Tag: director

  • ಮಾಜಿ ಪತ್ನಿ ಆರೋಪಕ್ಕೆ ಫೇಸ್‌ಬುಕ್‌ನಲ್ಲೇ ಉತ್ತರಿಸ್ತೀನಿ ಅಂದ್ರು ಗುರುಪ್ರಸಾದ್!

    ಮಾಜಿ ಪತ್ನಿ ಆರೋಪಕ್ಕೆ ಫೇಸ್‌ಬುಕ್‌ನಲ್ಲೇ ಉತ್ತರಿಸ್ತೀನಿ ಅಂದ್ರು ಗುರುಪ್ರಸಾದ್!

    ಬೆಂಗಳೂರು: ಮೀಟೂ ಎಂಬ ಅಭಿಯಾನ ರಾಜ್ಯಕ್ಕೆ ಕಾಲಿಡುತ್ತಿದ್ದಂತೆ ಸ್ಯಾಂಡಲ್ ವುಡ್‍ನಲ್ಲಿ ಬಾಂಬ್‍ಗಳ ಮೇಲೆ ಬಾಂಬ್‍ಗಳು ಸಿಡಿಯುತ್ತಿವೆ. ಇದೀಗ ನಿರ್ದೇಶಕ ಗುರುಪ್ರಸಾದ್ ಅವರು ಮಾಜಿ ಪತ್ನಿ ಆರತಿ ಮೀಟೂ ಆರೋಪಕ್ಕೆ ಫೇಸ್‍ಬುಕ್‍ನಲ್ಲಿ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.

    ಈ ಮೂಲಕ ನಟಿ ಶೃಇಹರಿಹರನ್, ಸಂಗೀತ ಭಟ್ ತಾವೂ ಪತಿವ್ರತೆಯರು ಅಂತ ಸಾಬೀತು ಮಾಡಲು ಹೊರಟಿದ್ದಾರೆ ಎಂದು ಡೈಲಾಗ್ ಹೊಡೆದು ವಿವಾದ ಸೃಷ್ಟಿಸಿಕೊಂಡಿದ್ದ ನಿರ್ದೇಶಕ ಗುರುಪ್ರಸಾದ್ ಈಗ ಮತ್ತೊಂದು ಬಾಂಬ್ ಸಿಡಿಸಲು ಮುಂದಾಗಿದ್ದಾರೆ.

    ಮಾಜಿ ಪತ್ನಿ ಏನ್ ಹೇಳಿದ್ದರು?:
    ಯಾವುದೇ ವ್ಯಕ್ತಿ ಯಾರ ಬಗ್ಗೆಯೂ ಮಾತನಾಡಿದರೂ ಅದು ಒಪ್ಪುವಂತಹ ವಿಷಯವಲ್ಲ ಅನ್ನೋದು ನನ್ನ ಅಭಿಪ್ರಾಯವಾಗಿದೆ. ನಾನು ಟಿವಿ, ನ್ಯೂಸ್ ಪೇಪರ್ ಓದದೇ ಇರುವುದರಿಂದ ಯಾರಾದ್ರೂ ಹೇಳಿದ್ರೆ ಅಷ್ಟು ಮಾತ್ರ ನನಗೆ ಗೊತ್ತಿರುತ್ತದೆ. ಆದ್ರೆ ನನ್ನ ಮಗಳು ಯೂಟ್ಯೂಬ್ ನಲ್ಲಿ ಬಂದಂತಹ ಲಿಂಕ್ ತೋರಿಸಿದಳು. ಅದನ್ನು ನೋಡಿದಾಗ ಯಾವುದೇ ಒಬ್ಬ ವ್ಯಕ್ತಿಗೆ ಇನ್ನೊಬ್ಬ ಹೆಣ್ಣು ಅಥವಾ ಮಹಿಳೆ ಹಾಗೂ ಟ್ರಾನ್ಸ್ ಜೆಂಡರ್ ಬಗ್ಗೆಯೂ ಈ ತರ ಮಾತನಾಡುವ ಹಕ್ಕು ಇರಲ್ಲ. ಗುರುಗೆ ಸ್ವಂತ ಮಗಳಿದ್ದಾಳೆ. ಹೀಗಾಗಿ ಎಲ್ಲರೂ ಹೆಣ್ಣು ಮಕ್ಕಳು ಸರಿಯಿಲ್ಲ ಅಂತ ಒಬ್ಬ ಅಪ್ಪನಾಗಿ ಹೇಳೋದಕ್ಕೂ ಮುಂಚೆ ಯೋಚನೆ ಮಾಡಬೇಕು. ಆತ ಯೋಚನೆ ಮಾಡುತ್ತಿಲ್ಲ ಅಂದ್ರೆ ಆತ ಅಪ್ಪನಾಗಿ ಬಿಹೇವ್ ಮಾಡ್ತಿಲ್ಲ ಅಂತ ಅರ್ಥ ಎಂದು ಪತಿ ಹೇಳಿಕೆಯ ವಿರುದ್ಧ ಗರಂ ಆಗಿದ್ದರು.

    ಯಾರ ಬಾಯಿಂದ ಹೆಣ್ಣು ಮಗು ಅಂತ ಪದ ಬರುತ್ತಾ ಇದೆ ಅಲ್ವಾ, ಆತ ತನ್ನ ಸ್ವಂತ 14 ವರ್ಷದ ಮಗಳನ್ನು ಹೆಂಡ್ತಿ ಸಮೇತ ಮಧ್ಯರಾತ್ರಿ ಆಚೆ ಹಾಕಿದ್ದರು. ಇದು ನಡೆದಿರುವ ಘಟನೆಯಾಗಿದೆ. ಆದ್ರೆ ನಾನು ಯಾವುದೇ ರಗಳೆ ರಂಪ ಮಾಡದೇ ಹೊರ ಬಂದಿದ್ದೇನೆ. ಒಬ್ಬ ವ್ಯಕ್ತಿಗೆ ನಾವು ಬೇಡ ಅಂತ ಹೇಳಿದ ಬಳಿಕ ಯಾವುದೇ ಗಲಾಟೆ ಮಾಡುವುದು ಬೇಕಿರಲಿಲ್ಲ. ಯಾಕಂದ್ರೆ ಆ ವ್ಯಕ್ತಿ ಬೇಡ ಅಂದ ಬಳಿಕ ರಗಳೆ ಮಾಡಿ ಪ್ರಯೋಜನವೇನು ಅಂತ ಎಲ್ಲೂ ಬರಲಿಲ್ಲ ಅಂತ ಹೇಳಿದ ಅವರು ಇದಾಗಿ 3 ವರ್ಷ ಆಯ್ತು ಅಂತ ಹೇಳಿದ್ದರು.

    ಒಬ್ಬ ಅಪ್ಪನಾಗಿಯೂ ಗುರು ಅವರ ಜವಾಬ್ದಾರಿಯನ್ನು ನಿಭಾಯಿಸುತ್ತಿಲ್ಲ. ಅವರ ಮಗಳನ್ನು ಬಂದು ನೋಡುವುದಿಲ್ಲ. ನಮಗೂ ಅವರಿಗೂ ಯಾವುದೇ ರೀತಿಯ ಸಂಪರ್ಕವೇ ಇಲ್ಲ. ಇಬ್ಬರೂ ಒಪ್ಪಿಕೊಂಡು ವಿಚ್ಛೇದನಕ್ಕೆ ಅಂತ ಹೋಗಿದ್ದೆವು. ಆಗ ಅವರು 2 ಸಲ ಬಂದ್ರು ಆ ನಂತರ ಕೋರ್ಟ್ ಗೂ ಬರುತ್ತಿಲ್ಲ. ಹೀಗಾಗಿ ಅವರ ಯಾವುದೇ ರೀತಿಯ ಸಂಪರ್ಕಕ್ಕೂ ನಾನು ಸಿಗುತ್ತಿಲ್ಲ. ಅವರ ಮನೆ ಹತ್ರ ಹೋದರೂ ಸಿಗುತ್ತಿಲ್ಲ. ಡಿವೋರ್ಸ್ ಪೇಪರ್ ಗೆ ಸಹಿ ಹಾಕಿ ಕೊಡಿ ಅಂದ್ರೂ ಅವರು ಸಿಗ್ತಿಲ್ಲ ಅಂತ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=P0ht0YhqeXg

    https://www.youtube.com/watch?v=u4enQ9slDcc

  • ನಿರ್ದೇಶಕ ಗುರುಪ್ರಸಾದ್ ವಿರುದ್ಧ ಸಿಡಿದ ಸಂಗೀತಾ ಭಟ್ ಪತಿ

    ನಿರ್ದೇಶಕ ಗುರುಪ್ರಸಾದ್ ವಿರುದ್ಧ ಸಿಡಿದ ಸಂಗೀತಾ ಭಟ್ ಪತಿ

    ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ ಹೇಳಿಕೆಗೆ ನಟಿ ಸಂಗೀತಾ ಭಟ್ ಪತಿ ಸುದರ್ಶನ್ ಭಟ್  2ನೇ ಸಲ ಚಿತ್ರೀಕರಣದ ಸಂಪೂರ್ಣ ಮಾಹಿತಿ ನೀಡಿದ್ದಾರೆ.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಗುರುಪ್ರಸಾದ್ ನೀಡಿದ್ದ ಹೇಳಿಕೆಗೆ ಸಂಗೀತಾ ಭಟ್ ಪತಿ ಸುದರ್ಶನ್ ಭಟ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ಗುರುಪ್ರಸಾದ್ ಯಾವ ಕಾರಣಕ್ಕಾಗಿ 2ನೇ ಸಲ ಚಿತ್ರದ ಸನ್ನಿವೇಷದ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಅವರು ಉದ್ದೇಶ ಪೂರ್ವಕವಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

    ಸದ್ಯದ ಪರಿಸ್ಥಿತಿಯಲ್ಲಿ ಸಂಗೀತಾ ಚಿತ್ರರಂಗವನ್ನು ಬಿಟ್ಟಿದ್ದಾಳೆ. ಅವಳು ಯಾವುದೇ ಪಬ್ಲಿಸಿಟಿಗಾಗಿ ಮೀಟೂ ಆರೋಪ ಮಾಡಿಲ್ಲ. ಅದರ ಅವಶ್ಯಕತೆಯೂ ಆಕೆಗೆ ಇಲ್ಲ. ಆಕೆಯ ದಾರಿಯೇ ಈಗ ಬೇರೆಯಾಗಿದೆ. ಚಿತ್ರರಂಗದಲ್ಲಿದ್ದಾಗ ಆದಂತಹ ಘಟನೆಗಳ ಕುರಿತು ಅವಳು ಮಾತನಾಡಿದ್ದಳೆ ಹೊರತು, ಯಾರನ್ನು ನಿರ್ದಿಷ್ಟವಾಗಿ ಗುರುತಿಸಿ ಆಪಾದನೆ ಮಾಡಿಲ್ಲ. ಗುರುಪ್ರಸಾದ್ ಸುಮ್ಮನೆ ಆಕೆಯನ್ನು ಎಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.

    2ನೇ ಚಿತ್ರದಲ್ಲಿ ನಟಿಸಲು ಸಂಗೀತಾ ಗುರುಪ್ರಸಾದ್ ಬಳಿ ಹೋಗಿರಲಿಲ್ಲ. ಖಾಸಗಿ ಕಾರ್ಯಕ್ರಮದಲ್ಲಿ ಅವರೇ ಬಂದು, ನನ್ನ ಚಿತ್ರದಲ್ಲಿ ನಟಿಯಾಗಿ ಆಯ್ಕೆ ಮಾಡು ಎಂದು ಕೇಳಿದ್ದರು. ಈ ಮೊದಲು ಚಿತ್ರದಲ್ಲಿ ಆ ಸನ್ನಿವೇಷ ಇರಲಿಲ್ಲ. ನಂತರ ಇದನ್ನು ಗುರುಪ್ರಸಾದ್ ಸೇರಿಸಿದ್ದರು.

    ನಮ್ಮೆಲ್ಲರ ಸಮ್ಮುಖದಲ್ಲೇ ಆ ಸನ್ನಿವೇಷ ಚಿತ್ರಿಕರಿಸಲಾಗಿತ್ತು. ಆದರೆ ಆ ಬಗ್ಗೆ ನಾವು ಯಾವುತ್ತೂ ಚಕಾರ ಎತ್ತಿರಲಿಲ್ಲ. ಆದರೆ ಅವರು ಅದನ್ನೇ ಮಾಧ್ಯಮಗಳಲ್ಲಿ ಬಿಂಬಿಸುತ್ತಿದ್ದಾರೆ. ನಾವೆಲ್ಲಾ ಕಲಾವಿದರು, ಈ ರೀತಿಯ ಕೀಳು ಮಟ್ಟದಲ್ಲಿ ನಾವು ಯೋಚನೆ ಮಾಡುವುದಿಲ್ಲ. ಸಂಗೀತಾರ ಚಿತ್ರದ ಸನ್ನವೇಷವನ್ನು ಹೇಳುವ ಮೂಲಕ ಅವರ ಕೀಳು ಮಟ್ಟವನ್ನು ತೋರಿಸಿದ್ದಾರೆ ಎಂದು ಸುದರ್ಶನ್ ದೂಷಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/u4enQ9slDcc

  • ಸ್ವಂತ ಮಗಳನ್ನೇ ಗುರು ಮಧ್ಯರಾತ್ರಿ ಮನೆಯಿಂದ ಹೊರ ಹಾಕಿದ್ರು- ಮಾಜಿ ಪತ್ನಿ ಆರತಿ

    ಸ್ವಂತ ಮಗಳನ್ನೇ ಗುರು ಮಧ್ಯರಾತ್ರಿ ಮನೆಯಿಂದ ಹೊರ ಹಾಕಿದ್ರು- ಮಾಜಿ ಪತ್ನಿ ಆರತಿ

    ಬೆಂಗಳೂರು: ಮೀಟೂ ಆರೋಪ ಮಾಡಿದ್ದ ನಟಿಯರ ವಿರುದ್ಧ ರೇಗಾಡಿದ ಮಠ ಚಿತ್ರದ ನಿರ್ದೇಶಕ ಗುರುಪ್ರಸಾದ್ ಅವರು ತನ್ನ 14 ವರ್ಷದ ಸ್ವಂತ ಮಗಳು ಹಾಗೂ ಪತ್ನಿಯನ್ನೇ ಮಧ್ಯರಾತ್ರಿ ಮನೆಯಿಂದ ಹೊರಹಾಕಿದ್ದಾರೆ ಎಂಬ ಸ್ಫೋಟಕ ವಿಚಾರವೊಂದು ಬಯಲಾಗಿದೆ.

    ಮೀಟೂ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡವರ ವಿರುದ್ಧ ತಮ್ಮ ಆಕ್ರೋಶವನ್ನು ಗುರುಪ್ರಸಾದ್ ಮಂಗಳವಾರ ಹೊರಹಾಕಿದ್ದರು. ಈ ವಿಚಾರವಾಗಿ ಇಂದು ಗುರು ಮೊದಲ ಪತ್ನಿ ಆರತಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅಚ್ಚರಿಯ ಸಂಗತಿಯೊಂದನ್ನು ಹೊರಹಾಕಿದ್ದಾರೆ.

    ಯಾವುದೇ ವ್ಯಕ್ತಿ ಯಾರ ಬಗ್ಗೆಯೂ ಮಾತನಾಡಿದರೂ ಅದು ಒಪ್ಪುವಂತಹ ವಿಷಯವಲ್ಲ ಅನ್ನೋದು ನನ್ನ ಅಭಿಪ್ರಾಯವಾಗಿದೆ. ನಾನು ಟಿವಿ, ನ್ಯೂಸ್ ಪೇಪರ್ ಓದದೇ ಇರುವುದರಿಂದ ಯಾರಾದ್ರೂ ಹೇಳಿದ್ರೆ ಅಷ್ಟು ಮಾತ್ರ ನನಗೆ ಗೊತ್ತಿರುತ್ತದೆ. ಆದ್ರೆ ನನ್ನ ಮಗಳು ಯೂಟ್ಯೂಬ್ ನಲ್ಲಿ ಬಂದಂತಹ ಲಿಂಕ್ ತೋರಿಸಿದಳು. ಅದನ್ನು ನೋಡಿದಾಗ ಯಾವುದೇ ಒಬ್ಬ ವ್ಯಕ್ತಿಗೆ ಇನ್ನೊಬ್ಬ ಹೆಣ್ಣು ಅಥವಾ ಮಹಿಳೆ ಹಾಗೂ ಟ್ರಾನ್ಸ್ ಜೆಂಟರ್ ಬಗ್ಗೆಯೂ ಈ ತರ ಮಾತನಾಡುವ ಹಕ್ಕು ಇರಲ್ಲ ಅಂತ ಹೇಳಿದ್ರು.

    ಗುರುಗೆ ಸ್ವಂತ ಮಗಳಿದ್ದಾಳೆ. ಹೀಗಾಗಿ ಎಲ್ಲರೂ ಹೆಣ್ಣು ಮಕ್ಕಳು ಸರಿಯಿಲ್ಲ ಅಂತ ಒಬ್ಬ ಅಪ್ಪನಾಗಿ ಹೇಳೋದಕ್ಕೂ ಮುಂಚೆ ಯೋಚನೆ ಮಾಡಬೇಕು. ಆತ ಯೋಚನೆ ಮಾಡುತ್ತಿಲ್ಲ ಅಂದ್ರೆ ಆತ ಅಪ್ಪನಾಗಿ ಬಿಹೇವ್ ಮಾಡ್ತಿಲ್ಲ ಅಂತ ಅರ್ಥ ಎಂದು ಪತಿ ಹೇಳಿಕೆಯ ವಿರುದ್ಧ ಗರಂ ಆದ್ರು.

    ಯಾರ ಬಾಯಿಂದ ಹೆಣ್ಣು ಮಗು ಅಂತ ಪದ ಬರುತ್ತಾ ಇದೆ ಅಲ್ವಾ, ಆತ ತನ್ನ ಸ್ವಂತ 14 ವರ್ಷದ ಮಗಳನ್ನು ಹೆಂಡ್ತಿ ಸಮೇತ ಮಧ್ಯರಾತ್ರಿ ಆಚೆ ಹಾಕಿದ್ದರು. ಇದು ನಡೆದಿರುವ ಘಟನೆಯಾಗಿದೆ. ಆದ್ರೆ ನಾನು ಯಾವುದೇ ರಗಳೆ ರಂಪ ಮಾಡದೇ ಹೊರ ಬಂದಿದ್ದೇನೆ. ಒಬ್ಬ ವ್ಯಕ್ತಿಗೆ ನಾವು ಬೇಡ ಅಂತ ಹೇಳಿದ ಬಳಿಕ ಯಾವುದೇ ಗಲಾಟೆ ಮಾಡುವುದು ಬೇಕಿರಲಿಲ್ಲ. ಯಾಕಂದ್ರೆ ಆ ವ್ಯಕ್ತಿ ಬೇಡ ಅಂದ ಬಳಿಕ ರಗಳೆ ಮಾಡಿ ಪ್ರಯೋಜನವೇನು ಅಂತ ಎಲ್ಲೂ ಬರಲಿಲ್ಲ ಅಂತ ಹೇಳಿದ ಅವರು ಇದಾಗಿ 3 ವರ್ಷ ಆಯ್ತು ಅಂದ್ರು.

    ಒಬ್ಬ ಅಪ್ಪನಾಗಿಯೂ ಗುರು ಅವರ ಜವಾಬ್ದಾರಿಯನ್ನು ನಿಭಾಯಿಸುತ್ತಿಲ್ಲ. ಅವರ ಮಗಳನ್ನು ಬಂದು ನೋಡುವುದಿಲ್ಲ. ನಮಗೂ ಅವರಿಗೂ ಯಾವುದೇ ರೀತಿಯ ಸಂಪರ್ಕವೇ ಇಲ್ಲ. ಇಬ್ಬರೂ ಒಪ್ಪಿಕೊಂಡು ವಿಚ್ಛೇದನಕ್ಕೆ ಅಂತ ಹೋಗಿದ್ದೆವು. ಆಗ ಅವರು 2 ಸಲ ಬಂದ್ರು ಆ ನಂತರ ಕೋರ್ಟ್ ಗೂ ಬರುತ್ತಿಲ್ಲ. ಹೀಗಾಗಿ ಅವರ ಯಾವುದೇ ರೀತಿಯ ಸಂಪರ್ಕಕ್ಕೂ ನಾನು ಸಿಗುತ್ತಿಲ್ಲ. ಅವರ ಮನೆ ಹತ್ರ ಹೋದರೂ ಸಿಗುತ್ತಿಲ್ಲ. ಡಿವೋರ್ಸ್ ಪೇಪರ್ ಗೆ ಸಹಿ ಹಾಕಿ ಕೊಡಿ ಅಂದ್ರೂ ಅವರು ಸಿಗ್ತಿಲ್ಲ ಅಂತ ಹೇಳಿದ್ರು.

    ಎರಡನೇ ಸಲ ಚಿತ್ರದ ಶೂಟಿಂಗ್ ನಡೆದಿದ್ದು 3 ವರ್ಷಗಳ ಹಿಂದೆ. ಆವಾಗ ಎಲ್ಲಾ ಶೂಟಿಂಗ್ ಸಂದರ್ಭದಲ್ಲಿ ನಾನು ಅವರ ಜೊತೆ ಹೋಗುತ್ತಿದ್ದೆ. ಚಿತ್ರದ ಶೂಟಿಂಗ್ ವೇಳೆ ಮಾತ್ರ ನಾನು ನನ್ನ ಮಗಳು ಇದ್ವಿ ಅಂತ ಅಲ್ಲ. ನಿನ್ನೆ ಬೆನ್ನು ತೋರಿಸಿದ ಸೀನ್ ಬಗ್ಗೆ ಮಾತನಾಡಿದ್ರಲ್ಲ ಅಂದು ಕೂಡ ನಾನಿದ್ದೆ. ಹೀಗಾಗಿ ಅವರು ಅದನ್ನು ಸ್ಪೆಷಲ್ ಆಗಿ ಹೇಳುವುದು ಬೇಕಾಗಿಲ್ಲ ಅಂತ ಆರತಿ ಹೇಳಿದ್ರು.

    ಪತ್ನಿ ಜೊತೆ ನನ್ನ ಜೊತೆ ಇದ್ದರು ಅಂತ ಗುರು ಹೇಳಿದ್ದರು. ಮಗಳಿಗೆ ರಜಾ ಇದ್ದಾಗಲೆಲ್ಲ ನಾನು ಹಾಗೂ ನನ್ನ ಮಗಳು ಅವರ ಜೊತೆ ಹೋಗುತ್ತಿದ್ದೆವು. ಹೀಗಾಗಿ ಈ ಸೀನ್ ಶೂಟಿಂಗ್ ವೇಳೆಯೂ ನಾವಿದ್ವಿ. ಇಡೀ ಸೀನ್ ಗೆ ನಾನು ನನ್ನ ಮಗಳು ಹಾಗೂ ಸಂಗೀತ್ ಭಟ್ ಕಾಸ್ಟ್ಯುಮ್ ಡಿಸೈನ್ ಮಾಡಿದ್ವಿ, ಕಥೆಗೆ ಬೇಕಾದಂತೆ ನಾವು ಮಾಡಿದ್ವಿ ಅಂತ ಅವರು ಅಂದು ಏನಾಯ್ತು ಎಂಬುದರ ಬಗ್ಗೆ ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=u4enQ9slDcc

  • ಸರ್ಜಾ ಸರ್, ನಂಗೆ ಹೆಣ್ಮಕ್ಕಳಿದ್ದಾರೆ ಇಂತಹ ಸೀನ್‍ಗಳಲ್ಲಿ ನಟಿಸೋಕೆ ಆಗಲ್ಲ ಎಂದಿದ್ರು: ವಿಸ್ಮಯ ಚಿತ್ರದ ನಿರ್ದೇಶಕ

    ಸರ್ಜಾ ಸರ್, ನಂಗೆ ಹೆಣ್ಮಕ್ಕಳಿದ್ದಾರೆ ಇಂತಹ ಸೀನ್‍ಗಳಲ್ಲಿ ನಟಿಸೋಕೆ ಆಗಲ್ಲ ಎಂದಿದ್ರು: ವಿಸ್ಮಯ ಚಿತ್ರದ ನಿರ್ದೇಶಕ

    ಬೆಂಗಳೂರು: ನಟಿ ಶೃತಿ ಹರಿಹರನ್ ಮತ್ತು ನಟ ಅರ್ಜುನ್ ಸರ್ಜಾ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಸ್ಮಯ ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್ ಪೊಲೀಸರ ಮುಂದೆ ತಮ್ಮ ಹೇಳಿಕೆಯನ್ನು ಹೇಳಿದ್ದಾರೆ.

    ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ವಿಸ್ಮಯ ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್ ಹೇಳಿಕೆ ನೀಡಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಪೊಲೀಸರಿಗೆ ಹೇಳಿಕೆಯನ್ನು ಕೊಟ್ಟಿದ್ದೇನೆ. ರೊಮ್ಯಾಂಟಿಕ್ ಸೀನ್ ಬಗ್ಗೆ ಶೂಟಿಂಗೂ ಮೊದಲೇ ಆ ಸೀನ್ ನ ಸ್ಕ್ರಿಪ್ಟ್ ಫೈನಲ್ ಆಗಿತ್ತು. ಅರ್ಜುನ್ ಸರ್ ಅವರೇ ರೊಮ್ಯಾಂಟಿಕ್ ಸೀನ್ ಕಡಿಮೆ ಮಾಡಿ ಅಂತ ಮನವಿ ಮಾಡಿದ್ದರು. ನನಗೆ ಹೆಣ್ಣು ಮಕ್ಕಳಿದ್ದಾರೆ ಇಂತಹ ಸೀನ್‍ಗಳಲ್ಲಿ ನಟಿಸೋಕೆ ಆಗಲ್ಲ ಎಂದಿದ್ದರು. ಹೀಗಾಗಿ ಸರ್ಜಾ ಮನವಿಯಂತೆ ಇಡೀ ಸ್ಕ್ರಿಪ್ಟ್ ಅನ್ನು ಮತ್ತೆ ರೀ-ರೈಟ್ ಮಾಡಿದ್ದೆ ಎಂದು ಹೇಳಿದ್ದಾರೆ.

    ಅರುಣ್ ವೈದ್ಯನಾಥನ್ ಈ ಮೊದಲೇ ಫೇಸ್ ಬುಕ್ ನಲ್ಲಿ ಒಂದು ಪೋಸ್ಟ್ ಮಾಡಿದ್ದರು. ಅದೇ ರೀತಿ ಪೋಸ್ಟ್ ನಲ್ಲಿದ್ದ ಮಾಹಿತಿಯನ್ನೇ ಪೊಲೀಸರಿಗೆ ಹೇಳಿದ್ದಾರೆ. ಶೃತಿ ಹರಿಹರನ್ ನನಗೆ ಒಂದೇ ಬಾರಿ ಕರೆ ಮಾಡಿದ್ದರು. ಅರ್ಜುನ್ ಸರ್ಜಾ ಮತ್ತು ಶೃತಿ ಹರಿಹರನ್ ಇಬ್ಬರು ಒಳ್ಳೆಯ ಸ್ನೇಹಿತರು. ಅರ್ಜುನ್ ಸರ್ಜಾ ಅವರು ಶೃತಿ ಹರಿಹರನ್ ಬಳಿ ನಡೆದುಕೊಂಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಶೂಟಿಂಗ್ ಸೆಟ್ ನಲ್ಲಿ ನಡೆದಿದ್ದರೆ ಅದು ನನ್ನ ಗಮನಕ್ಕೆ ಬರಬೇಕಿತ್ತು. ಈ ಬಗ್ಗೆ ಪೊಲೀಸರು ತನಿಖೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

    ಅರುಣ್ ವೈದ್ಯನಾಥನ್ ಪೋಸ್ಟ್ ನಲ್ಲಿ ಏನಿದೆ?
    ಅರ್ಜುನ್ ಸರ್ ಮತ್ತು ಶೃತಿ ಹರಿಹರನ್ ಇಬ್ಬರೂ ನನ್ನ ಒಳ್ಳೆಯ ಸ್ನೇಹಿತರು. ಅರ್ಜುನ್ ಸರ್ ವೃತ್ತಿ ಜೀವನದಲ್ಲಿ ಜೆಂಟಲ್ ಮೆನ್ ಆಗಿದ್ದಾರೆ. ಶೃತಿ ಅವರು ಕೂಡ ಒಳ್ಳೆಯ ನಟಿ. ಶೃತಿ ಹರಿಹರನ್ ಅರ್ಜುನ್ ಸರ್ಜಾ ಅವರ ವಿರುದ್ಧ ಮೀಟೂ ಆರೋಪ ಮಾಡಿದ್ದ ಬಗ್ಗೆ ತಿಳಿದು ನನಗೆ ಆಘಾತ ಆಯಿತು. ಸಿನಿಮಾದಲ್ಲಿ ರೋಮ್ಯಾಂಟಿಕ್ ದೃಶ್ಯ ಇತ್ತು. ಆದರೆ ನಾವು ಶಾಟ್ ಮುಂಚೆಯೇ ಓದಿ, ಈ ಬಗ್ಗೆ ಚರ್ಚಿಸಿದ್ದೇವೆ. ಸಿನಿಮಾ ಮಾಡಿ ಎರಡು ವರ್ಷವಾಗಿದೆ. ಆದ್ದರಿಂದ ನನಗೆ ಸರಿಯಾಗಿ ನೆನಪಾಗುತ್ತಿಲ್ಲ. ಈ ಮೊದಲೇ ಅರ್ಜುನ್ ಸರ್ ಅವರೇ ರೊಮ್ಯಾಂಟಿಕ್ ಸೀನ್ ಜಾಸ್ತಿಯಿದೆ. ನನಗೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿದ್ದಾರೆ ಇಂತಹ ಸೀನ್‍ಗಳಲ್ಲಿ ನಟಿಸೋಕೆ ಆಗಲ್ಲ ಎಂದಿದ್ದರು. ಹೀಗಾಗಿ ಸರ್ಜಾ ಮನವಿಯಂತೆ ಇಡೀ ಸ್ಕ್ರಿಪ್ಟ್ ಅನ್ನು ಮತ್ತೆ ರೀ-ರೈಟ್ ಮಾಡಿದ್ದೆ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿವರಾಜ್ ಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಪ್ರೇಮ್ ಹೇಳಿದ್ದೇನು?

    ಶಿವರಾಜ್ ಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಪ್ರೇಮ್ ಹೇಳಿದ್ದೇನು?

