Tag: Discovered

  • 4,000 ವರ್ಷಗಳ ಹಿಂದಿನ ಪುರಾತನ ಸಮಾಧಿ ಪತ್ತೆ – ಸಮಾಧಿಯಲ್ಲಿತ್ತು ಬೆಲೆ ಬಾಳುವ ವಸ್ತು

    4,000 ವರ್ಷಗಳ ಹಿಂದಿನ ಪುರಾತನ ಸಮಾಧಿ ಪತ್ತೆ – ಸಮಾಧಿಯಲ್ಲಿತ್ತು ಬೆಲೆ ಬಾಳುವ ವಸ್ತು

    ಆಂಸ್ಟರ್ಡ್ಯಾಮ್: ನೆದರ್ಲೆಂಡ್‌ನ ಸ್ಟೋನ್‌ಹೆಂಜ್ (Netherland Stonehenge) ಎಂದು ಕರೆಯಲ್ಪಟುವ 4,000 ವರ್ಷಗಳಷ್ಟು ಪುರಾತನವಾದ ರುದ್ರಭೂಮಿಯೊಂದನ್ನು ಡಚ್ ಪುರಾತತ್ವಶಾಸ್ತ್ರಜ್ಞರು (Archaeologists) ಪತ್ತೆ ಹಚ್ಚಿದ್ದಾರೆ.

    ಸಮಾಧಿಯ ದಿಬ್ಬಗಳನ್ನು (Burial Ground) ಒಳಗೊಂಡಿರುವ ಈ ಸ್ಥಳವು 65 ಅಡಿ ವಿಸ್ತೀರ್ಣವಿದೆ. 60 ಪುರುಷರು ಹಾಗೂ ಮಹಿಳೆಯರು ಮತ್ತು ಮಕ್ಕಳ ಅವಶೇಷಗಳನ್ನ ಒಳಗೊಂಡಿದೆ ಎಂದು ಡಚ್ ಸಂಶೋಧಕರು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಜಲಾಂತರ್ಗಾಮಿ ನಾಪತ್ತೆ – ಟೈಟಾನಿಕ್ ನೋಡಲು ತೆರಳಿದ್ದ ಪ್ರವಾಸಿಗರಲ್ಲಿದ್ರು ಪಾಕಿಸ್ತಾನದ ಶ್ರೀಮಂತ

    ಈ ಸಮಾಧಿಯ ಸ್ಥಳದಲ್ಲಿ ಪ್ರಾಣಿಗಳ ಅಸ್ಥಿಪಂಜರಗಳು, ಮಾನವನ ತಲೆಬುರುಡೆಗಳು, ಕಂಚಿನ ಈಟಿಯಂತಹ ಬೆಲೆಬಾಳುವ ವಸ್ತುಗಳನ್ನು ಕಂಡುಹಿಡಿದಿದ್ದಾರೆ. ಟೈಲ್ ನಗರಪಾಲಿಕೆಗೆ 70 ಕಿಮೀ ದೂರದಲ್ಲಿರುವ ರೂಟರ್‌ಡ್ಯಾಮ್‌ನ ಪೂರ್ವದಲ್ಲಿ ಈ ಸ್ಥಳವನ್ನ ಉತ್ಖನನ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಟೈಟಾನಿಕ್ ಅವಶೇಷ ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ

    ಇಂಗ್ಲೆಂಡ್‌ನ ಸ್ಟೋನ್‌ಹೆಂಜ್‌ನ (England Stonehenge) ಪ್ರಸಿದ್ಧ ಕಲ್ಲುಗಳಂತೆಯೇ ಅತಿದೊಡ್ಡ ದಿಬ್ಬವು ಸೂರ್ಯನ ಕ್ಯಾಲೆಂಡರ್ ಆಗಿ ಇದು ಕಾರ್ಯನಿರ್ವಹಿಸುತ್ತದೆ. ಈ ಅಭಯಾರಣ್ಯದಲ್ಲಿ ಜನರು ವರ್ಷದ ವಿಶೇಷ ದಿನಗಳನ್ನ ಆಚರಿಸುತ್ತಾರೆ, ಧಾರ್ಮಿಕ ಕ್ರಿಯೆಗಳನ್ನ ನೆರವೇರಿಸುತ್ತಾರೆ. ಜೊತೆಗೆ ಅಂತ್ಯಸಂಸ್ಕಾರ ನೆರವೇರಿಸುವ ಮಹತ್ವದ ಸ್ಥಳವಾಗಿರಬೇಕು ಎಂದು ಹೇಳಲಾಗಿದೆ. ಏಕೆಂದರೆ ಮೆರವಣಿಗೆಗಾಗಿ ಬಳಸುವ ಮಾರ್ಗಗಳ ಉದ್ದಕ್ಕೂ ಸಾಲುಗಂಬಗಳಿರುವುದು ಕಂಡುಬಂದಿದೆ.

