Tag: director

  • ಮಿನರ್ವ ಮಿಲ್‍ಗೆ ಬಾರದವರು ಮುಂಬೈಗೆ ಬರಲು ಸಾಧ್ಯವೇ – ರಕ್ಷಿತಾ ಕಾಲೆಳೆದ ಸುದೀಪ್

    ಮಿನರ್ವ ಮಿಲ್‍ಗೆ ಬಾರದವರು ಮುಂಬೈಗೆ ಬರಲು ಸಾಧ್ಯವೇ – ರಕ್ಷಿತಾ ಕಾಲೆಳೆದ ಸುದೀಪ್

     ಬೆಂಗಳೂರು: ದಬಾಂಗ್ 3 ಚಿತ್ರದಲ್ಲಿ ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಜೊತೆ ಕಿಚ್ಚ ಸುದೀಪ್ ನಟಿಸುತ್ತಿದ್ದು, ಸೆಟ್ ಗೆ ನಿರ್ದೇಶಕ ಪ್ರೇಮ್ ಅವರನ್ನು ಕರೆ ತಂದಿದ್ದಕ್ಕೆ ನಟಿ ರಕ್ಷಿತಾ ಕಿಚ್ಚನ ಕಾಲೆಳೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸುವ ಮೂಲಕ ಸುದೀಪ್ ಅವರು ರಕ್ಷಿತಾ ಕಾಲೆಳೆದಿದ್ದಾರೆ.

    ನೀವು ಪ್ರೇಮ್ ಅವರನ್ನು ಮಾತ್ರ ಸೆಟ್ ಗೆ ಕರೆದಿದ್ದೀರಿ ನನ್ನನ್ನು ಯಾಕೆ ಕರೆದಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಸುದೀಪ್ ಕಾಲೆಳೆದಿದ್ದಾರೆ. ಈ ಟ್ವೀಟ್ ಗೆ ಕಿಚ್ಚ ಕೂಡ ರೀಟ್ವೀಟ್ ಮಾಡಿ ತಮಾಷೆಯಾಡಿದ್ದಾರೆ.

    ರಕ್ಷಿತಾ ಹೇಳಿದ್ದೇನು?:
    ಗೆಳೆಯ ಕಿಚ್ಚ ಸುದೀಪ್ ಅವರು ನನ್ನ ನೆಚ್ಚಿನ ನಟ ಸಲ್ಮಾನ್ ಖಾನ್ ಜೊತೆ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಸೆಟ್ ಗೆ ಪ್ರೇಮ್ ಅವರನ್ನು ಆಹ್ವಾನಿಸಿದ್ದಾರೆ. ಆದರೆ ನನ್ನ ಮಾತ್ರ ಕರೆದಿಲ್ಲ. ನಿಮಗೆ ನಾನೇನು ಮಾಡಿದ್ದೇನೆ ಎಂದು ಹೇಳಿ. ನಾನು ಅಳುತ್ತಿದ್ದೇನೆ. ಆದರೂ ಒಬ್ಬಳು ಒಳ್ಳೆಯ ಗೆಳತಿಯಾಗಿ ಚಿತ್ರಕ್ಕೆ ಶುಭ ಹಾರೈಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಸುದೀಪ್ ಪ್ರತಿಕ್ರಿಯೆ:
    ಪತಿ ನಿದೇರ್ಶಿಸಿದ್ದ ವಿಲನ್ ಚಿತ್ರ 2 ವರ್ಷ ಶೂಟಿಂಗ್ ನಡೆದಿದ್ದ ಸಂದರ್ಭದಲ್ಲಿ ನನ್ನ ನಟನೆ ನೋಡಲು ಒಮ್ಮೆಯೂ ಶೂಟಿಂಗ್ ಸೆಟ್ ಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಚಂದ್ರ ಲೇಔಟಿನಿಂದ ಮಿನರ್ವ ಮಿಲ್ ಗೆ ಬಾರದೇ ಇದ್ದವರು ಇನ್ನು ಮುಂಬೈಗೆ ಬರಲು ಸಾಧ್ಯವೇ ಎಂದು ಪ್ರಶ್ನಿಸಿದ ಕಿಚ್ಚ, ಹೀಗಾಗಿ ಸುಮ್ನೆ ನಿಮಗೆ ತೊಂದರೆ ಯಾಕೆ ಎಂದು ಸೆಟ್ ಗೆ ಆಹ್ವಾನಿಸಿಲ್ಲ ಎಂದು ತಮಾಷೆಯಾಡಿದ್ದಾರೆ.

    ಸಲ್ಲುಗೆ ಕಿಚ್ಚ ಧನ್ಯವಾದ:
    ಸಿನಿಮಾ ಸೆಟ್ ನಲ್ಲಿ ತನ್ನ ಉಪಚರಿಸಿದ ಸಲ್ಮಾನ್ ಖಾನ್ ಗೆ ಕಿಚ್ಚ ಸುದೀಪ್ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ, ಬಿಸಿಲ ಬೇಗೆ ಜಾಸ್ತಿ ಇದ್ದರೂ ಸೆಟ್‍ನಲ್ಲಿ ಉತ್ಸಾಹದ ಮೇಲೆ ಅದು ಪ್ರಭಾವ ಬೀರಿಲ್ಲ. ಇದು ರೋಮಾಂಚಕ ದಿನ, ಅದ್ಭುತ ತಂಡ, ಅತ್ಯದ್ಭುತ ಜನ. ಹಾಗೆಯೇ ಇಲ್ಲಿರುವ ಮನಮೋಹಕ ಜಿಮ್ ಒಂದು ರೀತಿ ಬೋನಸ್ ಸಿಕ್ಕ ಹಾಗೆ. ದಬಾಂಗ್ 3 ಚಿತ್ರದ ಮೊದಲ ದಿನ ಖುಷಿ ಖುಷಿಯಾಗಿ ಆರಂಭವಾಗಿದೆ. ನನಗೆ ನನ್ನ ಮನೆಯಲ್ಲಿದ್ದೇನೆ ಎನ್ನುವ ರೀತಿ ನೋಡಿಕೊಳ್ಳುತ್ತಿರುವುದಕ್ಕೆ ಸಲ್ಮಾನ್ ಖಾನ್ ಸರ್ ಗೆ ಧನ್ಯವಾದಗಳು ಎಂದು ಬರೆದುಕೊಂಡು ಸಲ್ಮಾನ್ ಖಾನ್ ಹಾಗೂ ದಬಾಂಗ್ 3ಗೆ ಟ್ಯಾಗ್ ಮಾಡಿದ್ದಾರೆ.

    ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿದ `ರಕ್ತ ಚರಿತ್ರ 2’ರ ನಂತರ ಸುದೀಪ್ ಹಿಂದಿ ಚಿತ್ರರಂಗಕ್ಕೆ ಹಿಂದಿರುಗುವುದಕ್ಕೆ ದಬಾಂಗ್ 3 ಒಳ್ಳೆಯ ಅವಕಾಶ ನೀಡಿದೆ. ವರದಿಗಳ ಪ್ರಕಾರ, ಸುದೀಪ್ ಕಾಪ್-ಆಕ್ಷನ್‍ನ 3ನೇ ಕಂತಿನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದು, ಇದನ್ನು ಪ್ರಭುದೇವ್ ನಿರ್ದೇಶಿಸಲಿದ್ದಾರೆ.

  • ನಿರ್ದೇಶಕನ ಜೊತೆ ನಟಿ ನಯನತಾರಾ ನಿಶ್ಚಿತಾರ್ಥ!

    ನಿರ್ದೇಶಕನ ಜೊತೆ ನಟಿ ನಯನತಾರಾ ನಿಶ್ಚಿತಾರ್ಥ!

    ಚೆನ್ನೈ: ಲೇಡಿ ಸೂಪರ್ ಸ್ಟಾರ್ ನಯನತಾರಾ ನಿರ್ದೇಶಕ ವಿಗ್ನೇಶ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ನಯನತಾರಾ ತನ್ನ ಬಹುದಿನದ ಗೆಳೆಯ, ನಿರ್ದೇಶಕ ವಿಗ್ನೇಶ್ ಶಿವನ್ ಜೊತೆ ಕೆಲವೇ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಅಲ್ಲದೆ 2020ರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಕಾಲಿವುಡ್‍ನಲ್ಲಿ ಹರಿದಾಡುತ್ತಿದೆ.

    ನಯನತಾರಾ ಹಾಗೂ ವಿಗ್ನೇಶ್ ಕುಟುಂಬದವರು ಇವರಿಬ್ಬರು ಬೇಗ ಮದುವೆ ಆಗಲಿ ಎಂದು ಅಭಿಮಾನಿಗಳು ಇಚ್ಛಿಸುತ್ತಿದ್ದಾರೆ. ನಯನತಾರಾ ಗೆಳೆಯ ವಿಗ್ನೇಶ್ ಜೊತೆ ಹಲವು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಇಬ್ಬರು ಹಾಲಿ ಡೇ ಟ್ರಿಪ್ ಸಹ ಎಂಜಾಯ್ ಮಾಡಿದ್ದಾರೆ.

    ಇಬ್ಬರು ನಿಶ್ಚಿತಾರ್ಥ ಆಗುತ್ತಿರುವ ವಿಷಯ ಕಾಲಿವುಡ್‍ನಲ್ಲಿ ಸದ್ಯ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ನಯನತಾರಾ ಆಗಲಿ ವಿಗ್ನೇಶ್ ಆಗಲಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

    ಸದ್ಯ ನಯನತಾರಾ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ ‘ದರ್ಬಾರ್’ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೆ ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಜೊತೆ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • ಕೆಲಸ ಬೇಕೆಂದರೆ ನನ್ನನ್ನು ತೃಪ್ತಿಪಡಿಸು ಎಂದಿದ್ದ ನಿರ್ದೇಶಕ: ಕಿರುತೆರೆ ನಟಿ

    ಕೆಲಸ ಬೇಕೆಂದರೆ ನನ್ನನ್ನು ತೃಪ್ತಿಪಡಿಸು ಎಂದಿದ್ದ ನಿರ್ದೇಶಕ: ಕಿರುತೆರೆ ನಟಿ

    ಮುಂಬೈ: ಹಿಂದಿ ಕಿರುತೆರೆ ನಟಿ ರಿಚಾ ಭದ್ರ ತಮಗೆ ಆಗಿರುವ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ.

    ಇತ್ತೀಚೆಗೆ ರಿಚಾ ಭದ್ರ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ನಾನು ಕಾಸ್ಟಿಂಗ್ ಕೌಚ್ ಎದುರಿಸಿದ್ದೇನೆ. ಮದುವೆಯಾದ ನಂತರ ಈ ಘಟನೆ ನಡೆದಿದೆ. ಕೆಲಸ ಬೇಕೆಂದರೆ ನನ್ನನ್ನು ಖುಷಿಪಡಿಸು ಎಂದು ನಿರ್ದೇಶಕರೊಬ್ಬರು ಕೇಳಿಕೊಂಡಿದ್ದರು ಎಂದು ರಿಚಾ ಹೇಳಿದ್ದಾರೆ.

    ಈ ಬಗ್ಗೆ ಮಾತನಾಡಿದ ರಿಚಾ ನನಗೆ ತುಂಬಾ ಹತ್ತಿರದಿಂದ ಕಾಸ್ಟಿಂಗ್ ಕೌಚ್ ಅನುಭವವಾಗಿದೆ. ಮದುವೆ ನಂತರ ನಾನು ಹಲವು ಕಡೆ ಆಡಿಶನ್‍ಗೆ ಹೋದಾಗ ಸಾಕಷ್ಟು ಮಂದಿ ಕಾಂಪ್ರಮೈಸ್ ಮಾಡಿಕೋ ಎಂಬುದಾಗಿ ಹೇಳಿದ್ದರು ಎಂದು ತಿಳಿಸಿದರು.

    ಒಬ್ಬ ನಿರ್ದೇಶಕ, ನಿನಗೆ ಕೆಲಸ ಬೇಕೆಂದರೆ ನನ್ನನ್ನು ತೃಪ್ತಿಪಡಿಸು. ನಾನು ಬೇಕಾದರೆ ಹೋಟೆಲ್ ಬುಕ್ ಮಾಡುತ್ತೇನೆ. ನೀನು ಹೋಟೆಲ್‍ಗೆ ಬಾ ಎಂದು ಕರೆದಿದ್ದರು. ಆಗ ನಾನು ಕಾಫಿ ಶಾಪ್‍ನಲ್ಲಿ ಬೇಕಿದ್ದರೆ ಭೇಟಿ ಮಾಡುತ್ತೇನೆ ಎಂದೆ. ಆದರೆ ಆ ನಿರ್ದೇಶಕ ನನ್ನ ಮಾತನ್ನು ಒಪ್ಪಲಿಲ್ಲ ಎಂದು ತಿಳಿಸಿದರು.

    ರಿಚಾ ‘ಕಿಚಡಿ’, ‘ಬಾ ಬಹು ಔರ್ ಬೇಬಿ’ ಹಾಗೂ ‘ಮಿಸೆಸ್. ತೆಂಡೂಲ್ಕರ್’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯ ರಿಚಾ ಮತ್ತೆ ಕಿರುತೆರೆಗೆ ಹಿಂತಿರುಗಬೇಕು ಎಂಬ ಇಚ್ಛೆಯನ್ನು ಹೊರ ಹಾಕಿದ್ದಾರೆ. ಆದರೆ ಅವರು ಬೋಲ್ಡ್ ಸೀನ್ ಮಾಡಿ ಕುಟುಂಬದ ಹೆಸರನ್ನು ಹಾಳು ಮಾಡಲು ಇಷ್ಟವಿಲ್ಲ ಎಂದು ಹೇಳಿದರು.

  • ಸಹನಟಿಯನ್ನು ಮೇರು ನಟಿಯಾಗಿ ಮಾಡುವುದಾಗಿ ಮೋಸ

    ಸಹನಟಿಯನ್ನು ಮೇರು ನಟಿಯಾಗಿ ಮಾಡುವುದಾಗಿ ಮೋಸ

    ಬೆಂಗಳೂರು: ಸಹನಟಿಯನ್ನು ಮೇರು ನಟಿಯಾಗಿ ಮಾಡುವುದಾಗಿ ಸಹ ನಿರ್ದೇಶಕನೊಬ್ಬ ಮೋಸ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

    ಪ್ರಭು ಮೋಸ ಮಾಡಿದ ಸಹನಿರ್ದೇಶಕ. ಮೋಸ ಹೋದ ಯುವತಿ ಧಾರಾವಾಹಿಗಳಲ್ಲಿ ಸಹ ನಟಿಯಾಗಿ ನಟನೆ ಮಾಡಿಕೊಂಡಿದ್ದಳು. ಧಾರಾವಾಹಿ ನಟನೆ ಮಾಡುವಾಗ ಸಹ ನಿರ್ದೇಶಕನಾಗಿ ಪ್ರಭು ಪರಿಚಯನಾಗಿದ್ದು, ಆತನೇ ಯುವತಿಗೆ ಮೋಸ ಮಾಡಿ ತಲೆಮರಿಸಿಕೊಂಡಿದ್ದಾನೆ.

    ಧಾರವಾಹಿಗಳಲ್ಲಿ ಸಹನಟಿಯಾಗಿ ನಟಿಸುತ್ತಿದ್ದ ಯುವತಿಗೆ, ಸ್ಯಾಂಡಲ್‍ವುಡ್‍ನ ಮೇರು ನಟಿಯಾಗಿ ಮಾಡುತ್ತೀನಿ. ಕಡಿಮೆ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡೋದಕ್ಕೆ ಅವಕಾಶ ಮಾಡಿಕೊಡುವುದಾಗಿ ನಂಬಿಸಿದ್ದಾನೆ. ಜೊತೆಗೆ ಒಳ್ಳೆಯ ಸಿನಿಮಾಗಳಲ್ಲಿ ಅವಕಾಶ ಮಾಡಿಕೊಡುತ್ತೀನಿ ನಂಬಿ ಹಣ ಹಾಗೂ ಚಿನ್ನಾಭರಣ ಪಡೆದು ಮೋಸ ಮಾಡಿ ಸಹ ನಿರ್ದೇಶಕ ಪ್ರಭು ಎಸ್ಕೇಪ್ ಆಗಿದ್ದಾನೆ. ಪ್ರಭು ನನ್ನ ರೀತಿಯಲ್ಲಿ ಹಲವರಿಗೆ ಅಮಿಷಗಳ್ನೊಡ್ಡಿ ಮೋಸ ಮಾಡಿದ್ದಾನೆಂದು ಸಹನಟಿ ಆರೋಪಿಸಿದ್ದಾಳೆ.

    ಯುವತಿ ಜೋಕಾಲಿ, ತಂಗಾಳಿ, ಸೇರಿ ಹಲವು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾಳೆ. ತನಗಾದ ಅನ್ಯಾಯ ಹಾಗೂ ವಂಚನೆ ಬಗ್ಗೆ ಯುವತಿ ಸಹ ನಿರ್ದೇಶಕನೆಂದು ನಂಬಿಸಿದ್ದ ಪ್ರಭು ವಿರುದ್ಧ ಯುವತಿ ಕೋತ್ತನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾಳೆ. ಪೊಲೀಸರು ವಂಚಕ ಪ್ರಭುವನ್ನು ಬಂಧಿಸುವ ಕೆಲಸ ಮಾಡುತ್ತಿಲ್ಲವೆಂದು ಆರೋಪಿಸುತ್ತಿದ್ದಾರೆ. ಮೇರು ನಟಿ ಆಗುವಾಸೆಗೆ ಯುವತಿ ತನ್ನ ಬಳಿ ಇದ್ದ ಒಡವೆ ಹಾಗೂ ಹಣವನ್ನು ಕೊಟ್ಟು ಕೈ ಸುಟ್ಟಿಕೊಂಡಿದ್ದು ಕಳೆದುಕೊಂಡ ಹಣ ಒಡವೆಗಾಗಿ ಪರಿತಪಿಸುತ್ತಿದ್ದಾಳೆ.

  • ಅಮಲಾ ಪೌಲ್ ಮಾಜಿ ಪತಿ ಜೊತೆ ಸಾಯಿ ಪಲ್ಲವಿ ಡೇಟಿಂಗ್!

    ಅಮಲಾ ಪೌಲ್ ಮಾಜಿ ಪತಿ ಜೊತೆ ಸಾಯಿ ಪಲ್ಲವಿ ಡೇಟಿಂಗ್!

    ಹೈದರಾಬಾದ್: ದಕ್ಷಿಣದ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಈಗ ನಟಿ ಅಮಲಾ ಪೌಲ್ ಮಾಜಿ ಪತಿ ತಮಿಳು ನಿರ್ದೇಶಕ ಎ.ಎಲ್. ವಿಜಯ್ ಜೊತೆ ಡೇಟಿಂಗ್ ನಲ್ಲಿ ಇದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಸಾಯಿ ಪಲ್ಲವಿ ಅವರು ಅಮಲಾ ಪೌಲ್ ಮಾಜಿ ಪತಿ ವಿಜಯ್ ತುಂಬಾ ದಿನಗಳಿಂದ ಒಟ್ಟಿಗೆ ಸುತ್ತಾಡುತ್ತಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಸದ್ಯದಲ್ಲಿ ಮದುವೆ ಕೂಡ ಆಗಲಿದ್ದಾರೆ. ಆದರೆ ಯಾರೊಬ್ಬರು ಈ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ವಿಜಯ್-ಅಮಲಾ ಪೌಲ್
    2011 ರಲ್ಲಿ ‘ದೈವಾ ತಿರುಮಗಲ್’ ಸಿನಿಮಾದಲ್ಲಿ ಅಮಲಾ ಪೌಲ್ ಮತ್ತು ನಿರ್ದೇಶಕ ಎ.ಎಲ್ ವಿಜಯ್ ಒಟ್ಟಿಗೆ ಕೆಲಸ ಮಾಡಿದ್ದರು. ಆಗ ಅವರಿಬ್ಬರಿಗೂ ಪರಿಚಯವಾಗಿ ಸ್ನೇಹವಾಗಿತ್ತು. ನಂತರ ಇಬ್ಬರು ಡೇಟಿಂಗ್ ಮಾಡುತ್ತಿದ್ದರು. ಕೊನೆಗೆ 2014ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ಇಬ್ಬರು ಮದುವೆಯಾಗಿದ್ದರು. ಆದರೆ ಅಮಲಾ ಮತ್ತು ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಇಬ್ಬರು 2016 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಪರಸ್ಪರ ಒಪ್ಪಿಗೆಯ ಮೇರೆಗೆ ಫೆಬ್ರವರಿ 2017ರಲ್ಲಿ ಅವರಿಗೆ ವಿಚ್ಛೇದನ ಪಡೆದಿದ್ದರು.

    ವಿಜಯ್-ಸಾಯಿ ಪಲ್ಲವಿ:
    ನಟಿ ಸಾಯಿ ಪಲ್ಲವಿ ಅಭಿನಯದ ‘ದಿಯಾ’ ಎಂಬ ತಮಿಳು ಸಿನಿಮಾವನ್ನು ವಿಜಯ್ ನಿರ್ದೇಶನ ಮಾಡಿದ್ದಾರೆ. ಇದೇ ಸಿನಿಮಾ ತೆಲುಗಿನಲ್ಲಿ ‘ಕಣಂ’ ಹೆಸರಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಇಬ್ಬರಿಗೂ ಪರಿಚಯವಾಗಿ ಪ್ರೀತಿ ಆರಂಭವಾಗಿದೆ ಎಂದು ವರದಿಯಾಗಿದೆ. ಇದೀಗ ಇವರಿಬ್ಬರು ಮದುವೆಯಾಗಲಿದ್ದು, ಶೀಘ್ರದಲ್ಲಿಯೇ ಅಧಿಕೃತವಾಗಿ ತಿಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ಹಿಂದೆ ನಟಿ ಸಾಯಿ ಪಲ್ಲವಿ ಅವರು, “ನನಗೆ ಈಗಲೇ ಮದುವೆಯಾಗಲು ಇಷ್ಟವಿಲ್ಲ. ನಮ್ಮ ತಂದೆತಾಯಿಯನ್ನು ನೋಡಿಕೊಳ್ಳಬೇಕು” ಎಂದು ಹೇಳಿದ್ದರು. ಸದ್ಯಕ್ಕೆ ನಟ ಸೂರ್ಯ ಜೊತೆ ‘ಎನ್‍ಜಿಕೆ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಅಭಿನಯಿಸುತ್ತಿದ್ದಾರೆ.

  • ದೇಸಾಯಿ ಕಟೌಟ್ ನೋಡಿ!

    ದೇಸಾಯಿ ಕಟೌಟ್ ನೋಡಿ!

    ಸಿನಿಮಾಗಳು ಬಿಡುಗಡೆಯಾದಾಗ ಥಿಯೇಟರಿನ ಮುಂದೆ ಹೀರೋಗಳ ಕಟೌಟ್ ಕೆಲವೊಮ್ಮೆ ನಾಯಕಿಯ ಕಟೌಟ್ ನಿಲ್ಲಿಸಿ ಅದಕ್ಕೆ ಸ್ಟಾರ್ ಕಟ್ಟಿ, ಹಾರ ಹಾಕೋದು ವಾಡಿಕೆ. ಆದರೆ ಉದ್ಘರ್ಷ ಸಿನಿಮಾ ಬಿಡುಗಡೆಯಾಗಿರುವ ಕೆ.ಜಿ.ರಸ್ತೆಯ ಮುಖ್ಯ ಚಿತ್ರಮಂದಿರವಾದ ಸಂತೋಷ್ ಥಿಯೇಟರ್ ಮುಂದೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ ಕಟೌಟ್ ನಿಲ್ಲಿಸಿದ್ದಾರೆ.

    ಒಂದು ಕಡೆ ಯಜಮಾನ ದರ್ಶನ್, ಈ ಕಡೆ ಕೆಜಿಎಫ್ ಯಶ್ ನಡುವೆ ದೇಸಾಯಿಯವರ ಎತ್ತರದ ಕಟೌಟ್ ರಾರಾಜಿಸುತ್ತಿದೆ. ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಇವತ್ತಿನ ಘಟಾನುಘಟಿ ನಟರೆಲ್ಲಾ ಪಾತ್ರವಹಿಸಿದ್ದಾರೆ. ಆದರೂ ಅವರ ಕೈ ಕಾಲುಗಳನ್ನು ಬಿಟ್ಟು ಪೋಸ್ಟರ್ ಗಳಲ್ಲಿ ಮುಖವನ್ನೂ ಹಾಕಿಲ್ಲ.

    ಇದು ದೇಸಾಯಿ ಸ್ಟೈಲ್. ಈಗ ಥೇಟರ್ ಮುಂದೆ ನಿರ್ದೇಶಕರ ಕಟೌಟ್ ನಿಂತಿದೆ. ನಿಜ ದೇಸಾಯಿ ಸ್ಟಾರ್ ಗಳನ್ನು ಹುಟ್ಟುಹಾಕಿದ ಡೈರೆಕ್ಟರ್. ಒಂದು ಕಾಲಕ್ಕೆ ಸ್ಟಾರ್ ನಿರ್ದೇಶಕ ಅನಿಸಿಕೊಂಡಿದ್ದವರು. ಉದ್ಘರ್ಷ ಮೂಲಕ ಮತ್ತೆ ಅವರು ಹಳೇ ಛಾರ್ಮಿಗೆ ಮರಳುವಂತಾಗಬೇಕಿದೆ. ಆಗ ಥಿಯೇಟರ್ ಮುಂದೆ ನಿಂತ ಕಟೌಟಿಗೂ ಬೆಲೆ ಬರುತ್ತದೆ. ಅಲ್ಲವೆ?

  • ಓಮ್ನಿ ಕಾರು ಮರಕ್ಕೆ ಡಿಕ್ಕಿ – ಯುವ ಚಿತ್ರ ನಿರ್ದೇಶಕ ಸಾವು

    ಓಮ್ನಿ ಕಾರು ಮರಕ್ಕೆ ಡಿಕ್ಕಿ – ಯುವ ಚಿತ್ರ ನಿರ್ದೇಶಕ ಸಾವು

    ಮಂಗಳೂರು: ಓಮ್ನಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತುಳು ಚಿತ್ರ ನಿರ್ದೇಶಕ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆಯ ಶಿರ್ತಾಡಿಯಲ್ಲಿ ನಡೆದಿದೆ.

    ಹ್ಯಾರಿಸ್ ಹೌದಾಲ್(30) ಮೃತಪಟ್ಟ ಯುವ ಚಿತ್ರ ನಿರ್ದೇಶಕ. ಹ್ಯಾರಿಸ್ ಹೌದಾಲ್ ನಿದ್ದೆ ಮಂಪರಿನಲ್ಲಿ ಕಾರು ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

    ಮೃತ ಹ್ಯಾರಿಸ್ ಹೌದಾಲ್ ಕಾರಿನಲ್ಲಿ ಮೂಡುಬಿದ್ರೆಯಿಂದ ಶಿರ್ತಾಡಿ ಕಡೆಗೆ ಬೆಳಗ್ಗಿನ ಜಾವ ಹೋಗುತ್ತಿದ್ದರು. ಈ ವೇಳೆ ಮೂಡುಬಿದ್ರೆಯ ಶಿರ್ತಾಡಿ ಬಳಿ ನಿದ್ದೆ ಮಂಪರಿನಲ್ಲಿ ವೇಗವಾಗಿ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ನಿರ್ದೇಶಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಕುರಿತು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹ್ಯಾರಿಸ್ ನಿರ್ದೇಶನದ ‘ಆಟಿಡೊಂಜಿ ದಿನ’ ತುಳು ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು.

  • ಡಬಲ್ ಸಂಭ್ರಮದಲ್ಲಿ ರಿಷಬ್ ಶೆಟ್ಟಿ

    ಡಬಲ್ ಸಂಭ್ರಮದಲ್ಲಿ ರಿಷಬ್ ಶೆಟ್ಟಿ

    ಬೆಂಗಳೂರು: ಸ್ಯಾಂಡಲ್‍ವುಲ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಂದೆಯಾಗುವ ಖುಷಿಯಲ್ಲಿದ್ದಾರೆ. ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ತುಂಬು ಗರ್ಭಿಣಿಯಾಗಿದ್ದು, ಅವರ ಸೀಮಂತ ಕಾರ್ಯ ಶುಕ್ರವಾರ ಅದ್ಧೂರಿಯಾಗಿ ನಡೆದಿದೆ.

    ಈ ಸೀಮಂತ ಕಾರ್ಯಕ್ಕೆ ಸ್ಯಾಂಡಲ್‍ವುಡ್ ತಾರೆಯರು ಆಗಮಿಸಿ ಹಾರೈಸಿದ್ದಾರೆ. ಬೆಲ್ ಬಾಟಂ ಸಿನಿಮಾದ ನಾಯಕಿ ಹರಿಪ್ರಿಯಾ ಅವರು ಕೂಡ ಸೀಮಂತ ಕಾರ್ಯದಲ್ಲಿ ಹಾಜರಿದ್ದರು. ಪ್ರಗತಿ, ರಿಷಬ್ ಶೆಟ್ಟಿ ಹಾಗೂ ಅವರ ಕುಟುಂಬದ ಜೊತೆಗಿರುವ ಫೋಟೋಗಳನ್ನು ಹರಿಪ್ರಿಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ರಿಷಬ್ ಅವರಿಗೆ ಒಂದು ಕಡೆ ಬೆಲ್ ಬಾಟಂ ಸಿನಿಮಾ ಗೆಲುವು, ಮತ್ತೊಂದು ಕಡೆ ತಂದೆಯಾಗುವ ಖುಷಿ. ಕುಂದಾಪುರ ಮೂಲದ ರಿಷಬ್ ಶೆಟ್ಟಿಯವರು 2017 ಫೆಬ್ರವರಿ 9ರಂದು ಪ್ರಗತಿ ಜೊತೆ ಸಪ್ತಪದಿ ತುಳಿದಿದ್ದರು. ಸ್ಯಾಂಡಲ್‍ವುಡ್ ಬಹುತೇಕ ಕಲಾವಿದರು ಮದುವೆಯಲ್ಲಿ ಭಾಗವಹಿಸಿ ವಧು-ವರರಿಗೆ ಶುಭಕೋರಿದ್ದರು.

    ಪ್ರಗತಿ ಅವರ ಸೀಮಂತ ಕಾರ್ಯಕ್ರಮದಲ್ಲಿ ರಿಷಬ್ ಆತ್ಮೀಯ ಸ್ನೇಹಿತ, ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಸೇರಿದಂತೆ ಬಹಳಷ್ಟು ಜನ ಆಪ್ತರು ಭಾಗಿಯಾಗಿದ್ದರು. ಜಯತೀರ್ಥ ನಿರ್ದೇಶನದ ರಿಷಬ್ ಶೆಟ್ಟಿ ನಟನೆಯ ಬೆಲ್ ಬಾಟಂ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, 5ನೇ ವಾರಕ್ಕೆ ಕಾಲಿಟ್ಟಿದೆ.

  • ಯುವ ನಿರ್ದೇಶಕಿ ಮನೆಯಲ್ಲಿ ಶವವಾಗಿ ಪತ್ತೆ

    ಯುವ ನಿರ್ದೇಶಕಿ ಮನೆಯಲ್ಲಿ ಶವವಾಗಿ ಪತ್ತೆ

    ತಿರುವನಂತಪುರಂ: ಮಲೆಯಾಳಂನ ಯುವ ನಿರ್ದೇಶಕಿ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಸೋಮವಾರ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

    ನಯನಾ ಸೂರ್ಯನ್(28) ಶವವಾಗಿ ಪತ್ತೆಯಾದ ನಿರ್ದೇಶಕಿ. ನಯನಾ ಮೂಲತಃ ಕೇರಳದ ಅಲಾಪಡ್‍ನವರಾಗಿದ್ದು, ತನ್ನ ಪೋಷಕರು ಹಾಗೂ ಒಡಹುಟ್ಟಿದವರ ಜೊತೆ ವಾಸಿಸುತ್ತಿದ್ದರು. ಬಳಿಕ ತಿರುವನಂತಪುರಂನ ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಸಿಸುತ್ತಿದ್ದರು.

    ಸೋಮವಾರ ನಯನಾ ತಾಯಿ ಆಕೆಗೆ ಫೋನ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ನಯನಾ ಫೋನ್ ಸ್ವೀಕರಿಸಲಿಲ್ಲ. ಹಾಗಾಗಿ ಅವರ ತಾಯಿ ಆಕೆಯ ಸ್ನೇಹಿತರಿಗೆ ಕರೆ ಮಾಡಿ ತನ್ನ ಮಗಳನ್ನು ಬಗ್ಗೆ ವಿಚಾರಿಸಿದ್ದಾರೆ. ಆಗ ನಯನಾ ಸ್ನೇಹಿತರು ಆಕೆಯ ಮನೆ ಬಳಿ ಹೋಗಿದ್ದಾಗ ಆಕೆ ತನ್ನ ಬೆಡ್‍ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ನಯನಾ ಕೆಲವು ದಿನಗಳ ಹಿಂದೆ ಡಯಾಬಿಟಿಸ್‍ಗೆ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಮರಣೋತ್ತರ ಪರೀಕ್ಷೆ ಬಳಿಕ ಅವರ ಸಾವಿನ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ನಯನಾ ‘ಕ್ರಾಸ್‍ವಲ್ಡ್’ ಚಿತ್ರದ ಮೂಲಕ ನಿರ್ದೇಶಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಮೊದಲು ಅವರು ದಿ. ಲೇನಿನ್ ರಾಜೇಂದ್ರನ್, ಕಮಾಲ್, ಜೀತು ಜೋಸೆಫ್ ಹಾಗೂ ಡಾ. ಬಿಜು ಅವರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 100ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಟಾರ್ ಡೈರೆಕ್ಟರ್ ಕೋಡಿ ರಾಮಕೃಷ್ಣ ನಿಧನ

    100ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಟಾರ್ ಡೈರೆಕ್ಟರ್ ಕೋಡಿ ರಾಮಕೃಷ್ಣ ನಿಧನ

    ಹೈದರಾಬಾದ್: ತೆಲುಗು, ತಮಿಳು, ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ 100ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಕೋಡಿ ರಾಮಕೃಷ್ಣ ವಿಧಿವಶರಾಗಿದ್ದಾರೆ.

    ಅನಾರೋಗ್ಯದ ನಿಮಿತ್ತ ಹೈದ್ರಾಬಾದ್‍ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕೋಡಿ ರಾಮಕೃಷ್ಣ ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಪಂಚ ಭಾಷೆಯಲ್ಲಿ 100 ಕ್ಕೂ ಹೆಚ್ಚು ಸಿನಿಮಾಗಳನ್ನ ನಿರ್ದೇಶಿಸಿದ ಕೋಡಿ ರಾಮಕೃಷ್ಣ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದರು. ಕನ್ನಡದ ನಾಗರಹಾವು, ಮಂಗಮ್ಮಗರಿ, ಅಂಕುಶಂ, ಅಮ್ಮೋರು, ಅರುಂಧತಿ ಇವರು ನಿರ್ದೇಶನ ಕೆಲ ಸೂಪರ್ ಹಿಟ್ ಸಿನಿಮಾಗಳಾಗಿವೆ.

    ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪಲ್ಲಕೊಳ್ಳು ಗ್ರಾಮದಲ್ಲಿ ಜನಿಸಿದ್ದ ಇವರು ಕನ್ನಡ, ತಮಿಳು, ಮಲಯಾಳಂ, ಹಿಂದಿ, ತೆಲುಗು ಭಾಷೆಗಳಲ್ಲಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. 1982 ರಲ್ಲಿ ಇವರ ನಿರ್ದೇಶನದ ಮೊದಲ ಸಿನಿಮಾ ತೆರೆಕಂಡಿತ್ತು. 2016 ರಲ್ಲಿ ಕನ್ನಡ ವಿಷ್ಣುವರ್ಧನ್ ಅಭಿನಯದಲ್ಲಿ ವಿಶೇಷ ತಂತ್ರಜ್ಞಾನದೊಂದಿಗೆ ನಾಗರಹಾವು ಸಿನಿಮಾ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಟಾಲಿವುಡ್‍ನಲ್ಲಿ ‘ನಾಗಭರಣಂ’ ಎಂದು ಬಿಡುಗಡೆಯಾಗಿತ್ತು. ಇದೇ ಇವರ ಅಂತಿಮ ಸಿನಿಮಾ ಆಗಿದೆ.

    ಕೆಲ ವರ್ಷಗಳಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ ಹೃದಯಘಾತ ಕೂಡ ಸಂಭವಿಸಿತ್ತು. ಈ ವೇಳೆ ಉತ್ತಮ ಚಿಕಿತ್ಸೆ ಲಭ್ಯವಾದ ಕಾರಣ ಬಹುಬೇಗ ಗುಣಮುಖರಾಗಿದ್ದರು. ಗುರುವಾರ ತೀವ್ರ ಆನಾರೋಗ್ಯಕ್ಕೆ ಒಳಗಾದ ರಾಮಕೃಷ್ಣ ಅವರನ್ನು ಆಸ್ಪತ್ರೆ ದಾಖಲಿಸಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನದ ವೇಳೆಗೆ ನಿಧನರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv