Tag: director

  • ಟಾಪ್‍ಲೆಸ್ ನಟಿಯನ್ನು ತಬ್ಬಿಕೊಂಡ ಖ್ಯಾತ ನಿರ್ದೇಶಕನ ಪುತ್ರ: ಫೋಟೋ ವೈರಲ್

    ಟಾಪ್‍ಲೆಸ್ ನಟಿಯನ್ನು ತಬ್ಬಿಕೊಂಡ ಖ್ಯಾತ ನಿರ್ದೇಶಕನ ಪುತ್ರ: ಫೋಟೋ ವೈರಲ್

    ಹೈದರಾಬಾದ್: ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರ ಪುತ್ರ ಆಕಾಶ್ ಪೂರಿ ನಟನೆಯ ‘ರೊಮ್ಯಾಂಟಿಕ್’ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್ ನಲ್ಲಿ ಆಕಾಶ್ ಅವರು ಟಾಪ್‍ಲೆಸ್ ಆಗಿರುವ ನಟಿಯನ್ನು ತಬ್ಬಿಕೊಂಡಿದ್ದಾರೆ.

    ರೊಮ್ಯಾಂಟಿಕ್ ಚಿತ್ರತಂಡ ಚಿತ್ರದ ಮೊದಲ ಪೋಸ್ಟರ್ ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದೆ. ಅಲ್ಲದೆ ಅದಕ್ಕೆ, “ರೊಮ್ಯಾನ್ಸ್ ಯಾವಾಗಲೂ ತೀವ್ರವಾಗಿರುತ್ತೆ. ರೊಮ್ಯಾಂಟಿಕ್ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ನಟ ಆಕಾಶ್ ಪೂರಿ ಹಾಗೂ ನಟಿ ಕೆತಿಕಾ ಶರ್ಮಾ ನಟಿಸುತ್ತಿದ್ದಾರೆ. ಪೂರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅನಿಲ್ ಪಡುರಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ” ಎಂದು ಟ್ವೀಟ್ ಮಾಡಿದೆ. ಇದನ್ನೂ ಓದಿ: ನಿಮಗೆ ಸೆಕ್ಸ್ ಬೇಕೆಂದರೆ ಮಾಡಿಬಿಡಿ, ಸುಮ್ಮನೆ ಕೊರಗುತ್ತಿರಬೇಡಿ: ನಟಿ ಕಂಗನಾ

    https://twitter.com/purijagan/status/1178542503110119424

    ಚಿತ್ರದ ಮೊದಲ ಪೋಸ್ಟರ್ ನೋಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ಟ್ವಿಟ್ಟರಿನಲ್ಲಿ, “ಈ ಚಿತ್ರ ಬ್ಲಾಕ್‍ಬಸ್ಟರ್ ಹಿಟ್ ಆಗಲಿದೆ. ಕಳೆದ ರಾತ್ರಿ ನಾನು ಒಂದು ಹಾಡನ್ನು ನೋಡಿದ್ದೇನೆ. ಆದರೆ ಅದು ಹೆಚ್ಚು ರೊಮ್ಯಾಂಟಿಕ್ ಹಾಡು ಆಗಿರಲಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

    ಈ ಚಿತ್ರದ ಪೋಸ್ಟರ್ ನಲ್ಲಿ ನಟಿ ಕೆತಿಕಾ ಶರ್ಮಾ ಲುಕ್ ಅನ್ನು ಗೌಪ್ಯವಾಗಿ ಇಡಲಾಗಿದೆ. ಡಬ್‍ಸ್ಮಾಶ್‍ನಲ್ಲಿ ಸ್ಟಾರ್ ಆಗಿ ಇಂಟರ್ ನೆಟ್ ಸೆನ್ಸೆಷನ್ ಆಗಿದ್ದ ಕೆತಿಕಾ ರೊಮ್ಯಾಂಟಿಕ್ ಚಿತ್ರದ ಮೂಲಕ ಟಾಲಿವುಡ್‍ಗೆ ಎಂಟ್ರಿ ಕೊಡುತ್ತಿದ್ದಾರೆ. ಇತ್ತ ಆಕಾಶ್ ಪೂರಿ ‘ಮೆಹಬೂಬಾ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಚಿತ್ರದಲ್ಲಿ ಆಕಾಶ್ ಕಾಲೇಜು ವಿದ್ಯಾರ್ಥಿಯ ಪಾತ್ರ ಹಾಗೂ ಯೋಧನ ಪಾತ್ರದಲ್ಲಿ ನಟಿಸಿದ್ದರು.

  • ನಿರ್ದೇಶಕ ನನ್ನ ಎದೆಯ ಭಾಗ, ತೊಡೆ ನೋಡಬೇಕು ಎಂದಿದ್ದ: ನಟಿ ಸುರ್ವೀನ್

    ನಿರ್ದೇಶಕ ನನ್ನ ಎದೆಯ ಭಾಗ, ತೊಡೆ ನೋಡಬೇಕು ಎಂದಿದ್ದ: ನಟಿ ಸುರ್ವೀನ್

    ಮುಂಬೈ: ನಿರ್ದೇಶಕನೊಬ್ಬ ನನ್ನ ಎದೆಯ ಭಾಗ ಹಾಗೂ ತೊಡೆ ನೋಡಬೇಕೆಂದು ಹೇಳಿದ್ದನು ಅಂತ ಬಾಲಿವುಡ್ ನಟಿ ಸುರ್ವೀನ್ ಚಾವ್ಲಾ ಅವರು ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

    ನಾನು 5 ಬಾರಿ ಕಾಸ್ಟಿಂಗ್ ಕೌಚ್‍ಗೆ ಒಳಗಾಗಿದ್ದೇನೆ. ಮೂರು ಬಾರಿ ಸೌತ್ ಫಿಲಂ ಇಂಡಸ್ಟ್ರಿಯಲ್ಲಿ ಹಾಗೂ ಎರಡು ಬಾರಿ ಬಾಲಿವುಡ್‍ನಲ್ಲಿ ನನಗೆ ಕಾಸ್ಟಿಂಗ್ ಕೌಚ್ ಅನುಭವವಾಗಿದೆ. ನಿರ್ದೇಶಕನೊಬ್ಬ ನನ್ನ ಎದೆಯ ಭಾಗವನ್ನು ನೋಡಬೇಕು ಎಂದು ಹೇಳಿದ್ದನು. ಇನ್ನುಳಿದ ನಿರ್ದೇಶಕರು ನಿಮ್ಮ ತೊಡೆಯನ್ನು ನೋಡಬೇಕು ಎಂದು ಹೇಳಿದ್ದರು ಎಂದು ನಟಿ ಸುರ್ವೀನ್ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

    ಮೊದಲು ನಾನು ಆಡಿಶನ್‍ಗೆ ಹೋಗಿದ್ದಾಗ ವ್ಯಕ್ತಿಯೊಬ್ಬರು ನೀನು ತುಂಬಾ ದಪ್ಪ ಇದ್ದೀಯಾ ಎಂದು ಹೇಳಿದ್ದರು. ಆದರೆ ನಾನು ಆಗ ಕೇವಲ 56 ಕೆಜಿ ತೂಕ ಇದ್ದೆ. ಆ ವ್ಯಕ್ತಿ ದಪ್ಪ ಎಂದು ಹೇಳಿದಾಗ ಆತನಿಗೆ ಕನ್ನಡಕದ ಅವಶ್ಯಕತೆ ಇದೆ ಎಂದು ನನಗೆ ಎನಿಸಿತ್ತು ಎಂದು ಸುರ್ವೀನ್ ಹೇಳಿದ್ದಾರೆ.

    ಸುರ್ವೀನ್ ‘ಕಹಿ ತೋ ಹೋಗಾ’ ಟಿವಿ ಶೋ ಮೂಲಕ ನಟನೆಯನ್ನು ಶುರು ಮಾಡಿದ್ದರು. ಇದಾದ ಬಳಿಕ ಅವರು ಕನ್ನಡದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರ ಜೊತೆ ‘ಪರಮೇಶ ಪಾನ್‍ವಾಲಾ’ ಚಿತ್ರದಲ್ಲಿ ನಟಿಸಿದ್ದರು. ಅಲ್ಲದೆ ತಮಿಳು ಹಾಗೂ ತೆಲುಗು ಚಿತ್ರದಲ್ಲಿ ನಟಿಸಿದ ಬಳಿಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು.

  • ಹೋಟೆಲ್ ರೂಮಿಗೆ ಬಾ ಎಂದ ನಿರ್ದೇಶಕನಿಗೆ ಚಳಿ ಬಿಡಿಸಿದ್ದ ವಿದ್ಯಾ ಬಾಲನ್

    ಹೋಟೆಲ್ ರೂಮಿಗೆ ಬಾ ಎಂದ ನಿರ್ದೇಶಕನಿಗೆ ಚಳಿ ಬಿಡಿಸಿದ್ದ ವಿದ್ಯಾ ಬಾಲನ್

    ಮುಂಬೈ: ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರನ್ನು ನಿರ್ದೇಶಕರೊಬ್ಬರು ಹೋಟೆಲಿನ ರೂಮಿಗೆ ಬರಲು ಹೇಳಿದ್ದನು ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.

    ಇತ್ತೀಚೆಗೆ ವಿದ್ಯಾ ಬಾಲನ್ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ತಮ್ಮ ಕೆರಿಯರ್ ಬಗ್ಗೆ ಹಾಗೂ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. 2005ರಲ್ಲಿ ವಿದ್ಯಾ ಬಾಲಾನ್ ‘ಪರಿಣೀತಾ’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಅವರು ಬಾಲಿವುಡ್‍ನಲ್ಲಿ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದರು.

    ಸಂದರ್ಶನದಲ್ಲಿ ವಿದ್ಯಾ ತಾವು ನಟಿಯಾಗಲು ಎಷ್ಟು ಕಷ್ಟಪಟ್ಟಿದ್ದೇನೆ ಎಂಬ ವಿಷಯವನ್ನು ಈಗ ಹಂಚಿಕೊಂಡಿದ್ದಾರೆ. ಅಲ್ಲದೆ ಒಂದೇ ಸಮಯದಲ್ಲಿ ಒಂದಲ್ಲ, ಎರಡಲ್ಲ ಒಟ್ಟು 12 ಚಿತ್ರಗಳನ್ನು ಕಳೆದುಕೊಂಡಿದ್ದರ ಬಗ್ಗೆ ತಿಳಿಸಿದ್ದಾರೆ. ಇದೇ ವೇಳೆ ನಿರ್ದೇಶಕರೊಬ್ಬರು ತಮ್ಮನ್ನು ಹೋಟೆಲ್ ರೂಮಿಗೆ ಕರೆದುಕೊಂಡು ಹೋಗಬೇಕು ಎಂದುಕೊಂಡಿದ್ದ ವಿಷಯವನ್ನು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

    ಈ ಬಗ್ಗೆ ಮಾತನಾಡಿದ ವಿದ್ಯಾ, ನನಗೆ ನೆನಪಿದೆ. ನಾನು ಚೆನ್ನೈನಲ್ಲಿ ಕೆಲಸದ ವಿಷಯಕ್ಕಾಗಿ ಒಬ್ಬ ನಿರ್ದೇಶಕರನ್ನು ಭೇಟಿ ಮಾಡಿದೆ. ಆಗ ನಾನು ಅವರಿಗೆ ಕಾಫಿ ಶಾಪ್‍ಗೆ ಹೋಗಿ ಮಾತನಾಡೋಣ ಎಂದು ಹೇಳಿದ್ದೆ. ಆದರೆ ಅವರು ಪದೇ ಪದೇ ರೂಮಿಗೆ ಹೋಗುವುದರ ಬಗ್ಗೆ ಮಾತನಾಡುತ್ತಿದ್ದರು. ಅಲ್ಲದೆ ನನ್ನ ಜೊತೆ ಮಾತನಾಡಬೇಕು ಎಂದರೆ ರೂಮಿಗೆ ಬರಬೇಕು ಎಂದು ಹೇಳುತ್ತಿದ್ದನು.

    ಅಲ್ಲದೆ, ನಾನು ನಿರ್ದೇಶಕನ ಯೋಚನೆಯನ್ನು ತಿಳಿದು ಆತನ ಜೊತೆ ರೂಮಿಗೆ ಹೋಗಿದ್ದೆ. ಆದರೆ ನಾನು ಅಲ್ಲಿ ನಾನು ಬಾಗಿಲನ್ನು ಕ್ಲೋಸ್ ಮಾಡದೇ ಓಪನ್ ಮಾಡಿದ್ದೆ. ಈ ವೇಳೆ ನಿರ್ದೇಶಕ ಏನೂ ಮಾತನಾಡಲಿಲ್ಲ. 5 ನಿಮಿಷದ ನಂತರ ಆತ ಅಲ್ಲಿಂದ ಎದ್ದು ಹೋದನು ಎಂದು ವಿದ್ಯಾ ತಿಳಿಸಿದ್ದಾರೆ.

    ಸದ್ಯ ವಿದ್ಯಾ ಅವರು ನಟಿಸಿದ ‘ಮಿಶನ್ ಮಂಗಲ್’ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡುತ್ತಿದೆ. ಒಂದೇ ವಾರದಲ್ಲಿ ಈ ಚಿತ್ರ 100 ಕೋಟಿ ಕಲೆಕ್ಷನ್ ಆಗಿದೆ. ಈ ಚಿತ್ರದಲ್ಲಿ ವಿದ್ಯಾ ಬಾಲನ್ ಹೊರತಾಗಿ, ಅಕ್ಷಯ್ ಕುಮಾರ್, ಕನ್ನಡ ನಟ ದತ್ತಣ್ಣ, ತಾಪ್ಸಿ ಪನನು, ಕಾರ್ತಿ ಕುಲ್ಹಾರಿ, ಸೋನಾಕ್ಷಿ ಸಿನ್ಹಾ, ನಿತ್ಯಾ ಮೆನೆನ್ ಹಾಗೂ ಶರಮನ್ ಜೋಶಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

  • ಸೈಮಾ ಪ್ರಶಸ್ತಿ- ಕೆಜಿಎಫ್‍ಗೆ ಸಿಂಹಪಾಲು, ಡಾಲಿ, ಕಾಸರಗೋಡಿಗೆ ಪ್ರಶಸ್ತಿ

    ಸೈಮಾ ಪ್ರಶಸ್ತಿ- ಕೆಜಿಎಫ್‍ಗೆ ಸಿಂಹಪಾಲು, ಡಾಲಿ, ಕಾಸರಗೋಡಿಗೆ ಪ್ರಶಸ್ತಿ

    ದೋಹಾ: ಸಾಕಷ್ಟು ಕೂತೂಹಲ ಕೆರಳಿಸಿದ್ದ 2019ರ ಸೈಮಾ ಪ್ರಶಸ್ತಿಗೆ ತೆರೆಬಿದ್ದಿದೆ. ಕತಾರ್ ನ ರಾಜಧಾನಿ ದೋಹಾದಲ್ಲಿ ದಕ್ಷಿಣ ಭಾರತದ 8ನೇ ಅಂತರಾಷ್ಟ್ರೀಯ ವರ್ಣರಂಜಿತ ಸಮಾರಂಭ ನಡೆದಿದ್ದು 2019ರ ಸೈಮಾ ಪ್ರಶಸ್ತಿ ಘೋಷಣೆಯಾಗಿದೆ.

    ಕನ್ನಡ-ತೆಲುಗು-ತಮಿಳು-ಮಲೆಯಾಳಂ ಭಾಷೆಯ ಸಿನಿದಿಗ್ಗಜರು ಒಟ್ಟಾಗಿ ಸೇರಿದ್ದು ಸೈಮಾ ಗೋಲ್ಡನ್ ಟ್ರೋಪಿಗೆ ಮುತ್ತಿಕ್ಕಿದ್ದಾರೆ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಖಳನಾಯಕ. ಅತ್ಯುತ್ತಮ ನಟಿ ಸೇರಿದಂತೆ ಹಲವು ವಿಭಾಗಗಳಿಗೆ ಪ್ರಶಸ್ತಿ ನೀಡಲಾಗಿದೆ.

    ಅತ್ಯುತ್ತಮ ನಟನಾಗಿ ಮಿಂಚಿದ ರಾಕಿಭಾಯ್, ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್ ಕೆಜಿಎಫ್ ಚಿತ್ರದ ನಾಯಕ ರಾಕಿಂಗ್ ಸ್ಟಾರ್ ಯಶ್ ಅವರಿಗೆ 2019ರ ಸೈಮಾ ಅತ್ಯುತ್ತಮ ನಟನಾಗಿ ಗೋಲ್ಡನ್ ಬ್ಯೂಟಿಗೆ ಮುತ್ತಿಕ್ಕಿದ್ದಾರೆ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ದೇಶದಾದ್ಯಂತ ಉತ್ತಮ ಯಶಸ್ಸು ಕಂಡಿತ್ತು.

    ಕೆಜಿಎಫ್‍ನಂತಹ ಬಿಗ್ ಬಜೆಟ್ ಸಿನಿಮಾ ಮಾಡಿ ಸೈ ಅನಿಸಿಕೊಂಡ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಸೈಮಾದ ಅತ್ಯುತ್ತಮ ನಿರ್ದೇಶಕನಾಗಿ ಪ್ರಶಸ್ತಿ ಪಡೆದಿದ್ದಾರೆ. ತಮ್ಮ ಚೊಚ್ಚಲ ಸಿನಿಮಾದಲ್ಲೇ ಉಗ್ರಂ ರೀತಿಯ ಮಾಸ್ ಹಿಟ್ ಕೊಟ್ಟಿದ್ದ ಪ್ರಶಾಂತ್ ತನ್ನ ಎರಡನೇ ಚಿತ್ರದಲ್ಲಿ ಕೆಜಿಎಫ್‍ನಂತಹ ಬಿಗ್ ಸಿನಿಮಾ ಮಾಡಿ ಗೆದ್ದಿದ್ದರು.

    ಕನ್ನಡ ವಿಭಾಗ ಸೈಮಾ ಪ್ರಶಸ್ತಿಯ ಬಹುಪಾಲು ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವ ಕೆಜಿಎಫ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಸಿನಿಮಾದಲ್ಲಿ ಯಶ್ ಅವರ ತಾಯಿಯ ಪಾತ್ರದಲ್ಲಿ ಮಿಂಚಿದ್ದ ಅರ್ಚನಾ ಜೋಯಿಸ್ ಅವರಿಗೆ ಸೈಮಾದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರತಿದೆ.

    ಕೆಜಿಎಫ್ ಸಿನಿಮಾಗೆ ಒಟ್ಟು ಐದು ಪ್ರಶಸ್ತಿಗಳು ಲಭಿಸಿದ್ದು, ಕೆಜಿಎಫ್ ಸಿನಿಮಾದಲ್ಲಿ ರಾಜಕಾರಣಿಯಾಗಿ ಅಭಿನಯಸಿದ್ದ ಅಚ್ಯುತ್ ಕುಮಾರ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಿಕ್ಕಿದೆ. ಕೆಜಿಎಫ್ ಚಿತ್ರಕ್ಕೆ ಉತ್ತಮ ಛಾಯಾಗ್ರಹಣ ಮಾಡಿದ್ದ ಭುವನ್ ಗೌಡ ಅವರಿಗೆ ಸೈಮಾದ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ.

    ಹ್ಯಾಟ್ರಿಕ್ ಹಿರೋ ಶಿವರಾಜ್‍ಕುಮಾರ್ ಅಭಿನಯದ ಟಗರು ಚಿತ್ರಕ್ಕೆ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಸಿಕ್ಕಿದ್ದು, ಈ ಚಿತ್ರದಲ್ಲಿ ಡಾಲಿ ಎಂಬ ಹೆಸರಿನ ಪಾತ್ರದಲ್ಲಿ ತನ್ನ ವಿಭಿನ್ನ ನಟನೆಯ ಮೂಲಕ ಸಖತ್ ಮನೋರಂಜನೆ ನೀಡಿದ್ದ ಡಾಲಿ ಧನಂಜಯ ಅವರಿಗೆ 2019ರ ಅತ್ಯುತ್ತಮ ಖಳನಾಯಕ ಪ್ರಶಸ್ತಿ ಸಿಕ್ಕಿದೆ.

    ಅತ್ಯುತ್ತಮ ಯುವ ನಿರ್ದೇಶಕ ಪ್ರಶಸ್ತಿ ಅಯೋಗ್ಯ ಚಿತ್ರ ತಂಡಕ್ಕೆ ಸಿಕ್ಕಿದೆ. ಸತೀಶ್ ನಿನಾಸಂ, ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಕಿಕೊಂಡು ಉತ್ತಮ ಕೌಟುಂಬಿಕ ಕಾಮಿಡಿ ಚಿತ್ರ ಮಾಡಿದ ಮಹೇಶ್ ಅವರಿಗೆ ಸೈಮಾದ ಅತ್ಯುತ್ತಮ ಯುವ ನಿರ್ದೇಶಕ ಪ್ರಶಸ್ತಿ ದೊರಕಿದೆ. ಇದೇ ಚಿತ್ರದ `ಏನಮ್ಮಿ ಏನಮ್ಮಿ’ ಪದ್ಯ ಬರೆದ ಚೇತನ್ ಕುಮಾರ್ ಅವರಿಗೆ ಅತ್ಯುತ್ತಮ ಚಿತ್ರ ಸಾಹಿತಿ ಪ್ರಶಸ್ತಿ ಸಿಕ್ಕಿದೆ.

    ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿದ ಕರಾಳರಾತ್ರಿ ಸಿನಿಮಾಗೆ ಅತ್ಯುತ್ತಮ ನವ ನಟಿ ಪ್ರಶಸ್ತಿ ಸಿಕಿದ್ದು, ಈ ಚಿತ್ರದಲ್ಲಿ ಜೆಕೆ ಜೊತೆ ನಾಯಕಿಯಾಗಿ ನಟಿಸಿದ್ದ ಬಿಗ್‍ಬಾಸ್ ಖ್ಯಾತಿಯ ಅನುಪಮಾ ಗೌಡ ಅವರು ಪ್ರಶಸ್ತಿ ಗೆದ್ದಿದ್ದಾರೆ.

    ಬೆಲ್‍ಬಾಟಮ್ ಖ್ಯಾತಿಯ ನಟ ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ ಸಿಕ್ಕಿದೆ. ಈ ಚಿತ್ರದಲ್ಲಿ ಕಾಮಿಡಿ ಟೈಮಿಂಗ್ ಮೂಲಕ ಹೆಸರುವಾಸಿಯಾದ ಪ್ರಕಾಶ್ ತುಮಿನಾಡ್ ಅವರಿಗೆ ಸೈಮಾ ಪ್ರಶಸ್ತಿ ಒಲಿದಿದೆ.

  • ‘ಕೆಜಿಎಫ್’ ಡೈಲಾಗ್ ರೈಟರ್ ಈಗ ನಿರ್ದೇಶಕ!

    ‘ಕೆಜಿಎಫ್’ ಡೈಲಾಗ್ ರೈಟರ್ ಈಗ ನಿರ್ದೇಶಕ!

    ಸಿನಿಮಾವೊಂದು ದೊಡ್ಡ ಮಟ್ಟದಲ್ಲಿ ಹಿಟ್ ಆದರೆ ಆ ಮೂಲಕ ಇಡೀ ಚಿತ್ರತಂಡದ ಬದುಕೇ ಮಹತ್ತರ ತಿರುವು ಪಡೆದುಕೊಳ್ಳುತ್ತದೆ. ಹಾಗಿದ್ದ ಮೇಲೆ ದೇಶಾದ್ಯಂತ ಸಂಚಲನ ಮೂಡಿಸಿದ್ದ ಕೆಜಿಎಫ್‍ಗಾಗಿ ದುಡಿದವರ ಬದುಕು ಬಂಗಾರವಾಗದಿರುತ್ತಾ? ಕೆಜಿಎಫ್ ಚಿತ್ರಕ್ಕಾಗಿ ವರ್ಷಾಂತರಗಳ ಕಾಲ ದುಡಿದ ತಂತ್ರಜ್ಞರು, ನಿರ್ದೇಶನ ವಿಭಾಗದವರು, ನಟ ನಟಿಯರು ಸೇರಿದಂತೆ ಎಲ್ಲರೂ ಅಭೂತಪೂರ್ವ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಈ ಚಿತ್ರಕ್ಕೆ ಪಂಚಿಂಗ್ ಡೈಲಾಗ್‍ಗಳನ್ನು ಪೋಣಿಸುತ್ತಲೇ ಹಲವಾರು ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ದುಡಿದಿದ್ದ ಚಂದ್ರಮೌಳಿ ಇದೀಗ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

    ಹಲವಾರು ವರ್ಷಗಳ ಕಾಲ ವಿವಿಧ ಚಿತ್ರಗಳ ನಿರ್ದೇಶನ ವಿಭಾಗದಲ್ಲಿ ದುಡಿದಿದ್ದವರು ಚಂದ್ರಮೌಳಿ. ಆದರೆ ಕೆಜಿಎಫ್ ಮೂಲಕ ಅವರು ಒಂದಷ್ಟು ಹೆಸರು ಮಾಡಿಕೊಂಡಿದ್ದರು. ಇದೀಗ ಚಂದ್ರಮೌಳಿ ಚಿತ್ರವೊಂದನ್ನು ನಿರ್ದೇಶನ ಮಾಡಲು ತಯಾರಾಗಿದ್ದಾರೆ. ಹೀಗೆಂದಾಕ್ಷಣ ಹೀರೋ ಯಾರೆಂಬ ಕುತೂಹಲ ಹುಟ್ಟುತ್ತೆ. ಚಂದ್ರಮೌಳಿ ಹೊಸ ಹುಡುಗನನ್ನು ಹೀರೋ ಆಗಿ ಲಾಂಚ್ ಮಾಡುವ ಮೂಲಕವೇ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ.

    ಹೊಸ ಹುಡುಗ ರಾಮ್ ಎಂಬಾತ ಈ ಸಿನಿಮಾ ಮೂಲಕವೇ ನಾಯಕನಾಗಿ ಲಾಂಚ್ ಆಗುತ್ತಿದ್ದಾರೆ. ಪರಭಾಷಾ ಹುಡುಗಿ ನಾಯಕಿಯಾಗಿ ಬರಲಿರೋದು ಪಕ್ಕಾ ಆಗಿದೆ. ಸಾಯಿಕುಮಾರ್ ಸೇರಿದಂತೆ ಅನೇಕ ನಟರು ಈ ಸಿನಿಮಾ ಭಾಗವಾಗಲಿದ್ದಾರೆ. ಕಾಮಿಡಿ ಕಲಾವಿದರ ದಂಡೇ ಇರಲಿದೆ. ತಾಂತ್ರಿಕ ವರ್ಗವೂ ಕೂಡಾ ಈ ಸಿನಿಮಾವನ್ನು ಶ್ರೀಮಂತಗೊಳಿಸಲಿದೆಯಂತೆ. ತೆಲುಗಿನ ಅರ್ಜುನ್ ರೆಡ್ಡಿ ಖ್ಯಾತಿಯ ಸಂಗೀತಯ ನಿರ್ದೇಶಕ ರಾಧನ್ ಈ ಸಿನಿಮಾಕ್ಕೂ ಸಂಗೀತ ಸಾರಥ್ಯ ವಹಿಸಿಕೊಂಡಿದ್ದಾರೆ. ಇನ್ನುಳಿದಂತೆ ಕೆಜಿಎಫ್‍ಗೆ ದುಡಿದ ತಾಂತ್ರಿಕ ವರ್ಗವೂ ಸಾಥ್ ಕೊಡಲಿದೆ. ಇದೇ ಹದಿನೆಂಟರಂದು ಮುಹೂರ್ತ ಮುಗಿಸಿಕೊಂಡು ಇಷ್ಟರಲ್ಲಿಯೇ ಈ ಚಿತ್ರದ ಚಿತ್ರೀಕರಣವೂ ಶುರುವಾಗಲಿದೆ.

  • ಪ್ರಪಂಚದ ಉತ್ತಮ 50 ನಿರ್ದೇಶಕರಲ್ಲಿ ಒಬ್ಬರಾದ ಉಪ್ಪಿ

    ಪ್ರಪಂಚದ ಉತ್ತಮ 50 ನಿರ್ದೇಶಕರಲ್ಲಿ ಒಬ್ಬರಾದ ಉಪ್ಪಿ

    ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ, ತಮ್ಮ ವಿಭಿನ್ನ ರೀತಿಯ ನಟನೆಯಿಂದಲೇ ಸೂಪರ್ ಸ್ಟಾರ್ ಆಗಿ ಹೆಸರು ಮಾಡಿದ್ದಾರೆ. ನಟನೆಯಲ್ಲಿ ಮಾತ್ರವಲ್ಲದೆ ನಿರ್ದೇಶನದಲ್ಲೂ ಅವರಿಗೆ ಈಗ ಇನ್ನೊಂದು ಹಿರಿಮೆ ಬಂದಿದೆ.

    ಹೌದು ಎ, ಓಂ ರೀತಿಯ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಉಪ್ಪಿ ಅವರು ಪ್ರಪಂಚದ ಉತ್ತಮ 50 ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಚಲನಚಿತ್ರಗಳು, ಟೆಲಿವಿಷನ್ ಕಾರ್ಯಕ್ರಮಗಳು, ಹೋಮ್ ವಿಡಿಯೋಗಳು, ವಿಡಿಯೋ ಗೇಮ್‍ಗಳು ಮತ್ತು ಸ್ಟ್ರೀಮಿಂಗ್ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯ ಆನ್‍ಲೈನ್ ಡೇಟಾಬೇಸ್ ಆಗಿರುವ ಐಎಮ್‍ಡಿಬಿ ಸಂಸ್ಥೆ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಉಪೇಂದ್ರ ಸ್ಥಾನ ಪಡೆದಿದ್ದಾರೆ.

    ಐಎಮ್‍ಡಿಬಿ ಸಂಸ್ಥೆಯೂ ಬಿಡುಗಡೆ ಮಾಡಿರುವ 50 ನಿರ್ದೇಶಕರ ಈ ಪಟ್ಟಿಯಲ್ಲಿ ಉಪೇಂದ್ರ ಅವರಿಗೆ 17 ನೇ ಸ್ಥಾನ ಸಿಕ್ಕಿದೆ. ಈ ಮೂಲಕ ಈ ಪಟ್ಟಿಗೆ ಆಯ್ಕೆಯಾದ ಏಕೈಕ ದಕ್ಷಿಣ ಭಾರತದ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಉಪ್ಪಿ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಹಾಲಿವುಡ್‍ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಪ್ರಥಮ ಸ್ಥಾನ ಪಡೆದಿದ್ದಾರೆ.

    ಉಪ್ಪಿ ಅವರ ಜೊತೆ ಭಾರತದಿಂದ ಬಾಲಿವುಡ್‍ನಲ್ಲಿ ‘ಮುನ್ನಾಭಾಯಿ ಎಂ ಬಿ ಬಿ ಎಸ್’, ‘ತ್ರೀ ಈಡಿಯಟ್ಸ್’ ಮತ್ತು ‘ಪಿಕೆ’ ಸಿನಿಮಾಗಳ ಮೂಲಕ ದೊಡ್ಡ ಯಶಸ್ಸು ಪಡೆದಿರುವ ನಿರ್ದೇಶಕ ರಾಜ್ ಕುಮಾರ್ ಇರಾನಿ ಅವರಿಗೆ ಈ ಪಟ್ಟಿಯಲ್ಲಿ 2 ಸ್ಥಾನ ದೊರಕಿದೆ. ಇವರನ್ನು ಬಿಟ್ಟರೆ ಮೊತ್ತೊಬ್ಬ ಶ್ರೇಷ್ಠ ನಿರ್ದೇಶಕ ಸತ್ಯಜೀತ್ ರೇ ಅವರಿಗೂ ಈ ಪಟ್ಟಿಯಲ್ಲಿ 49ನೇ ಸ್ಥಾನ ಸಿಕ್ಕಿದೆ.

    ತನ್ನ ವಿಭಿನ್ನ ನಿರ್ದೇಶನ ಮತ್ತು ಸಂಭಾಷಣೆ ಮೂಲಕವೇ ಹೆಸರು ಮಾಡಿದ್ದ ಉಪೇಂದ್ರ ಅವರು ಈವರೆಗೆ ಕನ್ನಡದಲ್ಲಿ ಒಂಬತ್ತು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅವರು ನಿರ್ದೇಶನ ಮಾಡಿದ ಜಗ್ಗೇಶ್ ಅಭಿನಯದ ತರ್ಲೆ ನನ್ ಮಗ, ಶಿವರಾಜ್ ಕೂಮಾರ್ ಅಭಿನಯದ ಓಂ, ಅವರೇ ಅಭಿನಯಿಸಿದ ಎ, ಉಪೇಂದ್ರ ಮತ್ತು ಸೂಪರ್‍ ನಂತಹ ಚಿತ್ರಗಳು ಸಖತ್ ಹಿಟ್ ಆಗಿವೆ.

    ಉಪೇಂದ್ರ ಅವರು ಈ ವಿಚಾರವನ್ನು ಟ್ವಿಟ್ಟರ್‍ ನಲ್ಲಿ ಹಾಕಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ವಿಚಾರಕ್ಕೆ ಅಭಿಮಾನಿಗಳು ಮತ್ತೆ ನೀವು ಸಿನಿಮಾ ನಿರ್ದೇಶನ ಮಾಡಬೇಕು. ನಿಮ್ಮ ನಿರ್ದೇಶನದ ಸಿನಿಮಾ ನೋಡಬೇಕೆಂದು ಆಸೆ ವ್ಯಕ್ತಪಡಿಸಿದ್ದಾರೆ.

  • ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ- ವಿಜಯಪುರ ಕೆಎಂಎಫ್ ನಿರ್ದೇಶಕ ಸ್ಪಷ್ಟನೆ

    ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ- ವಿಜಯಪುರ ಕೆಎಂಎಫ್ ನಿರ್ದೇಶಕ ಸ್ಪಷ್ಟನೆ

    ವಿಜಯಪುರ: ಕೆಎಂಎಫ್ ಗಾದಿಗಾಗಿ ನಾಲ್ವರು ಕಾಂಗ್ರೆಸ್ ನಿರ್ದೇಶಕರ ಹೈಜಾಕ್ ಆರೋಪಕ್ಕೆ ಸಂಬಂಧಿಸಿದಂತೆ ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ ಎಂದು ವಿಜಯಪುರ ಕೆಎಂಎಫ್ ನಿರ್ದೇಶಕ ಶ್ರೀಶೈಲ್ ಪಾಟೀಲ್ ಸ್ಪಷ್ಟನೆ ನಿಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ನನ್ನ ವೈಯಕ್ತಿಕ ಕೆಲಸಗಳಿಗಾಗಿ ಓಡಾಡುತ್ತಿದ್ದೇನೆ. ನನ್ನ ಪತ್ನಿಯ ತವರು ಮನೆ ಕಲಬುರಗಿಯಲ್ಲಿದೆ. ಹೀಗಾಗಿ ನಾನು ಇಲ್ಲಿದ್ದೇನೆ ಎಂದು ಹೇಳುವ ಮೂಲಕ ಆರೋಪಕ್ಕೆ ತೆರೆ ಎಳೆದಿದ್ದಾರೆ.

    ಏನಿದು ಪ್ರಕರಣ?
    ಮೈತ್ರಿ ಧರ್ಮದ ಪ್ರಕಾರ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನ ಕಾಂಗ್ರೆಸ್‍ಗೆ ಬಿಟ್ಟು ಕೋಡೋದಾಗಿ ಭರವಸೆ ನೀಡಿದ್ದ ಜೆಡಿಎಸ್ ನಾಯಕರು ಇದೀಗ ಸರ್ಕಾರ ಬಿಳುತ್ತಿದ್ದಂತೆಯೇ ಉಲ್ಟಾ ಹೊಡೆದಿದ್ದಾರೆ. ಮಾಜಿ ಸಚಿವ ರೇವಣ್ಣ, ಮಂತ್ರಿಗಿರಿ ಹೋಯ್ತು, ಹೀಗಾಗಿ ಕೆಎಂಎಫ್ ಅಧ್ಯಕ್ಷ ಗಾದಿಯಾದ್ರೂ ಇರಲಿ ಎಂದು ಹಠಕ್ಕೆ ಬಿದಿದ್ದಾರೆ. ಹೀಗಾಗಿ ಕೆಎಂಎಫ್‍ನ ನಾಲ್ವರು ಕಾಂಗ್ರೆಸ್ ನಿರ್ದೇಶಕರನ್ನು ಹೈಜಾಕ್ ಮಾಡಿ ಹೈದಾರಾಬಾದ್‍ಗೆ ಶಿಫ್ಟ್ ಮಾಡಿದ್ದಾರೆಂದು ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಆರೋಪಿಸಿದ್ದರು.

    ಮಂಗಳೂರು ವಿಭಾಗದ ದಿವಾಕರ್ ಶೆಟ್ಟಿ, ಧಾರವಾಡದ ಹನುಮಂತ ಗೌಡ, ಹಿರೇಗೌಡ, ವಿಜಯಪುರ ಶ್ರೀಶೈಲಗೌಡ ಪಾಟೀಲ್, ಶಿವಮೊಗ್ಗದ ವೀರಭದ್ರ ಬಾಬುರನ್ನು ಹೈಜಾಕ್ ಮಾಡಿದ್ದಾರೆ. ಈ ವಿಚಾರ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೂ ಗುರಿಯಾಗಿದ್ದು, ಸಿದ್ದರಾಮಯ್ಯ ಎಂಟ್ರಿಯಾಗುವ ಸಾಧ್ಯತೆ ಇದೆ. ಕೆಎಂಎಫ್‍ನಲ್ಲಿ ಒಟ್ಟು 12 ಜನ ನಿರ್ದೇಶಕರಿದ್ದಾರೆ. ಅದರಲ್ಲಿ 3 ಜೆಡಿಎಸ್ ಮತ್ತು 9 ಕಾಂಗ್ರೆಸ್ ನಿರ್ದೇಶಕರು. ಹಾಗೆಯೇ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಅಮರನಾಥ ಜಾರಕಿಹೊಳಿ ಕೂಡ ಓರ್ವ ನಿರ್ದೇಶಕರಾಗಿದ್ದಾರೆ. ಇದೀಗ ಕಾಂಗ್ರೆಸ್‍ನ 4 ನಿರ್ದೇಶಕರನ್ನು ರೇವಣ್ಣ ತನ್ನೆಡೆಗೆ ಎಳೆದುಕೊಂಡಿದ್ದಾರೆ ಎಂದು ಹೇಳಲಾಗಿತ್ತು.

  • ತಡರಾತ್ರಿ ಮಾಜಿ ಗೆಳೆಯನ ಜೊತೆ ಕಾಣಿಸಿಕೊಂಡ ದೀಪಿಕಾ

    ತಡರಾತ್ರಿ ಮಾಜಿ ಗೆಳೆಯನ ಜೊತೆ ಕಾಣಿಸಿಕೊಂಡ ದೀಪಿಕಾ

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಕಳೆದ ರಾತ್ರಿ ತಮ್ಮ ಮಾಜಿ ಗೆಳೆಯ, ನಟ ರಣ್‍ಬೀರ್ ಕಪೂರ್ ಅವರ ಜೊತೆ ನಿರ್ದೇಶಕ ಲವ್ ರಂಜನ್ ಅವರ ಮನೆಯ ಹೊರಗೆ ಕಾಣಿಸಿಕೊಂಡಿದ್ದಾರೆ.

    ರಣ್‍ಬೀರ್ ಕಪೂರ್ ನಿರ್ದೇಶಕ ಲವ್ ರಂಜನ್ ಅವರ ಇನ್ನು ಹೆಸರಿಡದ ಚಿತ್ರದಲ್ಲಿ ನಟಿಸುವುದಾಗಿ ಕಳೆದ ವರ್ಷ ಹೇಳಿದ್ದರು. ಅಲ್ಲದೆ ಈ ಚಿತ್ರದಲ್ಲಿ ನಟ ಅಜಯ್ ದೇವಗನ್ ಅವರು ಕೂಡ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು.

    ಈಗ ದೀಪಿಕಾ ಪಡುಕೋಣೆ ನಿರ್ದೇಶಕ ಲವ್ ರಂಜನ್ ಮನೆಯಿಂದ ಹೊರ ಬರುವುದನ್ನು ಕಂಡು ಅವರು ರಣ್‍ಬೀರ್ ಜೊತೆ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಈ ಬಗ್ಗೆ ದೀಪಿಕಾ ಆಗಲಿ, ರಣ್‍ಬೀರ್ ಆಗಲಿ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

    ರಣ್‍ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಇದುವರೆಗೂ ಬಾಲಿವುಡ್‍ನಲ್ಲಿ ಬಚನಾ ಹೇ ಹಸಿನೋ, ಯೇ ಜವಾನಿ ಹೇ ದಿವಾನಿ ಹಾಗೂ ತಮಾಶಾ ಚಿತ್ರದಲ್ಲಿ ನಟಿಸಿದ್ದಾರೆ. ಈಗ ಈ ಚಿತ್ರ ಅಧಿಕೃತವಾದರೆ ಇದು ಅವರ ಕಾಂಬಿನೇಷನ್ ನಲ್ಲಿ ಮೂಡಿಬರುವ ನಾಲ್ಕನೇ ಚಿತ್ರ ಆಗಲಿದೆ.

    ದೀಪಿಕಾ ಈಗ ತಮ್ಮ ಪತಿ, ನಟ ರಣ್‍ವೀರ್ ಸಿಂಗ್ ಅವರ ಜೊತೆ ’83’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ರಣ್‍ಬೀರ್ ಕಪೂರ್ ಅವರು ನಟಿ ಅಲಿಯಾ ಭಟ್ ಜೊತೆ ‘ಬ್ರಹ್ಮಸ್ತ್ರಾ’ ಚಿತ್ರದ ಶೂಟಿಂಗ್‍ನಲ್ಲಿ ತೊಡಗಿಕೊಂಡಿದ್ದಾರೆ.

  • ಚಿತ್ರಕಥಾ: ಓದು ಅರ್ಧಕ್ಕೇ ಬಿಟ್ಟು ಕಲೆಯ ಕರೆಗೆ ಓಗೊಟ್ಟ ಯಶಸ್ವಿ!

    ಚಿತ್ರಕಥಾ: ಓದು ಅರ್ಧಕ್ಕೇ ಬಿಟ್ಟು ಕಲೆಯ ಕರೆಗೆ ಓಗೊಟ್ಟ ಯಶಸ್ವಿ!

    ಬೆಂಗಳೂರು: ಎಳವೆಯಿಂದಲೇ ಯಾವುದಾದರೊಂದು ಗುಂಗಿನ ಚುಂಗು ಹಿಡಿದು ಮುಂದುವರೆದವರೇ ನಾನಾ ಸಾಧನೆಯ ಹರಿಕಾರರಾಗಿದ್ದಾರೆ. ಕೆಲ ಮಂದಿ ಈ ಸಾಧನೆಯ ಹಾದಿಯಲ್ಲಿ ಮೈಲಿಗಲ್ಲುಗಳನ್ನಾದರೂ ನೆಟ್ಟು ನಿರಾಳವಾಗುತ್ತರೆ. ಇದೇ ರೀತಿ ಚಿತ್ರರಂಗದ ಕನಸು ಹೊತ್ತು ಚಿತ್ರಕಥಾ ಎಂಬ ಚಿತ್ರದ ಮೂಲಕ ಸಾಧನೆಯ ಹಾದಿಯಲ್ಲಿ ಮೊದಲ ಹೆಜ್ಜೆ ಎತ್ತಿಟ್ಟಿರುವವರು ನಿರ್ದೇಶಕ ಯಶಸ್ವಿ ಬಾಲಾದಿತ್ಯ. ಈಗಾಗಲೇ ಈ ಸಿನಿಮಾ ಬಗ್ಗೆ ಹೊತ್ತಿಕೊಂಡಿರೋ ಕ್ರೇಜ್ ಗಮನಿಸಿದರೆ ಅವರ ಚೊಚ್ಚಲ ಪ್ರಯತ್ನ ಯಶಸ್ವಿಯಾಗೋ ಲಕ್ಷಣಗಳೇ ಢಾಳಾಗಿವೆ.

    ಹೆಚ್ಚೂ ಕಡಿಮೆ ಹೈಸ್ಕೂಲು ದಿನಗಳಲ್ಲಿಯೇ ಯಶಸ್ವಿ ಬಾಲಾದಿತ್ಯ ಸಿನಿಮಾ ರಂಗದಲ್ಲಿ ಏನಾದರೊಂದು ಸಾಧಿಸಬೇಕೆಂಬ ಆಸೆ ಹೊಂದಿದ್ದವರು. ಪಿಯುಸಿ ವ್ಯಾಸಂಗ ಮಾಡುವ ಹೊತ್ತಿಗೆಲ್ಲ ಆ ಆಸೆ ತೀವ್ರವಾಗಿತ್ತು. ಇದರ ಸೆಳೆತಕ್ಕೆ ಸಿಕ್ಕು ಪಿಯುಸಿಗೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿಕೊಂಡು ಆನಿಮೇಷನ್ ಕೋರ್ಸಿಗೆ ಸೇರಿಕೊಂಡಿದ್ದವರು ಯಶಸ್ವಿ. ಹೀಗೆ ಆನಿಮೇಷನ್ ಕೋರ್ಸು ಮಾಡಿಕೊಂಡು ಆ ಮೂಲಕವೇ ತಂತ್ರಜ್ಞನಾಗಿ ಚಿತ್ರರಂಗ ಪ್ರವೇಶ ಮಾಡೋದು ಅವರ ಕನಸಾಗಿತ್ತು. ಆ ಕೋರ್ಸನ್ನು ಮುಗಿಸಿಕೊಂಡು ಎಣಿಕೆಯಂತೆಯೇ ಚಿತ್ರರಂಗದ ಭಾಗವಾದ ಅವರ ಪಾಲಿಗೆ ಅವಕಾಶಗಳು ವಿವಿಧ ರೂಪದಲ್ಲಿ ಬಾಗಿಲು ತೆರೆಯಲಾರಂಭಿಸಿದ್ದವು.

    ಹೀಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ತನ್ನ ಪ್ರಧಾನ ಗುರಿ ನಿರ್ದೇಶನವೇ ಎಂಬುದನ್ನು ಯಶಸ್ವಿ ಖಚಿತಪಡಿಸಿಕೊಂಡಿದ್ದರು. ಇದರ ಆರಂಭವೆಂಬಂತೆ 2009ರಲ್ಲಿ ಲಾಲಿ ಎಂಬ ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದ ಅವರಿಗೆ ಫಿಲಂ ಮೇಕಿಂಗ್‍ನತ್ತ ತೀವ್ರವಾದ ಆಸಕ್ತಿ ಮೊಳೆತುಕೊಂಡಿತ್ತು. ಬಳಿಕ ಸಿನಿಮಾ ರೂಪಿಸೋ ಪಟ್ಟುಗಳನ್ನು ಅರಿಯುವ ಉದ್ದೇಶದಿಂದಲೇ ರಣತಂತ್ರ ಎಂಬ ಚಿತ್ರದ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ನಿರ್ದೇಶಕನಾಗೋ ಕನಸಿಗೆ ಶುಭಾರಂಭ ದೊರೆತಿತ್ತು. ಆ ನಂತರ ಒಂದಷ್ಟು ಚಿತ್ರಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಎಲ್ಲವನ್ನೂ ಅರಿತುಕೊಂಡಿದ್ದರು.

    ಆ ಬಳಿಕ ಟಿವಿ ಆಡ್ ಮತ್ತು ಮ್ಯೂಸಿಕ್ ವೀಡಿಯೋ ರೂಪಿಸೋ ಕೆಲಸವನ್ನೂ ಮಾಡಲಾರಂಭಿಸಿದ ಯಶಸ್ವಿ ಬಾಲಾದಿತ್ಯರಿಗೆ ಈ ಅವಧಿಯಲ್ಲಿಯೇ ನಿರ್ಮಾಪಕರೊಬ್ಬರ ಪರಿಚಯವಾಗಿತ್ತು. ಅದರ ಫಲವಾಗಿಯೇ `ಈ’ ಎಂಬ ಚಿತ್ರದಲ್ಲಿ ಕೋ ಡೈರೆಕ್ಟರ್ ಆಗಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ ಆ ಚಿತ್ರ ಕಾರಣಾಂತರಗಳಿಂದ ಪೂರ್ಣಗೊಂಡಿರಲಿಲ್ಲ. ಈ ಚಿತ್ರದ ಮೂಲಕವೇ ಸುಜೀತ್ ರಾಥೋಡ್ ಅವರ ಪರಿಚಯವಾಗಿತ್ತು. ಈ ಚಿತ್ರ ಅರ್ಧಕ್ಕೇ ನಿಲ್ಲುತ್ತಲೇ ಮುಂದಿನ ಹಾದಿಯ ಬಗ್ಗೆ ಯೋಚಿಸಿದ ಯಶಸ್ವಿ ಸುಜಿತ್ ಅವರಿಗೆ ಚಿತ್ರಕಥಾದ ಕಥೆ ಹೇಳಿದ್ದರು. ಅದನ್ನವರು ಒಂದೇ ಗುಕ್ಕಿಗೆ ಒಪ್ಪಿಕೊಂಡಿದ್ದರು.

    ಹೀಗೆ ಹಲವಾರು ವರ್ಷಗಳ ಕಾಲ ನಾನಾ ಅಡೆತಡೆಗಳನ್ನು ದಾಟಿಕೊಂಡು ಬಂದಿರೋ ಯಶಸ್ವಿ ಇದೀಗ ಯಶಸ್ವಿಯಾಗಿಯೇ ಚಿತ್ರಕಥಾ ಚಿತ್ರವನ್ನು ರೂಪಿಸಿದ್ದಾರೆ. ಕನ್ನಡದ ಮಟ್ಟಿಗೆ ಅಪರೂಪದ ಕಥೆ ಹೊಂದಿರೋ ಚಿತ್ರಕಥಾ ಈಗಾಗಲೇ ದೊಡ್ಡ ಮಟ್ಟದಲ್ಲಿಯೇ ಕ್ರೇಜ್‍ಗೆ ಕಾರಣವಾಗಿದೆ. ಇದೇ ಹನ್ನೆರಡನೇ ತಾರೀಕಿನಂದು ಅಂದರೆ ಈ ವಾರವೇ ತೆರೆ ಕಾಣಲಿರೋ ಈ ಚಿತ್ರ ತನ್ನ ಮೊದಲ ಹೆಜ್ಜೆಗೆ ಹೊಸಾ ಶಕ್ತಿ ತುಂಬಲಿದೆ ಎಂಬ ಭರವಸೆ ಯಶಸ್ವಿ ಬಾಲಾದಿತ್ಯರದ್ದು.

  • ‘ರಾಬರ್ಟ್’ ಸಿನಿಮಾ ಸೆಟ್‍ನಲ್ಲಿ ಷರತ್ತುಗಳು ಅನ್ವಯ!

    ‘ರಾಬರ್ಟ್’ ಸಿನಿಮಾ ಸೆಟ್‍ನಲ್ಲಿ ಷರತ್ತುಗಳು ಅನ್ವಯ!

    ಬೆಂಗಳೂರು: ನಟ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾದ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಈ ಸಿನಿಮಾವನ್ನು ‘ಚೌಕ’ ಸಿನಿಮಾ ಖ್ಯಾತಿಯ ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದು, ಶೂಟಿಂಗ್ ಸೆಟ್ ನಲ್ಲಿ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.

    ಸಿನಿಮಾ ಸೆಟ್‍ನಲ್ಲಿ ಮೊಬೈಲ್ ಬಳಸಬಾರದು ಎಂಬ ಷರತ್ತು ಹಾಕಿದ್ದಾರೆ. ಚಿತ್ರೀಕರಣದಿಂದ ಸುಮಾರು 50 ಮೀಟರ್ ನಷ್ಟು ದೂರದವರೆಗೂ ಮೊಬೈಲ್ ಬಳಸಬಾರದು. ಈ ನಿಯಮವು ಕಲಾವಿದರು ಮತ್ತು ತಂತ್ರಜ್ಞರಿಗೆ ಇಬ್ಬರಿಗೂ ಅನ್ವಯಿಸುತ್ತದೆ ಎಂದು ನಿರ್ದೇಶಕರು ಕಟ್ಟುನಿಟ್ಟಿನ ಆದೇಶವನ್ನು ಜಾರಿ ಮಾಡಿದ್ದಾರೆ.

    ಸೆಟ್‍ನಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿದರೆ ಕಲಾವಿದರು, ತಂತ್ರಜ್ಞರು ಎಲ್ಲರು ಸಿನಿಮಾ ಕಡೆ ಗಮನಹರಿಸುತ್ತಾರೆ. ಜೊತೆ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದು ನಿರ್ದೇಶಕರ ಆಶಯವಾಗಿದೆ. ಇನ್ನೊಂದು ಅನಗತ್ಯ ಫೋಟೋಗಳು ಅಥವಾ ವಿಡಿಯೋಗಳನ್ನು ಸೆರೆಹಿಡಿಯಬಾರದು. ಜೊತೆಗೆ ಅದನ್ನು ಪಬ್ಲಿಕ್ ಮಾಡಬಾರದು. ಈ ಮೂಲಕ ನಮ್ಮ ಶೂಟಿಂಗ್ ಸೆಟ್ ಅನ್ನು ವೃತ್ತಿಪರವಾದ ಸೆಟ್ ಆಗಿ ಮಾಡುವ ಉದ್ದೇಶದಿಂದ ಈ ಷರತ್ತು ವಿಧಿಸಲಾಗಿದೆ ಎಂದು ಹೇಳಿದ್ದಾರೆ.

    ಶೂಟಿಂಗ್ ಸೆಟ್‍ಗೆ ಅಭಿಮಾನಿಗಳು ಬರಬಹುದು. ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಬಹುದು ಮತ್ತು ಚಿತ್ರೀಕರಣವನ್ನು ವೀಕ್ಷಿಸಬಹುದು. ಆದರೆ ಯಾವುದೇ ರೀತಿಯ ಫೋಟೋಗಳನ್ನು ತೆಗೆಯಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಸುಧೀರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ತಯಾರಕರು ಈ ನಿಯಯದ ಒಪ್ಪಂದಕ್ಕೆ ತಂತ್ರಜ್ಞರೊಂದಿಗೆ ಸಹಿ ಮಾಡಿಸಿಕೊಂಡಿದ್ದಾರೆ. ಜೊತೆಗೆ ಚಿತ್ರೀಕರಣದ ಸಮಯದಲ್ಲಿ ಯಾವುದೇ ರೀತಿಯ ವಿಷಯವನ್ನು ಲೀಕ್ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.