ಮಂಗಳೂರು: ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮಂಗಳೂರಿನ ಕಾರ್ಯಕ್ರಮವೊಂದರ ವೇಳೆ ಅಪಾಯದಿಂದ ಪಾರಾಗಿದ್ದಾರೆ.
ನಗರದ ಮಾಲ್‍ವೊಂದರಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಬೈಕ್ ಕ್ರ್ಯಾಕರ್ಸ್ ಬೆಂಕಿ ಹೊತ್ತಿಕೊಂಡಿದ್ದು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮಂಗಳೂರಿನ ಫೋರಂ ಮಾಲ್ ನಲ್ಲಿ ಮೆಕ್ ಡಾವೆಲ್ ಕಂಪನಿ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಪಾಲ್ಗೊಂಡಿದ್ದರು. ವೇದಿಕೆಗೆ ಬೈಕ್ ಏರಿ ಬರುವ ವೇಳೆ ಕ್ರ್ಯಾಕರ್ಸ್ ಉರಿಸಲಾಗಿತ್ತು. ಅರ್ಜುನ್ ಬೈಕಿನಿಂದ ಇಳಿಯುವ ವೇಳೆ ಕ್ರ್ಯಾಕರ್ಸ್ ಉರಿ ಭುಜಕ್ಕೆ ಮತ್ತು ಕೈಗೆ ತಾಗಿದ್ದು ಸುಟ್ಟ ಗಾಯಗಳಾಗಿವೆ.
ಬೈಕ್ ನಿಂದ ಇಳಿದ ಅರ್ಜುನ್ ಜನ್ಯ ನೇರವಾಗಿ ವೇದಿಕೆಗೆ ಹತ್ತಿ ಹಾಡು ಹಾಡಿ ಸಂಗೀತಪ್ರಿಯರನ್ನು ರಂಜಿಸಿದರು.
ಬಳ್ಳಾರಿ: ಸ್ಯಾಂಡಲ್ ವುಡ್ ನಟ ಪುನಿತ್ ರಾಜ್‍ಕುಮಾರ್ ಗೆ ಅಭಿಮಾನಿಗಳು ಅಂದ್ರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿಯೇ ಪವರ್ ಸ್ಟಾರ್ ಪುನೀತ್ ಅವರನ್ನು ಅಭಿಮಾನಿಗಳು ಅತಿ ಹೆಚ್ಚಾಗಿ ಪ್ರೀತಿ ಮಾಡ್ತಾರೆ. ಹೀಗೆ ತಮ್ಮನ್ನು ಪ್ರೀತಿ ಮಾಡೋ ಅಭಿಮಾನಿಯೊಬ್ಬರ ಮನೆಗೆ ಪುನೀತ್ ರಾಜ್‍ಕುಮಾರ್ ಹೋಗಿ ಬಂದಿದ್ದಾರೆ.
ರವಿವಾರ ಬಳ್ಳಾರಿಯಲ್ಲಿ ನಿರ್ದೇಶಕ ಸಂತೋಷ ಆನಂದರಾಮ್ ನಿಶ್ಚಿತಾರ್ಥ ಸಮಾರಂಭಕ್ಕೆ ಪುನೀತ್ ಆಗಮಿಸಿದ್ದರು. ಇದೇ ವೇಳೆ ಅವರು ಹೊಸಪೇಟೆಯ ಅಭಿಮಾನಿಯೊಬ್ಬರ ಮನೆಗೆ ಭೇಟಿ ನೀಡಿದ್ದರು. ಕಟ್ಟಾ ಅಭಿಮಾನಿಯಾಗಿರುವ ಕಿಚಡಿ ವಿಶ್ವ ಎಂಬವರ ಮನೆಗೆ ತೆರಳಿದ ಪುನೀತ್ ರಾಜ್‍ಕುಮಾರ್ ಅವರನ್ನು ಅಭಿಮಾನಿ ಕುಟುಂಬದವರೆಲ್ಲಾ ಆರತಿ ಬೆಳಗಿ ಸ್ವಾಗತಿಸಿ, ಸನ್ಮಾನಿಸಿ, ಗೌರವಿಸಿದ್ದಾರೆ.
