Tag: Disability man

  • ದರೋಡೆ ವಿರೋಧಿಸಿದ್ದಕ್ಕೆ ವಿಕಲಚೇತನನಿಗೆ ಚೂರಿ ಇರಿತ

    ದರೋಡೆ ವಿರೋಧಿಸಿದ್ದಕ್ಕೆ ವಿಕಲಚೇತನನಿಗೆ ಚೂರಿ ಇರಿತ

    ನವದೆಹಲಿ: ದರೋಡೆ ನಡೆಸಿದ ಮೂವರು ವ್ಯಕ್ತಿಗಳಿಗೆ ಅಂಗವಿಕಲನೊಬ್ಬ ವಿರೋಧಿಸಿದ್ದು, ಸ್ಥಳದಲ್ಲೇ ದರೋಡೆಕೋರರು ಆತನಿಗೆ ಚೂರಿಯಿಂದ ಇರಿದ ಘಟನೆ ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದಿದೆ.

    ವಿಕಲಚೇತನ ವ್ಯಕ್ತಿ ಸಂಜಯ್ ಕುಮಾರ್(25) ಚೂರಿ ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದ ಇಬ್ಬರು ಬಾಲಾರೋಪಿ ಯೊಂದಿಗೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

    ಮಂಗಳವಾರ ರಾತ್ರಿ ಸಂಜಯ್ ಕುಮಾರ್ ತನ್ನ ಕೆಲಸದ ಸ್ಥಳದಿಂದ ಮನೆಗೆ ಹಿಂದಿರುಗುತ್ತಿದ್ದರು. ಈ ಹೊತ್ತಿನಲ್ಲಿ ದೇವಸ್ಥಾನವೊಂದರ ಬಳಿ ಮೂವರು 20,000ರೂ. ದೋಚಿದ್ದು, ಅದನ್ನು ಕುಮಾರ್ ತಡೆಯಲು ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಓರ್ವನ ಕೊಲೆ – 18 ಮಂದಿ ಅರೆಸ್ಟ್!

    ಆರೋಪಿಗಳು ಅಲ್ಲಿಂದ ಪರಾರಿಯಾಗಲು ಯತ್ನಿಸಿದಾಗ ಕುಮಾರ್ ಅವರನ್ನು ಬೆನ್ನಟ್ಟಿ ಇಬ್ಬರನ್ನು ಹಿಡಿದಿದ್ದರು. ಆದರೆ ಆರೋಪಿಗಳು ಕುಮಾರ್‌ಗೆ ಚೂರಿಯಿಂದ ಇರಿದು ಹಲ್ಲೆ ಮಾಡಿದ್ದಾರೆ. ನಂತರ ಕುಮಾರ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಲಾಭದ ಆಮಿಷವೊಡ್ಡಿ ಉದ್ಯಮಿಗೆ 32 ಲಕ್ಷ ರೂ. ಪಂಗನಾಮ!

    ಕುಮಾರ್‌ನನ್ನು ಚಿಕಿತ್ಸೆಗಾಗಿ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮೂವರು ಆರೋಪಿಗಳ ಮೇಲೆ ಕೇಸ್ ದಾಖಲಿಸಿ, ಇಬ್ಬರು ಬಾಲಾಪರಾಧಿ ಹಾಗೂ ಯೋಗೇಶ್(21)ನನ್ನು ಬಂಧಿಸಿದ್ದಾರೆ.

  • ಸಿಎಂ ಮುಂದೆಯೇ ವಿಕಲಚೇತನನ್ನು ಹೊರಹಾಕಿದ ಪೊಲೀಸರು- ಚಿಕ್ಕಮಗಳೂರಲ್ಲಿ ಅಮಾನವೀಯ ಘಟನೆ

    ಸಿಎಂ ಮುಂದೆಯೇ ವಿಕಲಚೇತನನ್ನು ಹೊರಹಾಕಿದ ಪೊಲೀಸರು- ಚಿಕ್ಕಮಗಳೂರಲ್ಲಿ ಅಮಾನವೀಯ ಘಟನೆ

    ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯನವರ ಸಾಧನ ಸಮಾವೇಶದ ವೇಳೆ ತನ್ನ ನೋವು ತೋಡಿಕೊಳ್ಳಲು ಬಂದ ವಿಕಲಚೇತನರೊಬ್ಬರನ್ನು ಪೊಲೀಸರು ಎಳೆದು ಹೊರಹಾಕಿರೋ ಅಮಾನವೀಯ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಕಡೂರಿನ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ಸಿಎಂ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಸಾರುತ್ತಿರೋ ಸಾಧನಾ ಸಮಾವೇಶ ನಡೆಯುತ್ತಿತ್ತು. ಈ ವೇಳೆ ವಿಕಲಚೇತನರೊಬ್ಬರು ತಮಗೆ ಸಿಗಬೇಕಾದ ಸೌಲಭ್ಯಗಳು ಸಿಗದೇ ಇರುವುದರ ಹಿನ್ನೆಲೆಯಲ್ಲಿ ಈ ಹಿಂದೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನವಾಗದಿರುವುದರಿಂದ ಮನನೊಂದು ಸಿಎಂ ಅವರಿಗೆ ಕೊಡಲೆಂದು ಮನವಿ ಪತ್ರ ಹಿಡಿದು ಹೋಗುತ್ತಿದ್ದರು. ಇದನ್ನೂ ಓದಿ: ಬಿಎಸ್‍ವೈ ಅವರಲ್ಲಿ ರಕ್ತ ಎಷ್ಟಿದೆ: ಸಿಎಂ ಪ್ರಶ್ನೆ

    ಈ ವೇಳೆ ಅಲ್ಲಿದ್ದಂತಹ ಕಾಂಗ್ರೆಸ್ ಕಾರ್ಯಕರ್ತರು, ತಾಲೂಕು ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸದಸ್ಯರು ಹಾಗೂ ಹಿರಿಯ ಮುಖಂಡರು ಇದ್ದರೂ ವಿಕಲಚೇತನರ ಮನವಿಯೇನೆಂದು ಕೇಳಲಿಲ್ಲ. ಅಲ್ಲದೇ ಅವರತ್ತ ತಮ್ಮ ಗಮನವನ್ನೂ ಹರಿಸಿಲ್ಲ. ಇನ್ನು ಪೊಲೀಸರು ಮಾನವೀಯತೆ ಮರೆತವರಂತೆ ಅವರನ್ನು ಎಳೆದು ಹೊರಹಾಕಿದ್ದಾರೆ.

    https://www.youtube.com/watch?v=0xSkqyPkZZU