    2017ರಲ್ಲಿ ಡಚ್ ಸಂಶೋಧಕರು ಉತ್ಖನನ ಮಾಡುವಾಗ ಅನೇಕ ಸಮಾಧಿಗಳನ್ನೂ ಸಹ ಕಂಡುಹಿಡಿದಿದ್ದಾರೆ. ಅದರಲ್ಲಿ ಇಂದಿನ ಇರಾಕ್‌ನ ಮೆಸಪಟೋಮಿಯಾದ ಮಹಿಳೆಯದ್ದಾಗಿತ್ತು. ಇದೀಗ ಮತ್ತೆ ನೆದರ್‌ಲ್ಯಾಂಡ್‌ನಲ್ಲಿ 4 ಸಾವಿರ ವರ್ಷಗಳ ಹಿಂದಿನ ಸಮಾಧಿಯನ್ನ ಪತ್ತೆಹಚ್ಚಿದ್ದು, ಇಲ್ಲಿನ ಪ್ರದೇಶದ ಜನರು ಸುಮಾರು 5,000 ಕಿಮೀ ವರೆಗಿನ ಜನರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಅಂದಾಜಿಸಿದ್ದಾರೆ.

    ಈ ಸಮಾಧಿಯನ್ನ ಪತ್ತೆಹಚ್ಚಿದ ಸಂಶೋಧಕರು, ಕಳೆದ 6 ವರ್ಷಗಳಲ್ಲಿ ಶಿಲಾಯುಗ, ಕಂಚಿನ ಯುಗ, ಕಬ್ಬಿಣಯುಗ, ರೋಮನ್ ಸಾಮ್ರಾಜ್ಯ ಮತ್ತು ಮಧ್ಯಯುಗಗಳಿಂದ ಉತ್ಖನನಗೊಂಡ ಮಿಲಿಯನ್‌ಗಿಂತಲೂ ಹೆಚ್ಚು ವಸ್ತುಗಳನ್ನ ಸಂಶೋಧಿಸಿದ್ದಾರೆ ಎಂದು ವರದಿಯಾಗಿದೆ.

  • ಕೆಂಪು ಸಮುದ್ರದ ತಳಭಾಗದಲ್ಲೊಂದು ಡೆಡ್ಲಿ ಪೂಲ್ – ಇಲ್ಲಿ ಈಜುವ ಪ್ರತಿ ಜೀವಿಗೂ ಕಾದಿದೆ ಅಪಾಯ

    ಕೆಂಪು ಸಮುದ್ರದ ತಳಭಾಗದಲ್ಲೊಂದು ಡೆಡ್ಲಿ ಪೂಲ್ – ಇಲ್ಲಿ ಈಜುವ ಪ್ರತಿ ಜೀವಿಗೂ ಕಾದಿದೆ ಅಪಾಯ

    ನವದೆಹಲಿ: ಮಿಯಾಮಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಕೆಂಪು ಸಮುದ್ರದ ತಳಭಾಗದಲ್ಲಿ ಡೆಡ್ಲಿ ಪೂಲ್ (ಮಾರಣಾಂತಿಕ ಕೊಳ) ಪತ್ತೆಯಾಗಿದ್ದು, ಇದು ಪೂಲ್‌ನಲ್ಲಿ ಈಜುವ ಜೀವಿಯನ್ನು ಕೊಲ್ಲುತ್ತದೆ ಎನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ವಿಜ್ಞಾನಿಗಳು ತಮ್ಮ ರಿಮೋಟ್ ಚಾಲಿತ ವಾಹನ ಬಳಸಿಕೊಂಡು ಕೆಂಪು ಸಮುದ್ರದ ತಳಭಾಗದಲ್ಲಿ 1.7 ಕಿ.ಮೀ ನಷ್ಟು ಉಪ್ಪು ನೀರಿನ ಡೆಡ್ಲಿ ಪೂಲ್ ಅನ್ನು ಕಂಡು ಹಿಡಿದ್ದಾರೆ. 10 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಕೊನೆಯ 5 ನಿಮಿಷ ಇರುವಾಗ ಈ ಕೊಳವನ್ನು ಕಂಡುಹಿಡಿದಿದ್ದಾರೆ. ಈ ಪೂಲ್ ಅತಿಹೆಚ್ಚು ಉಪ್ಪು ನೀರಿನ ಕೇಂದ್ರೀಕೃತವಾಗಿದೆ. ಜೊತೆಗೆ ರಾಸಾಯನಿಕ ಅಂಶಗಳಿಂದ ಕೂಡಿದ್ದು, ಸುತ್ತಮುತ್ತಲಿನ ಎಲ್ಲ ಸಾಗರಗಳಿಗಿಂತಲೂ ಹೆಚ್ಚು ಉಪ್ಪು ನೀರನ್ನು ಹೊಂದಿದೆ ಎಂದು ಸಂಶೋಧಕರು ವಿವರಿದ್ದಾರೆ. ಇದನ್ನೂ ಓದಿ: ನಾಲ್ವರು ಕಾಂಗ್ರೆಸ್ ಸಂಸದರು ಲೋಕಸಭೆಯಿಂದ ಅಮಾನತು

    ಅಲ್ಲದೇ ಈ ಪೂಲ್ ಜಲಚರ ಜೀವರಾಶಿಗಳನ್ನು ದಿಗ್ಭ್ರಮೆಗೊಳಿಸುತ್ತದೆ, ಜೊತೆಗೆ ಕೊಲ್ಲಲೂಬಹುದು ಎಚ್ಚರಿಸಿದ್ದಾರೆ. ಈ ಕುರಿತು ಮಾತನಾಡಿರುವ ಪ್ರಮುಖ ಸಂಶೋಧಕ ಸ್ಯಾಮ್ ಪುರ್ಕಿಸ್, ಈ ಪೂಲ್‌ಗಳು ಭೂಮಿಯ ಮೇಲ್ಮೈಗಿಂತಲೂ ಮಾರಣಾಂತಿಕ ಪರಿಸರ ವಾತಾವರಣವನ್ನು ಒಳಗೊಂಡಿರುತ್ತವೆ. ದಾರಿತಪ್ಪಿದ ಯಾವುದೇ ಪ್ರಾಣಿಗಳು ಅಥವಾ ಜಲಚರಗಳು ಈ ಪೂಲ್‌ಗಳನ್ನು ಪ್ರವೇಶಿಸಿದರೆ ಅವುಗಳ ಸಾವು ನಿಶ್ಚಿತ ಎಂದು ಹೇಳಿದ್ದಾರೆ.

    ಮೀನು, ಸೀಗಡಿ ಹಾಗೂ ಈಲ್‌ಗಳು ತಮ್ಮ ಆಹಾರಕ್ಕಾಗಿ ಭೇಟೆಯಾಡಲು ಈ ಡೆಡ್ಲಿಪೂಲ್‌ಗಳ ಸಮೀಪದ ಸ್ಥಳಗಳನ್ನು ಬಳಸಿಕೊಳ್ಳುತ್ತವೆ. ತಮ್ಮ ಆಹಾರಕ್ಕಾಗಿ ಕೊಳದ ಬಳಿ ಅಡಗಿಕೊಳ್ಳುತ್ತವೆ. ಆದರೆ ಕೊಳವನ್ನು ಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಡಿಲಲ್ಲಿ ಮಗುವಿಗೆ ಹಾಲುಣಿಸುತ್ತಿರುವಾಗಲೇ ಕೊನೆಯುಸಿರೆಳೆದ ತಾಯಿ

    ಇಂತಹ ಪೂಲ್‌ಗಳು ನಮ್ಮ ಭೂಮಿಯ ಗ್ರಹದಲ್ಲಿ ಮೊದಲು ಸಾಗರಗಳು ಹೇಗೆ ರೂಪು ಗೊಂಡವು? ಎಂಬುದನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತವೆ. ಉಪ್ಪು ನೀರಿನ ಪೂಲ್‌ಗಳು ಹೆಚ್ಚಿನ ಸಂಖ್ಯೆಯ ಸೂಕ್ಷ್ಮಜೀವಿಗಳ ನೆಲೆಯಾಗಿದೆ. ವೈವಿಧ್ಯತೆಗಳಿಂದ ಸಮೃದ್ಧವಾಗಿದೆ. ಆದರೆ ಇದೇ ರೀತಿ ಪ್ರತಿಕೂಲ ಪರಿಸ್ಥಿತಿಯನ್ನು ಹೊಂದಿರುವ ಅನ್ಯಗ್ರಹಗಳು ಯಾವುದೇ ಜೀವಿಗಳಿಗೆ ಆತಿಥ್ಯ ನೀಡಬಹುದೇ ಎಂಬುದನ್ನು ನಿರ್ಧರಿಸಲು ಇಂತಹ ಆವಿಷ್ಕಾರಗಳು ಅಗತ್ಯವಾಗಿದೆ ಎಂದು ವಿವರಿಸಿದ್ದಾರೆ.

    ವಿಜ್ಞಾನಿಗಳು ಕಂಡುಹಿಡಿದ ಮೊದಲ ಉಪ್ಪುನೀರಿನ ಪೂಲ್ ಇದಲ್ಲ. ಕಳೆದ 30 ವರ್ಷಗಳಲ್ಲಿ ಸಮುದ್ರಶಾಸ್ತ್ರಜ್ಞರು ಕೆಂಪು ಸಮುದ್ರ, ಮೆಡಿಟರೇನಿಯನ್ ಸಮುದ್ರ ಮತ್ತು ಮೆಕ್ಸಿಕೋ ಕೊಲ್ಲಿಗಳಲ್ಲಿ ಸಾಕಷ್ಟು ಮಾರಣಾಂತಿಕ ಕೊಳಗಳನ್ನು ಕಂಡುಹಿಡಿದಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ಹೇಳಿದೆ.

    Live Tv
    [brid partner=56869869 player=32851 video=960834 autoplay=true]