ಸಹೋದರಿ ರೇಣುಕಾರ ಮದುವೆ ಸಮಾರಂಭಕ್ಕೆ ಆಗಮಿಸುವಂತೆ ಈ ಹಿಂದೆ ವಿಶ್ವ ಕುಟುಂಬ ಆಹ್ವಾನವನ್ನು ನೀಡಿತ್ತು. ಅದರೆ ಅಂದು ಪಾರ್ವತಮ್ಮ ರಾಜಕುಮಾರ್ ಅವರಿಗೆ ಅನಾರೋಗ್ಯ ಇದ್ದ ಹಿನ್ನಲೆಯಲ್ಲಿ ಪುನೀತ್ ರಾಜ್‍ಕುಮಾರ್ ಮದುವೆ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿಯೇ ಪುನೀತ್ ರಾಜ್ ಕುಮಾರ್ ಇತ್ತೀಚೆಗೆ ಹೊಸಪೇಟೆಗೆ ಬಂದಾಗ ವಿಶ್ವ ಅವರು ಅಂದು ನೀಡಿದ್ದ ಆಹ್ವಾನವನ್ನು ಮರೆಯದೇ ಅವರ ನಿವಾಸಕ್ಕೆ ಭೇಟಿ ನೀಡಿ ಸರಳತೆ ಮೆರೆದಿದ್ದಾರೆ.
ಲಕ್ನೋ: ಪದ್ಮಾವತಿ ಚಿತ್ರದ ನಿರ್ದೇಶಕ ಸಜಯ್ ಲೀಲಾ ಬನ್ಸಾಲಿ ತಲೆಗೆ ಬಹುಮಾನ ಘೋಷಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಪದ್ಮಾವತಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಬನ್ಸಾಲಿ ತಲೆಗೆ ಬಹುಮಾನ ಘೋಷಿಸಿದ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳುವುದರ ಜೊತೆಗೆ ಜನರ ಭಾವನೆಗಳ ಜೊತೆ ಆಟವಾಡಿರುವ ನಿರ್ದೇಶಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಈಗಾಗಲೇ ಚಿತ್ರದಲ್ಲಿ ಇರುವ ಆಕ್ಷೇಪಗಳ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದ್ದು, ಸಲಹೆ ನೀಡುವಂತೆ ಕೇಳಿಕೊಂಡಿದ್ದೇವೆ. ಜನರ ಭಾವನೆಗಳ ಜೊತೆ ಆಟವಾಡಲು ಯಾರನ್ನು ಬಿಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಡುಗಡೆಗೂ ಮುನ್ನ ಭಾರೀ ವಿವಾದಗಳನ್ನು ಸೃಷ್ಟಿಸಿರುವ ಪದ್ಮಾವತಿ ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಹಾಗೂ ರಾಣಿ ಪದ್ಮಾವತಿ ನಡುವೆ ರೊಮ್ಯಾಂಟಿಕ್ ಸೀನ್‍ಗಳಿವೆ ಎಂದು ಆರೋಪಿಸಿ ಚಿತ್ರದ ಬಿಡುಗಡೆಗೆ ರಾಜಪುತ ಸಂಘಟನೆಗಳು ಪ್ರತಿಭಟಿಸಿದ್ದವು.
ರಾಜಪೂತ ಕರ್ನಿಸೇನಾ ಸಂಘಟನೆಯ ನಾಯಕರು ಸಹ ಚಿತ್ರ ಬಿಡುಗಡೆ ಕುರಿತು ನಿರ್ದೇಶಕರಿಗೆ ಬೆದರಿಕೆ ಹಾಕಿದ್ದರು. ಆರಂಭದಲ್ಲಿ ಚಿತ್ರೀಕರಣದ ವೇಳೆ ರಜಪೂತ್ ಕರ್ಣಿ ಸೇನಾದ ಸದಸ್ಯನೋರ್ವ ಬನ್ಸಾಲಿ ಅವರ ಕಪಾಳಕ್ಕೆ ಹೊಡೆದಿದ್ದನು. ಇನ್ನೂ ಮಹಾರಾಷ್ಟ್ರದ ಕೋಲಾಪುರದಲ್ಲಿ ಚಿತ್ರೀಕರಣದ ಸೆಟ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಘಟನೆ ವೇಳೆ ಯಾರಿಗೂ ಯಾವುದೇ ಅಪಾಯವಾಗಿರಲಿಲ್ಲ.
ಹರ್ಯಾಣದ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಸೂರಜ್ ಪಾಲ್ ಅಮು, ಪದ್ಮಾವತಿ ಚಿತ್ರದ ನಟಿ ದೀಪಿಕಾ ಅವರ ಹಾಗೂ ನಿರ್ದೇಶಕ ಬನ್ಸಾಲಿ ಅವರ ಶಿರಚ್ಛೇದ ಮಾಡಿವರಿಗೆ 10 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರು. ಅಲ್ಲದೇ ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಪಾತ್ರವನ್ನು ಮಾಡಿರುವ ರಣವೀರ್ ಸಿಂಗ್ ರ ಕಾಲು ಮುರಿಯುತ್ತೇವೆ ಎಂದು ಬೆದರಿಕೆ ಹಾಕಿದ್ದರು.
ಬಿಜೆಪಿ ಆಡಳಿತ ಇರುವ ರಾಜಸ್ಥಾನ, ಮಧ್ಯಪ್ರದೇಶ ಜೊತೆ ಕಾಂಗ್ರೆಸ್ ಆಡಳಿತ ಇರುವ ಪಂಜಾಬ್ ಸರ್ಕಾರ ಪದ್ಮಾವತಿಯನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿವೆ.
We have made our stand clear on it, have already given it in written to the Information & Broadcasting Ministry. SC has also clarified that CBFC should take a decision: UP CM Yogi Adityanath #Padmavatipic.twitter.com/QKrkm7KH3T
Nobody will accept distortion of history and those who are protesting are rightly doing so: Capt Amarinder Singh,Punjab CM #Padmavatipic.twitter.com/rkk7udI5Kf
ಕೊಪ್ಪಳ: ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಯಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕೋ ವಿಧೇಯಕ ಜಾರಿ ಮಾಡುತ್ತಿರೋ ಬೆನ್ನಲ್ಲೇ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರ ಅಕ್ರಮ ಬಟಾಬಯಲಾಗಿದೆ. ಬಡವರ ಪಾಲಿಗೆ ಸರ್ಕಾರಿ ಆಸ್ಪತ್ರೆ ಸಂಜೀವಿನಿ ಆಗಬೇಕಿತ್ತು. ಆದರೆ ಚಿಕಿತ್ಸೆಯ ನೆಪದಲ್ಲಿ ಕಿಮ್ಸ್ ನಿರ್ದೇಶಕ ದುಡ್ಡು ಪೀಕತ್ತಿರೋ ವಿಡಿಯೋ ಕೊಪ್ಪಳದಲ್ಲಿ ವೈರಲ್ ಆಗಿದೆ.
ಒಂದು ವಾರದ ಹಿಂದೆ ಕೊಪ್ಪಳ ನಿವಾಸಿಯಾಗಿರುವ ದೊಡ್ಡ ಬಸಪ್ಪ ಎಂಬವರು ತಮ್ಮ ಪತ್ನಿಯ ಕಾಲು ಮೂಳೆ ಮುರಿದಿದ್ದರಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿನ ಎಲುಬು-ಕೀಲು ವೈದ್ಯರಾದ ಡಾ. ಗುರುರಾಜ ಎಂಬವರು ಶಸ್ತ್ರಚಿಕಿತ್ಸೆ ಮಾಡಬೇಕು. ಅದಕ್ಕೆ 5 ಸಾವಿರ ಆಗುತ್ತದೆ ಎಂದು ಹೇಳಿದ್ದರು. ದೊಡ್ಡಬಸಪ್ಪ ಅವರು ಚಿಕಿತ್ಸೆಗೆ ಒಪ್ಪಿಕೊಂಡಿದ್ದರು.
ಚಿಕಿತ್ಸೆ ಎಲ್ಲಾ ಮುಗಿದ ಮೇಲೆ ಕೇಳಿದಾಗ 15 ಸಾವಿರ ಕೊಡಬೇಕು ಎಂದು ಹೇಳಿದ್ದಾರೆ. ಇದರಿಂದ ಹೌಹಾರಿದ ದೊಡ್ಡಬಸಪ್ಪ ನೇರವಾಗಿ ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ. ಎಸ್.ಎಂ ಮಲ್ಕಾಪುರೆ ಬಳಿ ಹೋಗಿ ಕೇಳಿದ್ದಾರೆ. ಆಗ ಮಲ್ಕಾಪುರೆ ಅವರು, ನಾವು ಶಸ್ತ್ರಚಿಕಿತ್ಸೆಗಾಗಿ ಸಾಮಾಗ್ರಿಗಳನ್ನು ಬೇರೆ ಕಡೆಯಿಂದ ತರೆಸಿದ್ದೇವೆ. ಅದಕ್ಕಾಗಿ 15 ಸಾವಿರವಾಗಿದೆ. ಇದೇ ಶಸ್ತ್ರಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಆಗಿದ್ದರೆ ನಿಮಗೆ ಒಂದು ಲಕ್ಷಕ್ಕಿಂತ ಹೆಚ್ಚಾಗುತ್ತಿತ್ತು ಎಂದು ಹೇಳುತ್ತಾ, ನಿಮಗಾಗಿ 15 ಸಾವಿರದಲ್ಲಿ ಮೂರು ಸಾವಿರ ಬಿಡುತ್ತೇವೆ 12 ಸಾವಿರ ಕೊಡಿ ಎಂದು ಹೇಳಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಇಷ್ಟೊಂದು ಹಣ ಕೊಡಬೇಕಾ ಎಂದು ಕೇಳಿದಕ್ಕೆ “ಕೊಡಬೇಕು ಸರ್, ಇಲ್ಲ ಅಂದರೆ ರೋಗಿ ಸಾಯುತ್ತಿದ್ದರು” ಅಂತಾ ಬಾಯಿಗೆ ಬಂದಂಗೆ ಮಾತಾನಾಡಿದ್ದಾರೆ. ಹೀಗೆ ಬಂದ ರೋಗಿಗಳ ಬಳಿ ನಿರ್ದೇಶಕರೇ ಹಣ ಪೀಕುತ್ತಿರುವುದು ಬಟಾಬಯಲಾಗಿದೆ. ಇಂತಹ ನಿರ್ದೇಶಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.
ಬೆಂಗಳೂರು: `ಕಾರ್ಮುಗಿಲು’, `ರಮ್ಯಚೈತ್ರಕಾಲ’, `ಮೇಘವೇ ಮೇಘವೇ’ ಸಿನಿಮಾಗಳಲ್ಲಿ ಅಭಿನಯಿಸಿರೋ ಕಲಾವಿದ ರಾಮ್‍ಗೆ ಕೋಟಿಗಟ್ಟಲೆ ದೋಖಾ ಆಗಿದೆ.
ಒಳ್ಳೆ ಕಥೆ ರೆಡಿಯಾಗಿದೆ, ಸಿನಿಮಾ ಮಾಡ್ತಿದ್ದಿನಿ, ನೀವೇ ಹೀರೋ ಅಂತ ಹೇಳಿದ ಅನೇಕ ನಿರ್ಮಾಪಕರು ರಾಮ್ ಕೈಯಿಂದ ಸುಮಾರು 1.5 ಕೋಟಿಯಷ್ಟು ಹಣ ಪಡೆದಿದ್ದಾರೆ. 2009 ರಲ್ಲಿ ರಾಮ್ ಇಂದ ಸುಮಾರು 20 ರಿಂದ 25 ಲಕ್ಷ ಹಣವನ್ನು ನಿರ್ದೇಶಕ ಗುರುಪ್ರಸಾದ್ ಪಡೆದಿದ್ದರು. ಈಗ ಹಣ ಕೇಳಿದ್ರೆ ನಾನು ಸ್ವಲ್ಪ ಸ್ಟೇಬಲ್ ಆದ್ಮೇಲೆ ಕೊಡ್ತಿನಿ ಎಂದು ಹೇಳುತ್ತಿದ್ದಾರೆ ಅಂತ ರಾಮ್ ಇದೀಗ ಆರೋಪಿಸಿದ್ದಾರೆ.
2014ರಲ್ಲಿ ನಿರ್ಮಾಪಕ, ನಿರ್ದೇಶಕ ಯೋಗೀಶ್ ಹುಣಸೂರು 35 ಲಕ್ಷ ರೂ. ಪಡೆದಿದ್ದಾರೆ. 2014 ರಿಂದ ಹಣನೂ ವಾಪಸ್ ಮಾಡಿಲ್ಲ. ಸಿನಿಮಾನೂ ಮಾಡಿಲ್ಲ. ಇದರಿಂದ ಬೇಸತ್ತ ಕಲಾವಿದ ರಾಮ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ತೀರ್ಪಿನಂತೆ ಯೋಗೀಶ್ ಹುಣಸೂರು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ.
ಲೂಸ್‍ಮಾದ ಯೋಗಿ ಅಭಿನಯದ `ಕಾಲಭೈರವ’ ಸಿನಿಮಾ ನಿರ್ಮಾಪಕ ಕುಮರೆಶ್ ಬಾಬು ಕೂಡ ಇವರಿಂದ 40 ಲಕ್ಷ ರೂ. ಪಡೆದಿದ್ದಾರೆ. ಈ ವಿಚಾರ ಕೂಡ ಕೋರ್ಟ್ ಅಂಗಳದಲ್ಲಿದೆ. ಒಟ್ಟಾರೆ ಕಲಾವಿದ ಆಗಬೇಕು. ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಸಿನಿಮಾ ಮಾಡಬೇಕು ಅನ್ನೋ ಕನಸಿನಿಂದ ಗಾಂಧಿನರಕ್ಕೆ ಬಂದ ರಾಮ್ ಇದೀಗ ಕೋಟಿಗಟ್ಟಲೆ ಹಣ ಕಳೆದುಕೊಂಡಿದ್ದಾರೆ.
ಸಿನಿಮಾ ರಂಗ ಅಂದ ಮೇಲೆ ನಂಬಲೇ ಬೇಕಾಗುತ್ತದೆ. ಇವರ್ಯಾರೂ ಹೊಸ ನಿರ್ದೇಶಕ ಅಥವಾ ನಿರ್ಮಾಪಕರಲ್ಲ. ಈಗಾಗಲೇ ಅವರು ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇಂತಹವರ ಜೊತೆ ನಾವು ಕೆಲಸ ಮಾಡಿದ್ರೆ ನಮಗೆ ಒಂದು ಒಳ್ಳೆಯ ಆರಂಭ ಸಿಗುತ್ತದೆ. ಒಳ್ಳೋಳ್ಳೆಯ ಪಾತ್ರಗಳನ್ನು ಕೂಡ ಮಾಡಬಹುದು ಅನ್ನೋ ನಿಟ್ಟಿನಲ್ಲಿ ನಾನು ಈ ಮೊದಲು ಇವುಗಳನ್ನು ಬಹಿರಂಗಪಡಿಸಿಲ್ಲ ಅಂತ ರಾಮ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.
ಬೆಂಗಳೂರು: ಸ್ನೇಹಿತನಿಂದ ಮನೆ ಪಡೆದು ಆಡಿಷನ್ ಹೆಸರಲ್ಲಿ ಹುಡುಗಿಯರ ಅಡ್ಡೆ ಮಾಡಿಕೊಂಡಿದ್ದ ಕತ್ರಿಗುಪ್ಪೆ ಕಟ್ಟಿಂಗ್ ಶಾಪ್ ಸಿನಿಮಾ ನಿದೇರ್ಶಕನನ್ನು ಬಂಧಿಸಲಾಗಿದೆ.
ಪ್ರಖ್ಯಾತ್ ಅಲಿಯಾಸ್ ಅಂತೋಣಿ ಪೌನ್ಸಿ ಬಂಧಿತ ನಿರ್ದೇಶಕ. ಸ್ನೇಹಿತ ಪುರುಷೋತ್ತಮ್‍ನಿಂದ ಮನೆ ಪಡೆದಿದ್ದ ಪ್ರಖ್ಯಾತ್ ಅದನ್ನೇ ಹುಡುಗಿಯರ ಅಡ್ಡೆ ಮಾಡಿಕೊಂಡಿದ್ದ. ಇದನ್ನ ಗಮನಿಸಿದ ಪುರುಷೋತ್ತಮ್ ಮನೆ ಖಾಲಿ ಮಾಡುವಂತೆ ಹೇಳಿದ್ರು. ಆಗ ಪ್ರಖ್ಯಾತ್ ಕೆಲ ರೌಡಿಗಳಿಂದ ಪುರುಷೋತ್ತಮ್‍ಗೆ ಬೆದರಿಕೆ ಹಾಕಿಸಿದ್ದ.
ಈ ಬಗ್ಗೆ ಪುರುಷೋತ್ತಮ್‍ರಿಂದ ದೂರು ಪಡೆದಿದ್ದ ವಿಜಯನಗರ ಪೊಲೀಸರು ಇದೀಗ ಆರೋಪಿ ಪ್ರಖ್ಯಾತ್‍ನನ್ನು ಬಂಧಿಸಿದ್ದಾರೆ.
ಮುಂಬೈ: ಹಿಂದಿ ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಮಧುರ್ ಭಂಡಾರ್ಕರ್ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮೂಲದ ರೂಪದರ್ಶಿ ಪ್ರೀತಿ ಜೈನ್‍ಗೆ ಇಲ್ಲಿನ ನ್ಯಾಯಲಯ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿದೆ.
ಪ್ರೀತಿ ಜೈನ್ ಜೊತೆ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದ ನರೇಶ್ ಪರ್ದೇಶಿ ಮತ್ತು ಶಿವರಾಮ್ ದಾಸ್‍ಗೂ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಏನಿದು ಪ್ರಕರಣ?: ನಿರ್ದೇಶಕ ಭಂಡಾರ್ಕರ್ ಅವರನ್ನು ಕೊಲ್ಲಲು ರೂಪದರ್ಶಿ ಪ್ರೀತಿ 2005ರ ಸೆಪ್ಟೆಂಬರ್‍ನಲ್ಲಿ ಅಂಡರ್ ವಲ್ರ್ಡ್ ಡಾನ್ ಆಗಿದ್ದ ಅರುಣ್ ಗಾವ್ಲಿಯ ಸಹಚರ ನರೇಶ್ ಪರ್ದೇಶಿಗೆ 75,000 ರೂ. ಸುಪಾರಿ ನೀಡಿದ್ದಳು. ಆದ್ರೆ ನರೇಶ್ ತನ್ನ ಕೆಲಸವನ್ನು ಮಾಡಿ ಮುಗಿಸದ ಕಾರಣಕ್ಕೆ ಪ್ರೀತಿ ಜೈನ್ ಆತನಿಗೆ ತಾನು ಕೊಟ್ಟಿದ್ದ 75,000 ರೂ.ಗಳನ್ನು ವಾಪಸ್ ಕೊಡಲು ಕೇಳಿದ್ದಳು. ಈ ಬಗ್ಗೆ ಅರುಣ್ ಗಾವ್ಲಿಯ ಮತ್ತೊಬ್ಬ ಸಹಚರ ವಕೀಲ ಬಗಾವೆಗೆ ವಿಷಯ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇದಕ್ಕೂ ಮೊದಲು ಜೈನ್, ಭಂಡಾರ್ಕರ್ ಅವರು ಸಿನಿಮಾದಲ್ಲಿ ಪಾತ್ರ ಕೊಡುವುದಾಗಿ ಹೇಳಿ 1999 ರಿಂದ 2004ರ ಅವಧಿಯ ವೇಳೆ ನನ್ನ ಮೇಲೆ 16ಕ್ಕೂ ಹೆಚ್ಚು ಬಾರಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ 2004ರ ಜುಲೈನಲ್ಲಿ ದೂರು ದಾಖಲಿಸಿದ್ದಳು. ಭಂಡಾರ್ಕರ್ ನನಗೆ ವಂಚಿಸಿದ್ದಾರೆ. ಅವರನ್ನು ಬಂಧಿಸಿ ಎಂದು ಒತ್ತಾಯಿಸಿದ್ದಳು. ಬಳಿಕ ತನ್ನ ಆರೋಪವನ್ನು ಕೈಬಿಡುತ್ತಿದ್ದೇನೆ ಎಂದು ಹೇಳಿದಾಗ ಕೋರ್ಟ್ ಭಂಡಾರ್ಕರ್ ವಿರದ್ಧದ ಅತ್ಯಾಚಾರ ಪ್ರಕರಣವನ್ನು ರದ್ದು ಮಾಡಿತ್ತು.
Somethings are better left unsaid! Somethings are better left as they are. Life moves on, so have I.
ಬೆಂಗಳೂರು: ಸಿನಿಮಾ ಮಾಡೋದಾಗಿ ಹಣ ಪಡೆದು ಮೋಸ ಮಾಡಲು ಯತ್ನಿಸಿದ ಆರೋಪದ ಮೇಲೆ ಸ್ಯಾಂಡಲ್‍ವುಡ್‍ನ ವಿವಾದಿತ ನಿರ್ದೇಶಕ ರಿಷಿಯನ್ನು ಪೊಲೀಸರು ಬಂಧಿಸಿದ್ದಾರೆ.
ಒನ್ ವೇ ಚಿತ್ರದ ನಿರ್ಮಾಪಕ ದೀಪಕ್‍ರಿಂದ ನಿರ್ದೇಶಕ ರಿಷಿ 5 ಲಕ್ಷ ರೂಪಾಯಿ ಪಡೆದಿದ್ರು. ಬಳಿಕ ದೀಪಕ್ ಹಣ ವಾಪಸ್ ಕೇಳಿದಾಗ ಚೆಕ್ ನೀಡಿದ್ರು. ಆದ್ರೆ ಚೆಕ್ ಬೌನ್ಸ್ ಆಗಿದ್ರಿಂದ ರಿಷಿ ವಿರುದ್ಧ ನಿರ್ಮಾಪಕ ದೀಪಕ್ ದೂರು ನೀಡಿದ್ರು. ಈ ಹಿನ್ನೆಲೆಯಲ್ಲಿ ಪೊಲೀಸರು ನಿರ್ದೇಶಕ ರಿಷಿಯವರನ್ನು ಬಂಧಿಸಿದ್ದಾರೆ.
`ಕೊಟ್ಲಲ್ಲಪ್ಪೋ ಕೈ’ ಚಿತ್ರದ ವಿವಾದದ ಮೂಲಕ ಸದ್ದು ಮಾಡಿದ್ದ ರಿಷಿ ಬಳಿಕ ನಟಿ ಮೈತ್ರೇಯಾ ಗೌಡ ಅವರನ್ನ ಮದುವೆ ಅಗಿದ್ದೀನಿ ಅಂತ ಕಾಂಟ್ರವರ್ಸಿ ಮಾಡಿದ್ದರು. ಇತ್ತೀಚೆಗೆ ಮಾಸ್ತಿಗುಡಿ ಸಿನಿಮಾದಲ್ಲಿ ನನ್ನ ಹಾಡು ಬಳಸಿದ್ದಾರೆ ಅಂತಾ ಫಿಲಂ ಚೇಂಬರ್ ಗೆ ದೂರು ನೀಡಿದ್ದರು.