Tag: director

  • ಸುದೀಪ್ ನಂತ್ರ ಶಿವಣ್ಣನ ಜೊತೆ ಮತ್ತೊಬ್ಬರು ಸ್ಯಾಂಡಲ್‍ವುಡ್ ಸ್ಟಾರ್ ನಟನೆ

    ಸುದೀಪ್ ನಂತ್ರ ಶಿವಣ್ಣನ ಜೊತೆ ಮತ್ತೊಬ್ಬರು ಸ್ಯಾಂಡಲ್‍ವುಡ್ ಸ್ಟಾರ್ ನಟನೆ

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ನಟರಾದ ಚಾಲೆಜಿಂಗ್ ಸ್ಟಾರ್ ದರ್ಶನ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ಸ್ಯಾಂಡಲ್‍ವುಡ್ ಖ್ಯಾತ ನಿರ್ದೇಶಕ ಮಹೇಶ್ ಬಾಬು ಇಬ್ಬರು ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ತೋರಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಸದ್ಯ ಇಬ್ಬರನ್ನು ಒಟ್ಟಿಗೆ ತೋರಿಸುವ ಕೆಲಸದಲ್ಲಿ ಮಹೇಶ್ ಬಾಬು ತೊಡಗಿದ್ದಾರೆ.

    ನಿರ್ಮಾಪಕರೊಬ್ಬರು ಮಹೇಶ್ ಬಾಬು ಅವರಿಗೆ ಈ ಅವಕಾಶವನ್ನು ನೀಡಿದ್ದಾರೆ. ಶಿವರಾಜ್‍ಕುಮಾರ್ ಹಾಗೂ ದರ್ಶನ್ ಅವರನ್ನು ಸೇರಿಸಿ ಒಂದು ಸಿನಿಮಾ ಮಾಡಿ ಈ ಸಿನಿಮಾವನ್ನು ನಾನೇ ನಿರ್ಮಿಸುತ್ತಿದ್ದಾರೆ ಎಂದು ನಿರ್ಮಾಪಕರು ಹೇಳಿದ್ದಾರೆ.

    ಮಹೇಶ್ ಈಗಾಗಲೇ ದರ್ಶನ್ ಅವರನ್ನು ಸಂಪರ್ಕಿಸಿ ಚಿತ್ರದ ಬಗ್ಗೆ ತಿಳಿಸಿದ್ದಾರೆ. ಅದಕ್ಕೆ ದರ್ಶನ್, ಶಿವಣ್ಣ ಅವರ ಜೊತೆ ನಟಿಸಲು ನನಗೆ ಖುಷಿಯಾಗುತ್ತದೆ. ಆದರೆ ಚಿತ್ರದ ಕಥೆ ಕೇಳಿ ಅಂತಿಮ ನಿರ್ಧಾರವನ್ನು ಹೇಳುತ್ತೇನೆ. ಅಲ್ಲದೇ ಶಿವಣ್ಣ ಒಬ್ಬರು ದೊಡ್ಡ ನಟ ಅವರ ಜೊತೆ ನಟಿಸಬೇಕೆಂದರೆ ಉತ್ತಮ ಕಥೆ ಬೇಕು ಎಂದು ದರ್ಶನ್ ತಿಳಿಸಿದ್ದಾರೆ.

    ಸದ್ಯ ಶಿವರಾಜ್‍ಕುಮಾರ್ ಹಾಗೂ ದರ್ಶನ್ ಒಟ್ಟಿಗೆ ನಟಿಸಲು ಒಳ್ಳೆಯ ಸ್ಕ್ರಿಪ್ಟ್ ಬೇಕಾಗಿದೆ. ಚಿತ್ರದ ಕತೆ ರೆಡಿ ಆಗಿ ಇಬ್ಬರಿಗೂ ಸೂಟ್ ಆಗುವ ಕತೆ ಸಿಕ್ಕರೆ ಸಿನಿಮಾ ಅನೌನ್ಸ್ ಆಗಲಿದೆ ಎಂದು ಹೇಳಲಾಗಿದೆ. ಸದ್ಯ ನಿರ್ದೇಶಕ ಮಹೇಶ್ ಬಾಬು ಈ ಹಿಂದೆ ಶಿವಣ್ಣ ನಟನೆಯ ‘ಪರಮೇಶ ಪಾನ್‍ವಾಲ’ ಚಿತ್ರವನ್ನು ನಿರ್ದೇಶಿಸಿದ್ದು, ದರ್ಶನ್ ಅವರ ‘ಅಭಯ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿನ್ನ ಮರ್ಮಾಂಗ ತೋರಿಸು, ನಾನು ಅದನ್ನು ಫೀಲ್ ಮಾಡ್ಬೇಕು ಎಂದಿದ್ದ ನಿರ್ದೇಶಕ: ನಟ ಆಯುಷ್ಮಾನ್

    ನಿನ್ನ ಮರ್ಮಾಂಗ ತೋರಿಸು, ನಾನು ಅದನ್ನು ಫೀಲ್ ಮಾಡ್ಬೇಕು ಎಂದಿದ್ದ ನಿರ್ದೇಶಕ: ನಟ ಆಯುಷ್ಮಾನ್

    ಮುಂಬೈ: ನಿನ್ನ ಮರ್ಮಾಂಗ ತೋರಿಸು, ನಾನು ಅದನ್ನು ಫೀಲ್ ಮಾಡಬೇಕು ಎಂದು ಸಲಿಂಗ ನಿರ್ದೇಶಕನೊಬ್ಬ ಆಡಿಷನ್ ವೇಳೆ ಕೇಳಿಕೊಂಡಿದ್ದನು ಎಂದು ನಟ ಆಯುಷ್ಮಾನ್ ಖುರಾನಾ ತಿಳಿಸಿದ್ದಾರೆ.

    ಫ್ಯಾಶನ್ ಡಿಸೈನರ್ ಅನಿತಾ ಶ್ರಾಫ್ ಅವರ ಚಾಟ್ ಶೋ ಕಾರ್ಯಕ್ರಮವೊಂದರಲ್ಲಿ ನಟ ಆಯುಷ್ಮಾನ್ ಖುರಾನಾ ಆಡಿಷನ್ ವೇಳೆ ತಮಗೆ ಆದ ಕಾಸ್ಟಿಂಗ್ ಕೌಚ್ ಅನುಭವವನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ.

    ಸಲಿಂಗ ನಿರ್ದೇಶಕನೊಬ್ಬ ನನಗೆ ನಿನ್ನ ಮರ್ಮಾಂಗ ತೋರಿಸು. ನಾನು ಅದನ್ನು ಫೀಲ್ ಮಾಡಬೇಕೆಂದು ಎಂದು ಕೇಳಿಕೊಂಡರು. ನಿರ್ದೇಶಕ ಆ ರೀತಿ ಹೇಳಿದ್ದಾಗ ನಾನು ಜೋರಾಗಿ ನಗಲಾರಂಭಿಸಿದೆ. ನಂತರ ನೀನು ಏನು ಹೇಳುತ್ತಿದ್ದೀಯಾ? ಆರ್ ಯೂ ಸೀರಿಯಸ್ ಎಂದು ಕೇಳಿದೆ. ನಂತರ ನಾನು ಇದಕ್ಕೆ ನಿರಾಕರಿಸಿದೆ ಎಂದು ಆಯುಷ್ಮಾನ್ ಖುರಾನಾ ವಿವರಿಸಿದರು.

    ಭಾರತೀಯ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಸುದ್ದಿ ಹೆಚ್ಚು ಕೇಳಿ ಬರುತ್ತಿದೆ. ದಕ್ಷಿಣ ಚಿತ್ರರಂಗ ಅಲ್ಲದೇ ಬಾಲಿವುಡ್‍ನಲ್ಲೂ ಕಾಸ್ಟಿಂಗ್ ಕೌಚ್ ಇದೆ ಎಂಬುದು ತಿಳಿದು ಬಂದಿದೆ. ಬಾಲಿವುಡ್‍ನಲ್ಲಿ ಈ ಮೊದಲು ಏಕ್ತಾ ಕಪೂರ್, ದಿವ್ಯಾಂಕಾ ತ್ರಿಪಾಠಿ, ಸ್ವರಾ ಭಾಸ್ಕರ್ ಹಾಗೂ ಮಂದಿರಾ ಬೇಡಿ ಈ ಕಾಸ್ಟಿಂಗ್ ಕೌಚ್ ಅನ್ನು ಎದುರಿಸಿದ್ದರು.

    ಸದ್ಯ ಆಯುಷ್ಮಾನ್ ಖುರಾನಾ ‘ಅಂದಾದೂದ್’ ಹಾಗೂ ‘ಬದಾಯಿ ಹೋ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಎರಡೂ ಚಿತ್ರ ಮುಂದಿನ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೆ ತಯಾರಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಲೆಳೆಯುವವರು ಇದ್ರೆನೇ ಬೆಳೆಯಲು ಸಾಧ್ಯ- ದಿ ವಿಲನ್ ಬಗ್ಗೆ ಪ್ರೇಮ್ ಮಾತು

    ಕಾಲೆಳೆಯುವವರು ಇದ್ರೆನೇ ಬೆಳೆಯಲು ಸಾಧ್ಯ- ದಿ ವಿಲನ್ ಬಗ್ಗೆ ಪ್ರೇಮ್ ಮಾತು

    ಬೆಂಗಳೂರು: ಸ್ಯಾಂಡಲ್ ವುಡ್ ನ ದಿಗ್ಗಜರುಗಳಾದ ಶಿವಣ್ಣ ಹಾಗೂ ಸುದೀಪ್ ಅವರನ್ನಿಟ್ಟುಕೊಂಡು ಸಿನಿಮಾ ಮಾಡಲು ಮುಂದಾದಾಗ ಅನೇಕ ಮಂದಿ ನನ್ನ ವಿರುದ್ಧ ಮಾತನಾಡಿದ್ರು. ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ಇಂದು ನಾನು ದಿ ವಿಲನ್ ಸಿನಿಮಾ ಮಾಡಿದ್ದೇನೆ. ಒಟ್ಟಿನಲ್ಲಿ ಕಾಲೆಳೆಯುವವರು ಇದ್ರೇನೆ ನಾವು ಬೆಳೆಸಲು ಸಾಧ್ಯ ಅಂತ ನಿರ್ದೇಶಕ ಪ್ರೇಮ್ ಹೇಳಿದ್ರು.

    ತನ್ನ ಸಿನಿಮಾ ಪ್ರಚಾರದ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದು ಬರೀ ಪ್ರಚಾರ ಅಲ್ಲ. ಅದರಿಂದ ಸಮಾಜಕ್ಕೆ ಉಪಯೋಗವಾಗಲಿ ಎಂಬುದೇ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ದಿ ವಿಲನ್ ತಂಡಕ್ಕೆ ಧನ್ಯವಾದಗಳನ್ನು ಹೇಳಲು ಇಷ್ಟಪಡುತ್ತೇನೆ. ಪ್ರಚಾರದಿಂದ ಬಂದದ್ರಲ್ಲಿ ಒಂದು ಪರ್ಸೆಂಟ್ ಹಣವನ್ನು ನಾವು ನಿರ್ದೇಶಕರ ಸಂಘಕ್ಕೆ ಕೊಡುತ್ತಿದ್ದೇವೆ ಅಂತ ಅವರು ಹೇಳಿದ್ರು.

    ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರನ್ನಿಟ್ಟುಕೊಂಡು ಸಿನಿಮಾ ಮಾಡಲು ಮುಂದಾದಾಗ ಹಲವು ಜನ ಮಾತನಾಡಿದ್ದರು. ಈದು ಸಿನಿಮಾ ಆಗತ್ತಾ? ಇವರು ಸಿನಿಮಾ ಮಾಡ್ತಾರಾ? ಇದು ಸ್ಕ್ರೀನ್ ಗೆ ಬರುತ್ತಾ ಅಂತೆಲ್ಲಾ ಪ್ರಶ್ನೆಗಳು ಹರಿದಾಡುತ್ತಿದ್ದವು. ಆದ್ರೆ ಇವೆಲ್ಲ ಪ್ರಶ್ನೆಗಳನ್ನು ನಾನು ಚಾಲೆಂಜ್ ಆಗಿ ತೆಗೆದುಕೊಂಡೆ. ನಾನು ಮೊದಲಿನಿಂದಲೂ ಮಾಡು ಇಲ್ಲವೇ ಮಡಿ ಅನ್ನೋ ಗುಣದವನು. ಹೀಗಾಗಿ ಬೇರೆ ಭಾಷೆಯವರು ಮಾಡಿದಾಗ ನಾವು ಯಾಕೆ ಮಾಡಬಾರದೆಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಈ ಕಾರಣದಿಂದಾಗಿ ಇಬ್ಬರೂ ನಟರ ಬಳಿ ಈ ಕುರಿತು ಮಾತನಾಡಿದ್ದೇನೆ. ಇಬ್ಬರೂ ನಟರೂ ಕೂಡ ನನಗೆ ಸಹಕರಿಸಿದ್ರು. ಹೀಗೆ ಎಲ್ಲರೂ ಸೇರಿ ಒಂದು ಒಳ್ಳೆಯ ಸಿನಿಮಾ ಮಾಡಿದೆವು. ಅಂದು ಯಾರು ಆಗಲ್ಲ ಅಂದ್ರೋ, ಇಂದು ಅವರೇ ಪಬ್ಲಿಸಿಟಿ ಕೊಡಲು ಆರಂಭಿಸಿದ್ದಾರೆ ಅಂತ ನಕ್ಕರು. ಇದನ್ನೂ ಓದಿ: ಮತ್ತೊಂದು ವಿವಾದದಲ್ಲಿ `ದಿ ವಿಲನ್’ – ಸಿನಿಮಾ ನೋಡಿ ಆಮೇಲೆ ಮಾತ್ನಾಡಿ ಅಂದ್ರು ನಿರ್ದೇಶಕ ಪ್ರೇಮ್

    ಸುದೀಪ್ ಹಾಗೂ ಶಿವಣ್ಣ ಇಬ್ಬರೂ ಸಿನಿಮಾ ಸೆಟ್ ಗೆ ಬಂದಾಗ ಮಕ್ಕಳಂತೆ ನಡೆದುಕೊಳ್ಳುತ್ತಾರೆ. ಹೊರಗಡೆ ಜನ ಏನೂ ಬೇಕಾದ್ರೂ ಹೇಳಲಿ. ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ಆದ್ರೆ ನನ್ನ ಪ್ರಕಾರ ಕನ್ನಡ ಚಿತ್ರರಂಗದಲ್ಲಿ ಇಬ್ಬರೂ ಒಳ್ಳೆಯ ಹಾಗೂ ಅದ್ಭುತ ನಟರು. ಒಟ್ಟಿನಲ್ಲಿ ಇಬ್ಬರೂ ಒಳ್ಳೆಯ ರೀತಿಯಲ್ಲಿ ಅಭಿನಯಿಸಿ ದಿ ವಿಲನ್ ಚಿತ್ರಕ್ಕೆ ಸಹಕರಿಸಿದ್ದಾರೆ ಅಂದ್ರು.

    ನಾನು ಮೊದಲಿನಿಂದಲೂ ಸಿನಿಮಾದಲ್ಲಿ ಹೊಸತನವನ್ನು ಹುಡುಕುತ್ತಿರುತ್ತೇನೆ. ಅದನ್ನೇ ಕೆಲವರು ಗಿಮಿಕ್, ಸ್ವಮೇಕ್ ಅಂತೆಲ್ಲಾ ಹೇಳುತ್ತಿರುತ್ತಾರೆ. ಅವರು ಅಂದುಕೊಳ್ಳಲಿ. ಆದ್ರೆ ಜನರಿಗೆ ಈ ವಿಷಯ ಇದೆ ಅನ್ನೋದನ್ನು ಮನದಟ್ಟು ಮಾಡುವುದು ನನ್ನ ಉದ್ದೇಶವಾಗಿರುತ್ತದೆ. ಹೀಗಾಗಿ ಆ ಮಟ್ಟಕ್ಕೆ ನಾನು ಪ್ರಯತ್ನಿಸುತ್ತೇನೆ. ಒಂದು ಸಲ ಸಿನಿಮಾ ನೋಡಬೇಕೆನ್ನುವ ಮನಸ್ಸು ಪ್ರತಿಯೊಬ್ಬನಿಗೂ ಬರಬೇಕು. ಅದಕ್ಕೆ ನಾನು ಶ್ರಮಿಸುತ್ತೇನೆ ಅಂತ ಹೇಳಿದ್ರು. ಇದನ್ನೂ ಓದಿ: ‘ದಿ ವಿಲನ್’ ಟೈಟಲ್ ಟ್ರ್ಯಾಕ್ ಲಿರಿಕಲ್ ವಿಡಿಯೋ ರಿಲೀಸ್

    ದಿ ವಿಲನ್ ಸಿನಿಮಾದ ಆಡಿಯೋ ಬಿಡುಗಡೆಯಾಗುತ್ತಿದೆ. ನಿನ್ನೆಯಷ್ಟೇ ಸಿನಿಮಾ ಸೆನ್ಸಾರ್ ಗೆ ಹೋಗಿದೆ. ಹೀಗಾಗಿ ಅಲ್ಲಿ ಏನಾದ್ರೂ ಕರೆಕ್ಷನ್ ಗಳಿದ್ದಲ್ಲಿ ಅದನ್ನು ಸರಿಪಡಿಸಲು 10-12 ದಿನಗಳು ಬೇಕೆ ಬೇಕಾಗುತ್ತದೆ. ಚಿತ್ರದಲ್ಲಿ ಗ್ರಾಫಿಕ್ಸ್ ತುಂಬಾ ಇದೆ. ಆಗಸ್ಟ್ 24ರಂದು ಬಿಡುಗಡೆ ಮಾಡಬೇಕು ಅಂತ ಪ್ಲ್ಯಾನ್ ಮಾಡಿದ್ದೇವೆ. ಒಟ್ಟಿನಲ್ಲಿ ಬರುವ ವಾರ ಸೆನ್ಸಾರ್ ಆಗುತ್ತದೆ. ಹೀಗಾಗಿ ಬರುವ ವಾರವೇ ಚಿತ್ರ ಬಿಡುಗಡೆ ದಿನವನ್ನು ಘೋಷಿಸುವುದಾಗಿ ಹೇಳಿದ್ರು. ಒಟ್ಟಿನಲ್ಲಿ ಚಿತ್ರದಲ್ಲಿ ನಮಗೆ ಪ್ರತಿಯೊಬ್ಬರು ಸಹಾಯ ಮಾಡುವ ಮೂಲಕ ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ ಅವರೆಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ: ವಿವಾದಕ್ಕೆ ಗುರಿಯಾಗ್ತಿದೆ `ದಿ ವಿಲನ್’ ಹಾಡು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಸ್ಯಾಂಡಲ್‍ವುಡ್ ನಿರ್ದೇಶಕನಿಂದ ಹಿರಿಯ ನಟಿಗೆ ದೋಖಾ!

    ಸ್ಯಾಂಡಲ್‍ವುಡ್ ನಿರ್ದೇಶಕನಿಂದ ಹಿರಿಯ ನಟಿಗೆ ದೋಖಾ!

    ಬೆಂಗಳೂರು: ಕಿರುತೆರೆಯ ಹಿರಿಯ ನಟಿ ಮಂಜುಳಮ್ಮ ಅವರಿಗೆ ನಿರ್ದೇಶಕ ನವೀನ್ ರೈ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಅವಕಾಶಗಳನ್ನು ಕೊಡಿಸುವದಾಗಿ ಹೇಳಿ ನವೀನ್ ರೈ ಲಕ್ಷಾಂತರ ರೂಪಾಯಿಯನ್ನ ಪಡೆದುಕೊಂಡಿದ್ದರು. ಆದರೆ ನವೀನ್ ರೈ ಯಾವುದೇ ಸಿನಿಮಾ ಮತ್ತು ಧಾರವಾಹಿಗಳಲ್ಲಿ ಅವಕಾಶಗಳನ್ನ ಕೊಡಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಜುಳಮ್ಮ ತಾವು ನೀಡಿದ ಹಣ ಹಿಂದಿರುಗಿಸುವಂತೆ ಕೇಳಿದ್ದಾರೆ. ಹಣ ಕೇಳಿದ್ದಕ್ಕೆ ಕೆಲ ಹುಡುಗರನ್ನು ಕಳುಹಿಸಿ ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಮಂಜುಳಮ್ಮ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಕಲ್ಲಿನ ವೀಣೆ ಧಾರಾವಾಹಿ ಶೂಟಿಂಗ್ ವೇಳೆ ಮಂಜುಳಮ್ಮ ಅವರಿಗೆ ನವೀನ್ ರೈ ಪರಿಚಯ ಮಾಡಿಕೊಂಡಿದ್ದನು. ಚಂದನವನದಲ್ಲಿ ತನಗೆ ಎಲ್ಲರೂ ಪರಿಚಯ ಸ್ಟಾರ್ ನಟರ ಸಿನಿಮಾದಲ್ಲಿ ಪೋಷಕ ಪಾತ್ರಗಳನ್ನು ಕೊಡಿಸುತ್ತೇನೆ ಎಂದು ನಂಬಿಸಿ ಒಡವೆ ಹಾಗು 15 ಲಕ್ಷ ರೂ. ಹಣ ಪಡೆದುಕೊಂಡಿದ್ದಾನೆ ಎಂದು ಮಂಜುಳಮ್ಮ ಆರೋಪಿಸುತ್ತಿದ್ದಾರೆ.

  • ಮಾ ಚಂದ್ರುಗೆ ವೈದ್ಯೆ ಕಾಸು ಕೇಳಿದ್ದು ಯಾಕೆ?

    ಮಾ ಚಂದ್ರುಗೆ ವೈದ್ಯೆ ಕಾಸು ಕೇಳಿದ್ದು ಯಾಕೆ?

    ಬೆಂಗಳೂರು: ಮಾಚಂದ್ರು ಅನ್ನೋ ವಿಲಕ್ಷಣ ಎಲಿಮೆಂಟೊಂದು ಗಾಂಧಿನಗರದಲ್ಲಿದೆ. ಈ ಹಿಂದೆ ಲೂಸ್ ಮಾದನ ಬಂಗಾರಿ ಅನ್ನೋ ಸಿನಿಮಾ ಮೂಲಕ ಡೈರೆಕ್ಟರಾಗಿದ್ದ ಇವರದ್ದು ಫೇಸ್ ಬುಕ್ಕಿನಲ್ಲಿ ಭಯಾನಕ ಹಾವಳಿ. ತನ್ನ ಫ್ರೆಂಡ್ ಲಿಸ್ಟಿನಲ್ಲಿರೋ ಹುಡುಗೀರ ಇನ್ ಬಾಕ್ಸಿಗೆ ಹೋಗಿ ಹಾಯ್, ಹೆಲೋ ಅಂತಾ ಹಲ್ಲು ಕಿರಿದು ಲಲ್ಲೆಗರೆಯುತ್ತಾರೆ ಅನ್ನೋ ಆರೋಪವಿದೆ.

    ಮೊದಲಿಗೆ ನಾನು ಕನ್ನಡ, ತಮಿಳು ಸಿನಿಮಾಗಳನ್ನು ಡೈರೆಕ್ಟ್ ಮಾಡಿದ್ದೀನಿ ಎಂಬ ಸೆಲ್ಫ್ ಇಂಟ್ರಡಕ್ಷನ್ ಕೊಡುತ್ತಾರೆ. ನಾನು ನಮ್ಮಮ್ಮನ ಮೇಲಿನ ಪ್ರೀತಿಗೆ ನನ್ನ ಹೆಸರಿನ ಜೊತೆ ಮಾ ಅನ್ನೋ ಅಕ್ಷರ ಸೇರಿಸಿಕೊಂಡಿದ್ದೀನಿ ಅಂತಾ ಮದರ್ ಸೆಂಟಿಮೆಂಟಿನ ಮಾತಲ್ಲಿ ಶುರುಮಾಡಿ ಕಡೆಗೆ ಸೆಂಡ್ ಯುವರ್ ಪಿಚ್ಚರ್ ಪ್ಲೀಸ್ ಅನ್ನೋಮಟ್ಟಿಗೆ ಹೋಗಿಬಿಡ್ತಾನೆ ಅನ್ನೋದು ಸಾಕಷ್ಟು ಹೆಣ್ಣುಮಕ್ಕಳ ಕಂಪ್ಲೇಂಟು!

    ಇಂಥಾ ಮಾಚಂದ್ರುಗೆ ಯಾರೋ ವೈದ್ಯೆ ಸರಿಯಾಗೇ ಆಟವಾಡಿಸಿದ್ದಾರೆ. ಚಂದ್ರು ಆ ಹೆಣ್ಮಗಳ ಕಡೆಯವರಿಗೆ ಅದೇನು ಕೇಳಿದ್ದರೋ ಏನೋ? ಇವರ ಇನ್ ಬಾಕ್ಸಿಗೇ ಬಂದು `ನನ್ನ ಕಡೆಯವರಿಗೇನೋ ಪ್ರಾಬ್ಲಮ್ಮು. ಅರ್ಜೆಂಟಾಗಿ ಹತ್ತು ಸಾವಿರ ರುಪಾಯಿ ಕೊಡಿ ಪ್ಲೀಸ್’ ಎಂದಿದ್ದಾರೆ. ಆಕೆ ಕಾಸು ಕೇಳುತ್ತಿದ್ದಂತೇ ಚಂದ್ರನ ಚಂಚಲತೆಗೆ ಪೆಟ್ಟು ಬಿದ್ದಂತಾಗಿದೆ. ತಕ್ಷಣ ಈತ ‘ಪರಿಚಯವಾಗಿ ಎರಡು ನಿಮಿಷಕ್ಕೇ ಕಾಸು ಕೇಳುತ್ತಾಳೆ. ನಾಚಿಗೆ ಮಾನ ಮರ್ಯಾದೆ ಇಲ್ಲ ಇವಳಿಗೆ’ ಅಂತಾ ಆಕೆಯೊಂದಿಗೆ ಚಾಟ್ ಮಾಡಿದ ಡಿಟೇಲುಗಳನ್ನು ಸ್ಕ್ರೀನ್ ಶಾಟ್ ತೆಗೆದು ಹಾಕಿಬಿಟ್ಟಿದ್ದಾರೆ!

    ಬಹುಶಃ ಇದನ್ನು ನೋಡಿದ ಆತನ ಅಡ್ವೈಸರುಗಳು `ಹಂಗೆಲ್ಲಾ ಹಾಕ್ಬಾರ್ದು. ತೆಗೀ ಗುರೂ’ ಅಂದಿರಬೇಕು. ಕತ್ತಲಲ್ಲಿ ಮಾಡಿದ ಪೋಸ್ಟನ್ನು ಬೆಳಗಾಗೋ ಹೊತ್ತಿಗೆ ತಾನೇ ಡಿಲೀಟು ಮಾಡಿದ್ದಾರೆ ಗಿಲೀಟು ಚಂದ್ರ.

  • ಪ್ರೇಮ್ ಬಳಸಿದ ಪದಕ್ಕೆ ನಿರ್ದೇಶಕ ಎ.ಆರ್.ಬಾಬು ಅಸಮಾಧಾನ

    ಪ್ರೇಮ್ ಬಳಸಿದ ಪದಕ್ಕೆ ನಿರ್ದೇಶಕ ಎ.ಆರ್.ಬಾಬು ಅಸಮಾಧಾನ

    ಬೆಂಗಳೂರು: ದಿ ವಿಲನ್ ಸಿನಿಮಾ ಸಾರಥಿ ಪ್ರೇಮ್ ವಿರುದ್ಧ ಹಿರಿಯ ನಿರ್ದೇಶಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ದಿ ವಿಲನ್ ಚಿತ್ರದ ಹಾಡೊಂದು ವಿವಾದವಾಗಿದ್ದರಿಂದ ನಿರ್ದೇಶಕ ಪ್ರೇಮ್, ಫೇಸ್‍ಬುಕ್‍ನಲ್ಲಿ ಲೈವ್ ಬಂದು ಸ್ಪಷ್ಟನೆ ನೀಡುವ ವೇಳೆ ಕೆಲ ನಿರ್ದೇಶಕರು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಟಿ ಮಾಲ್‍ನಲ್ಲಿ ವಿಲನ್ ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿದ್ದು, ಈ ಕಾರ್ಯಕ್ರಮಕ್ಕೆ ಆಗಮಿಸುವ ಪ್ರೆಕ್ಷಕರಿಗೆ 500 ರೂ. ಟಿಕೆಟ್ ದರವನ್ನು ನಿಗದಿ ಮಾಡಿದ್ದೇವೆ. ಅಲ್ಲಿ ಸಂಗ್ರಹವಾದ ಆ ಹಣವನ್ನು ಹಿರಿಯ ನಿರ್ದೇಶಕರ ಕುಟುಂಬಕ್ಕೆ ಅಲ್ಲೆ ನೀಡಲಾಗುವುದು ಅಂತಾ ತಿಳಿಸಿದ್ದರು. ಇದನ್ನೂ ಓದಿ: ವಿವಾದಕ್ಕೆ ಗುರಿಯಾಗ್ತಿದೆ `ದಿ ವಿಲನ್’ ಹಾಡು?

    ಈ ವೇಳೆ ತಮ್ಮ ಮಾತಿನಲ್ಲಿ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ನಿರ್ದೇಶಕರು ಎ.ಟಿ.ರಘು, ಎ.ಆರ್.ಬಾಬು ಸೇರಿದಂತೆ ಹಲವರು ನಿರ್ಗತಿಕರಾಗಿದ್ದಾರೆ ಎಂದು ಹೇಳಿದ್ದರು. ನಿರ್ದೇಶಕರಿಗೆ ನಿರ್ಗತಿಕರು ಎಂಬ ಪದ ಬಳಸಿದ್ದಕ್ಕೆ ಎ.ಆರ್.ಬಾಬು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಚಂದನವನದ ಹಿರಿಯ ನಿರ್ದೇಶಕರು ಆರ್ಥಿಕ ಸಂಕಷ್ಟದಲ್ಲಿರೋದು ನಿಜ. ಆದ್ರೆ ಪ್ರೇಮ್ ನಿರ್ಗತಿಕರು ಎಂಬ ಪದ ಬಳಸಿರೋದು ತಪ್ಪು. ನಿರ್ಗತಿಕರು ಅಂದ್ರೆ ಯಾರು ಇಲ್ಲದವರರು ಎಂದರ್ಥವಾಗುತ್ತದೆ ಎಂದು ಬಾಬು ಹೇಳಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದರ್ಶನ್ ಬಾಸ್ ಅಂದ್ರೂ ಖುಷಿನೇ, ಯಶ್ ಬಾಸ್ ಅಂದ್ರೂ ಸಂತೋಷನೇ – ಅವರವರ ಮನೆಗೆ ಅವರೇ ಬಾಸ್ ಎಂದ ಸೆಂಚುರಿ ಸ್ಟಾರ್ ಶಿವಣ್ಣ

    https://www.facebook.com/prems.picttures/videos/1803728239684112/

  • ನಿರ್ಮಾಪಕರ ಪತ್ನಿ ತಮ್ಮ ಪತಿಯೊಂದಿಗೆ ಮಲಗಲು ಹೇಳಿದ್ರು : ಕಾಸ್ಟಿಂಗ್ ಕೌಚ್ ಬಗ್ಗೆ ಗೀತ ಸಾಹಿತಿ ಮಾತು

    ನಿರ್ಮಾಪಕರ ಪತ್ನಿ ತಮ್ಮ ಪತಿಯೊಂದಿಗೆ ಮಲಗಲು ಹೇಳಿದ್ರು : ಕಾಸ್ಟಿಂಗ್ ಕೌಚ್ ಬಗ್ಗೆ ಗೀತ ಸಾಹಿತಿ ಮಾತು

    ಹೈದರಾಬಾದ್: ಕಳೆದ ಕೆಲ ದಿನಗಳ ಹಿಂದೆ ಟಾಲಿವುಡ್‍ನಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ಶ್ರೀ ರೆಡ್ಡಿ ಶಾಕಿಂಗ್ ಹೇಳಿಕೆ ನೀಡಿದ ಬಳಿಕ ಮತ್ತೊಬ್ಬ ಕಲಾವಿದೆ ಟಾಲಿವುಡ್ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ.

    ಟಾಲಿವುಡ್ ನಲ್ಲಿ ಬಿಗ್ ಹಿಟ್ ಆಗಿದ್ದ `ಅರ್ಜುನ್ ರೆಡ್ಡಿ’ ಹಾಗೂ `ಪೆಳ್ಳಿ ಚೂಪುಲು’ ಸಿನಿಮಾಗಳಿಗೆ ಸಾಹಿತ್ಯ ಬರೆದಿದ್ದ ಶ್ರೇಷ್ಠ ಈ ಕುರಿತು ಆರೋಪ ಮಾಡಿದ್ದು, ನಿರ್ಮಾಪರೊಬ್ಬರ ಪತ್ನಿ ತಮ್ಮ ಪತಿಯ ಕೋರಿಕೆಗಳ್ನು ಪೂರೈಸಲು ಹೇಳಿದ್ದರು ಎಂದು ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

    ಸಿನಿಮಾ ಉದ್ಯಮದಿಂದ ಕೆಲ ತಿಂಗಳು ಬ್ರೇಕ್ ಪಡೆದಿದ್ದ ಕಾರಣ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸಿನಿಮಾ ರಂಗದಲ್ಲಿ ಕೆಲವರು ನೇರವಾಗಿಯೇ ಈ ಕುರಿತು ಕೇಳಿದ್ದಾರೆ. ಆದರೆ ನಾನು ನನ್ನ ಬರವಣಿಗೆ ಮೂಲಕ ಉತ್ತಮ ಅವಕಾಶಗಳನ್ನು ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

    ಇದೇ ವೇಳೆ ತಮ್ಮ ಮುಂದೆಯೇ ಮಹಿಳಾ ನಿರ್ದೇಶಕರೊಬ್ಬರಿಗೆ ನಡೆದ ಘಟನೆಯನ್ನು ಹಂಚಿಕೊಂಡಿರುವ ಅವರು, ಒಬ್ಬ ವ್ಯಕ್ತಿ ಮಹಿಳಾ ನಿರ್ದೇಶಕರಿಗೆ ಪ್ರಪೋಸ್ ಮಾಡಲು ಗೋವಾದಲ್ಲಿ ಪಾರ್ಟಿ ಏರ್ಪಡಿಸಿದ್ದ. ಆದರೆ ಈ ಪಾರ್ಟಿಗೆ ತೆರಳಲು ಆಕೆ ನಿರಾಕರಿಸಿದ ವೇಳೆ ಹಲ್ಲೆ ನಡೆಸಿದ್ದರು. ಈ ವೇಳೆ ತಾನು ಅಸಹಾಯಕಳಾಗಿ ನಿಂತಿದ್ದೆ. ಇದರಿಂದ ತಾನು ಸಿನಿಮಾ ರಂಗ ಕೆಲ ತಿಂಗಳು ಬ್ರೇಕ್ ಪಡೆದಿದ್ದೆ ಎಂದು ತಿಳಿಸಿದ್ದಾರೆ.

    ಟಾಲಿವುಡ್ ಜನಪ್ರಿಯ ಗೀತಾ ಸಾಹಿತಿಯಾಗಿರುವ ಶ್ರೇಷ್ಠ ಅವರು, ಇದುವರೆಗೂ `ಮಧುರಂ ಮಧುರಂ’, `ಯುದ್ಧ ಶರಣಂ’, `ಪೆಳ್ಳಿ ಚೂಪುಲು’ ಮತ್ತು `ಅರ್ಜುನ್ ರೆಡ್ಡಿ’ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಹಿಂದೆ ಟಾಲಿವುಡ್ ನಲ್ಲಿ ಶ್ರೀ ರೆಡ್ಡಿ ಆರೋಪಗಳ ಬಳಿಕ ಹಲವರು ಕಾಸ್ಟಿಂಗ್ ಕೌಚ್ ಬಗ್ಗೆ ಆರೋಪ ಪ್ರತ್ಯಾರೋಪ ಮಾಡಿದ್ದರು.

  • ‘ಟಗರು’ ಶತದಿನೋತ್ಸವದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಚಿತ್ರ ತಂಡ

    ‘ಟಗರು’ ಶತದಿನೋತ್ಸವದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಚಿತ್ರ ತಂಡ

    ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಅಭಿನಯದ `ಟಗರು’ ಸಿನಿಮಾ ನೂರು ದಿನ ಪೂರೈಸಿದ ಸಂದರ್ಭದಲ್ಲಿ ಚಿತ್ರತಂಡ ಅಭಿಮಾನಿಗಳಿಗೆ ಶುಭ ಸುದ್ದಿಯನ್ನು ನೀಡಿದೆ. ಇದೇ ಚಿತ್ರ ತಂಡದಿಂದ ಟಗರು-2 ಚಿತ್ರ ನಿರ್ಮಾಣವಾಗಲಿದ್ದು ಶಿವರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆಯಾಗಿ ನಟಿಸಲಿದ್ದಾರೆ ಎಂದು ನಿರ್ದೇಶಕ ಸೂರಿ ತಿಳಿಸಿದ್ದಾರೆ.

    ಇವತ್ತು ಶಿವರಾಜ್‍ಕುಮಾರ್ ಅಭಿಮಾನಿ ಸಂಘಗಳ ವತಿಯಿಂದ ಸಂತೋಷ್ ಚಿತ್ರಮಂದಿರದಲ್ಲಿ ನೂರನೇ ದಿನದ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು. ಟಗರು ಕಟೌಟ್‍ಗೆ ಹೂವಿನಹಾರ ಹಾಕಿ ಪಟಾಕಿ ಸಿಡಿಸಿದ ಅಭಿಮಾನಿಗಳು ಚಿತ್ರತಂಡವನ್ನ ಸಂತೋಷ್ ಚಿತ್ರಮಂದಿರಕ್ಕೆ ಬರಮಾಡಿಕೊಂಡರು.

    ಶಿವಣ್ಣ, ಡಾಲಿ ಧನಂಜಯ್, ಮಾನ್ವಿತಾ, ನಿರ್ದೇಶಕ ಸೂರಿ, ನಿರ್ಮಾಪಕ ಶಶಾಂಕ್ ಸೇರಿದಂತೆ ಇಡೀ ಟಗರು ಟೀಂ `ಟಗರು ಸೆಂಚುರಿ’ ಸಂಭ್ರಮದಲ್ಲಿ ಪಾಲ್ಗೊಂಡಿದ್ರು. ಶಿವರಾಜ್ ಕುಮಾರ್ ಮೊದಲಿಗೆ ಕೇಕ್ ಕಟ್ ಮಾಡಿ ಅಭಿಮಾನಿಗಳಿಗೆ ಸಿಹಿಹಂಚಿದರು. ಟಗರು ಟೈಟಲ್ ಟ್ರ್ಯಾಕ್ ಹಾಡಿಗೆ ಹೆಜ್ಜೆ ಹಾಕಿ ನೆರೆದಿದ್ದವರನ್ನೆಲ್ಲಾ ರಂಜಿಸಿದರು.

     

  • ಪಾರ್ವತಮ್ಮ ರಾಜ್ ಕುಮಾರ್ 1ನೇ ವರ್ಷದ ಪುಣ್ಯ ತಿಥಿ: ಸಮಾಧಿಗೆ ಕುಟುಂಬದಿಂದ ಪೂಜೆ

    ಪಾರ್ವತಮ್ಮ ರಾಜ್ ಕುಮಾರ್ 1ನೇ ವರ್ಷದ ಪುಣ್ಯ ತಿಥಿ: ಸಮಾಧಿಗೆ ಕುಟುಂಬದಿಂದ ಪೂಜೆ

    ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಶ್ರೀಮತಿ, ಕನ್ನಡ ಚಿತ್ರರಂಗದ ಧೀಮಂತ ನಿರ್ದೇಶಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ಇಂದಿಗೆ ನಮ್ಮನ್ನೆಲ್ಲ ಅಗಲಿ ಒಂದು ವರ್ಷವಾಗಿದೆ.

    ಒಂದನೇ ವರ್ಷದ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಗೆ ದೊಡ್ಮನೆ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೋಗೆ ಆಗಮಿಸಿ ಪಾರ್ವತಮ್ಮನವರ ಸಮಾಧಿಗೆ ಪೂಜೆ ಸಲ್ಲಿಸಿದರು. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಇಡೀ ದೊಡ್ಮನೆ ಕುಟುಂಬ ಪೂಜೆಯಲ್ಲಿ ಭಾಗಿಯಾಗಿತ್ತು.

    ಕಂಠೀರವ ಸ್ಟುಡಿಯೋದಲ್ಲಿ ಈಗಾಗಲೇ ಪಾರ್ವತಮ್ಮ ಹಾಗೂ ಡಾ. ರಾಜ್‍ಕುಮಾರ್ ಸ್ಮಾರಕಕ್ಕೆ ಅಲಂಕಾರ ಮಾಡಲಾಗಿದೆ. ಇಂದು ಪುಣ್ಯತಿಥಿಯ ಪ್ರಯುಕ್ತ ರಕ್ತದಾನ, ಆರೋಗ್ಯ ತಪಾಸಣೆ, ಅನ್ನದಾನವನ್ನು ಆಯೋಜಿಸಲಾಗಿದ್ದು, ದೊಡ್ಮನೆಯಲ್ಲಿ ವರ್ಷದ ತಿಥಿ ಕಾರ್ಯಕ್ರಮಗಳು ನಡೆಯಿತು.

    ಅಮ್ಮನ ನೆನಪಿನಲ್ಲಿ ಶಿವಣ್ಣ ಹಾಗೂ ಪುನೀತ್ ರಾಜ್ ಕುಮಾರ್ ಇಂದು ಸಿರಿಗೇರಿ ಯರಿಸ್ವಾಮಿ ಬರೆದ ‘ದೊಡ್ಮನೆ ಅಮ್ಮ’ ಪುಸ್ತಕವನ್ನು ಬಿಡುಗಡೆ ಮಾಡಿದರು.

    ಇನ್ನೂ ಸಮಾಧಿಗೆ ರಾಜ್ ಕುಟುಂಬದವರು ಸೇರಿದಂತೆ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ಹಿರಿಯ ನಟಿ ಶಾಂತಮ್ಮ, ಅನೇಕರು ಭಾಗಿಯಾಗಿದ್ದರು. ಇದೇ ವೇಳೆ ಪಾರ್ವತಮ್ಮನವರನ್ನು ನೆನೆದ ರಾಕ್ ಲೈನ್ ವೆಂಕಟೇಶ್, ನನ್ನ ಅಮ್ಮನನ್ನು ಕಳೆದುಕೊಂಡ ನಂತರ ಅಮ್ಮನ ಸ್ಥಾನ ನೀಡಿದ್ದು, ಪಾರ್ವತಮ್ಮ ಮತ್ತು ತಂದೆ ಸ್ಥಾನದಲ್ಲಿ ಡಾ.ರಾಜ್ ಕುಮಾರ್ ನಿಂತಿದ್ದರು. ಇಂದು ನಾನು ಏನು ಆಗಿದ್ದೇನೊ ಅದಕ್ಕೆ ಇವರಿಬ್ಬರು ಕಾರಣ ಎಂದು ಹೇಳಿದರು. ಪಾರ್ವತಮ್ಮನವರ ಹುಟ್ಟುಹಬ್ಬಕ್ಕೆ ಪ್ರತಿ ವರ್ಷ ಸೀರೆ ತಂದು ಕೊಡುತ್ತಿದ್ದ ಬಗ್ಗೆ ಪ್ರಶ್ನೆ ಕೇಳಿದಕ್ಕೆ ರಾಕ್ ಲೈನ್ ವೆಂಕಟೇಶ್ ಭಾವುಕರಾದರು.

  • ಖಾಸಗಿ ವಿಡಿಯೋ ಅಪ್ಲೋಡ್ ಮಾಡ್ತೀನಿ: ದಂಪತಿಗೆ ಬೆದರಿಸಿದ ನಿರ್ದೇಶಕ ಅರೆಸ್ಟ್

    ಖಾಸಗಿ ವಿಡಿಯೋ ಅಪ್ಲೋಡ್ ಮಾಡ್ತೀನಿ: ದಂಪತಿಗೆ ಬೆದರಿಸಿದ ನಿರ್ದೇಶಕ ಅರೆಸ್ಟ್

    ಬೆಂಗಳೂರು: ದಂಪತಿಯ ಖಾಸಗಿ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ನೀಡಿದ ನಿರ್ದೇಶಕ ಸೇರಿ ನಾಲ್ಕು ಮಂದಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

    ನಿರ್ದೇಶಕ ಸಂತೋಷ್, ಪ್ರಶಾಂತ್, ಸುರೇಶ್ ಹಾಗೂ ಪ್ರದೀಪ್ ಬಂಧಿತ ಆರೋಪಿಗಳು. ದಂಪತಿಯ ಖಾಸಗಿ ಕ್ಷಣಗಳ ವಿಡಿಯೋ ಅಪ್ಲೋಡ್ ಮಾಡುವುದಾಗಿ ಆರೋಪಿಗಳು ಬೆದರಿಕೆ ನೀಡಿ, 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.

    ದೂರುದಾರ ದಂಪತಿ ಜೊತೆ ಆರೋಪಿ ಹೊರ ರಾಜ್ಯಕ್ಕೆ ಪ್ರವಾಸ ಹೋಗಿದ್ದರು. ಪ್ರವಾಸದ ವೇಳೆ ಪರಸ್ಪರ ಫೋಟೋ ತೆಗೆದುಕೊಂಡಿದ್ದರು. ಪ್ರವಾಸದ ಬಳಿಕ ಶೇರ್ ಇಟ್ ಮೂಲಕ ಫೋಟೋ ಶೇರ್ ಮಾಡಿಕೊಳ್ಳಲಾಗಿತ್ತು. ಇದೇ ವೇಳೆ ದಂಪತಿಯ ಖಾಸಗಿ ಫೋಟೋ, ವಿಡಿಯೋಗಳು ಸಹ ಶೇರ್ ಆಗಿತ್ತು.

    ಆರೋಪಿ ಸಂತೋಷ್ ಈ ಫೋಟೋಗಳನ್ನು ಇಟ್ಟುಕೊಂಡು ದಂಪತಿಗೆ ಬೆದರಿಕೆ ಹಾಕುತ್ತಿದ್ದನು. 5 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟು, ಹಣ ಕೊಡದಿದ್ದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸುತ್ತಿದ್ದನು.

    ಆರೋಪಿ ಸಂತೋಷ್ ರಾಜಾ ರಾಣಿ ಚಲನಚಿತ್ರದ ನಿರ್ದೇಶನ ಮಾಡಲು ಪ್ರಯತ್ನಿಸುತ್ತಿದ್ದು, ಚಿತ್ರವನ್ನು ನಿರ್ಮಾಣ ಮಾಡಲು ದಂಪತಿ ಹತ್ತಿರ ಹಣ ಕೇಳಿದ್ದರು. ಆದರೆ ದಂಪತಿ ಹಣ ಕೊಡಲು ನಿರಾಕರಿಸಿದ್ದರು. ಆಗ ಅವರ ಮೊಬೈಲಿನಿಂದ ಖಾಸಗಿ ದೃಶ್ಯ ಕಳವು ಮಾಡಿದ್ದನು. ಬಳಿಕ ಆರೋಪಿ ಹಣ ನೀಡುವಂತೆ ಒತ್ತಾಯ ಮಾಡಿ ಬೆದರಿಕೆ ಹಾಕಿದ್ದನು.

    ಸದ್ಯ ಸೈಬರ್ ಪೋಲೀಸರಿಗೆ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿದ ಪೊಲೀಸರು ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ.