Tag: Dirty politics

  • ಕಾಂಗ್ರೆಸ್‍ನವರದ್ದು ಡರ್ಟಿ ಪಾಲಿಟಿಕ್ಸ್: ಬೊಮ್ಮಾಯಿ

    ಕಾಂಗ್ರೆಸ್‍ನವರದ್ದು ಡರ್ಟಿ ಪಾಲಿಟಿಕ್ಸ್: ಬೊಮ್ಮಾಯಿ

    ಚಿತ್ರದುರ್ಗ: ಕಾಂಗ್ರೆಸ್ (Congress) ಪಕ್ಷದಿಂದ ನಡೆಸುತ್ತಿರುವ ಪೇ ಸಿಎಂ ಅಭಿಯಾನವೊಂದು ಡರ್ಟಿ ಪಾಲಿಟಿಕ್ಸ್ (Dirty Politics) ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

    ಚಿತ್ರದುರ್ಗ (Chitradurga) ತಾಲೂಕಿನ ಸಿರಿಗೆರೆ ಗ್ರಾಮದ ತರಳಬಾಳು ಮಠದಲ್ಲಿ ನಡೆಯುತ್ತಿರುವ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳ (Shri Shivakumar Shivacharya Swamiji) 30ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಪಾಲ್ಗೊಳ್ಳುವ ಮುನ್ನ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಪೇ ಸಿಎಂ ಅಭಿಯಾನ ಕಾಂಗ್ರೆಸ್ ನಾಯಕರ ನೈತಿಕ ಅಧಃಪತನ ತೋರಲಿದೆ. ಪೇ ಸಿಎಂ (Pay CM) ಅಭಿಯಾನದ ಬಗ್ಗೆ ಕಾನೂನು ಕ್ರಮಕೈಗೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದ್ದು, ಡಿ.ಕೆ.ಶಿವಕುಮಾರ್ (D.K.Shivakumar) ಮತ್ತು ಸಿದ್ದರಾಮಯ್ಯ (Siddaramaiah) ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

    ಪಿಎಫ್‍ಐ (PFI) ಮತ್ತು ಎಸ್‍ಡಿಪಿಐ (SDPI) ಕಚೇರಿ, ಮುಖಂಡರ ಮನೆ ಮೇಲೆ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಈ ಬಗ್ಗೆ ಎನ್‍ಐಎ ಹಾಗೂ ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೋಮಾದಲ್ಲಿದ್ದಾನೆಂದು 18 ತಿಂಗಳು ಮನೆಯಲ್ಲೇ ಶವ ಇಟ್ಕೊಂಡಿದ್ದ ಕುಟುಂಬ

    ಮುಂಬರುವ ವಿಧಾನಸಭೆ ಚುನಾವಣೆ (Vidhansabhe Election) ಹಿನ್ನೆಲೆಯಲ್ಲಿ ವಿವಿಧ ಸಮೀಕ್ಷೆಗಳು ನಡೆಸಲಾಗುತ್ತಿದ್ದು, ಇದರಲ್ಲಿ ಕಾಂಗ್ರೆಸ್ ಹೆಚ್ಚಿನ ಸಂಖ್ಯೆ ಗಳಿಸಲಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಜನರ ನಾಡಿ ಮಿಡಿತ ನಮಗೂ ಗೊತ್ತಿದೆ. 35 ವರ್ಷ ನಾವೂ ರಾಜಕಾರಣ ಮಾಡಿದ್ದು, ಮುಂದಿನ ದಿನಗಳಲ್ಲಿ ತಾವುಗಳೇ ನೋಡುತ್ತೀರಾ ಎಂದಿದ್ದಾರೆ. ಇದನ್ನೂ ಓದಿ: ಬೆಲೆ ಮಿತಿ ನ್ಯಾಯುತವಾಗಿಲ್ಲದಿದ್ದರೇ ಜಾಗತಿಕ ಮಾರುಕಟ್ಟೆಗೆ ತೈಲ ಪೂರೈಕೆ ಬಂದ್ – ರಷ್ಯಾ

    Live Tv
    [brid partner=56869869 player=32851 video=960834 autoplay=true]

  • ಮತ್ತೊಂದು ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ ರಿಲೀಸ್!

    ಮತ್ತೊಂದು ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ ರಿಲೀಸ್!

    ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆಯ ಹೊತ್ತಲ್ಲೇ ಪಟೇಲ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್‍ಗೆ ಸಂಬಂಧಿಸಿದೆ ಎಂದುಹೇಳಲಾಗುತ್ತಿರುವ ಮತ್ತೊಂದು ವಿಡಿಯೋ ರಿಲೀಸ್ ಆಗಿದೆ.

