Tag: director’s association

  • ನಿರ್ದೇಶಕರ ಸಂಘಕ್ಕೆ ಲಕ್ಷ ಲಕ್ಷ ದೇಣಿಗೆ ನೀಡಿದ ನಟ ಪ್ರಭಾಸ್

    ನಿರ್ದೇಶಕರ ಸಂಘಕ್ಕೆ ಲಕ್ಷ ಲಕ್ಷ ದೇಣಿಗೆ ನೀಡಿದ ನಟ ಪ್ರಭಾಸ್

    ತೆಲುಗಿನ ಖ್ಯಾತ ನಟ ಪ್ರಭಾಸ್ (Prabhas), ದೇಣಿಗೆ ಕೊಡುವ ಕಾರಣದಿಂದಾಗಿ ಆಗಾಗ್ಗೆ ಸುದ್ದಿ ಆಗುತ್ತಲೇ ಇರುತ್ತಾರೆ. ಅದೇ ಕಾರಣಕ್ಕಾಗಿ ಮತ್ತೊಮ್ಮೆ ಸುದ್ದಿ ಆಗಿದ್ದಾರೆ. ತೆಲುಗು ಸಿನಿಮಾ ನಿರ್ದೇಶಕರ ಸಂಘಕ್ಕೆ (Directors Association) ಅವರು ಬರೋಬ್ಬರಿ 35 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ (Donation) ನೀಡಿದ್ದಾರೆ. ತಮ್ಮ ಬೆಳವಣಿಗೆಯಲ್ಲಿ ನಿರ್ದೇಶಕರ ಪಾತ್ರ ತುಂಬಾ ಇದೆ ಎನ್ನುವ ಉದ್ದೇಶದಿಂದ ಇಂಥದ್ದೊಂದು ಕೆಲಸ ಮಾಡಿದ್ದಾರೆ.

    ಸದ್ಯ ಪ್ರಭಾಸ್ ಕಲ್ಕಿ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಕಲ್ಕಿ (Kalki) ಸಿನಿಮಾದ ಬಿಡುಗಡೆ ದಿನಾಂಕ ಬದಲಾಗುತ್ತಲೇ ಇದೆ. ಈಗಾಗಲೇ ಎರಡು ಬಾರಿ ಡೇಟ್ ಬದಲಾವಣೆಯ ಬಗ್ಗೆ ಚರ್ಚೆಯಾಗಿದೆ. ಅಂತಿಮವಾಗಿ ಜೂನ್ 20ರಂದು ಚಿತ್ರ ಬಿಡುಗಡೆ (Release) ಮಾಡುವುದಾಗಿ ತಿಳಿದುಬಂದಿದೆ. ಚುನಾವಣೆ, ಫಲಿತಾಂಶ ಎಲ್ಲವೂ ಮುಗಿದ ನಂತರ ಕಲ್ಕಿ ಬಿಡುಗಡೆ ಆಗಲಿದೆ.

     

    ಬಿಡುಗಡೆಗೂ ಮುನ್ನ ಕಲ್ಕಿ ಸಿನಿಮಾ ನೂರು ಕೋಟಿ ಕ್ಲಬ್ ಸೇರಿತಾ? ಹೌದು ಎನ್ನುತ್ತಿದೆ ಬಿಟೌನ್. ಹಿಂದಿ ಭಾಷೆಯಲ್ಲೇ ಕಲ್ಕಿ 175 ಕೋಟಿ ರೂಪಾಯಿಗೆ ಒಟಿಟಿಗೆ (OTT) ಸೇಲ್ ಆಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ದಕ್ಷಿಣದ ಭಾಷೆಗಳಿಗೂ ನೂರಾರು ಕೋಟಿ ಕೊಟ್ಟು ಖರೀದಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸಿನಿಮಾ ರಿಲಿಸ್ ಗೂ ಮುನ್ನ ದಾಖಲೆಯ ಮೊತ್ತ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ.

  • ಚಲನಚಿತ್ರ ನಿರ್ದೇಶಕರ ಸಂಘಕ್ಕೆ ಎನ್ನಾರ್.ಕೆ. ವಿಶ್ವನಾಥ್ ಅಧ್ಯಕ್ಷ

    ಚಲನಚಿತ್ರ ನಿರ್ದೇಶಕರ ಸಂಘಕ್ಕೆ ಎನ್ನಾರ್.ಕೆ. ವಿಶ್ವನಾಥ್ ಅಧ್ಯಕ್ಷ

    ರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ (Directors Association) ನೂತನ ಅಧ್ಯಕ್ಷರಾಗಿ ಮಂಗಳೂರು ಮೂಲದ ಎನ್ನಾರೆ.ಕೆ. ವಿಶ್ವನಾಥ್ (NRK Vishwanath) ಆಯ್ಕೆಯಾಗಿದ್ದಾರೆ. ಪತ್ರಕರ್ತರಾಗಿಯೂ ಗುರುತಿಸಿಕೊಂಡಿರುವ ಎನ್ನಾರ್ ಕೆ. ವಿಶ್ವನಾಥ್ ಹಲವು ದಶಕಗಳಿಂದ ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ.

    ಸಲ್ಲದ ಕಾರಣಗಳಿಂದಾಗಿ ನಿರ್ದೇಶಕರ ಸುದ್ದಿಯಲ್ಲಿರುತ್ತಿತ್ತು. ಪದಾಧಿಕಾರಿಗಳ ಆಯ್ಕೆಯಲ್ಲಿ ಗೊಂದಲವಿತ್ತು. ಕೆಲ ಅಧ್ಯಕ್ಷರ (President) ವಿರುದ್ಧ ಅಧಿಕಾರ ದುರುಪಯೋಗದ ಆರೋಪವೂ ಕೇಳಿ ಬಂದಿತ್ತು. ನಿರ್ದೇಶಕರ ಸಂಘದಲ್ಲಿನ ಗೊಂದಲಗಳಿಂದಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಎನ್.ಆರ್. ನಂಜುಂಡೇಗೌಡ ರಾಜೀನಾಮೆ ನೀಡಿದ್ದರು. ಇದನ್ನೂ ಓದಿ:ಡಿವೋರ್ಸ್ ಆಗಿ ಒಂದು ವಾರ ಕಳೆದಿಲ್ಲ ಹೆಂಡ್ತಿ ಬೇಕು ಎಂದ ಸುಶ್ಮಿತಾ ಸೇನ್ ಅಣ್ಣ

    ರಾಜೀನಾಮೆ ನೀಡಿದ ಸ್ಥಾನಕ್ಕೆ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ವಿಜೇತರಾಗಿದ್ದ ವಿಶ್ವನಾಥ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ನಾಗೇಂದ್ರ ಅರಸ್ ಮತ್ತು ಜಗದೀಶ್ ಕೊಪ್ಪ ಉಪಾಧ್ಯಕ್ಷರಾಗಿ, ವಿಶಾಲ್ ಧೀರಜ್ ಕಾರ್ಯದರ್ಶಿಯಾಗಿ, ಮಳವಳ್ಳಿ ಸಾಯಿಕೃಷ್ಣ ಜಂಟಿ ಕಾರ್ಯದರ್ಶಿಯಾಗಿ ಸಮಿತಿಯಲ್ಲಿದ್ದಾರೆ.

  • ಟಾರ್ಗೆಟ್ ಮಾಡಿಲ್ಲ, ಐಟಿ ದಾಳಿಗೆ ಕಾರಣ ಇರುತ್ತೆ: ನಟ ಸುದೀಪ್

    ಟಾರ್ಗೆಟ್ ಮಾಡಿಲ್ಲ, ಐಟಿ ದಾಳಿಗೆ ಕಾರಣ ಇರುತ್ತೆ: ನಟ ಸುದೀಪ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ನಟ, ನಿರ್ಮಾಪಕರ ಮೇಲೆ ನಡೆದ ಐಟಿ ದಾಳಿಯಾದ ಬಳಿಕ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ಯಾರೂ ಟಾರ್ಗೆಟ್ ಮಾಡಿಲ್ಲ ಅವರು ಮಾಡಿರೋದನ್ನು ಪ್ರಶಂಸೆ ಮಾಡಬೇಕು ಎಂದು ಹೇಳಿದ್ದಾರೆ.

    ನಿರ್ದೇಶಕರ ಸಂಘದ ಉದ್ಘಾಟನೆಗೆ ತಡವಾಗಿ ಆಗಮಿಸಿದ ಸುದೀಪ್, ಕಾರ್ಯಕ್ರಮ ಇದೆ ಎನ್ನುವುದನ್ನೇ ಮರೆತುಬಿಟ್ಟು ಊರಿಗೆ ಹೊರಟಿದ್ದೆ. ಎರಡು ದಿನಗಳಿಂದ ತುಂಬಾ ಬ್ಯುಸಿ ಇದ್ದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಬಳಿಕ ಕಾರ್ಯಕ್ರಮಕ್ಕೆ ಬರುವುದಾಗಿ ಮಾತು ಕೊಟ್ಟಿದ್ದೆ ಆದರೆ ತಡವಾಗಿದೆ. ಮರೆತಿದ್ದಕ್ಕೆ ಕ್ಷಮೆಯಿರಲಿ ಎಂದರು.

    ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಹಿಂದೆ ಏನೋ ಕಾರಣ ಇರುತ್ತದೆ. ರೈಡ್ ಮಾಡಿದ ತಕ್ಷಣ ಅವರನ್ನು ವಿಲನ್ ಗಳಾಗಿ ನೋಡಲು ಆಗುವುದಿಲ್ಲ. ಆದರೆ ಸದ್ಯ ಊಹಾಪೋಹಗಳು ಹೆಚ್ಚಾಗಿದ್ದು, ನನಗೆ ಇದು ಮೊದಲ ಅನುಭವ.  ನಾವು ಸರಿಯಾಗಿದ್ದರೆ ಭಯ ಪಡುವ ಅವಶ್ಯಕತೆಯೇ ಇಲ್ಲ ಎಂದು ತಿಳಿಸಿದರು.

    ಇದೇ ವೇಳೆ ನಿರ್ದೇಶಕ ಸಂಘದ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಲು ಸಿದ್ಧ ಎಂದು ತಿಳಿಸಿದ ಸುದೀಪ್, ಚಿತ್ರರಂಗದಲ್ಲಿ ಯಾವುದೇ ಸಿನಿಮಾ ಗೆದ್ದರು ಆದರ ಕ್ರೆಡಿಟ್ ಸಿಗಬೇಕಾಗಿದ್ದು ನಿರ್ದೇಶಕರಿಗೆ. ಆದರೆ, ನಿರ್ದೇಶಕರಿಗೆ ಆದರ ಕ್ರೆಡಿಟ್ ಸಿಗುವುದಿಲ್ಲ. ನನಗೂ ನಿರ್ದೇಶಕರ ಸಂಘದ ಕಾರ್ಡ್ ಇರುವುದು ಹೆಮ್ಮೆ ಎನಿಸಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv