Tag: Directorate of Revenue Intelligence

  • ಮುಂಬೈ ವಿಮಾನ ನಿಲ್ದಾಣದಲ್ಲಿ 62.6 ಕೋಟಿ ಮೌಲ್ಯದ ಕೊಕೇನ್ ವಶಕ್ಕೆ – ಭಾರತೀಯ ಮಹಿಳೆ ಅರೆಸ್ಟ್

    ಮುಂಬೈ ವಿಮಾನ ನಿಲ್ದಾಣದಲ್ಲಿ 62.6 ಕೋಟಿ ಮೌಲ್ಯದ ಕೊಕೇನ್ ವಶಕ್ಕೆ – ಭಾರತೀಯ ಮಹಿಳೆ ಅರೆಸ್ಟ್

    ಮುಂಬೈ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Mumbai International Airport) 62.6 ಕೋಟಿ ರೂ. ಮೌಲ್ಯದ ಕೊಕೇನ್ ವಶಕ್ಕೆ ಪಡೆಯಲಾಗಿದ್ದು, ಈ ಸಂಬಂಧ ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಓರ್ವ ಭಾರತೀಯ ಮಹಿಳೆಯನ್ನು ಬಂಧಿಸಿದ್ದಾರೆ.

    ಜು.14ರಂದು ಬಂಧಿತ ಮಹಿಳೆ ದೋಹಾದಿಂದ ಮುಂಬೈ ಬಂದಿಳಿದಿದ್ದರು. ಈ ವೇಳೆ ಗುಪ್ತಚರ ಮಾಹಿತಿ ಮೇರೆಗೆ ಡಿಆರ್‌ಐ ಅಧಿಕಾರಿಗಳು (DRI) ಪರಿಶೀಲನೆ ನಡೆಸಿದಾಗ 6 ಬಿಸ್ಕಟ್‌ ಬಾಕ್ಸ್ ಹಾಗೂ ಮೂರು ಚಾಕೋಲೇಟ್ ಬಾಕ್ಸ್‌ಗಳು ಪತ್ತೆಯಾಗಿವೆ. ಈ 9 ಬಾಕ್ಸ್‌ಗಳಲ್ಲಿ ಕೊಕೇನ್ ಎಂದು ಹೇಳಲಾದ ಬಿಳಿ ಪುಡಿಯ ವಸ್ತು ತುಂಬಿದ ಕ್ಯಾಪ್ಸುಲ್‌ಗಳ ಪತ್ತೆಯಾಗಿವೆ.ಇದನ್ನೂ ಓದಿ: ಕರ್ನಾಟಕಕ್ಕಿಂತ ಕಡಿಮೆ – ಆಂಧ್ರದಲ್ಲಿ ಮದ್ಯದ ದರ ಭಾರೀ ಇಳಿಕೆ

    ಪತ್ತೆಯಾದ ವಸ್ತುವನ್ನು ಸ್ಥಳದಲ್ಲಿಯೇ ಕಿಟ್‌ಗಳನ್ನು ಬಳಸಿ ಪರೀಕ್ಷೆಗೊಳಪಡಿಸಿದಾಗ ಕೊಕೇನ್ ಎಂದು ದೃಢಪಟ್ಟಿದೆ. ಈ ಮೂಲಕ ಸುಮಾರು 62.6 ಕೋಟಿ ರೂ. ಮೌಲ್ಯದ 6,261 ಗ್ರಾಂ ಕೊಕೇನ್ ಇರುವ 300 ಕ್ಯಾಪ್ಸುಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ 1985ರ ಮಾದಕ ದ್ರವ್ಯಗಳು ಕಾಯ್ದೆಯಡಿ ಮಹಿಳೆಯನ್ನು ಬಂಧಿಸಿ, ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

    ಇದಕ್ಕೂ ಮುನ್ನ ಜುಲೈ 8ರಂದು, ಡಿಆರ್‌ಐ ಅಧಿಕಾರಿಗಳು ತಿರುಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 12 ಕೋಟಿ ರೂ. ಮೌಲ್ಯದ ಉನ್ನತ ದರ್ಜೆಯ ಹೈಡ್ರೋಪೋನಿಕ್ ಗಾಂಜಾವನ್ನು ಜಪ್ತಿ ಮಾಡಿದ್ದರು. ಪರಿಶೀಲನೆ ವೇಳೆ ಅಚ್ಚುಕಟ್ಟಾಗಿ ಪ್ಯಾಕ್ ಮಾಡಲಾದ 28 ಮಾದಕ ವಸ್ತುಗಳ ಬ್ಯಾಗ್‌ನ್ನು ವಶಪಡಿಸಿಕೊಂಡಿದ್ದರು.ಇದನ್ನೂ ಓದಿ: ಶೈನ್ ಶೆಟ್ಟಿ, ಅಂಕಿತ ಅಮರ್ ಚಿತ್ರಕ್ಕೆ ಸೆನ್ಸಾರ್ ಅಸ್ತು

  • 43 ಕೋಟಿ ಮೌಲ್ಯದ 504 ಗೋಲ್ಡ್ ಬಿಸ್ಕಟ್ ವಶಕ್ಕೆ – 8 ಜನರ ಬಂಧನ

    43 ಕೋಟಿ ಮೌಲ್ಯದ 504 ಗೋಲ್ಡ್ ಬಿಸ್ಕಟ್ ವಶಕ್ಕೆ – 8 ಜನರ ಬಂಧನ

    -ಬಿಸ್ಕಟ್ ಸಾಗಣೆಗಾಗಿ ಸ್ಪೆಷಲ್ ಶರ್ಟ್ ಡಿಸೈನ್
    -ನಕಲಿ ಆಧಾರ್ ಕಾರ್ಡ್ ಬಳಸಿ ಪ್ರಯಾಣ

    ನವದೆಹಲಿ: 43 ಕೋಟಿ ರೂ. ಮೌಲ್ಯದ 504 ಚಿನ್ನದ ಬಿಸ್ಕತ್ ಗಳನ್ನು ದೆಹಲಿಯ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‍ಐ)ದ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಪಡೆದು ಅಧಿಕಾರಿಗಳು ದೆಹಲಿಗೆ ರೈಲ್ವೇ ಮೂಲಕ ಬಂದವರನ್ನ ಖೆಡ್ಡಾಗೆ ಕೆಡವಿದ್ದಾರೆ.

    ಆಗಸ್ಟ್ 28ರಂದು ಡಿಬ್ರೂಗಢನಿಂದ ಬಂದ ರಾಜಧಾನಿ ಎಕ್ಸ್ ಪ್ರೆಸ್ ರೈಲನ್ನು ತಪಾಸಣೆಗೆ ಒಳಪಡಿಸಿದಾಗ ಅವಿತುಕೊಂಡಿದ್ದ ಎಂಟು ಜನರು ಸಿಕ್ಕಿದ್ದಾರೆ. ಇವರ ಬಳಿಯಲ್ಲಿದ್ದ 86 ಕೆಜಿ ತೂಕದ 504 ಚಿನ್ನದ ಬಿಸ್ಕಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಎಂಟು ಜನರು ಚಿನ್ನ ಸಾಗಿಸಲು ಶರ್ಟ್ ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ. ಶರ್ಟ್ ಮುಂಭಾಗ ಅಂದ್ರೆ ಎದೆ ಭಾಗದಲ್ಲಿ ಚಿನ್ನದ ಬಿಸ್ಕಟ್ ಇರಿಸುವ ವ್ಯವಸ್ಥೆ ಮಾಡಿಕೊಂಡಿದ್ದರು.

    ವಿಚಾರಣೆ ವೇಳೆ ಆರೋಪಿಗಳು, ಚಿನ್ನದ ಬಿಸ್ಕಟ್ ಗಳು ಮಯನ್ಮಾರ್ ನಿಂದ ಮಣಿಪುರ ಮತ್ತು ಗುವಾಹಟಿಗೆ ಬಂದಿದ್ದು, ತಮ್ಮ ಮೂಲಕ ದೆಹಲಿ ತಲುಪಿದ್ದನ್ನು ಒಪ್ಪಿಕೊಂಡಿದ್ದಾರೆ. ಈ ಚಿನ್ನವನ್ನು ದೆಹಲಿ, ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಕೆಲ ವ್ಯಕ್ತಿಗಳಿಗೆ ತಲುಪಿಸಬೇಕಿತ್ತು ಎಂದು ಹೇಳಿದ್ದಾರೆ.

    ಇದರ ಹಿಂದೆ ದೊಡ್ಡ ಜಾಲವೇ ಇದ್ದು, ದೇಶದ ವಿವಿಧ ಭಾಗಗಳಲ್ಲಿನ ಬಡವರಿಗೆ ಹಣದಾಸೆ ತೋರಿಸಿ ಈ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸುವ ಆಸೆಯಿಂದಾಗಿ ಯುವಕರು ಈ ಬಲೆಯಲ್ಲಿ ಸಿಲುಕಿಕಿಕೊಳ್ಳುತ್ತಿದ್ದಾರೆ. ಎಂಟು ಜನ ಬಂಧಿತರು ನಕಲಿ ಆಧಾರ್ ಕಾರ್ಡ್ ಬಳಸಿ ಪ್ರಯಾಣಿಸುತ್ತಿದ್ದರು. ಬಂಧಿತರು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯವರಾಗಿದ್ದಾರೆ.

  • ಸ್ಮಗ್ಲಿಂಗ್ ಅಡ್ಡಗಳ ಮೇಲೆ ದಾಳಿ- 16.5 ಕೋಟಿ ರೂ. ಮೌಲ್ಯದ ಚಿನ್ನ ವಶ

    ಸ್ಮಗ್ಲಿಂಗ್ ಅಡ್ಡಗಳ ಮೇಲೆ ದಾಳಿ- 16.5 ಕೋಟಿ ರೂ. ಮೌಲ್ಯದ ಚಿನ್ನ ವಶ

    ಕೋಲ್ಕತ್ತಾ: ಚಿನ್ನವನ್ನು ಸಾಗಿಸುತ್ತಿದ್ದ ಅಡ್ಡಗಳ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ದಾಳಿ ನಡೆಸಿ, 16.5 ಕೋಟಿ ರೂ. ಮೌಲ್ಯದ 42 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಒಟ್ಟು 42 ಕೆಜಿ ಚಿನ್ನದಲ್ಲಿ 500 ಗ್ರಾಂ ಆಭರಣ ಚಿನ್ನವಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ದೂರು ಬಂದ ಹಿನ್ನೆಲೆ ಕೋಲ್ಕತ್ತಾದ ವಿವಿಧ ಸ್ಥಳಗಳಲ್ಲಿರುವ ಆರೋಪಿಗಳ ಮನೆ ಮೇಲೆ ದಾಳಿ ಮಾಡಿ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಚಿನ್ನವನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದರು ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

    ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದು, ಕೋಲ್ಕತ್ತಾದಲ್ಲಿ ಮಾತ್ರವಲ್ಲದೆ ರಾಯಪುರ, ಮುಂಬೈನಲ್ಲಿಯೂ ಸಹ ಸ್ಮಗ್ಲಿಂಗ್ ಮಾಡಿದ್ದ ಚಿನ್ನವನ್ನು ವಶಪಡಿಸಿಕೊಂಡಿದ್ದೇವೆ. ಈ ಎರಡು ನಗರಗಳಿಂದ ಮೂವರನ್ನು ಬಂಧಿಸಲಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಡಿಆರ್‍ಐ ಅಧಿಕಾರಿಗಳು ಸ್ಮಗ್ಲಿಂಗ್ ಮಾಡುತ್ತಿದ್ದ 219 ಕೆಜಿಗೂ ಅಧಿಕ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.