Tag: diseal

  • ಕಚ್ಛಾ ತೈಲ ಬೆಲೆ ಏರಿಕೆ ನೆಪ ಹೇಳಿ ಪೆಟ್ರೋಲ್, ಡೀಸೆಲ್ ದರ ಏರಿಕೆ: ಸಿದ್ದರಾಮಯ್ಯ

    ಕಚ್ಛಾ ತೈಲ ಬೆಲೆ ಏರಿಕೆ ನೆಪ ಹೇಳಿ ಪೆಟ್ರೋಲ್, ಡೀಸೆಲ್ ದರ ಏರಿಕೆ: ಸಿದ್ದರಾಮಯ್ಯ

    ಬೆಂಗಳೂರು: ಕೇಂದ್ರ ಸರ್ಕಾರ ಬೆಲೆ ಏರಿಕೆ ಮೂಲಕ ಜನರಿಗೆ ಮೋಸ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರ ಕೂಡಲೇ ಕಡಿತಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಎತ್ತಿನ ಗಾಡಿ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಎಷ್ಟು ಇತ್ತು. ಈಗ ಎಷ್ಟು ಇದೆ ಎಂಬುದನ್ನು ಮಾಧ್ಯಮ ಪ್ರತಿನಿಧಿಗಳೇ ಪರಿಶೀಲಿಸಲಿ. ತೆರಿಗೆ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಾದರೂ ನಿಜ ಹೇಳಲಿ. ಸತ್ಯವನ್ನೇಕೆ ಅವರು ಮುಚ್ಚಿಡಬೇಕು. ಜನರ ಮುಂದೆ ಅವರು ನಿಜಾಂಶ ವಿವರಿಸಲಿ ಎಂದರು.

    ಪೆಟ್ರೋಲ್ ದರ ಈಗ ಲೀಟರ್ ಗೆ 106 ರೂ., ಡೀಸೆಲ್ ಬೆಲೆ 100 ರೂ.ಗಳ ವರೆಗೆ ಹೋಗಿದೆ. ಅಡುಗೆ ಅನಿಲ ದರ 900 ರೂ. ಆಗಿದೆ. ವಾಜಪೇಯಿ ಅವರು 1973ರಲ್ಲಿ ಬೆಲೆ ಏರಿಕೆ ವಿರೋಧಿಸಿ ಎತ್ತಿನ ಗಾಡಿಯಲ್ಲಿ ಸಂಸತ್ತಿಗೆ ಬಂದಿರಲಿಲ್ಲವೇ? ಆಗ ಪ್ರತಿಭಟನೆ ಮಾಡಿದವರು ಬಿಜೆಪಿಯವರಲ್ಲವೇ? ಕಾಂಗ್ರೆಸ್ ಪ್ರತಿಭಟನೆ ವಿರೋಧಿಸಿರುವ ಮುಖ್ಯಮಂತ್ರಿ ಹಾಗೂ ಬಿಜೆಪಿಯವರು ಇತಿಹಾಸ ಓದಿಕೊಳ್ಳಬೇಕು. ಆಗ ವಾಜಪೇಯಿಯವರು ಏಕೆ ಪ್ರತಿಭಟನೆ ಮಾಡಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಸ್ವಲ್ಪ ಬೆಲೆ ಏರಿಕೆಯಾದಾಗ ಶೋಭಾ ಕರಂದ್ಲಾಜೆಯವರು ಹಾಗೂ ಬಿಜೆಪಿ ನಾಯಕರು ತಲೆಯ ಮೇಲೆ ಸಿಲಿಂಡರ್ ಹೊತ್ತು ಧರಣಿ ಮಾಡಿರಲಿಲ್ಲವೇ? ಜನರಿಗೆ ಅನ್ಯಾಯವಾಗಿದೆ ಎಂದು ಅವರು ಹೋರಾಟ ಮಾಡಿದ್ದರು. ಈಗ ಅವರು ಮಂತ್ರಿಯಾಗಿದ್ದಾರೆ ಎಂದು ಜನ ಬೆಲೆ ಏರಿಕೆಯನ್ನು ಸಹಿಸಿಕೊಳ್ಳಬೇಕೇ ಎಂದು ಪ್ರಶ್ನಿಸಿದ ಅವರು ಕೂಡಲೇ ಶೋಭಾ ಕರಂದ್ಲಾಜೆ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಮಹಿಳಾ ಪೇದೆ ಜೊತೆ ಸ್ವಿಮ್ಮಿಂಗ್ ಪೂಲಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಮಿಲನ

    ತಮಿಳುನಾಡಿನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಅಲ್ಲಿಯ ಮುಖ್ಯಮಂತ್ರಿ ಕಡಿಮೆ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಸಹ ತೆರಿಗೆ ಕಡಿತಗೊಳಿಸಲಿ. ಬೆಲೆ ಏರಿಕೆ ಬಗ್ಗೆ ಸದನದಲ್ಲಿ ನಾಳೆ ನಿಲುವಳಿ ಸೂಚನೆ ಮಂಡಿಸುತ್ತೇವೆ. ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿದ್ದಾರೆ. ನಾನು ನಮ್ಮ ರಾಜ್ಯದ ಬಗ್ಗೆ ಕಾಳಜಿಯಿಂದ ಮಾತನಾಡುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ, ರಾಜ್ಯ ಸರ್ಕಾರವನ್ನು ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅದನ್ನೂ ಬಿಜೆಪಿಯವರು ಗಮನಿಸುವುದು ಒಳ್ಳೆಯದು ಎಂದರು.

    ಮನಮೋಹನಸಿಂಗ್ ಅವರು ಪ್ರಧಾನಿ ಆಗಿದ್ದಾಗ ಡೀಸೆಲ್ ಮೇಲಿನ ತೆರಿಗೆ 3.45 ರೂ. ಇತ್ತು. ಈಗ 31.74 ರೂ. ಆಗಿದೆ. ಅದೇ ರೀತಿ ಪೆಟ್ರೋಲ್ ಮಾರಾಟದ ಮೇಲಿನ ತೆರಿಗೆ 9.21 ರೂ.ಗಳಿಂದ 32.98 ರೂ.ಗಳಿಗೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಏರಿಕೆ ಆಗದಿದ್ದರೂ ಪೆಟ್ರೋಲ್, ಡಿಸೇಲ್ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಜನರನ್ನು ವಂಚಿಸುತ್ತಿದೆ ಎಂದು ಸಿದ್ದರಾಮಯ್ಯ ಅವರು ದೂರಿದರು.  ಇದನ್ನೂ ಓದಿ: ‘ಚಿಂತಾಮಣಿ ಅಪಘಾತ – 8 ಮಂದಿಯ ಸಾವಿಗೆ ರಮೇಶ್‍ಕುಮಾರ್ ನೇರ ಹೊಣೆ’

    ದೇಗುಲ ತೆರವಿಗೆ ಮುನ್ನ ಮಾಹಿತಿ ಕೊಡಬೇಕಿತ್ತು: ನಂಜನಗೂಡಿನಲ್ಲಿ ದೇವಸ್ಥಾನ ನೆಲಸಮ ಮಾಡುವ ಮುನ್ನ ಭಕ್ತರಿಗೆ ತಿಳಿಸಬೇಕಿತ್ತು. ದೇವಾಲಯ ನಿರ್ಮಾಣಕ್ಕೆ ಪರ್ಯಾಯ ಜಾಗವನ್ನಾದರೂ ಕೊಡಬೇಕಿತ್ತು. ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿನ ದೇವಾಲಯಗಳನ್ನು ತೆರವುಗೊಳಿಸಲು ನ್ಯಾಯಾಲಯದ ಆದೇಶ ಇದೆ. ಆದರೆ, ಮಂದಿರ, ಮಸೀದಿ, ಚರ್ಚ್ ಯಾವುದೇ ಇರಲಿ, ತೆರವಿಗೆ ಮುನ್ನ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದರು.

    ದೇವಸ್ಥಾನ ಕೆಡವಿದ್ದು ಯಾವ ಸರ್ಕಾರ.? ಪ್ರತಾಪ್ ಸಿಂಹ ಅವರು ಪ್ರತಿನಿಧಿಸುವ ಪಕ್ಷದ ಸರ್ಕಾರ ತಾನೆ. ಹೀಗಾಗಿ ಪ್ರತಾಪ್ ಸಿಂಹ ರಾಜಿನಾಮೆ ಕೊಟ್ಟು ಸರ್ಕಾರದ ವಿರುದ್ಧ ಹೋರಾಟ ಮಾಡಲಿ ಎಂದರು.

    ಮಹಿಳೆ ಮೇಲಿನ ದೌರ್ಜನ್ಯ ಖಂಡನೀಯ: ಯಾದಗಿರಿಯಲ್ಲಿ ಮಹಿಳೆ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಖಂಡನೀಯ. ಈ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬುದು ಮತ್ತೆ ಸಾಬೀತಾಗಿದೆ.

    ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ವಿದ್ಯಾರ್ಥಿನಿ ಸಂಜೆ ಏಳರ ನಂತರ ಹೊರಗೆ ಹೋಗಿದ್ದೇಕೆ ಎಂದು ಗೃಹ ಸಚಿವರೇ ಹೇಳುತ್ತಾರೆ. ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬುದು ಅವರ ಹೇಳಿಕೆಯೇ ಸಾಬೀತು ಮಾಡುತ್ತದೆ. ಜೊತೆಗೆ ರಕ್ಷಣೆ ಕೊಡುವ ಶಕ್ತಿ ಸರ್ಕಾರಕ್ಕೆ ಇಲ್ಲ ಎಂದು ಗೃಹ ಸಚಿವರೇ ಒಪ್ಪಿಕೊಂಡಂತೆ ಆಗಿದೆ ಎಂದರು.

    ಗೃಹ ಸಚಿವರ ಕ್ಷೇತ್ರದಲ್ಲಿ ನಂದಿತಾ ಪ್ರಕರಣ ನಡೆದಾಗ ಗೃಹ ಸಚಿವರು ರಾಜಿನಾಮೆ ಕೊಡಬೇಕು ಎಂದು ಇಂದಿನ ಗೃಹ ಸಚಿವ ಅರಗ ಜ್ಞಾನೇಂದ್ರ ಆಗ್ರಹಿಸಿದ್ದರು. ಆಗ ನಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದೆವು. ಒಟ್ಟು ಆರು ಪ್ರಕರಣಗಳನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಸಿಬಿಐ ತನಿಖೆಗೆ ಕೊಟ್ಟಿದ್ದೆವು. ಇವರು ಒಂದಾದರೂ ವಹಿಸಿದ್ದಾರೆಯೇ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

     

  • ಡೀಸೆಲ್ ಬದಲು ನೀರು – ಮಾರ್ಗ ಮಧ್ಯೆ ಕೆಟ್ಟು ನಿಂತ 3 ಲಾರಿ, 3 ಟ್ರ್ಯಾಕ್ಟರ್, 2 ಕಾರು

    ಡೀಸೆಲ್ ಬದಲು ನೀರು – ಮಾರ್ಗ ಮಧ್ಯೆ ಕೆಟ್ಟು ನಿಂತ 3 ಲಾರಿ, 3 ಟ್ರ್ಯಾಕ್ಟರ್, 2 ಕಾರು

    ರಾಯಚೂರು: ಪೆಟ್ರೋಲ್ ಬಂಕ್ ಸಿಬ್ಬಂದಿ ಡೀಸೆಲ್ ಬದಲಿಗೆ ವಾಹನಗಳ ಟ್ಯಾಂಕ್‍ಗೆ ನೀರು ತುಂಬಿದ ಪರಿಣಾಮ ಅವು ಮಾರ್ಗ ಮಧ್ಯೆ ಕೆಟ್ಟು ನಿಂತ ಘಟನೆ ರಾಯಚೂರಿನ ಮಸ್ಕಿಯ ಕನಕವೃತ್ತದಲ್ಲಿನ ಸೂಪರ್ ಪಿಲ್ಲಿಂಗ್ ಸ್ಟೇಷನ್‍ನಲ್ಲಿ ನಡೆದಿದೆ.

    ಫಿಲ್ಲಿಂಗ್ ಸ್ಟೇಷನ್ ಸಿಬ್ಬಂದಿ ಹಾಗೂ ಮಾಲೀಕರ ಬೇಜವಾಬ್ದಾರಿತನಕ್ಕೆ ವಾಹನ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ. 10 ಸಾವಿರ ರೂಪಾಯಿ ಡಿಸೇಲ್ ಹಾಕಿಸಿದರೂ ಲಾರಿ ಸ್ಟಾರ್ಟ್ ಆಗಿರಲಿಲ್ಲ. ಹೀಗಾಗಿ ಅನುಮಾನದ ಮೇಲೆ ಪರೀಕ್ಷೆ ಮಾಡಿದರೆ ಟೀಸೆಲ್ ಟ್ಯಾಂಕ್ ತುಂಬಾ ನೀರು ತುಂಬಿರುವುದು ಬೆಳಕಿಗೆ ಬಂದಿದೆ.

    ಇದೇ ರೀತಿ ಇತರ ವಾಹನಗಳಿಗೂ ನೀರು ತುಂಬಿದ್ದು, ಪರಿಣಾಮ ಮಾರ್ಗ ಮಧ್ಯೆಯೇ ಮೂರು ಲಾರಿ, ಮೂರು ಟ್ರ್ಯಾಕ್ಟರ್ ಹಾಗೂ ಎರಡು ಕಾರುಗಳು ಕೆಟ್ಟು ನಿಂತಿವೆ. ಕೂಡಲೇ ಬಂಕ್ ಗೆ ಬಂದ ವಾಹನ ಮಾಲೀಕರು ಸಿಬ್ಬಂದಿ ಹಾಗೂ ಮಾಲೀಕರ ವಿರುದ್ಧ ಮಾತಿನ ಚಕಮಕಿ ನಡೆಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಮಾತಿಗೆ ಮಾತು ಬೆಳೆದ ಬಳಿಕ ಬಂಕ್ ಮಾಲೀಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ವಾಹನಗಳನ್ನು ರಿಪೇರಿ ಮಾಡಿಸಿಕೊಡುವುದಾಗಿ ಹೇಳಿದ್ದಾನೆ.

  • ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್- ಎಮಿಷನ್ ಟೆಸ್ಟ್ ಪ್ರತಿ ಕೊಟ್ರಷ್ಟೇ ಪೆಟ್ರೋಲ್, ಡೀಸೆಲ್

    ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್- ಎಮಿಷನ್ ಟೆಸ್ಟ್ ಪ್ರತಿ ಕೊಟ್ರಷ್ಟೇ ಪೆಟ್ರೋಲ್, ಡೀಸೆಲ್

    ಬೆಂಗಳೂರು: ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಇನ್ನು ಮುಂದೆ ಪೆಟ್ರೋಲ್-ಡಿಸೇಲ್ ಗಾಡಿಗೆ ಹಾಕ್ಕೋಳೋದು ಕಷ್ಟವಾಗಲಿದೆ.

    ಹೌದು. ನಗರದ ಮಾಲಿನ್ಯ ಪ್ರಮಾಣ ತಗ್ಗಿಸಲು ಕೇಂದ್ರ ನೀಡಿದ ಸೂಚನೆಯ ಹಿನ್ನೆಲೆಯಲ್ಲಿ ಮಂಡಳಿಯಿಂದ ಹೊಸ ಕಾಯ್ದೆಯೊಂದು ಜಾರಿ ಮಾಡಿದೆ. ಹೊಗೆಯುಗುಳುವ ಗಾಡಿ ನಿಮ್ಮದಾಗಿದ್ರೆ ಬಂಕ್‍ಗಳಲ್ಲಿ ಪೆಟ್ರೋಲ್-ಡೀಸೆಲ್ ಸಿಗಲ್ಲ. ಹೀಗಾಗಿ ಎಮಿಷನ್ ಟೆಸ್ಟ್ ಪ್ರತಿ ಕೊಟ್ರಷ್ಟೇ ಪೆಟ್ರೋಲ್- ಡಿಸೇಲ್ ಸಿಗುತ್ತದೆ ಅಂತ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ನಿಮ್ಮ ಗಾಡಿ ಹೊಗೆಯುಗುಳಲ್ಲ ಅಂತಾ ಎಮಿಷನ್ ಟೆಸ್ಟ್ ಪ್ರತಿಯನ್ನು ಕೊಡಬೇಕು. ಬಂಕ್ ಹಾಗೂ ವಾಹನ ಸವಾರರಿಗೆ ಈ ಸುತ್ತೋಲೆಯನ್ನು ಸರ್ಕಾರ ಶೀಘ್ರದಲ್ಲಿಯೇ ಹೊರಡಿಸಲಿದೆ. ಈ ಕುರಿತು ಈಗಾಗಲೇ ಸಾರಿಗೆ ಇಲಾಖೆ ಜೊತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಚರ್ಚೆ ಮಾಡಿದ್ದಾರೆ.

    ಒಂದು ವೇಳೆ ನಿಯಮ ಉಲ್ಲಂಘಿಸಿದ್ರೆ ಪೆಟ್ರೋಲ್ ಬಂಕ್‍ಗಳ ವಿರುದ್ಧ ಕ್ರಮಕ್ಕೆ ಸಿದ್ಧತೆ ನಡೆಸಲಾಗಿದೆ. ಅಲ್ಲದೇ ವಾಹನದ ಮಾಲಿನ್ಯ ಪ್ರಮಾಣ ಟೆಸ್ಟ್ ಮಾಡಿಸದ ವಾಹನಗಳ ಮೇಲೆ ದಂಡ ಪ್ರಯೋಗಕ್ಕೂ ಮಾಲಿನ್ಯ ನಿಯಂತ್ರಣ ಮಂಡಳಿ ಸಜ್ಜಾಗಿದೆ ಎಂದು ಹೇಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡವರಿಗೆ ಫ್ರೀಯಾಗಿ ಟೀ ಕೊಡ್ತಾರೆ ಹಾವೇರಿಯ ಮಹೇಂದ್ರ

    ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡವರಿಗೆ ಫ್ರೀಯಾಗಿ ಟೀ ಕೊಡ್ತಾರೆ ಹಾವೇರಿಯ ಮಹೇಂದ್ರ

    ಹಾವೇರಿ: ಪೆಟ್ರೋಲ್ ಬಂಕ್ ಅಂದ್ರೆ ಅಲ್ಲಿ ಪೆಟ್ರೋಲ್, ಡಿಸೇಲ್ ಮಾತ್ರ ಸಿಗುತ್ತೆ. ಆದ್ರೆ ಇಲ್ಲೊಂದು ಬಂಕ್ ನಲ್ಲಿ ಪೆಟ್ರೋಲ್ ಡಿಸೇಲ್ ಜೊತೆಗೆ ಕೆಲವು ಉಚಿತ ಸೌಲಭ್ಯಗಳು ಸಿಗುತ್ತವೆ. ಪೆಟ್ರೋಲ್ ಹಾಗೂ ಡಿಸೇಲ್ ಹಾಕಿಸಿಕೊಂಡರೆ ಉಚಿತವಾಗಿ ಟೀ ಸಿಗುತ್ತೆ.

    ಹೌದು. ಹಾವೇರಿ ಹೊರವಲಯದ ಎನ್‍ಹೆಚ್-4 ನಲ್ಲಿರೋ ವೀರಭದ್ರೇಶ್ವರ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡ್ರೆ ಉಚಿತವಾಗಿ ಟೀ ಸಿಗುತ್ತೆ. ಪೆಟ್ರೋಲ್ ಬಂಕ್‍ನಲ್ಲಿ ಉಚಿತವಾಗಿ ಟೀ ಲಭ್ಯವಾಗಲು ಕಾರಣ ಇದೆ. 3 ವರ್ಷದ ಹಿಂದೆ ಶುಗರ್ ಲೆವೆಲ್ ಕಮ್ಮಿಯಾದ ವೃದ್ಧರೊಬ್ಬರು ಬಂಕ್ ಬಳಿ ಬಂದು ಟೀ ಇದ್ಯಾ ಅಂತಾ ಕೇಳಿದ್ರಂತೆ. ಸುತ್ತಮುತ್ತ ಟೀ ಅಂಗಡಿ ಇರ್ಲಿಲ್ಲ. ಹೀಗಾಗಿ ಬಂಕ್ ಮಾಲೀಕ ತಿಪ್ಪನಗೌಡ್ರು ತಾವೇ ಉಚಿತವಾಗಿ ಟೀ ವಿತರಣೆ ಶುರು ಮಾಡಿದ್ರು. ಅದನ್ನು ಇದೀಗ ತಿಪ್ಪನಗೌಡ್ರ ಪುತ್ರ ಮಹೇಂದ್ರ ಮುಂದುವರೆಸಿಕೊಂಡು ಹೋಗ್ತಿದ್ದಾರೆ.

    ಉಚಿತವಾಗಿ ಟೀ ಹಂಚ್ತಿರೋ ಮಹೇಂದ್ರ ದಿನಕ್ಕೆ ಏನಿಲ್ಲ ಅಂದ್ರೂ ಐನೂರರಿಂದ ಏಳು ನೂರು ರುಪಾಯಿ ಖರ್ಚು ಮಾಡ್ತಾರೆ. ಟೀ ವಿತರಿಸೋಕೆ ಅಂತಾನೆ ಓರ್ವನನ್ನ ನೇಮಿಸಿದ್ದಾರೆ. ಬೆಳಗ್ಗೆಯಿಂದ ರಾತ್ರಿ 10 ಗಂಟೆವರೆಗೆ ಇಲ್ಲಿ ಫ್ರೀ ಟೀ ಸಿಗುತ್ತೆ. ಇದು ರಾತ್ರಿ ಹೊತ್ತಲ್ಲಿ ಅಪಘಾತಗಳು ಕಡಿಮೆ ಆಗೋಕೆ ಕಾರಣವಾಗಿದೆ.

    ಚಹಾ ನೀಡಿ ಕೊಂಚ ಆಕ್ಟೀವ್ ಆಗಿರುವಂತೆ ಮಾಡ್ತಿರೋ ಪೆಟ್ರೋಲ್ ಬಂಕ್ ಮಾಲೀಕ ಮಹೇಂದ್ರ ತಿಪ್ಪನಗೌಡ ಇತರರಿಗೆ ಮಾದರಿಯಾಗಿದ್ದಾರೆ.

    https://www.youtube.com/watch?v=Df2fTrlnqX8

     

  • ಡೀಸೆಲ್ ಟ್ಯಾಂಕರ್ ಪಲ್ಟಿ- ಬಕೆಟ್, ಡಬ್ಬಿಗಳಲ್ಲಿ ಡೀಸೆಲ್ ತುಂಬಿಕೊಂಡು ಹೋದ್ರು ಜನ

    ಡೀಸೆಲ್ ಟ್ಯಾಂಕರ್ ಪಲ್ಟಿ- ಬಕೆಟ್, ಡಬ್ಬಿಗಳಲ್ಲಿ ಡೀಸೆಲ್ ತುಂಬಿಕೊಂಡು ಹೋದ್ರು ಜನ

    ಯಾದಗಿರಿ: ಡೀಸೆಲ್ ಹೊತ್ತೊಯ್ಯುತ್ತಿದ್ದ  ಟ್ಯಾಂಕರೊಂದು ಪಲ್ಟಿಯಾದ ಘಟನೆ ಶಹಾಪೂರ ತಾಲೂಕಿನ ಹುಲಕಲ್ ಗ್ರಾಮದ ಬಳಿ ನಡೆದಿದೆ.

    ಭಾರತ್ ಪೆಟ್ರೋಲಿಯಂ ಕಂಪನಿಗೆ ಸೇರಿದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ನೆಲಕ್ಕೆ ಉರುಳಿದೆ. ಈ ಸಮಯದಲ್ಲಿ ಯಾವುದೇ ವಾಹನಗಳು ಸಂಚರಿಸಿದ ಕಾರಣ ಭಾರೀ ದುರಂತ ತಪ್ಪಿದೆ. ಘಟನೆಯಲ್ಲಿ ಟ್ಯಾಂಕರ್ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದಾರೆ.

    ಟ್ಯಾಂಕರ್ ನಲ್ಲಿದ್ದ ಡಿಸೇಲ್ ಸೊರಿಕೆಯಾಗುತ್ತಿರುವುದನ್ನು ಕಂಡ ಗ್ರಾಮಸ್ಥರು ಡಬ್ಬಿ ಹಾಗೂ ಬಕೆಟ್ ಗಳಲ್ಲಿ ಡಿಸೇಲ್ ತುಂಬಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂತು.

    ಭೀಮರಾಯನ ಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಕಿಡಿಗೇಡಿಗಳಿಂದ ಡೀಸೆಲ್ ಟ್ಯಾಂಕರ್, ಲಾರಿಗೆ ಬೆಂಕಿ

    ಕಿಡಿಗೇಡಿಗಳಿಂದ ಡೀಸೆಲ್ ಟ್ಯಾಂಕರ್, ಲಾರಿಗೆ ಬೆಂಕಿ

    ಗದಗ: ನಗರದಲ್ಲಿ ಡಿಸೇಲ್ ಟ್ಯಾಂಕರ್, ಲಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ.

    ಗದಗ ನಗರದ ರಾಚೂಟೇಶ್ವರ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಗುರುವಾರ ತಡರಾತ್ರಿ ನಡೆದ ಕಿಡಿಗೇಡಿಗಳ ಈ ಕೃತ್ಯಕ್ಕೆ ವಾಹನಗಳು ಬೆಂಕಿಗಾಹುತಿಯಾಗಿವೆ.

    ಮನೆ ಎದರು ನಿಲ್ಲಿಸಿದ ವಾಹನಗಳ ಟಯರ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಟಯರ್ ಬ್ಲಾಸ್ಟ್ ಆಗಿದ್ದು, ಈ ಶಬ್ದ ಕೇಳಿದ ಬಳಿಕ ಕಿಡಿಗೇಡಿಗಳ ಕೃತ್ಯ ಬೆಳಕಿಗೆ ಬಂದಿದೆ.

    ಘಟನೆಯ ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ. ಕೊಪ್ಪಳದ ಸಾಯಿನಾಥ್ ಎಂಬವರಿಗೆ ಸೇರಿದ ಟ್ಯಾಂಕರ್ ಹಾಗೂ ಗದಗ ನಗರದ ಮಲ್ಲೇಶ್ ಪುರದ ಎಂಬವರಿಗೆ ಸೇರಿದ ಲಾರಿ ಇದಾಗಿದೆ.

    ಗದಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.