Tag: Disabled child

  • ಅಂಗವಿಕಲ ಮಗುವಿಗೆ ಬೋರ್ಡಿಂಗ್ ನಿರಾಕರಿಸಿದ ವಿಮಾನ ನಿಲ್ದಾಣ ಸಿಬ್ಬಂದಿ – ವೀಡಿಯೋ ವೈರಲ್

    ಅಂಗವಿಕಲ ಮಗುವಿಗೆ ಬೋರ್ಡಿಂಗ್ ನಿರಾಕರಿಸಿದ ವಿಮಾನ ನಿಲ್ದಾಣ ಸಿಬ್ಬಂದಿ – ವೀಡಿಯೋ ವೈರಲ್

    ರಾಂಚಿ: ಇಂಡಿಗೋ ಏರ್‌ಲೈನ್ಸ್‌ ವಿಮಾನ ನಿಲ್ದಾಣದಲ್ಲಿ ಅಂಗವಿಕಲ ಮಗುವಿಗೆ ಬೋರ್ಡಿಂಗ್ ನಿರಾಕರಿಸಲಾಗಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

    ಶನಿವಾರದಂದು ರಾಂಚಿ ವಿಮಾನ ನಿಲ್ದಾಣದಿಂದ ಹೈದರಾಬಾದ್‍ ತೆರಳುವ ವಿಮಾನಕ್ಕೆ ಹೋಗಲು ಅಂಗವಿಕಲ ಮಗು ಮತ್ತು ಪೋಷಕರು ಬಂದಿದ್ದಾರೆ. ಆದರೆ ವಿಮಾನ ನಿಲ್ದಾಣದ ಸಿಬ್ಬಂದಿ ಆ ಮಗುವನ್ನು ಬೋರ್ಡಿಂಗ್ ಮಾಡಿಕೊಳ್ಳಲು ನಿರಾಕರಿಸಿದ್ದಾರೆ. ಈ ಹಿನ್ನೆಲೆ ಸ್ಥಳದಲ್ಲಿದ್ದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಇಂಡಿಗೋ ಏರ್‌ಲೈನ್ಸ್‌ ಬಗ್ಗೆ ವ್ಯಾಪಕ ನಿಂದನೆ ಮಾಡಲಾಗುತ್ತಿದೆ. ಇದನ್ನೂ ಓದಿ: ಪಿಎಸ್‍ಐ ನೇಮಕಾತಿ ಅಕ್ರಮ ಭೇದಿಸಲು ಸಹಾಯವಾಯ್ತು ಫೋಟೋಶೂಟ್ 

    ಸಹ ಪ್ರಯಾಣಿಕ ಮನಿಷಾ ಗುಪ್ತಾ ಅವರು ಟ್ವೀಟ್‌ ಮಾಡುವ ಮೂಲಕ ಘಟನೆಯ ಪೂರ್ಣ ವಿವರವನ್ನು ತಿಳಿಸಿದ್ದಾರೆ. ಈ ವೀಡಿಯೋದಲ್ಲಿ, ಮಗು ಬೋರ್ಡಿಂಗ್ ಮಾಡಿಕೊಳ್ಳುತ್ತಿರುವ ವೇಳೆ ಸಿಬ್ಬಂದಿ, ಈ ಮಗು ಬೋರ್ಡಿಂಗ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ಇದರಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತೆ ಎಂದು ತಡೆದಿದ್ದಾನೆ.

    ಈ ವೇಳೆ ಸಹ-ಪ್ರಯಾಣಿಕರು ಮಗು ಮತ್ತು ಅವನ ಪೋಷಕರಿಗೆ ಬೆಂಬಲವಾಗಿ ಬಂದು ಸಿಬ್ಬಂದಿಗೆ ಭರವಸೆ ನೀಡಿದರು. ಈ ವೇಳೆ ಪ್ರಯಾಣಿಕರು, ಮಗು ಮತ್ತು ಅವನ ಪೋಷಕರು ವಿಮಾನವನ್ನು ಹತ್ತಲು ನಮಗೆ ಯಾವುದೇ ಅಭ್ಯಂತರವಿಲ್ಲ. ಪ್ರಯಾಣಿಕರಲ್ಲಿ ವೈದ್ಯರ ನಿಯೋಗವು ಮಗುವಿಗೆ ಪ್ರಯಾಣಿಸಲು ಅವಕಾಶ ನೀಡುವಂತೆ ಅಧಿಕಾರಿಗೆ ಮನವಿ ಮಾಡಿದೆ. ಆದರೆ, ಇವರೆಲ್ಲ ವಿನಂತಿಗಳು ಮತ್ತು ಮನವಿಗಳು ವ್ಯರ್ಥವಾಗಿ ಮಗು ಮತ್ತು ಅವನ ಹೆತ್ತವರು ಸೇರಿದಂತೆ ಮೂವರು ಪ್ರಯಾಣಿಕರನ್ನು ಬಿಟ್ಟು ವಿಮಾನವು ಹೈದರಾಬಾದ್‍ಗೆ ಹಾರಿತು.

    ಈ ವೀಡಿಯೋ ಟ್ವಿಟ್ಟರ್‌ನಲ್ಲಿ ಟ್ವೀಟ್‌ ಮಾಡಿದ ಮೇಲೆ ಸಖತ್ ವೈರಲ್ ಆಗಿದೆ. ಅಲ್ಲದೇ ಈ ವೀಡಿಯೋಗೆ ವ್ಯಾಪಾಕ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಈ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ಜ್ಯೋತಿರಾದಿತ್ಯ ಪ್ರತಿಕ್ರಿಯೆ
    ಈ ಬಗ್ಗೆ ಸ್ವತಃ ತನಿಖೆ ನಡೆಸುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೋಮವಾರ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಶೂನ್ಯ ಸಹಿಷ್ಣುತೆ ಇರುವುದು ಒಳ್ಳೆಯದಲ್ಲ. ಯಾವ ಮನುಷ್ಯನೂ ಈ ರೀತಿ ಇರುವುದು ಸರಿಯಲ್ಲ. ಈ ಬಗ್ಗೆ ನಾನೇ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.