ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಮೇಲಿನ ಅಭಿಮಾನದ ಪರಾಕಾಷ್ಟೆಯಲ್ಲಿ ಕೆಲವೊಮ್ಮೆ ವಿಪರೀತಕ್ಕೆ ತಲುಪುತ್ತಾರೆ. ಯಾವುದೇ ತ್ಯಾಗಕ್ಕೆ ಬೇಕಾದ್ರೂ ಸಿದ್ಧರಿರುತ್ತಾರೆ. ಇದೀಗ ನಿರ್ದೇಶಕ ಜೋಗಿ ಪ್ರೇಮ್ (Director Prem) ಅಭಿಮಾನಿಯೊಬ್ಬ ಅತಿಯಾದ ಅಭಿಮಾನ ತೋರಿಸಿದ್ದಾನೆ. ತನ್ನ ರಕ್ತದಲ್ಲಿ ಪ್ರೇಮ್ ಚಿತ್ರ ಬರೆಸಿಕೊಂಡು ತಾನೆಷ್ಟು ದೊಡ್ಡ ಅಭಿಮಾನಿ ಅನ್ನೋದನ್ನ ಸಾಬೀತು ಮಾಡಲು ಹೊರಟಿದ್ದಾನೆ.

ಇಂದು (ಅ.22) ಪ್ರೇಮ್ ಹುಟ್ಟುಹಬ್ಬ. ಅದಕ್ಕಾಗಿ ಈ ಅಭಿಮಾನಿ ತನ್ನ ರಕ್ತ ತೆಗೆಸಿ ಅದನ್ನೇ ಇಂಕ್ ಆಗಿ ಬಳಸಿ `ಹ್ಯಾಪಿ ಬರ್ತ್‍ಡೇ ಬಾಸ್’ ಎಂದು ಬರೆದು ಚಿತ್ರ ಬಿಡಿಸಿಕೊಂಡಿದ್ದಾನೆ. ಅದನ್ನು ಪ್ರೇಮ್‍ಗೆ ತಲುಪಿಸುವ ಯೋಜನೆ ಇವನದ್ದು. ಆದರೆ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಬುದ್ಧಿಮಾತು ಹೇಳಿರುವ ಪ್ರೇಮ್ “ಮಕ್ಕಳೇ ಇಂಥಹ ತಪ್ಪು ಮಾಡಬೇಡಿ” ಎಂದು ತಮ್ಮದೇ ಗ್ರಾಮೀಣ ಶೈಲಿಯಲ್ಲಿ ಉತ್ತರ ಕೊಟ್ಟಿದ್ದಾರೆ. “ಅಂದಾಭಿಮಾನ ತೋರಸಬೇಡಿ. ನಿಮ್ಮ ಪ್ರೀತಿಯನ್ನು ಈ ರೀತಿ ತೋರಿಸುವುದು ತಪ್ಪು” ಎಂದು ಹೇಳುವ ಮೂಲಕ ಬೇಸರ ಹೊರ ಹಾಕಿ, ತಿಳುವಳಿಕೆ ಹೇಳಿದ್ದಾರೆ. ಇದನ್ನೂ ಓದಿ: ಹುಡ್ಗೀರು ಬ್ರೇಕಪ್ ನೋವನ್ನ ಬೇಗ ಮರೆಯುತ್ತಾರೆ – ಮೌನ ಮುರಿದ ʻಶ್ರೀವಲ್ಲಿʼ
ಕನ್ನಡದ ಸ್ಟಾರ್ ನಿರ್ದೇಶಕ ಪ್ರೇಮ್ ಸಿನಿಮಾ ನಟನಾಗಿಯೂ ಗುರುತಿಸಿಕೊಂಡವರು. ಮುಗ್ಧ ಅಭಿಮಾನಿಗಳು ಮಾಡುವ ಈ ರೀತಿ ವರ್ತನೆ ಅವರನ್ನು ಖುಷಿ ಪಡಿಸೋ ಬದಲು ಮನಸ್ಸಿಗೆ ಹಿಂಸೆ ಕೊಡುತ್ತದೆ. ಇದನ್ನೂ ಓದಿ: `ದೀಪದ ಬೆಳಕಲ್ಲಿ ಬದುಕಿನ ಪ್ರತಿರೂಪ’ – ಪ್ರತಿದಿನವೂ ಹಬ್ಬವೇ



















