Tag: Directorate General of Civil Aviation

  • ಕಾಕ್‍ಪಿಟ್‍ಗೆ ಸ್ನೇಹಿತೆ ಕರೆದೊಯ್ದ ಪೈಲೆಟ್ – ಏರ್ ಇಂಡಿಯಾ ಸಿಇಒಗೆ ಶೋಕಾಸ್ ನೋಟಿಸ್

    ಕಾಕ್‍ಪಿಟ್‍ಗೆ ಸ್ನೇಹಿತೆ ಕರೆದೊಯ್ದ ಪೈಲೆಟ್ – ಏರ್ ಇಂಡಿಯಾ ಸಿಇಒಗೆ ಶೋಕಾಸ್ ನೋಟಿಸ್

    ನವದೆಹಲಿ: ವಿಮಾನದ ಕಾಕ್‍ಪಿಟ್ (Cockpit) ಪ್ರವೇಶಿಸಲು ಸ್ನೇಹಿತೆಗೆ ಅನುಮತಿ ನೀಡಿದ್ದ ಪೈಲೆಟ್ ಲೋಪಕ್ಕಾಗಿ ಏರ್ ಇಂಡಿಯಾ (Air India) ಸಿಇಒ ಕ್ಯಾಂಪ್‍ಬೆಲ್ ವಿಲ್ಸನ್ ಹಾಗೂ ಭದ್ರತಾ ಮುಖ್ಯಸ್ಥ ಹೆನ್ರಿ ಡೊನೊಹೋ ಅವರಿಗೆ ಡಿಜಿಸಿಎ (DGCA) ಶೋಕಾಸ್ ನೋಟಿಸ್ ಜಾರಿ ಮಾಡಿದೆ.

    ಘಟನೆಯ ಕುರಿತು ಡಿಜಿಸಿಎಗೆ ಸಮಯೋಚಿತ ವರದಿ ಮಾಡದಿದ್ದಕ್ಕಾಗಿ ಏರ್ ಇಂಡಿಯಾ ಸಿಇಒ ಮತ್ತು ವಿಮಾನ ಸುರಕ್ಷತಾ ಮುಖ್ಯಸ್ಥರಿಗೆ ಏ.21 ರಂದು ಶೋಕಾಸ್ ನೋಟಿಸ್ ನೀಡಲಾಗಿತ್ತು. ಆದರೂ ಇಲ್ಲಿಯವರೆಗೂ ಏರ್ ಇಂಡಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏರ್ ಇಂಡಿಯಾ ಸುರಕ್ಷತಾ ಸೂಚನೆಗಳನ್ನು ಉಲ್ಲಂಘಿಸಿದೆ ಎಂದು ಡಿಜಿಸಿಎಯ ಹಿರಿಯ ಅಧಿಕಾರಿ ಭಾನುವಾರ ತಿಳಿಸಿದ್ದಾರೆ. ಇದನ್ನೂ ಓದಿ: ಅಲ್‍ಖೈದಾ ಜೊತೆ ನಂಟು ಶಂಕೆ – ಶಂಕಿತ ಭಯೋತ್ಪಾದಕನ ಸೆರೆ

    ಘಟನೆಯ ತನಿಖೆಯಲ್ಲಿ ವಿಳಂಬವಾಗಿದೆ. ಶೋಕಾಸ್ ನೋಟಿಸ್‍ಗೆ ಉತ್ತರಿಸಲು ಇಬ್ಬರೂ ಕಾರ್ಯನಿರ್ವಾಹಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೆ ದುಬೈ (Dubai), ದೆಹಲಿ (Delhi) ವಿಮಾನದ ಸಂಪೂರ್ಣ ಸಿಬ್ಬಂದಿಯನ್ನು ಡಿ ರೋಸ್ಟರ್ ಮಾಡುವಂತೆ ಡಿಜಿಸಿಎ ಏರ್ ಇಂಡಿಯಾಗೆ ನಿರ್ದೇಶನ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಫೆ.27 ರಂದು ದುಬೈ ಹಾಗೂ ದೆಹಲಿ ನಡವೆ ಸಂಚರಿಸುವ ವಿಮಾನದಲ್ಲಿ ಪೈಲಟ್ ಸ್ನೇಹಿತೆಗೆ ಕಾಕ್‍ಪಿಟ್ ಪ್ರವೇಶಕ್ಕೆ ಅನುಮತಿ ನೀಡಿ, ಒಳಗೆ ಬಿಟ್ಟಿದ್ದರು. ಈ ಬಗ್ಗೆ ವಿಮಾನದ ಕ್ಯಾಬಿನ್ ಸಿಬ್ಬಂದಿಯೊಬ್ಬರು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (Directorate General of Civil Aviation) ದೂರು ಸಲ್ಲಿಸಿದ್ದರು. ಇದನ್ನೂ ಓದಿ: ದಾಂತೇವಾಡ ಸ್ಫೋಟ ಪ್ರಕರಣ- ಮಾಸ್ಟರ್‌ಮೈಂಡ್‌ ಫೋಟೋ ರಿಲೀಸ್

  • 20 ಸೆಕೆಂಡ್ ತಡವಾಗಿದ್ರೂ ರಾಹುಲ್ ಜೀವವೇ ಹೋಗ್ತಿತ್ತು!

    20 ಸೆಕೆಂಡ್ ತಡವಾಗಿದ್ರೂ ರಾಹುಲ್ ಜೀವವೇ ಹೋಗ್ತಿತ್ತು!

    – ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಸ್ಫೋಟಕ ಮಾಹಿತಿ

    ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹುಬ್ಬಳ್ಳಿಗೆ ಬಂದಿದ್ದಾಗ ವಿಮಾನ ಅವಘಡ ಸಂಭವಿಸಿದ್ದು, 20 ಸೆಕೆಂಡ್ ತಡವಾಗುತ್ತಿದ್ದರೂ ಅವರ ಜೀವವೇ ಹೋಗುತ್ತಿತ್ತು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.

    ಏಪ್ರಿಲ್ 26ರಂದು ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ರಾಹುಲ್ ಗಾಂಧಿ ಹುಬ್ಬಳ್ಳಿಗೆ ಬಂದಿದ್ದರು. ಅಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. 20 ಸೆಕೆಂಡ್ ತಡವಾಗಿದ್ದರೂ ರಾಹುಲ್ ಹೋಗುತ್ತಿದ್ದ ವಿಮಾನ ನೆಲಕ್ಕಪ್ಪಳಿಸಿ ಸ್ಫೋಟಗೊಳ್ಳುತ್ತಿತ್ತು. ಆದರೆ ಅದೃಷ್ಟವಶಾತ್ ರಾಹುಲ್ ಗಾಂಧಿ ಅವರು ಕೂದಲೆಳೆ ಅಂತರದಲ್ಲಿ ಭಾರೀ ದುರಂತದಿಂದ ಪಾರಾಗಿದ್ದಾರೆ ಎಂದು ನಿರ್ದೇಶನಾಲಯ ತಿಳಿಸಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ಹುಬ್ಬಳ್ಳಿಗೆ ಬಂದಾಗ ನಿಜವಾಗಿಯೂ ಆಗಿದ್ದೇನು?

    ರಾಹುಲ್ ಗಾಂಧಿ ಪ್ರಯಾಣ ಮಾಡುತ್ತಿದ್ದ  ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದ್ದಕಿದ್ದಂತೆ ವಿಮಾನ ಒಂದು ಬದಿಗೆ ವಾಲಿತ್ತು. ಇದರಿಂದ 8 ಸಾವಿರ ಅಡಿಯಿಂದಲೇ ವಿಮಾನ ನೆಲಕ್ಕಪ್ಪಳಿಸುವ ಸಾಧ್ಯತೆ ಇತ್ತು. ಈ ವೇಳೆ ವಿಮಾನ ಆಟೋ ಪೈಲಟ್ ಮೂಡ್‍ನಲ್ಲಿತ್ತು. ತಾಂತ್ರಿಕ ದೋಷವನ್ನು 20 ಸೆಕೆಂಡ್‍ನಲ್ಲಿ ಮ್ಯಾನುವಲ್ ಆಗಿ ಸರಿ ಮಾಡಬೇಕಿತ್ತು. ಈ ಹಿನ್ನೆಲೆಯಲ್ಲಿ ಪೈಲಟ್ ತುರ್ತಾಗಿ ವಿಮಾನವನ್ನು ಲ್ಯಾಂಡ್ ಮಾಡಿದ್ದರು. ಒಂದು ವೇಳೆ 20 ಸೆಕೆಂಡಿನಲ್ಲಿ ತಾಂತ್ರಿಕ ದೋಷ ಸರಿ ಹೋಗದೇ ಇದ್ದರೆ ವಿಮಾನ ಪತನ ಆಗುತ್ತಿತ್ತು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.

    ಅಂದು ನಡೆದಿದ್ದೇನು?
    ಏಪ್ರಿಲ್ 26ರಂದು ಕರ್ನಾಟಕ ವಿಧಾನಸಭೆಯ ಪ್ರಚಾರಕ್ಕೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹುಬ್ಬಳ್ಳಿಗೆ ಆಗಮಿಸಿದ್ದರು. ರಾಹುಲ್ ಗಾಂಧಿ ಅವರು ವಿಶೇಷ ವಿಮಾನದಲ್ಲಿ ದೆಹಲಿಯಿಂದ ಹುಬ್ಬಳ್ಳಿಗೆ ಹೊರಟಿದ್ದರು. ಆದರೆ ವಿಮಾನದ ಲ್ಯಾಂಡಿಂಗ್ ವೇಳೆ ಸಮಸ್ಯೆ ಕಾಣಿಸಿಕೊಂಡಿತ್ತು. ವಿಮಾನ ದಿಢೀರನೇ ಎಡಭಾಗಕ್ಕೆ ವಾಲಿತ್ತು. ವೇಗವಾಗಿ 8 ಸಾವಿರ ಅಡಿಯಿಂದಲೇ ಆಗಸದಿಂದ ಕೆಳಗಿಳಿಯುತ್ತಿರುವಂತೆ ತೊಂದರೆ ಉಂಟಾಗಿತ್ತು.

    ಈ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ವಿಮಾನ ಹಠಾತ್ತನೇ 8 ಸಾವಿರ ಅಡಿ ಕೆಳಗೆ ಕುಸಿದಾಗ ಎಲ್ಲಾ ಮುಗಿದು ಹೋಯ್ತು ಅಂದುಕೊಂಡೆ. ಆ ಕ್ಷಣದಲ್ಲೇ ಕೈಲಾಸ ಮತ್ತು ಮಾನಸ ಸರೋವರ ಯಾತ್ರೆಗೆ ನಿರ್ಧರಿಸಿದ್ದೆ. ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದ ಮೇಲೆ ಯಾತ್ರೆ ಹೋಗುತ್ತೀನಿ ಎಂದು ಅನುಮತಿ ಕೊಡಿ ಅಂತಾ ಕೇಳಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬದರಿನಾಥ್‍ನಲ್ಲಿ ಹೆಲಿಕಾಪ್ಟರ್ ಪತನ- ರೋಟರ್ ಬ್ಲೇಡ್‍ಗಳು ತಗುಲಿ ಎಂಜಿನಿಯರ್ ಸಾವು, ಇಬ್ಬರು ಪೈಲೆಟ್‍ಗಳಿಗೆ ಗಾಯ

    ಬದರಿನಾಥ್‍ನಲ್ಲಿ ಹೆಲಿಕಾಪ್ಟರ್ ಪತನ- ರೋಟರ್ ಬ್ಲೇಡ್‍ಗಳು ತಗುಲಿ ಎಂಜಿನಿಯರ್ ಸಾವು, ಇಬ್ಬರು ಪೈಲೆಟ್‍ಗಳಿಗೆ ಗಾಯ

    ಡೆಹ್ರಾಡೂನ್: ಉತ್ತರಾಖಂಡ್‍ನ ಬದರಿನಾಥ್‍ನಲ್ಲಿ ಇಂದು ಯಾತ್ರಿಕರನ್ನು ಕೊಂಡೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದು, ಇಬ್ಬರು ಪೈಲೆಟ್‍ಗಳು ಗಾಯಗೊಂಡಿದ್ದಾರೆ.

    ಹೆಲಿಕಾಪ್ಟರ್‍ನ ಸಿಬ್ಬಂದಿವರ್ಗದ ಭಾಗವಾಗಿದ್ದ ಎಂಜಿನಿಯರ್ ಸಾವನ್ನಪ್ಪಿದ್ದು, ಇಬ್ಬರು ಪೈಲೆಟ್‍ಗಳಿಗೆ ಗಾಯವಾಗಿದೆ ಎಂದು ನಾಗರೀಕ ವಿಮಾನಯಾನ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮೃತ ಎಂಜಿನಿಯರ್ ವಿಕ್ರಮ್ ಲಂಬಾ ಅಸ್ಸಾಮ್ ನಿವಾಸಿಯಾಗಿದ್ದು, ರೋಟರ್ ಬ್ಲೇಡ್‍ಗಳು ತಗುಲಿದ ಪರಿಣಾಮ ಸಾವನ್ನಪ್ಪಿದ್ದಾರೆಂದು ಚಾಮೋಲಿಯ ಪೊಲೀಸ್ ವರಿಷ್ಠಾಧಿಕಾರಿ ತೃಪ್ತಿ ಭಟ್ ಹೇಳಿದ್ದಾರೆ.

    ಇಂದು ಬೆಳಿಗ್ಗೆ 7.45ರ ಸಮಯದಲ್ಲಿ ವಿಮಾನ ಟೇಕ್ ಆಫ್ ಆಗುವ ವೇಳೆ, ಅಗತ್ಯವಾದ ಗಾಳಿಯ ಒತ್ತಡವಿಲ್ಲದ ಕಾರಣ ಸಮತೋಲನ ಕಳೆದುಕೊಂಡು ಪತನಗೊಂಡಿದೆ. ಘಟನೆಯಲ್ಲಿ ಪುಣೆಯವರಾದ ಪೈಲೆಟ್ ಸಂಜಯ್ ವಾಸಿ ಅವರ ಬೆನ್ನಿಗೆ ಪೆಟ್ಟಾಗಿದೆ. ಕಾನ್ಪುರ ನಿವಾಸಿಯಾದ ಮತ್ತೊಬ್ಬ ಪೈಲೆಟ್ ಅಲ್ಕಾ ಶುಕ್ಲಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೆಲಿಕಾಪ್ಟರ್‍ನಲ್ಲಿದ್ದ ಯಾತ್ರಿಕರೆಲ್ಲರೂ ಗುಜರಾತ್‍ನ ವಡೋದರಾದವರಾಗಿದ್ದು, ಅವರವರ ಊರುಗಳಿಗೆ ತೆರಳಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪತನಗೊಂಡ ಅಗಸ್ಟಾ 119 ಹೆಲಿಕಾಪ್ಟರ್ ಮುಂಬೈ ಮೂಲದ ಖಾಸಗಿ ಆಪರೇಟರ್ ಕ್ರೆಸ್ಟಲ್ ಏವಿಯೇಷನ್‍ಗೆ ಸೇರಿದ್ದಾಗಿದ್ದು, ಹರಿದ್ವಾರಕ್ಕೆ ಹೊರಟಿತ್ತು ಎಂದು ವರದಿಯಾಗಿದೆ. ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ನಾಗರೀಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.