Tag: director

  • ಬೈಕ್, ಟ್ಯಾಂಕರ್ ಡಿಕ್ಕಿಯಾಗಿ ನಿರ್ದೇಶಕನ ಪುತ್ರ ದುರ್ಮರಣ

    ಬೈಕ್, ಟ್ಯಾಂಕರ್ ಡಿಕ್ಕಿಯಾಗಿ ನಿರ್ದೇಶಕನ ಪುತ್ರ ದುರ್ಮರಣ

    ಬೆಂಗಳೂರು: ರಸ್ತೆ ಅಪಘಾತದಲ್ಲಿ ನಿರ್ದೇಶಕರೊಬ್ಬರ ಪುತ್ರ ಸಾವನ್ನಪ್ಪಿರೋ ಘಟನೆ ಬೆಂಗಳೂರಿನ ಹೊರ ವಲಯದ ನ್ಯೂ ಲಿಂಕ್ ರಸ್ತೆಯಲ್ಲಿ ನಡೆದಿದೆ.

    ಮಯೂರ್(20) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಯುವಕ. ನಟ ನಿರ್ದೇಶಕ ಸೂರ್ಯೋದಯ ಪುತ್ರ ಮಯೂರ್ ಕೆಟಿಎಂ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದಾಗ ಟ್ಯಾಂಕರ್ ರೂಪದಲ್ಲಿ ಬಂದ ಜವರಾಯ ಡ್ಯೂಕ್ ಬೈಕ್ ಮೇಲೆ ಎರಗಿದೆ. ಪರಿಣಾಮ ಬೈಕ್ ನಲ್ಲಿದ್ದ ಮಯೂರ್ ಗಂಭೀರ ಗಾಯಗಳಾಗಿದೆ.

    ಕೂಡಲೇ ಸ್ಥಳೀಯರ ಸಹಾಯದಿಂದ ಗಾಯಾಳು ಮಯೂರ್ ನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಯೂರ್ ಬೆಳಗ್ಗಿನ ಜಾವ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಟ್ಯಾಂಕರ್ ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

    ನಟ ನಿರ್ದೇಶಕ ಸೂರ್ಯೋದಯ ಪೆರಂಪಲ್ಲಿ ಸಾಲ್ಟ್ ಎಂಬ ಕನ್ನಡ ಚಿತ್ರ ಹಾಗೂ ದೇಯಿ ಬೈದೆತಿ ಎಂಬ ತುಳು ಚಿತ್ರದಲ್ಲಿ ನಟಿಸಿದ್ದರು. ಇದನ್ನೂ ಓದಿ: ಆನ್‍ಲೈನ್ ಕ್ಲಾಸ್, ನೆಟ್ವರ್ಕ್‍ಗಾಗಿ ಗುಡ್ಡ ಹತ್ತುತ್ತಿದ ಮಲೆನಾಡ ಮಕ್ಕಳು

  • ಹಾವೇರಿ ನಿರ್ದೇಶಕನಿಗೆ ದಾದಾಸಾಹೇಬ್ ಫಾಲ್ಕೆ ಜ್ಯೂರಿ ಪ್ರಶಸ್ತಿ

    ಹಾವೇರಿ ನಿರ್ದೇಶಕನಿಗೆ ದಾದಾಸಾಹೇಬ್ ಫಾಲ್ಕೆ ಜ್ಯೂರಿ ಪ್ರಶಸ್ತಿ

    ಹಾವೇರಿ: ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಾಗರ ಬಳ್ಳಾರಿ ನಿರ್ದೇಶನದ ಜಂಗಲ್ ಕ್ರೈ ಚಿತ್ರ ತೀರ್ಪುಗಾರರ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಈ ಪ್ರಶಸ್ತಿ ಬಾಚಿಕೊಂಡ ನಿರ್ದೇಶಕ ಸಾಗರ ಬಳ್ಳಾರಿ ಮೂಲತಃ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದವರು. ಬುಡಕಟ್ಟು ಜನಾಂಗದ ಅನಾಥ ಮಕ್ಕಳ ನೈಜ ಜೀವನದ ಕಥೆಯನ್ನು ಆಧರಿಸಿ ಈ ಚಿತ್ರ ನಿರ್ದೇಶಿಸಲಾಗಿದೆ. ಓಡಿಸ್ಸಾದ ಕಳಿಂಗ ಸೋಷಿಯಲ್ ಸೈನ್ಸ್ ಸಂಸ್ಥೆಯ ಬಾಲಕ 2007ರಲ್ಲಿ ಯುಕೆಯಲ್ಲಿ ನಡೆದ ರಗ್ಬಿ ಆಟದಲ್ಲಿ ಚಾಂಪಿಯನ್ ಆದ ಘಟನೆಯನ್ನು ಆಧರಿಸಿ ಚಿತ್ರವನ್ನು ನಿರ್ದೇಶಿಸಲಾಗಿದೆ.

    ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ದಾದಾಸಾಹೇಬ್ ಫಾಲ್ಕೆ ಅವರ ಜನ್ಮದಿನದಂದು ಆಚರಿಸಿಕೊಂಡು ಬರಲಾಗುತ್ತಿದೆ. ದೇಶದ ರಾಜಧಾನಿ ದೆಹಲಿ ಹಾಗೂ ದೆಹಲಿಗೆ ಹೊಂದಿಕೊಂಡ ನಗರಗಳಲ್ಲಿ ಈ ಚಲನಚಿತ್ರೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಾಗರ ಬಳ್ಳಾರಿ ನಿರ್ದೇಶಿಸಿದ ಜಂಗಲ್ ಕ್ರೈ ಚಲನಚಿತ್ರಕ್ಕೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಜ್ಯೂರಿ ಅತ್ಯುತ್ತಮ ಚಿತ್ರ 2021 ಎಂಬ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ದೊರೆತಿದೆ. ಬಾಲಿವುಡ್ ನ ಸೃಜನಾತ್ಮಕ ನಿರ್ದೇಶಕ ಸಾಗರಗೆ ಈ ಪ್ರಶಸ್ತಿ ದೊರೆತಿರುವುದು ಹಾವೇರಿ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಇದನ್ನೂ ಓದಿ: ಹೆಚ್ಚು ಮಕ್ಕಳಿರುವ ಪೋಷಕರಿಗೆ 1ಲಕ್ಷ ರೂ ಬಹುಮಾನ

    ಸುಮಾರು ವರ್ಷಗಳಿಂದ ಮುಂಬೈನಲ್ಲಿ ವಾಸವಾಗಿರೋ ನಿರ್ದೇಶಕ ಸಾಗರಗೆ ಮೋಟೆಬೆನ್ನೂರು ಅಂದರೆ ಎಲ್ಲಿಲ್ಲದ ಪ್ರೀತಿ. ವರ್ಷಕ್ಕೊಮ್ಮೆಯಾದರೂ ಕುಟುಂಬದವರ ಜೊತೆಗೆ ಮೋಟೆಬೆನ್ನೂರಿಗೆ ಬಂದು ಹೋಗುತ್ತಾರೆ. ವರ್ಷಕ್ಕೊಮ್ಮೆ ಊರಿಗೆ ಬರುವುದನ್ನು ಯಾವುದೇ ಕಾರಣಕ್ಕೂ ಸಾಗರ ಮರೆಯುವುದಿಲ್ಲ. ಮುಂಬೈನಲ್ಲೇ ಓದಿರೋ ಸಾಗರ, ಮುಂಬೈನ ಸತ್ಯಜೀತ್ ರೇ ಇನ್ ಸ್ಟಿಟ್ಯೂಟ್ ನಲ್ಲಿ ಅಧ್ಯಯನ ಮಾಡಿದ್ದಾರೆ. ಸಾಗರ ಈವರೆಗೆ ಐದು ಸೃಜನಾತ್ಮಕ ಚಿತ್ರಗಳನ್ನು ನಿರ್ದೇಶಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದೊಂದು ಹೆಮ್ಮೆಯ ಸಂಗತಿ. ಸಾಗರ ನಮ್ಮ ಮೋಟೆಬೆನ್ನೂರು ಗ್ರಾಮದವನು ಹಾಗೂ ನಮ್ಮ ಸಂಬಂಧಿ ಎನ್ನುವುದು ನಮಗೆ ಖುಷಿಯ ಸಂಗತಿ ಎಂದು ನಿರ್ದೇಶಕ ಸಾಗರ ಸಂಬಂಧಿ ರಮೇಶ ಬಳ್ಳಾರಿ ಹೇಳುತ್ತಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಚೇತನ್ ಕುಮಾರ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಚೇತನ್ ಕುಮಾರ್

    ಬೆಂಗಳೂರು: ಸ್ಯಾಂಡಲ್‍ವುಡ್ ಭರ್ಜರಿ ಸಿನಿಮಾ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಚೇತನ್ ಕುಮಾರ್ ಮೈಸೂರಿನಲ್ಲಿ ಇಂದು ಮಾನಸ ಜೊತೆ ಸಪ್ತಪದಿ ತುಳಿದ್ದಾರೆ. ಮೈಸೂರಿನ ಇನ್ಫೋಸಿಸ್‍ನಲ್ಲಿ ಮಾನಸ ಕೆಲಸ ಮಾಡುತ್ತಿದ್ದಾರೆ. ಈ ಮುದ್ದಾದ ಜೋಡಿ ಇಂದು ದಾಂಪತ್ಯಜೀವನಕ್ಕೆ ಕಾಲಿಟ್ಟಿದೆ. ಇದನ್ನೂ ಓದಿ: IAS ಆಕಾಂಕ್ಷಿಗಳಿಗೆ ಫ್ರೀ ಕೋಚಿಂಗ್ ಆಫರ್ ನೀಡಿದ ಸೋನು ಸೂದ್

    ಪುನೀತ್ ರಾಜ್ ಕುಮಾರ್, ಧ್ರುವ ಸರ್ಜಾ, ನಿರ್ಮಾಪಕ ಉಮಾಪತಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಭರ್ಜರಿ, ಬಹಾದ್ದೂರ್ ಮತ್ತು ಭರಾಟೆ ಚಿತ್ರಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರೊ ಇವರು ಗೀತರಚನಕಾರರಾಗಿ ಮತ್ತು ಸಂಭಾಷಣಾಕಾರನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಸದ್ಯ ಅಪ್ಪು ನಟನೆಯ ಜೇಮ್ಸ್ ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.

  • ಕೃತಕ ಆಕ್ಸಿಜನ್‍ನಲ್ಲಿ ಉಸಿರಾಡುತ್ತಿರುವ ನಿರ್ದೇಶಕ- ಆಲ್ ಈಸ್ ವೆಲ್ ಅಂತ ಟ್ವೀಟ್

    ಕೃತಕ ಆಕ್ಸಿಜನ್‍ನಲ್ಲಿ ಉಸಿರಾಡುತ್ತಿರುವ ನಿರ್ದೇಶಕ- ಆಲ್ ಈಸ್ ವೆಲ್ ಅಂತ ಟ್ವೀಟ್

    ಬೆಂಗಳೂರು: ಲವ್ ಗುರು ಸಿನಿಮಾ ಮೂಲಕವಾಗಿ ಡೈರೆಕ್ಟರ್ ಪಟ್ಟವನ್ನು ಅಂಲಕರಿಸಿದ ನಿರ್ದೇಶಕ ಪ್ರಶಾಂತ್ ರಾಜ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕೃತಕ ಆಕ್ಸಿಜನ್‍ನಿಂದ ಉಸಿರಾಡುತ್ತಿರುವ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ.

    ಪ್ರಶಾಂತ್‍ರಾಜ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೃತಕ ಆಕ್ಸಿಜನ್‍ನಿಂದ ಉಸಿರಾಟ ನಡೆಸುತ್ತಿದ್ದಾರೆ ಎನ್ನುವುದು ವೀಡಿಯೋದಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. ಆಲ್ ಈಸ್ ವೆಲ್ ಅಂತ ಬರೆದುಕೊಂಡು ವೀಡಿಯೋವನ್ನು ಪ್ರಶಾಂತ್ ರಾಜ್ ಟ್ವೀಟ್ ಮಾಡಿದ್ದಾರೆ.

    ಅವರು ವೀಡಿಯೋಗೆ ನೀಡಿರುವ ಕ್ಯಾಪ್ಶನ್ ನೋಡಿದ್ರೆ ಪ್ರಶಾಂತ್ ರಾಜ್ ಚೇತರಿಸೊಕೊಳ್ತಿದ್ದು, ಅದನ್ನ ತಿಳಿಸೋದಕ್ಕೆ ವೀಡಿಯೋ ಮಾಡಿದ್ದಾರೆ ಅನ್ನೋದು ಸ್ಪಷ್ಟವಾಗುತ್ತಿದೆ. ಆದಷ್ಟು ಬೇಗ ಹುಷಾರ್ ಆಗಿ ಬರಲಿ ಎಂದು ಅಭಿಮಾನಿಗಳು  ಟ್ವೀಟ್ ಮಾಡಿದ್ದಾರೆ.

  • ಬಿಗ್‍ಬಾಸ್, ಕಂಠೀರವ ಸ್ಟುಡಿಯೋದಲ್ಲಿ ಕೋವಿಡ್ ಕೇಂದ್ರ ತೆರೆಯಲು ಮನವಿ

    ಬಿಗ್‍ಬಾಸ್, ಕಂಠೀರವ ಸ್ಟುಡಿಯೋದಲ್ಲಿ ಕೋವಿಡ್ ಕೇಂದ್ರ ತೆರೆಯಲು ಮನವಿ

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆ ರಾಜ್ಯದಲ್ಲಿ ತಾಂಡವವಾಡುತ್ತಿದ್ದು, ಈಗಾಗಲೇ ರಾಜ್ಯದಲ್ಲಿ ಲಾಕ್‍ಡೌನ್ ಘೋಷಿಸಲಾಗಿದೆ. ಅಲ್ಲದೆ ಸಿನಿಮಾ, ಧಾರವಾಹಿ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಈ ನಡುವೆ ಕನ್ನಡದ ಫೇಮಸ್ ರಿಯಾಲಿಟಿ ಶೋ ಬಿಗ್ ಬಾಸ್ ಅನ್ನು ಕೂಡ 72ನೇ ದಿನಕ್ಕೆ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಬಿಗ್ ಬಾಸ್ ಮನೆಯನ್ನು ಕೋವಿಡ್ ಕೇಂದ್ರವನ್ನಾಗಿಸಲು ಸಿಎಂಗೆ ಮನವಿ ಮಾಡಲಾಗಿದೆ.

    ಈ ಸಂಬಂಧ ಮನವಿ ಪತ್ರವನ್ನು ಟ್ವೀಟ್ ಮಾಡಿರುವ ನಿರ್ಮಾಪಕ ಭಾ.ಮ. ಹರೀಶ್, ಬಿಗ್‍ಬಾಸ್ ಮನೆ ಮಾತ್ರವಲ್ಲದೆ ಕನ್ನಡ ಚಲನಚಿತ್ರ ಕಲಾವಿದರ ಸಂಘ ಹಾಗೂ ಕಂಠೀರವ ಸ್ಟುಡಿಯೋದಲ್ಲೂ ಕೋವಿಡ್ ಕೇಂದ್ರವನ್ನು ಆರಂಭಿಸುವಂತೆ ಆಗ್ರಹಿಸಿದ್ದಾರೆ.

    ಪತ್ರದಲ್ಲೇನಿದೆ..?
    ಕನ್ನಡ ಚಲನಚಿತ್ರ ಕಲಾವಿದರ ಸಂಘ, ಬಿಗ್ ಬಾಸ್ ಮತ್ತು ಕಂಠೀರವ ಸ್ಟುಡಿಯೋದಲ್ಲಿ ಕೋವಿಡ್ ಕೇಂದ್ರವನ್ನು ತೆರೆದು ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಸದಸ್ಯರಿಗೆ ಹಾಗೂ ಅವರ ಕುಟುಂಬದವರಿಗೆ ಸೂಕ್ತ ಚಿಕಿತ್ಸೆಯ ನೆರವನ್ನು ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

    ಇತ್ತ ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗಲು ಹಿರಿಯ ನಟಿ ಲೀಲಾವತಿ, ನಟ ವಿನೋದ್ ರಾಜ್ ಕುಮಾರ್ ಹಾಗೂ ಉಪೇಂದ್ರ ಮುಂದಾಗಿದ್ದಾರೆ.

  • ಗಂಡು ಮಗುವಿನ ತಂದೆಯಾದ ನಿರ್ದೇಶಕ ಎ.ಪಿ. ಅರ್ಜುನ್

    ಗಂಡು ಮಗುವಿನ ತಂದೆಯಾದ ನಿರ್ದೇಶಕ ಎ.ಪಿ. ಅರ್ಜುನ್

    ಬೆಂಗಳೂರು: ವಿಭಿನ್ನವಾದ ಸಿನಿಮಾ ನಿರ್ದೇಶನದ ಮೂಲಕವಾಗಿ ಗುರುತಿಸಿಕೊಂಡ ಎ,ಪಿ ಅರ್ಜುನ್ ತಂದೆಯಾಗಿರುವ ಖುಷಿಯಲ್ಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಸ್ಯಾಂಡಲ್‍ವುಡ್ ನಿರ್ದೇಶಕ ಎ.ಪಿ. ಅರ್ಜುನ್ ಹಾಗೂ ಅನ್ನಪೂರ್ಣ ದಂಪತಿಗೆ ಗಂಡು ಮಗುವಾಗಿದೆ. ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ನಗುತ್ತಿರುವ ಕಣ್ಣುಗಳಿಂದ ನಗುತ್ತಿರುವ ಮುಖ ನಿಮ್ಮೆಲ್ಲರೊಡನೆ ನನ್ನ ಜೀವನದ ಸಂತೋಷದಾಯಕ ಸುದ್ದಿಗಳನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ನಿನ್ನೆ ಮದ್ಯಾಹ್ನ ಗಂಡು ಮಗುವಾಗಿದ್ದು, ದೇವರ ಕೃಪೆಯಿಂದ ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

     

    View this post on Instagram

     

    A post shared by ap arjun (@aparjun_official)

    ಕಳೆದ ವರ್ಷ ಲಾಕ್‍ಡೌನ್ ಆದಾಗ ಈ ಜೋಡಿ ವಿವಾಹವಾಗಿತ್ತು. ಕಳೆದ ವರ್ಷದ ಮೇ 10ರಂದು ಕುಟುಂಬದ ಆಪ್ತರು ಹಾಗೂ ಕೆಲವೇ ಸ್ನೇಹಿತರ ಸಮ್ಮುಖದಲ್ಲಿ ತಮ್ಮ ದೀರ್ಘಕಾಲದ ಪ್ರೇಮಿ ಅನ್ನಪೂರ್ಣಾ ಅವರನ್ನು ವಿವಾಹವಾಗಿದ್ದರು. ಇತ್ತೀಚೆಗಷ್ಟೆ ಮಡದಿಯ ಸೀಮಂತ ಸಮಾರಂಭವನ್ನು ಸರಳವಾಗಿ ಮನೆಯಲ್ಲಿ ಸೆಲೆಬ್ರೆಟ್ ಮಾಡಿದ್ದರು. ಇದೀಗ ಈ ಮುದ್ದಾದ ಜೋಡಿಗೆ ಗಂಡು ಮಗುವಾಗಿದೆ.

  • ಅಲ್ಲು ಅರ್ಜುನ್ ಭೇಟಿಯಾಗಿ ಕುತೂಹಲ ಮೂಡಿಸಿದ್ರು ಪ್ರಶಾಂತ್ ನೀಲ್..!

    ಅಲ್ಲು ಅರ್ಜುನ್ ಭೇಟಿಯಾಗಿ ಕುತೂಹಲ ಮೂಡಿಸಿದ್ರು ಪ್ರಶಾಂತ್ ನೀಲ್..!

    ಹೈದರಾಬಾದ್: ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರು ಇಂದು ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಭೇಟಿಯಾಗಿದ್ದಾರೆ. ಈ ಮೂಲಕ ಇದೀಗ ಕೆಜಿಎಫ್ ರೂವಾರಿ ಭಾರೀ ಕುತೂಹಲ ಹುಟ್ಟಿಸಿದ್ದಾರೆ.

    ಹೌದು. ಪ್ರಶಾಂತ್ ನೀಲ್ ಹಾಗೂ ಅಲ್ಲು ಅರ್ಜುನ್ ಇಂದು ಹೈದಾರಾಬಾದ್ ನಲ್ಲಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವಿಚಾರ ಇದೀಗ ಅಲ್ಲು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

    ಪ್ರಶಾಂತ್ ನೀಲ್ ಅವರು ಸದ್ಯ ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಚಿತ್ರೀಕರಣದ ಬ್ಯುಸಿಯಲ್ಲಿದ್ದಾರೆ. ಈ ಮಧ್ಯೆ ಇಂದು ಸ್ವಲ್ಪ ಬಿಡುವು ಮಾಡಿಕೊಂಡು ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ ಪ್ರೊಡಕ್ಷನ್ ಕಚೇರಿಗೆ ಭೇಟಿ ಕೊಟ್ಟಿದ್ದಾರೆ. ಆಗ ಪ್ರಶಾಂತ್ ನೀಲ್ ಅವರನ್ನು ಭೇಟಿಯಾಗಲು ಅಲ್ಲು ಕೂಡ ಆಫೀಸಿಗೆ ಬಂದಿದ್ದು, ಕೆಲ ಕಾಲ ಚರ್ಚೆ ನಡೆಸಿದ್ದಾರೆ.

    ಕಚೇರಿ ಒಳಗಡೆ ಹೋಗುವ ಮೊದಲು ಅಲ್ಲು ಅರ್ಜುನ್ ಕ್ಯಾಮರಾಗೆ ಪೋಸ್ ನೀಡಿ ಹೋಗಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರಶಾಂತ್ ನೀಲ್ ಅವರು ಅಲ್ಲು ಆಫೀಸಿಗೆ ತೆರಳಿ ಸಿನಿಮಾ ಸ್ಕ್ರಿಪ್ಟ್ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

    ಒಟ್ಟಿನಲ್ಲಿ ಪ್ರಶಾಂತ್ ನೀಲ್ ಹಾಗೂ ಅಲ್ಲು ಅರ್ಜುನ್ ಭೇಟಿ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಸಲಾರ್ ಬಳಿಕ ಪ್ರಶಾಂತ್ ನೀಲ್ ಅವರು ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುತ್ತಾರಾ..? ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

  • ಕೊರೊನಾ ಲಸಿಕೆ ಪಡೆದ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್

    ಕೊರೊನಾ ಲಸಿಕೆ ಪಡೆದ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್

    ಬೆಂಗಳೂರು: ಜಗತ್ತಿಗೆ ಮಾರಕವಾಗಿರೋ ಕೊರೊನಾ ಪಿಡುಗನ್ನ ಹೋಗಲಾಡಿಸಲು ಲಸಿಕೆ ಪಡೆಯೊದೇ ದಾರಿ. ತಾವು ಕೋವಿಶೀಲ್ಡ್ ಲಸಿಕೆ ಪಡೆದು ಎಲ್ಲರೂ ಲಸಿಕೆ ಪಡೆಯಬೇಕು ಎಂದು ಡಾ. ಸಿಎನ್ ಮಂಜುನಾಥ್ ಸಂದೇಶ ರವಾನಿಸಿದ್ದಾರೆ.

    ಇಂದು ಬೆಂಗಳೂರಿನಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದಿರೋ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶ ಡಾ. ಮಂಜುನಾಥ್, ಲಸಿಕೆ ಪಡೆಯಲು ಸಾಕಷ್ಟು ಜನ ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಹೆಲ್ತ್ ಕೇರ್ ವರ್ಕರ್ಸ್ ಯಾವುದೇ ಭಯವಿಲ್ಲದೆ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಕರೆನೀಡಿದ್ದಾರೆ. ನಾನು ವ್ಯಾಕ್ಸಿನ್ ತಗೆದುಕೊಂಡಿದ್ದೇನೆ. ನನಗೆ ಯಾವುದೇ ಸಮಸ್ಯೆಯಾಗಿಲ್ಲ. ಭಯ ಬಿಟ್ಟು ಲಸಿಕೆ ಪಡೆಯಿರಿ ಎಂದು ತಿಳಿಸಿದ್ದಾರೆ.

    ಲಸಿಕೆ ಪಡೆದ ಮೇಲೆ ಸೈಡ್ ಎಫೆಕ್ಟ್ ಆಗುತ್ತೆ ಅನ್ನೋ ಭಯದಲ್ಲಿ ಫ್ರೆಂಟ್ ಲೈನ್ ವಾರಿಯರ್ಸ್ ಇದ್ದಾರೆ. ಜ್ವರ, ಅಲರ್ಜಿ, ಮೈಕೈ ನೋವು ಕಾಣಿಸಿಕೊಳ್ಳೊದು ಲಸಿಕೆಯಿಂದಾಗುವ ಪರಿಣಾಮವೇ ಹೊರತು, ಅದು ಅಡ್ಡ ಪರಿಣಾಮವಲ್ಲ. ಲಸಿಕೆ ಪಡೆಯುವುದರಿಂದ ಯಾರಿಗೂ ಸಮಸ್ಯೆಯಾಗಿಲ್ಲ ಎಂದರು.

    ವ್ಯಾಕ್ಸಿನ್ ಬಗ್ಗೆ ಇರೋ ವದಂತಿಗಳನ್ನ ದೂರ ತಳ್ಳಿ ಲಸಿಕೆಯನ್ನ ಎಲ್ಲರೂ ಪಡೆದುಕೊಳ್ಳಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಲಸಿಕೆಯನ್ನ ನಾನು ಪಡೆದಿದ್ದೇನೆ ಎಲ್ಲರು ಪಡೆಯಿರಿ ಎಂದು ನಮ್ಮ ನಾಡಿನ ಖ್ಯಾತ ವೈದ್ಯ ಡಾ. ಮಂಜುನಾಥ್ ಕರೆ ನೀಡಿದ್ದಾರೆ.

  • ಸಿನಿಮಾ ವಿತರಕ ದೀಪಕ್ ಗಂಗಾಧರ್ ಈಗ ನಿರ್ದೇಶಕ

    ಸಿನಿಮಾ ವಿತರಕ ದೀಪಕ್ ಗಂಗಾಧರ್ ಈಗ ನಿರ್ದೇಶಕ

    ಣ್ಣದ ಲೋಕದ ಸೆಳೆತಕ್ಕೆ ಒಮ್ಮೆ ಒಳಗಾದರೆ ಅದು ನಮ್ಮನ್ನು ಮತ್ತೆ ಮತ್ತೆ ಕೈ ಬೀಸಿ ಕರೆಯುತ್ತಲೇ ಇರುತ್ತೆ. ಅದರಲ್ಲೂ ಚಿತ್ರರಂಗದಲ್ಲೇ ಒಂದಲ್ಲ ಒಂದು ರೀತಿಯಲ್ಲಿ ಸಕ್ರಿಯರಾದವರಿಗೆ ಇನ್ನೇನಾದರೂ ಮಾಡಬೇಕೆಂಬ ತುಡಿತ ಸದಾ ಇದ್ದೇ ಇರುತ್ತೆ. ಈ ತುಡಿತವೇ ಚಂದನವನದಲ್ಲಿ ಇಷ್ಟು ದಿನ ತೆರೆ ಹಿಂದೆಯಿದ್ದ ಪ್ರತಿಭೆಯನ್ನು ಮುನ್ನೆಲೆಗೆ ತರಲು ಹೊರಟಿದೆ. ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಿನಿಮಾ ವಿತರಕನಾಗಿ ಗುರುತಿಸಿಕೊಂಡಿದ್ದ ದೀಪಕ್ ಗಂಗಾಧರ್ ನಿರ್ದೇಶನಾಗಬೇಕೆಂಬ ಕನಸ್ಸನ್ನು ನನಸು ಮಾಡಲು ಹೊರಟಿದ್ದು, ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ.

    ದೀಪಕ್ ಗಂಗಾಧರ್ ಸ್ಯಾಂಡಲ್‍ವುಡ್‍ನಲ್ಲಿ ಸಿನಿಮಾ ವಿತರಕರಾಗಿ ಗುರುತಿಸಿಕೊಂಡಿದ್ದಾರೆ. ತಮ್ಮದೇ ಆದ ದೀಪಕ್ ಗಂಗಾಧರ್ ಮೂವೀಸ್ ಸಂಸ್ಥೆಯನ್ನು ಹೊಂದಿರೋ ಇವರು ನನ್ನ ಪ್ರಕಾರ, ಕಾಳಿದಾಸ ಕನ್ನಡ ಮೇಸ್ಟ್ರು, ಅಮರ್, ಯಜಮಾನ, ಸೈರಾ ನರಸಿಂಹ ರೆಡ್ಡಿ ಸೇರಿದಂತೆ ಹಲವು ಸಿನಿಮಾಗಳ ವಿತರಕರಾಗಿ ಖ್ಯಾತಿ ಗಳಿಸಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ.

    ಮೂಲತಃ ಶಿರಸಿಯವರಾದ ದೀಪಕ್ ಗಂಗಾಧರ್ ಎಂಬಿಎ ಪದವೀಧರರಾಗಿದ್ದಾರೆ. ಸಿನಿಮಾರಂಗದ ಮೇಲಿನ ಸೆಳೆತ, ನಿರ್ದೇಶಕನಾಗಬೇಕೆಂಬ ಕನಸಿನಿಂದ ಪದವಿ ಮುಗಿದ ನಂತರ ತೂಗುದೀಪ ಪ್ರೊಡಕ್ಷನ್ ಗರಡಿಯಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಚಂದನವನಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಎಂಟ್ರಿ ಕೊಟ್ಟ ದೀಪಕ್ ಗಂಗಾಧರ್ ಎಂ.ಡಿ.ಶ್ರೀಧರ್, ಕವಿರಾಜ್ ಸೇರಿದಂತೆ ಹಲವು ನಿರ್ದೇಶಕರ ಜೊತೆ ಸಹ ನಿರ್ದೇಶಕನಾಗಿ ಕೆಲಸ ಮಾಡಿ ನಿರ್ದೇಶನದ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ. ಎಂಟು ವರ್ಷಗಳ ಕಾಲ ಚಿತ್ರರಂಗದ ಬೇರೆ ಬೇರೆ ರಂಗದಲ್ಲಿ ಕೆಲಸ ನಿರ್ವಹಿಸಿರೋ ಇವರು ಆ ಎಲ್ಲಾ ಅನುಭವಗಳನ್ನು ತಮ್ಮ ಮೊದಲ ಸಿನಿಮಾಗೆ ಧಾರೆ ಎರೆಯಲು ಹೊರಟಿದ್ದಾರೆ.

    ಈಗಾಗಲೇ ತಮ್ಮ ಚೊಚ್ಚಲ ಚಿತ್ರಕ್ಕೆ ನಾಯಕನನ್ನು ಆಯ್ಕೆ ಮಾಡಿದ್ದು, ಡಾರ್ಲಿಂಗ್ ಕೃಷ್ಣ ದೀಪಕ್ ಗಂಗಾಧರ್ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಸ್ವತಃ ತಾವೇ ಕಥೆ ಬರೆದು ನಿರ್ದೇಶನ ಮಾಡಲು ಸಿದ್ದರಾಗಿರೋ ದೀಪಕ್ ಗಂಗಾಧರ್ ನೈಜ ಘಟನೆಯಿಂದ ಸ್ಪೂರ್ತಿ ಪಡೆದು ಕಥೆ ಹೆಣೆದಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದ್ದು, ಶೀಘ್ರದಲ್ಲೇ ಸೆಟ್ಟೇರಲಿರೋ ಚಿತ್ರಕ್ಕೆ ಟೈಟಲ್ ಫೈನಲ್ ಆಗಬೇಕಿದೆ.

    ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ಮೂಡಿ ಬರಲಿದ್ದು, ತಾರಾಬಳಗದ ಹುಡುಕಾಟದಲ್ಲಿರೋ ಚಿತ್ರತಂಡ ಸ್ಯಾಂಡಲ್‍ವುಡ್ ಸ್ಟಾರ್ ನಟಿಯನ್ನು ಕರೆತರುವ ಆಲೋಚನೆಯಲ್ಲಿದೆ. ದೀಮಾ ಎಂಟಟೈನ್ಮೆಂಟ್ ಮತ್ತು ಎಲ್‍ಎನ್‍ಆರ್ ಪ್ರೊಡಕ್ಷನ್ಸ್ ಬ್ಯಾನರ್ ಸಹಯೋಗದೊಂದಿಗೆ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಮದನ್ ಕುಮಾರ್, ಲಕ್ಷ್ಮೀ ನಾರಾಯಣ ರಾಜು ಅರಸು ಬಂಡವಾಳ ಹೂಡುತ್ತಿದ್ದಾರೆ. ಒಟ್ಟಿನಲ್ಲಿ ನಿರ್ದೇಶಕನಾಗಿ ಚಂದನವನದಲ್ಲಿ ಹೆಸರು ಮಾಡಬೇಕೆಂಬ ತಮ್ಮ ಕನಸು ಹಲವು ವರ್ಷಗಳ ನಂತರ ನನಸಾಗುತ್ತಿರುವ ಸಂತಸದಲ್ಲಿದ್ದಾರೆ ದೀಪಕ್ ಗಂಗಾಧರ್.

  • ಹೊಸ, ವಿಭಿನ್ನ ಕ್ಯಾಲೆಂಡರ್ ಹೊರ ತಂದ ಪೈಲ್ವಾನ್ ಕೃಷ್ಣ

    ಹೊಸ, ವಿಭಿನ್ನ ಕ್ಯಾಲೆಂಡರ್ ಹೊರ ತಂದ ಪೈಲ್ವಾನ್ ಕೃಷ್ಣ

    – ಹೊಸ ಕ್ಯಾಲೆಂಡರ್ ನಲ್ಲಿ ಏನಿದೆ?

    ಬೆಂಗಳೂರು: ಹೊಸ ವರ್ಷಕ್ಕೆ ನಿರ್ದೇಶಕ ಕೃಷ್ಣವರು 2021ರ ಕ್ಯಾಲೆಂಡರ್ ವಿಭಿನ್ನವಾರಿಗಬೇಕು ಎಂಬ ದೃಷ್ಟಿಯಿಂದ ಕ್ಯಾಲೆಂಡರ್‍ವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ಕ್ಯಾಲೆಂಡರ್ ಹೊಂದಿರುವ ವಿಶೇಷತೆಯಿಂದ ಸುದ್ದಿಯಲ್ಲಿದೆ.

    ಕ್ಯಾಲೆಂಡರ್ ಎಂದರೆ ಫೋಟೋ, ಚಿತ್ತಾರಗಳು ತುಂಬಿರುತ್ತವೆ. ಆದರೆ ಈ ಕ್ಯಾಲೆಂಡರ್ ಸ್ಫೂರ್ತಿದಾಯಕ ಕ್ಯಾಲೆಂಡರ್ ಆಗಿದೆ. ವಿಕಲಚೇತನರ ವಿಶಿಷ್ಟ ಸಾಧನೆಯನ್ನು ಪರಿಚಯಿಸುವ ಉತ್ತಮವಾದ ಒಂದು ಆಲೋಚನೆಯಿಂದ ಈ ಕ್ಯಾಲೆಂಡರ್ ರೂಪಿಸಿದ್ದಾರೆ.

    ಬೇರೆ ಬೇರೆ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ವಿಕಲಚೇತನ ಕ್ರೀಡಾಪಟುಗಳು, ಮಾಡೆಲ್ ಅವರ ಕಿರುಪರಿಚಯವನ್ನು 2021ರ ಕ್ಯಾಲೆಂಡರ್ ಒಳಗೊಂಡಿದೆ. ಇದರಿಂದ ತಿಂಗಳಿಗೆ ಒಬ್ಬೊಬ್ಬರ ಕಿರುಪರಿಚಯ ಹಾಗೂ ಅವರ ಸಾಧನೆಗಳ ಕುರಿತಾಗಿ ತಿಳಿದರೆ ಅವರೆಗೆ ಸ್ಫೂರ್ತಿ ನೀಡುತ್ತದೆ ಎಂಬ ಉತ್ತಮ ದೃಷ್ಟಿಕೋನದಿಂದ ಈ ಕ್ಯಾಲೆಂಡರ್ ನಿರ್ಮಾಣವಾಗಿದೆ.

    ಬ್ಲೇಡ್ ರನ್ನರ್ ಶಾಲಿನಿ ಸರಸ್ವತಿ, ಪ್ಯಾರಾ ಒಲಂಪಿಕ್ ಶರತ್ ಗಾಯಾಕ್ವಾಡ್, ಅಡ್ವೆಂಚರ್ ಟೂರಿಸ್ಟ್, ಮಂಜುನಾಥ್ ಚಿಕ್ಕಯ್ಯ, ಫಿಟ್ನೆಸ್ ಶ್ರೀನಿವಾಸ್ ಗೌಡ, ಈಜುಪಟು ಮತ್ತು ಡಾನ್ಸ್ರ್ ಜಯಂತ್, ಕ್ರಿಕೆಟರ್ಸ್ ಅಶ್ವಿನಿ ಸಾಗರ್, ಬಾಸ್ಕೆಟ್ ಬಾಲ್ ಪ್ಲೇಯರ್ ಗೌಸಿಯಾ ತಾಜ್ ಸೆರಿಂದೆ ಇನ್ನು ಅನೇಕರ ಸಾಧನೆಯ ಕುರಿತಾಗಿ ಈ ಕ್ಯಾಲೆಂಡರ್ ಒಳಗೊಂಡಿದೆ.

    ಇಂಥಹ ಒಂದು ಉತ್ತಮ ಆಲೋಚನೆಯೊಂದಿಗೆ ಕ್ಯಾಲೆಂಡರ್ ಅನ್ನು ಇನ್ವೋಕ್ ಫೌಂಡೇಶನ್ ಮಾಡಿದೆ. ಈ ಸಂಸ್ಥೆಯ ಸಾಗರ್ ಗೆ ಅಪಘಾತದಲ್ಲಿ ಬಲವಾದ ಪೆಟ್ಟ ಬಿದ್ದಿತ್ತು. ಈ ಹಿನ್ನೆಯಲ್ಲಿ ಸಂಸ್ಥೆಯು ಹುಟ್ಟಿಕೊಂಡಿತ್ತು. ಈ ಸಂಸ್ಥೆಯಿಂದ ಈ ಕ್ಯಾಲೆಂಡರ್‍ ಛಾಯಾಗ್ರಾಹಕ ಮತ್ತು ನಿರ್ದೇಶಕ ಕೃಷ್ಣ ಬಿಡುಗಡೆ ಮಾಡಿದ್ದಾರೆ. ಸಾಗರ್ ಪರಿಶ್ರಮದ ಕುರಿತಾಗಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.