    ಮೇ 22ರಂದು ತನ್ನ ಮೂವರು ಗೆಳೆಯರೊಂದಿಗೆ ಯುವತಿಯೊಬ್ಬಳ ಜೊತೆಗೆ ಕಾಣಿಸಿಕೊಂಡಿದ್ದಾರೆ. ಈ ವೀಡಿಯೋ ರೆಕಾರ್ಡ್ ಆಗಿದ್ದಾಗ ಹಾರ್ದಿಕ್ ಸೇರಿ ಮೂವರು ತಲೆಬೋಳಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿವೆ.

    ಸೋಮವಾರ ಮಹಿಳೆಯೊಂದಿಗೆ ಹಾರ್ದಿಕ್ ಬೆಡ್‍ರೂಮಲ್ಲಿ ಕಾಣಿಸಿಕೊಂಡಿದ್ದ ವೀಡಿಯೋ ವೈರಲ್ ಆಗಿತ್ತು. ಇದು ಚುನಾವಣೆ ಗೆಲ್ಲಲು ಬಿಜೆಪಿ ಹಿಡಿದಿರುವ ಅಡ್ಡದಾರಿ ಅಂತಾ ಹಾರ್ದಿಕ್ ಆರೋಪಿಸಿದ್ದಾರೆ. ಈ ವರ್ಷದ ಮೇ 22 ರಂದು ಈ ವಿಡಿಯೋ ಸೆರೆಯಾಗಿದೆ.

     

     

     

     

     

     

     

    https://twitter.com/HardikPatel_/status/930005238991478784

    https://youtu.be/rePlIfEZkVQ

  • ಬಿರುಗಾಳಿ ಎಬ್ಬಿಸಿದೆ ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ!

    ಬಿರುಗಾಳಿ ಎಬ್ಬಿಸಿದೆ ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ!

    – ಈ ವಿಡಿಯೋದಲ್ಲಿರೋದು ನಾನಲ್ಲ : ಹಾರ್ದಿಕ್ ಪಟೇಲ್

    ನವದೆಹಲಿ: ಗುಜರಾತ್ ಚುನಾವಣೆಯಲ್ಲಿ ಸೆಕ್ಸ್ ಸಿಡಿಯೊಂದು ಬಿರುಗಾಳಿ ಎಬ್ಬಿಸಿದೆ. ಮೇ 26ರಂದು ರೆಕಾರ್ಡ್ ಆಗಿರುವ ಈ ಸಿಡಿಯಲ್ಲಿ ಪಟೇಲ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಮಹಿಳೆಯೊಂದಿಗೆ ಬೆಡ್‍ರೂಮಲ್ಲಿ ಕಾಣಿಸಿಕೊಂಡಿದ್ದಾರೆ.

    ಮಾಧ್ಯಮಗಳಲ್ಲಿ ಸಿಡಿ ಬಿಡುಗಡೆಯಾದ ಬಳಿಕ ಪ್ರತಿಕ್ರಿಯಿಸಿದ ಹಾರ್ದಿಕ್ ಪಟೇಲ್, ಈ ಸಿಡಿಯಲ್ಲಿರುವುದು ನಾನಲ್ಲ. ಅದು ನಕಲಿ ಸಿಡಿ. ಪಟೇಲ್ ಮೀಸಲಾತಿ ಹೋರಾಟದ ಹೊಡೆತ ತಾಳಲಾರದೇ ಬಿಜೆಪಿಯವರೇ ನಕಲಿ ಸಿಡಿ ಬಿಟ್ಟಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ನಕಲಿ ಸಿಡಿಯೊಂದು ನನ್ನ ವಿರುದ್ಧ ಬಿಡುಗಡೆ ಆಗಲಿದೆ ಅಂತಾ ಹಾರ್ದಿಕ್ ಹೇಳಿಕೊಂಡಿದ್ರು. ಹಾರ್ದಿಕ್ ಮಾತ್ರವಲ್ಲದೇ ಮೀಸಲಾತಿ ಹೋರಾಟದಲ್ಲಿ ಕಾಣಿಸಿಕೊಂಡಿದ್ದ ಹಲವರ ಸಿಡಿ ನನ್ನ ಬಳಿ ಇದೆ ಎಂದು ಸಿಡಿ ಬಿಡುಗಡೆ ಮಾಡಿರುವ ಯುವಕ ಹೇಳಿಕೊಂಡಿದ್ದಾನೆ.

    https://twitter.com/HardikPatel_/status/930005238991478784

     

    https://youtu.be/rePlIfEZkVQ