Tag: director

  • ಹಾಲಿವುಡ್ ಖ್ಯಾತ ಬರಹಗಾರ-ನಿರ್ದೇಶಕ ರಾಬರ್ಟ್ ವಿನ್ಸೆಂಟ್ ಓ’ನೀಲ್ ವಿಧಿವಶ

    ಹಾಲಿವುಡ್ ಖ್ಯಾತ ಬರಹಗಾರ-ನಿರ್ದೇಶಕ ರಾಬರ್ಟ್ ವಿನ್ಸೆಂಟ್ ಓ’ನೀಲ್ ವಿಧಿವಶ

    ನ್ಯೂಯಾರ್ಕ್: ಹಾಲಿವುಡ್ ಚಿತ್ರರಂಗದ ಖ್ಯಾತ ಬರಹಗಾರ ಮತ್ತು ಎಂಜಲ್ ಚಿತ್ರದ ನಿರ್ದೇಶಕ ವಿನ್ಸೆಂಟ್ ಓ’ನೀಲ್ (91) ನಿಧನರಾಗಿದ್ದಾರೆ. ರಾಬರ್ಟ್ ನಿದ್ರಾವಸ್ಥೆಯಲ್ಲಿ ಇದ್ದಾಗಲೇ ಪ್ರಾಣ ಬಿಟ್ಟಿದ್ದಾರೆ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.

    ಓ’ನೀಲ್ ಅವರಿಗೆ ಲಾರಿ ಮತ್ತು ನಿಕೋಲ್ ಲಾಯ್ಡ್ ಇಬ್ಬರು ಅವಳಿ ಹೆಣ್ಣುಮಕ್ಕಳಿದ್ದು, ಲಾರಿ ಅವರ ಪತಿ ಆಂಡ್ರ್ಯೂ ಮತ್ತು ಮೊಮ್ಮಗಳು ಲಿಸಾ ಬಿಲ್, ಸಹೋದರ ರಾನ್ ಇವಿ, ಹಾಗೂ ಜೆಸ್ಸಿಕಾ, ಕ್ವಿನ್, ಸಾರಾ, ರಸ್ಸೆಲ್, ಜೆಸ್ ಏಳು ಮೊಮ್ಮಕ್ಕಳು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಇದನ್ನೂ ಓದಿ: ಆರ್.ಆರ್.ಆರ್ ಸಿನಿಮಾದಲ್ಲಿ ಹೀರೋ ಯಾರು? ವಿಲನ್ ಯಾರು? : ರಾಜಮೌಳಿ ಕೊಟ್ಟರು ಉತ್ತರ

    ಹಾಲಿವುಡ್-ಸೆಟ್ ವೈಸ್ ಸ್ಕ್ವಾಡ್ (1982), ದಿ ಬಾಲ್ಟಿಮೋರ್ ಬುಲೆಟ್ (1980), ಲೈಕ್ ಮದರ್ ಲೈಕ್ ಡಾಟರ್ (1969), ದಿ ಸೈಕೋ ಲವರ್ (1970), ಬ್ಲಡ್ ಮೇನಿಯಾ (1970), ವಂಡರ್ ವುಮೆನ್ (1973) ಮತ್ತು ಪ್ಯಾಕೊ (1975) ಹೀಗೆ ಹಾಲಿವುಡ್‍ನಲ್ಲಿ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದ ಕೀರ್ತಿ ಇವರದ್ದು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ

  • ಜಗ್ಗೇಶ್ ಗೆ ಕೈ ಕೊಟ್ಟ ಮಠದ ಗುರುಪ್ರಸಾದ್

    ಜಗ್ಗೇಶ್ ಗೆ ಕೈ ಕೊಟ್ಟ ಮಠದ ಗುರುಪ್ರಸಾದ್

    ಜಗ್ಗೇಶ್ ಮತ್ತು ನಿರ್ದೇಶಕ ಮಠದ ಗುರುಪ್ರಸಾದ್ ಕಾಂಬಿನೇಷನ್ ನ ಎರಡೂ ಚಿತ್ರಗಳು ಸೂಪರ್ ಹಿಟ್. ಇದೀಗ ಮೂರನೇ ಸಿನಿಮಾದಲ್ಲೂ ಈ ಜೋಡಿ ಒಂದಾಗಿದೆ. ಈ ನಡುವೆ ಗುರು ಪ್ರಸಾದ್ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಅದಕ್ಕೆ ‘ಎದ್ದೇಳು ಮಂಜುನಾಥ 2’ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ : ಹಿರಣ್ಯ ಸಿನಿಮಾದ ಸ್ಪೆಷಲ್ ಪಾತ್ರದಲ್ಲಿ ಬಿಗ್ ಬಾಸ್ ದಿವ್ಯಾ

    ಹಲವು ವರ್ಷಗಳ ಹಿಂದೆ ತೆರೆ ಕಂಡ ‘ಎದ್ದೇಳು ಮಂಜುನಾಥ’ ಸಿನಿಮಾ ನಕ್ಕು ನಗಿಸಿ, ಒಂದೊಳ್ಳೆ ಸಂದೇಶವನ್ನು ನೀಡಿತ್ತು. ಈ ಸಿನಿಮಾದಲ್ಲಿ ಮಂಜುನಾಥ ಪಾತ್ರದಲ್ಲಿ ಜಗ್ಗೇಶ್ ಕಾಣಿಸಿಕೊಂಡಿದ್ದರು. ಮಂಜುನಾಥನಾಗಿ ಸಾಕಷ್ಟು ಮನರಂಜನೆ ನೀಡಿದ್ದರು. ಈಗ ಮಂಜುನಾಥ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾನೆ. ಆದರೆ, ಆ ಪಾತ್ರವನ್ನು ಜಗ್ಗೇಶ್ ಮಾಡುತ್ತಿಲ್ಲ. ಓದಿ : ಸದ್ದಿಲ್ಲದೇ ಶೂಟಿಂಗ್ ಮುಗಿಸಿದ ರಾಘವೇಂದ್ರ ಸ್ಟೋರ್ಸ್ : ಹೋಟೆಲ್ ಮಾಲಿಕನಾದ ಜಗ್ಗೇಶ್

    ಮಂಜುನಾಥ ಅಂದರೆ ಜಗ್ಗೇಶ್, ಜಗ್ಗೇಶ್ ಅಂದರೆ ಮಂಜುನಾಥ ಎನ್ನುವಷ್ಟರ ಮಟ್ಟಿಗೆ ಆ ಪಾತ್ರವನ್ನು ಜಗ್ಗೇಶ್ ಪೋಷಿಸಿದ್ದರು. ಇದೀಗ ಬರುತ್ತಿರುವ ಎದ್ದೇಳು ಮಂಜುನಾಥ 2 ಸಿನಿಮಾದಲ್ಲಿ ಆ ಪಾತ್ರವನ್ನು ಸ್ವತಃ ನಿರ್ದೇಶಕ ಗುರು ಪ್ರಸಾದ್ ನಿರ್ವಹಿಸುತ್ತಿದ್ದಾರೆ. ಹಾಗಂತ ಎದ್ದೇಳು ಮಂಜುನಾಥ ಸಿನಿಮಾದ ಮುಂದುವರೆಕೆಯ ಸಿನಿಮಾ ಇದಲ್ಲ ಎಂದಿದ್ದಾರೆ ನಿರ್ದೇಶಕ. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್

    ಗುರುಪ್ರಸಾದ್ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಡೈರೆಕ್ಟರ್ ಸ್ಪೆಷಲ್ ಸಿನಿಮಾದ ಸಂದರ್ಭದಲ್ಲಿ ಥಿಯೇಟರ್ ಮುಂದೆ ತಮ್ಮದೇ ಕಟೌಟ್ ಹಾಕಿ, ಸಿನಿಮಾದ ನಿಜವಾದ ಹೀರೋ ನಿರ್ದೇಶಕ ಎಂದೇ ಎದೆಯುಬ್ಬಿಸಿ ಹೇಳಿದ್ದರು. ಆದರೆ, ಈ ಬಾರಿ ನಿರ್ದೇಶನದ ಜತೆಗೆ ನಾಯಕನಾಗಿಯೂ ಅವರು ಪ್ರೇಕ್ಷಕರ ಮುಂದೆ ನಿಲ್ಲುತ್ತಿದ್ದಾರೆ. ಇದನ್ನೂ ಓದಿ : ತಮಿಳಿನತ್ತ ಲವ್ ಗುರು ನಿರ್ದೇಶಕ ಪ್ರಶಾಂತ್ ರಾಜ್

    ಈ ಸಿನಿಮಾ ಕೂಡ ಸೋಂಬೇರಿಯೊಬ್ಬನ ಆತ್ಮಕಥೆಯನ್ನು ಬಿಚ್ಚಿಡಲಿದೆಯಂತೆ. ಜತೆಗೆ ಗುರು ಪ್ರಸಾದ್ ಜೀವನದಲ್ಲಿ ಕಂಡುಂಡ ಅನುಭವವನ್ನು ಸಿನಿಮಾಗಾಗಿ ಅಳವಡಿಸಿದ್ದಾರಂತೆ. ಈಗಾಗಲೇ ಶೂಟಿಂಗ್ ಕೂಡ ಮುಗಿದಿದೆ. ತೆರೆಗೆ ಯಾವಾಗ ಬರತ್ತೋ ಕಾದು ನೋಡಬೇಕು.

  • ಹಿಜಬ್ ಫೈಟ್ – ಪದವಿ ಪೂರ್ವ ಕಾಲೇಜು ನಿರ್ದೇಶಕಿ ಎತ್ತಂಗಡಿ!

    ಹಿಜಬ್ ಫೈಟ್ – ಪದವಿ ಪೂರ್ವ ಕಾಲೇಜು ನಿರ್ದೇಶಕಿ ಎತ್ತಂಗಡಿ!

    ಬೆಂಗಳೂರು: ಪದವಿ ಪೂರ್ವ ಕಾಲೇಜು ನಿರ್ದೇಶಕಿಯನ್ನು ವರ್ಗಾವಣೆ ಮಾಡಲಾಗಿದೆ.

    ಪದವಿ ಪೂರ್ವ ಕಾಲೇಜುಗಳ ಸಮವಸ್ತ್ರ ವಿವಾದ ಹಿನ್ನೆಲೆ ಇಂದು ಪದವಿ ಪೂರ್ವ ಕಾಲೇಜು ನಿರ್ದೇಶಕಿಯನ್ನು ಸ್ನೇಹಲ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅಲ್ಲದೆ ಸರ್ಕಾರ ಸ್ನೇಹಲ್ ಅವರಿಗೆ ಯಾವುದೇ ಹುದ್ದೆಯನ್ನು ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ.

    ಪ್ರಸ್ತುತ ಆ ಸ್ಥಾನಕ್ಕೆ ರಾಮಚಂದ್ರನ್ ಅವರನ್ನು ನೂತನ ಪಿಯು ಇಲಾಖೆ ನಿರ್ದೇಶಕನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಈ ಹಿಂದೆ ರಾಮಚಂದ್ರನ್ ಅವರು ಬೀದರ್ ಜಿಲ್ಲಾಧಿಕಾರಿಯಾಗಿದ್ದರು.

    ಇತ್ತೀಚೆಗೆ ಹಿಜಬ್‍ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಸಂಘರ್ಷ ನಡೆಯುತ್ತಿದೆ. ಪರಿಣಾಮ ಸರ್ಕಾರ ನಿರ್ದೇಶಕಿಯನ್ನೇ ವರ್ಗವಣೆ ಮಾಡಿದೆ.

  • ಸ್ಯಾಂಡಲ್‍ವುಡ್ ನಟ ಕಂ ನಿರ್ದೇಶಕನ ವಿರುದ್ಧ ಅತ್ಯಾಚಾರ ಪ್ರಕರಣ

    ಸ್ಯಾಂಡಲ್‍ವುಡ್ ನಟ ಕಂ ನಿರ್ದೇಶಕನ ವಿರುದ್ಧ ಅತ್ಯಾಚಾರ ಪ್ರಕರಣ

    ಬೆಂಗಳೂರು: ಸ್ಯಾಂಡಲ್‍ವುಡ್ ನಾಯಕ ನಟ, ನಿರ್ದೇಶಕರೊಬ್ಬರ ವಿರುದ್ಧ ಅತ್ಯಾಚಾರ ಪ್ರಕರಣವೊಂದು ದಾಖಲಾಗಿದೆ. ಇನ್ನೊಬ್ಬಳ ಬಾಳಿನಲ್ಲಿ ಆಕ್ಷನ್ ಕಟ್ ಹೇಳಿದ ಸೆಕ್ಸ್ ಸ್ಕ್ಯಾಂಡಲ್ ಸ್ಟೋರಿ ಇದಾಗಿದೆ.

    ವಿಷನ್ 2023 ಚಿತ್ರದ ನಿರ್ದೇಶಕ ಮತ್ತು ನಾಯಕ ನಟನಾಗಿರುವ ಹರ್ಷವರ್ಧನ್ ವಿರುದ್ಧ ಈ ಆರೋಪ ಕೇಳಿಬಂದಿದೆ. ನೀಲಿ ಚಿತ್ರ ತೋರಿಸಿ ಸಹ ನಟಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಬೈಕ್ ಅಪಘಾತ – ಟಿಎಂಸಿ ನಾಯಕ ಮದನ್ ಮಿತ್ರಾಗೆ ಗಾಯ

    ಮದುವೆಯಾಗುವುದಾಗಿ ನಂಬಿಸಿ ಹರ್ಷವರ್ಧನ್, 8 ತಿಂಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಸಹ ನಟಿ ದೂರು ನೀಡಿದ್ದಾರೆ. ನಟಿಯ ದೂರಿನ ಆಧಾರದ ಮೇಲೆ ಇದೀಗ ಹರ್ಷವರ್ಧನ್ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲು ಮಾಡಿಕೊಂಡು ಬಂಧಿಸಿದ್ದಾರೆ. ಅಲ್ಲದೆ ನ್ಯಾಯಾಂಗ ಬಂಧನಕ್ಕೆ ಕಳುಹಿದ್ದಾರೆ.

    ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಯಶ್ ಅಭಿನಯದ ಕಿರಾತಕ ಚಿತ್ರದ ನಿರ್ದೇಶಕ ಪ್ರದೀಪ್ ರಾಜ್ ನಿಧನ

    ಯಶ್ ಅಭಿನಯದ ಕಿರಾತಕ ಚಿತ್ರದ ನಿರ್ದೇಶಕ ಪ್ರದೀಪ್ ರಾಜ್ ನಿಧನ

    ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕಿರಾತಕ’ ಚಿತ್ರವನ್ನು ನಿರ್ದೇಶಿಸಿದ್ದ ಪ್ರದೀಪ್ ರಾಜ್(46) ಇಂದು ನಿಧನರಾಗಿದ್ದಾರೆ.

    ಡಯಾಬಿಟಿಸ್ ನಿಂದ ಹಲವು ವರ್ಷಗಳಿಂದ ಬಳಲುತ್ತಿದ್ದ ಪ್ರದೀಪ್ ರಾಜ್ ಗೆ ಕೊರೊನಾ ಸೋಂಕು ತಗುಲಿತ್ತು. ಇದೀಗ ಅವರು ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ಈ ಕುರಿತು ಪ್ರದೀಪ್ ರಾಜ್ ಸಹೋದರ ಪ್ರಶಾಂತ್, ತನ್ನ ಸಹೋದರ ಕೊರೊನಾದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಯಶ್ ಅಭಿನಯದ ಕಿರಾತಕ ಸಿನಿಮಾ ಪ್ರದೀಪ್ ರಾಜ್ ಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಬಳಿಕ ದುನಿಯಾ ವಿಜಯ್ ಗೆ ರಜನಿಕಾಂತ, ಸತೀಶ್ ಅಭಿನಯದ ಅಂಜದ ಗಂಡು, ಗಣೇಶ್ ಗೆ ಮಿಸ್ಟರ್ 420, ಬೆಂಗಳೂರು 23 ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದರು. ಸದ್ಯ ಕಿರಾತಕ -2 ಸಿನಿಮಾ ರಿಲೀಸ್ ಗೆ ರೆಡಿ ಇದೆ. ಇದನ್ನೂ ಓದಿ: ದೇಶದ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಸ್ಥಾಪನೆ

    ಪಾಂಡಿಚೆರಿಯಲ್ಲಿ ಇಂದು ಮಧ್ಯಾಹ್ನ ಮೃತರ ಅಂತ್ಯಕ್ರಿಯೆ ನೆರವೇರಿಸೋಕೆ ಕುಟುಂಬ ತೀರ್ಮಾನಿಸಿದೆ. ಪ್ರದೀಪ್ ರಾಜ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಅಗಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿನ ‘ನಾನು ಹುಡುಗಿ ಹೋರಾಡಬಲ್ಲೆ’ ಪೋಸ್ಟರ್ ಖ್ಯಾತಿಯ ಪ್ರಿಯಾಂಕಾ ಬಿಜೆಪಿಗೆ?

  • ಆಸ್ಕರ್ ಪ್ರಶಸ್ತಿ ಪುರಸ್ಕೃತ, ಹಾಲಿವುಡ್ ನಿರ್ದೇಶಕ ಪೀಟರ್ ಬಾಗ್ಡಾನವಿಚ್ ನಿಧನ

    ಆಸ್ಕರ್ ಪ್ರಶಸ್ತಿ ಪುರಸ್ಕೃತ, ಹಾಲಿವುಡ್ ನಿರ್ದೇಶಕ ಪೀಟರ್ ಬಾಗ್ಡಾನವಿಚ್ ನಿಧನ

    ವಾಷಿಂಗ್ಟನ್‌: ಆಸ್ಕರ್ ಪ್ರಶಸ್ತಿ ಪುರಸ್ಕೃತ, ಖ್ಯಾತ ಹಾಲಿವುಡ್ ನಿರ್ದೇಶಕ ಪೀಟರ್ ಬಾಗ್ಡಾನವಿಚ್ ನಿಧನವಾಗಿದ್ದಾರೆ. ಹಾಲಿವುಡ್ ಮಂದಿ ಕಂಬನಿ ಮಿಡಿದಿದ್ದಾರೆ.

    ಪೀಟರ್ ಬಾಗ್ಡಾನವಿಚ್( 82) ಅವರು ಗುರುವಾರ (ಜ.6) ಇಹಲೋಕ ತ್ಯಜಿಸಿದ್ದಾರೆ. ಹಲವಾರು ಜನಪ್ರಿಯ ಹಾಲಿವುಡ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಪೀಟರ್ ಬಾಗ್ಡಾನವಿಚ್ ಅವರು ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರು. ಅನೇಕ ನಿರ್ದೇಶಕರಿಗೆ ಅವರು ಸ್ಫೂರ್ತಿ ಆಗಿದ್ದರು. ಸಿನಿಮಾ ನಿರ್ದೇಶಕ ಆಗುವುದಕ್ಕೂ ಮುನ್ನ ಅವರು ವಿಮರ್ಶಕನಾಗಿ ಫೇಮಸ್ ಆಗಿದ್ದರು.

    ನಟನಾಗಿಯೂ ಪೀಟರ್ ಬಾಗ್ಡಾನವಿಚ್ ಫೇಮಸ್ ಆಗಿದ್ದರು. ಅನೇಕ ಸಾಕ್ಷ್ಯಚಿತ್ರಗಳನ್ನೂ ಅವರು ನಿರ್ದೇಶಿಸಿದ್ದರು. ಸಿನಿಮಾ ಸಂಬಂಧಿತ ಹಲವು ಕೃತಿಗಳನ್ನು ಕೂಡ ಅವರ ರಚಿಸಿದ್ದರು. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ

    ಪ್ರಶಸ್ತಿಗಳು: ಗೋಲ್ಡನ್ ಗ್ಲೋಬ್, ಆಸ್ಕರ್, ಗ್ರ್ಯಾಮಿ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಅವರು ಪಡೆದುಕೊಂಡಿದ್ದರು. 1968ರಲ್ಲಿ ಅವರು ನಿರ್ದೇಶಕನಾಗಿ ಕೆಲಸ ಆರಂಭಿಸಿದರು. 1971ರಲ್ಲಿ ಅವರು ನಿರ್ದೇಶಿಸಿದ ದಿ ಲಾಸ್ಟ್ ಪಿಕ್ಚರ್ ಶೋ ಸಿನಿಮಾ ಸೂಪರ್ ಹಿಟ್ ಆಗಿತ್ತು. 8 ವಿಭಾಗಳಲ್ಲಿ ಆಸ್ಕರ್ ಪ್ರಶಸ್ತಿಗೆ ಆ ಚಿತ್ರ ನಾಮಿನೇಟ್ ಆಗಿತ್ತು. ಇದನ್ನೂ ಓದಿ: ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ

    ಸಿನಿಮಾಗಳು: ದಿ ಲಾಸ್ಟ್ ಪಿಕ್ಚರ್ ಶೋ, ವಾಟ್ಸಪ್ ಡಾಕ್, ಪೇಪರ್ ಮೂನ್, ಸೇಂಟ್ ಜಾಕ್, ದೇ ಆಲ್ ಲಾಫ್ಡ್, ಮಾಸ್ಕ್ ಹೀಗೆ ಮುಂತಾದ ಸಿನಿಮಾಗಳಾಗಿವೆ. ಇದನ್ನೂ ಓದಿ: ಗರ್ಭಿಣಿ ಅಂತಾ ಸುಳ್ಳಿ ಹೇಳಿ ಮಗುವಿಗೆ ಜನ್ಮ ಕೊಟ್ಟಳು- ಆದರೆ ಕಂದಮ್ಮ ಇಲ್ಲ

  • ಹಿರಿಯ ನಿರ್ದೇಶಕ ಕೆವಿ ರಾಜು ಇನ್ನಿಲ್ಲ

    ಹಿರಿಯ ನಿರ್ದೇಶಕ ಕೆವಿ ರಾಜು ಇನ್ನಿಲ್ಲ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಹಿರಿಯ ನಿರ್ದೇಶಕ ಕೆ.ವಿ ರಾಜು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.

    ಅನಾರೋಗ್ಯದಿಂದ ಬಳಲುತ್ತಿದ್ದ ಕೆ.ವಿ ರಾಜು ಅವರು ಕೆಲವು ದಿನಗಳಿಂದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೆ ರಾಜಾಜಿನಗರದ ನಿವಾಸದಲ್ಲಿ ಬೆಳಗ್ಗೆ 8 ಗಂಟೆಗೆ ನಿಧನರಾಗಿದ್ದಾರೆ.

    ರಾಜಾಜಿನಗರದ ನಿವಾಸದಲ್ಲಿ ರಾಜು ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹರಿಶ್ಚಂದ್ರ ಘಾಟ್‍ನಲ್ಲಿ ಅಂತ್ಯ ಸಂಸ್ಕಾರ ಮಾಡುವ ಬಗ್ಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.  ಇದನ್ನೂ ಓದಿ:  ಗೋವು ನಮಗೆ ತಾಯಿ, ಪವಿತ್ರ: ನರೇಂದ್ರ ಮೋದಿ

    ಹುಲಿಯಾ, ಬೆಳ್ಳಿ ಮೋಡಗಳು, ಇಂದ್ರಜಿತ್, ಬೆಳ್ಳಿ ಕಾಲುಂಗುರ, ಯುದ್ದಕಾಂಡ, ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಸ್ಯಾಂಡಲ್‍ವುಡ್ ಮಾತ್ರವಲ್ಲದೇ ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಚಿತ್ರಕ್ಕೂ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸಾಲುಸಾಲು ಆಘಾತದಿಂದ ಕುಗ್ಗಿರುವ ಕನ್ನಡ ಚಿತ್ರರಂಗ, ಹಿರಿಯ ನಿರ್ದೇಶಕ, ಬರಹಗಾರ ರಾಜು ಅವರ ನಿಧನದಿಂದ ಮತ್ತಷ್ಟು ಬಡವಾಗಿದೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಮತಾಂತರ ತಡೆ ವಿಧೇಯಕ ಅಂಗೀಕಾರ

    ಕೆ.ವಿ ರಾಜು ನಡೆದು ಬಂದ ಹಾದಿ: ಕೆ.ವಿ ರಾಜು ಅವರು ಚಿತ್ರರಂಗದಲ್ಲಿ ನಿರ್ದೇಶಕ, ಬರಹಗಾರ ಮತ್ತು ಚಿತ್ರಕಥೆಗಾರರಾಗಿ ಗುರುತಿಸಿಕೊಂಡಿದ್ದರು. ಖ್ಯಾತ ನಿರ್ದೇಶಕ ಕೆವಿ ಜಯರಾಮ್ ಅವರ ಸಹೋದರರಾಗಿದ್ದ ಕೆವಿ ರಾಜು, 1982 ರಲ್ಲಿ ‘ಬಾಡದ ಹೂ’ ಚಿತ್ರದಲ್ಲಿ ತಮ್ಮ ಸಹೋದರನಿಗೆ ಸಹಾಯಕ ನಿರ್ದೇಶಕರಾಗುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು.

    1984 ರ ‘ಒಲವೇ ಬದುಕು’ ಮೂಲಕ ಅವರು ಬರಹಗಾರ ಹಾಗೂ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಕೆಲವೇ ವರ್ಷಗಳಲ್ಲಿ ಚಿತ್ರರಂಗದ ಹಿಟ್ ನಿರ್ದೇಶಕರಾಗಿ ಅವರು ಜನಮೆಚ್ಚುಗೆ ಪಡೆದರು. ಸಂಗ್ರಾಮ (1987), ಬಂಧ ಮುಕ್ತ (1987), ಯುದ್ಧಕಾಂಡ (1989), ಬೆಳ್ಳಿ ಮೋಡಗಳು, ಬೆಳ್ಳಿ ಕಾಲುಂಗುರ, ಮುಂತಾದ ಚಿತ್ರಗಳ ಮೂಲಕ ಅವರು ಬ್ಲಾಕ್ ಬಸ್ಟರ್ ನಿರ್ದೇಶಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

  • ಚಿರು ಫೋಟೋ ಇರುವ ಜಾಕೆಟ್ ತೊಟ್ಟ ಪನ್ನಗಾಭರಣ – ಅಭಿಮಾನಿಗಳಿಂದ ಮೆಚ್ಚುಗೆ

    ಚಿರು ಫೋಟೋ ಇರುವ ಜಾಕೆಟ್ ತೊಟ್ಟ ಪನ್ನಗಾಭರಣ – ಅಭಿಮಾನಿಗಳಿಂದ ಮೆಚ್ಚುಗೆ

    ಬೆಂಗಳೂರು: ಪನ್ನಗಾಭರಣ ಚಿರು ಸರ್ಜಾ ಫೋಟೋ ಇರುವ ಜಾಕೆಟ್ ಧರಿಸಿ ಸೈಮಾ ಅವಾರ್ಡ್‍ನಲ್ಲಿ ಕಾಣಿಸಿಕೊಂಡಿರುವುದು ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಸುದ್ದಿಯಾಗಿದೆ.

    ಇಂದು ನನ್ನ ಪ್ರೀತಿಯ ಗೆಳೆಯನ ಫೋಟೋ ಇರುವ ಬಟ್ಟೆಯನ್ನು ಧರಿಸಿದ್ದೇನೆ, ಸ್ನೇಹಿತ ನನ್ನ ಅದೃಷ್ಟ ಎಂದು ಬರೆದುಕೊಂಡ ಪನ್ನಗಭರಣ ಸೈಮಾ ಅವಾರ್ಡ್‍ನಲ್ಲಿ ತೆಗೆದಿರುವ ಕೆಲವು ಫೋಟೋವನ್ನು ಹಂಚಿಕೊಂಡಿದ್ದರು. ಈ ಪೋಸ್ಟ್ ನೋಡಿದ ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸಿ ನೀವು ನಿಜವಾದ ಸ್ನೇಹಿತರು, ಉತ್ತಮ ಗೆಳೆಯರು, ನಿಮ್ಮ ಅಂತಹ ಸ್ನೇಹಿತರು ಇರಲು ಸಾಧ್ಯವೇ ಇಲ್ಲ ಎಂದು ಕಮೆಂಟ್ ಮಾಡುತ್ತಾ ಇಬ್ಬರ ನಡುವೆ ಇರುವ ಸ್ನೇಹವನ್ನು ಹಾಡಿಹೊಗಳಿದ್ದಾರೆ. ಇದನ್ನೂ ಓದಿ:  ಕುಡಿಯುವ ನೀರಿಗಾಗಿ ಮಸೀದಿಗೆ ಹೋಗಿದ್ದಕ್ಕೆ ಒತ್ತೆಯಾಳು

     

    View this post on Instagram

     

    A post shared by Pannaga Bharana (@pannagabharana)

    ಅಂತಿಮವಾಗಿ ಅದೃಷ್ಟ ಮತ್ತು ಶಕ್ತಿ ನಮ್ಮ ಕಡೆ ಇತ್ತು. ಫ್ರೆಂಚ್ ಬಿರಿಯಾನಿ ಸಿನಿಮಾಗೆ ಅತ್ಯುತ್ತಮ ನಿರ್ದೇಶಕ 2020 ಅವಾರ್ಡ್ ಸಿಕ್ಕಿದೆ. ಕನಸು ನನಸಾಯಿತು. ನನ್ನ ಇಡೀ ಚಿತ್ರತಂಡ, ಸಿಬ್ಬಂದಿಗೆ ಧನ್ಯವಾದಗಳು. ನನ್ನ ತಂಡದ ಬಗ್ಗೆ ತುಂಬಾ ಹೆಮ್ಮೆ ಇದೆ ಎಂದು ಬರೆದುಕೊಂಡು ಅವಾರ್ಡ್ ಬಂದಿರುವ ಸಂತೋಷವನ್ನು ಪನ್ನಗಾಭರಣ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದಸರಾ ತಾಲೀಮು ವೇಳೆ ಅರಮನೆ ಬಳಿ ಆನೆ ರಂಪಾಟ

     

    View this post on Instagram

     

    A post shared by Pannaga Bharana (@pannagabharana)

    ಚಿರಂಜೀವಿ ಸರ್ಜಾ ಹಾಗೂ ನಿರ್ದೇಶಕ ಪನ್ನಗಾಭರಣ ತುಂಬಾನೇ ಆಪ್ತರಾಗಿದ್ದರು. ಅವರ ನಡುವೆ ಒಳ್ಳೆಯ ಗೆಳೆತನ ಬೆಳೆದಿತ್ತು. ಚಿರು ಅಕಾಲಿಕ ಮರಣ ಹೊಂದಿದರು. ಇದು ಅನೇಕರಿಗೆ ಬೇಸರ ಮೂಡಿಸಿತ್ತು. ಪನ್ನಗಾಭರಣ ಅವರು ತುಂಬಾನೇ ನೊಂದುಕೊಂಡರು. ಈಗ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಪನ್ನಗಾಭರಣ ಅವರು ಚಿರು ಸರ್ಜಾ ಫೋಟೋ ಇರುವ ಜಾಕೆಟ್ ಧರಿಸಿ ಕಾಣಿಸಿಕೊಂಡಿದ್ದಾರೆ.

     

    View this post on Instagram

     

    A post shared by Pannaga Bharana (@pannagabharana)

    ದಕ್ಷಿಣ ಭಾರತದ ಸಿನಿಮಾ ಚಿತ್ರರಂಗದಲ್ಲಿನ ಸಿನಿಮಾಗಳಿಗೆ ಸೈಮಾ  ಅವಾರ್ಡ್ಸ್ ನೀಡಲಾಗುತ್ತದೆ. ಇತ್ತೀಚೆಗೆ ಈ ಕಾರ್ಯಕ್ರಮ ನಡೆದಿದೆ. ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಸೇರಿ ಸಾಕಷ್ಟು ಸ್ಯಾಂಡಲ್‍ವುಡ್‍ನ ನಟ, ನಟಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪನ್ನಗಾಭರಣ ಅವರು ತೊಟ್ಟಿರುವ ಬಟ್ಟೆ ಮೇಲೆ  ಇರುವ ಚಿರು ಫೋಟೋ ಎಲ್ಲರ ಗಮನ ಸೆಳೆದಿದೆ.

  • ಮತ್ತೊಂದು ಹೈ ಪ್ರೊಫೈಲ್ ಕೇಸ್ ಆಗುತ್ತಾ ಗೋವಿಂದಪುರ ಡ್ರಗ್ ಪ್ರಕರಣ?

    ಮತ್ತೊಂದು ಹೈ ಪ್ರೊಫೈಲ್ ಕೇಸ್ ಆಗುತ್ತಾ ಗೋವಿಂದಪುರ ಡ್ರಗ್ ಪ್ರಕರಣ?

    – ಕೇರಳದ ಸಿನಿ ಅಂಗಳಕ್ಕೂ ಲಿಂಕ್? ನಿರ್ದೇಶಕನಿಗೆ ನೋಟಿಸ್?

    ಬೆಂಗಳೂರು: ಗೋವಿಂದಪುರ ಡ್ರಗ್ಸ್ ಕೇಸ್ ಮತ್ತೊಂದು ಹೈ ಫ್ರೊಫೈಲ್ ಪ್ರಕರಣವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಪೊಲೀಸರ ಬಲೆಯಿಂದ ತಪ್ಪಿಸಿಕೊಂಡೆ ಅಂತಿದ್ದವರಿಗೆ ಮತ್ತೆ ಶಾಕ್ ಎದುರಾಗಿದೆ.

    ಎರಡು ದಿನ ವಿಚಾರಣೆ ಎದುರಿಸಿದ್ರೆ ಸಾಕು ಅಂತಿದ್ದವರಿಗೆ ಪೊಲೀಸರು ಶಾಕ್ ನೀಡಲು ತಯಾರಿ ನಡೆಸಿದ್ದಾರೆ. ನಿತ್ಯ ವಿಚಾರಣೆ ಎದುರಿಸುತ್ತಿರುವ ಡಿಜೆ ವಚನ್ ಚಿನ್ನಪ್ಪ ಮತ್ತು ಉದ್ಯಮಿ ಭರತ್ ಗೆ ಪ್ರಾಥಮಿಕ ತನಿಖೆಯಲ್ಲಿ ಇವರು ಡ್ರಗ್ ಸೇವನೆ ಬಗ್ಗೆ ಅಷ್ಟೇ ಪೊಲೀಸರಿಗೆ ಮಾಹಿತಿ ದೊರೆತಿದೆ. ಆದರೆ ಮೆಡಿಕಲ್ ರಿಪೋರ್ಟ್ ನಲ್ಲಿ ಡ್ರಗ್ ಸೇವನೆ ಬಗ್ಗೆ ಸಾಬೀತಾಗಿಲ್ಲ ಎನ್ನಲಾಗುತ್ತಿದೆ.

    ಮೆಡಿಕಲ್ ಟೆಸ್ಟ್ ನಂತರ ಮುಂದಿನ ಹಂತದ ವಿಚಾರಣೆಗೆ ಸಿದ್ಧರಾಗಿರುವ ಪೊಲೀಸರು, ಇಂದು ಹೇರ್ ಫಾಲಿಕನ್ ಟೆಸ್ಟ್ ಮಾಡಿಸಲು ಕೋರ್ಟಿಗೆ ಅರ್ಜಿ ಹಾಕಲು ತಯಾರಿ ನಡೆಸಿದ್ದಾರೆ. ಸಿಸಿಬಿ ಕೇಸ್ ನಲ್ಲಿ ಆರೋಪಿಗಳ ಕೂದಲು, ಮೂತ್ರ ಮತ್ತು ರಕ್ತ ಮಾದರಿ ಪರೀಕ್ಷೆ ಮಾಡಲಾಗಿತ್ತು. ಇದೇ ಮಾದರಿಯಲ್ಲಿ ವಚನ್ ಮತ್ತು ಭರತ್ ಪರೀಕ್ಷೆ ಮಾಡಿಸಲು ಪೊಲೀಸರ ತಯಾರಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಕೋರ್ಟ್ ನಿಂದ ಅನುಮತಿ ಸಿಕ್ಕರೆ ಸಂಜೆ ಕೂದಲು, ಮೂತ್ರ ಮತ್ತು ರಕ್ತದ ಮಾದರಿಹೈದಾರಬಾದ್ ನ ಕೇಂದ್ರ ವಿಧಿ ವಿಧಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗುತ್ತೆ.

    ಇತ್ತ ಥಾಮಸ್ ವಿಚಾರಣೆ ವೇಳೆ ಇನ್ನಷ್ಟು ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದ್ದು, ಕೇವಲ ಲೋಕಲ್ ನಲ್ಲಿ ಅಷ್ಟೇ ಅಲ್ಲದೆ ನ್ಯಾಷನಲ್ ಲೆವೆಲ್ ನಲ್ಲೂ ಡ್ರಗ್ ಡೀಲಿಂಗ್ ಶಂಕೆಯಾಗಿದೆ. ಮಾಲಿವುಡ್ ನಿರ್ದೇಶಕನ ಜೊತೆ ರೆಗ್ಯೂಲರ್ ಟಚ್ ನಲ್ಲಿದ್ದ ಆಫ್ರಿಕನ್ ಪೆಡ್ಲರ್ ಥಾಮಸ್, ಮೊಬೈಲ್ ರಿಟ್ರಿವ್ ವೇಳೆ ಡ್ರಗ್ ಕುರಿತ ಚಾಟಿಂಗ್ ಪೊಲೀಸರಿಗೆ ಲಭ್ಯವಾಗಿದೆ. ಇದನ್ನೂ ಓದಿ: ಮೋಸ್ಟ್ ವಾಂಟೆಡ್ ಡ್ರಗ್ ಡೀಲರ್ ಮ್ಯಾಶಿ ಅರೆಸ್ಟ್

    ಇದೇ ಪ್ರಕರಣದಲ್ಲಿ ಕೇರಳದ ಸಿನಿ ಇಂಡಸ್ಟ್ರಿಯಲ್ಲಿ ಸಾಕಷ್ಟು ಹೆಸರು ಮಾಡಿರೋ ಹೆಸಾರಂತ ನಿರ್ದೇಶಕ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಇವರ ವಿಚಾರಣೆ ನಂತರ ಮಾಲಿವುಡ್ ನಿರ್ದೇಶಕನಿಗೂ ನೋಟಿಸ್ ನೀಡುವ ಸಾಧ್ಯತೆಗಳಿವೆ. ಸೋನಿಯಾ ಅಗರ್ ವಾಲ್ ಹಾಗು ಆಕೆಯ ಪ್ರಿಯಕರನನ್ನ ಪೊಲೀಸರು ಡ್ರಗ್ ಸಂಬಂಧ ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದೋಹಾದಲ್ಲಿ ಭಾರತ-ತಾಲಿಬಾನಿಗಳ ಮೊದಲ ಔಪಚಾರಿಕ ಮಾತುಕತೆ

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ನಿರ್ದೇಶಕ ಮಂಸೋರೆ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ನಿರ್ದೇಶಕ ಮಂಸೋರೆ

    ಬೆಂಗಳೂರು: ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ನಿರ್ದೇಶಕ ಮಂಸೋರೆ ಅವರು ತಮ್ಮ ಬಹುಕಾಲದ ಗೆಳತಿ ಅಖಿಲಾ ಜೊತೆಗೆ ಇಂದು ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದಾರೆ.

    ಜುಲೈ 4ರಂದು ಬೆಂಗಳೂರಿನಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಇಂದು ಕನಕಪುರ ರಸ್ತೆಯ ತಲಘಟ್ಟಪುರ ಬಳಿ ಇರುವ ಶಿಬ್ರಾವ್ಯಿ ಕೋರ್ಟ್ ಯಾರ್ಡ್‍ನಲ್ಲಿ ಸಪ್ತಪದಿ ತುಳಿದಿದೆ. ಕೋವಿಡ್ ನಿಮಯಗಳನ್ನು ಅನುಸರಿಸಿ, ಈ ಮದುವೆ ಮಾಡಲಾಗಿದೆ. ಇದನ್ನೂ ಓದಿ:  ನಿರ್ದೇಶಕ ಮಂಸೋರೆ ನಿಶ್ಚಿತಾರ್ಥ: ಆಗಸ್ಟ್‌ನಲ್ಲಿ ಮದುವೆ

     

    2014ರಲ್ಲಿ ಮಂಸೋರೆ ಅವರು ಮೊದಲು ನಿರ್ದೇಶಿಸಿದ ಹರಿವು ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರಪ್ರಶಸ್ತಿ ಬಂದಿತ್ತು. ಹರಿವು ಚಿತ್ರದಲ್ಲಿ ಸಂಚಾರಿ ವಿಜಯ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಮಂಸೋರೆ ನಿರ್ದೇಶನದಲ್ಲಿ, ಶೃತಿ ಹರಿಹರನ್ ಮತ್ತು ಸಂಚಾರಿ ವಿಜಯ್ ನಟಿಸಿ, 2018ರಲ್ಲಿ ಬಿಡುಗಡೆಯಾಗಿದ್ದ ನಾತಿಚರಾಮಿ ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರಪ್ರಶಸ್ತಿ, ಮಂಸೋರೆ ಅವರಿಗೆ ಉತ್ತಮ ಸಾಹಿತ್ಯಕ್ಕೆ ರಾಷ್ಟ್ರಪ್ರಶಸ್ತಿ ಮತ್ತು ಇತರೆ ಮೂರು ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿ ಗೌರವ ಸಿಕ್ಕಿದ್ದು, ಅದೇ ಚಿತ್ರದ ನಿರ್ದೇಶನಕ್ಕಾಗಿ ಮಂಸೋರೆ ಅವರಿಗೆ ಉತ್ತಮ ನಿರ್ದೇಶಕ ಫಿಲ್ಮ್ ಫೇರ್ ಪ್ರಶಸ್ತಿಯ ಗರಿ ಸಿಕ್ಕಿತ್ತು.