Tag: director

  • ನಟ ಜೈ ಜಗದೀಶ್ ವಿರುದ್ಧ ಎಫ್‍ಐಆರ್

    ನಟ ಜೈ ಜಗದೀಶ್ ವಿರುದ್ಧ ಎಫ್‍ಐಆರ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ನಟ, ನಿರ್ಮಾಪಕ ಜೈ ಜಗದೀಶ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಮತ್ತು ಚಲನಚಿತ್ರ ಕಾರ್ಮಿಕರ, ಕಲಾವಿದರ ಒಕ್ಕೂಟದ ಗೌರವಾಧ್ಯಕ್ಷ ಸಾ.ರಾ.ಗೋವಿಂದು ಅವರು ನಿಂದನೆ ಆರೋಪದ ಅಡಿ ಜೈ ಜಗದೀಶ್ ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಏನಿದು ಪ್ರಕರಣ?:
    ಹೆಮ್ಮಾರಿ ಕೊರೊನಾದಿಂದಾಗಿ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಭಾರತದಲ್ಲಿ ಲಾಕ್‍ಡೌನ್‍ನಿಂದಾಗಿ ಸಿನಿಮಾ, ಕಿರುತೆರೆ ಶೂಟಿಂಗ್ ಸೇರಿದಂತೆ ಚಿತ್ರೋದ್ಯಮದ ಚಟುವಟಿಕೆಗಳು ಸ್ತಬ್ದವಾಗಿವೆ. ಹೀಗಾಗಿ ನೂರಾರು ಕಲಾವಿದರು, ತಂತ್ರಜ್ಞರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಂತಹವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಾಗಿತ್ತು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾತೃ ಸಂಸ್ಥೆಯಾಗಿದ್ದು ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕ ಮೂರು ವಲಯಗಳು ಇದರಲ್ಲಿ ಒಗ್ಗೂಡಿವೆ. ಸಂಕಷ್ಟದಲ್ಲಿರುವ ಕಲಾವಿದರು, ತಂತ್ರಜ್ಞರಿಗೆ ಆಹಾರದ ಕಿಟ್ ವಿತರಿಸಲು ನಿರ್ಮಾಪಕ ಸಾ.ರಾ. ಗೋವಿಂದು, ವಾಣಿಜ್ಯ ಮಂಡಳಿಯ ಸದಸ್ಯ ಕೆ.ಎಂ. ವೀರೇಶ್ ನೇತೃತ್ವದಲ್ಲಿ ಸರ್ಕಾರದೊಂದಿಗೆ ಮಾತನಾಡಿ ಸಹಾಯಕ್ಕೆ ನಿಂತಿದ್ದರು.

    ಈ ವಿಚಾರವಾಗಿ ನಟ ನಿರ್ಮಾಪಕ ಜೈ ಜಗದೀಶ್ ಕೋಪಗೊಂಡಿದ್ದರು. “ನಿರ್ಮಾಪಕರು ಅನ್ನದಾತರು, ಸಾವಿರಾರು ಜನಕ್ಕೆ ಅನ್ನವನ್ನು ನೀಡಿದ್ದಾರೆ. ನಮಗೆ ಆಹಾರದ ಕಿಟ್ ನೀಡಿ ಅವಮಾನ ಮಾಡಬೇಡಿ” ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಸಾ.ರಾ.ಗೋವಿಂದು ಹಾಗೂ ಕೆ.ಎಂ.ವೀರೇಶ್ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿ ಬೈದಿದ್ದಾರೆ. ಅವರು ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿತ್ತು.

    ಇದರಿಂದಾಗಿ ಅಸಮಾಧಾನಗೊಂಡ ಸಾ.ರಾ.ಗೋವಿಂದು ಅವರು, ಜೈ ಜಗದೀಶ್ ಅವರು ಉದ್ದೇಶ ಪೂರ್ವಕವಾಗಿ ನನ್ನ ಬಗ್ಗೆ ತಮ್ಮ ವಾಟ್ಸಪ್ ಮೂಲಕ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಜೊತೆಗೆ ತೀರಾ ಕೆಳಮಟ್ಟದಲ್ಲಿ ಬಾಯಿಗೆ ಬಂದಂತೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ನನ್ನ ವಿರುದ್ಧ, ಸ್ನೇಹಿತರ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಬಗ್ಗೆ ಆರೋಪ ಮಾಡಿರುವ ಜೈ ಜಗದೀಶ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಮನವಿ ಮಾಡಿಕೊಂಡಿದ್ದರು.

  • ನನ್ನಲ್ಲಿದ್ದ ನಿರ್ದೇಶಕನನ್ನು ಬಡಿದೆಬ್ಬಿಸಿದ್ದವರು ಉಪ್ಪಿ: ಸಂತೋಷ್ ಅನಂದ್‍ರಾಮ್

    ನನ್ನಲ್ಲಿದ್ದ ನಿರ್ದೇಶಕನನ್ನು ಬಡಿದೆಬ್ಬಿಸಿದ್ದವರು ಉಪ್ಪಿ: ಸಂತೋಷ್ ಅನಂದ್‍ರಾಮ್

    ಬೆಂಗಳೂರು: ನನ್ನಲ್ಲಿದ್ದ ನಿರ್ದೇಶಕನನ್ನು ಬಡಿದೆಬ್ಬಿಸಿದವರು ರಿಯಲ್ ಸ್ಟಾರ್ ಉಪೇಂದ್ರ ಅವರು ಎಂದು ನಿರ್ದೇಶಕ ಸಂತೋಷ್ ಅನಂದ್‍ರಾಮ್ ಅವರು ಹೇಳಿದ್ದಾರೆ.

    ಇಂದು ನಿರ್ದೇಶಕರ ದಿನವಿದ್ದು, ಈ ದಿನದ ಸಲುವಾಗಿ ತನ್ನ ನೆಚ್ಚಿನ ನಿರ್ದೇಶಕನಿಗೆ ಶುಭಾಶಯಗಳನ್ನು ಕೋರಿದ್ದಾರೆ. ರಾಜಕುಮಾರನಂತಹ ಬ್ಲಾಕ್ ಬಸ್ಟರ್ ಸಿನಿಮಾ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿರುವ ಸಂತೋಷ್ ಅನಂದ್‍ರಾಮ್ ಅವರು, ಉಪೇಂದ್ರ ಅವರು ನನ್ನ ನೆಚ್ಚಿನ ನಿರ್ದೇಶಕ ಎಂದು ಟ್ವೀಟ್ ಮಾಡಿದ್ದಾರೆ.

    ಈ ಸಲುವಾಗಿ ಉಪ್ಪಿಯವರ ಫೋಟೋವನ್ನು ಟ್ವೀಟ್ ಮಾಡಿರುವ ಸಂತೋಷ್ ಅನಂದ್‍ರಾಮ್, ನನ್ನಲ್ಲಿದ್ದ ನಿರ್ದೇಶಕನನ್ನು ಬಡಿದೆಬ್ಬಿಸಿದ ನಿರ್ದೇಶಕರ ನಿರ್ದೇಶಕನಿಗೆ ನಿರ್ದೇಶಕರ ದಿನದ ಶುಭಾಶಯಗಳು “ಉಪ್ಪಿಗಿಂತ ರುಚಿ ಬೇರೆ ಇಲ್ಲ, ಒಪ್ಪಿಕೊಂಡೋರು ದಡ್ಡರಲ್ಲ”, ಎಲ್ಲ ನನ್ನ ಕನ್ನಡದ ನಿರ್ದೇಶಕರಿಗೆ ನಿರ್ದೇಶಕ ದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

    ತನ್ನ ವಿಭಿನ್ನ ರೀತಿಯ ನಿರ್ದೇಶನದಿಂದ ಜನಮೆಚ್ಚುಗೆ ಪಾತ್ರರಾಗಿದ್ದ ಉಪೇಂದ್ರ ಅವರು, ಓಂ, ಉಪೇಂದ್ರ, ಎ ಸಿನಿಮಾಗಳಂತಹ ವಿಭಿನ್ನ ಸಿನಿಮಾ ಮಾಡಿ ಯುವ ನಿರ್ದೇಶಕರಿಗೆ ಸ್ಫೂರ್ತಿಯಾಗಿದ್ದರು. ಅವರು ಕೊನೆಯದಾಗಿ 2015ರಲ್ಲಿ ಉಪ್ಪಿ-2 ಸಿನಿಮಾ ನಿರ್ದೇಶನ ಮಾಡಿದ್ದರು. ಈಗ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಸಂತೋಷ್ ಅನಂದ್‍ರಾಮ್ ಕೂಡ ಉಪ್ಪಿ ನಮಗೆ ಸ್ಫೂರ್ತಿ ಎಂದು ಹೇಳಿದ್ದಾರೆ. ಈ ಟ್ವೀಟ್‍ಗೆ ಉಪ್ಪಿ ಕೂಡ ರೀಪ್ಲೇ ಮಾಡಿದ್ದಾರೆ.

    ಸಂತೋಷ್ ಅನಂದ್‍ರಾಮ್ ಅವರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ರಾಜಕುಮಾರ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಗಜಕೇಸರಿಯಂತಹ ಸಿನಿಮಾ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರ ನಿರ್ದೇಶನ ರಾಜಕುಮಾರ ಮತ್ತು ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಚಿತ್ರಗಳು ಸೂಪರ್ ಹಿಟ್ ಆಗಿ ದಾಖಲೆ ಬರೆದಿವೆ.

    ಈಗ ಸದ್ಯ ಸಂತೋಷ್ ಅನಂದ್‍ರಾಮ್ ಅವರು ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಸ್ವಲ್ಪ ಕೆಲಸ ಮಾತ್ರ ಬಾಕಿ ಇತ್ತು. ಆದರೆ ಕೊರೊನಾ ಲಾಕ್‍ಡೌನ್ ಇರುವುದರಿಂದ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಈ ಸಿನಿಮಾದಲ್ಲಿ ಅಪ್ಪು ಸಿನಿಮಾ ಬಳಿಕ ಪುನೀತ್ ಅವರು ಕಾಲೇಜು ಯುವಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  • ಟಾಮ್ ಆಂಡ್ ಜೆರ್ರಿ ಸೃಷ್ಟಿಕರ್ತನ ಅಚ್ಚರಿಯ ಕಹಾನಿ!

    ಟಾಮ್ ಆಂಡ್ ಜೆರ್ರಿ ಸೃಷ್ಟಿಕರ್ತನ ಅಚ್ಚರಿಯ ಕಹಾನಿ!

    ಟಾಮ್ ಆಂಡ್ ಜೆರ್ರಿ ಅಂತೊಂದು ಹೆಸರು ಕೇಳಿದಾಕ್ಷಣವೇ ತುಟಿಯಂಚಿಗೆ ಮಂದಹಾಸ ತಂದುಕೊಂಡು ಕಣ್ಣರಳಿಸುವ ದೊಡ್ಡ ದಂಡೇ ವಿಶ್ವಾದ್ಯಂತ ತುಂಬಿಕೊಂಡಿದೆ. ಅದಾಗತಾನೇ ಕಣ್ಣು ತೆರೆದ ಎಳೆ ಮಕ್ಕಳಿಂದ ಹಿಡಿದು ಹಣ್ಣಣ್ಣು ಮುದುಕರವರೆಗೂ ಟಾಮ್ ಆಂಡ್ ಜೆರ್ರಿಯ ಕಣ್ಣಾಮುಚ್ಚಾಲೆಯಾಟದ ಆನಿಮೇಟೆಡ್ ಕಾಮಿಡಿ ಎಪಿಸೋಡುಗಳು ಮುದ ನೀಡುತ್ತವೆ. ದೇಶ ಭಾಷೆಗಳ ಗಡಿಯ ಹಂಗಿಲ್ಲದೆ ಎಲ್ಲರನ್ನೂ ಆವರಿಸಿಕೊಂಡ ಟಾಮ್ ಆಂಡ್ ಜೆರ್ರಿಯ ನಿರ್ದೇಶಕರಲ್ಲೊಬ್ಬರಾಗಿದ್ದವರು ಜೆನಿ ಡಿಚ್. ಎಲ್ಲರ ಮನಸುಗಳಿಗೂ ಮುದ ನೀಡುವಂಥ ಈ ಸೀರೀಸ್ ಮೂಲಕ ವಿಶ್ವ ವಿಖ್ಯಾತಿ ಗಳಿಸಿಕೊಂಡಿದ್ದ ಜೆನಿ ಡಿಚ್ ಭರ್ತಿ ತೊಂಬತೈದು ವಸಂತಗಳ ತುಂಬು ಜೀವನ ನಡೆಸಿ ನಿರ್ಗಮಿಸಿದ್ದಾರೆ.

    ಟಾಮ್ ಆಂಡ್ ಜೆರ್ರಿ ಅಮೆರಿಕದ ಯಶಸ್ವಿ ಆನಿಮೇಷನ್ ಸೀರೀಸ್. 1940ರ ದಶಕದಿಂದ ಆರಂಭವಾಗಿದ್ದ ಇದು ಅದ್ಯಾವ ಥರದಲ್ಲಿ ಖ್ಯಾತಿ ಗಳಿಸಿಕೊಂಡಿತ್ತೆಂದರೆ ಅತ್ಯಂತ ಕಡಿಮೆ ಕಾಲಾವಧಿಯಲ್ಲಿಯೇ ವಿಶ್ವಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಮಕ್ಕಳನ್ನು ಮುದಗೊಳಿಸುತ್ತಾ ಮನೆ ತುಂಬಾ ಈ ಸೀರೀಸ್‍ನ ಹವಾ ಹಬ್ಬಿಕೊಳ್ಳಲಾರಂಭಿಸಿತ್ತು. ಇದನ್ನು 1940ರಿಂದ 1967ರವರೆಗೆ ಎಂಟು ಮಂದಿ ನಿರ್ದೇಶಕರು ನಿರ್ದೇಶನ ಮಾಡಿದ್ದರು. ಇದೀಗ ನಿಧನರಾಗಿರುವ ಜೆನಿ ಡಿಚ್ ಅದರಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದಾರೆ.

    1961ರಿಂದ 62ರವರೆಗೆ ಸರಿಸುಮಾರು ಹದಿಮೂರು ಟಾಮ್ ಆಂಡ್ ಜೆರ್ರಿ ಎಪಿಸೋಡುಗಳನ್ನು ಜೆನಿ ಡಿಚ್ ನಿರ್ದೇಶನ ಮಾಡಿದ್ದರು. ಅಷ್ಟೂ ಎಪಿಸೋಡುಗಳು ಬೇರೆಲ್ಲವನ್ನು ಮೀರಿಸಿ ಖ್ಯಾತಿ ಗಳಿಸಿ ಈಗಲೂ ಮಾಸದಂತೆ ಉಳಿದುಕೊಂಡಿವೆ. ಒಂದು ಬಲಾಢ್ಯ ಬೆಕ್ಕಿನೊಂದಿಗೆ ಕಣ್ಣಾಮುಚ್ಚಾಲೆಯಾಡಿ, ಥರ ಥರದಲ್ಲಿ ಕ್ವಾಟಲೆ ಕೊಡುತ್ತಲೇ ಪುಟ್ಟ ಇಲಿಯೊಂದು ಹೇಗೆ ತಪ್ಪಿಸಿಕೊಳ್ಳುತ್ತದೆಂಬುದನ್ನು ನಾನಾ ಥರದಲ್ಲಿ ಪ್ರಚುರಪಡಿಸೋ ಟಾಮ್ ಆಂಡ್ ಜೆರ್ರಿ ಸೀರೀಸ್‍ಗೆ ಡೆನಿ ಡಿಚ್ ಅವರ ನಿರ್ದೇಶನ ಮತ್ತಷ್ಟು ಖ್ಯಾತಿ ತಂದು ಕೊಟ್ಟಿತ್ತು. ಕಾಮಿಕ್ ಆರ್ಟಿಸ್ಟ್ ಆಗಿ ಹಲವಾರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ಸ್ಟಾರ್ ಅನ್ನಿಸಿಕೊಂಡಿದ್ದ ಜೆನಿ ಡಿಚ್ ಈ ಸೀರೀಸ್ ಮೂಲಕ ಆನಿಮೇಟರ್ ಆಗಿ, ನಿರ್ದೇಶಕರಾಗಿಯೂ ವಿಶ್ವಾದ್ಯಂತ ಹೆಸರು ಮಾಡಿದ್ದರು.

    ಬಹುಶಃ ಟಾಮ್ ಆಂಡ್ ಜೆರ್ರಿ ಆಟವನ್ನು ಕಣ್ತುಂಬಿಕೊಂಡು ಖುಷಿಗೊಳ್ಳುವ ಬಹುಪಾಲು ಜನರಿಗೆ ಅದರ ಸೃಷ್ಟಿಯ ಹಿಂದಿರುವ ಡೆನಿ ಡಿಚ್‍ರಂಥಾ ನಿರ್ದೇಶಕರ ಬಗ್ಗೆ ಗೊತ್ತಿರಲಿಕ್ಕಿಲ್ಲ. ಆದರೆ ಒಂದು ಸುದೀರ್ಘ ಹಾದಿಯಲ್ಲಿ ಪಾದ ಸವೆಸದೇ ಹೋದರೆ ಇಂಥಾ ಸಾರ್ವಕಾಲಿಕ ಅದ್ಭುತಗಳು ಸೃಷ್ಟಿಯಾಗಲು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ನೋಡ ಹೋದರೆ, ಜೆನಿ ಡಿಚ್ ಅವರ ಕಲೆಯ ಹಾದಿ ಕೂಡಾ ಕುತೂಹಲಕರವಾಗಿದೆ. ಅಂದಹಾಗೆ ಅವರು 1924ರಲ್ಲಿ ಚಿಕಾಗೋದ ಸಾಮಾನ್ಯ ಕುಟುಂಬವೊಂದರ ಕೂಸಾಗಿ ಕಣ್ತೆರೆದಿದ್ದರು. ಡಿಚ್ ಐದು ವರ್ಷದ ಮಗುವಾಗಿದ್ದಾಗಲೇ ಅವರ ಇಡೀ ಕುಟುಂಬ ಕ್ಯಾಲಿಫೋರ್ನಿಯಾಗೆ ಸ್ಥಳಾಂತರಗೊಂಡಿತ್ತು. ಆದ ಕಾರಣ ಅವರ ವಿದ್ಯಾಭ್ಯಾಸವೂ ಅಲ್ಲಿಯೇ ಮುಂದುವರೆದಿತ್ತು.

    ಹಾಗೆ ಬೆಳೆದ ಜೆನಿ ಡಿಚ್‍ಗೆ ಬಾಲ್ಯದಿಂದಲೇ ಬಣ್ಣಗಳತ್ತ ಬಣ್ಣಿಸಲಾಗದಂಥಾ ಬೆರಗು ಮೂಡಿಕೊಂಡಿತ್ತು. ಕುಂಚದಲ್ಲಿಯೇ ಖುಷಿ ಕಾಣಲಾರಂಭಿಸಿದ್ದ ಅವರು ಅದೇ ಆಸಕ್ತಿಯನ್ನು ಮನದಲ್ಲಿಟ್ಟುಕೊಂಡೇ 1942ರ ಸುಮಾರಿಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿಕೊಂಡಿದ್ದರು. ಆ ಹೊತ್ತಿನಲ್ಲಿ ಅಮೆರಿಕನ್ ಆವಿಗೇಷನ್‍ನಲ್ಲಿ ವಿಮಾನಗಳ ನೀಲನಕ್ಷೆ ಸಿದ್ಧಪಡಿಸುವ ಕೆಲಸವೂ ಸಿಕ್ಕಿತ್ತು. ಅದು ಅವರ ಆಸಕ್ತಿಗೆ ತಕ್ಕುದಾಗಿ ಒಲಿದಿದ್ದ ಮಹಾ ಅವಕಾಶ. ಅದನ್ನು ಸದುಪಯೋಗಪಡಿಸಿಕೊಂಡ ಡೆನಿ ಡಿಚ್ ನಂತರ ಅಮೆರಿಕಾದ ಪ್ರಖ್ಯಾರ ಜಝ್ ಮ್ಯಾಗಜೈನಿನಲ್ಲಿ ಕಾಮಿಕ್ ಆರ್ಟಿಸ್ಟ್ ಆಗಿ ಕೆಲಸ ಗಿಟ್ಟಿಸಿಕೊಂಡಿದ್ದರು. ಆ ಹಂತದಲ್ಲಿ ಅದರ ದಾಖಲಾರ್ಹ ಕವರ್‍ಗಳಲ್ಲಿ ಅವರದ್ದೇ ಕಲೆ ನಾಟ್ಯವಾಡಿತ್ತು. ಅದರಿಂದಲೇ ಭಾರೀ ಜನಪ್ರಿಯತೆಯೂ ಸಿಕ್ಕಿತ್ತು. ಆ ಪತ್ರಿಕೆ ಅದ್ಯಾವ ಪಾಟಿ ಜನಪ್ರಿಯಗೊಂಡಿತ್ತೆಂದರೆ, ಹಾಲಿವುಡ್ ಮಟ್ಟದಲ್ಲಿಯೂ ಅದಕ್ಕೆ ಅಭಿಮಾನಿಗಳಿದ್ದರು.

    ಡಿಚ್ ಅವರ ಕಲೆ ಅದೆಷ್ಟು ಪ್ರಭಾವಶಾಲಿಯಾಗಿತ್ತೆಂದರೆ ಅದರತ್ತ ಆ ಕಾಲಕ್ಕೆ ಹಾಲಿವುಡ್ ನಿರ್ದೇಶಕರುಗಳ ಕಣ್ಣು ಬಿದ್ದಿತ್ತು. ಅದರ ಫಲವಾಗಿಯೇ ಅವರು 1940ರ ಹೊತ್ತಿಗೆಲ್ಲ ಯುನೈಟೈಡ್ ಪ್ರೊಡಕ್ಷನ್ಸ್ ಆಫ್ ಅಮೆರಿಕಾ ಸಂಸ್ಥೆ ಸೇರಿಕೊಂಡಿದ್ದರು. ಅಲ್ಲಿಂದಾಚೆಗೆ ಆನಿಮೇಷನ್‍ನತ್ತ ಆಸಕ್ತಿ ಕೇಂದ್ರೀಕರಿಸಿಕೊಂಡ ಡಿಚ್ ಅಲ್ಲಿಯೇ ಒಂದಷ್ಟು ಕಾಲ ಕಾರ್ಯ ನಿರ್ವಹಿಸಿದ್ದರು. ನಂತರ 1961ರಲ್ಲಿ ಹನ್ನಾ ಬರ್ಬೇರಾ ರಚನೆಯ ಟಾಮ್ ಆಂಡ್ ಜೆರ್ರಿ ಸೀರೀಸ್‍ನ ಎಪಿಸೋಡ್‍ಗಳನ್ನು ನಿರ್ದೇಶಿಸುವ ಜವಾಬ್ದಾರಿಯೂ ಅವರನ್ನು ಅರಸಿ ಬಂದಿತ್ತು. ಅದು ಅವರ ವೃತ್ತಿ ಬದುಕಿನ ಮಹತ್ತರ ಘಟ್ಟ. ಅದಾಗಲೇ ಪ್ರಸಿದ್ಧಿ ಪಡೆದಿದ್ದ ಆ ಸೀರೀಸ್ ಅನ್ನು ಹದಿಮೂರು ಎಪಿಸೋಡುಗಳಲ್ಲಿಯೇ ಮತ್ತಷ್ಟು ಉತ್ತುಂಗಕ್ಕೇರಿಸಿದ ಕೀರ್ತಿ ಜೆನಿ ಡಿಚ್ ಹೆಸರಿಗೆ ಶಾಶ್ವತವಾಗಿ ಅಂಟಿಕೊಂಡಿದೆ.

    ಹಾಗೆ ಟಾಮ್ ಆಂಡ್ ಜೆರ್ರಿ ಮೂಲಕ ಖ್ಯಾತಿಯ ಉತ್ತುಂಗಕ್ಕೇರಿದ್ದ ಡಿಚ್, ಆ ನಂತರದಲ್ಲಿಯೂ ಕಲೆಯ ಸಂಗದಲ್ಲಿಯೇ ಲವಲವಿಕೆಯಿಂದ ಮುಂದುವರೆಯುತ್ತಾ ಬಂದಿದ್ದರು. ವಯಸ್ಸು ಸಂಧ್ಯಾ ಕಾಲವನ್ನು ಸಂಧಿಸಿದ್ದರೂ ಸದಾ ಹೊಸಾ ಸೃಷ್ಟಿಯತ್ತ ಗಮನ ನೆಟ್ಟಿದ್ದ ಅವರು ಕಡೆಯವರೆಗೂ ಕ್ರಿಯಾಶೀಲರಾಗಿಯೇ ಗುರುತಿಸಿಕೊಂಡಿದ್ದರು. ನಿರ್ದೇಶಕನಾಗಿ ಆಸ್ಕರ್ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ಜೆನಿ ಡಿಚ್ ಓರ್ವ ಅಪ್ರತಿಮ ಕಲೆಗಾರ. ಸೀಮಿತ ತಂತ್ರಜ್ಞಾನದಲ್ಲಿಯೇ ಮಹತ್ತರವಾದ ಸೃಷ್ಟಿಗಳನ್ನು ಮಾಡಿದ ಪ್ರತಿಭಾವಂತ. ಇದೀಗ ಆ ಇತಿಹಾಸವನ್ನು ಸಂಪನ್ನವಾಗುಳಿಸಿ ಅವರು ನಿರ್ಗಮಿಸಿದ್ದಾರೆ. ಆದರೆ ಅವರ ಕೈಚಳಕದಲ್ಲಿ ಮೂಡಿ ಬಂದಿರೋ ಟಾಮ್ ಆಂಡ್ ಜೆರ್ರಿ ಮಾತ್ರ ತಲೆಮಾರುಗಳಾಚೆಗೂ ಜನರನ್ನು ಆವರಿಸಿಕೊಳ್ಳುತ್ತಲೇ ಇರುತ್ತದೆ.

  • ಯಾರಿಗೂ ತಮ್ಮ ಸಂಬಂಧವನ್ನು ಮುಚ್ಚಿಡಲು ಸಾಧ್ಯವಿಲ್ಲ: ಅನುಷ್ಕಾ ಶೆಟ್ಟಿ

    ಯಾರಿಗೂ ತಮ್ಮ ಸಂಬಂಧವನ್ನು ಮುಚ್ಚಿಡಲು ಸಾಧ್ಯವಿಲ್ಲ: ಅನುಷ್ಕಾ ಶೆಟ್ಟಿ

    ಹೈದರಾಬಾದ್: ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ ಅವರು ಡಿವೋರ್ಸ್ ಆಗಿರುವ ನಿರ್ದೇಶನ ಜೊತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಇದೀಗ ಅನುಷ್ಕಾ ಈ ಗಾಸಿಪ್‍ಗಳಿಗೆ ಸ್ಪಷ್ಟನೆ ನೀಡಿದ್ದಾರೆ.

    ಅನುಷ್ಕಾ ತಮ್ಮ ಮುಂಬರುವ ‘ನಿಶ್ಯಬ್ದಂ’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿರುವ ಅನುಷ್ಕಾ ಅವರನ್ನು ಮಾಧ್ಯಮದವರು ಮದುವೆ ಬಗ್ಗೆ ಪ್ರಶ್ನಿಸಿದರು. ಮಾಧ್ಯಮದವರು ಪ್ರಶ್ನೆ ಕೇಳುತ್ತಿದ್ದಂತೆ ಅನುಷ್ಕಾ ಗರಂ ಆಗಿಯೇ ಪ್ರತಿಕ್ರಿಯಿಸಿದ್ದಾರೆ.

    ಮದುವೆ ಬಗ್ಗೆ ಪ್ರತಿಕ್ರಿಯಿಸಿದ ಅನುಷ್ಕಾ, ಒಬ್ಬರು ಈ ರೀತಿಯ ಸುದ್ದಿಗಳನ್ನು ಹೇಗೆ ಬರೆಯುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಒಬ್ಬರ ಬಗ್ಗೆ ಸುಳ್ಳು ಸುದ್ದಿ ಬರೆಯುವುದರಿಂದ ಅವರ ಕುಟುಂಬಕ್ಕೆ ತೊಂದರೆ ಆಗುತ್ತದೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಈ ಸುದ್ದಿ ಶುದ್ಧ ಸುಳ್ಳು. ಈ ಗಾಸಿಪ್‍ಗಳಿಗೆ ನಾನು ತಲೆ ಕಡೆಸಿಕೊಳ್ಳುವುದಿಲ್ಲ. ಆದರೆ ನನ್ನ ಮದುವೆ ಬಗ್ಗೆ ಬೇರೆಯವರಿಗೆ ಯಾಕೆ ಇಷ್ಟು ಚಿಂತೆ ಎಂಬುದು ಗೊತ್ತಾಗುತ್ತಿಲ್ಲ. ಯಾರಿಗೂ ತಮ್ಮ ಸಂಬಂಧವನ್ನು ಮುಚ್ಚಿಡಲು ಸಾಧ್ಯವಿಲ್ಲ. ಹೀಗಿರುವಾಗ ನಾನು ನನ್ನ ಮದುವೆ ಬಗ್ಗೆ ಹೇಗೆ ಸೀಕ್ರೆಟ್ ಮಾಡಲಿ. ಇದು ತುಂಬಾ ಸೂಕ್ಷ್ಮವಾದ ವಿಚಾರ ಎಂದರು.

    ಇದು ನನ್ನ ವೈಯಕ್ತಿಕ ಜೀವನ. ನನ್ನ ವೈಯಕ್ತಿಕ ಜೀವನದ ಬಗ್ಗೆ ಯಾರಾದರೂ ಮಾತನಾಡಿದರೆ ಅದು ನನಗೆ ಇಷ್ಟವಾಗುವುದಿಲ್ಲ. ಮದುವೆ ಎಂಬುದು ಒಂದು ಪವಿತ್ರವಾದ ಬಂಧ. ಬೇರೆಯವರಿಗೆ ಅದು ಹೇಗೆ ಮಹತ್ವವಾಗಿರುತ್ತೋ ಹಾಗೆಯೇ ನನಗೂ ಕೂಡ ಮಹತ್ವವಾಗಿರುತ್ತೆ. ನಾನು ಮದುವೆಯಾದಾಗ ಆಗ ಎಲ್ಲರಿಗೂ ತಿಳಿಯುತ್ತೆ. ನನಗೆ ಖುಷಿಯಾಗುವ ವಿಷಯವನ್ನು ಸಿಕ್ರೇಟ್ ಮಾಡಲು ಇಷ್ಟಪಡುವುದಿಲ್ಲ. ನಾನು ಯಾರನ್ನು ಮದುವೆಯಾಗುತ್ತಿದ್ದೇನೆ ಎಂದು ಎಲ್ಲರ ಮುಂದೆ ಹೇಳುವುದಿಲ್ಲ. ಆದರೆ ಈ ಬಗ್ಗೆ ಜನರು ನನ್ನನ್ನು ಪ್ರಶ್ನಿಸಬಹುದು. ನಾನು ಅವರಿಗೆ ಉತ್ತರ ನೀಡಲು ಯಾವಾಗಲೂ ತಯಾರಾಗಿರುತ್ತೇನೆ ಎಂದು ಅನುಷ್ಕಾ ತಿಳಿಸಿದರು.

    ಸದ್ಯಕ್ಕೆ ಅನುಷ್ಕಾ `ನಿಶ್ಯಬ್ದಂ’ ಸಿನಿಮಾದಲ್ಲಿ ಅಭಿನಯಿಸಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಸುಮಾರು 30 ಕೋಟಿ ಬಜೆಟ್‍ನಲ್ಲಿ ತಯಾರಾಗುತ್ತಿದ್ದು, ಮಾಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. `ನಿಶ್ಯಬ್ದಂ’ ಸಿನಿಮಾದ ಮೂಲಕ 13 ವರ್ಷಗಳ ನಂತರ ಮಾಧವನ್ ಮತ್ತು ಅನುಷ್ಕಾ ಶೆಟ್ಟಿ ಜೋಡಿ ತೆರೆಯ ಮೇಲೆ ಕಾಣಿಸುತ್ತಿರುವುದು ವಿಶೇಷವಾಗಿದೆ. ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಶಾಲಿನಿ ಪಾಂಡೆ, ಸುಬ್ಬರಾಜು, ಮತ್ತು ಶ್ರೀನಿವಾಸ ಅವಸರಲಾ ತಾರಾಬಳಗವೇ ಸಿನಿಮಾದಲ್ಲಿದೆ.

  • ಲೆಜೆಂಡರಿ ನಿರ್ದೇಶಕನ ಮಗನ ಜೊತೆ ಅನುಷ್ಕಾ ಮದ್ವೆ

    ಲೆಜೆಂಡರಿ ನಿರ್ದೇಶಕನ ಮಗನ ಜೊತೆ ಅನುಷ್ಕಾ ಮದ್ವೆ

    ಹೈದರಾಬಾದ್: ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಕ್ರಿಕೆಟ್ ಆಟಗಾರನ ಜೊತೆ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಈ ಸುದ್ದಿ ಬಗ್ಗೆ ಸ್ವತಃ ಅನುಷ್ಕಾ ಸ್ಪಷ್ಟನೆ ನೀಡಿದ್ದರು. ಇದೀಗ ಲೆಜೆಂಡರಿ ನಿರ್ದೇಶಕರ ಮಗನ ಜೊತೆ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

    ಹೌದು. ಲೆಜೆಂಡರಿ ನಿರ್ದೇಶಕ ರಾಘವೇಂದ್ರ ರಾವ್ ಅವರ ಪುತ್ರ ಪ್ರಕಾಶ್ ಕೋವೆಲಮುಡಿ ಜೊತೆ ಅನುಷ್ಕಾ ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅನುಷ್ಕಾ ಮತ್ತು ಪ್ರಕಾಶ್ ಇಬ್ಬರು ಕೂಡ ಅನೇಕ ವರ್ಷಗಳಿಂದ ಪರಿಚಯವಿದ್ದು, ಪರಸ್ಪರ ಪ್ರೀತಿಸುತ್ತಿದ್ದರಂತೆ. ಆದರೆ ಪ್ರಕಾಶ್‍ಗೆ ಈಗಾಗಲೇ ಮದುವೆಯಾಗಿ ವಿಚ್ಛೇದನ ಕೂಡ ಆಗಿದೆ.

    2014ರಲ್ಲಿ ಪ್ರಕಾಶ್, ಕನ್ನಿಕಾ ಧಿಲ್ಲಾನ್ ಜೊತೆ ವಿವಾಹವಾಗಿದ್ದರು. ಆದರೆ ಮದುವೆಯಾದ ಮೂರು ವರ್ಷಗಳ ನಂತರ ಅಂದರೆ 2017ರಲ್ಲಿ ಪತ್ನಿಯಿಂದ ದೂರ ಆಗಿ ಡಿವೋರ್ಸ್ ಪಡೆದುಕೊಂಡಿದ್ದರು. ಪ್ರಕಾಶ್ ವಿಚ್ಛೇದನ ಪಡೆದ ನಂತರ ಅನುಷ್ಕಾರನ್ನು ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ. ಪ್ರಕಾಶ್ ಕೂಡ ತಂದೆಯಂತೆ ನಿರ್ದೇಶಕರಾಗಿದ್ದಾರೆ. ಸದ್ಯಕ್ಕೆ ಇವರಿಬ್ಬರು ಪ್ರೀತಿಸುತ್ತಿದ್ದು, ಸದ್ಯದಲ್ಲೇ ಮದುವೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ.

    ಈ ಹಿಂದೆ ಅನುಷ್ಕಾ ಉತ್ತರ ಭಾರತ ಮೂಲದ ಕ್ರಿಕೆಟ್ ಆಟಗಾರನ ಜೊತೆ ಮದುವೆಯಾಗಲು ತಯಾರಿ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು.

    ಈ ಬಗ್ಗೆ ಮಾತನಾಡಿದ ಅನುಷ್ಕಾ, ನಾನು ಯಾವ ಕ್ರಿಕೆಟ್ ಆಟಗಾರನನ್ನು ಮದುವೆ ಆಗುತ್ತಿಲ್ಲ. ಯಾವುದಾದರು ವಿಷಯ ಬಗ್ಗೆ ಮಾತನಾಡುವ ಮೊದಲು ಅದರ ಬಗ್ಗೆ ಪರಿಶೀಲಿಸಿ. ನನ್ನ ಮದುವೆಯ ನಿರ್ಧಾರವನ್ನು ನಾನು ನನ್ನ ಪೋಷಕರಿಗೆ ಬಿಟ್ಟಿದ್ದೇನೆ. ನನ್ನ ತಂದೆ-ತಾಯಿ ಆಯ್ಕೆ ಮಾಡಿದ ಹುಡುಗನನ್ನು ನಾನು ಮದುವೆ ಆಗುತ್ತೇನೆ. ನಾನು ಶೀಘ್ರದಲ್ಲೇ ಮದುವೆ ಆಗುತ್ತಿದ್ದೇನೆ. ಆದರೆ ಯಾವುದೇ ಕ್ರಿಕೆಟ್ ಆಟಗಾರನನ್ನು ನಾನು ಮದುವೆ ಆಗುತ್ತಿಲ್ಲ ಎಂದಿದ್ದರು.

    ಸದ್ಯಕ್ಕೆ ಅನುಷ್ಕಾ ‘ನಿಶ್ಯಬ್ದಂ’ ಸಿನಿಮಾದಲ್ಲಿ ಅಭಿನಯಿಸಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಸುಮಾರು 30 ಕೋಟಿ ಬಜೆಟ್‍ನಲ್ಲಿ ತಯಾರಾಗುತ್ತಿದ್ದು, ಮಾಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ನಿಶಬ್ದಂ’ ಸಿನಿಮಾದ ಮೂಲಕ 13 ವರ್ಷಗಳ ನಂತರ ಮಾಧವನ್ ಮತ್ತು ಅನುಷ್ಕಾ ಶೆಟ್ಟಿ ಜೋಡಿ ತೆರೆಯ ಮೇಲೆ ಕಾಣಿಸುತ್ತಿರುವುದು ವಿಶೇಷವಾಗಿದೆ. ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಶಾಲಿನಿ ಪಾಂಡೆ, ಸುಬ್ಬರಾಜು, ಮತ್ತು ಶ್ರೀನಿವಾಸ ಅವಸರಲಾ ತಾರಾಬಳಗವೇ ಸಿನಿಮಾದಲ್ಲಿದೆ.

  • ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸೋ ಮುನ್ನವೇ ವ್ಯಕ್ತಿ ಸಾವು

    ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸೋ ಮುನ್ನವೇ ವ್ಯಕ್ತಿ ಸಾವು

    ಬೀದರ್: ಪಿಎಲ್‍ಡಿ ಬ್ಯಾಂಕ್ ಹಾಗೂ ಪಿಕೆಪಿಎಸ್‍ನ ನಿರ್ದೇಶಕರಾಗಿ ಆಯ್ಕೆಯಾಗಿದ್ದ ವ್ಯಕ್ತಿಯೊಬ್ಬರು, ಅಧಿಕಾರ ಸ್ವೀಕರಿಸುವ ಮುನವೇ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಇಸ್ಲಾಂಪೂರ ಗ್ರಾಮದಲ್ಲಿ ನಡೆದಿದೆ.

    ಇಸ್ಲಾಂಪೂರ ಗ್ರಾಮದ ಕಾಶಿನಾಥ ಕನಾಟೆ(66) ಮೃತ ವ್ಯಕ್ತಿ. ಇವರು ಗ್ರಾಮದ ಸಮೀಪ ಇರುವ ಮಶಾಳ ತಾಂಡಾದಿಂದ ಭಾನುವಾರ ರಾತ್ರಿ ಗ್ರಾಮಕ್ಕೆ ಬರುವಾಗ ಬೈಕಿನಿಂದ ಬಿದ್ದು ಮೃತಪಟ್ಟಿದ್ದಾರೆ. ಕಳೆದ 30 ವರ್ಷಗಳಿಂದ ಸಹಕಾರಿ ರಂಗದ ವಿವಿಧ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು, ಬಸವಕಲ್ಯಾಣದ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರಾಗಿ ಹಾಗೂ ರಾಜೇಶ್ವರ ಪಿಕೆಪಿಎಸ್‍ನ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.

    ಕಳೆದ ಒಂದು ವಾರದ ಹಿಂದೆ ನಡೆದ ರಾಜೇಶ್ವರ ಪಿಕೆಪಿಎಸ್ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಇವರು, ಎರಡು ದಿನಗಳ ಹಿಂದೆ ನಡೆದಿದ್ದ ಪಿಎಲ್‍ಡಿ ಬ್ಯಾಂಕ್ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಕಾಶಿನಾಥ ಅವರು ಪಿಕೆಪಿಎಸ್ ಹಾಗೂ ಪಿಎಲ್‍ಡಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾಗಿದ್ದನ್ನು ಸಹಿಸದ ವ್ಯಕ್ತಿಗಳು ಕೊಲೆ ಮಾಡರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.

    ಮಂಠಾಳ ಸಿಪಿಐ ಮಹೇಶಗೌಡ ಪಾಟೀಲ, ಮುಡಬಿ ಪಿಎಸ್‍ಐ ವಸೀಮ್ ಪಟೇಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 7 ಭಾಷೆಯಲ್ಲಿ ಬರುತ್ತಿದೆ ಉಪೇಂದ್ರ ನಟನೆಯ ಕಬ್ಜಾ ಸಿನಿಮಾ

    7 ಭಾಷೆಯಲ್ಲಿ ಬರುತ್ತಿದೆ ಉಪೇಂದ್ರ ನಟನೆಯ ಕಬ್ಜಾ ಸಿನಿಮಾ

    ಬಳ್ಳಾರಿ: ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಕಬ್ಜಾ’ ಸಿನಿಮಾ 7 ಭಾಷೆಗಳಲ್ಲಿ ಬರುತ್ತಿದ್ದು, ರಾಜ್ಯದ ಜನರಷ್ಟೇ ಅಲ್ಲ ಇಡೀ ದೇಶದ ಜನರು ಈ ಸಿನಿಮಾವನ್ನು ಮೆಚ್ಚುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ನಿರ್ದೇಶಕ ಆರ್. ಚಂದ್ರು ಹೇಳಿದ್ದಾರೆ.

    ಸಿನಿಮಾ ಪ್ರಮೋಶನ್‍ಗಾಗಿ ಬಳ್ಳಾರಿಗೆ ಬಂದಿದ್ದ ನಿರ್ದೇಶಕ ಆರ್. ಚಂದ್ರು ಸುದ್ದಿಗಾರರೊಂದಿಗೆ ಮಾತನಾಡಿ, ಸ್ಥಳೀಯ ಕಲಾವಿದರಿಗೆ ಹೆಚ್ಚು ಅವಕಾಶವನ್ನು ನೀಡುವ ಮೂಲಕ ಸಾಕಷ್ಟು ವಿಭಿನ್ನ ರೀತಿಯಲ್ಲಿ ಸಿನಿಮಾವನ್ನು ಮಾಡಲಾಗಿದೆ. ಅಲ್ಲದೇ ಬಳ್ಳಾರಿ ಮೂಲದ ಕೌಶಿಕ್ ಎನ್ನುವ ಕಲಾವಿದ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟನೆ ಮಾಡಿದ್ದಾನೆ. ಸಿನಿಮಾದಲ್ಲಿ ಉಪೇಂದ್ರ ಅವರ ಜೊತೆ ಸಾಥ್ ನೀಡಿರೋ ಕೌಶಿಕ್ ಮುಂದೆ ಸಿನಿಮಾ ರಂಗದಲ್ಲಿ ಮತ್ತಷ್ಟು ಅವಕಾಶಗಳು ಬರಲಿವೆ ಎಂದರು.

    ಇನ್ನೂ ದ್ವಾರಕೀಶ್ ಅವರ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡಿದ ಅವರು, ಸಿನಿಮಾ ಎಂದರೇನೇ ವ್ಯಾಪಾರ. ಇಲ್ಲಿ ಏಳು ಬೀಳು ಸಹಜ. ಅವರವರೇ, ಕುಳಿತುಕೊಂಡು ಮಾತನಾಡುತ್ತಾರೆ ಎಂದರು. ಹೀಗಿರುವ ಸಮಸ್ಯೆ ಮುಂದಿನ ಸಿನಿಮಾ ಮಾಡುವುದರೊಳಗೆ ಸರಿ ಹೋಗುತ್ತದೆ. ಸಿನಿಮಾ ಎನ್ನುವುದು ವ್ಯಾಪಾರ. ಯಾರು ಕೂಡ ಧರ್ಮಕ್ಕೆ ಸಿನಿಮಾ ಮಾಡಲ್ಲ. ಮುಂದೆ ಎಲ್ಲ ಸರಿ ಹೋಗುತ್ತದೆ ಎಂದು ಪ್ರತಿಕ್ರಿಯಿಸಿದರು.

  • ಪಶುವೈದ್ಯೆ ರೇಪಿಸ್ಟ್ ಆತನ ಪತ್ನಿಯ ಮೇಲೂ ಅತ್ಯಾಚಾರಗೈದಿದ್ದಾನೆ: ನಿರ್ದೇಶಕ ರಾಮ್ ಗೋಪಾಲ್

    ಪಶುವೈದ್ಯೆ ರೇಪಿಸ್ಟ್ ಆತನ ಪತ್ನಿಯ ಮೇಲೂ ಅತ್ಯಾಚಾರಗೈದಿದ್ದಾನೆ: ನಿರ್ದೇಶಕ ರಾಮ್ ಗೋಪಾಲ್

    ಹೈದರಾಬಾದ್: ಕಳೆದ ವರ್ಷ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ಇದೀಗ ಈ ಪ್ರಕರಣವನ್ನು ರಾಮ್ ಗೋಪಾಲ್ ಅವರು ಸಿನಿಮಾ ಮಾಡಲು ಮುಂದಾಗಿದ್ದಾರೆ.

    ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪಶುವೈದ್ಯೆಯ ಪ್ರಕರಣವನ್ನು ಸಿನಿಮಾವನ್ನಾಗಿ ಮಾಡುತ್ತಿದ್ದಾರೆ. ಹೀಗಾಗಿ ಅವರು ನಾಲ್ವರು ಆರೋಪಿಯಲ್ಲಿ ಒಬ್ಬನಾದ ಚೆನ್ನಕೇಶವುಲು ಪತ್ನಿ ರೇಣುಕರನ್ನು ಸಂದರ್ಶನ ಮಾಡಿದ್ದಾರೆ. ಸಂದರ್ಶನದ ನಂತರ ಪಶುವೈದ್ಯೆ ರೇಪಿಸ್ಟ್ ತನ್ನ ಪತ್ನಿಯ ಮೇಲೂ ಅತ್ಯಾಚಾರಗೈದಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ – ಎನ್‌ಕೌಂಟರ್‌ಗೆ ವಿಶ್ವನಾಥ್ ಸಜ್ಜನರ್ ನೇತೃತ್ವ

    ರಾಮ್ ಗೋಪಾಲ್ ಅವರು ತಮ್ಮ ಟ್ವಿಟ್ಟರಿನಲ್ಲಿ, ಪಶುವೈದ್ಯೆ ಅತ್ಯಾಚಾರಿ ಚೆನ್ನಕೇಶವುಲುವಿನ ಪತ್ನಿ ರೇಣುಕಾಳನ್ನು ಈಗ ತಾನೇ ಭೇಟಿ ಮಾಡಿದೆ. 16 ವರ್ಷವಿದ್ದಾಗ ರೇಣುಕಾ ಚೆನ್ನಕೇಶವುಲುನನ್ನು ಮದುವೆ ಆಗಿದ್ದಳು. ಈಗ 17ನೇ ವರ್ಷಕ್ಕೆ ಆಕೆ ಮಗುವಿಗೆ ಜನ್ಮ ನೀಡುತ್ತಿದ್ದಾಳೆ. ದಿಶಾ ಮಾತ್ರವಲ್ಲ, ಆತ ತನ್ನ ಪತ್ನಿಯನ್ನು ಸಹ ಸಂತ್ರಸ್ತೆಯನ್ನಾಗಿ ಮಾಡಿದ್ದಾನೆ. ಆಕೆಯೇ ಒಂದು ಮಗುವಾಗಿದ್ದುಕೊಂಡು ಮತ್ತೊಂದು ಮಗುವಿಗೆ ಜನ್ಮ ನೀಡುತ್ತಿದ್ದಾಳೆ. ಆದರೆ ಇಬ್ಬರಿಗೂ ಭವಿಷ್ಯ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ- ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ ಪೊಲೀಸರು

    ಹೈದ್ರಾಬಾದ್ ಪೊಲೀಸರು ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದರು. ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಪೊಲೀಸರು ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆಗೈದಿದ್ದರು. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದರು. ಇದನ್ನೂ ಓದಿ: ಮಹಿಳೆಯರು ತಮ್ಮ ಜೊತೆ ಕಾಂಡೋಮ್ ಇಟ್ಟುಕೊಂಡು ಅತ್ಯಾಚಾರಿಗಳಿಗೆ ಸಹಕರಿಸಬೇಕು: ನಿರ್ದೇಶಕ

    ಚೆನ್ನಕೇಶವುಲು ಹಾಗೂ ಉಳಿದ ಮೂರು ಆರೋಪಿಗಳನ್ನು ಎನ್‍ಕೌಂಟರ್ ಮಾಡಲಾಗಿತ್ತು. ಈ ವೇಳೆ ಚೆನ್ನಕೇಶವುಲು ಪತ್ನಿ, ಮದುವೆಯಾದ ಒಂದು ವರ್ಷದೊಳಗೆ ನನ್ನ ಪತಿ ನನ್ನನ್ನು ಬಿಟ್ಟು ಹೋಗಿದ್ದಾರೆ. ದಯವಿಟ್ಟು ನನಗೆ ಎನ್‍ಕೌಂಟರ್ ಆದ ಜಾಗಕ್ಕೆ ಕರೆದುಕೊಂಡು ಹೋಗಿ. ನಾನು ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಥವಾ ನೀವೇ ನನ್ನನ್ನು ಕೊಲೆ ಮಾಡಿ. ನನ್ನ ಪತಿ ಇಲ್ಲದೆ ನನಗೆ ಬದುಕಲು ಆಗುವುದಿಲ್ಲ ಎಂದು ಕಣ್ಣೀರು ಹಾಕುವ ಮೂಲಕ ತನ್ನ ನೋವನ್ನು ಹೊರಹಾಕಿದ್ದಳು.

  • ನಿರ್ದೇಶಕನ ಆಸ್ಪತ್ರೆ ಖರ್ಚುಗಳನ್ನು ಭರಿಸುತ್ತಿದ್ದಾರೆ ಅಕ್ಷಯ್

    ನಿರ್ದೇಶಕನ ಆಸ್ಪತ್ರೆ ಖರ್ಚುಗಳನ್ನು ಭರಿಸುತ್ತಿದ್ದಾರೆ ಅಕ್ಷಯ್

    ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ತಮ್ಮ ‘ಮಿಷನ್ ಮಂಗಲ್’ ಚಿತ್ರದ ನಿರ್ದೇಶಕನ ವೈದ್ಯಕೀಯ ಖರ್ಚುಗಳನ್ನು ಭರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಶನಿವಾರ ಮುಂಬೈನಲ್ಲಿ ನಿರ್ದೇಶಕ ಜಗನ್ ಶಕ್ತಿ ತಮ್ಮ ಸ್ನೇಹಿತರ ಜೊತೆ ಗೆಟ್ ಟು ಗೆದರ್‍ನಲ್ಲಿ ಭಾಗವಹಿಸಿದ್ದರು. ಈ ವೇಳೆ ಜಗನ್ ಏಕಾಏಕಿ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಮುಂಬೈನ ಕೊಕಿಲ್‍ಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಗನ್ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಸೋಮವಾರ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ನಿರ್ದೇಶಕ ಜಗನ್ ಚೇತರಿಸಿಕೊಳ್ಳುತ್ತಿದ್ದಾರೆ.

    ಜಗನ್ ಅವರು ಕುಸಿದು ಬಿದ್ದಾಗ ಸ್ವತಃ ಅಕ್ಷಯ್ ಕುಮರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ವರದಿಯಾಗಿದೆ. ಸದ್ಯ ಜಗನ್ ಅವರು ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಕ್ಷಯ್ ಅವರು ಆಸ್ಪತ್ರೆಯ ಖರ್ಚು ನೋಡಿಕೊಳ್ಳುತ್ತಿದ್ದಾರೆ. ಅಲ್ಲದೆ ಜಗನ್ ಅವರ ಕುಟುಂಬಸ್ಥರ ಜೊತೆ ನಿಂತು ಅವರಿಗೆ ಧೈರ್ಯ ಕೂಡ ಹೇಳಿದ್ದಾರೆ. ಅಕ್ಷಯ್ ಅವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಮಿಷನ್ ಮಂಗಲ್ ಜಗನ್ ಶಕ್ತಿ ನಿರ್ದೇಶನದ ಮೊದಲ ಚಿತ್ರ. ಈ ಸಿನಿಮಾ ಚಂದ್ರಯಾನ ಕತೆಯಾಗಿದ್ದು, ಕಳೆದ ವರ್ಷ ಬಿಡುಗಡೆಯಾಗಿತ್ತು. ಇದರಲ್ಲಿ ನಟ ಅಕ್ಷಯ್ ಕುಮಾರ್, ನಟಿಯರಾದ ವಿದ್ಯಾ ಬಾಲನ್, ತಾಪ್ಸಿ ಪನ್ನು, ನಿತ್ಯಾ ಮೆನನ್, ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು.

  • ನಾಯಕ ನಟನಾದ ಜಯಮ್ಮನ ಮಗ ನಿರ್ದೇಶಕ!

    ನಾಯಕ ನಟನಾದ ಜಯಮ್ಮನ ಮಗ ನಿರ್ದೇಶಕ!

    ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡಿರುವ ಚಿತ್ರ ‘ಕಾಣದಂತೆ ಮಾಯವಾದನು’. ವಿಕಾಸ್, ಸಿಂಧು ಲೋಕ್‍ನಾಥ್ ಅಭಿಯಿಸಿರುವ ಈ ಚಿತ್ರ ಇದೇ ತಿಂಗಳ 31ಕ್ಕೆ ಬಿಡುಗಡೆಯಾಗುತ್ತಿದೆ. ವಿಭಿನ್ನ ಕಥಾಹಂದರ, ಸ್ಟೋರಿ ಲೈನ್ ಇರುವ ಈ ಚಿತ್ರವನ್ನು ರಾಜ್ ಪಾತಿಪಾಟಿ ನಿರ್ದೇಶನ ಮಾಡಿದ್ದಾರೆ. ಜಯಮ್ಮನ ಮಗ ಚಿತ್ರದಲ್ಲಿ ದುನಿಯಾ ವಿಜಿಗೆ ಆ್ಯಕ್ಷನ್ ಕಟ್ ಹೇಳಿದ್ದ ವಿಕಾಸ್ ಈ ಚಿತ್ರದ ಮೂಲಕ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದೇ ತಿಂಗಳ 31ಕ್ಕೆ ಈ ಚಿತ್ರ ಚಿತ್ರಮಂದಿರದ ಅಂಗಳಕ್ಕೆ ಬರುತ್ತಿದೆ.

    ರಾಜ್ ಪಾತಿಪಾಟಿ ಮೊದಲ ಬಾರಿ ಆಕ್ಷನ್ ಕಟ್ ಹೇಳಿರೋ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಪಡೆದುಕೊಂಡಿರೋದು ಬಿಡುಗಡೆಯ ಹೊಸ್ತಿಲಲ್ಲಿರುವ ಚಿತ್ರತಂಡಕ್ಕೆ ಖುಷಿ ನೀಡಿದೆ. ಮುಗ್ಧ ಪ್ರೇಮಕಥೆ ಚಿತ್ರದಲ್ಲಿದ್ದು, ಸಾವನಪ್ಪುವ ಪ್ರಿಯಕರ ದೆವ್ವವಾಗಿ ಬಂದು ಹೇಗೆ ತನ್ನ ಪ್ರೀತಿಯನ್ನು ಕಾಪಾಡಿಕೊಳ್ಳುತ್ತಾನೆ ಎನ್ನುವ ಇಂಟ್ರಸ್ಟಿಂಗ್ ಕಥಾಹಂದರ ಚಿತ್ರದಲ್ಲಿದೆ. ಲವ್, ಆಕ್ಷನ್, ಹಾರಾರ್, ಥ್ರಿಲ್ಲರ್ ಅಂಶಗಳು ಚಿತ್ರದಲ್ಲಿದ್ದು ಪ್ರೇಕ್ಷಕನಿಗೆ ಒಂದು ಪವರ್ ಪ್ಯಾಕ್ಡ್ ಎಂಟಟೈನ್ಮೆಂಟ್ ಸಿಗೋದ್ರಲ್ಲಿ ಡೌಟೇ ಇಲ್ಲ ಅಂತಿದೆ ಚಿತ್ರತಂಡ.

    ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೇಟ್ ಪಡೆದು ಪಾಸ್ ಆಗಿರೋ ಕಾಣದಂತೆ ಮಾಯವಾದನು ಸಿನಿಮಾ ಇದೇ ಶುಕ್ರವಾರ ಸಿನಿ ಪ್ರೇಕ್ಷಕರ ಎದುರಿಗೆ ಬರಲಿದ್ದಾನೆ. ಗುಮ್ಮಿನೇನಿ ವಿಜಯ್ ಮ್ಯೂಸಿಕ್, ಸುಜ್ಞಾನ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಚಿತ್ರದಲ್ಲಿ ದೊಡ್ಡ ತಾರಾಬಳಗದವಿದ್ದು ಅಚ್ಯುತ್ ಕುಮಾರ್, ಭಜರಂಗಿ ಲೋಕಿ, ರಾಘವ್ ಉದಯ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.