Tag: disabled persons

  • ಪಬ್ಲಿಕ್ ಟಿವಿ ಪ್ರೇರಣೆ – ಇಬ್ಬರು ವಿಶೇಷ ಚೇತನರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿ ವಿತರಿಸಿದ ಸವದಿ

    ಪಬ್ಲಿಕ್ ಟಿವಿ ಪ್ರೇರಣೆ – ಇಬ್ಬರು ವಿಶೇಷ ಚೇತನರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿ ವಿತರಿಸಿದ ಸವದಿ

    ಚಿಕ್ಕೋಡಿ: ಪಬ್ಲಿಕ್ ಟಿವಿಯ (Public Tv) ‘ಬೆಳಕು’ (Belaku) ಕಾರ್ಯಕ್ರಮದ ಪ್ರೇರಣೆಯಿಂದ ಬೆನ್ನುಹುರಿ ಇಲ್ಲದ ಇಬ್ಬರು ವಿಕಲಚೇತನರಿಗೆ (Disabled Persons) ಬ್ಯಾಟರಿ ಚಾಲಿತ ಗಾಲಿ ಕುರ್ಚಿ (Wheelchair) ಬೈಕ್‌ಗಳನ್ನು ಅಥಣಿ ಶಾಸಕ ಲಕ್ಷ್ಮಣ ಸವದಿ (Laxman Savadi) ನೀಡಿದ್ದಾರೆ.

    ದೀಪಾವಳಿ (Deepavali) ಹಬ್ಬದ ನಿಮಿತ್ತ ವಿಶೇಷ ಚೇತನರಿಗೆ ವಿಶೇಷ ಕೊಡುಗೆ ನೀಡಿದ ಶಾಸಕ ಸವದಿ, ನಡೆಯಲಾಗದೇ ಹಾಸಿಗೆ ಮೇಲಿದ್ದ ಇಬ್ಬರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿ ಕೊಡುಗೆಯಾಗಿ ನೀಡಿದ್ದಾರೆ. ಅಥಣಿ ಪಟ್ಟಣದ ಅವರ ಸ್ವಗೃಹದಲ್ಲಿ ಹಬ್ಬದ ನಿಮಿತ್ತ ನಿಯೋ ಮೋಶನ್ ಕಂಪನಿಯ 1,05,000 ರೂ. ಬೆಲೆಯ 2 ಬ್ಯಾಟರಿ ಚಾಲಿತ ವಾಹನ ಕೊಡುಗೆಯಾಗಿ ನೀಡಿದ್ದಾರೆ. ಇದನ್ನೂ ಓದಿ: ಬಲಿಪಾಡ್ಯಮಿ; ಮಂತ್ರಾಲಯ ಮಠದಲ್ಲಿ ಶ್ರೀಗಳಿಂದ ವಿಶೇಷ ಮಹಾಭಿಷೇಕ

    ವಿದ್ಯುತ್ ಕಂಬದಿಂದ ಬಿದ್ದು ಬೆನ್ನುಹುರಿ ಅಪಘಾತಕ್ಕೆ ಒಳಗಾಗಿದ್ದ ಬಡಚಿ ಗ್ರಾಮದ ಬಸಪ್ಪ ಪೂಜಾರಿ ಹಾಗೂ ಹುಟ್ಟಿನಿಂದ ಪೋಲಿಯೋ ಪೀಡಿತ ದೇಸಾರಟ್ಟಿ ಗ್ರಾಮದ ಸಚ್ಚಿನ ಗಾಂವಕರ ಎಂಬವರಿಗೆ ಸವದಿ ಗಾಲಿ ಕುರ್ಚಿ ಹಸ್ತಾಂತರ ಮಾಡಿದರು. ಕಳೆದ ವರ್ಷ ದೀಪಾವಳಿ ಹಬ್ಬದ ನಿಮಿತ್ತ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಡಿ ಬೆನ್ನುಹುರಿ ಅಪಘಾತಕ್ಕೆ ಒಳಗಾಗಿದ್ದ ಹನುಮಂತ ಕುರುಬರ ಎಂಬ ಯುವಕನಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿಯನ್ನು ನೀಡಿದ್ದರು. ಇದನ್ನೂ ಓದಿ: ವಿದ್ಯುತ್‌ ಕಳ್ಳತನ ಆರೋಪ – ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲು

    ಈ ಬಾರಿ ಬೆಳಕು ಕಾರ್ಯಕ್ರಮವನ್ನು ಪ್ರೇರಣೆಯಾಗಿಸಿಕೊಂಡು ಮತ್ತಿಬ್ಬರಿಗೆ ಬ್ಯಾಟರಿ ಚಾಲಿತ ಗಾಲಿ ಕುರ್ಚಿ ಬೈಕ್ ನೀಡಿದ್ದಾರೆ. ವಿಶೇಷ ಚೇತನರಿಗೆ ಬೈಕ್ ನೀಡಿದ ಬಳಿಕ ಪಬ್ಲಿಕ್ ಟಿವಿ ಕಾರ್ಯವನ್ನು ಶಾಸಕ ಲಕ್ಷ್ಮಣ ಸವದಿ ಶ್ಲಾಘಿಸಿದ್ದು, ಅನೇಕ ನಿರ್ಗತಿಕರಿಗೆ ಬಡವರಿಗೆ ಪಬ್ಲಿಕ್ ಟಿವಿಯ ‘ಬೆಳಕು’ ಕಾರ್ಯಕ್ರಮ ನವಚೈತನ್ಯ ನೀಡುವ ಕಾರ್ಯ ಮಾಡುತ್ತಿದೆ ಎಂದರು. ಇದನ್ನೂ ಓದಿ: ಬಿಜೆಪಿಗೆ ವಿಜಯೇಂದ್ರ ಹಿಟ್ ಮ್ಯಾನ್: ಶ್ರೀರಾಮುಲು

  • ಸ್ವಾವಲಂಬಿ ಜೀವನ ನಡೆಸಲು ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಣೆ

    ಸ್ವಾವಲಂಬಿ ಜೀವನ ನಡೆಸಲು ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಣೆ

    ಮಡಿಕೇರಿ: ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ, ಆಯ್ಕೆಯಾದ ವಿಕಲಚೇತನ ಫಲಾನುಭವಿಗಳಿಗೆ ಇಂದು ದ್ವಿಚಕ್ರ ವಾಹನಗಳನ್ನು ವಿತರಿಸಲಾಗಿದೆ.

    ಮಡಿಕೇರಿಯಲ್ಲಿ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆಯಡಿ 2020-21ನೇ ಸಾಲಿಗೆ ಕೊಡಗು ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮುದ್ದಣ್ಣ ಅವರ ಸಮ್ಮುಖದಲ್ಲಿ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲಾಯಿತು. ಇದನ್ನೂ ಓದಿ:  ಜ್ಯೋತಿರಾದಿತ್ಯ ಸಿಂಧಿಯಾರನ್ನು ಭೇಟಿಯಾದ ಸಿಎಂ ಬೊಮ್ಮಾಯಿ

    ಜಿಲ್ಲೆಯಲ್ಲಿ ಇರುವ ವಿಕಲಚೇತನರು ಹಾಗೂ ಹಿರಿಯ ನಾಗರೀಕರು ಸ್ವಾವಲಂಬಿ ಜೀವನ ನಡೆಸಲು ಹಾಗೂ ಬೇರೆಯವರಿಗೂ ತೊಂದರೆ ಕೊಡದೆ, ಬದುಕು ನಡೆಸಲು ಯಂತ್ರಚಾಲಿತ ದ್ವಿಚಕ್ರ ವಾಹನಗಳಿಗೆ ಅರ್ಜಿ ಹಾಕಿದ್ದರು. ಈ ಹಿನ್ನೆಲೆ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ಇರುವ ವಿಶೇಷ ಚೇತನರ ಸರ್ವೆ ಕಾರ್ಯ ಮಾಡಲಾಗಿದ್ದು, ಆಯ್ಕೆಯಾದ ವಿಕಲಚೇತನ ಫಲಾನುಭವಿಗಳಿಗೆ ಇಂದು ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಹಸ್ತಾಂತರ ಮಾಡಲಾಯಿತು.

    ಈ ಸಂದರ್ಭದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವಿಮಲಾ, ನಿರೂಪಣಾಧಿಕಾರಿ ಪೂಣಚ್ಚ, ಜಿಲ್ಲಾ ದಿವ್ಯಾಂಗ ಒಕ್ಕೂಟ ಅಧ್ಯಕ್ಷರಾದ ಮಹೇಶ್ವರ್, ಉಪಾಧ್ಯಕ್ಷೆ ಆಯಿಷಾ, ಕಾರ್ಯದರ್ಶಿ ಲೋಹಿತ್ ಮತ್ತು ವಿಕಲಚೇತನ ಇಲಾಖೆಯ ಸಿಬ್ಬಂದಿ ಹಾಜರಿದ್ದರು. ಇದನ್ನೂ ಓದಿ:  ಡ್ರೋನ್ ದಾಳಿ- 10 ಜನರಿಗೆ ತೀವ್ರ ಗಾಯ

  • ನಮಗಾಗಿ ಕೆಲಸ ಮಾಡದವರಿಗೆ ಮತ ಹಾಕಲ್ಲ – ಹಾಸನದಲ್ಲಿ ಅಂಗವಿಕಲರಿಂದ ಬಹಿಷ್ಕಾರ

    ನಮಗಾಗಿ ಕೆಲಸ ಮಾಡದವರಿಗೆ ಮತ ಹಾಕಲ್ಲ – ಹಾಸನದಲ್ಲಿ ಅಂಗವಿಕಲರಿಂದ ಬಹಿಷ್ಕಾರ

    ಹಾಸನ: ವಿಕಲಚೇತನರ ಸಮಸ್ಯೆಗಳನ್ನು ಯಾವುದೇ ರಾಜಕೀಯ ನಾಯಕರೂ ಕೇಳುತ್ತಿಲ್ಲ. ಆದರಿಂದ ನಮಗಾಗಿ ಕೆಲಸ ಮಾಡದವರಿಗೆ ನಾವು ಯಾಕೆ ಮತ ಹಾಕಬೇಕು ಎಂದು ಪ್ರಶ್ನಿಸಿ ಜಿಲ್ಲೆಯ ಅಂಗವಿಕಲರ ಸಂಘದ ಮತದಾನ ಬಹಿಷ್ಕರಿಸಲು ಮುಂದಾಗಿದ್ದಾರೆ.

    ಯಾವುದೇ ಪಕ್ಷವಾಗಲಿ, ನಾಯಕರಾಗಲಿ ಅಂಗವಿಕಲರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕಳೆದ 25 ವರ್ಷಗಳಿಂದ ಜಿಲ್ಲೆಯ ಅಂಗವಿಕಲ ಕ್ಷೇಮಾಭಿವೃದ್ದಿಗೆ ಸಂಘವನ್ನು ಸ್ಥಾಪಿಸಿಕೊಂಡಿದ್ದೇವೆ. ಇದೂವರೆಗೆ 79 ಬಾರಿ ರಾಜ್ಯದ ಮುಖ್ಯಮಂತ್ರಿಗಳೂ ಸೇರಿದಂತೆ ಸಂಬಂಧಿಸಿದ ಎಲ್ಲರಿಗೂ ಮನವಿಗಳನ್ನು ಕೊಟ್ಟಿದ್ದೇವೆ. ಆದ್ರೆ ಯಾರೊಬ್ಬರೂ ಕೂಡ ನಮ್ಮ ಮನವಿಗೆ ಓಗೊಡುತ್ತಿಲ್ಲ. ವಿಕಲಚೇತನರ ಸಮಸ್ಯೆಗಳು ಹಲವಾರು ಇವೆ, ಅವುಗಳನ್ನು ಪರಿಹರಿಸಿಲ್ಲ. ಹೀಗಿರುವಾಗ ಯಾವ ಖುಷಿಗೆ ನಾವು ಮತ ಹಾಕಬೇಕು ಎಂದು ಅಂಗವಿಕಲ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.

    ಜಿಲ್ಲೆಯಲ್ಲಿ 1300 ಮಂದಿ ದೈಹಿಕ ವಿಕಲಚೇತನರಿದ್ದೇವೆ. ಜೊತೆಗೆ ವಿವಿಧ ವಿಕಲಾಂಗತೆಯಿಂದ ಬಳಲುತ್ತಿರುವ ವಿಕಲಚೇತನರು ಜಿಲ್ಲೆಯಲ್ಲಿ 25 ಸಾವಿರಕ್ಕು ಹೆಚ್ಚು ಮಂದಿ ಇದ್ದಾರೆ. ಎಲ್ಲಾ ಸಭೆ ಸಮಾರಂಭಗಳಲ್ಲಿ ರಾಜಕೀಯ ನಾಯಕರು ನಮ್ಮ ಬಗ್ಗೆ ಮಾತನಾಡುತ್ತಾರೆ. ಆದ್ರೆ ನಮ್ಮ ನಿರ್ಧಿಷ್ಟ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕರು ಯಾರೂ ಇಲ್ಲ. ಆದ್ದರಿಂದ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ನಾವು ಭಾಗವಹಿಸುವುದಿಲ್ಲ. ನಮ್ಮ ಸಂಘದ ವತಿಯಿಂದ ಚುನಾವಣೆ ಬಹಿಷ್ಕಾರ ಮಾಡುವ ಕರೆ ನೀಡುತ್ತೇವೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.