Tag: Director Prem

  • ಮತ್ತೆ ಕನ್ನಡಕ್ಕೆ ಬರಲಿದ್ದಾರೆ ಶಿಲ್ಪಾ ಶೆಟ್ಟಿ: ʻಕೆಡಿ’ಯಲ್ಲಿ ಲೇಡಿ ಪವರ್

    ಮತ್ತೆ ಕನ್ನಡಕ್ಕೆ ಬರಲಿದ್ದಾರೆ ಶಿಲ್ಪಾ ಶೆಟ್ಟಿ: ʻಕೆಡಿ’ಯಲ್ಲಿ ಲೇಡಿ ಪವರ್

    ರಾವಳಿ ಬ್ಯೂಟಿ ಶಿಲ್ಪಾ ಶೆಟ್ಟಿ(Shilpa Shetty) ಮತ್ತೆ ಕನ್ನಡ ಸಿನಿಮಾಗೆ ಕಂಬ್ಯಾಕ್ ಆಗ್ತಿದ್ದಾರೆ. ನಿರ್ದೇಶಕ ಪ್ರೇಮ್ (Director Prem) ಚಿತ್ರದ ಮೂಲಕ ಕನ್ನಡಕ್ಕೆ ಮತ್ತೆ ಬರುತ್ತಿದ್ದಾರೆ. ರವಿಚಂದ್ರನ್, ಉಪೇಂದ್ರ ಜೊತೆ ಸೊಂಟ ಬಳುಕಿಸಿದ್ದ ನಟಿ ಮತ್ತೆ ತಮ್ಮ ಖದರ್ ತೋರಿಸಲು ಬರುತ್ತಿದ್ದಾರೆ. ಈ ಮೂಲಕ ಕನ್ನಡ ಪ್ರೇಕ್ಷಕರಿಗೆ ಶಿಲ್ಪಾ ಶೆಟ್ಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಬಾಲಿವುಡ್ ನಟಿ (Bollywood Actress) ಶಿಲ್ಪಾ ಶೆಟ್ಟಿ ಮತ್ತೊಮ್ಮೆ ಕನ್ನಡದಲ್ಲಿ ಕಮಾಲ್ ಮಾಡಲು ಬರುತ್ತಿದ್ದಾರೆ. ಧ್ರುವ ಸರ್ಜಾ(Dhruva Sarja) ಅಭಿನಯದ `ಕೆಡಿ’ ಚಿತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬರುತ್ತಿದ್ದು, ಕೆಡಿ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ಪವರ್ ಫುಲ್ ಪಾತ್ರ ಮಾಡಲಿದ್ದಾರೆ. ಧ್ರುವಾಗೆ ಟಕ್ಕರ್ ಕೊಡಲು ನಟಿ ಬರುತ್ತಿದ್ದಾರೆ. ಇದನ್ನೂ ಓದಿ:ಹನಿಮೂನ್ ಸ್ಪಾಟ್ ಬಾಲಿಯಲ್ಲಿ ಒಂಟಿಯಾಗಿ ನಿವೇದಿತಾ ಗೌಡ ಮೋಜು- ಮಸ್ತಿ

     

    View this post on Instagram

     

    A post shared by Prem❣️s (@directorprems)

    ಈಗಾಗಲೇ ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಳ್ಳಲಿದ್ದಾರೆ. ಈ ಹಿಂದೆ ಮೂರು ಬಾರಿ ಸ್ಯಾಂಡಲ್‌ವುಡ್ ತೆರೆಮೇಲೆ ನಗು ಚೆಲ್ಲಿ, ನಡು ಬಳುಕಿಸಿ, ಪ್ರೇಕ್ಷಕರ ಎದೆಗೆ ಕಿಚ್ಚು ಹಚ್ಚಿದ್ದಾರೆ ಶಿಲ್ಪಾ ಶೆಟ್ಟಿ. ಅದರಲ್ಲೂ `ಪ್ರೀತ್ಸೋದ್ ತಪ್ಪಾ’ ಚಿತ್ರದಲ್ಲಿನ ಶಿಲ್ಪಾ ಶೆಟ್ಟಿಯ ಗ್ಲಾಮರಸ್ ನೋಟವನ್ನು ಅದ್ಯಾರು ತಾನೆ ಮರೆಯಲು ಸಾಧ್ಯ. ಇದೀಗ `ಕೆಡಿ’ಯಲ್ಲಿ ಶಿಲ್ಪಾ ರೆಟ್ರೋ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾಕಂದ್ರೆ `ಕೆಡಿ’ 80ರ ದಶಕದ ರಕ್ತಸಿಕ್ತ ಕಥೆಯ ಸಿನಿಮಾ. ಶಿಲ್ಪಾ ಶೆಟ್ಟಿ ಎಂಟ್ರಿ ಕೆಡಿ ಖದರ್ ಇರೋದ್ರಿಂದ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರೇಮ್-ಧ್ರುವ ಹೊಸ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ ತೌಫಿಕ್ ಖುರೇಷಿ

    ಪ್ರೇಮ್-ಧ್ರುವ ಹೊಸ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ ತೌಫಿಕ್ ಖುರೇಷಿ

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇದೀಗ ಪ್ರೇಮ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸಲು ರೆಡಿಯಾಗಿದ್ದಾರೆ. ಈ ಚಿತ್ರಕ್ಕಾಗಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಹೀಗಿರುವಾಗ ಈ ಚಿತ್ರದ ಬಗ್ಗೆ ಹೊಸ ಅಪ್‌ಡೇಟ್‌ವೊಂದು ಹೊರ ಬಿದ್ದಿದೆ. ಪ್ರೇಮ್ ನಿರ್ದೇಶನದ ಹೊಸ ಚಿತ್ರಕ್ಕೆ ಬಾಲಿವುಡ್‌ನ ಸಂಗೀತ ನಿರ್ದೇಶಕ ತೌಫಿಕ್ ಖುರೇಷಿ ಸಾಥ್ ನೀಡಿದ್ದಾರೆ.

    ಭಿನ್ನ ಕಥೆಯ ಮೂಲಕ ಪ್ರೇಕ್ಷಕರನ್ನ ರಂಜಿಸಲು ಪ್ರೇಮ್ ಮತ್ತು ಧ್ರುವ ಕಾಂಬಿನೇಷನ್ ಹೊಸ ಚಿತ್ರ ಮೂಡಿ ಬರುತ್ತಿದೆ. ಚಿತ್ರದ ಕಥೆಯಿಂದ ಹಿಡಿದು ಮ್ಯೂಸಿಕ್‌ವರೆಗೂ ಒತ್ತು ನೀಡುವ ಸ್ಟಾರ್ ನಿರ್ದೇಶಕ ಪ್ರೇಮ್, ತಮ್ಮ ಹೊಸ ಪ್ರಾಜೆಕ್ಟ್‌ಗೆ ಝಾಕಿರ್ ಹುಸೇನ್ ಸಹೋದರ ತೌಫಿಕ್ ಈ ಚಿತ್ರತಂಡವನ್ನ ಸೇರಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ಬರಲು ನಂದಿನಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ?

    ಚಿತ್ರದ ಮೊದಲ ಟೀಸರ್ ರಿಲೀಸ್ ತೆರೆಮರೆಯಲ್ಲಿ ಭರದಿಂದ ತಯಾರಿ ನಡೆಯುತ್ತಿದೆ. ಕ್ಯಾಲಿಫೋರ್ನಿಯ ಮತ್ತು ಬಾಂಬೆಯಲ್ಲಿ ಈ ಚಿತ್ರಕ್ಕಾ ಮ್ಯೂಸಿಕ್ ಕಂಪೋಸ್ ಮಾಡಲಾಗುತ್ತಿದೆ. ಮುಂದಿನ ಚಿತ್ರದ ಮೊದಲ ಟೀಸರ್ ಬಗ್ಗೆ ಅಪ್‌ಡೇಟ್ ಸಿಗಲಿದೆ. ಇನ್ನು ತೌಫಿಕ್ ಖುರೇಷಿ ಜತೆ ಇರುವ‌ ಫೋಟೋ ನಿರ್ದೇಶಕ ಪ್ರೇಮ್ ಮತ್ತು ಅರ್ಜುನ್ ಜನ್ಯ, ಸುಪ್ರಿತ್ ಸಖತ್ ವೈರಲ್ ಅಗುತ್ತದೆ.

    ಕೆವಿಎನ್ ಸಂಸ್ಥೆಯ ನರ‍್ಮಾಣದ ಈ ಚಿತ್ರದಲ್ಲಿ ಪ್ರೀತಿ, ಆ್ಯಕ್ಷನ್, ಡೈಲಾಗ್, ಮ್ಯೂಸಿಕ್ ಇವೆಲ್ಲಾವನ್ನ ತೆರೆಯ ಮೇಲೆ ನೋಡಬಹುದಾಗಿದೆ. ಈ ಚಿತ್ರದ ಮತ್ತಷ್ಟು ಅಪ್‌ಡೇಟ್‌ಗಾಗಿ, ಚಿತ್ರತಂಡ ಅಧಿಕೃತವಾಗಿ ಹೇಳುವವರೆಗೂ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎದುರು ಅಬ್ಬರಿಸಲಿದ್ದಾರೆ ಸಂಜಯ್ ದತ್

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎದುರು ಅಬ್ಬರಿಸಲಿದ್ದಾರೆ ಸಂಜಯ್ ದತ್

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva sarja) ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಣ್ಣ ಚಿರು ಮತ್ತು ಅಜ್ಜಿಯ ಸಾವಿನ ಶಾಕ್ ನಂತರ ಮತ್ತೆ ಚಿತ್ರಗಳಲ್ಲಿ ಆಕ್ಟೀವ್ ಆಗಿದ್ದಾರೆ. `ಮಾರ್ಟಿನ್’ (Martin) ಸಿನಿಮಾ ಮುಗಿಯುತ್ತಿದ್ದಂತೆ ಸ್ಟಾರ್ ಡೈರೆಕ್ಟರ್ ಪ್ರೇಮ್ ಜೊತೆ ಸಿನಿಮಾ ಮಾಡೋಕೆ ಧ್ರುವ ರೆಡಿಯಾಗಿದ್ದಾರೆ. ಇದರ ಜೊತೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ಅಂದ್ರೆ ಪ್ರಿನ್ಸ್ ಮುಂದೆ ಅಬ್ಬರಿಸಲು ಅಧೀರ ಸಂಜಯ್ ದತ್ (Sanjay dutt) ಎಂಟ್ರಿ ಕೊಡ್ತಿದ್ದಾರೆ.

    ಚಿರು ಮತ್ತು ಅಜ್ಜಿಯ ಸಾವಿನ ನಂತರ ಧ್ರುವಾ ಕೊಂಚ ಸೈಲೆಂಟ್ ಆಗಿದ್ದಾರೆ. ನೋವಿನ ನಡುವೆ ಇದೀಗ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಸದ್ಯ `ಮಾರ್ಟಿನ್’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರ ಮುಗಿಯುತ್ತಿದ್ದಂತೆ, ನಿರ್ದೇಶಕ ಪ್ರೇಮ್ ಜೊತೆ ಧ್ರುವ ಕೈ ಜೋಡಿಸಲಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ ಚಿತ್ರದಲ್ಲಿ ಧ್ರುವ ಸರ್ಜಾಗೆ ಟಕ್ಕರ್ ಕೊಡಲು ಸಂಜಯ್ ದತ್ ಸಜ್ಜಾಗಿದ್ದಾರೆ. ಇದನ್ನೂ ಓದಿ:ನಿನ್ನ ತಲೆಯ ಮೇಲೆ ತೆಂಗಿನಕಾಯಿ ಒಡೆದು ಬಿಗ್ ಬಾಸ್ ಮನೆಯಿಂದ ಹೋಗ್ತೀನಿ: ಸೋನುಗೆ ಗುರೂಜಿ ವಾರ್ನಿಂಗ್

    ಇತ್ತೀಚೆಗಷ್ಟೇ ಮುಂಬೈನಲ್ಲಿ ಸಂಜಯ್ ದತ್ ಅವರನ್ನ ನಿರ್ದೇಶಕ ಪ್ರೇಮ್ (Prem) ಭೇಟಿ ಮಾಡಿದ್ದಾರೆ. ಚಿತ್ರದ ಸ್ಟೋರಿ ಲೈನ್ ಕೇಳಿ, ಅಧೀರ ಫುಲ್ ಥ್ರಿಲ್ ಆಗಿ ಕಥೆಗೆ ಓಕೆ ಮಾಡಿದ್ದಾರೆ. `ಕೆಜಿಎಫ್ 2′ ಅಧೀರ ಪಾತ್ರದ ಸಕ್ಸಸ್ ನಂತರ ಹೆಚ್ಚೆಚ್ಚು ದಕ್ಷಿಣದ ಸಿನಿಮಾಗಳಲ್ಲೂ ನಟಿಸಲು ಸಂಜಯ್ ದತ್‌ಗೆ ಬುಲಾವ್ ಬರುತ್ತಿದೆ. ಪ್ರೇಮ್ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಳ್ಳಲಿದ್ದಾರೆ.

    ʻಕೆವಿಎನ್‌ʼ ಪ್ರೊಡಕ್ಷನ್ ನಿರ್ಮಾಣದ 1970ರ ಕಾಲಘಟ್ಟದ ಕಥೆಯಲ್ಲಿ ಧ್ರುವ ಮತ್ತು ಸಂಜಯ್ ದತ್ ಕಾಂಬಿನೇಷನ್ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಣ್ಣದ ಲೋಕದಲ್ಲಿ `ಏಕ್ ಲವ್ ಯಾ’ ನಟಿ ರೀಷ್ಮಾ ಮಿಂಚಿಂಗ್

    ಬಣ್ಣದ ಲೋಕದಲ್ಲಿ `ಏಕ್ ಲವ್ ಯಾ’ ನಟಿ ರೀಷ್ಮಾ ಮಿಂಚಿಂಗ್

    ಸೌಂದರ್ಯದ ಜೊತೆ ಪ್ರತಿಭೆಯಿರೋ ಮತ್ತೊರ್ವ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. `ಏಕ್ ಲವ್ ಯಾ’ ಚಿತ್ರದ ಮೂಲಕ ಚಂದನವನಕ್ಕೆ ಪರಿಚಿತರಾದ ಕೊಡಗಿನ ಕುವರಿ ರೀಷ್ಮಾ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

    ನಿರ್ದೇಶಕ ಪ್ರೇಮ್ ಗರಡಿಯಲ್ಲಿ ಪಳಗಿದ ಪ್ರತಿಭಾವಂತ ನಟಿ ರೀಷ್ಮಾ ನಾಣಯ್ಯ, ನಟಿಸಿರೋ ಮೊದಲ ಚಿತ್ರದಲ್ಲೇ ತಾನೆಂತಹ ನಟಿ ಅನ್ನೋದನ್ನ ಪ್ರೂವ್ ಮಾಡಿದ್ರು. ಈ ಚಿತ್ರದ ಅನಿತಾ ಪಾತ್ರಧಾರಿಯಾಗಿ ಸೈ ಎನಿಸಿಕೊಂಡರು. ಈಗ ರೀಷ್ಮಾಗಾಗಿ ಒಳ್ಳೊಳ್ಳೆ ಪಾತ್ರಗಳು ಅರಸಿ ಬರುತ್ತಿವೆ.

    ಸದ್ಯ ನಂದಕಿಶೋರ್ ನಿರ್ದೇಶನದ `ರಾಣಾ’ ಚಿತ್ರದಲ್ಲಿ ಶ್ರೇಯಸ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆಕ್ಷನ್ ಜೊತೆ ಲವ್‌ಸ್ಟೋರಿಯಿರೋ ರಾಣಾಗೆ ಜೋಡಿಯಾಗಿ ಸಾಥ್ ನೀಡಿದ್ದಾರೆ. ಇನ್ನು ಆ ದಿನಗಳು ಚೇತನ್ ನಟನೆಯ ʻಮಾರ್ಗʼ ಚಿತ್ರದಲ್ಲೂ ರೀಷ್ಮಾ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಕೆಲವು ಪ್ರಾಜೆಕ್ಟ್ ಮಾತುಕತೆಯಲ್ಲಿದೆ. ಈ ಎರಡು ಚಿತ್ರಗಳಲ್ಲೂ ವಿಭಿನ್ನ ಪಾತ್ರದ ಮೂಲಕ ಕೊಡಗಿ ಬೆಡಗಿ ರೀಷ್ಮಾ ರಂಜಿಸೋದು ಗ್ಯಾರೆಂಟಿ. ಇದನ್ನು ಓದಿ:ದೇಹಾಕಾರದಲ್ಲಿ ನನಗೂ ಸಮಸ್ಯೆ ಇವೆ, ಬಾಡಿ ಶೇಮಿಂಗ್ ಬಗ್ಗೆ ಶಾಂಕಿಗ್ ಸುದ್ದಿ ಕೊಟ್ಟ ವೈಷ್ಣವಿ

    ಇನ್ನು ಸಾಮಾಜಿಕ ಜಾಲತಾಣದಲ್ಲೂ `ಏಕ್ ಲವ್ ಯಾ’ ನಟಿಯ ಫೀವರ್ ಜೋರಾಗಿದೆ. ಸಿನಿಮಾ ವಿಷ್ಯ ಮಾತ್ರವಲ್ಲದೇ ಕಲರ್‌ಫುಲ್ ಅವತಾರದಲ್ಲಿ ಬೋಲ್ಡ್ ಲುಕ್‌ನಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸದ್ಯ ಈ ಫೋಟೋಗಳು ಪಡ್ಡೆ ಹೈಕ್ಳ ಹಾರ್ಟ್ ಫೇವರೇಟ್ ಆಗಿದೆ. ನೆಚ್ಚಿನ ನಟಿ ರೀಷ್ಮಾಳ ಮುಂಬರುವ ಚಿತ್ರಕ್ಕಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

  • ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ: ಪ್ರೇಮ್ ಕ್ಷಮೆ

    ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ: ಪ್ರೇಮ್ ಕ್ಷಮೆ

    – ಗೊತ್ತಿಲ್ಲದೆ ತಪ್ಪಾಗಿದ್ದಕ್ಕೆ ಕ್ಷಮೆಯಿರಲಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ಫೋಟೋ ಮುಂದೆ ‘ಏಕ್ ಲವ್ ಯಾ’ ಸಿನಿಮಾ ತಂಡ ಶಾಂಪೇನ್ ಚಿಮ್ಮಿಸಿ ಸಂಭ್ರಮಮಾಚರಣೆ ಮಾಡಿದೆ ಎನ್ನುವ ಕುರಿತಾಗಿ ನಿರ್ದೇಶಕ ಪ್ರೇಮ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಗೊತ್ತಿದ್ದು ತಪ್ಪು ಮಾಡಿಲ್ಲ. ಬದಲಾಗಿ ನನಗೆ ಗೊತ್ತಾಗದೇ ಯಾವುದೇ ತಪ್ಪನ್ನು ಮಾಡಿದ್ದರೆ ಕ್ಷಮಿಸಿ. ಅಪ್ಪು ಅವರನ್ನು ಕಳೆದುಕೊಂಡ ಮೇಲೆ ಇನ್ನೊಬ್ಬರಿಗೆ ಸ್ಫೂರ್ತಿಯಾಗಿ ಬದುಕೋಣ, ಇನ್ನೊಬ್ಬರ ಕಾಲು ಎಳೆಯುವುದು ಬೇಡ, ಸಾಧ್ಯವಾದಷ್ಟು ಸಹಾಯ ಮಾಡೋಣ ಎನ್ನುವ ದೃಷ್ಟಿಯಿಂದ ನಿನ್ನೆ ಕಾರ್ಯಕ್ರಮದ ಅಂತ್ಯದಲ್ಲಿ ನನಗೆ ಗೊತ್ತಿಲ್ಲದೇ ತಪ್ಪು, ನೋವು ಆಗಿದ್ದರೆ ಕ್ಷಮಿಸಿ ಎಂದು ನಾನು ಕೇಳಿದ್ದೇನು ಎಂದಿದ್ದಾರೆ. ಇದನ್ನೂ ಓದಿ: ಅಪ್ಪು ನೇತ್ರದಾನದಿಂದ ಇನ್ನೂ 10 ಮಂದಿಗೆ ದೃಷ್ಟಿ ನೀಡಲು ವೈದ್ಯರ ಪ್ರಯತ್ನ!

    ಅಪ್ಪು ಅವರು ಆಸ್ಪತ್ರೆಯಲ್ಲಿ ಮಲಗಿದ್ದರು. ಆಗ ನಾನು ಅವರ ಎರಡೂ ಕಾಲು ಹಿಡಿದುಕೊಂಡು ನನ್ನಿಂದ ಏನಾದರೂ ತಪ್ಪು ಆಗಿದ್ದರೆ ಕ್ಷಮಿಸಿ ಬಾಸ್ ಎಂದು ಕೇಳಿಕೊಂಡಿದ್ದೆ. ಅಪ್ಪು ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದಿದ್ದೇನೆ. ನನ್ನನ್ನು ಕ್ಷಮಿಸಿ. ನನಗೆ ಗೊತ್ತಾಗದೇ ಏನಾದ್ರೂ ಆಗಿದ್ದರೆ ಕ್ಷಮಿಸಿ. ನಿನ್ನೆ ನಮಗೆ ಗೊತ್ತಿಲ್ಲದೆ ತಪ್ಪು ಆಗಿದೆ. ಅಪ್ಪುಗೆ ಅವಮಾನ ಮಾಡುವ ಉದ್ದೇಶ ಇರಲಿಲ್ಲ. ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ. ಇದನ್ನೂ ಓದಿ:  ಏಕ್ ಲವ್ ಯಾ ಸಿನಿಮಾ ತಂಡದಿಂದ ಅಪ್ಪುಗೆ ಅವಮಾನ- ಶಾಂಪೇನ್ ಚಿಮ್ಮಿಸಿ ಸಂಭ್ರಮ

    ಏಕ್ ಲವ್ ಯಾ ಸಿನಿಮಾ ತಂಡ ಸಾಂಗ್ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು, ಈ ವೇಳೆ ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸಲಾಯಿತ್ತು. ಆದರೆ ಶ್ರದ್ಧಾಂಜಲಿ ವೇಳೆ ಅಪ್ಪು ಫೋಟೋ ಮುಂದೆ ನಟಿ ರಕ್ಷಿತಾ ಪ್ರೇಮ್ ಶಾಂಪೇನ್ ಚಿಮ್ಮಿಸಿದ್ದರು. ಈ ವೇಳೆ ಅಪ್ಪು ಅವರ ಫೋಟೋ ಎಲ್‍ಇಡಿ ಮೇಲೆ ಬಂದಿದೆ. ಈ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಆಗಿತ್ತು. ಇದನ್ನು ಗಮನಿಸಿದ ಸಾರಾ ಗೋವಿಂದ್ ಅವರು, ಅಪ್ಪು ಅಗಲಿಕೆ ನೋವಿನಿಂದ ಹೊರಬಂದಿಲ್ಲ. ಆದರೆ ಇಲ್ಲಿ ಅಪ್ಪು ಅವರಿಗೆ ಅವಮಾನ ಮಾಡಿದಂತಾಗಿದೆ. ಹೀಗಾಗಿ ಚಿತ್ರತಂಡ ಕೂಡಲೇ ಕ್ಷಮೆ ಕೇಳಬೇಕು ಎಂದು ಸೂಚನೆ ನೀಡಿದ್ದರು. ಅಂತೆಯೇ ಇದೀಗ ಪ್ರೇಮ್ ಹಾಗೂ ಅಕುಲ್ ಬಾಲಾಜಿ ಸೇರಿದಂತೆ ಇಡೀ ಚಿತ್ರತಂಡ ಕ್ಷಮೆ ಕೇಳಿದೆ.

  • ಕ್ರೇಜಿ ಕ್ವೀನ್‍ಗೆ ಡಿ ಬಾಸ್ ವಿಶ್- ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡ ರಕ್ಷಿತಾ

    ಕ್ರೇಜಿ ಕ್ವೀನ್‍ಗೆ ಡಿ ಬಾಸ್ ವಿಶ್- ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡ ರಕ್ಷಿತಾ

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ರೇಜಿ ಕ್ವೀನ್ ರಕ್ಷಿತಾ 36ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಹೋಮ್ ಕ್ವಾರೆಂಟೈನ್ ಹಿನ್ನೆಲೆ ಕುಟುಂಬದೊಂದಿಗೇ ಆಚರಿಸಿಕೊಂಡಿದ್ದಾರೆ. ಆದರೆ ಇದರ ನಡುವೆಯೂ ರಕ್ಷಿತಾ ಪತಿ, ನಿರ್ದೇಶಕ ಪ್ರೇಮ್ ಹಾಗೂ ಪುತ್ರ ಸೂರ್ಯ ವಿಭಿನ್ನ ಸರ್‍ಪ್ರೈಸ್ ನೀಡುವ ಮೂಲಕ ಭಾವನಾತ್ಮಕವಾಗಿ ಆಚರಿಸಿದ್ದಾರೆ.

    ಹುಟ್ಟುಹಬ್ಬದ ಸಂಭ್ರಮವನ್ನು ರಕ್ಷಿತಾ ಪ್ರೇಮ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ತಮ್ಮ ಕುಟುಂಬದವರನ್ನು ನೆನೆಸಿಕೊಂಡು ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ. ಇನ್ನೂ ವಿಶೇಷವೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಈ ಮೂಲಕ ಅವರ ಸಂತಸವನ್ನು ಇಮ್ಮಡಿಗೊಳಿಸಿದ್ದಾರೆ. ನನ್ನ ಆತ್ಮೀಯ ಗೆಳತಿಯರಲ್ಲೊಬ್ಬರಾದ ರಕ್ಷಿತಾ ಪ್ರೇಮ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಹ್ಯಾವ್ ಎ ಫ್ಯಾಬ್ಯುಲಸ್ ಇಯರ್ ಅಹೇಡ್ ಎಂದು ಟ್ವೀಟ್ ಮಾಡಿದ್ದಾರೆ.

    ನಿರ್ದೇಶಕ ಪ್ರೇಮ್ ಅವರು ಈ ಸಂಭ್ರಮ ಕ್ಷಣದ ವಿಡಿಯೋವನ್ನು ಫೇಸ್ಬುಕ್‍ನಲ್ಲಿ ಹಂಚಿಕೊಂಡಿದ್ದು, ರಕ್ಷಿತಾ ಪ್ರೇಮ್ ಸಹ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ವಿಶ್ ಯು ಹ್ಯಾಪಿ ಬರ್ತ್‍ಡೇ ಗಾಡ್ ಬ್ಲೆಸ್ ಯು ಎಂದು ಬರೆದು ಹ್ಯಾಶ್ ಟ್ಯಾಗ್‍ನೊಂದಿಗೆ ರಕ್ಷಿತಾ ಹಾಗೂ ಹೃದಯದ ಎಮೋಜಿಗಳನ್ನು ಪ್ರೇಮ್ ಪೋಸ್ಟ್ ಮಾಡಿದ್ದಾರೆ.

    ಅಲ್ಲದೆ ಪ್ರೇಮ್ ಅವರೇ ರಕ್ಷಿತಾ ಅವರ ಹುಟ್ಟಹಬ್ಬ ಆಚರಣೆಗೆ ಸಂಪೂರ್ಣ ವ್ಯವಸ್ಥೆ ಮಾಡಿದ್ದು, ಮಗ ಸೂರ್ಯ ಕೇಕ್ ತಯಾರಿಸಿದ್ದಾನಂತೆ. ಈ ಮೂಲಕ ಅಮ್ಮನಿಗೆ ಸರ್ಪ್ರೈಸ್ ನೀಡಿದ್ದಾನೆ. ಕುಟುಂಬದವರೆಲ್ಲ ಸೇರಿ ಸಂಭ್ರಮದಿಂದಲೇ ಆಚರಿಸಿದ್ದು, ಸ್ನೇಹಿತರು ಹಾಗೂ ಕುಟುಂಬಸ್ಥರ ಗೈರು ಕಾಡುತ್ತಿದೆ. ಹೋಮ್ ಕ್ವಾರೆಂಟೈನ್ ಹಿನ್ನೆಲೆ ಬಹುತೇಕರು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಕೋರಿದ್ದಾರೆ. ಇದಕ್ಕಾಗಿ ರಕ್ಷಿತಾ ಸಹ ಬೇಸರಗೊಂಡಿದ್ದಾರೆ. ಅಲ್ಲದೆ ಇದೇ ಮೊದಲ ಬಾರಿಗೆ ರಕ್ಷಿತಾ ಅವರ ಹುಟ್ಟುಹಬ್ಬವನ್ನು ಮನೆಯಲ್ಲೇ ಆಚರಿಸುತ್ತಿದ್ದೇವೆ ಎಂದು ಪ್ರೇಮ್ ತಿಳಿಸಿದ್ದಾರೆ.

    ಇದಕ್ಕೆ ಪ್ರತಿಯಾಗಿ ರಕ್ಷಿತಾ ಧನ್ಯವಾದ ತಿಳಿಸಿದ್ದು, ಸೂರ್ಯ, ಮಂಜು ಬೇಕಿಂಗ್ ಎ ಕೇಕ್…. ಪ್ರೇಮ್ ಎಲ್ಲವನ್ನೂ ಆಯೋಜಿಸಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಈ ಕ್ಷಣವನ್ನು ಸುಂದರವಾಗಿಸಲು ಪ್ರಯತ್ನಿಸಿದ್ದಾರೆ. ನನ್ನ ತಾಯಿ, ಕುಟುಂಬ ಹಾಗೂ ನನ್ನ ಸ್ನೇಹಿತರು ಸೇರಿದಂತೆ ನನ್ನ ಜೀವನದಲ್ಲಿ ಹತ್ತಿರವಾದವರನ್ನು ಮಿಸ್ ಮಾಡಿಕೊಳ್ಳುತ್ತೇನೆ. ಕೆಲವರು ನನ್ನೊಂದಿಗೆ ಲೈವ್ ಮಾಡುವ ಮೂಲಕ ಶುಭಕೋರುತ್ತಿರುವುದು ನೋಡಿ ನಗು ಬರುತ್ತಿದೆ. ನಿಮ್ಮ ಪ್ರೀತಿಯ ಶುಭಾಶಯಗಳಿಗೆ ಧನ್ಯವಾದಗಳು. ಹಲವರು ಶುಭ ಕೋರಿದ್ದನ್ನು ನಾನು ನೋಡಿದ್ದೇನೆ. ನೀವೆಲ್ಲರೂ ಸುರಕ್ಷಿತವಾಗಿರಿ…..ಲೆಟ್ಸ್ ಪಾರ್ಟಿ ಹಾರ್ಡ್ ಪೀಪಲ್…..ಐ ಲವ್ ಯು ಆಲ್ ಆ್ಯಂಡ್ ಥ್ಯಾಂಕ್ ಯು ಟು ಒನ್ ಆ್ಯಂಡ್ ಆಲ್ ಅಗೇನ್ ಎಂದು ಬರೆದುಕೊಂಡಿದ್ದಾರೆ. ಹ್ಯಾಷ್ ಟ್ಯಾಗ್‍ನೊಂದಿಗೆ ಲವ್, ಬರ್ತ್‍ಡೇ ಗರ್ಲ್, ಬರ್ತ್‍ಡೇ ಡ್ಯೂರಿಂಗ್ ಲಾಕ್‍ಡೌನ್ ಎಂದು ಹಾಕಿದ್ದಾರೆ.

     

    View this post on Instagram

     

    I wish for all of your wishes to come true.✨ Happieeee birthday my dea raks????❤️ God bless !!✨✨@rakshitha__official ????

    A post shared by Rachita Ram (@rachita_instaofficial) on

    ಡಿಂಪಲ್ ಕ್ವೀನ್ ರಚಿತಾ ರಾಮ್ ಸಹ ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಶುಭ ಕೋರಿದ್ದು, ನಿಮ್ಮೆಲ್ಲ ಹಾರೈಕೆಗಳು ಈಡೇರಲಿ ಎಂದು ಶುಭ ಕೋರುತ್ತೇನೆ. ಹ್ಯಾಪಿ ಬರ್ತ್‍ಡೇ ಮೈ ಡೀಯ್ ರಕ್ಸ್….ಗಾಡ್ ಬ್ಲೆಸ್ ಎಂದು ಬರೆದಿದ್ದಾರೆ. ಇದಕ್ಕೆ ರಕ್ಷಿತಾ ಪ್ರತಿಕ್ರಿಯಿಸಿ, ಥ್ಯಾಂಕ್ಯೂ ಮೈ ಲವ್ ಎಂದು ಕಮೆಂಟ್ ಮಾಡಿದ್ದಾರೆ. ಹೀಗೆ ರಕ್ಷಿತಾ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದಿದೆ.

  • ಕಿಚ್ಚ, ಸಲ್ಲು ಚಿತ್ರ ಜೋಗಿ ಪ್ರೇಮ್ ನಿರ್ದೇಶನ ಮಾಡಲ್ಲ ಅಂದ್ರು ಸುದೀಪ್

    ಕಿಚ್ಚ, ಸಲ್ಲು ಚಿತ್ರ ಜೋಗಿ ಪ್ರೇಮ್ ನಿರ್ದೇಶನ ಮಾಡಲ್ಲ ಅಂದ್ರು ಸುದೀಪ್

    ಚಿತ್ರರಂಗದಲ್ಲಿ ಸ್ಟಾರ್ ನಟ ನಟಿಯರ ಪ್ರತೀ ಕದಲಿಕೆಗಳ ಬಗ್ಗೆಯೂ ನಾನಾ ದಿಕ್ಕಿನಲ್ಲಿ ರೂಮರುಗಳು ಹುಟ್ಟಿಕೊಳ್ಳುತ್ತವೆ. ಯಾವ ವಿಚಾರ ಯಾವುದಕ್ಕೆ ಕನೆಕ್ಟಾಗುತ್ತೋ ಹೇಳಲು ಬರೋದಿಲ್ಲ. ಹಾಗಿದ್ದ ಮೇಲೆ ಕಿಚ್ಚ ಸುದೀಪ್ ಮತ್ತು ಸಲ್ಮಾನ್ ಖಾನ್ ಜೊತೆಗೆ ಜೋಗಿ ಪ್ರೇಮ್ ಅವರು ಕಾಣಿಸಿಕೊಂಡರೆ ಈ ಬಗ್ಗೆ ಅಂತೆ ಕಂತೆಗಳು ಹುಟ್ಟಿಕೊಳ್ಳದಿರುತ್ತವೆಯೇ?

    ಕಿಚ್ಚ ಸುದೀಪ್ ಸಲ್ಮಾನ್ ಖಾನ್ ಜೊತೆ ದಬಾಂಗ್ 3 ಚಿತ್ರದಲ್ಲಿ ನಟಿಸುತ್ತಿರೋದು ಗೊತ್ತಿರೋ ವಿಚಾರವೇ. ಈ ಚಿತ್ರದ ಮೂಲಕ ಸುದೀಪ್ ಮತ್ತೊಮ್ಮೆ ಬಾಲಿವುಡ್ಡಿಗೆ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ಸುದೀಪ್ ಸಿಖಂದರ್ ಪಾತ್ರದಲ್ಲಿ ನಟಿಸುತ್ತಿದ್ದಾರೆಂಬ ವಿಚಾರವೂ ಜಾಹೀರಾಗಿದೆ. ದಬಾಂಗ್ 3ಗೆ ಚಿತ್ರೀಕರಣ ಶುರುವಾಗಿ ಅದರಲ್ಲಿ ಸಲ್ಮಾನ್ ಮತ್ತು ಕಿಚ್ಚ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಸೆಟ್ ಗೆ ನಿರ್ದೇಶಕ ಜೋಗಿ ಪ್ರೇಮ್ ಅವರು ಭೇಟಿ ನೀಡಿದ್ದೇ ಪುಂಖಾನುಪುಂಖವಾಗಿ ರೂಮರುಗಳು ಹಬ್ಬಿಕೊಳ್ಳಲು ಕಾರಣವಾಗಿತ್ತು.

    ದಬಾಂಗ್ 3 ಚಿತ್ರದ ಸೆಟ್ಟಿಗೆ ಭೇಟಿ ನೀಡಿ ಸುದೀಪ್ ಮತ್ತು ಸಲ್ಮಾನ್ ಜೊತೆಗಿರೋ ಕೆಲ ಫೋಟೋಗಳನ್ನು ಜೋಗಿ ಪ್ರೇಮ್ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಲೇ ಕೆಲ ಮಂದಿ ಥರ ಥರದ ಕಥೆಗಳನ್ನು ಹರಿಯ ಬಿಟ್ಟಿದ್ದರು. ಸಲ್ಮಾನ್ ಚಿತ್ರವನ್ನು ಪ್ರೇಮ್ ನಿರ್ದೇಶನ ಮಾಡಿ ಸುದೀಪ್ ಮತ್ತು ಮಂಜು ಅದನ್ನು ನಿರ್ಮಾಣ ಮಾಡಲಿದ್ದಾರೆಂಬ ಗಾಸಿಪ್ ಅಂತೂ ಸಂಚಲನವನ್ನೇ ಸೃಷ್ಟಿಸಿತ್ತು.

    ಹೀಗೆ ವಿನಾ ಕಾರಣ ಥರ ಥರದ ಸುದ್ದಿ ಹರಡುತ್ತಿರೋದನ್ನು ಕಂಡ ಸುದೀಪ್ ಅವರೇ ಖುದ್ದಾಗಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತಾನು ಮತ್ತು ಮಂಜು ಸೇರಿ ಯಾವ ಚಿತ್ರವನ್ನೂ ನಿರ್ಮಾಣ ಮಾಡುತ್ತಿಲ್ಲ. ಅದರಲ್ಲಿ ಸಲ್ಮಾನ್ ಖಾನ್ ಅಭಿನಯಿಸುತ್ತಿರೋದಾಗಲಿ, ಅದನ್ನು ಜೋಗಿ ಪ್ರೇಮ್ ಅದನ್ನು ನಿರ್ದೇಶನ ಮಾಡುತ್ತಲೂ ಇಲ್ಲ. ಪ್ರೇಮ್ ಅವರು ನಮ್ಮ ಸಿನಿಮಾ ಸೆಟ್ಟಿಗೆ ಭೇಟಿ ನೀಡಿದ್ದರಷ್ಟೇ. ಸುಖಾ ಸುಮ್ಮನೆ ಇಂಥಾ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಸುದೀಪ್ ಮನವಿ ಮಾಡಿಕೊಂಡಿದ್ದಾರೆ.

  • `ಜೋಗಿ ಪ್ರೇಮ್’ ಅಲ್ಲ `ಟೋಪಿ ಪ್ರೇಮ್’ ಎಂದ್ರು ನಿರ್ಮಾಪಕ ಶ್ರೀನಿವಾಸ್!

    `ಜೋಗಿ ಪ್ರೇಮ್’ ಅಲ್ಲ `ಟೋಪಿ ಪ್ರೇಮ್’ ಎಂದ್ರು ನಿರ್ಮಾಪಕ ಶ್ರೀನಿವಾಸ್!

    ಬೆಂಗಳೂರು: ಜೋಗಿ, ಕರಿಯಾ, ಎಕ್ಸ್ ಕ್ಯೂಸ್ ಮೀ ಅಂತಹ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪ್ರೇಮ್, ನನ್ನ ಬಳಿ ಸಿನಿಮಾ ಮಾಡುದಾಗಿ ಹೇಳಿ ಮುಂಗಡ ಹಣ ಪಡೆದು ಸಿನಿಮಾ ಮಾಡಿಲ್ಲ ಎಂದು ನಿರ್ಮಾಪಕ ಶ್ರೀನಿವಾಸ್ ಆರೋಪ ಮಾಡಿದ್ದಾರೆ. ಅಲ್ಲದೇ ಅವರು ಜೋಗಿ ಪ್ರೇಮ್ ಅಲ್ಲ ಟ್ರೋಪಿ ಪ್ರೇಮ್ ಎಂದು ಆರೋಪಿಸಿದ್ದಾರೆ.

    ನಗರದಲ್ಲಿ ಇಂದು ನಡೆದ ತಾರಕಾಸುರ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ್, ನಿರ್ದೇಶಕ ಪ್ರೇಮ್ ನನ್ನ ಬಳಿ ಸಿನಿಮಾ ಮಾಡುತ್ತೇನೆ ಎಂದು ಹೇಳಿ 9 ವರ್ಷದ ಇಂದೇ 10 ಲಕ್ಷ ರೂ. ಮುಂಗಡ ಹಣ ಪಡೆದುಕೊಂಡಿದ್ದರು. ಆದರೆ ಇನ್ನು ಹಣ ನೀಡದೆ ಅದೇ ಟೋಪಿ ಹಾಕಿಕೊಂಡು ಓಡಾಡುತ್ತಿದ್ದಾರೆ ಎಂದರು.

    ಜೋಗಿ ಸಿನಿಮಾ ವೇಳೆಯೇ 72 ಲಕ್ಷ ರೂ. ನೀಡಿ ನಾನು ಅವರ ಸಿನಿಮಾದ ತೆಲುಗು ಭಾಷೆಯ ರೈಟ್ಸ್ ಪಡೆದೆ. ಬಳಿಕ ಅವರೊಂದಿಗೆ ಸಿನಿಮಾ ಮಾಡಲು ಹಣ ನೀಡಿದ್ದೆ. ಇತ್ತೀಚಿಗೆ ನನ್ನ ಆರೋಗ್ಯ ಸರಿ ಇಲ್ಲದ ಕಾರಣ ಅವರ ಬಳಿ ಹಣ ಕೇಳಲು ಮನೆಗೆ ತೆರಳಿದ್ದೆ. ಆಗ 2.50 ಲಕ್ಷ ರೂ. ನೀಡಿದರು. ಆದರೆ ಮುಂದಿನ ದಿನಗಳಲ್ಲಿ ಬಾಕಿ ಹಣ ಕೇಳಿದರೆ ನೀಡಿಲ್ಲ. ಅಷ್ಟೇ ಅಲ್ಲದೇ ಹಣ ಕೊಡುತ್ತೇನೆ ಎಂದು ಹೇಳಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿದರು.

    ಪ್ರೇಮ್ ಅವರಿಗೆ ಹಣ ನೀಡುವ ಮೊದಲು ಅವರ ಎಲ್ಲಾ ಸಿನಿಮಾ ನೋಡಿದ್ದೆ. ಆ ಬಳಿಕ ಅವರಿಂದ ಸಿನಿಮಾ ಕಥೆಯನ್ನು ಕೂಡ ಕೇಳದೆ ಹಣ ನೀಡಿದ್ದೆ. ಆದರೆ ಅವರು ಸಿನಿಮಾ ಕೂಡ ಮಾಡಿಲ್ಲ, ಹಣವನ್ನು ವಾಪಸ್ ನೀಡಲ್ಲ. ಈಗ ಅವರ 50 ಕೋಟಿ ರೂ. ಸಿನಿಮಾ ಬಿಡುಗಡೆಯಾಗಿದೆ. ಸಾಮಾನ್ಯವಾಗಿ ನಾನು ಯಾರ ಬಳಿಯೂ ಹಣ ಕೇಳುವುದಿಲ್ಲ. ಆದರೆ ಪ್ರೇಮ್ ಅವರ ಬಳಿ ನನ್ನಿಂದ ಸಿನಿಮಾ ಮಾಡಿಸಲು ಸಾಧ್ಯವಾಗಲಿಲ್ಲ. ಇಂದು ನಾನು ತೊಂದರೆಯಲ್ಲಿ ಇದ್ದೇನೆ ಹಣ ನೀಡಿ ಎಂದರೂ ಅವರು ನನಗೆ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ. ಮತ್ತೆ ಪ್ರೇಮ್ ಮನೆ ಬಳಿ ತೆರಳ ಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಲೈಕ್, ಕಮೆಂಟ್‍ಗಾಗಿ ಇಷ್ಟ ಬಂದಂತೆ ಬರೆಯೋ ವಿಕೃತಕಾಮಿಗಳಿದ್ದಾರೆ: ಪ್ರೇಮ್

    ಲೈಕ್, ಕಮೆಂಟ್‍ಗಾಗಿ ಇಷ್ಟ ಬಂದಂತೆ ಬರೆಯೋ ವಿಕೃತಕಾಮಿಗಳಿದ್ದಾರೆ: ಪ್ರೇಮ್

    – ಅಷ್ಟು ತಾಕತ್ತಿದ್ರೆ ನೀವು ಸಿನಿಮಾ ಮಾಡಿ: ವಿಲನ್ ನಿರ್ದೇಶಕ ಸವಾಲ್

    ಬೆಂಗಳೂರು: `ದಿ ವಿಲನ್’ ಸಿನಿಮಾ ಯಶಸ್ವಿಯಾಗಿ ಮೂಡಿಬಂದಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಲೈಕ್, ಕಮೆಂಟ್ ಪಡೆಯಲು ವಿಕೃತಕಾಮಿಗಳು ತಮ್ಮಗೆ ಇಷ್ಟ ಬಂದಂತೆ ಬರೆಯುತ್ತಾರೆ. ನಿಮಗೆ ಅಷ್ಟು ತಾಕತ್ತಿದ್ರೆ ನೀವು ಸಿನಿಮಾ ಮಾಡಿ ಎಂದು ನಿರ್ದೇಶಕ ಪ್ರೇಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    `ದಿ ವಿಲನ್’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೇಮ್, ಮಾಧ್ಯಮಗಳು ವಿಮರ್ಶೆ ಮಾಡಿ ನಮ್ಮ ಕಷ್ಟ, ಶ್ರಮವನ್ನು ತಿಳಿದು ಬಳಿಕ ನಮ್ಮ ತಪ್ಪುಗಳನ್ನು ತಿಳಿಸುತ್ತವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಅವರೇ ಹೀರೋ ಆಗಿ, ವಿಮರ್ಶೆ ಮಾಡುವ ಬದಲು ವೈಯಕ್ತಿಕವಾಗಿ ಟೀಕೆ ಮಾಡುತ್ತಾರೆ. ಸಿನಿಮಾ ಮಾಡಲು ಬಹಳ ಇಷ್ಟ ಇದೆ. ಆದರೆ ಮಾತು ಮಾತಿಗೂ ರಾಜಮೌಳಿ, ಮುರುಗದಾಸ್ ಎನ್ನುತ್ತೀರಾ. ಕೆಲವರು ತೆಲುಗು, ತಮಿಳು ಜನರಿಗೆ ಹೋಲಿಕೆ ಮಾಡಿ ನೋಡುತ್ತೀರಾ. ಕನ್ನಡ ಬಗ್ಗೆ ಅಭಿಮಾನ ಇಲ್ಲದೇ ಇದ್ದರೆ ನಾನು ಏನು ಮಾಡಲು ಆಗುತ್ತೆ. ಏಕೆ ನಮ್ಮ ಕಷ್ಟ ನಿಮಗೇ ಕಾಣಿಸುವುದಿಲ್ಲವಾ ಎಂದು ಪ್ರಶ್ನೆ ಮಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಇಂದು ಕನ್ನಡ ಸಿನಿಮಾವನ್ನು ಬೇರೆ ರಂಗದಲ್ಲಿ ಗುರುತಿಸವಂತೆ ಮಾಡಲು ಹಗಲು, ರಾತ್ರಿ ನನ್ನಂತಹ ಹಲವರು ದಿನ ನಿತ್ಯ ಕುಟುಂಬ ಬಿಟ್ಟು ಶ್ರಮಿಸುತ್ತಿದ್ದಾರೆ. ನಾಡಿನಲ್ಲಿ ಒಬ್ಬ ರೈತ ಹೇಗೆ ಎಲ್ಲವನ್ನೂ ಶ್ರಮ ವಹಿಸಿ ಮಾಡುತ್ತಾರೋ ಹಾಗೆಯೇ ನಾನು ಕೂಡ ಶ್ರಮಿಸಿದ್ದೇನೆ. ಒಂದೊಮ್ಮೆ ಆ ವರ್ಷ ಬೆಳೆ ಬರಲಿಲ್ಲ ಎಂದರೆ ರೈತ ಮತ್ತೆ ಪ್ರಯತ್ನ ಮಾಡುತ್ತಾರೆ. ನಾನು ಅಷ್ಟೇ. ಆದರೆ ನನ್ನ ಕೆಲಸಕ್ಕೆ ಬೆಲೆ ನೀಡದೇ ಇದ್ದರೂ ಪರವಾಗಿಲ್ಲ. ಆದರೆ ವೈಯಕ್ತಿಕ ಟೀಕೆ ಮಾಡಬೇಡಿ ಎಂದು ಮನವಿ ಮಾಡುತ್ತೇನೆ ಎಂದರು.

    ಪ್ರೇಮ್ ಚಾಲೆಂಜ್
    ನಿಮಗೇ ನನ್ನ ಸಿನಿಮಾ ಇಷ್ಟ ಆಗಿಲ್ಲ ಎಂದರೆ ವಿಮರ್ಶೆ ಮಾಡಿ. ಆದರೆ ಟೀಕೆ ಮಾಡುವ ಮೊದಲು ನಿಮ್ಮ ಹಣದಲ್ಲಿ ಒಂದು ಸಿನಿಮಾ ಮಾಡಲು ಕಥೆ ಸಿದ್ಧಪಡಿಸಿ, ನಾಯಕ ನಟರ ಪಡೆಯಿರಿ. ಬಳಿಕ ನನ್ನನ್ನು ಕೂಲಿ ಮಾಡುವ ವ್ಯಕ್ತಿಯಂತೆ ನಿರ್ದೇಶನ ಮಾಡಲು ಕರೆದು ನೋಡಿ ಬರುತ್ತೇನೆ. ಆಗ ಒಬ್ಬ ಕಲಾವಿದನ ಕಷ್ಟ ತಿಳಿಯುತ್ತದೆ. ಟೀಕೆ ಮಾಡುವವರು ಒಂದು ಸಿನಿಮಾ ಮಾಡಿ ಎಂದು ಸವಾಲು ಹಾಕುತ್ತಿದ್ದೇನೆ ಎಂದು ತಮ್ಮ ವಿರುದ್ಧ ಟೀಕೆ ಮಾಡಿದವರಿಗೆ ಚಾಲೆಂಜ್ ನೀಡಿದರು.

    ನಿಮಗೆ ನಟರ ಬಗ್ಗೆ ಅಷ್ಟು ಅಭಿಮಾನ ಇದ್ದರೆ ನಿಮಗೇ ಬೇಕಾದ ನಟ, ನಟಿ ಬಳಿ ಹೋಗಿ ಪ್ರೇಮ್ ಜೊತೆ ಸಿನಿಮಾ ಬೇಡ ಎಂದು ಹೇಳಿ. ಅವರ ನಿರ್ದೇಶನದಲ್ಲಿ ಮಾಡದಂತೆ ಹೇಳಿ. ನಾನು ಏನೂ ಹೇಳಲ್ಲ. ಏಕೆಂದರೆ ನಿಮ್ಮ ವೈಯಕ್ತಿಕ ಟೀಕೆಗಳು ನನಗೆ ಸಾಕಷ್ಟು ನೋವು ತಂದಿದೆ. ನನ್ನ ಬಳಿ ಸುಮಾರು 9 ವಿಡಿಯೋಗಳು ಇದೆ. ಅವುಗಳನ್ನು ನನ್ನ ವಕೀಲರ ಬಳಿ ನೀಡಿದ್ದೇನೆ. ವಿಡಿಯೋದಲ್ಲಿನ ವ್ಯಕ್ತಿಗಳ ವಿರುದ್ಧ ದೂರು ದಾಖಲು ಮಾಡುತ್ತೇನೆ. ದಯಮಾಡಿ ಅದರಲ್ಲಿ ನಿಮ್ಮ ಮಕ್ಕಳಿದ್ದರೆ ನಮ್ಮನ್ನು ಕ್ಷಮಿಸಿ ಅಮ್ಮ. ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇನೆ. ನಿಮ್ಮ ಟೀಕೆ ನೋಡಿದರೆ ನೀವು ಕುಟುಂಬದಲ್ಲಿ ಬೆಳೆದು ಬಂದಿಲ್ಲ ಎಂದು ಹೇಳುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿಕೃತ ಮನಸ್ಸುಗಳಿವೆ. ಅವುಗಳ ವಿರುದ್ಧ ನ್ಯಾಯಾಲಯಕ್ಕೆ ಬೇಕಾದರೂ ಹೋಗುತ್ತೇನೆ ಎಂದರು.

    ವೈಯಕ್ತಿಕವಾಗಿ ಟೀಕೆ ಮಾಡಿದವರ ವಿರುದ್ಧ ನಾನು ಯುದ್ಧ ಸಾರುತ್ತೇನೆ. ಈ ಕುರಿತು ಫೇಸ್‍ಬುಕ್ ಪೇಜ್ ಆರಂಭಿಸುತ್ತೇನೆ. ಕನ್ನಡ ಯಾವುದೇ ಕಲಾವಿದನ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದು ಬೇಡ ಎಂಬುವುದೇ ನನ್ನ ಮಾತಿನ ಉದ್ದೇಶ. ಯಾವುದೇ ನಿರ್ದೇಶಕ ಶೇ. 100ರಷ್ಟು ಎಲ್ಲರಿಗೂ ಒಪ್ಪಿಸಲು ಸಾಧ್ಯವಿಲ್ಲ. ಶೇ.80 ಜನ ಸಿನಿಮಾ ಬಗ್ಗೆ ಖುಷಿ ವ್ಯಕ್ತಪಡಿಸಿದರೆ, ಉಳಿದ ಶೇ.20 ಮಂದಿ ಮಾತ್ರ ಹೀಗೆ ಇರುತ್ತಾರೆ. ಎಲ್ಲಾ ನಟರು ಒಪ್ಪಿಯೇ ಸಿನಿಮಾ ಮಾಡುತ್ತಾರೆ. ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಒಪ್ಪಿಯೇ ಸಿನಿಮಾ ಮಾಡಿದ್ದಾರೆ. ಎಲ್ಲರೂ ಬೆಂಬಲ ನೀಡಿದ ಕಾರಣಕ್ಕೆ ಸಿನಿಮಾ ಆಗಿದೆ. ಈಗಲೂ ಶಿವರಾಜ್ ಕುಮಾರ್ ಅವರು ಒಂದು ಮಾತು ಹೇಳಿದರೆ ನಾನು ಆ ದೃಶ್ಯ ತೆಗೆಯಲು ಸಿದ್ಧ ಎಂದರು.

    ಇದೇ ವೇಳೆ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕನ್ನಡ ನಾಡಿನ ಜನರಿಗೆ ವಂದನೆ ತಿಳಿಸಲು ಸುದೀಪ್, ಶಿವಣ್ಣ ಅವರೊಂದಿಗೆ ನಾವು ಎಲ್ಲ ಕಡೆ ಹೋಗುತ್ತೇವೆ. ಈ ಕುರಿತು ಎರಡು ದಿನಗಳಲ್ಲಿ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • `ದಿ ವಿಲನ್’ ಸಿನಿಮಾಗೆ ಸೆನ್ಸಾರ್ ಸಂಕಷ್ಟ!

    `ದಿ ವಿಲನ್’ ಸಿನಿಮಾಗೆ ಸೆನ್ಸಾರ್ ಸಂಕಷ್ಟ!

    ಬೆಂಗಳೂರು: ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ಮಲ್ಟಿಸ್ಟಾರ್ ಅಭಿನಯದ `ದಿ ವಿಲನ್’ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ಸಂಕಷ್ಟ ಎದುರಾಗಿದೆ.

    `ದಿ ವಿಲನ್’ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಅಭಿನವ ಚಕ್ರವರ್ತಿ ಸುದೀಪ್ ಒಟ್ಟಿಗೆ ಅಭಿನಯಿಸಿದ್ದಾರೆ. ಸದ್ಯಕ್ಕೆ ಈ ಸಿನಿಮಾ ಸೆನ್ಸಾರ್ ಅಂಗಳದಲ್ಲಿದೆ. ಸೆನ್ಸಾರ್ ಮಂಡಳಿ `ದಿ ವಿಲನ್’ ಸಿನಿಮಾ ವೀಕ್ಷಿಸಿದ ಬಳಿಕ `ಎ’ ಸರ್ಟಿಫಿಕೇಟ್ ಕೊಡಲು ಮುಂದಾಗಿದೆ. ಆದರೆ `ಎ’ ಸರ್ಟಿಫಿಕೇಟ್ ಬಗ್ಗೆ ನಿರ್ದೇಶಕ ಪ್ರೇಮ್ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಮಲ್ಟಿಪ್ಲೆಕ್ಸ್ ನಲ್ಲಿ `ಎ’ ಸರ್ಟಿಫಿಕೇಟ್ ನೀಡುವುದರಿಂದ ಹೆಚ್ಚಿನ ಎಫೆಕ್ಟ್ ಆಗುತ್ತದೆ ಎಂದು ಚಿತ್ರತಂಡದ ಜೊತೆ ಚರ್ಚೆ ನಡೆಸಿದ್ದಾರೆ. ಬಳಿಕ ಸೆನ್ಸಾರ್ ಮಂಡಳಿ `ಯು’ ಸರ್ಟಿಫಿಕೇಟ್ ನೀಡಲು ಮುಂದಾಗಿದ್ದು, `ಯು’ ಸರ್ಟಿಫಿಕೇಟ್ ಬೇಕಾದರೆ ಸಿನಿಮಾದಲ್ಲಿಯ 10 ನಿಮಿಷದ ದೃಶ್ಯವನ್ನು ಕತ್ತರಿಸುವುದಕ್ಕೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

    ಇತ್ತೀಚೆಗಷ್ಟೇ `ದಿ ವಿಲನ್’ ಚಿತ್ರತಂಡ ಅದ್ಧೂರಿಯಾಗಿ ಕಾರ್ಯವನ್ನು ಆಯೋಜನೆ ಮಾಡಿ ಅಲ್ಲಿ ಆಡಿಯೋ ಲಾಂಚ್ ಮಾಡಿತ್ತು. ಈ ಹಿಂದೆಯೂ ಕೂಡ `ದಿ ವಿಲನ್’ ಸಿನಿಮಾದ ಟೀಸರ್ ಬಿಡುಗಡೆಗೊಂಡಾಗ ವಿವಾದವೂ ಹುಟ್ಟಿಕೊಂಡಿತ್ತು. ಅನೇಕ ಕಾರಣಗಳನ್ನ ಮುಂದಿಟ್ಟು ಶಿವಣ್ಣ ಅವರಿಗೆ ಈ ಚಿತ್ರದಲ್ಲಿ ಅವಮಾನ ಮಾಡಲಾಗಿದೆ ಎಂದು ಶಿವರಾಜ್‍ಕುಮಾರ್ ಅಭಿಮಾನಿಗಳು `ದಿ ವಿಲನ್’ ಸಿನಿಮಾ ಬಹಿಷ್ಕಾರ ಹಾಕುತ್ತೇವೆ ಎಂದು ಹಠ ಹಿಡಿದು, ಅನೇಕ ಷರತ್ತುಗಳನ್ನ ಮುಂದಿಟ್ಟಿದ್ದರು.

    ಈ ಬಗ್ಗೆ ನಿರ್ದೇಶಕ ಪ್ರೇಮ್ ಪ್ರತಿಕ್ರಿಯಿಸಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದರು. “ಕಳೆದ ಕೆಲ ದಿನಗಳಿಂದ ಕೆಲ ಮಾಧ್ಯಮಗಳಲ್ಲಿ ಶಿವಣ್ಣ ಅವರ ವಿಚಾರವಾಗಿ ಪ್ರೇಮ್ ಅವರಿಗೆ ಅಸಮಾಧಾನವಿದೆ ಎಂದು ವರದಿಯಾಗಿತ್ತು. ಆದರೆ ಈ ಕುರಿತು ನಿರ್ಧಾರ ಮಾಡಬೇಕಾಗಿದ್ದು ಶಿವಣ್ಣ ಅವರು, ಒಂದೊಮ್ಮೆ ಶಿವಣ್ಣ ಅವರು ಪ್ರಶ್ನೆ ಮಾಡಿದರೆ ಅದಕ್ಕೆ ಉತ್ತರಿಸುತ್ತೇನೆ. ಸಿನಿಮಾ ಬಿಡುಗಡೆಗೂ ಮೊದಲೇ ಅಸಮಾಧಾನ ವ್ಯಕ್ತಪಡಿಸಿದರೆ ನಾನು ಏನು ಮಾಡಲು ಸಾಧ್ಯ. ಆದ್ದರಿಂದ ಸಿನಿಮಾ ಬಂದರೆ ನಿಮಗೆ ಈ ಕುರಿತು ಸಂಪೂರ್ಣ ಮಾಹಿತಿ ಲಭಿಸಲಿದೆ. ತಾಳ್ಮೆವಹಿಸಿ, ಅತೀ ಶೀಘ್ರದಲ್ಲಿ ನಿಮ್ಮ ಮುಂದೇ ಸಿನಿಮಾ ತರುತ್ತೇನೆ ಎಂದು ಹೇಳಿದ್ದರು.

    ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ `ದಿ ವಿಲನ್’ ಸಿನಿಮಾವು ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಇದೊಂದು ಮಲ್ಟಿ ಸ್ಟಾರ್ ಗಳ ಚಿತ್ರವಾಗಿದೆ. ಇದರಲ್ಲಿ ವಿಶೇಷತೆ ಎಂದರೆ ಕಿಚ್ಚ ಮತ್ತು ಶಿವಣ್ಣ ಒಟ್ಟಾಗಿ ಆಭಿನಯಿಸುತ್ತಿರುವುದು. ಈ ಸಿನಿಮಾದಲ್ಲಿ ಬಹುಭಾಷಾ ನಟಿ ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಈ ಚಿತ್ರ ಮೂಡಿಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv