Tag: director

  • ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಆರೋಗ್ಯ ಸ್ಥಿತಿ ಗಂಭೀರ

    ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಆರೋಗ್ಯ ಸ್ಥಿತಿ ಗಂಭೀರ

    ಭಾರತ ಸಿನಿಮಾ ರಂಗದ ಖ್ಯಾತ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ವಿಜೇತ ಶ್ಯಾಮ್ ಬೆನಗಲ್ (Shyam Benegal) ಆರೋಗ್ಯ (Health) ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಎರಡೂ ಕಿಡ್ನಿ ಫೇಲ್ (Kidney) ಆಗಿರುವ ಹಿನ್ನೆಲೆಯಲ್ಲಿ ಅವರಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲೇ ಅವರು ಡಯಾಲಿಸಿಸ್ ಗೆ (Dialysis) ಒಳಗಾಗಿದ್ದು, ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ಅವರ ಕಛೇರಿ ಸಿಬ್ಬಂದಿ ತಿಳಿಸಿದ್ದಾರೆ ಎಂದು ವರದಿ ಮಾಡಿದೆ.

    ಭಾರತ ಸಿನಿಮಾ ರಂಗ ಕಂಡ ಅತ್ಯಂತ ಪ್ರತಿಭಾವಂತ ಮತ್ತು ವಿಶೇಷ ಸಿನಿಮಾಗಳನ್ನು ನೀಡಿದ ನಿರ್ದೇಶಕರು. ಎಂಟು ರಾಷ್ಟ್ರ ಪ್ರಶಸ್ತಿಗಳನ್ನು ಇವರ ಚಿತ್ರಗಳು ಪಡೆದುಕೊಂಡಿವೆ. ಅಲ್ಲದೇ, ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣವನ್ನೂ ಪಡೆದಿದ್ದಾರೆ. ಸಿನಿಮಾ ರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಭಾರತ ಸರಕಾರವು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು 2005ರಲ್ಲೇ ನೀಡಿ ಗೌರವಿಸಿದೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಮಗಳ ಬರ್ತ್‌ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಶಬಾನಾ ಅಜ್ಮಿ ಮತ್ತು ಅನಂತ್ ನಾಗ್ ಕಾಂಬಿನೇಷನ್ ನ ಅಂಕುರ್ ಇವರ ಮೊದಲ ಸಿನಿಮಾ. ಆನಂತರ ಮಥಣ್, ಭೂಮಿಕಾ: ದಿ ರೋಲ್, ವೆಲ್ ಡನ್ ಅಬ್ಬಾ, ಆರೋಹನ್, ನೇತಾಜಿ ಸುಭಾಸ್ ಚಂದ್ರ ಬೋಸ್ ಸೇರಿದಂತೆ ಸಾಕಷ್ಟು ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಇವರ ಗರಡಿಯಲ್ಲಿ ಪಳಗಿದ ಅನೇಕ ಕಲಾವಿದರು ಸೂಪರ್ ಸ್ಟಾರ್ ಆಗಿ ಮಿಂಚಿದ್ದಾರೆ. ಸ್ಟಾರ್ ಗಳನ್ನು ತಯಾರಿಸಿದ ಅಪರೂಪದ ನಿರ್ದೇಶಕರು ಕೂಡ ಇವರಾಗಿದ್ದಾರೆ.

  • `ವೇದ’ ಸಕ್ಸಸ್ ನಂತರ ತೆಲುಗಿನತ್ತ ನಿರ್ದೇಶಕ ಎ.ಹರ್ಷ

    `ವೇದ’ ಸಕ್ಸಸ್ ನಂತರ ತೆಲುಗಿನತ್ತ ನಿರ್ದೇಶಕ ಎ.ಹರ್ಷ

    ಸ್ಯಾಂಡಲ್‌ವುಡ್‌ನ (Sandalwood) ಸಕ್ಸಸ್‌ಫುಲ್ ನಿರ್ದೇಶಕ ಎ.ಹರ್ಷ (A. Harsha) ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಕೆಜಿಎಫ್ 2 (KGF 2) ನಿರ್ದೇಶಕ ಪ್ರಶಾಂತ್ ನೀಲ್ ಅವರ ಹಾದಿಯಲ್ಲಿ ಎ.ಹರ್ಷ ಹೆಜ್ಜೆ ಇಡುತ್ತಿದ್ದಾರೆ. `ವೇದ’ (Vedha) ಚಿತ್ರದ ಸೂಪರ್ ಸಕ್ಸಸ್ ನಂತರ ಟಾಲಿವುಡ್‌ನತ್ತ (Tollywood) ಎ.ಹರ್ಷ ಮುಖ ಮಾಡಿದ್ದಾರೆ.

    ಸೀತಾರಾಮ ಕಲ್ಯಾಣ, ಭಜರಂಗಿ, ಭಜರಂಗಿ 2, ವೇದ, ಹೀಗೆ ಸಾಕಷ್ಟು ಸಿನಿಮಾಗಳಿಗೆ ಎ.ಹರ್ಷ ನಿರ್ದೇಶನ ಮಾಡಿ ಗೆದ್ದು ಬೀಗಿದ್ದಾರೆ. ಇತ್ತೀಚಿನ ಶಿವಣ್ಣ ನಟನೆಯ `ವೇದ’ ಚಿತ್ರದ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ರಿಲೀಸ್ ಆಗಿ ಕಮಾಲ್ ಮಾಡಿತ್ತು. ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಚಿತ್ರತಂಡ ಸಂಭ್ರಮಿಸಿತ್ತು. ಇದನ್ನೂ ಓದಿ: `ಆಚಾರ್ಯ’ ಚಿತ್ರಕ್ಕಾಗಿ ನಿರ್ಮಿಸಿದ್ದ 20 ಕೋಟಿ ವೆಚ್ಚದ ಸೆಟ್ ಬೆಂಕಿಗಾಹುತಿ

    ಹೀಗಿರುವಾಗ ಪ್ರಶಾಂತ್ ನೀಲ್ (Prashanth Neel) ಅವರಂತೆಯೇ ತೆಲುಗು ಚಿತ್ರರಂಗದಲ್ಲಿ ಮಿಂಚಲು ಡೈರೆಕ್ಟರ್ ಹರ್ಷ ರೆಡಿಯಾಗಿದ್ದಾರೆ. ತೆಲುಗಿನ ಮಾಸ್ ಹೀರೋ ಗೋಪಿಚಂದ್‌ಗೆ ಹರ್ಷ ನಿರ್ದೇಶನ ಮಾಡ್ತಿದ್ದಾರೆ.

    `ವೇದ’ ಚಿತ್ರದ ಸಕ್ಸಸ್ ರೆಸ್ಪಾನ್ಸ್ ನೋಡಿ ನಟ ಗೋಪಿಚಂದ್ (Gopi Chand) ಕೂಡ ಕಥೆ ಕೇಳಿ, ಎ. ಹರ್ಷ ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ರಾಧ ಮೋಹನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

  • ‘ಕಾಕ್ರೋಚ್’ ಸಿನಿಮಾಗೆ ನಾನೇ ಹೀರೋ, ನಾನೇ ಡೈರೆಕ್ಟರ್ : ರಾಕೇಶ್ ಅಡಿಗ

    ‘ಕಾಕ್ರೋಚ್’ ಸಿನಿಮಾಗೆ ನಾನೇ ಹೀರೋ, ನಾನೇ ಡೈರೆಕ್ಟರ್ : ರಾಕೇಶ್ ಅಡಿಗ

    ಮೂರು ವರ್ಷಗಳ ನಂತರ ನಟ ರಾಕೇಶ್ ಅಡಿಗ ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ನೈಟ್ ಔಟ್ ಸಿನಿಮಾದ ನಂತರ ಅವರು ಯಾವುದೇ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಮುಂದಿನ ಸಿನಿಮಾ ಯಾವುದು ಎಂದು ಕೇಳಿದಾಗೆಲ್ಲ, ಸ್ಕ್ರಿಪ್ಟ್ ಬರೆಯುತ್ತಿದ್ದೇನೆ ಎಂದು ಹೇಳುತ್ತಿದ್ದರು. ಹಾಗಾದರೆ, ಈ ಬಾರಿ ನಟನೆಯನ್ನು ಬಿಟ್ಟು ನಿರ್ದೇಶನಕ್ಕೆ ಇಳಿಯಲಿದ್ದಾರೆ ಎನ್ನುವ ಪ್ರಶ್ನೆಯೂ ಮೂಡಿತ್ತು. ಎಲ್ಲದಕ್ಕೂ ಇದೀಗ ಉತ್ತರ ಸಿಕ್ಕಿದೆ.

    ಮೂರ್ನಾಲ್ಕು ವರ್ಷಗಳ ಗ್ಯಾಪ್ ನಂತರ ಮತ್ತೆ ರಾಕೇಶ್ ಅಡಿಗ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲು ಬರುತ್ತಿದ್ದು, ಕಾಕ್ರೋಚ್ ಹೆಸರಿನ ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ತಾವೇ ಹೀರೋ ಆಗಿ ನಟಿಸಿ, ನಿರ್ದೇಶನವನ್ನೂ ಮಾಡಲಿದ್ದಾರೆ. ಈಗಾಗಲೇ ಸಿನಿಮಾ ಕ್ಯಾರೆಕ್ಟರ್ ರಿವೀಲ್ ಟೀಸರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಸ ಲುಕ್ ನಲ್ಲಿ ಅಡಿಗ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ನಾನೇನು ಖಾಸಗಿ ಭಾಗಗಳನ್ನ ತೋರಿಸುತ್ತಿಲ್ಲ; ನೀವೇಕೆ ವರಿ ಮಾಡ್ತೀರಿ – ನೆಟ್ಟಿಗರ ವಿರುದ್ಧ ಸಿಡಿದ ಉರ್ಫಿ

    ಬಿಗ್ ಬಾಸ್ ನಂತರ ರಾಕೇಶ್ ಅಡಿಗರಿಗೆ ಡಿಮ್ಯಾಂಡ್ ಜಾಸ್ತಿ ಆಗಿತ್ತು. ಅನೇಕರು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಆಹ್ವಾನ ನೀಡಿದರು. ಆದರೆ, ರಾಕೇಶ್ ತಮ್ಮ ಕನಸಿನ ಪ್ರಾಜೆಕ್ಟ್ ಬಗ್ಗೆ ಮಾತ್ರ ಯೋಚಿಸುತ್ತಿದ್ದರು. ಹಾಗಾಗಿ ಅಂದುಕೊಂಡಂತೆ ತಮ್ಮ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದ ಮೂಲಕ ಅವರು ಪ್ರೇಮಕಥೆಯೊಂದನ್ನು ಹೇಳಲು ಹೊರಟಿದ್ದಾರಂತೆ. ಎಲ್ಲ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಕಥೆ ಬರೆದಿದ್ದಾರಂತೆ.

    ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅವರು ಕೊಡದೇ ಇದ್ದರೂ, ಈ ಸಿನಿಮಾದ ನಿರ್ದೇಶನ ಮತ್ತು ನಟನೆಯ ಜವಾಬ್ದಾರಿ ಹೊತ್ತಿದ್ದಾರೆ. ಪೂಜಾಶ್ರೀ ಎನ್ನುವವರು ಚಿತ್ರದ ನಿರ್ಮಾಪಕರು. ಉಳಿದಂತೆ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ಕೊಡುವುದಾಗಿ ಅವರು ತಿಳಿಸಿದ್ದಾರೆ.

  • ಸುದೀಪ್ ಮುಂದಿನ ಚಿತ್ರಕ್ಕೆ ತಮಿಳು ನಿರ್ದೇಶಕ ಪಕ್ಕಾ

    ಸುದೀಪ್ ಮುಂದಿನ ಚಿತ್ರಕ್ಕೆ ತಮಿಳು ನಿರ್ದೇಶಕ ಪಕ್ಕಾ

    ವಿಕ್ರಾಂತ್ ರೋಣ ಸಿನಿಮಾದ ನಂತರ ಸುದೀಪ್ (Sudeep) ನಟನೆಯ ಮುಂದಿನ ಸಿನಿಮಾ ಯಾವುದು ಎನ್ನುವುದಕ್ಕೆ ಈವರೆಗೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಮೂರ್ನಾಲ್ಕು ನಿರ್ದೇಶಕರ ಹೆಸರು ಈವರೆಗೂ ಓಡಾಡುತ್ತಿವೆ. ಈ ನಡುವೆ ಮತ್ತೊಂದು ಅಚ್ಚರಿಯ ಹೆಸರೂ ಕೇಳಿ ಬಂದಿದೆ. ಈ ಬಾರಿ ಸುದೀಪ್ ತಮಿಳು (Tamil) ಸಿನಿಮಾ ರಂಗದ ಹೆಸರಾಂತ ನಿರ್ದೇಶಕ ವೆಂಕಟ್ ಪ್ರಭು (Venkat Prabhu) ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.

    ಈ ಹಿಂದೆಯೇ ಸುದೀಪ್ ಗಾಗಿ ವೆಂಕಟ್ ಪ್ರಭು ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ, ಅದನ್ನು ಗಾಸಿಪ್ ಎನ್ನುವಂತೆ ನಂಬಲಾಗಿತ್ತು. ಇದೀಗ ಸುದೀಪ್ ಅವರ ಆಪ್ತರೇ ಹೇಳುವಂತೆ ಈಗಾಗಲೇ ವೆಂಕಟ್ ಪ್ರಭು ಸ್ಕ್ರಿಪ್ಟ್ ಬರೆಯುವಲ್ಲಿ ಸಕ್ರೀಯರಾಗಿದ್ದಾರಂತೆ. ಎರಡ್ಮೂರು ಬಾರಿ ಸುದೀಪ್ ಅವರನ್ನು ಭೇಟಿಯೂ ಮಾಡಿದ್ದಾರೆ. ಹಾಗಾಗಿ ಮೊದಲು ವೆಂಕಟ್ ಪ್ರಭು ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ದೀಪಿಕಾ ದಾಸ್ ಮನೆಯ ಬೆಕ್ಕು ನಾಪತ್ತೆ: ಹುಡುಕಿ ಕೊಟ್ಟವರಿಗೆ ಬಂಪರ್‌ ಆಫರ್

    ವಿಕ್ರಾಂತ್ ರೋಣ ಸಿನಿಮಾದ ನಂತರ ಸುದೀಪ್ ಅವರಿಗಾಗಿಯೇ ನಿರ್ದೇಶಕ ಅನೂಪ್ ಭಂಡಾರಿ ಕೂಡ ಕತೆ ಬರೆಯುತ್ತಿದ್ದರು, ಇತ್ತ ಕಡೆ ನಂದಕಿಶೋರ್ ಕೂಡ ಸುದೀಪ್ ಗಾಗಿ ಸಿನಿಮಾ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಈ ನಡುವೆ ರಕ್ಷಿತ್ ಶೆಟ್ಟಿ ಅವರ ಹೆಸರೂ ಕೇಳಿ ಬಂದಿತ್ತು. ಕಬ್ಜ ಸಿನಿಮಾದ ನಂತರ ಸುದೀಪ್ ಗಾಗಿ ಆರ್.ಚಂದ್ರು ಕೂಡ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಯಾರು, ಯಾವಾಗ ಸಿನಿಮಾ ಮಾಡುತ್ತಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

    ಸುದೀಪ್ ಮಾತ್ರ ಈಗ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸಿಸಿಎಲ್ ಪಂದ್ಯದಲ್ಲಿ ಸಕ್ರೀಯರಾಗಿದ್ದಾರೆ. ಮೊದಲ ಮ್ಯಾಚ್ ಕೂಡ ಗೆದ್ದಿದ್ದಾರೆ. ಸಿಸಿಎಲ್ ಮುಗಿಯುತ್ತಿದ್ದಂತೆಯೇ ಕೆಸಿಎಲ್ ಪಂದ್ಯಾವಳಿ ಆಯೋಜನೆಗೊಂಡಿದೆ. ಎರಡ್ಮೂರು ತಿಂಗಳ ಕಾಲ ಕ್ರಿಕೆಟ್ ಪಂದ್ಯಾವಳಿಯಲ್ಲೇ ಸುದೀಪ್ ಬ್ಯುಸಿ. ಹಾಗಾಗಿ ಸುದೀಪ್ ಅವರ ಹೊಸ ಸಿನಿಮಾ ಯಾವಾಗ ಘೋಷಣೆ ಆಗಬಹುದು ಎನ್ನುವ ಕಾಯುವಿಕೆ ಅವರ ಅಭಿಮಾನಿಗಳದ್ದು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಿರ್ದೇಶಕ ಭಗವಾನ್‌ ಇನ್ನಿಲ್ಲ

    ನಿರ್ದೇಶಕ ಭಗವಾನ್‌ ಇನ್ನಿಲ್ಲ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕನ್ನಡದ ಹೆಸರಾಂತ ನಿರ್ದೇಶಕ ಎಸ್.ಕೆ. ಭಗವಾನ್ ನಿಧನ

    ಕನ್ನಡದ ಹೆಸರಾಂತ ನಿರ್ದೇಶಕ ಎಸ್.ಕೆ. ಭಗವಾನ್ ನಿಧನ

    ಸ್ಯಾಂಡಲ್ ವುಡ್ ನ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ (Dorai Bhagavan) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭಗವಾನ್ (90) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ (death). ಕನ್ನಡ ಸಿನಿಮಾ ರಂಗದಲ್ಲಿ ದೊರೈ ಭಗವಾನ್ ಎಂದೇ ಜೋಡಿ ಖ್ಯಾತಿಯಾಗಿತ್ತು. ಈಗಾಗಲೇ ದೊರೆ ದೂರವಾಗಿದ್ದಾರೆ. ಅವರನ್ನು ಅರಸಿಕೊಂಡು ಭಗವಾನ್ ಹೊರಟಿದ್ದಾರೆ.

    ಶ್ರೀನಿವಾಸ್ ಕೃಷ್ಣ ಅಯ್ಯಂಗಾರ್ ಭಗವಾನ್ (SK Bhagavan) ಇವರು ಪೂರ್ಣ ಹೆಸರು. 1933ರಲ್ಲಿ ಮೈಸೂರಿನ ತಮಿಳು ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿದ್ದ ಇವರು, ರಂಗಭೂಮಿ ಹಿನ್ನೆಲೆಯುಳ್ಳವರು. ಕಾಲೇಜು ದಿನಗಳಲ್ಲಿ ರಂಗಭೂಮಿಯ ಸಾಕಷ್ಟು ಚಟುವಟಿಕೆಗಳಲ್ಲಿ ತೊಡಗಿಕೊಂಡವರು. 1956ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳಿಗೆ ಸಹಾಯಕ ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದವರು. ಇದನ್ನೂ ಓದಿ:ಟರ್ಕಿ-ಸಿರಿಯಾ ಭೀಕರ ಭೂಕಂಪ: ನೆರವಿಗೆ ನಿಂತ ಸನ್ನಿ ಲಿಯೋನ್

    1966ರಲ್ಲಿ ತೆರೆಕಂಡ ಸಂಧ್ಯಾರಾಗ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ಭಡ್ತಿ ಪಡೆದವರು. ನಂತರ ನಿರ್ದೇಶಕ ದೊರೈರಾಜ್ ಜೊತೆಗೂಡಿ ಸ್ವತಂತ್ರ ನಿರ್ದೇಶಕರಾದವರು. 1993ರಲ್ಲಿ ದೊರೈರಾಜ್ ನಿಧನದ ನಂತರ ಒಂಟಿಯಾದರು ಭಗವಾನ್. ಬರೋಬ್ಬರಿ 49 ಸಿನಿಮಾಗಳನ್ನು ಈ ಜೋಡಿ ನಿರ್ದೇಶನ ಮಾಡಿದ್ದು ವಿಶೇಷ. ಈ ಜೋಡಿಯ ಮತ್ತೊಂದು ದಾಖಲೆಯೆಂದರೆ 24 ಕಾದಂಬರಿ ಆಧರಿಸಿದ ಸಿನಿಮಾಗಳನ್ನು ಈ ಜೋಡಿ  ನಿರ್ದೇಶನ ಮಾಡಿದೆ.

    ಕನ್ನಡದ ಅಷ್ಟೂ ಸೂಪರ್ ಸ್ಟಾರ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಹೆಗ್ಗಳಿಕೆ ಈ ಜೋಡಿಯದ್ದು. ಜೇಡರ ಬಲೆ, ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಿರಿಕನ್ಯೆ, ಚಂದನದ ಗೊಂಬೆ, ಜೀವನ ಚೈತ್ರ, ಒಡಹುಟ್ಟಿದವರು, ಯಾರಿವನು, ಮುನಿಯನ ಮಾದರಿ ಹೀಗೆ ಅಷ್ಟೂ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ʻನಟಭಯಂಕರʼ ಸಿನಿಮಾ ಬಗ್ಗೆ ಓಂ ಪ್ರಕಾಶ್‌ ರಾವ್‌ ಮಾತು

    ʻನಟಭಯಂಕರʼ ಸಿನಿಮಾ ಬಗ್ಗೆ ಓಂ ಪ್ರಕಾಶ್‌ ರಾವ್‌ ಮಾತು

     

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡೈರೆಕ್ಷನ್ ಮಾಡಲು ನಟಿ ಶ್ರುತಿ ಹರಿಹರನ್ ಸಿದ್ಧತೆ

    ಡೈರೆಕ್ಷನ್ ಮಾಡಲು ನಟಿ ಶ್ರುತಿ ಹರಿಹರನ್ ಸಿದ್ಧತೆ

    ಲೂಸಿಯಾ (Lucia) ಮೂಲಕ ನಾಯಕಿಯಾಗಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿರುವ ನಟಿ ಶ್ರುತಿ ಹರಿಹರನ್ (Shruti Hariharan), ನಿರ್ದೇಶನಕ್ಕೂ (Director) ಮುಂದಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ತಾಯಿಯಾದ ನಂತರ ಸಿನಿಮಾ ರಂಗದಿಂದ ದೂರವಾಗಿದ್ದ ಶ್ರುತಿ, ಇದೀಗ ಮತ್ತೆ ಸಕ್ರೀಯರಾಗಿದ್ದಾರೆ. ಮೂರು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಸದ್ಯದಲ್ಲೇ ಅವರು ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರಂತೆ.

    ಸ್ಟ್ರಾಬೆರಿ, ಈಗ ಮತ್ತು ಸಾರಾಂಶ ಸಿನಿಮಾಗಳಲ್ಲಿ ಮಹತ್ವದ ಪತ್ರಗಳನ್ನು ಮಾಡುತ್ತಿರುವ ಶ್ರುತಿ ಹರಿಹರನ್ ಮುಂದಿನ ದಿನಗಳಲ್ಲಿ ನಿರ್ದೇಶನವನ್ನೂ ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲೇ ಅವರೇ ಹೆಚ್ಚಿನ ಮಾಹಿತಿಯನ್ನೂ ನೀಡಲಿದ್ದಾರೆ. ಈ ಮೂಲಕ ನಟಿಯೊಬ್ಬರು ನಿರ್ದೇಶನಕ್ಕೆ ಇಳಿದ ಯಾದಿಗೆ ಅವರು ಸೇರ್ಪಡೆಯಾಗಲಿದ್ದಾರೆ. ಸಂಪೂರ್ಣ ತಯಾರಿಯೊಂದಿಗೆ ಅಖಾಡಕ್ಕೆ ಇಳಿಯುವ ಮಾತುಗಳನ್ನೂ ಅವರು ಆಡಿದ್ದಾರೆ. ಇದನ್ನೂ ಓದಿ: ಅಪಘಾತವಾಗಿ ಎರಡು ವರ್ಷ: ನಟಿ ರಿಷಿಕಾ ಸಿಂಗ್ ಬದುಕುಳಿದಿದ್ದೇ ಪವಾಡ

    ಕನ್ನಡ ಸಿನಿಮಾ ರಂಗಕಂಡ ಪ್ರತಿಭಾವಂತೆ ಶ್ರುತಿ ಹರಿಹರನ್, ಸಿನಿಮಾ ರಂಗದ ಯಾವುದೇ ಹಿನ್ನೆಲೆ ಇಲ್ಲದೇ, ವಿಭಿನ್ನ ಎನಿಸುವಂತಹ ಚಿತ್ರಗಳಲ್ಲಿ ನಟಿಸಿದವರು. ನಾತಿಚರಾಮಿ ಸಿನಿಮಾದ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಅವರು ಪಡೆದವರು. ಅಲ್ಲದೇ, ಕನ್ನಡ ಸಿನಿಮಾ ರಂಗದ ಹೆಸರಾಂತ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಕನ್ನಡದಲ್ಲಿ ಮಾತ್ರವಲ್ಲ, ಇತರ ಭಾಷೆಗಳ ಚಿತ್ರದಲ್ಲೂ ಅವರು ನಟಿಸಿದ್ದಾರೆ. ವ್ಯಾಪಾರಿ ಮತ್ತು ಕಲಾತ್ಮಕ ಚಿತ್ರಗಳ ಮೂಲಕ ಗುರುತಿಸಿಕೊಂಡ ಪ್ರತಿಭಾನ್ವಿತ ನಟಿ ಕೂಡ ಇವರಾಗಿದ್ದಾರೆ.

    ನಟಿಯಾಗಿ ಸಾಕಷ್ಟು ಹೆಸರು ಮಾಡಿರುವ ಶ್ರುತಿ ಹರಿಹರನ್, ಇದೀಗ ನಿರ್ದೇಶಕಿಯಾಗಿ ಅಭಿಮಾನಿಗಳ ಎದುರು ನಿಲ್ಲುತ್ತಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಸೂಕ್ಷ್ಮ ಕಥೆ ಮತ್ತು ಪಾತ್ರಗಳ ಮೂಲಕವೇ ಗುರುತಿಸಿಕೊಂಡವರು, ತಮ್ಮ ನಿರ್ದೇಶನದ ಸಿನಿಮಾಗೆ ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವುದು ಸದ್ಯಕ್ಕೀರುವ ಕುತೂಹಲ. ಮುಂದಿನ ದಿನಗಳಲ್ಲಿ ಈ ಕುರಿತು ಅವರೇ ಹೇಳಲಿದ್ದಾರಂತೆ. ಅಲ್ಲಿವರೆಗೂ ಕಾಯಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿಗೆ ಶೂಟಿಂಗ್‌ ವೇಳೆ ಅಪಘಾತ: ಆಸ್ಪತ್ರೆಗೆ ದಾಖಲು

    ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿಗೆ ಶೂಟಿಂಗ್‌ ವೇಳೆ ಅಪಘಾತ: ಆಸ್ಪತ್ರೆಗೆ ದಾಖಲು

    ಬಾಲಿವುಡ್ (Bollywood) ನಿರ್ದೇಶಕ, ಕರ್ನಾಟಕ ಮೂಲದ ರೋಹಿತ್ ಶೆಟ್ಟಿ (Rohit Shetty) ಶೂಟಿಂಗ್ ವೇಳೆ ತೀವ್ರ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಹೈದರಾಬಾದ್‌ನಲ್ಲಿ (Hydrabad) ಶೂಟಿಂಗ್ ವೇಳೆ ಈ ಅವಘಡ ಸಂಭವಿಸಿದೆ.

    ಕರಾವಳಿ ಮೂಲದ ಪ್ರತಿಭೆ ರೋಹಿತ್ ಶೆಟ್ಟಿ ಸದ್ಯ `ಇಂಡಿಯನ್ ಪೊಲೀಸ್ ಫೋರ್ಸ್’ (Indian Police Force) ವೆಬ್ ಸರಣಿ ನಿರ್ದೇಶನ ಮಾಡುತ್ತಿದ್ದಾರೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ (Ramoji Filmcity) `ಇಂಡಿಯನ್ ಪೊಲೀಸ್ ಫೋರ್ಸ್’ ವೆಬ್ ಸರಣಿ ಚಿತ್ರೀಕರಣ ನಡೆಯುತ್ತಿದೆ. ಈ ಸರಣಿಯ ಚೇಸಿಂಗ್ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದು ಆಗ ರೋಹಿತ್ ಶೆಟ್ಟಿ ಅವರಿಗೆ ತೀವ್ರ ಏಟಾಗಿದೆ ಎನ್ನಲಾಗಿದೆ.

    ಅವಘಡದ ಬಳಿಕ ತಕ್ಷಣ ಅವರನ್ನು ಸಮೀಪದ ಕಾಮಿನೇನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ರೋಹಿತ್ ಶೆಟ್ಟಿ ಚೇತರಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಸಾನ್ಯ ಎಲಿಮಿನೇಟ್‌ ಆದಮೇಲೆ ಅವಳ ಬೆಲೆ ರೂಪೇಶ್‌ ಶೆಟ್ಟಿಗೆ ಗೊತ್ತಾಯ್ತು: ದೀಪಿಕಾ ದಾಸ್

     

    View this post on Instagram

     

    A post shared by Rohit Shetty (@itsrohitshetty)

    ಅಂದಹಾಗೆ ಇದೇ ಸರಣಿಯ ಚಿತ್ರೀಕರಣ ವೇಳೆ ಈ ಮೊದಲು ನಟ ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಗಾಯಗೊಂಡಿದ್ದರು. ಹಾಗೂ ನಟಿ ಶಿಲ್ಪಾ ಶೆಟ್ಟಿ ಕಾಲಿಗೆ ಏಟು ಮಾಡಿಕೊಂಡಿದ್ದರು. ಇದೀಗ ರೋಹಿತ್ ಆಸ್ಪತ್ರೆ ಸೇರಿದ್ದಾರೆ. ಅಂದಹಾಗೆ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಬೃಹತ್ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಸುಮಾರು 20 ಕೋಟಿಗೂ ಅಧಿಕ ಖರ್ಚು ಮಾಡಿ ಆ್ಯಕ್ಷನ್ ದೃಶ್ಯ ಚಿತ್ರೀಕರಣ ಮಾಡಲಾಗುತ್ತಿದೆ. ಈ ಸರಣಿಯ ಹೈವೋಲ್ಟೇಜ್ ಆ್ಯಕ್ಷನ್ ದೃಶ್ಯ ಮತ್ತು ಕಾರ್ ಚೇಸಿಂಗ್ ಸೀಕ್ವೆನ್ಸ್ ಶೂಟಿಂಗ್ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಲಿವುಡ್ ಸೋಲಿಗೆ ‘ಕೆಜಿಎಫ್ 2’ ಉದಾಹರಣೆ ಕೊಟ್ಟ ನಿರ್ದೇಶಕ ಅನುರಾಗ್ ಕಶ್ಯಪ್

    ಬಾಲಿವುಡ್ ಸೋಲಿಗೆ ‘ಕೆಜಿಎಫ್ 2’ ಉದಾಹರಣೆ ಕೊಟ್ಟ ನಿರ್ದೇಶಕ ಅನುರಾಗ್ ಕಶ್ಯಪ್

    ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್, ಬಾಲಿವುಡ್ ಸೋಲಿಗೆ ತಮ್ಮದೇ ಆದ ಕಾರಣಗಳನ್ನು ನೀಡಿದ್ದಾರೆ. ಅದು ಕನ್ನಡದ ಸೂಪರ್ ಹಿಟ್ ಸಿನಿಮಾ ಕೆಜಿಎಫ್ 2 ಅನ್ನು ಉದಾಹರಣೆಯಾಗಿ ನೀಡಿದ್ದಾರೆ. ಸಂವಾದವೊಂದರಲ್ಲಿ ಮಾತನಾಡಿದ ಅನುರಾಗ್, ಬಾಲಿವುಡ್ ಅನುಕರಣೆಯಿಂದಾಗಿ ಹೀನಾಯವಾಗಿ ಸೋತಿದೆ. ಬರುತ್ತಿರುವ ಸಿನಿಮಾಗಳು ನೆಲಕಚ್ಚುತ್ತಿವೆ. ಅದನ್ನು ಮಾಡಬಾರದು ಎಂದು ಅವರು ಹೇಳಿದ್ದಾರೆ.

    ಕಾಂತಾರ ಮತ್ತು ಪುಷ್ಪ ಸಿನಿಮಾಗಳು ತಮ್ಮ ತಮ್ಮ ನೆಲದ ಕಥೆಯನ್ನು ಹೇಳಿದವು. ಹಾಗಾಗಿ ಗೆದ್ದವು. ಆದರೆ, ಕೆಜಿಎಫ್ 2 ಹಾಗಲ್ಲ. ಅದನ್ನು ಅನುಕರಿಸಲು ಹೋದರೆ ಸೋಲು ಗ್ಯಾರಂಟಿ ಎಂದು ಅವರು ಹೇಳಿದ್ದಾರೆ. ಮರಾಠಿ ಚಿತ್ರರಂಗದ ಉದಾಹರಣೆಯನ್ನೂ ನೀಡಿರುವ ಅವರು, ಸೈರಾಟ್ ಸಿನಿಮಾ ಮರಾಠಿ ಸಿನಿಮಾ ರಂಗದಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡಿತು. ಕಡಿಮೆ ಬಜೆಟ್ ನಲ್ಲಿ ತಗೆದು ಸಿನಿಮಾ, ಬಾಕ್ಸ್ ಆಫೀಸಿನಲ್ಲಿ ಹಿಟ್ ಆಯಿತು. ಆ ಸಿನಿಮಾವನ್ನೇ ಮಾದರಿಯಾಗಿಟ್ಟುಕೊಂಡು ಚಿತ್ರ ಮಾಡಿದರು. ಮುಂದೆ ಏನಾಯಿತು ಎಂದು ಯೋಚಿಸಿ ಅಂದಿದ್ದಾರೆ. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್

    ಬಾಲಿವುಡ್ ಸಿನಿಮಾ ರಂಗ ಕೂಡ ಗೆದ್ದ ಎತ್ತಿನ ಬಾಲ ಹಿಡಿಯುತ್ತದೆ. ಒಂದು ಸಿನಿಮಾ ಗೆದ್ದರೆ ಅದೇ ಮಾದರಿಯ ಚಿತ್ರಗಳನ್ನು ಮಾಡುತ್ತದೆ. ಆದರೆ, ಆ ಫಾರ್ಮುಲಾ ಇತ್ತೀಚಿನ ದಿನಗಳಲ್ಲಿ ಕೆಲಸ ಮಾಡುತ್ತಿಲ್ಲ. ಹಾಗಾಗಿ ಬಾಲಿವುಡ್ ಸಿನಿಮಾಗಳು ಸೋಲುತ್ತಿವೆ. ಸ್ವಂತಿಕೆಯ ಮತ್ತು ತಮ್ಮದೇ ನೆಲದ ಕಥೆಯನ್ನು ಮಾಡಿದರೆ ಚಿತ್ರಗಳು ಗೆಲ್ಲುತ್ತವೆ ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]