರ ಸಮಸ್ಯೆಗಳಿಗೆ ಪರಿಹಾರ ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳ ಈರುಳ್ಳಿ ಬೆಳೆಗಾರರು, ಗ್ರಾಮಸ್ಥರು ಹಾಜರಿದ್ದರು.
ವಾಷಿಂಗ್ಟನ್: ಕ್ಯಾನ್ಸರ್ ರೋಗಿಯೊಬ್ಬರು ನನಗೆ ಈ ಖಾಯಿಲೆ ವಾಸಿಯಾಗುವುದಿಲ್ಲ ಎಂದು ಮನನೊಂದು ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ಗುಂಡು ಹಾರಿಸಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ಡಾಕ್ಟರ್‍ನನ್ನು ಭರತ್ ನರುಮಂಚಿ ಎಂದು ಗುರುತಿಸಲಾಗಿದೆ. ಕ್ಯಾನ್ಸರ್ ರೋಗಿ ಕೂಡ ಒಬ್ಬ ಶಿಶು ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು ತನಗೆ ರೋಗ ವಾಸಿಯಾಗುವುದಿಲ್ಲ ಎಂದು ಮನನೊಂದು ಈ ಕೃತ್ಯಕ್ಕೆ ಕೈ ಹಾಕಿದ್ದಾರೆ.
ಭಾರತ ಮೂಲದ 43 ವರ್ಷದ ವೈದ್ಯೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಹೀಗಾಗಿ ಅವರು ಕೆಲವೇ ದಿನಗಳ ಕಾಲ ಮಾತ್ರ ಬದುಕಲಿದ್ದಾರೆ ಎಂದು ವೈದ್ಯಕೀಯ ವರದಿ ಬಂದಿದೆ. ಈ ವಿಚಾರ ವೈದ್ಯೆಯ ಗಮನಕ್ಕೆ ಬಂದಿದ್ದು, ಖಿನ್ನತೆಗೆ ಜಾರಿದ್ದರು. ನನ್ನ ಕ್ಯಾನ್ಸರ್ ರೋಗ ವಾಸಿಯಾಗುವುದಿಲ್ಲ, ನಾನು ಸಾಯುತ್ತೇನೆ ಎಂದು ವೈದ್ಯರ ಮೇಲೆ ಗುಂಡು ಹಾರಿಸಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.