Tag: Discharged

  • ಶಿವಣ್ಣ ಅನಾರೋಗ್ಯ: ಆಸ್ಪತ್ರೆಯಿಂದ ಡಿಸ್ಚಾರ್ಜ್

    ಶಿವಣ್ಣ ಅನಾರೋಗ್ಯ: ಆಸ್ಪತ್ರೆಯಿಂದ ಡಿಸ್ಚಾರ್ಜ್

    ನಾರೋಗ್ಯದಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಶಿವರಾಜ್ ಕುಮಾರ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಯಾವುದೇ ಗಂಭೀರ ಸಮಸ್ಯೆ ಇಲ್ಲ ಮತ್ತು ಕಿಡ್ನಿ ಸ್ಟೋನ್ ಆಗಿತ್ತು ಎನ್ನುವ ಮಾಹಿತಿ ಇದೆ. ಡಿಸ್ಚಾರ್ಜ್ (Discharged) ಆದ ನಂತರ ಚುನಾವಣೆ ಪ್ರಚಾರಕ್ಕೆ ತೆರಳೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಲೋಸಕಭಾ ಚುನಾವಣೆಯ ಪ್ರಚಾರ ಮತ್ತು ಸತತ ಚಿತ್ರೀಕರಣದಿಂದಾಗಿ ಸುಸ್ತಾಗಿದ್ದ ನಟ ಶಿವರಾಜ್ ಕುಮಾರ್ (Shivaraj Kumar) ಒಂದು ದಿನ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಿನ್ನೆ ಆಸ್ಪತ್ರೆಗೆ (hospital) ದಾಖಲಾಗಿ ಚಿಕಿತ್ಸೆ ಪಡೆದು ಇಂದು ಮನೆಗೆ ವಾಪಸ್ಸಾಗಲಿದ್ದಾರೆ.

    ದೇವನಹಳ್ಳಿ ಬಳಿ ಚಿತ್ರೀಕರಣದ ವೇಳೆ ಶಿವರಾಜ್ ಕುಮಾರ್ ಅವರಿಗೆ ಸುಸ್ತಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ಪರೀಕ್ಷೆಗಳನ್ನ ಮಾಡಿಸಿ ರಿಪೋರ್ಟ್ ಪಡೆದು, ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಶಿವಣ್ಣ. ಆದರೆ, ಶೂಟಿಂಗ್ ಸೆಟ್ ನಲ್ಲಿ ಬಹಳಷ್ಟು ಧೂಳು ಆವರಿಸಿ ಮತ್ತೆ ಸುಸ್ತಾಗಿದ್ದಾರೆ ಎಂದು ಹೇಳಲಾಗುತ್ತಿದೆ.

     

    ನಿನ್ನೆ ಚಿಕಿತ್ಸೆ ಪಡೆದು ಇಂದು ಬೆಳಿಗ್ಗೆ ಮನೆಗೆ ತೆರಳಲಿದ್ದಾರೆ ಶಿವರಾಜ್ ಕುಮಾರ್. ಚಿಕಿತ್ಸೆ ನಂತರ ಶಿವರಾಜ್ ಕುಮಾರ್ ಆರಾಮಾಗಿದ್ದಾರೆ. ಯಾವುದೇ ಆತಂಕ ಪಡುವಂಥದ್ದು ಇಲ್ಲ ಎಂದಿದ್ದರು ಆಪ್ತರು.

  • ಅಮಿತಾಭ್ ಬಚ್ಚನ್ ಆರೋಗ್ಯವಾಗಿದ್ದಾರೆ: ಆಸ್ಪತ್ರೆಯಿಂದ ಡಿಸ್ಚಾರ್ಜ್

    ಅಮಿತಾಭ್ ಬಚ್ಚನ್ ಆರೋಗ್ಯವಾಗಿದ್ದಾರೆ: ಆಸ್ಪತ್ರೆಯಿಂದ ಡಿಸ್ಚಾರ್ಜ್

    ನಿನ್ನೆ ಬೆಳ್ಳಂಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿ ಅಭಿಮಾನಿಗಳ ದುಗುಡ ಹೆಚ್ಚಿಸಿದ್ದರು ಬಿಗ್ ಬಿ ಅಮಿತಾಭ್ ಬಚ್ಚನ್. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ಅವರು ದಾಖಲಾಗಿ, ಆಂಜಿಯೋಪ್ಲ್ಯಾಸ್ಟಿ (Angioplasty) ಚಿಕಿತ್ಸೆ ಪಡೆದುಕೊಂಡಿದ್ದರು. ಅಮಿತಾಭ್ ಅವರಿಗೆ ಬೆಳಗ್ಗೆ ಎದೆನೋವು ಕಾಣಿಸಿಕೊಂಡ ಬೆನ್ನಲ್ಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆಂಜಿಯೋಪ್ಲ್ಯಾಸ್ಟಿ ಮುಗಿಸಿಕೊಂಡು ಮನೆಗೆ ವಾಪಸ್ಸಾಗಿದ್ದಾರೆ.

    81ರ ವಯಸ್ಸಿನ ಅಮಿತಾಭ್ ದಣಿವರಿಯದ ಜೀವ. ಮೊನ್ನೆಯಷ್ಟೇ ಅವರು ಕಲ್ಕಿ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ಮುಂಬೈಗೆ (Mumbai) ಆಗಮಿಸಿದ್ದರು. ಸಂಪೂರ್ಣ ಶೂಟಿಂಗ್ ಮುಗಿಸಿಕೊಂಡು ಬಂದಿರುವುದಾಗಿ ತಿಳಿಸಿದ್ದರು. ಸತತವಾಗಿ ಕಲ್ಕಿ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದ ಅವರು, ದಿಢೀರ್ ಅಂತ ಆಸ್ಪತ್ರೆಗೆ ದಾಖಲಾಗಿ, ಆತಂಕ ಮೂಡಿಸಿದ್ದರು.

    ದಿಗ್ಗಜರೇ ಒಂದಾಗಿ ನಟಿಸುತ್ತಿರುವ ಕಲ್ಕಿ ಸಿನಿಮಾದ ಬಗ್ಗೆ ಬಿಗ್ ಬಿ, ಎರಡು ದಿನದ ಹಿಂದೆಯಷ್ಟೇ ಬಿಗ್ ಅಪ್ ಡೇಟ್ ನೀಡಿದ್ದರು. ಸಿನಿಮಾ ಶೂಟಿಂಗ್ (Shooting) ಕುರಿತಂತೆ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರ. ಮೊನ್ನೆ ರಾತ್ರಿ ಶೂಟಿಂಗ್ ಮುಗಿಸಿ ಬಂದೆ. ಚಿತ್ರದ ಚಿತ್ರೀಕರಣ ಮುಗಿದಿದೆ. ಅಂದುಕೊಂಡಂತೆ ಮೇ 9ಕ್ಕೆ ಚಿತ್ರ ರಿಲೀಸ್ ಆಗಲಿದೆ ಎಂದು ಅವರು ಮಾಹಿತಿಯನ್ನು ಹಂಚಿಕೊಂಡಿದ್ದರು.

     

    ಸಿನಿಮಾ ಟೀಮ್ ಕೂಡ ಅಮಿತಾಭ್ ಬಚ್ಚನ್  (Amitabh Bachchan) ಅವರ ಹುಟ್ಟು ಹಬ್ಬದ (Birthday) ದಿನದಂದು ಕಲ್ಕಿ ಟೀಮ್ ಸಿನಿಮಾದ ಅಮಿತಾಭ್ ಬಚ್ಚನ್ ಪಾತ್ರದ ಫಸ್ಟ್ ಲುಕ್(First Look)  ರಿಲೀಸ್ ಮಾಡಿತ್ತು. ವಿಚಿತ್ರ ವೇಷದಲ್ಲಿ ಅಮಿತಾಭ್ ಕಾಣಿಸಿಕೊಂಡಿದ್ದು ಪಾತ್ರದ ಬಗ್ಗೆ ಕುತೂಹಲ ಮೂಡಿಸಿದೆ.

  • ನರಕದಿಂದ ನಮ್ಮನ್ನು ಹೊರ ತರಲು ಕಷ್ಟ ಪಡ್ತಿರೋರಿಗೆ ನಾವು ಸಹಕರಿಸೋಣ – ಗುಣಮುಖವಾಗಿ ಕಣ್ಣೀರಿಟ್ಟ

    ನರಕದಿಂದ ನಮ್ಮನ್ನು ಹೊರ ತರಲು ಕಷ್ಟ ಪಡ್ತಿರೋರಿಗೆ ನಾವು ಸಹಕರಿಸೋಣ – ಗುಣಮುಖವಾಗಿ ಕಣ್ಣೀರಿಟ್ಟ

    ಮಂಗಳೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಗುಣಮುಖರಾಗಿದ್ದು ಪೊಲೀಸರು, ವೈದ್ಯರು, ನರ್ಸ್‍ಗಳಿಗೆ ನಾವು ಸಹಕರಿಸಬೇಕು ಎಂದು ಕಣ್ಣೀರಿಡುತ್ತಾ ಮನಮುಟ್ಟುವಂತೆ ಜನರಿಗೆ ಸಂದೇಶ ನೀಡಿದ್ದಾರೆ.

    ವಿಡಿಯೋವೊಂದರ ಮೂಲಕ ಇಡೀ ಸಮಾಜಕ್ಕೆ ಸಂದೇಶವನ್ನು ನೀಡಿದ್ದಾರೆ. ಕಳೆದ 3 ದಿನದ ಹಿಂದೆ ಗುಣಮುಖರಾಗಿ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಸೋಂಕಿತ ವ್ಯಕ್ತಿ ಪೊಲೀಸರು, ವೈದ್ಯರು, ನರ್ಸ್‍ಗಳ ಕಾರ್ಯದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ನರಕದಿಂದ ನಮ್ಮನ್ನು ಹೊರ ಕರೆತರಲು ಅವರು ಬಹಳ ಕಷ್ಟಪಡುತ್ತಿದ್ದಾರೆ. ಈ ನರಕದಿಂದ ಹೊರಬರಲು ನಾವು ಅವರಿಗೆ ಸಹಕಾರ ಕೊಡಬೇಕು. ವೈದ್ಯಕೀಯ ಸಿಬ್ಬಂದಿ, ಪೊಲೀಸರಿಗೆ ನಾವು ಈ ಕೊರೊನಾ ಹೋರಾಟದಲ್ಲಿ ಹೋರಾಡಲು ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.

    ಡಿಸ್ಚಾರ್ಜ್ ಆಗಿದ್ದ ವ್ಯಕ್ತಿಯನ್ನು ಸ್ಥಳೀಯರು ಯೋಧನ ರೀತಿ ಸ್ವಾಗತಿಸಿ ಬರಮಾಡಿಕೊಂಡರು. ತಬ್ಲಿಘಿ ಸಮಾವೇಶಕ್ಕೆ ತೆರಳಿ ಕೊರೊನಾ ಪಾಸಿಟಿವ್ ಆಗಿದ್ದ ತೊಕ್ಕೊಟ್ಟಿನ ವ್ಯಕ್ತಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವ್ಯಕ್ತಿ ಗುಣಮುಖರಾಗಿ ಮನೆಗೆ ಬರುತ್ತಿದ್ದಾಗ ಇವರನ್ನು ಸ್ವಾಗತಿಸಲು ಸೀಲ್‍ಡೌನ್ ಆದ ತೊಕ್ಕೊಟ್ಟು ಏರಿಯಾದಲ್ಲಿ 30ಕ್ಕೂ ಹೆಚ್ಚು ಮಂದಿ ಸೇರಿದ್ದರು. ಕೊರೊನಾ ಹರಡದಂತೆ ತೊಕ್ಕೊಟ್ಟಿನಲ್ಲಿ ಬಿಗುವಾದ ಲಾಕ್‍ಡೌನ್ ಮಾಡಲಾಗಿತ್ತು.

    ಈ ವೇಳೆ ಮಾತನಾಡಿದ ವ್ಯಕ್ತಿ, ವೈದ್ಯರು ಮತ್ತು ನರ್ಸ್‍ಗಳು ಸೇವೆಯನ್ನು ಶ್ಲಾಘಿಸಿದ್ದಾರೆ. ತಮ್ಮ ಜೀವ ಪಣಕ್ಕಿಟ್ಟು ಪೊಲೀಸರು, ವೈದ್ಯರು ಮತ್ತು ನರ್ಸ್‍ಗಳು ನಮ್ಮನ್ನು ಕೊರೊನಾ ನರಕದಿಂದ ಪಾರು ಮಾಡಿದ್ದಾರೆ. ಅವರಿಗೆ ನಾವು ಸಹಕರಿಸಬೇಕು. ಆಸ್ಪತ್ರೆಯಲ್ಲಿ ತುಂಬಾ ಚೆನ್ನಾಗಿ ನಮ್ಮನ್ನು ನೋಡಿಕೊಂಡಿದ್ದಾರೆ. ಅವರಿಗೆ ಎಷ್ಟೆ ಕಷ್ಟವಾದರೂ ಜನರ ಜೀವ ಉಳಿಸಲು ವೈದ್ಯರು, ಪೊಲೀಸರು, ನರ್ಸ್‍ಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಣ್ಣಿರಿಡುತ್ತಲೇ ಗುಖಮುಖರಾದ ಸೋಂಕಿತ ಹೇಳಿಕೊಂಡಿದ್ದಾರೆ.

    ಈ ವಿಡಿಯೋವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ ಅವರು ಟ್ವೀಟ್ ಮಾಡಿದ್ದಾರೆ.

  • ಕೊರೊನಾ ವಿರುದ್ಧ ಹೋರಾಡಿ ಗೆದ್ದ 107ರ ವೃದ್ಧೆ

    ಕೊರೊನಾ ವಿರುದ್ಧ ಹೋರಾಡಿ ಗೆದ್ದ 107ರ ವೃದ್ಧೆ

    ಆಮ್‌ಸ್ಟರ್‌ಡ್ಯಾಮ್: ನೆದರ್ಲ್ಯಾಂಡ್‍ನಲ್ಲಿ 107 ವರ್ಷದ ವೃದ್ಧೆಯೊಬ್ಬರು ಕೊರೊನಾ ವೈರಸ್ ವಿರುದ್ಧ ಹೋರಾಡಿ ಗೆದ್ದಿದ್ದಾರೆ.

    ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನೆದರ್ಲ್ಯಾಂಡ್‍ನ ಕಾರ್ನೆಲಿಯಾ ರಾಸ್ (107) ಅವರು ಗುಣಮುಖರಾಗಿದ್ದು, ಸದ್ಯ ತಮ್ಮ ಮನೆಯಲ್ಲಿ ಆರಾಮವಾಗಿ ತಿರುಗಾಡುತ್ತಿದ್ದಾರೆ. ಕಾರ್ನೆಲಿಯಾ ರಾಸ್ ಮೊಣಕಾಲೂರಿ ದೇವರಿಗೆ ಹಾಗೂ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

    ತನ್ನದೇ ದೇಶದ ದ್ವೀಪವೊಂದಕ್ಕೆ ಭೇಟಿ ನೀಡಿದಾಗ ಕಾರ್ನೆಲಿಯಾ ರಾಸ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಅವರೊಟ್ಟಿಗೆ 40 ಜನ ಪ್ರವಾಸ ಕೈಗೊಂಡಿದ್ದರು. ಈ ಪೈಕಿ 12 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಕಾರ್ನೆಲಿಯಾ ಅವರು ಯಾವುದಕ್ಕೂ ಹೆದರದೇ ಧೈರ್ಯವಾಗಿ ಕೊರೊನಾ ವಿರುದ್ಧ ಹೋರಾಡಿ ಸಾವು ಜಯಿಸಿದ್ದಾರೆ.

    ಚಿಕಿತ್ಸೆ ನೀಡಿದ ವೈದ್ಯರು ಕಾರ್ನೆಲಿಯಾ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ವೃದ್ಧೆಯ ಸೋದರ ಸೊಸೆ ಮೇಹ್ಯೂ ಡಿ ಗ್ರೂಟ್ ಅವರು, ಕಾರ್ನೆಲಿಯಾ ರಾಸ್ ಅವರು ಕೊರೊನಾ ವಿರುದ್ಧ ಹೋರಾಡಿ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ನಮಗೆ ಇರಲಿಲ್ಲ. ಅವರಿಗೆ ಮೊದಲು ಜ್ವರ ಮತ್ತು ಕೆಮ್ಮಿನ ಗುಣಲಕ್ಷಣಗಳು ಕಂಡು ಬಂದಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಚಿಕಿತ್ಸೆಯ ಸಮಯದಲ್ಲಿ ಅವರು ಸಾಕಷ್ಟು ಶಾಂತವಾಗಿದ್ದರು. ಈಗ ಅವರು ಆರೋಗ್ಯವಾಗಿದ್ದು, ಯಾವುದೇ ಔಷಧಿಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ.

    ನ್ಯೂಜಿಲೆಂಡ್ ಪತ್ರಿಕೆಯೊಂದರ ವರದಿಯ ಪ್ರಕಾರ, 107ನೇ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಕಾರ್ನೆಲಿಯಾ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ ಅವರು ಕ್ವಾರಂಟೈನ್‍ನಲ್ಲಿ ಒಂಟಿಯಾಗಿ ಬರ್ತ್ ಡೇ ಆಚರಿಸಿಕೊಂಡಿದ್ದರು.

    ಕಾರ್ನೆಲಿಯಾ ಅವರಿಗಿಂತ ಮೊದಲು 104 ವರ್ಷದ ಅಮೆರಿಕದ ಲ್ಯಾಪೀಸ್ ಅವರನ್ನು ಕೊರೊನಾ ವಿರುದ್ಧ ಹೋರಾಡಿ ಗೆದ್ದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ  ಎಂದು ಘೋಷಿಸಲಾಗಿತ್ತು. ಅವರು 1918ರಲ್ಲಿ ಎರಡನೇ ಮಹಾಯುದ್ಧ ಮತ್ತು ಸ್ಪ್ಯಾನಿಷ್ ಜ್ವರದಲ್ಲಿಯೂ ಹೋರಾಡಿ ಬದುಕುಳಿದಿದ್ದರು. ಸ್ಪ್ಯಾನಿಷ್ ಜ್ವರವು ವಿಶ್ವಾದ್ಯಂತ ಸುಮಾರು 5 ಕೋಟಿ ಜನರನ್ನು ಬಲಿ ಪಡೆದಿತ್ತು. 1916ರಲ್ಲಿ ಜನಿಸಿದ ಲ್ಯಾಪೀಸ್ ಅವರಿಗೆ 2020ರ ಮಾರ್ಚ್ ನಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು.

  • ಕೊರೊನಾ ಸೋಂಕಿತ ರಾಜ್ಯದ 10 ತಿಂಗಳ ಮಗು ಗುಣಮುಖ- ತಾಯಿ, ಅಜ್ಜಿಗೂ ನೆಗೆಟಿವ್

    ಕೊರೊನಾ ಸೋಂಕಿತ ರಾಜ್ಯದ 10 ತಿಂಗಳ ಮಗು ಗುಣಮುಖ- ತಾಯಿ, ಅಜ್ಜಿಗೂ ನೆಗೆಟಿವ್

    ಮಂಗಳೂರು: ಕೋವಿಡ್19 ಪಾಸಿಟಿವ್ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ 10 ತಿಂಗಳ ಮಗುವು ಸಂಪೂರ್ಣ ಗುಣಮುಖವಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

    ಮಗುವಿನ ತಾಯಿ ಹಾಗೂ ಅಜ್ಜಿಯ ಕೊರೊನಾ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದೆ. ಅವರೂ ಕೂಡ ಇಂದು ಡಿಸ್ಚಾಜ್9 ಆಗಿದ್ದಾರೆ. ಇದುವರೆಗೆ ದಕ್ಷಿಣ ಕನ್ನಡ ಜಿಲ್ಲೆಯ 12 ಕೊರೊನಾ ಸೋಂಕಿತರಲ್ಲಿ 6 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ವಾರ ಪೂರ್ತಿ ಅಂದರೆ ಏಪ್ರಿಲ್ 5ರಿಂದ 11ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ ಯಾವುದೇ ಕೊರೊನಾ ಸೋಂಕಿತರು ಪತ್ತೆಯಾಗಿಲ್ಲ.

    ಜಿಲ್ಲೆಯ 10 ತಿಂಗಳ ಮಗುವಿಗೆ ಕೊರೊನಾ ತಗುಲಿದ್ದು, ರಾಜ್ಯದಲ್ಲೇ ವಿಶಿಷ್ಟವಾಗಿತ್ತು. ಕೇವಲ ಎದೆ ಹಾಲು ಕುಡಿಯುವ ಪುಟ್ಟ ಕಂದನಿಗೆ ಕೊರೊನಾ ಚಿಕಿತ್ಸೆ ನೀಡುವುದು ವೈದ್ಯರಿಗೂ ಸವಾಲಾಗಿತ್ತು. ಪುಟ್ಟ ಮಗುವಿನ ಐಸೋಲೇಶನ್‍ನೊಂದಿಗೆ, ಚಿಕಿತ್ಸೆ ನೀಡುವುದು ಬಹಳ ಸೂಕ್ಷ್ಮವಾಗಿತ್ತು. ವೈದ್ಯರು ಈ ಸವಾಲನ್ನು ಬಹಳ ನಾಜೂಕಾಗಿ ನಿರ್ವಹಿಸಿದ್ದು, ವೆನ್ ಲಾಕ್ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿ ಮಗುವನ್ನು ಗುಣಮುಖಗೊಳಿಸಿದ್ದಾರೆ.

    ಮಗುವಿನ ಗ್ರಾಮದಲ್ಲಿ ಯಾರಿಗೂ ಕೊರೊನಾ ಹರಡದಿರುವುದು ಸಮಾಧಾನಕರ ವಿಷಯವಾಗಿದೆ. ಮಗುವಿಗೆ ಕೊರೊನಾ ದೃಟಪಟ್ಟ ನಂತರ ಇಡೀ ಸಜೀಪನಡು ಗ್ರಾಮವನ್ನು ಸಂಪೂರ್ಣ ಸೀಲ್ ಮಾಡಿ, ಜಿಲ್ಲಾಡಳಿತ ಗ್ರಾಮಸ್ಥರಿಗೆ ಎಲ್ಲಾ ಅಗತ್ಯ ಸಾಮಗ್ರಿ ಹಾಗೂ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಒದಗಿಸಿತ್ತು.