Tag: director

  • ವಿಧಾನಸಭೆ ಚುನಾವಣೆ 2023 : ಕುಟುಂಬ ಸಮೇತ ಕಾಳೇನಹಳ್ಳಿಯಲ್ಲಿ ಡಾಲಿ ಮತದಾನ

    ವಿಧಾನಸಭೆ ಚುನಾವಣೆ 2023 : ಕುಟುಂಬ ಸಮೇತ ಕಾಳೇನಹಳ್ಳಿಯಲ್ಲಿ ಡಾಲಿ ಮತದಾನ

    ಕುಟುಂಬ ಸಮೇತ ಸಾಮಾನ್ಯರಂತೆ ಮತದಾನ ಕೇಂದ್ರಕ್ಕೆ ಬಂದ ಡಾಲಿ ಧನಂಜಯ್ (Dolly Dhananjay) ಮತದಾನ (Voting) ಮಾಡಿದ್ದಾರೆ. ಸಹೋದರಿ, ಸಹೋದರ ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಅರಸಿಕೆರೆ ತಾಲ್ಲೂಕು ಕಾಳೇನಹಳ್ಳಿ ಮತದಾನ ಕೇಂದ್ರಕ್ಕೆ ಆಗಮಸಿದ್ದ ಧನಂಜಯ್, ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ.

    ಬಿಳಿ ಶರ್ಟ್ ಹಾಗೂ ಲುಂಗಿ ಧರಿಸಿದ್ದ ಧನಂಜಯ್, ತಾವು ಕಲಿತಿದ್ದ ಶಾಲೆಯಲ್ಲೇ ಮತದಾನ ಮಾಡಿ ಸಂಭ್ರಮಿಸಿದ್ದರು. ಅದೇ ಸಮಯದಲ್ಲಿ ಆಗಮಿಸಿದ್ದ ಅಭಿಮಾನಿಗಳ ಜೊತೆ ಸೆಲ್ಫಿಗೆ ಸಹಕರಿಸಿದರು. ನೆಚ್ಚಿನ ನಟನ ಜೊತೆ ಅನೇಕರು ಫೋಟೋ ತಗೆಸಿಕೊಂಡು ಖುಷಿ ಪಟ್ಟರು. ಮತದಾನ ಎಷ್ಟು ಶ್ರೇಷ್ಠ ಎನ್ನುವ ಕುರಿತು ಡಾಲಿ ಮಾತನಾಡಿದರು.

    ಬೆಳಗ್ಗೆ 7 ಗಂಟೆಯಿಂದಲೇ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಶುರುವಾಗಿದ್ದು, ದಿನದ ಮೊದಲರ್ಧದಲ್ಲೇ ಸ್ಯಾಂಡಲ್ ವುಡ್ (Sandalwood) ನ ಬಹುತೇಕ ನಟ (Actor)-ನಟಿಯರು (Actress) ಹಾಗೂ ತಂತ್ರಜ್ಞರು ಮತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ. ತಮ್ಮ ಹಕ್ಕನ್ನು ಚಲಾಯಿಸುವುದರ ಜೊತೆಗೆ ಅಭಿಮಾನಿಗಳಿಗೆ ಸಂದೇಶವನ್ನೂ ಸಾರಿದ್ದಾರೆ.

    ನಟ ಯಶ್ ಕತ್ರಿಗುಪ್ಪೆಯಲ್ಲಿ ಮತದಾನ ಮಾಡಿದರೆ, ಸುದೀಪ್ ಪುಟ್ಟೇನಹಳ್ಳಿ, ಶಿವರಾಜ್ ಕುಮಾರ್ ಬ್ಯಾಟರಾಯನ ಪುರ (ರಾಚೇನಹಳ್ಳಿ), ರವಿಚಂದ್ರನ್ ರಾಜಾಜಿನಗರ, ಉಪೇಂದ್ರ ಕತ್ರಿಗುಪ್ಪೆ, ಧ್ರುವ ಸರ್ಜಾ ತ್ಯಾಗರಾಜನಗರ(ಶಾಸ್ರ್ತಿ ನಗರ), ರಾಘವೇಂದ್ರ ರಾಜ್ ಕುಮಾರ್  ಸದಾಶಿವನಗರ, ಅಶ್ವಿನಿ ಪುನೀತ್ ರಾಜ್ ಕುಮಾರ್ ಸದಾಶಿವನಗರ, ರಾಧಿಕ ಪಂಡಿತ್ ದೇವಯ್ಯ ಪಾರ್ಕ್, ಸುಧಾರಾಣಿ ಮಲ್ಲೇಶ್ವರಂ, ರಕ್ಷಿತಾ ಪ್ರೇಮ್ ಚಂದ್ರ ಲೇಔಟ್ ಪ್ರೇಮ್ ಚಂದ್ರ ಲೇಔಟ್ ನಲ್ಲಿ ತಮ್ಮ ಮತದಾನ ಮಾಡಿದ್ದಾರೆ.

    ಅಮೂಲ್ಯ ಆರ್ ಆರ್ ನಗರದಲ್ಲಿ ಮತದಾನ ಮಾಡಿದರೆ, ನೆನಪಿರಲಿ ಪ್ರೇಮ್ ಆರ್ ಆರ್ ನಗರ,  ರಚಿತಾ ರಾಮ್ ಆರ್ ಆರ್ ನಗರ, ಮೇಘನಾ ಸರ್ಜಾ ಜೆಪಿ ನಗರ, ತಾರಾ ಜೆ ಪಿ ನಗರ, ದ್ವಾರಕೀಶ್ ಬೊಮ್ಮನಹಳ್ಳಿ, ಸೃಜನ್ ಲೋಕೇಶ್  ಕತ್ರಿಗುಪ್ಪೆ, ಅಜಯ್ ರಾವ್ ರಾಜಾಜಿನಗರ, ಬಿ.ಸರೋಜದೇವಿ ಮಲ್ಲೇಶ್ವರಂ, ಹರ್ಷಿಕಾ ಪೂಣಚ್ಚ ಕೆ ಆರ್ ಪುರ, ಪೂಜಾ ಗಾಂಧಿ  ಕತ್ರಿಗುಪ್ಪೆ, ಯೋಗರಾಜ್ ಭಟ್ ಗಿರಿ ನಗರ, ಅನಂತ್ ನಾಗ್  ಮಲ್ಲೇಶ್ವರಂ ಮತ ಕೇಂದ್ರಗಳಲ್ಲಿ ತಮ್ಮ ಮತದಾನ ಮಾಡಿದ್ದಾರೆ. ಇದನ್ನೂ ಓದಿ:ಶಾಹಿದ್ ಕಪೂರ್ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್

    ಚಂದನ್ ಶೆಟ್ಟಿ ನಾಗರಭಾವಿಯಲ್ಲಿ ಮತದಾನ ಮಾಡಿದರೆ, ಕಾರುಣ್ಯ ರಾಮ್ ಆರ್ ಆರ್ ನಗರ, ಅವಿನಾಶ್  ಆರ್ ಆರ್ ನಗರ, ಜಗ್ಗೇಶ್ ಮಲ್ಲೇಶ್ವರಂ, ಶರಣ್ ಹೊಸಕೆರೆಹಳ್ಳಿ, ದುನಿಯಾ ವಿಜಯ್ ಕತ್ತಿಗುಪ್ಪೆ,  ಸಾಧು ಕೋಕಿಲ ನಾಗರಭಾವಿ, ಅರ್ಜುನ್ ಜನ್ಯ ಹೆಬ್ಬಾಳ, ಶ್ರೀಮುರುಳಿ ವಸಂತನಗರ, ವಿಜಯ್ ರಾಘವೇಂದ್ರ ಯಲಹಂಕ, ಸಪ್ತಮಿಗೌಡ ಜೆ ಪಿ ನಗರ, ರಮೇಶ್ ಅರವಿಂದ್ ಪದ್ಮನಾಭ ನಗರ, ಮಾಲಾಶ್ರೀ ಶಿವಾಜಿನಗರದಲ್ಲಿ ಮತ ಚಲಾವಣೆ ಮಾಡಿದ್ದಾರೆ.

    ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ಆರ್ ಆರ್ ನಗರದಲ್ಲಿ ಮತದಾನ ಮಾಡಿದರೆ, ಶ್ರುತಿ ಹೊಸಕೆರೆ ಹಳ್ಳಿ,  ಭಾರತಿ ಜಯನಗರ, ಅನಿರುದ್ದ್ ಜಯನಗರ, ಅಭಿಷೇಕ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಜೆ ಪಿ ನಗರ, ಪ್ರಶಾಂತ್ ನೀಲ್ ವಸಂತನಗರದಲ್ಲಿ ತಮ್ಮ ಮತದಾನದ ಹಕ್ಕುಗಳನ್ನು ಚಲಾಯಿಸಿದ್ದಾರೆ.

    ರಿಷಬ್ ಶೆಟ್ಟಿ ಕೆರಾಡಿ, ಕುಂದಾಪುರ, ರಕ್ಷಿತ್ ಶೆಟ್ಟಿ ಉಡುಪಿ, ರಾಜ್ ಬಿ ಶೆಟ್ಟಿ ಉಡುಪಿ, ನಿಖಿಲ್ ಕುಮಾರಸ್ವಾಮಿ ಕೇತಗನಹಳ್ಳಿ (ಬಿಡದಿ), ಡಾಲಿ ಧನಂಜಯ ಅರಸೀಕೆರೆ, ಅಶಿಕಾ ರಂಗನಾಥ್ ತುಮಕೂರು, ಚಿಕ್ಕಣ್ಣ ಮೈಸೂರು, ಲೀಲಾವತಿ ಸೋಲದೇವನಹಳ್ಳಿ, ವಿನೋದ್ ರಾಜ್ ಸೋಲದೇವನ ಹಳ್ಳಿ, ದೊಡ್ಡಣ್ಣ ಬಿದರುಕಲ್ಲು ಮತದಾನ ಮಾಡಿದ್ದಾರೆ.

  • ವಿಧಾನಸಭೆ ಚುನಾವಣೆ 2023 : ಮತದಾನ ಮಾಡಿದ ಸ್ಯಾಂಡಲ್ ವುಡ್ ಸುಂದರಿಯರು

    ವಿಧಾನಸಭೆ ಚುನಾವಣೆ 2023 : ಮತದಾನ ಮಾಡಿದ ಸ್ಯಾಂಡಲ್ ವುಡ್ ಸುಂದರಿಯರು

    ಬೆಳಗ್ಗೆ 7 ಗಂಟೆಯಿಂದಲೇ ವಿಧಾನಸಭೆ ಚುನಾವಣೆಯ ಮತದಾನ (Voting) ಪ್ರಕ್ರಿಯೆ ಶುರುವಾಗಿದ್ದು, ದಿನದ ಮೊದಲರ್ಧದಲ್ಲೇ ಸ್ಯಾಂಡಲ್ ವುಡ್ (Sandalwood) ನ ಬಹುತೇಕ ನಟ (Actor) -ನಟಿಯರು (Actress)ಹಾಗೂ ತಂತ್ರಜ್ಞರು ಮತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ. ತಮ್ಮ ಹಕ್ಕನ್ನು ಚಲಾಯಿಸುವುದರ ಜೊತೆಗೆ ಅಭಿಮಾನಿಗಳಿಗೆ ಸಂದೇಶವನ್ನೂ ಸಾರಿದ್ದಾರೆ.

    ಸ್ಯಾಂಡಲ್ ವುಡ್ ಬೆಡಗಿಯರಾದ ಅಮೂಲ್ಯ, ಆಶಾ ಭಟ್, ಮಿಲನಾ ನಾಗರಾಜ್, ಅನಿತಾ ಭಟ್, ಅಮೃತಾ ಅಯ್ಯಂಗಾರ್, ಮೇಘನಾ ಗಾಂವ್ಕರ್, ಸುಕೃತಾ ವಾಗ್ಲೆ, ಹರಿಪ್ರಿಯಾ, ರಚಿತಾ ರಾಮ್, ಕಾರುಣ್ಯ ರಾಮ್ ಸೇರಿದಂತೆ ಸಾಕಷ್ಟು ನಟಿಯರು ಬೆಳಗ್ಗೆಯೇ ಮತದಾನ ಮಾಡಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಮತದಾನದ ಮಹತ್ವವನ್ನು ಸಾರಿದ್ದಾರೆ.

    ನಟ ಯಶ್ ಕತ್ರಿಗುಪ್ಪೆಯಲ್ಲಿ ಮತದಾನ ಮಾಡಿದರೆ, ಸುದೀಪ್ ಪುಟ್ಟೇನಹಳ್ಳಿ, ಶಿವರಾಜ್ ಕುಮಾರ್ ಬ್ಯಾಟರಾಯನ ಪುರ (ರಾಚೇನಹಳ್ಳಿ), ರವಿಚಂದ್ರನ್ ರಾಜಾಜಿನಗರ, ಉಪೇಂದ್ರ ಕತ್ರಿಗುಪ್ಪೆ, ಧ್ರುವ ಸರ್ಜಾ ತ್ಯಾಗರಾಜನಗರ(ಶಾಸ್ರ್ತಿ ನಗರ), ರಾಘವೇಂದ್ರ ರಾಜ್ ಕುಮಾರ್  ಸದಾಶಿವನಗರ, ಅಶ್ವಿನಿ ಪುನೀತ್ ರಾಜ್ ಕುಮಾರ್ ಸದಾಶಿವನಗರ, ರಾಧಿಕ ಪಂಡಿತ್ ದೇವಯ್ಯ ಪಾರ್ಕ್, ಸುಧಾರಾಣಿ ಮಲ್ಲೇಶ್ವರಂ, ರಕ್ಷಿತಾ ಪ್ರೇಮ್ ಚಂದ್ರ ಲೇಔಟ್ ಪ್ರೇಮ್ ಚಂದ್ರ ಲೇಔಟ್ ನಲ್ಲಿ ತಮ್ಮ ಮತದಾನ ಮಾಡಿದ್ದಾರೆ.

    ಅಮೂಲ್ಯ ಆರ್ ಆರ್ ನಗರದಲ್ಲಿ ಮತದಾನ ಮಾಡಿದರೆ, ನೆನಪಿರಲಿ ಪ್ರೇಮ್ ಆರ್ ಆರ್ ನಗರ,  ರಚಿತಾ ರಾಮ್ ಆರ್ ಆರ್ ನಗರ, ಮೇಘನಾ ಸರ್ಜಾ ಜೆಪಿ ನಗರ, ತಾರಾ ಜೆ ಪಿ ನಗರ, ದ್ವಾರಕೀಶ್ ಬೊಮ್ಮನಹಳ್ಳಿ, ಸೃಜನ್ ಲೋಕೇಶ್  ಕತ್ರಿಗುಪ್ಪೆ, ಅಜಯ್ ರಾವ್ ರಾಜಾಜಿನಗರ, ಬಿ.ಸರೋಜದೇವಿ ಮಲ್ಲೇಶ್ವರಂ, ಹರ್ಷಿಕಾ ಪೂಣಚ್ಚ ಕೆ ಆರ್ ಪುರ, ಪೂಜಾ ಗಾಂಧಿ  ಕತ್ರಿಗುಪ್ಪೆ, ಯೋಗರಾಜ್ ಭಟ್ ಗಿರಿ ನಗರ, ಅನಂತ್ ನಾಗ್  ಮಲ್ಲೇಶ್ವರಂ ಮತ ಕೇಂದ್ರಗಳಲ್ಲಿ ತಮ್ಮ ಮತದಾನ ಮಾಡಿದ್ದಾರೆ.

    ಚಂದನ್ ಶೆಟ್ಟಿ ನಾಗರಭಾವಿಯಲ್ಲಿ ಮತದಾನ ಮಾಡಿದರೆ, ಕಾರುಣ್ಯ ರಾಮ್ ಆರ್ ಆರ್ ನಗರ, ಅವಿನಾಶ್  ಆರ್ ಆರ್ ನಗರ, ಜಗ್ಗೇಶ್ ಮಲ್ಲೇಶ್ವರಂ, ಶರಣ್ ಹೊಸಕೆರೆಹಳ್ಳಿ, ದುನಿಯಾ ವಿಜಯ್ ಕತ್ತಿಗುಪ್ಪೆ,  ಸಾಧು ಕೋಕಿಲ ನಾಗರಭಾವಿ, ಅರ್ಜುನ್ ಜನ್ಯ ಹೆಬ್ಬಾಳ, ಶ್ರೀಮುರುಳಿ ವಸಂತನಗರ, ವಿಜಯ್ ರಾಘವೇಂದ್ರ ಯಲಹಂಕ, ಸಪ್ತಮಿಗೌಡ ಜೆ ಪಿ ನಗರ, ರಮೇಶ್ ಅರವಿಂದ್ ಪದ್ಮನಾಭ ನಗರ, ಮಾಲಾಶ್ರೀ ಶಿವಾಜಿನಗರದಲ್ಲಿ ಮತ ಚಲಾವಣೆ ಮಾಡಿದ್ದಾರೆ.

    ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ಆರ್ ಆರ್ ನಗರದಲ್ಲಿ ಮತದಾನ ಮಾಡಿದರೆ, ಶ್ರುತಿ ಹೊಸಕೆರೆ ಹಳ್ಳಿ,  ಭಾರತಿ ಜಯನಗರ, ಅನಿರುದ್ದ್ ಜಯನಗರ, ಅಭಿಷೇಕ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಜೆ ಪಿ ನಗರ, ಪ್ರಶಾಂತ್ ನೀಲ್ ವಸಂತನಗರದಲ್ಲಿ ತಮ್ಮ ಮತದಾನದ ಹಕ್ಕುಗಳನ್ನು ಚಲಾಯಿಸಿದ್ದಾರೆ.

    ರಿಷಬ್ ಶೆಟ್ಟಿ ಕೆರಾಡಿ, ಕುಂದಾಪುರ, ರಕ್ಷಿತ್ ಶೆಟ್ಟಿ ಉಡುಪಿ, ರಾಜ್ ಬಿ ಶೆಟ್ಟಿ ಉಡುಪಿ, ನಿಖಿಲ್ ಕುಮಾರಸ್ವಾಮಿ ಕೇತಗನಹಳ್ಳಿ (ಬಿಡದಿ), ಡಾಲಿ ಧನಂಜಯ ಅರಸೀಕೆರೆ, ಅಶಿಕಾ ರಂಗನಾಥ್ ತುಮಕೂರು, ಚಿಕ್ಕಣ್ಣ ಮೈಸೂರು, ಲೀಲಾವತಿ ಸೋಲದೇವನಹಳ್ಳಿ, ವಿನೋದ್ ರಾಜ್ ಸೋಲದೇವನ ಹಳ್ಳಿ, ದೊಡ್ಡಣ್ಣ ಬಿದರುಕಲ್ಲು ಮತದಾನ ಮಾಡಿದ್ದಾರೆ.

  • ಖ್ಯಾತ ನಟ, ನಿರ್ದೇಶಕ ಮನೋಬಾಲಾ ನಿಧನ

    ಖ್ಯಾತ ನಟ, ನಿರ್ದೇಶಕ ಮನೋಬಾಲಾ ನಿಧನ

    ಮಿಳಿನ (Tamil) ಖ್ಯಾತ ನಿರ್ದೇಶಕ (Director) ಹಾಗೂ ನಟ ಮನೋಬಾಲಾ (Manobala) ಇಂದು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಚೆನ್ನೈನ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆಲ ದಿನಗಳಿಂದ ಅವರು ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು.

    ಭಾರತಿರಾಜ ಅವರ ‘ಪುತಿಯ ವಾರ್ಪುಗಳ್’ ಚಿತ್ರದ ಮೂಲಕ ನಟರಾಗಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದ ಮನೋಬಾಲಾ, ಆನಂತರ ಭಾರತಿಪುರ ನಿರ್ದೇಶನದ ಚಿತ್ರಗಳಿಗೆ ಸಹಾಯ ನಿರ್ದೇಶಕರೂ ಆಗಿದ್ದರು. ಈವರೆಗೂ ನಾಲ್ಕು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾದಲ್ಲಿ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಇದನ್ನೂ ಓದಿ:ಮಾಲ್ಡೀವ್ಸ್‌ನಲ್ಲಿ ಮಲಯಾಳಿ ಸುಂದರಿ ಪ್ರಿಯಾ

    ಸಾಹಸ ಸಿಂಹ ವಿಷ್ಣುವರ್ಧನ್ ಅವರ ಡಿಸೆಂಬರ್ 31 ಸಿನಿಮಾಗೆ ಮನೋಬಾಲಾ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಕನ್ನಡದ ನಂಟು ಕೂಡ ಅವರಿಗಿತ್ತು. ಪತ್ನಿ ಉಷಾ ಮತ್ತು ಪುತ್ರ ಹರೀಶ್ ಅವರನ್ನು ಅಗಲಿರುವ ಮನೋಬಾಲಾಗೆ ದಕ್ಷಿಣದ ಸಿನಿಮಾ ರಂಗ ಕಂಬನಿ ಮಿಡಿದಿದೆ. ಅನೇಕ ಕಲಾವಿದರು ಹಾಗೂ ತಂತ್ರಜ್ಞರು ಅಂತಿಮ ದರ್ಶನ ಪಡೆದಿದ್ದಾರೆ.

  • ನಟ, ನಿರ್ದೇಶಕ ಟಪೋರಿ ಸತ್ಯ ನಿಧನ

    ನಟ, ನಿರ್ದೇಶಕ ಟಪೋರಿ ಸತ್ಯ ನಿಧನ

    ಸ್ಯಾಂಡಲ್‌ವುಡ್‌ ನಟ ಹಾಗೂ ನಿರ್ದೇಶಕ ಟಪೋರಿ ಸತ್ಯ (Tapori Sathya) (45) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

    ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಟಪೋರಿ ಸತ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಪತ್ನಿ, ಮೂವರು ಹೆಣ್ಣುಮಕ್ಕಳನ್ನ ಅಗಲಿದ್ದಾರೆ. ಇದನ್ನೂ ಓದಿ: ಸುಳ್ಳು ಸುದ್ದಿ ಬರೆದ ಸಿನಿಮಾ ವಿಶ್ಲೇಷಕನಿಗೆ ಚಳಿ ಬಿಡಿಸಿದ ನಟಿ ಊರ್ವಶಿ ರೌಟೇಲಾ

    ಟಪೋರಿ ಸತ್ಯ ಅವರು ಮನೆಗೆ ಆಧಾರವಾಗಿದ್ದರು. ಅವರ ನಿಧನದಿಂದ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ. ಬನಶಂಕರಿ ಮೂರನೇ ಹಂತದಲ್ಲಿ ಇರುವ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

    ಟಪೋರಿ ಸತ್ಯ ಅವರು ನಂದ ಲವ್ಸ್ ನಂದಿತಾ ಸಿನಿಮಾ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ‘ಮೇಳ’ ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ: ರಜನಿಕಾಂತ್ ಜೊತೆ ನಟಿಸುವ ಚಾನ್ಸ್ ಸಿಕ್ಕಿದ್ದು ಹೇಗೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ ಅವಿನಾಶ್

  • ಬಿಗ್ ಬಾಸ್ ಆಯ್ತು, ಈಗೇನ್ ಮಾಡ್ತಿದ್ದಾರೆ ರಾಕೇಶ್ ಅಡಿಗ?

    ಬಿಗ್ ಬಾಸ್ ಆಯ್ತು, ಈಗೇನ್ ಮಾಡ್ತಿದ್ದಾರೆ ರಾಕೇಶ್ ಅಡಿಗ?

    ‘ಜೋಶ್’ (Josh) ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ನಟ ರಾಕೇಶ್ ಅಡಿಗ (Bigg Boss Kannada) ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಶೈಲಿಯಲ್ಲಿ ಮೋಡಿ ಮಾಡಿದ್ದರು. ಬಿಗ್ ಬಾಸ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ದೊಡ್ಮನೆಯ ಆಟದ ಬಳಿಕ ಇದೀಗ ಏನ್ಮಾಡ್ತಿದ್ದಾರೆ? ತಮ್ಮ ಮುಂದಿನ ಸಿನಿಮಾ ಯಾವುದು? ಎಂಬುದನ್ನ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ರಾಕೇಶ್ ಅಡಿಗ ಹಂಚಿಕೊಂಡಿದ್ದಾರೆ.

    ಆಲ್ಬಂ ಸಾಂಗ್, ಜೋಶ್, ಯಾರೇ ಕೂಗಾಡಲಿ, ಮಂದಹಾಸ, ಮನಸಾಲಜಿ, ಅಲೆಮಾರಿ, ನಂದಗೋಕುಲ ಸೇರಿದಂತೆ ಹಲವು ಸಿನಿಮಾಗಳಲ್ಲಿ ರಾಕೇಶ್ ಅಡಿಗ ನಟಿಸಿದ್ದರು. ಆದರೆ ರಾಕೇಶ್ ಅಡಿಗ ಕೆರಿಯರ್‌ಗೆ ತಿರುವು ಕೊಟ್ಟಿದ್ದು ಬಿಗ್ ಬಾಸ್ ಶೋ. ಬಿಗ್ ಬಾಸ್ ಒಟಿಟಿ- ಟಿವಿ ಬಿಗ್ ಬಾಸ್ ಮೂಲಕ ಅಪಾರ ಅಭಿಮಾನಿಗಳ ಮನ ಗೆದ್ದರು. ಸೀಸನ್ 9ರ ಬಿಗ್ ಬಾಸ್‌ನಲ್ಲಿ ರಾಕೇಶ್ ಅಡಿಗ ರನ್ನರ್ ಅಪ್ ಪಟ್ಟ ಅಲಂಕರಿಸಿದ್ದರು. ಇದನ್ನೂ ಓದಿ:ಹಾಲಿವುಡ್ ‘ಸಿಟಾಡೆಲ್’ ಪ್ರೀಮಿಯರ್‌ನಲ್ಲಿ ಸಮಂತಾ

     

    View this post on Instagram

     

    A post shared by Rakesh Adiga (@rakesh_freespirit)

    ರಾಕೇಶ್ ಅಡಿಗ ಅವರು ಇದೀಗ ‘ಲೈಪ್ ಆಫ್ ಕಾಕ್ರೋಚ್’ (Life Of  Cockroach) ಎಂಬ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾ ಮೂಲಕ 4 ವರ್ಷಗಳ ನಂತರ ಮತ್ತೆ ಸಿನಿಮಾಗೆ ಕಂಬ್ಯಾಕ್ ಆಗ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮೇ ತಿಂಗಳಲ್ಲಿ ಶುರುವಾಗಲಿದೆ. ಹೀರೋ ಆಗಿ ಮಾತ್ರವಲ್ಲ, ನಿರ್ದೇಶನದ ಜವಾಬ್ದಾರಿ ಕೂಡ ರಾಕೇಶ್ ಕೈಗೆತ್ತಿಕೊಂಡಿದ್ದಾರೆ. ಸದ್ಯ ‘ಲೈಪ್ ಆಫ್ ಕಾಕ್ರೋಚ್’ ಸಿನಿಮಾದ ಟೀಸರ್ ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ.

    ಇನ್ನೂ ಸಿನಿಮಾ ಜೊತೆಗೆ ಅಧ್ಯಾತ್ಮ, ವ್ಯಕ್ತಿತ್ವ ವಿಕಾಸನದ ಕುರಿತು ಯೂಟ್ಯೂಬ್ ಚಾನೆಲ್ ಮಾಡಲಿದ್ದಾರೆ. ಅದಕ್ಕಾಗಿ ಸೂಕ್ತ ತಯಾರಿ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. ಸದ್ಯದಲ್ಲಿ ಈ ಬಗ್ಗೆ ನಟ ರಾಕೇಶ್ ಅಪ್‌ಡೇಟ್ ಹಂಚಿಕೊಳ್ಳಲಿದ್ದಾರೆ.

  • Exclusive: ‘ಭೀಮ’ ಚಿತ್ರೀಕರಣದ ವೇಳೆ ದುನಿಯಾ ವಿಜಯ್ ಕಾಲಿಗೆ ಪೆಟ್ಟು

    Exclusive: ‘ಭೀಮ’ ಚಿತ್ರೀಕರಣದ ವೇಳೆ ದುನಿಯಾ ವಿಜಯ್ ಕಾಲಿಗೆ ಪೆಟ್ಟು

    ಟ ಕಮ್ ನಿರ್ದೇಶಕ ದುನಿಯಾ ವಿಜಯ್ ‘ಸಲಗ’ (Salaga) ಸೂಪರ್ ಸಕ್ಸಸ್ ನಂತರ ‘ಭೀಮ’ (Bheema) ಸಿನಿಮಾವನ್ನ ಕೈಗೆತ್ತಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ದುನಿಯಾವಿಜಯ್ ಕಾಲಿಗೆ ಪೆಟ್ಟು ಬಿದ್ದಿದೆ. ಗಾಯದ ನೋವಿನ ನಡುವೆಯೇ ವಿಜಯ್ ‘ಭೀಮ’ ಚಿತ್ರದ ಶೂಟಿಂಗ್ ಮುಂದುವರೆಸಿದ್ದಾರೆ. ಈ ಘಟನೆ ಬಗ್ಗೆ ನಿರ್ಮಾಪಕ ಕೃಷ್ಣ ಸಾರ್ಥಕ್ (Krishna Sarthak) ಪಬ್ಲಿಕ್ ಟಿವಿ ಡಿಜಿಟಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ನಡುವೆ ಕ್ರಿಕೆಟ್ ವೀಕ್ಷಿಸಿದ ಧನುಷ್, ಶಿವಣ್ಣ

    ಕನ್ನಡ ಸಿನಿಮಾ ರಂಗದ ಪ್ರತಿಭಾನ್ವಿತ ನಟ ದುನಿಯಾ ವಿಜಯ್ (Duniya Vijay) ಅವರು ನಿರ್ದೇಶಕನಾಗಿಯೂ ಸಕ್ಸಸ್ ಕಂಡವರು. ಮೊದಲ ಚಿತ್ರ ಸಲಗ ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ಡೈರೆಕ್ಟರ್ ಆಗಿಯೂ ಸಕ್ಸಸ್ ಕಂಡರು. ಈಗ ಭೀಮ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ. ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಅವರು ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.

     

    View this post on Instagram

     

    A post shared by Mohan Salaga (@mohan_salaga__)

    ‘ಭೀಮ’ (Bheema) ಚಿತ್ರದ ಚಿತ್ರೀಕರಣ (Shooting) ಬಹುಬಿರುಸಿನಿಂದ ಸಾಗುತ್ತಿತ್ತು. ಚೇತನ್ ಡಿಸೋಜ ಅವರ ನಿರ್ದೇಶನದಲ್ಲಿ ಆಕ್ಷನ್ ದೃಶ್ಯಗಳು ನಡೆಯುತ್ತಿದ್ದವು. ಆದರೆ ಇದೆ ಬುಧವಾರ (ಏಪ್ರಿಲ್ 12) ಆಕ್ಷನ್ ದೃಶ್ಯವೊಂದರಲ್ಲಿ ಅಭಿನಯಿಸುವಾಗ ವಿಜಿ ಅವರ ಬಲಗಾಲಿಗೆ ಏಟು ಬೀಳುತ್ತದೆ. ಕಾಲಿಗೆ ಬಲವಾದ ಪೆಟ್ಟು ಬಿದ್ದು, ನೋವು ಅನುಭವಿಸುತ್ತಿದ್ದರೂ ಕೂಡ, ನಿರ್ದೇಶಕನಾಗಿ ತಂಡವನ್ನ ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದ ದುನಿಯಾ ವಿಜಿ ಅವರು, ಆ ನೋವಿನ ನಡುವೆಯೂ ಕೂಡ ಚಿತ್ರೀಕರಣ ಮುಂದುವರೆಸಿದ್ದಾರೆ. ಈ ಬಗ್ಗೆ ಭೀಮ ನಿರ್ಮಾಪಕ ಕೃಷ್ಣ ಸಾರ್ಥಕ್ ಮಾತನಾಡಿ, ಇನ್ನು 40 ದಿನಗಳ ಚಿತ್ರೀಕರಣ ಬಾಕಿಯಿದೆ. ನಾಲ್ಕು ಬಹುಮುಖ್ಯ ಭಾಗಗಳ ಚಿತ್ರೀಕರಣ ನಡೆಯುತ್ತಿದೆ. ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಕಳೆದ ವಾರ ನಟ ವಿಜಯ್ ಅವರ ಬಲಗಾಲಿಗೆ ಏಟು ಬಿದ್ದಿತ್ತು. ಸ್ಥಳದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದು, ನೋವಿನ ನಡುವೆಯೇ ಚಿತ್ರೀಕರಣ ಮಾಡ್ತಿದ್ದಾರೆ. ನಟ ವಿಜಯ್ ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

    ‘ಭೀಮ’ನ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಹೆಚ್ಚಿನ ನಿರೀಕ್ಷೆಗಳನ್ನು ಕೂಡ ಈ ಚಿತ್ರ ತನ್ನ ಮೇಲೆ ಹೊತ್ತಿದೆ. ‘ಸಲಗ’ಕ್ಕೆ ಸಂಗೀತ ನೀಡಿ, ಮೌಲ್ಯ ಹೆಚ್ಚಿಸಿದ್ದ ಚರಣ್ ರಾಜ್ ಅವರೇ ‘ಭೀಮ’ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. ರಂಗಭೂಮಿಯಿದ ಬಂದಿರುವಂತಹ ಅಶ್ವಿನಿ ಅವರು ಚಿತ್ರದ ನಾಯಕಿಯಾಗಿದ್ದು, ಜೊತೆಗೆ ಗೋಪಾಲ ಕೃಷ್ಣ ದೇಶಪಾಂಡೆ, ಗಿಲಿಗಿಲಿ ಚಂದ್ರು, ಕಾಕ್ರೋಚ್ ಸುಧಿ, ಕಲ್ಯಾಣಿ ರಾಜು, ಡ್ರಾಗನ್ ಮಂಜು ಮುಂತಾದವರು ಕಥೆಯ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ.‌

    ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್

  • ನಟ ಅಜಿತ್ ಸಿನಿಮಾದಿಂದ ಹೊರನಡೆದ ನಯನತಾರಾ ಪತಿ

    ನಟ ಅಜಿತ್ ಸಿನಿಮಾದಿಂದ ಹೊರನಡೆದ ನಯನತಾರಾ ಪತಿ

    ಕಾಲಿವುಡ್‌ನ (Kollywood) ಪ್ರತಿಭಾನ್ವಿತ ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ಅವರು ಇತ್ತೀಚಿಗೆ ಸೂಪರ್ ಸ್ಟಾರ್ ಅಜಿತ್‌ಗೆ (Ajith) ನಿರ್ದೇಶನ ಮಾಡೋದಾಗಿ ಅನೌನ್ಸ್ ಮಾಡಿದ್ದರು. ಇದೀಗ ಶೂಟಿಂಗ್ ಚಾಲನೆ ನೀಡುವ ವೇಳೆಗೆ ಅಜಿತ್ ಸಿನಿಮಾವನ್ನು (Ajith 62) ನಯನತಾರಾ (Nayanatara) ಪತಿ ಕೈಬಿಟ್ಟಿದ್ದಾರೆ. ನಿರ್ಮಾಪಕರು ಕಥೆ ಬದಲಾವಣೆ ಮಾಡಿ ಅಂದಿದ್ದಕ್ಕೆ ಚಿತ್ರದಿಂದ ಹೊರನಡೆದಿದ್ದಾರೆ. ಈ ಬಗ್ಗೆ ಸ್ವತಃ ನಿರ್ದೇಶಕ ವಿಘ್ನೇಶ್ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕ್ರಿಕೆಟರ್ ಆಗುವ ಕನಸು ಕಂಡ ಬಡ ಹುಡುಗಿಗೆ ನಟ ಅರ್ಜುನ್ ಕಪೂರ್ ಸಾಥ್

    ಅಜಿತ್‌ಗೆ ಆ್ಯಕ್ಷನ್ ಕಟ್ ಹೇಳ್ತಿರೋದಕ್ಕೆ ವಿಘ್ನೇಶ್ ಸಂತಸ ವ್ಯಕ್ತಪಡಿಸಿದ್ದರು. ಈಗ ಸಡನ್ ಆಗಿ ಸಿನಿಮಾ ಕೈಬಿಟ್ಟಿರೋದು ಯಾಕೆ ಎಂಬುದಕ್ಕೆ ಉತ್ತರ ನೀಡಿದ್ದಾರೆ. ಸಿನಿಮಾ ನಿರ್ಮಾಪಕರಿಗೆ ಕಥೆಯಲ್ಲಿ ಕೊಂಚ ಬದಲಾವಣೆ ಬೇಕಿತ್ತಂತೆ, ಸಣ್ಣ ಪುಟ್ಟ ಬದಲಾವಣೆ ಮಾಡಬಹುದು. ಆದರೆ ಸೆಕೆಂಡ್ ಹಾಫ್ ಫುಲ್ ಬದಲಾಯಿಸುವುದಕ್ಕೆ ಆಗಲ್ಲ ಎಂದು ವಿಘ್ನೇಶ್ ಪ್ರಾಜೆಕ್ಟ್ ಕೈ ಬಿಡುವ ಮನಸ್ಸು ಮಾಡಿದ್ದಾರೆ. ಸಹಿ ಮಾಡಿದ ಮೇಲೆ ನಮ್ಮ ನಿರ್ಮಾಪಕರು ಕಥೆಯಲ್ಲಿ ಬದಲಾವಣೆ ಬೇಕು ಎಂದು ಹೇಳುತ್ತಾರೆ. ಸಣ್ಣ ಪುಟ್ಟ ಬದಲಾವಣೆ ಅಂದರೆ ಯೋಚನೆ ಮಾಡಬಹುದಿತ್ತು. ಆದರೆ ಸೆಕೆಂಡ್ ಹಾಫ್ ಸಂಪೂರ್ಣ ಬದಲಾಯಿಸಿ ಎಂದು ಒತ್ತಾಯ ಮಾಡುತ್ತಿದ್ದರು. ಸೆಕೆಂಡ್ ಹಾಫ್‌ನಲ್ಲಿ ಬರುವುದೇ ಮುಖ್ಯವಾದ ಕಥೆ ಅದೇ ಬೇಡ ಅಂದರೆ ಹೇಗೆ? ನನ್ನ ಕಥೆಗೆ ಬೆಲೆ ಎಲ್ಲಿದೆ ಎಂದು ವಿಘ್ನೇಶ್ ಮಾತನಾಡಿದ್ದಾರೆ.

    ನನ್ನ ಕಥೆಯನ್ನು ನಾನು ಬದಲಾಯಿಸುವುದಿಲ್ಲ. ತಲಾ ಅಜಿತ್ ಕುಮಾರ್ ಸರ್ ಜೊತೆ ಏನೂ ಸಮಸ್ಯೆ ಇರಲಿಲ್ಲ ಪ್ರತಿಯೊಂದು ಸೂಪರ್ ಆಗಿತ್ತು. ಆದರೆ ನಿರ್ಮಾಪಕರು ಕಿರಿಕಿರಿ ಮಾಡಿಬಿಟ್ಟರು. ನಿರ್ಮಾಪಕರ ಡಿಮ್ಯಾಂಡ್‌ನ ಕೇಳಬಹುದು. ಆದರೆ ಇಡೀ ಕಥೆ ಬದಲಾಯಿಸಬೇಕು ಅಂದ್ರೆ ಯಾಕೆ ನಮ್ಮ ಕತೆಯನ್ನು ಆರಂಭದಲ್ಲಿ ಒಪ್ಪಿಕೊಳ್ಳಬೇಕು? ನಾನು ಬದಲಾಯಿಸುವುದಿಲ್ಲ ಎಂದು ಹೇಳಿ ಹೊರ ಬಂದೆ ಎಂದು ವಿಘ್ನೇಶ್ ಹೇಳಿದ್ದಾರೆ.

  • ಚಲನಚಿತ್ರ ನಿರ್ಮಾಣ ನಿರ್ವಾಹಕರ ಸಂಘಕ್ಕೆ ಸೋಮಶೇಖರ್ ನೂತನ ಸಾರಥಿ

    ಚಲನಚಿತ್ರ ನಿರ್ಮಾಣ ನಿರ್ವಾಹಕರ ಸಂಘಕ್ಕೆ ಸೋಮಶೇಖರ್ ನೂತನ ಸಾರಥಿ

    ರ್ನಾಟಕ ಚಲನಚಿತ್ರ (Film) ನಿರ್ಮಾಣ ನಿರ್ವಾಹಕ ಸಂಘದ 2022 ಹಾಗೂ 2023ರ ಸಾಲಿನ ಚುನಾವಣೆ ಕಳೆದ ತಿಂಗಳ 12ರಂದು‌ ನಡೆದಿತ್ತು. ಇದೀಗ ವಿಜೇತರಾದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ನೂತನ ಅಧ್ಯಕ್ಷರಾಗಿ ಸೋಮಶೇಖರ್ ಎಸ್ (Somashekhar) ಆಯ್ಕೆಯಾಗಿದ್ದಾರೆ.

    ಉಳಿದಂತೆ ಉಪಾಧ್ಯಕ್ಷರಾಗಿ ಚಲುವರಾಜು.ಎಸ್ ಮತ್ತು  ರಮೇಶ್ ಬಿ.ಜಿ,  ಪ್ರಧಾನ ಕಾರ್ಯದರ್ಶಿಯಾಗಿ ನರಸಿಂಹಮೂರ್ತಿ ಬಿ.ಜಿ, ಸಹಕಾರ್ಯದರ್ಶಿ ಆಗಿ ನರಸಿಂಹ ಹೆಚ್, ನರೇಶ್ ಕುಮಾರ್ ಆರ್ ಹಾಗೂ ಶಶಿಧರ್ ಜಿ, ಖಂಜಾಚಿಯಾಗಿ ಸುನಿಲ್ ಕುಮಾರ್ ಬಿ.ಕೆ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಯಶ್‌ ಜೊತೆ ದಿಲ್‌ ರಾಜು ಹೊಸ ಸಿನಿಮಾ- ಅಪ್‌ಡೇಟ್‌ ಹಂಚಿಕೊಂಡ ನಿರ್ಮಾಪಕ

    ಚುನಾವಣೆಯಲ್ಲಿ ಗೆಲುವು ಪಡೆದ ಎಲ್ಲಾ ಪದಾಧಿಕಾರಿಗಳು ಇತ್ತೀಚೆಗಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ.ಹರೀಶ್ (B.M. Harish) ಅವರನ್ನು ಭೇಟಿ ಮಾಡಿ ಸಹಕಾರ ಕೋರಿದ್ದಾರೆ. ಪ್ರಕಾಶ್ ಮಧುಗಿರಿ, ಸುಧೀಂದ್ರ, ರವಿಶಂಕರ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.

  • ಹೃದಯಾಘಾತದಿಂದ `ಪಯಣ’ ಖ್ಯಾತಿಯ ನಿರ್ದೇಶಕ ಕಿರಣ್ ಗೋವಿ ನಿಧನ

    ಹೃದಯಾಘಾತದಿಂದ `ಪಯಣ’ ಖ್ಯಾತಿಯ ನಿರ್ದೇಶಕ ಕಿರಣ್ ಗೋವಿ ನಿಧನ

    ನ್ನಡ ಚಿತ್ರರಂಗದ ನಿರ್ದೇಶಕ ಕಿರಣ್ ಗೋವಿ (Director Kiran Govi) ಅವರು ಹೃದಯಾಘಾತದಿಂದ (Heart Attack) ನಿಧನ ಹೊಂದಿದ್ದಾರೆ. ಪಯಣ (Payana), ಸಂಚಾರಿ, ಯಾರಿಗುಂಟು ಯಾರಿಗಿಲ್ಲ, ಸಿನಿಮಾಗಳಿಗೆ ನಿರ್ದೇಶನ (Direction) ಮಾಡುವ ಮೂಲಕ ಗಮನ ಸೆಳೆದಿದ್ದರು. ಇದೀಗ ನಿರ್ದೇಶಕ ಕಿರಣ್‌ ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.  ಇದನ್ನೂ ಓದಿ: ಹೊಸ ಮನೆ ಖರೀದಿಸಿದ ತೆಲುಗು ನಟ ನಾಗಚೈತನ್ಯ

    50ನೇ ವಯಸ್ಸಿಗೆ ನಿರ್ದೇಶಕ ಕಿರಣ್ ಗೋವಿ (Kiran Govi) ಇಹಲೋಕ ತ್ಯಜಿಸಿದ್ದಾರೆ. ಬುಧವಾರದಂದು (ಮಾ.25) ಹೃದಯಾಘಾತವುಂಟಾಗಿತ್ತು. ತಕ್ಷಣವೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಸ್ಪಂದಿಸದೇ ಅವರು ನಿಧನರಾಗಿದ್ದಾರೆ. ಯುವ ನಿರ್ದೇಶಕನ ನಿಧನಕ್ಕೆ ಚಿತ್ರರಂಗದ ಗಣ್ಯರು, ಆಪ್ತರು, ಸಂತಾಪ ಸೂಚಿಸಿದ್ದಾರೆ.

    ಕಿರಣ್ ಗೋವಿ ಮೂಲತಃ ತುಮಕೂರಿನವರು. ಆದರೆ ಅವರ ಶಿಕ್ಷಣ ಮಾಡಿದ್ದು ಬೆಂಗಳೂರಿನಲ್ಲಿ. ಅವರ ತಂದೆ ದೂರವಾಣಿಗೆ ಸಂಬಂಧಿಸಿದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಶಿಕ್ಷಣದಲ್ಲಿ ಹಿಂದುಳಿದ ಕಾರಣ ಕಿರಣ್ ಆರ್ಕೆಸ್ಟ್ರಾ ಸೇರಿಕೊಂಡು ಗಾಯನ ಆರಂಭಿಸಿದರು.

  • ಹೆಸರಾಂತ ಕಲಾವಿದರ ನೆಚ್ಚಿನ ನಿರ್ದೇಶಕ ಪ್ರದೀಪ್ ಸರ್ಕಾರ್ ನಿಧನ

    ಹೆಸರಾಂತ ಕಲಾವಿದರ ನೆಚ್ಚಿನ ನಿರ್ದೇಶಕ ಪ್ರದೀಪ್ ಸರ್ಕಾರ್ ನಿಧನ

    ಬಾಲಿವುಡ್ ನ (Bollywood) ಹೆಸರಾಂತ ನಿರ್ದೇಶಕ (Directo) ಪ್ರದೀಪ್ ಸರ್ಕಾರ್ (Pradeep Sarkar) ಇಂದು ಬೆಳಗ್ಗೆ 3.30ಕ್ಕೆ ನಿಧನರಾಗಿದ್ದಾರೆ (Passes Away). ದೀರ್ಘಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ಹಲವು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದ ಕಾರಣ ಇಹಲೋಕ ತ್ಯಜಿಸಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    ಅವರ ಮುಂಬೈ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ. ಪ್ರದೀಪ್ ಸರ್ಕಾರ್ ನಿಧನಕ್ಕೆ ಬಾಲಿವುಡ್ ನ ಅಜಯ್ ದೇವಗನ್ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದು, ಅಪರೂಪದ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಎಂದು ಕೊಂಡಾಡಿದ್ದಾರೆ. ಅಲ್ಲದೇ, ಸೋಷಿಯಲ್ ಮೀಡಿಯಾ ಮೂಲಕವೂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ವಿದ್ಯಾ ಬಾಲನ್, ಸೈಫ್ ಅಲಿಖಾನ್ ಮತ್ತು ಸಂಜಯ್ ದತ್ ಕಾಂಬಿನೇಷನ್ ನ ಪರಿಣೀತಾ ಸಿನಿಮಾದ ಮೂಲಕ ನಿರ್ದೇಶಕರಾಗಿದ್ದ ಪ್ರದೀಪ್, ಅದಕ್ಕೂ ಮುನ್ನ ಎಡಿಟರ್ ಆಗಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಮರ್ದಾನಿ, ಹೆಲಿಕಾಪ್ಟರ್ ಇಲಾ ಸೇರಿದಂತೆ ಹಲವು ಚಿತ್ರಗಳಿಗೆ ಇವರದ್ದೇ ನಿರ್ದೇಶನವಿದೆ. ರಾಣಿ ಮುಖರ್ಜಿ, ಅಭಿಷೇಕ್ ಬಚ್ಚನ್ ಸೇರಿದಂತೆ ಸಾಕಷ್ಟು ಕಲಾವಿದರು ಇವರ ಸಿನಿಮಾಗಳಲ್ಲಿ ನಟಿಸಿದ್ದಾರೆ.