    ಬೆಂಗಳೂರು: ಬಾಕ್ಸ್ ಆಫೀಸ್‍ನಲ್ಲಿ ಭರ್ಜರಿ ಸದ್ದು ಮಾಡುತ್ತಿರುವ `ದಿ ವಿಲನ್’ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಅವರಿಗೆ ಸುದೀಪ್ ಹೊಡಿದಿರುವ ದೃಶ್ಯಗಳ ವಿರುದ್ಧ ಅಭಿಮಾನಿಗಳು ಅಕ್ರೋಶ ವ್ಯಕ್ತಪಡಿಸಿದ್ದರ ಕುರಿತು ನಿರ್ದೇಶಕ ಪೇಮ್ ಸ್ಪಷ್ಟನೆ ನೀಡಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ಪ್ರೇಮ್, ಸಿನಿಮಾನ ಸಿನಿಮಾ ಥರ ನೋಡಿ. ನಿಮ್ಮನ್ನ ನೋಯಿಸುವುದು ನನ್ನ ಉದ್ದೇಶವಲ್ಲ. ಶಿವಣ್ಣನ ಮುಗ್ದತೆಯನ್ನು ಆ ಸೀನ್‍ನಲ್ಲಿ ತೋರಿಸಲಾಗಿದೆ. ಆ ಸೀನ್ ನಲ್ಲಿ ಶಿವಣ್ಣ ಅವರ ಅಭಿನಯವೇ ಪ್ರಮುಖ. ಅದ್ದರಿಂದಲೇ ಅಷ್ಟು ಚೆನ್ನಾಗಿ ಮೂಡಿ ಬಂದಿದೆ. ಶಿವಣ್ಣ ಪಾತ್ರ ಒಂದೊಮ್ಮೆ ಫೈಟ್ ಮಾಡಿದ್ದರೆ, ಅಲ್ಲಿ ಅರ್ಥವೇ ಕೆಟ್ಟು ಹೋಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ‘ದಿ ವಿಲನ್’ ರಿಲೀಸ್ ದಿನವೇ ಪ್ರೇಮ್ ಕೆಂಡಾಮಂಡಲ

    ಸಿನಿಮಾ ಗೆಲ್ಲಲು ಅಭಿಮಾನಿಗಳೇ ಕಾರಣ. ನಿಮ್ಮಿಂದಲೇ ಸಿನಿಮಾ ಗೆಲುವು ಪಡೆದಿದೆ. ಬೇರೆ ಭಾಷೆಯ ಸಿನಿಮಾ ಕ್ಷೇತ್ರದ ಜನರು ತಿರುಗಿ ನೀಡುವಂತೆ ಮಾಡಿದ್ದೀರಿ. ಅದ್ದರಿಂದ ಸಿನಿಮಾವನ್ನು ಹಾಗೆಯೇ ನೋಡಿ. ಈ ಕುರಿತು ಕ್ಷಮೆ ಇರಲಿ ಎಂದು ತಿಳಿಸಿದ್ದಾರೆ. ಆದರೆ ಅಭಿಮಾನಿಗಳ ಬೇಡಿಕೆಯಾದ ಫೈಟ್ ದೃಶ್ಯ ಕತ್ತರಿ ಹಾಕುವ ಬಗ್ಗೆ ಮಾತನಾಡಿಲ್ಲ.  ಇದನ್ನೂ ಓದಿ:  ನಿರ್ದೇಶಕ ಪ್ರೇಮ್ ವಿರುದ್ಧ ತಿರುಗಿ ಬಿದ್ರು ಶಿವಣ್ಣನ ಅಭಿಮಾನಿಗಳು!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ನಿರ್ದೇಶಕ ಪ್ರೇಮ್ ವಿರುದ್ಧ ತಿರುಗಿ ಬಿದ್ರು ಶಿವಣ್ಣನ ಅಭಿಮಾನಿಗಳು!

    ನಿರ್ದೇಶಕ ಪ್ರೇಮ್ ವಿರುದ್ಧ ತಿರುಗಿ ಬಿದ್ರು ಶಿವಣ್ಣನ ಅಭಿಮಾನಿಗಳು!

    ಬೆಂಗಳೂರು: ನಿರ್ದೇಶಕ ಪ್ರೇಮ್ ಅವರ ಬಹುನಿರೀಕ್ಷಿತ ಚಿತ್ರ ‘ದಿ ವಿಲನ್’ ಗುರುವಾರವಷ್ಟೇ ತೆರೆಕಂಡಿದ್ದು, ಇದೀಗ ಸಿನಿಮಾ ನೋಡಿದ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಪ್ರೇಮ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

    ಸಿನಿಮಾದಲ್ಲಿ ಸುದೀಪ್ ಅವರು ಶಿವಣ್ಣನಿಗೆ ಹೊಡೆಯುವ ದೃಶ್ಯವಿದ್ದು, ಈ ದೃಶ್ಯಕ್ಕೆ ಕತ್ತರಿ ಹಾಕಬೇಕು ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಈ ಸಂಬಂಧ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನರ್ತಕಿ ಚಿತ್ರಮಂದಿರದ ಮುಂದೆ ಪ್ರತಿಭಟನೆ ಮಾಡಲು ಸಜ್ಜಾಗಿದ್ದಾರೆ.

    ಈ ಸಂಬಂಧ ಶಿವಣ್ಣ ಅಭಿಮಾನಿ ಪುನೀತ್ ಎಂಬವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸಿನಿಮಾವನ್ನು ಸಿನಿಮಾ ತರಹ ನೋಡಿ ಅಂತ ಎಲ್ಲರೂ ಹೇಳುತ್ತಾರೆ. ಅದನ್ನೂ ನಾನು ಕೂಡ ಒಪ್ಪಿಕೊಳ್ಳುತ್ತೇನೆ. ಆದ್ರೆ ಸಿನಿಮಾದಲ್ಲಿರುವ ಹೀರೋಗೆ ಗೌರವ ಕೊಡಬೇಕು ಅನ್ನೋ ಸಾಮಾನ್ಯ ಜ್ಞಾನ ಒಬ್ಬ ನಿರ್ದೇಶಕನಿಗೆ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.  ಇದನ್ನೂ ಓದಿ:  ಶಿವಣ್ಣ ಏನ್ ದಡ್ಡರೇ- ಅಭಿಮಾನಿಗಳಿಗೆ ಸುದೀಪ್ ಪ್ರಶ್ನೆ

    ನಾನು ಸಿನಿಮಾವನ್ನು ಒಬ್ಬ ಕಲಾವಿದನಾಗಿ ಹಾಗೂ ಪಾತ್ರವಾಗಿಯೂ ನೋಡುತ್ತೇನೆ. ಇವೆರಡು ಕಣ್ಣುಗಳಿದ್ದಂತೆ. ಈ ಸಿನಿಮಾದ ಪಾತ್ರದಲ್ಲಿ ಶಿವಣ್ಣನಿಗೆ ತುಂಬಾ ಅವಮಾನ ಮಾಡಲಾಗಿದೆ ಅಂತ ಚಿತ್ರದ ಒಂದು ದೃಶ್ಯವನ್ನು ಹೇಳುವ ಮೂಲಕ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

    ಕೆಲವು ಸಂದರ್ಭಗಳಲ್ಲಿ ಒಬ್ಬ ನಿರ್ದೇಶಕನನ್ನು ನಾವು ಅತೀವವಾಗಿ ನಂಬುತ್ತೇವೆ. ಕಾರಣವೇನೆಂದರೆ ಒಂದು ಅವರು ಈ ಮೊದಲು 2 ಸಿನಿಮಾಗಳನ್ನು ಮಾಡಿದ್ದಾರೆ. ಆದ್ರೆ ಇಲ್ಲಿ ಪ್ರೇಮ್ ನಂಬಿಕೆಗೆ ದ್ರೋಹ ಮಾಡಿದ್ದಾರೆ. ಹೀಗಾಗಿ ಚಿತ್ರ ನೋಡಿದ ಬಳಿಕ ತುಂಬಾನೇ ಬೇಜಾರಾಗಿದೆ. ಆದ್ರೆ ಈ ಬಗ್ಗೆ ಶಿವಣ್ಣ ಅವರಿಗೆ ಹೇಳಿದ್ರೆ, ಅವರದ್ದು ಮಗು ಮನಸ್ಸು. ನೀವು ಏನು ಮಾಡಬಾರದು, ಒಂದು ಕಟೌಟ್ ಹೆಚ್ಚಾಗಿ ನಿಲ್ಲಿಸಿಬಿಡಿ. ಒಂದು ಹಾರ ಎಕ್ಸ್ಟ್ರಾ ಹಾಕಿ ಬಿಡಿ. ನೀವು ಗೌರವ ಕೊಡಿ ಸಿನಿಮಾನ ಸಿನಿಮಾದಂತೆ ನೋಡಿ.. ಹೀಗೆ ಅವರು ಧನಾತ್ಮಕವಾಗಿಯೇ ಮಾತನಾಡುತ್ತಾರೆ ಅಂತ ಪುನೀತ್ ತಿಳಿಸಿದ್ರು.

    ಅವರು ಗಲಾಟೆ ಮಾಡಿದ್ರೆ ತಾಯಾಣೆ ಥಿಯೇಟರ್ ಗೆ ಬರಲ್ಲ ಅಂತ ಹೇಳಿದ್ದರು. ಹೀಗಾಗಿ ನಾವು ಗಲಾಟೆ ಮಾಡಿಲ್ಲ. ಶಿವಣ್ಣ ಹೇಳಿದ್ದು ಎಲ್ಲವನ್ನು ಸ್ವೀಕರಿಸುತ್ತೇವೆ. ಆದ್ರೆ ಇಷ್ಟೊಂದು ಬೇಸರ ಯಾವತ್ತೂ ಆಗಿಲ್ಲ ಅಂತ ಅವರು ದುಃಖ ತೋಡಿಕೊಂಡರು.

    ಶಿವಣ್ಣ ಅವರು 125 ಸಿನಿಮಾ ಮಾಡಿದ ಹೀರೋ. ಸುಮ್ನೆ ಇರುತ್ತಾರೆ ಅಂತ ಇವರೆಲ್ಲರದ್ದು ಜಾಸ್ತಿ ಆಯ್ತು. ಸಿನಿಮಾದಲ್ಲಿ ಪರೋಕ್ಷವಾಗಿ ಅವಮಾನ ಮಾಡಲಾಗಿದೆ. ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡಿದ್ದಾರೆ ಅನಿಸುತ್ತೆ. ಯಾಕಂದ್ರೆ ಕಾಸ್ಟ್ಯೂಮ್ ನಿಂದ ಹಿಡಿದು ಎಲ್ಲದರಲ್ಲೂ ಅವಮಾನ ಮಾಡಿದ್ದಾರೆ ಅಂತ ಪ್ರೇಮ್ ವಿರುದ್ಧ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://www.youtube.com/watch?v=MPXuUCvMg9o

    https://www.youtube.com/watch?v=BazgjNIbQLI

  • ‘ದಿ ವಿಲನ್’ ರಿಲೀಸ್ ದಿನವೇ ಪ್ರೇಮ್ ಕೆಂಡಾಮಂಡಲ

    ‘ದಿ ವಿಲನ್’ ರಿಲೀಸ್ ದಿನವೇ ಪ್ರೇಮ್ ಕೆಂಡಾಮಂಡಲ

    ಬೆಂಗಳೂರು: ಇಂದು ವಿಶ್ವದಾದ್ಯಂತ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ರಿಲೀಸ್ ಆಗಿದೆ. ಅಭಿಮಾನಿಗಳು ಸುದೀಪ್ ಮತ್ತು ಶಿವರಾಜ್‍ಕುಮಾರ್ ಅಭಿನಯವನ್ನು ನೋಡಲು ಮಧ್ಯರಾತ್ರಿಯಿಂದಲೇ ಚಿತ್ರಮಂದಿರಗಳತ್ತ ಬಂದಿದ್ದಾರೆ. ನಗರದ ನರ್ತಕಿ ಚಿತ್ರಮಂದಿರ ಮಾಲೀಕರ ವಿರುದ್ಧ ನಿರ್ದೇಶಕ ಪ್ರೇಮ್ ಗರಂ ಆಗಿದ್ದಾರೆ.

    ನರ್ತಕಿ ಥಿಯೇಟರ್ ನಲ್ಲಿ ಬೆಳಗ್ಗೆ 6 ಗಂಟೆಗೆ ಮೊದಲ ಶೋ ಆರಂಭವಾಗಿತ್ತು. ಚಿತ್ರದ ಆರಂಭದಲ್ಲಿಯೇ ಥಿಯೇಟರ್ ನಲ್ಲಿ ಸೌಂಡ್ ಸಮಸ್ಯೆ ಕಾಣಿಸಿಕೊಂಡಿತು. ಚಿತ್ರ ವೀಕ್ಷಿಸಿಸಲು ಖುಷಿಯಿಂದ ಬಂದ ಅಭಿಮಾನಿಗಳಿಗೆ ಕೆಲ ನಿಮಿಷ ಭಾರೀ ನಿರಾಸೆ ಉಂಟಾಯಿತು. ಇದರಿಂದ ಕೋಪುಗೊಂಡು ಹೊರಬಂದ ಪ್ರೇಮ್ ಮಾಧ್ಯಮಗಳ ಮುಂದೆಯೇ ಚಿತ್ರಮಂದಿರದ ಮಾಲೀಕರ ಮೇಲೆ ಕೋಪಗೊಂಡರು.

    ಪ್ರಪಂಚದ ದೊಡ್ಡ ದೊಡ್ಡ ಇಂಜಿನಿಯರ್ ಗಳ ಕರೆಸಿ ಸಾಂಗ್ ಮಾಡಿಸಿದ್ದೇನೆ. ಚಿತ್ರದ ಆರಂಭದಲ್ಲಿ ಸಿನಿಮಾ ನಿಲ್ಲಿಸೋಣ ಅಂದುಕೊಂಡಿದ್ದೆ, ಆದರೆ ಅಭಿಮಾನಿಗಳಿಗೆ ನಿರಾಸೆ ಆಗುತ್ತೆ ಅಂತಾ ನಿರ್ಧಾರ ಬದಲಿಸಿ ಹೊರಗೆ ಬಂದಿದ್ದೇನೆ ಎಂದು ನರ್ತಕಿ ಚಿತ್ರಮಂದಿರದ ಸೌಂಡ್ ಇಂಜಿನಿಯರ್ ವಿರುದ್ಧ ಪ್ರೇಮ್ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ವರ್ಷನಾಗಟ್ಟುಲೇ ಸಿನಿಮಾ ಮಾಡಿದ್ದೀವಿ. ದಯವಿಟ್ಟು ಮೊಬೈಲಿನಲ್ಲಿ ಸೆರೆ ಹಿಡಿಯಬೇಡಿ ಎಂದು ಜನರಲ್ಲಿ ಪ್ರೇಮ್ ಮನವಿ ಮಾಡಿಕೊಂಡರು.

    ಎಲ್ಲೆಡೆ ಟಿಕೆಟ್‍ಗೆ ನೂಕುನುಗ್ಗಲು ಕಂಡು ಬರುತ್ತಿದೆ. ಮಲ್ಟಿಪ್ಲೆಕ್ಸ್ ಗಳು ಹೌಸ್‍ಫುಲ್ ಆಗಿವೆ. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಟ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ನಟಿಸಿದ್ದಾರೆ. ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವಿಲನ್ ಹಾಡುಗಳು ಕಮಾಲ್ ಮಾಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿನಿಮಾದಲ್ಲಿ ಚಾನ್ಸ್ ಕೊಡ್ತೀನಿ ಕಮಿಟ್ ಆಗ್ತೀಯಾ? ಸ್ಯಾಂಡಲ್‍ವುಡ್ ನಿರ್ದೇಶಕನ ಮೇಲೆ ಯುವನಟಿ ಗಂಭೀರ ಆರೋಪ

    ಸಿನಿಮಾದಲ್ಲಿ ಚಾನ್ಸ್ ಕೊಡ್ತೀನಿ ಕಮಿಟ್ ಆಗ್ತೀಯಾ? ಸ್ಯಾಂಡಲ್‍ವುಡ್ ನಿರ್ದೇಶಕನ ಮೇಲೆ ಯುವನಟಿ ಗಂಭೀರ ಆರೋಪ

    ಬೆಂಗಳೂರು: ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ತಿಳಿಸಿದ್ದ ನಿರ್ದೇಶಕರೊಬ್ಬರು, ಬಳಿಕ ಚಾನ್ಸ್ ಬೇಕಾದರೆ ಕಮಿಟ್ ಮೆಂಟ್ ಕೇಳಿದ್ದರು ಎಂದು ಸ್ಯಾಂಡಲ್‍ವುಡ್ ಯುವ ನಟಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

    `ಗೋರಿ ಮೇಲೆ ಲಗೋರಿ’ ಎಂಬ ಸಿನಿಮಾ ನಿರ್ದೇಶಕ ಎಸ್‍ಪಿ ಪ್ರಕಾಶ್ ವಿರುದ್ಧ ಯುವ ನಟಿ ಆರೋಪ ಮಾಡಿದ್ದಾರೆ. ಸಿನಿಮಾ ರಂಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಗಳು ಬೆಳಕಿಗೆ ಬರುತ್ತಿರುವ ವೇಳೆಯೇ ಯುವ ನಟಿ ತಮಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

    ಕನ್ನಡ ಸಿನಿಮಾ ಕ್ಷೇತ್ರದಲ್ಲೂ ನಟಿಯನ್ನು ಗುರಿ ಮಾಡಿ ಮಂಚಕ್ಕೆ ಕರೆಯವು ನಿರ್ದೇಶಕರಿದ್ದಾರೆ ಎಂದು ಹೇಳಿರುವ ಯುವ ನಟಿ, ಮೊದಲು ನನಗೆ ಸಿನಿಮಾದಲ್ಲಿ ಚಾನ್ಸ್ ನೀಡುವ ಕುರಿತು ಹೇಳಿದ್ದರು. ಬಳಿಕ ಕಮಿಟ್ ಆಗುತ್ತಿಯಾ, ಹಣ ಕೊಡುತ್ತೇನೆ ಎಂದು ಎಸ್ ಪಿ ಪ್ರಕಾಶ್ ಕೇಳಿದ್ದರು ಎಂದು ನಟಿ ಹೇಳಿದ್ದಾರೆ. ಅಲ್ಲದೇ ಈ ಕುರಿತು ಫೀಲಂ ಚೇಂಬರ್‍ಗೆ ದೂರು ನೀಡುವುದಾಗಿ ಹೇಳಿದ ವೇಳೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

    ನನಗೆ ಪೋಲೀಸ್, ರಾಜಕೀಯ ನಾಯಕರು ಹಾಗೂ ರೌಡಿಗಳು ಗೊತ್ತು. ನೀನು ದೂರು ನೀಡಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ನಿರ್ದೇಶಕರು ಬೆದರಿಕೆ ಹಾಕಿದ್ದರು ಎಂದು ನಟಿ ಹೇಳಿದ್ದು, ಈ ಕುರಿತ ವಾಟ್ಸಾಪ್ ಮೇಸೆಜ್‍ಗಳ ಸ್ಕ್ರಿನ್ ಶಾಟ್ ಫೋಟೋ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೀಟೂ ಅಭಿಯಾನ ಆರಂಭವಾದ ಬಳಿಕ ತನಗಾದ ಕಿರುಕುಳದ ಕುರಿತು ಬಹಿರಂಗ ಪಡಿಸಿರುವ ನಟಿ ತನ್ನ ಹೆಸರನ್ನು ಹೇಳಲು ಇಚ್ಛಿಸಿಲ್ಲ. ಆದರೆ ಸಿನಿಮಾದಲ್ಲಿ ಚಾನ್ಸ್‍ಗಾಗಿ ಆಗಮಿಸುವ ಬೇರೆಯಾವ ಯುವತಿಯರು ತನಗಾದ ಅನುಭವ ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಈ ಕುರಿತು ಮಾಹಿತಿ ಬಹಿರಂಗ ಮಾಡಿದ್ದಾರೆ. ಆದರೆ ಇದುವರೆಗೂ ನಿರ್ದೇಶಕರ ಮೇಲೆ ಮಾಡಿರುವ ಆರೋಪದ ಕುರಿತು ನಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=WhWv-Ae2_BM

  • 1 ಲಕ್ಷ ರೂ. ಬಹುಮಾನ ನೀಡಿ ನಟನನ್ನು ಆಯ್ಕೆ ಮಾಡಿದ್ರು ಆರ್‌ಜಿವಿ

    1 ಲಕ್ಷ ರೂ. ಬಹುಮಾನ ನೀಡಿ ನಟನನ್ನು ಆಯ್ಕೆ ಮಾಡಿದ್ರು ಆರ್‌ಜಿವಿ

    ಬೆಂಗಳೂರು: ಹಲವು ಬಾರಿ ವಿವಾದಗಳಿಂದಲೇ ಸುದ್ದಿಯಾಗಿರುವ ಟಾಲಿವುಡ್ ನಿರ್ದೇಶಕ ರಾಮ್‍ಗೋಪಲ್ ವರ್ಮಾ ಸದ್ಯ ತಮ್ಮ ಮುಂದಿನ ಚಿತ್ರದ ನಟನನ್ನು ಹುಡುಕಿಕೊಟ್ಟ ವ್ಯಕ್ತಿಗೆ 1 ಲಕ್ಷ ರೂ. ಬಹುಮಾನ ನೀಡಿದ್ದಾರೆ.

    ಹೌದು, ವರ್ಮಾ ಸದ್ಯ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಎನ್‍ಟಿಆರ್ ಅವರ ಪತ್ನಿ ಲಕ್ಷ್ಮೀ ಕುರಿತು ಸಿನಿಮಾ ಮಾಡುತ್ತಿದ್ದು, ಈ ಚಿತ್ರದಲ್ಲಿ ಹಾಲಿ ಸಿಎಂ ಆಗಿರುವ ಚಂದ್ರಬಾಬು ನಾಯ್ಡು ಅವರ ಪಾತ್ರಕ್ಕೆ ಅವರಂತೆ ಕಾಣುವ ವ್ಯಕ್ತಿಯ ಹುಡುಕಾಟ ನಡೆಸಿದ ವೇಳೆ ಅವರಿಗೆ ಒಂದು ವಿಡಿಯೋ ಒಂದು ಲಭ್ಯವಾಗಿದೆ.

    ವಿಡಿಯೋ ನೋಡುತ್ತಿದಂತೆ ವ್ಯಕ್ತಿಯ ಹುಡುಕಾಟ ಆರಂಭಿಸಿದ ಆರ್‌ಜಿವಿ, ವ್ಯಕ್ತಿಯ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಈತನ ಕುರಿತು ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದರಂತೆ ಸದ್ಯ ವ್ಯಕ್ತಿಯೊಬ್ಬರು ಆತನ ಕುರಿತು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    Laksmisntr@gmail.com ಇಮೇಲ್ ಕ್ರಿಯೇಟ್ ಮಾಡಿದ್ದ ಆರ್‌ಜಿವಿ ಈ ಮಾಹಿತಿ ನೀಡುವಂತೆ ಟ್ವೀಟ್‍ನಲ್ಲಿ ಬರೆದುಕೊಂಡಿದ್ದರು. ಈ ಮೂಲಕ ಸಿನಿಮಾ ಪ್ರಚಾರವನ್ನು ಮಾಡಿದ್ದರು. ರಾಮ್‍ಗೋಪಾಲ್ ವರ್ಮಾ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ವ್ಯಕ್ತಿ ಹೋಟೆಲ್ ಒಂದರಲ್ಲಿ ಸಪ್ಲೇಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನೋಡಲು ಚಂದ್ರ ಬಾಬು ಅವರಂತೆ ಇರುವುದೇ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಲು ಪ್ರಮುಖ ಕಾರಣ ಎಂದು ನಿರ್ದೇಶಕ ತಿಳಿಸಿದ್ದಾರೆ.

    ಸದ್ಯ ಹೈದರಾಬಾದ್ ನ ರೋಹಿತ್ ಎಂಬವರು ವಿಡಿಯೋದಲ್ಲಿ ಇರುವ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿದಕ್ಕೆ ನಿಮಗೆ ಧನ್ಯವಾದ, ನೀವು ಕೂಡ ಸಿನಿಮಾ ಬಹುದೊಡ್ಡ ಕೊಡುಗೆ ನೀಡಿ ಚಿತ್ರದ ಭಾಗವಾಗಿದ್ದೀರಿ. ನಿಮ್ಮ ಬ್ಯಾಂಕ್ ಮಾಹಿತಿ ಕಳುಹಿಸಿದರೆ ಬಹುಮಾನದ ಮೊತ್ತ 1 ಲಕ್ಷ ರೂ. ಗಳನ್ನು ಹಾಕುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂಟಿ ಹೆಣ್ಣಿನ ಅಂತರಾಳ ತೆರೆದಿಡುವ ಸಂಗಾತಿ – ಶೀತಲ್ ಶೆಟ್ಟಿ ಈಗ ನಿರ್ದೇಶಕಿ

    ಒಂಟಿ ಹೆಣ್ಣಿನ ಅಂತರಾಳ ತೆರೆದಿಡುವ ಸಂಗಾತಿ – ಶೀತಲ್ ಶೆಟ್ಟಿ ಈಗ ನಿರ್ದೇಶಕಿ

    ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ನಿರ್ದೇಶಕಿಯೊಬ್ಬರ ಆಗಮನವಾಗಿದೆ ಮತ್ತು ಅವರ ಕಡೆಯಿಂದ ಇನ್ನೊಂದಷ್ಟು ಸಂವೇದನಾಶೀಲ ಕಥೆಗಳು ದೃಶ್ಯರೂಪ ಪಡೆಯಲಿವೆ. ಸಂಗಾತಿ ಎಂಬ ಕಿರು ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಇಂಥಾದ್ದೊಂದು ಸೂಚನೆ ಸ್ಪಷ್ಟವಾಗಿಯೇ ಸಿಕ್ಕಿದೆ. ಈ ಕಿರುಚಿತ್ರಕ್ಕೆ ಸಿಕ್ಕಿರೋ ವ್ಯಾಪಕ ಮೆಚ್ಚುಗೆಗಳು ಅದನ್ನು ಮತ್ತಷ್ಟು ಖಚಿತವಾಗಿಸಿವೆ!

    ಕಿರುಚಿತ್ರಗಳಿಗೆ ಇರುವುದು ಅತ್ಯಲ್ಪ ಕಾಲಾವಧಿ. ಅಷ್ಟರಲ್ಲಿಯೇ ಹೇಳಬೇಕಿರೋದನ್ನು ಅಚ್ಚುಕಟ್ಟಾಗಿ ಹೇಳಿ ಅದು ನೋಡಿದವರ ಮನಸಲ್ಲಿಯೇ ಮತ್ತೆ ಅರಳಿಕೊಳ್ಳುವಂತೆ ಮಾಡೋದು ಕಿರು ಚಿತ್ರಗಳ ನಿಜವಾದ ಯಶಸ್ಸು. ಈ ನಿಟ್ಟಿನಲ್ಲಿ ಶೀತಲ್ ಶೆಟ್ಟಿ ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆದಿದ್ದಾರೆ.

    ಸಂಗಾತಿ ಎಂಬುದು ಒಂಟಿ ಹೆಣ್ಣೊಬ್ಬಳ ಸುತ್ತಾ ಹರಡಿಕೊಂಡಿರೋ ಕಥಾನಕ. ಡ್ರಾಮಾ ಟೀಚರ್ ಒಬ್ಬಳು ಗಂಡ ಮನೆಯನ್ನೆಲ್ಲ ತೊರೆದು, ಒಬ್ಬಂಟಿತನವನ್ನೇ ಹಚ್ಚಿಕೊಂಡು ಬದುಕೋದರ ಸುತ್ತಾ ಕಥೆ ಬಿಚ್ಚಿಕೊಳ್ಳುತ್ತೆ. ಗಂಡನೆಂಬ ನೆರಳು, ಸಂಬಂಧಗಳ ಆಸರೆ ಇಲ್ಲದೆ ಹೆಣ್ಣೊಬ್ಬಳಿಗೆ ಅಸ್ತಿತ್ವವೇ ಇಲ್ಲ ಎಂಬುದು ಈ ನೆಲದ ಪಾರಂಪರಿಕ ನಂಬಿಕೆ. ಅದರ ಪದತಲದಲ್ಲಿ ಕಾಲಾಂತರಗಳಿಂದಲೂ ಹೆಣ್ತನದ ನಿಜವಾದ ತುಮುಲಗಳು ಪತರುಗುಟ್ಟುತ್ತಿವೆ.

    ಹೆಣ್ಣಿನ ಪರಿಭಾಷೆಯಲ್ಲಿ ಸಾಂಗತ್ಯ ಅಂದರೇನು ಅಂದರೆ ಗಂಡಿನ ಡಿಕ್ಷನರಿಯಲ್ಲಿ ಬೇರೆಯದ್ದೇ ಅರ್ಥಗಳಿವೆ. ಆದರೆ ಆಕೆಯ ಕಣ್ಣಲ್ಲಿ ಸಾಂಗತ್ಯವೆಂದರೆ ಒಂದು ನಂಬಿಕೆ, ನಿಷ್ಕಾರಣ ಕಾಳಜಿ. ಅದರ ನಡುವಲ್ಲಾಕೆ ನೆಮ್ಮದಿಯಾಗಿ ಬದುಕಿ ಬಿಡುತ್ತಾಳೆ. ಈ ಸತ್ಯವನ್ನು ಒಂಟಿ ಮಹಿಳೆ ಬೀದಿ ನಾಯಿ ಮರಿಯೊಂದಕ್ಕೆ ಆರೈಕೆ ಮಾಡಿ ಅದನ್ನು ಹಚ್ಚಿಕೊಳ್ಳೋದರ ಮೂಲಕ ಶೀತಲ್ ಶೆಟ್ಟಿ ಪರಿಣಾಮಕಾರಿಯಾಗಿ ದೃಷ್ಯೀಕರಿಸಿದ್ದಾರೆ.

    ಕುತೂಹಲ ಉಳಿಸಿಕೊಳ್ಳುವ ಜಾಣ್ಮೆಯೂ ಸೇರಿದಂತೆ ಒಟ್ಟಾರೆಯಾಗಿ ಎಲ್ಲ ವಿಭಾಗಗಳಲ್ಲಿಯೂ ಈ ಕಿರು ಚಿತ್ರ ಗಮನ ಸೆಳೆಯುವಂತಿದೆ. ಈ ಮೂಲಕ ಕನ್ನಡದಲ್ಲಿ ವಿರಳ ಸಂಖ್ಯೆಯಲ್ಲಿರುವ ಮಹಿಳಾ ನಿರ್ದೇಶಕಿಯರ ಸಾಲಿನಲ್ಲಿ ಶೀತಲ್ ಸೇರಿಕೊಂಡಿದ್ದಾರೆ. ಅವರ ಮುಂದಿನ ನಡೆ ಚಿತ್ರ ನಿರ್ದೇಶನದತ್ತ ಸಾಗುವ ಲಕ್ಷಣಗಳೂ ಇವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv