Tag: director

  • ಕನ್ನಡದ ಖ್ಯಾತ ನಟಿಯೊಬ್ಬಳು ನಿರ್ದೇಶಕನನ್ನೇ ಮಂಚಕ್ಕೆ ಕರೆದ ಕಥೆಗೆ ಮೆಗಾ ಟ್ವಿಸ್ಟ್

    ಕನ್ನಡದ ಖ್ಯಾತ ನಟಿಯೊಬ್ಬಳು ನಿರ್ದೇಶಕನನ್ನೇ ಮಂಚಕ್ಕೆ ಕರೆದ ಕಥೆಗೆ ಮೆಗಾ ಟ್ವಿಸ್ಟ್

    ರಡು ದಿನದ ಹಿಂದೆಯಷ್ಟೇ ಟಾಲಿವುಡ್ ನಿರ್ದೇಶಕ ಕಂ ನಿರ್ಮಾಪಕ ಗೀತಕೃಷ್ಣ ತನ್ನ ನಾಲಿಗೆ ಹರಿಬಿಟ್ಟು, ವಿವಾದ ಸೃಷ್ಟಿ ಮಾಡಿಕೊಂಡಿದ್ದ. ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದ ಈ ಆಸಾಮಿ ‘ಕನ್ನಡದಲ್ಲಿ ಸಿನಿಮಾ ಮಾಡಲು ಹೋಗಿದ್ದೆ. ಅಲ್ಲಿನ ಖ್ಯಾತ ನಟಿಯೊಬ್ಬಳು ನನ್ನನ್ನೇ ಮಂಚಕ್ಕೆ ಕರೆದುಬಿಟ್ಟಳು. ಲೈಂಗಿಕ ಕಿರುಕುಳ ಹೆಣ್ಣುಮಕ್ಕಳ ಮೇಲೆ ಆಗುತ್ತದೆ ಎಂದು ಕೇಳಿದ್ದೀರಿ. ಕನ್ನಡದಲ್ಲಿ ಗಂಡುಮಕ್ಕಳ ಮೇಲೆ ಹೀಗೆ ಆಗುತ್ತಿದೆ ಎಂದು ಸ್ವತಃ ಅನುಭವಿಸಿದೆ’ ಎಂದು ಹೇಳುವ ಮೂಲಕ ವಿವಾದ ಸೃಷ್ಟಿ ಮಾಡಿದ್ದರು. ಇದನ್ನೂ ಓದಿ : ನಿಮ್ಮ ಬಾಡಿಯನ್ನು ನೀವೇ ಲವ್ ಮಾಡಬೇಕು : ರಾಗಿಣಿ

    ಗೀತಕೃಷ್ಣ ಮಾತು ಸ್ಯಾಂಡಲ್‌ವುಡ್‌ ಮತ್ತು ಟಾಲಿವುಡ್ ಅಂಗಳದಲ್ಲಿ ಬಿರುಗಾಳಿಯನ್ನೇ ಸೃಷ್ಟಿ ಮಾಡಿತ್ತು. ಪದೇ ಪದೇ ತಮಿಳು ಮತ್ತು ತೆಲುಗು ನಟರು ಕನ್ನಡ ಸಿನಿಮಾ ರಂಗದ ಮೇಲೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಗೀತಕೃಷ್ಣ ಉಲ್ಟಾ ಹೊಡೆದಿದ್ದಾರೆ. ಮತ್ತು ತಾವು ಆ ರೀತಿಯಲ್ಲಿ ಮಾತೇ ಆಡಿಲ್ಲವೆಂದು, ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ : ಸದ್ದಿಲ್ಲದೇ ಶುರುವಾಯ್ತು ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ : ಮೊದಲ ದಿನವೇ ಫೋಟೋ ಲೀಕ್

    ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ‘ನಾನು ಕನ್ನಡ ಸಿನಿಮಾ ರಂಗದ ಕುರಿತು ಅವಹೇಳನವಾಗುವಂತಹ ಯಾವುದೇ ಮಾತಗಳನ್ನು ಆಡಿಲ್ಲ. ಕನ್ನಡದ ನಟಿಯೊಬ್ಬರು ಮಂಚಕ್ಕೆ ಕರೆದಿದ್ದರು ಎಂದು ಹೇಳಿಲ್ಲ. ಸಿನಿಮಾ ರಂಗದಲ್ಲಿ ಕಾಮನ್ ಆಗಿ ಇಂಥದ್ದು ನಡೆಯುತ್ತದೆ ಎಂದು ಹೇಳಿದ್ದೆ. ಅದನ್ನೇ ಇಷ್ಟೊಂದು ದೊಡ್ಡದು ಮಾಡಲಾಗುತ್ತಿದೆ. ನಾನು ಆ ರೀತಿಯಲ್ಲಿ ಹೇಳಿಯೇ ಇಲ್ಲವೆಂದು ಅವರು ಹೇಳಿದ್ದಾರೆ.

  • ಸ್ಯಾಂಡಲ್‍ವುಡ್ ನಿರ್ದೇಶಕ ಕೆ.ಎನ್.ಮೋಹನ್ ಕುಮಾರ್ ವಿಧಿವಶ

    ಸ್ಯಾಂಡಲ್‍ವುಡ್ ನಿರ್ದೇಶಕ ಕೆ.ಎನ್.ಮೋಹನ್ ಕುಮಾರ್ ವಿಧಿವಶ

    ಬೆಂಗಳೂರು: ಸ್ಯಾಂಡಲ್‍ವುಡ್ ನಿರ್ದೇಶಕ, ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಕೆ.ಎನ್. ಮೋಹನ್ ಕುಮಾರ್(56) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

    ಎನ್.ಆರ್.ಕಾಲೋನಿಯ ರಾಮಲೀಲಾ ಅಪಾರ್ಟ್‍ಮೆಂಟ್‍ನಲ್ಲಿ ನೆಲೆಸಿದ್ದ ಮೋಹನ್ ಅವರು, ಸ್ನಾನದ ಕೋಣೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣವೇ ಅವರನ್ನು ಸಮೀಪದ ರಂಗ ದೊರೈ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

    ಮೃತ ಮೋಹನ್ ಕುಮಾರ್ ಅವರು ತಾಯಿ ಕಮಲಮ್ಮ, ಪತ್ನಿ ಹಾಗೂ ನಟಿ, ನಿರೂಪಕಿ ವತ್ಸಲಾ ಮೋಹನ್, ಪುತ್ರಿ ಮತ್ತು ನಟಿ ಅನನ್ಯಾ ಮೋಹನ್ ಅವರನ್ನು ಅಗಲಿದ್ದಾರೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರು ಉಳಿಸಿ – ಪ್ರಧಾನಿಗೆ ನಟ ಅನಿರುದ್ಧ್ ಪತ್ರ

    ರಂಗಭೂಮಿ ಹಿನ್ನೆಲೆಯಿಂದ ಬಂದು ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜಾನಪದ ಕಾರ್ಯಕ್ರಮದಲ್ಲಿ ನಿರೂಪಕರಾಗುವ ಮೂಲಕ ಕಿರುತೆರೆ ಪ್ರವೇಶಿಸಿದರು. ಎಂಜಿನಿಯರ್ ಪದವಿಧರರಾಗಿದ್ದ ಕೆ.ಎನ್.ಮೋಹನ್ ರಂಗಭೂಮಿ, ಧಾರವಾಹಿ, ಪತ್ರಿಕೋದ್ಯಮ ಹೀಗೆ ಹಲವರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

    ತಮ್ಮ ಪತ್ನಿ ವತ್ಸಲಾ ಮೋಹನ್ ಅವರ ಸಜ್ಜಾದನಾ ಗಣೇಶ ಕಾದಂಬರಿ ಆಧರಿಸಿ 2016ರಲ್ಲಿ ಬೊಂಬೆಯಾಟ ಎಂಬ ಮಕ್ಕಳ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಸಿನಿಮಾಕ್ಕೆ ಹಲವಾರು ಪ್ರಶಸ್ತಿಗಳು ಲಭಿಸಿತ್ತು. ಮೈಸೂರು ಮಲ್ಲಿಗೆ ಎಂಬ ಸಿನಿಮಾದಲ್ಲಿ ನಾಯಕನಿಗೆ ಕಂಠದಾನ ಮಾಡಿದ್ದರು. ಇದನ್ನೂ ಓದಿ: ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್‍ಗೆ ಪಿತೃ ವಿಯೋಗ

    ಆನೇಕಲ್ ತಾಲೂಕಿನ ಸಮಂದೂರಿನಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಅದಕ್ಕೂ ಮುನ್ನ ಜಯನಗರದ 3ನೇ ಬ್ಲಾಕ್ ಪೂರ್ವ 8ನೇ ಮುಖ್ಯರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಬೆಳಗ್ಗೆ 9ರಿಂದ 10ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

  • ಯಶ್ ಮುಂದಿನ ಚಿತ್ರಕ್ಕೆ ನಿರ್ದೇಶಕ ನರ್ತನ್ ಪಕ್ಕಾ?

    ಯಶ್ ಮುಂದಿನ ಚಿತ್ರಕ್ಕೆ ನಿರ್ದೇಶಕ ನರ್ತನ್ ಪಕ್ಕಾ?

    ಕೆಜಿಎಫ್ 2 ಸಿನಿಮಾ ಸಕ್ಸಸ್ ನಂತರ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಚರ್ಚೆ ನಡೆಯುತ್ತಿದೆ. ಯಾರ ನಿರ್ದೇಶನದಲ್ಲಿ ಯಶ್ ನಟಿಸಲಿದ್ದಾರೆ ಎನ್ನುವುದು ಹಾಟ್ ಟಾಪಿಕ್ ಆಗಿದೆ. ಯಶ್ ವಲಯದಿಂದ ಕೇಳಿ ಬರುತ್ತಿರುವ ಸುದ್ದಿ ಎಂದರೆ,  ಮಫ್ತಿ ಚಿತ್ರದ ನಿರ್ದೇಶಕ ನರ್ತನ್ ಅವರೇ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದೇ ಖಚಿತವಾದ ಸುದ್ದಿಯೂ ಆಗಲಿದೆಯಂತೆ. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು

    ಈ ಹಿಂದಿ ನರ್ತನ್ ಕೂಡ ಈ ಕುರಿತು ಮಾತನಾಡಿ, ಯಶ್ ಅವರ ಜೊತೆ ಮಾತುಕತೆ ಆಗಿದ್ದು ನಿಜ, ಅವರಿಗಾಗಿ ಕಥೆಯನ್ನು ಮಾಡಿಕೊಂಡಿದ್ದೂ ಸತ್ಯ. ಆದರೆ, ಯಾವಾಗ ಸಿನಿಮಾ ಆಗುತ್ತದೆ ಎಂದು ಗೊತ್ತಿಲ್ಲ. ನಿರ್ದಿಷ್ಟವಾಗಿ ದಿನಾಂಕವನ್ನು ಹೇಳುವುದು ಸದ್ಯಕ್ಕೆ ಸಾಧ್ಯವಿಲ್ಲ ಎಂದಿದ್ದರು. ಈ ನಂತರ ಯಶ್ ಮತ್ತು ನರ್ತನ್ ಹಲವು ಬಾರಿ ಭೇಟಿ ಮಾಡಿದ ವಿಚಾರವೂ ಸುದ್ದಿಯಾಗಿತ್ತು. ಅದರಲ್ಲೂ ಲಾಕ್ ಡೌನ್ ಸಮಯದಲ್ಲಿ ನರ್ತನ್ ಅವರು ಯಶ್ ಆಫೀಸಿಗೆ ಬಂದು ಕಥೆಯನ್ನು ಚರ್ಚಿಸುತ್ತಿದ್ದರು ಎನ್ನುವುದು ಕೂಡ ಗುಟ್ಟಾಗಿ ಉಳಿದಿಲ್ಲ. ಇದನ್ನೂ ಓದಿ : ಕಾಲೇಜು ದಿನಗಳಲ್ಲೇ ರಮ್ಯಾ ಮೇಲೆ ಕ್ರಶ್ ಆಗಿದೆ : ರಕ್ಷಿತ್ ಶೆಟ್ಟಿ

    KGF 2 Yash (4)

    ಕೆಜಿಎಫ್  ಸಿನಿಮಾ ಯಶಸ್ಸಿನಂತರ ಯಶ್ ಅವರ ಮುಂದಿನ ಚಿತ್ರವನ್ನು ಪುರಿ ಜಗನ್ನಾಥ್ ಮಾಡಲಿದ್ದಾರೆ ಎನ್ನುವ ಸುದ್ದಿಯೂ ಹರಡಿತ್ತು. ಆದರೆ, ಅದಕ್ಕೂ ಮುನ್ನ ನರ್ತನ್ ಹೆಸರು ಕೇಳಿ ಬಂದಿತ್ತು. ನಿನ್ನೆಯಷ್ಟೇ ಗೆಳೆಯನ ಮದುವೆ ಸಮಾರಂಭಕ್ಕೆ ಯಶ್ ಹೋಗಿದ್ದರು. ಅಲ್ಲಿ ನರ್ತನ್ ಕೂಡ ಯಶ್ ಜೊತೆಗಿದ್ದರು. ಹಾಗಾಗಿ ನರ್ತನ್ ಸಿನಿಮಾ ಬಹುತೇಕ ಖಚಿತ ಎನ್ನುವ ಸುದ್ದಿಯಿದೆ.  ಇದನ್ನೂ ಓದಿ : ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50

    ಪುರಿ ಜಗನ್ನಾಥ್, ನರ್ತನ್ ಹೀಗೆ ಹಲವು ನಿರ್ದೇಶಕರ ಹೆಸರು ಕೇಳಿ ಬಂದರೂ, ಯಶ್ ಮಾತ್ರ ಈ ಕುರಿತು ಯಾವುದೇ ಹೇಳಿಕೆ ಕೊಟ್ಟಿಲ್ಲ. ಆದರೆ, ಮುಂದಿನ ಸಿನಿಮಾದ ಕಥೆಯ ಕೆಲಸ ನಡೆಯುತ್ತಿದೆ. ಒಂದೊಳ್ಳೆ ಕಥೆಯೊಂದಿಗೆ ಮತ್ತೆ ಬರುತ್ತೇನೆ ಎಂದು ಹೇಳಿದ್ದು ಬಿಟ್ಟರೆ, ಉಳಿದಂತೆ ಎಲ್ಲವೂ ಸಸ್ಪೆನ್ಸ್.

  • ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

    ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

    ನ್ನಡ ಕಿರುತೆರೆ ಮತ್ತು ಹಿರಿತೆರೆ ನಿರ್ದೇಶಕ ಅರವಿಂದ್ ಕೌಶಿಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿದ್ದಾರೆ. ಕಿರುತೆರೆ ನಿರ್ಮಾಪಕ ರೋಹಿತ್ ಎನ್ನುವವರಿಗೆ 73 ಲಕ್ಷ ರೂಪಾಯಿ ವಂಚಿಸಿದ ಕಾರಣಕ್ಕಾಗಿ ಅವರ ವಿರುದ್ಧ ವೈಯ್ಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು. ನಿನ್ನೆ ರಾತ್ರಿ ನಿರ್ದೇಶಕ ಅರವಿಂದ್ ಕೌಶಿಕ್ ಅವರನ್ನು ವೈಯ್ಯಾಲಿ ಕಾವಲ್ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ : ವಾಮನ ತೆಕ್ಕೆಗೆ ತುಳುನಾಡ ಬೆಡಗಿ ರಚನಾ ರೈ

    2020ರಲ್ಲೇ ಅರವಿಂದ್ ಕೌಶಿಕ್, ಪತ್ನಿ ಶಿಲ್ಪಾ ಸೇರಿದಂತೆ ಹಲವರು ವಿರುದ್ಧ ರೋಹಿತ್ ದೂರು ಸಲ್ಲಿಸಿದ್ದರು. ಈ ದೂರಿಗೆ ಸಂಬಂಧ ಪಟ್ಟಂತೆ ಇದೀಗ ಪೊಲೀಸ್ ನವರು ನಿರ್ದೇಶಕ ಅರವಿಂದ್ ಅವರನ್ನು ಬಂಧಿಸಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಧಾರಾವಾಹಿಗೆ ಸಂಬಂಧಿಸಿದ ವಂಚನೆ ಪ್ರಕರಣ ಇದಾಗಿದೆ. ಇದನ್ನೂ ಓದಿ : ಡಾ.ರಾಜ್ ಕುಟುಂಬದೊಂದಿಗೆ ಮತ್ತೊಂದು ಸಿನಿಮಾ ಘೋಷಣೆ ಮಾಡಿದ ಜೇಮ್ಸ್ ನಿರ್ಮಾಪಕ

    ಈ ಕುರಿತು ದೂರಿನಲ್ಲಿ ಉಲ್ಲೇಖಿಸಿರುವ ರೋಹಿತ್, 28 ಮೇ 2018 ರಿಂದ ‘ಕಮಲಿ’ ಧಾರಾವಾಹಿ ಶುರುವಾಯಿತು. ಮೊದ ಮೊದಲು ಧಾರಾವಾಹಿಯಲ್ಲಿ ನಿರ್ಮಾಪಕರು ರೋಹಿತ್ ಎಂದು ತೋರಿಸಲಾಗುತ್ತಿತ್ತು. ಆ ನಂತರ ನನ್ನ ಹೆಸರನ್ನೇ ಕಿತ್ತು ಹಾಕಲಾಯಿತು. ಅಷ್ಟರಲ್ಲಿ ನಾನು ಆ ಧಾರಾವಾಹಿಗಾಗಿ 73 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದೆ. ನನ್ನ ಹೆಸರು ತಗೆದು ಹಾಕಿದ್ದಕ್ಕೆ ಕೇಳಿದೆ. ಅದಕ್ಕೆ ಅವರು ಸಕಾರಣ ಕೊಡಲಿಲ್ಲ. ಈವರೆಗೂ ಲಾಭಾಂಶದಲ್ಲಿ ಒಂದು ಪೈಸೆಯನ್ನೂ ನನಗೆ ಕೊಟ್ಟಿಲ್ಲ. ಹಣ ಕೇಳಿದರೆ ಕೊಡು‍ತ್ತಿಲ್ಲ. ಹೀಗಾಗಿ ನನಗೆ ವಂಚನೆ ಆಗಿದೆ ಎಂದು ದೂರಿನಲ್ಲಿ ಬರೆದಿದ್ದಾರೆ ರೋಹಿತ್. ಇದನ್ನೂ ಓದಿ: ಕೆಜಿಎಫ್-2 ಸಿನಿಮಾ ವೀಕ್ಷಿಸಿದ ಇಳಯರಾಜ, ಕಮಲ್ ಹಾಸನ್

    ಆದರೆ, ಅರವಿಂದ್ ಕೌಶಿಕ್ ಹೇಳುವುದೇ ಬೇರೆ. ಗೆಳೆಯರೊಟ್ಟಿಗೆ ಸೇರಿ ನಾನು ನಮ್ಮದೇ ಸತ್ವ ಮೀಡಿಯಾ ಸಂಸ್ಥೆಯನ್ನು ಹುಟ್ಟು ಹಾಕಿದ್ದೆವು. ಆ ಸಂಸ್ಥೆಗೆ ವಾಹಿನಿಯವರು ಧಾರಾವಾಹಿ ನಿರ್ಮಿಸಲು ಒಪ್ಪಿಗೆ ಕೊಟ್ಟಿದ್ದರು. ಬಂಡವಾಳ ಹೂಡುವವರು ಬೇಕಾಗಿದ್ದರಿಂದ ರೋಹಿತ್ ಅವರೇ ನಮ್ಮನ್ನು ಸಂಪರ್ಕಿಸಿದರು. ಫೈನಾನ್ಸ್ ಮಾಡಿದ್ದರು. ತಮ್ಮ ಹೆಸರಿನ ಮುಂದೆ ನಿರ್ಮಾಪಕರು ಎಂದು ಹಾಕುವಂತೆ ಕೇಳಿದರು. ಅದಕ್ಕೆ ವಾಹಿನಿಯವರು ಒಪ್ಪದೇ ಇರುವ ಕಾರಣಕ್ಕಾಗಿ ನಾವು ಯಾರ ಹೆಸರನ್ನೂ ಹಾಕಲಿಲ್ಲ. ರೋಹಿತ್ ಈ ಧಾರಾವಾಹಿಗೆ ತಾನೇ ನಿರ್ಮಾಪಕ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ನನ್ನೊಂದಿಗೆ ಹಣ ಹಾಕಿದವರು ನನಗೆ ಪ್ರಶ್ನೆ ಮಾಡಿದರು. ಹಾಗಾಗಿ ಅವರ ಹೆಸರನ್ನು ತಗೆದುಹಾಕಲಾಯಿತು. ನಂತರ ಧಾರಾವಾಹಿ ನಿಂತಿತು. ತಮಗೆ ಹಣ ವಾಪಸ್ಸು ಬರುವುದಿಲ್ಲ ಎಂದು ತಮಗೆ ತಾವೇ ಅಂದುಕೊಂಡು ಹೀಗೆ ದೂರು ನೀಡಿದ್ದಾರೆ. ನಾನು ಹಣ ಕೊಡುವುದಿಲ್ಲ ಎಂದು ಯಾವತ್ತೂ ಹೇಳಿಲ್ಲ ಎಂದಿದ್ದಾರೆ ಅರವಿಂದ ಕೌಶಿಕ್.

  • ಖ್ಯಾತ ನಿರ್ದೇಶಕ ಎನ್.ಟಿ.ರಾಮರಾವ್ ವಿಧಿವಶ

    ಖ್ಯಾತ ನಿರ್ದೇಶಕ ಎನ್.ಟಿ.ರಾಮರಾವ್ ವಿಧಿವಶ

    ತೆಲುಗು ಮತ್ತು ಹಿಂದಿಯಲ್ಲಿ ಯಶಸ್ವಿ ಚಲನಚಿತ್ರಗಳನ್ನು ನಿರ್ದೇಶಿಸಿದ ಚಲನಚಿತ್ರ ನಿರ್ದೇಶಕ 84ರ ಹರೆಯದ ತಾತಿನೇನಿ ರಾಮರಾವ್ ಅವರು ಬುಧವಾರ ಚೆನ್ನೈನಲ್ಲಿ ನಿಧನರಾದರು. ಇವರು ಟಾಲಿವುಡ್‌ ತಲೈವಾ ರಜನಿಕಾಂತ್ ಮತ್ತು  ಬಾಲಿವುಡ್‌ ಬಿಗ್‌ ಬಿ ಅಮಿತಾಭ್ ಬಚ್ಚನ್ ಅವನ್ನು ನಿದೇಶಿಸಿದ್ದರು.

    ರಾಮರಾವ್ ಅವರು ವಯೋಸಹಜ ಸಮಸ್ಯೆಗಳಿಂದ ನಿಧನರಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ರಾಮರಾವ್ ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಚಿತ್ರರಂಗದಲ್ಲಿ ಟಿ.ರಾಮರಾವ್ ಎಂದೇ ಇವರು ಜನಪ್ರಿಯವಾಗಿದ್ದಾರೆ. ಇವರು ನಿರ್ದೇಶಕರಾಗಿ ಸುಮಾರು ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ಯಶಸ್ಸನ್ನು ಕಂಡಿದ್ದು, ದೊಡ್ಡ ಸ್ಟಾರ್‍ಗಳನ್ನು ಹುಟ್ಟುಹಾಕಿದ್ದಾರೆ. ಇದನ್ನೂ ಓದಿ: ಬಸವಣ್ಣನಂತೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ದೇಶಿಕೇಂದ್ರ ಮಹಾಸ್ವಾಮಿಜೀ

    ರಾವ್ ಅವರ ನಿಧನದ ಕುರಿತು ನಟ ಅನುಪಮ್ ಖೇರ್ ಪೋಸ್ಟ್ ಮಾಡಿದ್ದು, ನಿರ್ದೇಶಕರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಪೋಸ್ಟ್‍ನಲ್ಲಿ, ಹಿರಿಯ ಚಲನಚಿತ್ರ ನಿರ್ಮಾಪಕ ಮತ್ತು ಆತ್ಮೀಯ ಗೆಳೆಯ ಟಿ.ರಾಮರಾವ್ ಅವರ ನಿಧನದ ಬಗ್ಗೆ ತಿಳಿದು ತೀವ್ರ ದುಃಖವಾಯಿತು. ಅವರು ಸಹಾನುಭೂತಿ, ಕಮಾಂಡಿಂಗ್ ಮತ್ತು ಉತ್ತಮ ಹಾಸ್ಯಪ್ರಜ್ಞೆಯನ್ನು ಹೊಂದಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪ! ಓಂ ಶಾಂತಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ರಾಮರಾವ್ ನಿಧನಕ್ಕೆ ಬಾಲಿವುಡ್ ನಟ ಅಜಯ್ ದೇವಗನ್ ಸಂತಾಪ ವ್ಯಕ್ತಪಡಿಸಿದ್ದು, ಚಿತ್ರ ನಿರ್ಮಾಪಕ, ನಿರ್ದೇಶಕ ಟಿ.ರಾಮರಾವ್ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಅವರು 80 ರ ದಶಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ನನ್ನ ತಂದೆ ಮತ್ತು ನಾನು ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದೇವೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ರಾಮರಾವ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

    ರಾಮರಾವ್ ಅವರು 1966 ರಲ್ಲಿ ಅಕ್ಕಿನೇನಿ ನಾಗೇಶ್ವರ್ ರಾವ್ ಅವರಿಗೆ ನಿರ್ದೇಶನ ಮಾಡಿದ್ದಾರೆ. ಹಳೆಯ ಎನ್‍ಟಿಆರ್ ಜೊತೆಗಿನ ಅವರ 1977 ರ ಫ್ಯಾಂಟಸಿ ಹಾಸ್ಯ ಚಲನಚಿತ್ರ ‘ಯಮಗೋಳ’ ಸಿನಿಮಾ ಮಾಡಿದ್ದು, ಇದು ಬ್ಲಾಕ್‍ಬಸ್ಟರ್ ಆಗಿತ್ತು. ಇದನ್ನೂ ಓದಿ: ತಮಿಳುನಾಡಿನಲ್ಲಿ ಯಾರಿಗೂ ರಾಮನ ಪರಿಚಯವಿಲ್ಲವೆಂದ ಕಾಂಗ್ರೆಸ್ ಸಂಸದೆ

    ರಾಮರಾವ್ ಅವರ 1985ರ ರೊಮ್ಯಾಂಟಿಕ್ ಕೌಟುಂಬಿಕ ನಾಟಕ ‘ಪಚನಿ ಕಪುರಂ ಕೃಷ್ಣ’ ಸಿನಿಮಾದಲ್ಲಿ ಶ್ರೀದೇವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಹಾಡುಗಳನ್ನು ಇಂದಿಗೂ ಅಭಿಮಾನಿಗಳು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ

  • ಜೋಗಿ ಪ್ರೇಮ್ ಹೊಸ ಸಿನಿಮಾ ಘೋಷಣೆ : ಧ್ರುವ ಸರ್ಜಾ ಹೀರೋ, ಏ.24 ಮುಹೂರ್ತ

    ಜೋಗಿ ಪ್ರೇಮ್ ಹೊಸ ಸಿನಿಮಾ ಘೋಷಣೆ : ಧ್ರುವ ಸರ್ಜಾ ಹೀರೋ, ಏ.24 ಮುಹೂರ್ತ

    ಮೊನ್ನೆಯಷ್ಟೇ ‘ಏಕ್ ಲವ್ ಯಾ’ ಸಿನಿಮಾವನ್ನು ಅಭಿಮಾನಿಗಳಿಗೆ ಅರ್ಪಿಸಿದ್ದ ನಿರ್ದೇಶಕ ಜೋಗಿ ಪ್ರೇಮ್ ಇದೀಗ ಮತ್ತೊಂದು ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಈ ಹಿಂದೆಯೇ ಅವರು ಹೇಳಿದ್ದಂತೆ ಧ್ರುವ ಸರ್ಜಾಗಾಗಿ ಈ ಸಿನಿಮಾವನ್ನು ಅವರು ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ಮುಹೂರ್ತ ಇದೇ ಏ.24ರಂದು ಮೈಸೂರಿನಲ್ಲಿ ನಡೆಯಲಿದೆ. ಇದನ್ನೂ ಓದಿ : ಭಾವಿ ಪತಿಯ ತಂದೆ ನಿಧನ: ನಟಿ ಕಾವ್ಯ ಶಾ ಮದುವೆ ಮುಂದೂಡಿಕೆ

    ಅಂದು ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬ. ಈ ಸಂದರ್ಭದಲ್ಲಿಯೇ ಪ್ರೇಮ್ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಈ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದ್ದು ಸದ್ಯ ಚಿತ್ರಕ್ಕೆ ಕೆವಿಎನ್ 4 ಎಂದು ಟೈಟಲ್ ಇಡಲಾಗಿದೆ. ಮುಂದೆ ಈ ಶೀರ್ಷಿಕೆ ಬದಲಾಗಲಿದೆ. ಇದನ್ನೂ ಓದಿ : ನಾನೇಕೆ ಡ್ರಗ್ಸ್ ತಗೆದುಕೊಳ್ಳುತ್ತಿದ್ದೆ? ಅಸಲಿ ಕಾರಣ ಬಿಚ್ಚಿಟ್ಟ ಸಂಜಯ್ ದತ್

    ಮೈಸೂರಿನಲ್ಲಿ ಬೆಳಗ್ಗೆ 9.30ಕ್ಕೆ ಚಾಮುಂಡಿ ಬೆಟ್ಟದಲ್ಲಿ ಮುಹೂರ್ತ ನಡೆಲಿದ್ದು, ನಾಯಕ ಧ್ರುವ ಸರ್ಜಾ ಮತ್ತು ಇತರ ಕಲಾವಿದರು ಹಾಗೂ ಚಿತ್ರತಂಡ ಅಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದೆ. ಅಲ್ಲದೇ, ಸ್ಯಾಂಡಲ್ ವುಡ್ ನ ಕೆಲವು ಸಿಲೆಬ್ರಿಟಿಗಳು ಕೂಡ ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: 29 ದಾಖಲೆಗಳನ್ನು ಬರೆದು ರಾಕೆಟ್ ವೇಗದಲ್ಲಿ ಮುನ್ನುಗ್ತಿದೆ ಕೆಜಿಎಫ್ 2: ದಾಖಲೆಗಳ ಪಟ್ಟಿ ಇಲ್ಲಿದೆ

    ಧ್ರುವ ಮತ್ತು ಪ್ರೇಮ್ ಕಾಂಬಿನೇಷನ್ ನ ಮೊದಲ ಸಿನಿಮಾ ಇದಾಗಿದ್ದು, ಹಾಗಾಗಿಯೇ ಚಿತ್ರಕ್ಕೆ ಅವರು ಯುದ್ದದ ಮುನ್ನುಡಿ ಇಲ್ಲಿಂದ ಆರಂಭ ಎಂಬ ಟ್ಯಾಗ್ ಲೈನ್ ಕೂಡ ಕೊಟ್ಟಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಪ್ರೇಮ್, ‘ಮುಹೂರ್ತಕ್ಕೆ ನೀವೇ ಮುಖ್ಯ ಅತಿಥಿ. ಒಟ್ಟಿಗೆ ಹಬ್ಬ ಮಾಡೋಣ ಬನ್ನಿ’ ಎಂದು ಬರೆದುಕೊಂಡಿದ್ದಾರೆ.

  • ಮತ್ತೆ ನಿರ್ದೇಶನದತ್ತ ಐಶಾನಿ ಶೆಟ್ಟಿ : ಬೋಲ್ಡ್ ಅಂಡ್ ಬ್ಯೂಟಿಫುಲ್ ಮಾತುಕತೆ

    ಮತ್ತೆ ನಿರ್ದೇಶನದತ್ತ ಐಶಾನಿ ಶೆಟ್ಟಿ : ಬೋಲ್ಡ್ ಅಂಡ್ ಬ್ಯೂಟಿಫುಲ್ ಮಾತುಕತೆ

    ಅತೀ ಚಿಕ್ಕ ವಯಸ್ಸಿನಲ್ಲೇ ನಟನೆ ಮತ್ತು ನಿರ್ದೇಶನವನ್ನು ಸಂಭಾಳಿಸಿಕೊಂಡು ಅಪರೂಪ ಎನ್ನುವಂತಹ ಚಿತ್ರ ಕೊಟ್ಟವರು ಐಶಾನಿ ಶೆಟ್ಟಿ. ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳದೇ ಪ್ರೇಕ್ಷಕರ ಮನತಟ್ಟುವಂತಹ ಪಾತ್ರಗಳಲ್ಲಿ ಈವರೆಗೂ ಅವರು ಕಾಣಿಸಿಕೊಂಡಿದ್ದಾರೆ. ಸದ್ಯ ಹೊಂದಿಸಿ ಬರೆಯಿರಿ ಮತ್ತು ಧರಣಿ ಮಂಡಲ ಚಿತ್ರಗಳಲ್ಲಿ ನಟಿಸಿರುವ ಇವರು, ಚಿತ್ರವೊಂದರ ನಿರ್ದೇಶನಕ್ಕೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿದ್ದಾರೆ.

    ಇಂಜಿನಿಯರಿಂಗ್ ಸ್ಟೂಡೆಂಟ್ ಬದುಕನ್ನು ಆಧರಿಸಿದ ‘ಹೊಂದಿಸಿ ಬರೆಯಿರಿ’ ಸಿನಿಮಾದಲ್ಲಿ ಐಶಾನಿ ಶೆಟ್ಟಿ ವಿಭಿನ್ನ ರೀತಿಯ ಪಾತ್ರ ಮಾಡಿದ್ದು, ಮಹತ್ವಾಕಾಂಕ್ಷಿ ಇಟ್ಟುಕೊಂಡಿರುವ ಹುಡುಗಿಯ ಪಾತ್ರವನ್ನು ಈ ಸಿನಿಮಾದಲ್ಲಿ ಅವರು ನಿರ್ವಹಿಸಿದ್ದಾರೆ. ‘ಹೊಂದಿಸಿ ಬರೆಯಿರಿ ಸಿನಿಮಾ ಬಹುತೇಕರ ಬದುಕನ್ನು ಪ್ರತಿನಿಧಿಸುವಂಥದ್ದು. ಇಂಜಿನಿಯರಿಂಗ್ ವಿದ್ಯಾರ್ಥಿಗಳ ಜೀವನವನ್ನು ಸಿನಿಮಾದಲ್ಲಿ ತೋರಿಸಿದ್ದರೂ, ಅದು ಬದುಕಿನ ಬೇರೆ ಬೇರೆ ಮಜಲುಗಳ ದರ್ಶನ ಮಾಡಿಸುತ್ತದೆ. ನನ್ನ ಪಾತ್ರವೇ ವಿಶೇಷವಾಗಿದೆ.  ತನ್ನ ಜೀವನದ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡ ಹುಡುಗಿಯೊಬ್ಬಳು, ಅದನ್ನು ಪಡೆಯಲು ಏನೆಲ್ಲ ಹರಸಾಹಸ ಮಾಡುತ್ತಾಳೆ ಎನ್ನುವ ಹಿನ್ನೆಲೆಯಿದೆ. ಮೊನ್ನೆಯಷ್ಟೇ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ತುಂಬಾ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಅಂತಾರೆ ಐಶಾನಿ. ಇದನ್ನೂ ಓದಿ : ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್

    ಬೋಲ್ಡ್ ಕ್ಯಾರೆಕ್ಟರ್

    ಧರಣಿ ಮಂಡಲ ಸಿನಿಮಾದಲ್ಲಿ ಈವರೆಗೂ ಮಾಡದೇ ಇರುವಂತಹ ಪಾತ್ರವನ್ನು ಐಶಾನಿ ಶೆಟ್ಟಿ ನಿರ್ವಹಿಸಿದ್ದಾರಂತೆ. ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, ಹಾದಿ ತಪ್ಪಿರುವ ಹುಡುಗಿಯ ಬದುಕನ್ನು ಐಶಾನಿ ಪಾತ್ರ ಪ್ರತಿನಿಧಿಸುತ್ತದೆಯಂತೆ. ಅಲ್ಲದೇ, ಈವರೆಗೂ ನೋಡಿರದೇ ಇರುವ ಐಶಾನಿ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ‘ನಿಜ, ನಾನು ಈವರೆಗೂ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡುತ್ತಾ ಬಂದಿದ್ದೆ. ಆದರೆ, ಮೊದಲ ಬಾರಿಗೆ ಬೋಲ್ಡ್ ಆಗಿ ಇರುವಂಥ ಪಾತ್ರ ಪೋಷಿಸುತ್ತಿದ್ದೇನೆ. ಅವಳು ಎಲ್ಲ ರೀತಿಯಲ್ಲೂ ಬೋಲ್ಡ್. ಡೈಲಾಗ್, ಪಾತ್ರ ವರ್ತಿಸುವ ರೀತಿ, ಆಕೆಯ ಹಿನ್ನೆಲೆ ಹೀಗೆ ಎಲ್ಲವೂ ಹೊಸದಾಗಿದೆ. ಈ ಕಾರಣಕ್ಕಾಗಿ ಇಂಥದ್ದೊಂದು ಪಾತ್ರವನ್ನು ನಾನು ಒಪ್ಪಿಕೊಂಡೆ’ ಎನ್ನುವುದು ಐಶಾನಿ ಮಾತು. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ ಒಂದನ್ನೇ ನೋಡಿಲ್ಲ ಎಂದ ಉರ್ಫಿ – ಯಶ್ ಫ್ಯಾನ್ಸ್ ಫುಲ್ ಗರಂ

    ನಿರ್ದೇಶಕಿಯಾಗುವ ಕನಸು

    ಐಶಾನಿ ಶೆಟ್ಟಿ ಈಗಾಗಲೇ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅದಕ್ಕೆ ಹಲವು ಪ್ರಶಸ್ತಿಗಳು ಕೂಡ ಬಂದಿವೆ. ಈಗ ಸಿನಿಮಾ ಮಾಡುವತ್ತ ಮುಖ ಮಾಡಿದ್ದಾರೆ. ಈಗಾಗಲೇ ಕಥೆಯನ್ನು ಕೂಡ ಬರೆದುಕೊಂಡಿದ್ದಾರೆ. ತಮ್ಮೂರಿನ ಹಿನ್ನೆಲೆಯಾಗಿಟ್ಟುಕೊಂಡು ಕಥೆ ಸಿದ್ಧಪಡಿಸಿರುವ ಅವರು, ಈ ವರ್ಷ ಸಿನಿಮಾ ನಿರ್ದೇಶನವನ್ನು ಮಾಡಲಿದ್ದಾರಂತೆ. ನಿರ್ದೇಶನದ ಜತೆಗೆ ಈ ಸಿನಿಮಾದಲ್ಲಿ ಅವರೇ ಮುಖ್ಯ ಪಾತ್ರವನ್ನೂ ನಿಭಾಯಿಸುತ್ತಿರುವುದು ವಿಶೇಷ. ಇದನ್ನೂ ಓದಿ: ನಾನು ನಿಮ್ಮವಳು, ಕೆಟ್ಟದ್ದಾಗಿ ಮಾತನಾಡಬೇಡಿ ಎಂದ ರಾಶಿ ಖನ್ನಾ

     

    ‘ನನ್ನೂರಿನ ಕಥೆಯನ್ನೇ ಈ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದೇನೆ. ಅದೊಂದು ಅಪರೂಪದ ಕಥೆ. ಅದನ್ನು ನಾನು ಜನರಿಗೆ ಹೇಳಲೇಬೇಕಿದೆ. ಹಾಗಾಗಿ ಸಿನಿಮಾ ನಿರ್ದೇಶನಕ್ಕೆ ಮುಂದಾಗಿರುವೆ. ನಟನೆಯ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊರುತಿದ್ದೇನೆ. ಆದಷ್ಟು ಬೇಗ ಎಲ್ಲ ಮಾಹಿತಿಯನ್ನೂ ಹಂಚಿಕೊಳ್ಳುತ್ತೇನೆ’ ಎಂದರು ಐಶಾನಿ.

  • ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್

    ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್

    ಣೇಶ್ ಮತ್ತು ಪ್ರೀತಂ ಗುಬ್ಬಿ ಕಾಂಬಿನೇಷನ್ ನಲ್ಲಿ ಮತ್ತೊಂದು ಹೊಸ ಸಿನಿಮಾ ಬರಲಿದೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿ ಬ್ರೇಕ್ ಮಾಡಿತ್ತು. ಇದೀಗ ಆ ಸಿನಿಮಾದ ಟೈಟಲ್ ಲಾಂಚ್ ಗೆ ಸಿದ್ಧತೆ ನಡೆದಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ತಮ್ಮ ಹೊಸ ಸಿನಿಮಾದ ಶೀರ್ಷಿಕೆ ರಿವಿಲ್ ಮಾಡುವುದಾಗಿ ಸ್ವತಃ ಗಣೇಶ್ ಅವರೇ ಟ್ವಿಟ್ ಮಾಡಿದ್ದಾರೆ. ಇದನ್ನೂ ಓದಿ : ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ‘ನವ ಸಂವತ್ಸರ ಯುಗಾದಿಯಂದು ಹೊಸ ಚಿತ್ರದ ಟೈಟಲ್ ಲಾಂಚ್. ನಾನು, ಪ್ರೀತಮ್ ಗುಬ್ಬಿ ಮುಂಗಾರು ಮಳೆಯಿಂದ ಸಿನಿ ಪಯಣದಲ್ಲಿ ಜೊತೆಯಾದವರು. ನಮ್ಮ ಜೋಡಿಯ ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ ಮತ್ತು 99 ಚಿತ್ರಗಳನ್ನು ನೋಡಿ ತಾವು ಹರಿಸಿದ್ದೀರಿ. ಈಗ ಶ್ರೀವಾರಿ ಟಾಕೀಸ್ ನೊಂದಿಗೆ ಮತ್ತೊಂದು ಹೊಸ ಕನಸಿನ ಪಯಣ ಪ್ರಾರಂಭ. ಹರೆಯದ ಹೃದಯಗಳೇ ಹರಸಿ’ ಎಂದು ಗಣೇಶ್ ಹೊಸ ಸಿನಿಮಾದ ಬಗ್ಗೆ ಬರೆದುಕೊಂಡಿದ್ದಾರೆ.

    ಗಣೇಶ್ ಅವರೇ ಹೇಳಿಕೊಂಡಂತೆ ಪ್ರೀತಮ್ ಗುಬ್ಬಿ ಮತ್ತು ಗಣೇಶ್ ಸ್ನೇಹಿತರು. ಆರಂಭದ ದಿನಗಳಲ್ಲಿ ಒಟ್ಟಿಗೆ ಒಂದೇ ರೂಮ್ ನಲ್ಲಿ ಕಾಲಕಳೆದವರು. ಗಣೇಶ್ ಅವರ ಮುಂಗಾರು ಮಳೆ ಚಿತ್ರಕ್ಕೆ ಪ್ರೀತಮ್ ಕಥೆ ಬರೆದದ್ದು. ಅಲ್ಲದೇ ಗಣೇಶ್ ಜತೆಗೆ ಈವರೆಗೂ ಮೂರು ಸಿನಿಮಾಗಳಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಗೆಳೆಯನಿಗಾಗಿಯೇ ಗಣೇಶ್ ಮಳೆಯಲಿ ಜೊತೆಯಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಇದನ್ನೂ ಓದಿ:  ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್

    ಗಣೇಶ್ ಮತ್ತು ಪ್ರೀತಮ್ ಕಾಂಬಿನೇಷನ್ ನ ‘99’ ಸಿನಿಮಾದ ನಂತರ ಈ ಹೊಸ ಸಿನಿಮಾ ಲಾಂಚ್ ಆಗುತ್ತಿದೆ. ಈ ಕಾಂಬಿನೇಷನ್ ನಲ್ಲಿ ಈವರೆಗೂ ಲವ್ ಸ್ಟೋರಿಗಳನ್ನೇ ಸಿನಿಮಾ ಮಾಡುತ್ತಾ ಬಂದಿದ್ದಾರೆ. ಹಾಗಾಗಿ ಹೊಸ ಸಿನಿಮಾದಲ್ಲೂ ಪ್ರೇಮಕಥೆಯೇ ಇರಲಿದೆ ಎನ್ನಲಾಗುತ್ತಿದೆ. ಏಪ್ರಿಲ್ 2 ರಂದು ಕೆಲವು ಸುದ್ದಿಗಳು ಹೊರ ಬೀಳಲಿವೆ.

  • ಕಾಶ್ಮೀರ್ ಫೈಲ್ಸ್ ಬಗ್ಗೆ ಮಾತನಾಡಿ – ಅಗ್ನಿಹೋತ್ರಿಗೆ ಬ್ರಿಟನ್ ಸಂಸತ್ ಆಹ್ವಾನ

    ಕಾಶ್ಮೀರ್ ಫೈಲ್ಸ್ ಬಗ್ಗೆ ಮಾತನಾಡಿ – ಅಗ್ನಿಹೋತ್ರಿಗೆ ಬ್ರಿಟನ್ ಸಂಸತ್ ಆಹ್ವಾನ

    ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ಕೇವಲ ಜನ ಮೆಚ್ಚುಗೆ ಮತ್ತು ಬಾಕ್ಸ್ ಆಫೀಸ್ಸಿನ ಕಲೆಕ್ಷನ್ ಮಾತ್ರ ಕೈ ಹಿಡಿದಿಲ್ಲ. ದೇಶದಾಚೆಯೂ ಈ ಸಿನಿಮಾ ನಿರ್ದೇಶಕನಿಗೆ ಗೌರವ ಸಿಗುತ್ತಿದೆ. ಭಾರತೀಯರಿಂದ ಮೆಚ್ಚುಗೆ ಪಡೆದಿದ್ದ ಈ ಸಿನಿಮಾವನ್ನು ಬೇರೆ ದೇಶಗಳಲ್ಲಿಯೂ ತೋರಿಸುವುದಾಗಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಿಳಿಸಿದ್ದಾರೆ. ಇದಕ್ಕೆ ಕಾರಣ ಬ್ರಿಟನ್ ಸಂಸತ್ ಅವರಿಗೆ ನೀಡಿರುವ ಗೌರವ. ಪತ್ನಿ ಸಮೇತ ಬ್ರಿಟನ್ ಸಂಸತ್ ಗೆ ಬರಲು ಅದು ಆಹ್ವಾನ ನೀಡಿದೆ. ಈ ವಿಷಯವನ್ನು ಸ್ವತಃ ವಿವೇಕ್ ಅವರೇ ಹಂಚಿಕೊಂಡಿದ್ದಾರೆ.

    ‘ಪತ್ನಿ ಪಲ್ಲವಿ ಮತ್ತು ನನಗೆ ಬ್ರಿಟನ್ ಸಂಸತ್‌ನಿಂದ ಆಹ್ವಾನ ಬಂದಿದೆ. ಮುಂದಿನ ತಿಂಗಳು ನಾವು ಬ್ರಿಟನ್‌ಗೆ ಹೋಗುತ್ತೇವೆ. ಕಾಶ್ಮೀರ ಪಂಡಿತರ ನರಮೇಧದ ಸಂದೇಶವನ್ನು ಪ್ರಪಂಚದ ಮೂಲೆ, ಮೂಲೆಗೆ ತಲುಪಿಸಬೇಕಾಗಿದೆ. ಬ್ರಿಟನ್ ಸಂಸತ್ತಿಗೆ ಹೋಗುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ’ ಎಂದು ನಿರ್ದೇಶಕ ಅಗ್ನಿಹೋತ್ರಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಾಶ್ಮೀರ್ ಫೈಲ್ಸ್ ಸಿನಿಮಾ ವಿಶ್ವದಾದ್ಯಂತ ಮೆಚ್ಚುಗೆ ಪಡೆದುಕೊಳ್ಳುತ್ತಿರುವುದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಸಂಪೂರ್ಣವಾಗಿ ಹಿಂದಿಯಲ್ಲೇ ಇದೆ. ದಕ್ಷಿಣ ಭಾರತದಲ್ಲಿ ಹಿಂದಿ ಮಾತನಾಡುವವರ ಹಾಗೂ ಹಿಂದಿ ಭಾಷೆಯನ್ನು ಅರ್ಥೈಸಿಕೊಳ್ಳುವವರ ಸಂಖ್ಯೆ ತುಂಬಾನೇ ಕಡಿಮೆ ಇದೆ ಹೀಗಾಗಿ, ಎಲ್ಲಾ ವಿಚಾರಗಳು ಇಲ್ಲಿಯವರಿಗೆ ತಲುಪದೇ ಇರಬಹುದು. ಈ ಕಾರಣಕ್ಕೆ ಸಿನಿಮಾವನ್ನು ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಡಬ್ ಮಾಡಲು ಚಿಂತನೆ ನಡೆದಿದೆ.

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ 1990ರ ಸಮಯದಲ್ಲಿ ಕಾಶ್ಮೀರದ ಪಂಡಿತರು ಅನುಭವಿಸಿದ ಕಷ್ಟಗಳೇನು ಎನ್ನುವುದನ್ನು ಸಿನಿಮಾದಲ್ಲಿ ನಿಖರವಾಗಿ ತೋರಿಸಲಾಗಿದೆ. ಸಿನಿಮಾ ಮೂಲಕ ಕಾಶ್ಮೀರದ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನದಲ್ಲಿ ವಿವೇಕ್ ಅಗ್ನಿಹೋತ್ರಿ ಯಶಸ್ಸು ಸಾಧಿಸಿದ್ದಾರೆ.

  • ಗಣೇಶ್ ಮತ್ತು ಪ್ರೀತಂ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ

    ಗಣೇಶ್ ಮತ್ತು ಪ್ರೀತಂ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ

    ನಿರ್ದೇಶಕ ಪ್ರೀತಂ ಗುಬ್ಬಿ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಕಾಂಬಿನೇಷನ್ ನ 4ನೇ ಸಿನಿಮಾ ಇದಾಗಿದೆ. ಇದನ್ನೂ ಓದಿ : ದಿ ಕೇರಳ ಸ್ಟೋರಿ ಸಿನಿಮಾ ಶುರು: ಸ್ಫೂರ್ತಿಯಂತೆ ದಿ ಕಾಶ್ಮೀರ್ ಫೈಲ್ಸ್

    ‘ಮಳೆಯಲಿ ಜೊತೆಯಲಿ’ ಸಿನಿಮಾದ ಮೂಲಕ ಈ ಜೋಡಿ ಒಂದಾಗಿತ್ತು. ಆನಂತರ ‘ದಿಲ್  ರಂಗೀಲಾ’ ಆಗಿ ತೆರೆಯ ಮೇಲೆ ಕಾಣಿಸಿಕೊಂಡಿತ್ತು. ಈ ಕಾಂಬಿನೇಷನ್ ನ ಕೊನೆಯ ಸಿನಿಮಾ ‘99’. ಇದಾದ ನಂತರ ಪ್ರೀತಂ ಮತ್ತು ಗಣೇಶ್ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಇದನ್ನೂ ಓದಿ : ಕಾಲೇಜು ದಿನಗಳಲ್ಲಿ ಅಮೀರ್‌ ಮೇಲೆ ಕ್ರಷ್‌ ಆಗಿತ್ತು.. ಲವ್‌ ಲೆಟರ್‌ ಕೂಡ ಬರೆದಿದ್ದೆ: ಬಾಲಿವುಡ್‌ ನಟಿ

    ಸಾಮಾನ್ಯವಾಗಿ ಪ್ರೀತಂ ಸಿನಿಮಾಗಳೆಂದರೆ, ಅಲ್ಲೊಂದು ಲವ್ ಸ್ಟೋರಿ ಇದ್ದೇ ಇರುತ್ತದೆ. ಹಾಗಾಗಿ ಈ ಸಿನಿಮಾದಲ್ಲೂ ಅಪರೂಪದ ಪ್ರೇಮಕಥೆಯನ್ನು ಹೇಳಲಿದ್ದಾರಂತೆ ನಿರ್ದೇಶಕರು. ‘ಮುಂಗಾರು ಮಳೆ’ ಸಿನಿಮಾದ ಮೂಲಕ ಈ ಜೋಡಿ ಒಂದಾಗಿ ಕೆಲಸ ಮಾಡುತ್ತಿದ್ದರೂ, ಮುಂಗಾರು ಮಳೆಗೆ ಪ್ರೀತಂ ಕೇವಲ ಕಥೆಗಾರ ಆಗಿದ್ದರು. ಇದನ್ನೂ ಓದಿ: ಮಾಧುರಿ ದೀಕ್ಷಿತ್ ಇರೋದು ಮನೇಲಿ ಅಲ್ಲ, ಅರಮನೆಯಲ್ಲಿ: ಹೊಸ ಮನೆಗೆ ದೇವದಾಸ್ ಬೆಡಗಿ

    ಇತ್ತ ಗಣೇಶ್ ಕೂಡ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೇ, ಟಾಕ್ ಶೋ  ಒಂದನ್ನು ನಡೆಸಿಕೊಡುತ್ತಿದ್ದಾರೆ. ಗಾಳಿಪಟ2 ಸಿನಿಮಾ ರಿಲೀಸ್ ಗೆ ಸಿದ್ಧವಾಗಿದ್ದರೆ, ತ್ರಿಬಲ್ ರೈಡಿಂಗ್ ಕೂಡ ಶೂಟಿಂಗ್ ಮುಗಿಸಿಕೊಂಡಿದೆ. ಹೀಗಾಗಿ ಹೊಸ ಸಿನಿಮಾ ಅತೀ ಶೀಘ್ರದಲ್ಲೇ ಸೆಟ್ಟೇರಿದೆ ಅಚ್ಚರಿ ಪಡಬೇಕಿಲ್ಲ.