Tag: director

  • ಜಯದೇವ ಹೃದ್ರೋಗ ಆಸ್ಪತ್ರೆಗೆ ಸಂದರ್ಶನದ ಮೂಲಕ ನಿರ್ದೇಶಕರ ಆಯ್ಕೆ

    ಜಯದೇವ ಹೃದ್ರೋಗ ಆಸ್ಪತ್ರೆಗೆ ಸಂದರ್ಶನದ ಮೂಲಕ ನಿರ್ದೇಶಕರ ಆಯ್ಕೆ

    ಬೆಂಗಳೂರು: ಜಯದೇವ ಹೃದ್ರೋಗ ಆಸ್ಪತ್ರೆಗೆ (Jayadeva Hospital) ನಿರ್ದೇಶಕರ (Director) ಆಯ್ಕೆ ಸಂಬಂಧ 20 ವರ್ಷಗಳ ಬಳಿಕ ವೈದ್ಯರ ಸಂದರ್ಶನ ನಡೆಯಿತು. 11 ವೈದ್ಯರನ್ನ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದ ಸಮಿತಿ ಸಂದರ್ಶನ ನಡೆಸಿತು.

    ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಂದರ್ಶನ ನಡೆಯಿತು. 11 ಜನ ವೈದ್ಯರ ಪೈಕಿ 10 ಜನ ವೈದ್ಯರು sಸಂದರ್ಶನದಲ್ಲಿ ಭಾಗಿಯಾಗಿದ್ದರು. ಅಂತಿಮವಾಗಿ ಸಿಎಂ ನೇತೃತ್ವದ ಸಮಿತಿ ನಿರ್ದೇಶಕರ ಆಯ್ಕೆ ಮಾಡಿದೆ. ನಿರ್ದೇಶಕರ ನೇಮಕ ಸಂಬಂಧ ಕೋರ್ಟ್ನಲ್ಲಿ ಕೇಸ್ ಇರುವುದರಿಂದ ಆಯ್ಕೆಯನ್ನ ಸರ್ಕಾರ ಘೋಷಣೆ ಮಾಡಿಲ್ಲ. ಇದನ್ನೂ ಓದಿ: ಮಾಂಸಾಹಾರ ಸೇವಿಸದೇ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಹೋಗಲಿ: ‘ಕೈ’ ಯಾತ್ರೆಗೆ ಯತ್ನಾಳ್ ಲೇವಡಿ

    ಸೆಪ್ಟೆಂಬರ್ 10ಕ್ಕೆ ಮುಚ್ಚಿದ ಲಕೋಟೆಯಲ್ಲಿ ಸರ್ಕಾರ ಕೋರ್ಟ್‌ಗೆ ವರದಿ ಸಲ್ಲಿಕೆ ಮಾಡಲಿದೆ. ಹೈಕೋರ್ಟ್ ಸೂಚನೆ ಮೇರೆಗೆ ಸರ್ಕಾರ ನಿರ್ದೇಶಕರ ಆಯ್ಕೆ ಘೋಷಣೆ ಮಾಡಲಿದೆ. ಮೈಸೂರು ಜಯದೇವದ ಡಾ.ದಿನೇಶ್.ಬಿ ಆಯ್ಕೆ ಬಹುತೇಕ ಅಂತಿಮ ಎನ್ನಲಾಗುತ್ತಿದೆ. ಇದನ್ನೂ ಓದಿ: Tumakuru | ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಕೆಎನ್ ರಾಜಣ್ಣ ಅವಿರೋಧ ಆಯ್ಕೆ

  • ಕಾರವಾರ | ಖಿನ್ನತೆಯಿಂದ ಬಳಲುತಿದ್ದ ವ್ಯಕ್ತಿಗೆ ಹೊಸ ಬಟ್ಟೆ ಕೊಡಿಸಿ ಮಾನವೀಯತೆ ಮೆರೆದಿದ್ದ ಗುರುಪ್ರಸಾದ್!

    ಕಾರವಾರ | ಖಿನ್ನತೆಯಿಂದ ಬಳಲುತಿದ್ದ ವ್ಯಕ್ತಿಗೆ ಹೊಸ ಬಟ್ಟೆ ಕೊಡಿಸಿ ಮಾನವೀಯತೆ ಮೆರೆದಿದ್ದ ಗುರುಪ್ರಸಾದ್!

    ಕಾರವಾರ: ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ (Guruprasad) ಆತ್ಮಹತ್ಯೆಗೆ ಶರಣಾಗಿದ್ದು, ಈ ಹಿಂದೆ ಅವರು ಮಾಡಿದ್ದ ಮಾನವೀಯ ಕಾರ್ಯವೊಂದು ಜನರ ಮೆಚ್ಚುಗೆಗೆ ಕಾರಣವಾಗಿದೆ.

    ಕಾರವಾರದಲ್ಲಿ (Karwar) ಈ ಹಿಂದೆ ಸಿನಿಮಾ ಚಿತ್ರೀಕರಣದ ವೇಳೆ ಮಾನಸಿಕ ಖಿನ್ನತೆಗೊಳಗಾಗಿ (Depression) ಬೀದಿ ಸುತ್ತುತ್ತಿದ್ದ ವ್ಯಕ್ತಿಯೊಬ್ಬರಿಗೆ ಅವರು ಧೈರ್ಯ ತುಂಬಿದ್ದರು. ಅಲ್ಲದೇ ಆತನಿಗೆ ಕ್ಷೌರ ಮಾಡಿಸಿ ಹೊಸ ಬಟ್ಟೆ ಕೊಡಿಸಿ ಮಾನವೀಯತೆ ಮೆರೆದಿದ್ದರು.

    2016ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣಕ್ಕೆ ಚಿತ್ರದ ಶೂಟಿಂಗ್‌ಗೆ ಅವರು ಬಂದಿದ್ದರು. ಈ ವೇಳೆ ಗೋಕರ್ಣದಲ್ಲಿ ತಿರುಗಾಡುತ್ತಿದ್ದ ಮುತ್ತಣ್ಣ ಎಂಬ ವ್ಯಕ್ತಿ ಖಿನ್ನತೆಗೊಳಗಾಗಿ, ಉದ್ದನೆಯ ಕೂದಲು ಬಿಟ್ಟು ತಿರುಗುತ್ತಿದ್ದರು. ಅವರನ್ನು ನೋಡಿ ಮರುಗಿದ್ದ ಗುರುಪ್ರಸಾದ್‌, ಬಳಿಗೆ ಕರೆಸಿಕೊಂಡು ಆತನಿಗೆ ಕಟಿಂಗ್ ಮಾಡಿಸಿ, ಹೊಸ ಬಟ್ಟೆ ತೊಡಿಸಿದ್ದರು.

    ಚಿತ್ರೀಕರಣದ ವೇಳೆ ಆತನನ್ನು ಕೆಲಸಕ್ಕೆ ಸಹ ಸೇರಿಸಿಕೊಂಡಿದ್ದರು. ಈ ಮೂಲಕ ಆತನಿಗೆ ಧೈರ್ಯ ತುಂಬಿ ದುಡಿಮೆಯ ಹಾದಿ ತೋರಿಸಿದ್ದರು‌.

  • ಮಲಯಾಳಂ ನಿರ್ದೇಶಕ ವೇಣುಗೋಪನ್ ನಿಧನ

    ಮಲಯಾಳಂ ನಿರ್ದೇಶಕ ವೇಣುಗೋಪನ್ ನಿಧನ

    ಲಯಾಳನಲ್ಲಿ (Malyalam) ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ವೇಣುಗೋಪನ್ (Venugopan) ಇಂದು (ಜೂನ್ 21) ಬೆಳಗ್ಗೆ ನಿಧನರಾಗಿದ್ದಾರೆ. ಅವರು ಸಾವನ್ನಪ್ಪಿದ ಸುದ್ದಿ ಕೇಳಿ ಫ್ಯಾನ್ಸ್‌ಗೆ ಆಘಾತವಾಗಿದೆ. ಇದನ್ನೂ ಓದಿ:ದರ್ಶನ್ ಪ್ರಕರಣದ ಬಗ್ಗೆ ಶ್ರೀಲೀಲಾ ಹೇಳಿದ್ದೇನು?

    ಕೇರಳದ ಚೇರ್ತಲದಲ್ಲಿರುವ ತಮ್ಮ ನಿವಾಸದಲ್ಲಿ ವೇಣುಗೋಪನ್ ವಿಧಿವಶರಾಗಿದ್ದಾರೆ. ಅವರಿಗೆ ಸಾವಿನ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಸದ್ಯ ಅವರ ಸಾವಿನ ಸುದ್ದಿಯನ್ನು ನಟ ಅನೂಪ್ ಮೆನನ್ ಸೋಷಿಯಲ್ ಮೀಡಿಯಾದಲ್ಲಿ ಖಚಿತಪಡಿಸಿದ್ದಾರೆ. 67ನೇ ವಯಸ್ಸಿನ ವೇಣುಗೋಪನ್‌ ನಿಧನಕ್ಕೆ ಮಾಲಿವುಡ್ ನಟ, ನಟಿಯರು ಸಂತಾಪ ಸೂಚಿಸಿದ್ದಾರೆ.

    ಮಲಯಾಳಂ ನಟ ಜಯರಾಮ್ ನಟನೆಯ ‘ಶಾರ್ಜಾ ಟು ಶಾರ್ಜಾ’ ಸಿನಿಮಾಗೆ ವೇಣು ನಿರ್ದೇಶನ ಮಾಡಿದ್ದರು. ಸಾಕಷ್ಟು ಸಿನಿಮಾಗಳಿಗೆ ಡೈರೆಕ್ಷನ್ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

  • ಹೀರೋ ಆದ ಡೈರೆಕ್ಟರ್ ಸ್ಮೈಲ್ ಶ್ರೀನು

    ಹೀರೋ ಆದ ಡೈರೆಕ್ಟರ್ ಸ್ಮೈಲ್ ಶ್ರೀನು

    ಶಸ್ವಿ ಚಿತ್ರಗಳಾದ  ಓ ಮೈ ಲವ್, 18 ಟು 25  ಬಳ್ಳಾರಿ ದರ್ಬಾರ್ ಅಲ್ಲದೆ ತೆಲುಗಿನಲ್ಲೂ ಪ್ರತಿಭಾವಂತ  ನಿರ್ದೇಶಕನಾಗಿ  ಗುರುತಿಸಿಕೊಂಡಿರುವ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು) (Smile Srinu) ಇದೀಗ ಹೀರೋ ಆಗುತ್ತಿದ್ದಾರೆ. ಈ ಕುರಿತಂತೆ ಮಾತನಾಡಿದ ಶ್ರೀನು,  ‘ನಿರ್ದೇಶಕರು ಕಥೆ ತುಂಬಾ ಅದ್ಭುತವಾಗಿ ಮಾಡಿಕೊಂಡಿದ್ದಾರೆ. ಎಲ್ಲಾ ಪಾತ್ರಗಳ ಜೊತೆ ನಾಯಕನ ಪಾತ್ರ ತುಂಬಾ ಚೆನ್ನಾಗಿದೆ. ನಟನಾಗಿ ಈ ಒಂದು ಪಾತ್ರ ಮಾಡಿದರೆ ಸಾಕು ಅನ್ನುವ ಹಾಗೆ ಈ ನಾಯಕನ ಪಾತ್ರ ಇದೆ. ಒಬ್ಬ ನಟನಾಗಿ ನಿರೂಪಿಸಲು ಏನೆಲ್ಲಾ ಭಾವನೆಗಳು ಬೇಕೋ ಅದೆಲ್ಲವೂ ಈ ಚಿತ್ರದಲ್ಲಿದೆ. ಹಾಗಾಗಿ ನಟಿಸಲು ಒಪ್ಪಿಕೊಂಡೆ’ ಅಂತಾರೆ.

    ಶ್ರೀಧರ್ ಪೂರ್ವಜಿತ್ ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು. ಆ ಚಿತ್ರದ ಹೆಸರು ಮಂಡೇಲಾ (Mandela). ಇದೊಂದು ವಿಭಿನ್ನ  ಪ್ರಯೋಗದ  ಚಿತ್ರ ಎಂದೂ ಹೇಳಬಹುದು.  ಸಿನಿಮಾ ಎಂದಮೇಲೆ ಹಲವಾರು ಪಾತ್ರಗಳಿರಬೇಕಲ್ಲವೆ, ಈ ಚಿತ್ರದಲ್ಲೂ ಒಂದಷ್ಟು ಪಾತ್ರಗಳಿವೆ. ಆದರೆ ಪ್ರಮುಖವಾಗಿ ಮೂರು ಪಾತ್ರಗಳ ಮೂಲಕ ನಿರ್ದೇಶಕರು ಕಥೆಯನ್ನು ಹೇಳಹೊರಟಿದ್ದಾರೆ. 1980- 90ರ ದಶಕದಲ್ಲಿನ ಸೂಕ್ಷ್ಮ ಹಾಗೂ ಸುಂದರವಾದ ಭಾವನೆಗಳ  ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದೆ. ಶ್ರೀಲಕ್ಷ್ಮಿ ನರಸಿಂಹ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ನಾಯಕನಾಗಿ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು) ನಟಿಸುತ್ತಿದ್ದಾರೆ.

    ಈ ಸಿನಿಮಾ ಹೊರತುಪಡಿಸಿ ಇನ್ನೂ  ಎರಡು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಲು ಒಪ್ಪಿಕೊಂಡಿದ್ದಾರಂತೆ ಸ್ಮೈಲ್ ಶ್ರೀನು.  ಹಾಗೆ ಎರೆಡು ಚಿತ್ರಗಳನ್ನು  ನಿರ್ದೇಶನ ಕೂಡ ಮಾಡಲಿದ್ದಾರಂತೆ. ಮುಂದಿನ ದಿನಗಳಲ್ಲಿ ಈ ಎಲ್ಲ ವಿವರಣೆ ನೀಡುತ್ತೇನೆ ಎಂದು ಸ್ಮೈಲ್ ಮಾಡುತ್ತಾರೆ ನಟ ,ನಿರ್ದೇಶಕ ನಾರಿ ಶ್ರೀನಿವಾಸ್.

    ಚಿತ್ರದಲ್ಲಿ  ಇಬ್ಬರು ನಾಯಕಿಯರು ನಟಿಸುತ್ತಿದ್ದು, ಅವರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಕನ್ನಡದಲ್ಲಿ ಈಗಾಗಲೇ ಬಾ ನಲ್ಲೆ ಮಧುಚಂದ್ರಕೆ, ಬೆಳದಿಂಗಳ ಬಾಲೆಯಂಥ ಚಿತ್ರಗಳು ಬಂದು ಹೋಗಿವೆ. ಆಗಿನಿಂದಲೂ ಹೊಸಥರದ ಕಂಟೆಂಟ್ ಇರುವ ಕಥೆಗಳನ್ನು ನಮ್ಮ ಜನ  ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಅದೇ ರೀತಿ ನಮ್ಮ ಹೊಸ ಈ ಪ್ರಯತ್ನವನ್ನೂ ಪ್ರೇಕ್ಷಕರು ಕೈ ಹಿಡಿಯುತ್ತಾರೆ ಎಂಬ ಭರವಸೆಯನ್ನು ವ್ಯಕ್ತ ಪಡಿಸುತ್ತಾರೆ ಚಿತ್ರದ ನಾಯಕ ಸ್ಮೈಲ್ ಶ್ರೀನು.  ಕನ್ನಡ, ತೆಲುಗು, ತಮಿಳು ಸೇರಿ ಮೂರು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಪಕ್ಕಾ ಕಂಟೆಂಟ್ ಬೇಸ್ ಸಿನಿಮಾ ಇದಾಗಲಿದೆ.  ಬರುವ ಜುಲೈ 2 ಅಥವಾ 3ನೇ ವಾರ ಈ  ಚಿತ್ರ ಪ್ರಾರಂಭವಾಗಲಿದೆ.

    ನಮಗೆ ಫೇಮಸ್ ಆಗಿರೋ ಮ್ಯೂಸಿಕ್ ಡೈರೆಕ್ಟರ್ ಬೇಡ. ಫೇಮಸ್ ಆಗೋವಂಥ ಮ್ಯೂಸಿಕ್ ಕಂಪೋಜ್  ಮಾಡುವ ಸಂಗೀತ ನಿರ್ದೇಶಕರನ್ನ ಹುಡುಕುತ್ತಿದ್ದೇವೆ.  ಸಂಬಂಧಗಳ‌ ವ್ಯಾಲ್ಯೂ ಚೆನ್ನಾಗಿರಬೇಕು. ‌‌ಇಲ್ಲಿ ಯಾರೂ ಶತ್ರುಗಳಿಲ್ಲ ಅಂತ ಹೇಳ ಹೊರಟಿದ್ದೇವೆ. ನಾವು ತಪ್ಪು ಮಾಡಿದಾಗ ಪ್ರಪಂಚ ನಮ್ಮನ್ನು ಹೇಗೆ ನೋಡುತ್ತೆ  ಅಂತ ಸಮಯದಲ್ಲಿ ಸಮಾಜ ನಮ್ಮ ಜೊತೆ ಹೇಗೆ ನೆಡೆದುಕೊಳ್ಳುತ್ತೆ ಅನ್ನುವುದರ ಜೊತೆಗೆ ಇನ್ನೂ ಹಲವಾರು ಸೂಕ್ಷ್ಮ ವಿಷಯಗಳನ್ನು ಈ ಚಿತ್ರದಲ್ಲಿ ಹೇಳಲಿದ್ದೇವೆಂದು ಅಂತಾರೆ ನಿರ್ದೇಶಕ ಶ್ರೀಧರ್ ಪೂರ್ವಜಿತ್. ಮಂಡೇಲಾದ ಸ್ಕ್ರಿಪ್ಟ್ ಅಂತಿಮ ಹಂತದಲ್ಲಿದೆ. ಹಂತ ಹಂತವಾಗಿ ಎಲ್ಲವನ್ನೂ ತಿಳಿಸುತ್ತೇವೆ’ ಎನ್ನುತ್ತಾರೆ ನಿರ್ದೇಶಕ ಶ್ರೀಧರ್ ಪೂರ್ವಜಿತ್.

  • ರೂಪೇಶ್ ಶೆಟ್ಟಿಯ ‘ಅಧಿಪತ್ರ’ ಚಿತ್ರದ ಆಡಿಯೋ ರೈಟ್ಸ್  ಲಹರಿ ಆಡಿಯೋ ಪಾಲು

    ರೂಪೇಶ್ ಶೆಟ್ಟಿಯ ‘ಅಧಿಪತ್ರ’ ಚಿತ್ರದ ಆಡಿಯೋ ರೈಟ್ಸ್ ಲಹರಿ ಆಡಿಯೋ ಪಾಲು

    ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ (RupeshShetty) ನಟನೆಯ‌ ಬಹು ನಿರೀಕ್ಷಿತ ಸಿನಿಮಾ ಅಧಿಪತ್ರ (Adhipatra). ಈಗಾಗಲೇ ಮೇಕಿಂಗ್ ಹಾಗೂ ಕಂಟೆಂಟ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಆಡಿಯೋ ಹಕ್ಕು ಪ್ರತಿಷ್ಠಿತ ಆಡಿಯೋ‌ ಸಂಸ್ಥೆ ಲಹರಿ (Lahari Audio) ಖರೀದಿ ಮಾಡಿದೆ. 2024 ಬಹು ನಿರೀಕ್ಷಿತ ಸಿನಿಮಾ ಸಾಲಿನಲ್ಲಿ ಅಧಿಪತ್ರ ಕೂಡ ಒಂದು.

    ಅಧಿಪತ್ರ ಸಿನಿಮಾದ ಶೂಟಿಂಗ್ ಹಾಗೂ ಮೇಕಿಂಗ್ ನಿಂದಲೂ ಎಲ್ಲರ ಗಮನ ಸೆಳದಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ತೆರೆಗೆ ಬರಲು ರೆಡಿಯಾಗ್ತಿರುವ ಅಧಿಪತ್ರ ಸಿನಿಮಾದ ಟೀಸರ್ ಬಿಡುಗಡೆಗೆ ತಯಾರಿ ನಡೆದಿದೆ. ಇದೇ ತಿಂಗಳ 10ರಂದು ಲಹರಿ ಆಡಿಯೋದಲ್ಲಿ ಚಿತ್ರದ ಮೊದಲ ಝಲಕ್ ಹೊರಬೀಳಲಿದೆ.

    ಚಿತ್ರಕ್ಕೆ ಚಯನ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ  ಚಿತ್ರ. ಆಡ್ ಇಂಡಸ್ಟ್ರಿ ನಲ್ಲಿ ಕ್ರಿಯೇಟಿವ್ ಆಡ್ಸ್ ಮೂಲಕ ಗಮನ ಸೆಳೆದಿದ ಚಯನ್ ಶೆಟ್ಟಿ ಈಗ ಅಧಿಪತ್ರ ಆಕ್ಷನ್  ಕಟ್ ಹೇಳಿದ್ದಾರೆ , ರೂಪೇಶ್ ಗೆ ಜೋಡಿಯಾಗಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾಹ್ನವಿ ಸಾಥ್ ಕೊಟ್ಟಿದ್ದಾರೆ. ಕಾಂತಾರ ಖ್ಯಾತಿಯ ಪ್ರಕಾಶ್ ತುಮಿನಾಡು, ರಘು ಪಾಂಡೇಶ್ವರ್, ಎಂಕೆ‌ ಮಠ, ದೀಪಕ್ ರೈ, ಅನಿಲ್ ಉಪ್ಪಾಲ್, ಕಾರ್ತಿಕ್ ಭಟ್, ಪ್ರಶಾಂತ್ ತಾರಾಬಳಗದಲ್ಲಿದ್ದಾರೆ.

     

    ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಅಧಿಪತ್ರ ಸಿನಿಮಾವನ್ನು . ಕೆ ಆರ್ ಸಿನಿಕಂಬೈನ್ಸ್ ಬ್ಯಾನರ್‌ನಡಿ‌ ದಿವ್ಯಾ ನಾರಾಯಣ್,  ಕುಲದೀಪ್ ರಾಘವ್ ಲಕ್ಷ್ಮೇ ಗೌಡ ‌ಬಂಡವಾಳ ಹೂಡಿದ್ದು, ಕಾರ್ತಿಕ್ ಶೆಟ್ಟಿ ಹಾಗೂ ಸತೀಶ್ ಶೆಟ್ಟಿ ಸಹ ನಿರ್ಮಾಣದಲ್ಲಿ ಹೆಗಲು ಕೊಟ್ಟಿದ್ದಾರೆ.

  • ‘ಹೊಸತರ’ ಮೂಲಕ ನಿರ್ದೇಶಕನಾಗಿ ಅಫ್ಜಲ್ ಎಂಟ್ರಿ

    ‘ಹೊಸತರ’ ಮೂಲಕ ನಿರ್ದೇಶಕನಾಗಿ ಅಫ್ಜಲ್ ಎಂಟ್ರಿ

    ಟನಾಗಿ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ, ಪತ್ರಕರ್ತನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಿರುವ ಅಫ್ಜಲ್ (Afzal), ಹೊಸತರ ಚಿತ್ರದ ಮೂಲಕ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಕೂಡ ಅಫ್ಜಲ್ ಅವರೆ ಬರೆದಿದ್ದಾರೆ. ಇತ್ತೀಚಿಗೆ ಚಿತ್ರದ ಶೀರ್ಷಿಕೆ ಅನಾವರಣಾವಾಗಿದ್ದು, ‘ಹೊಸತರ’ (Hosatara) ಎಂದು ಹೆಸರಿಡಲಾಗಿದೆ.

    ಜೈವಿಜಯ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಹೊಸತರ ಚಿತ್ರದಲ್ಲಿ ಹೊಸ ತರಹದ ಕಥೆ ಇದೆ. ಸಿನಿಮಾದಲ್ಲೊಂದು ಸಿನಿಮಾ ಇದೆ. ಲವ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲಾ ಅಂಶಗಳು ಇದೆ. ಕಾಮಿಡಿ ಸ್ವಲ್ಪ ಹೆಚ್ಚಾಗಿದೆ.  ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಮೂರು ಹಾಡುಗಳು ಹಾಗೂ ಎರಡು ಸಾಹಸ ಸನ್ನಿವೇಶಗಳಿದೆ. ರಾಜು ಎಮ್ಮಿಗನೂರು ಸಂಗೀತ ನಿರ್ದೇಶನ,   ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಮಾಡಲಿದ್ದಾರೆ.

    ರಾಜೀವ್ ಗನೇಸನ್ ಛಾಯಾಗ್ರಹಣ,  ಆಂಥೋನಿ ಪಯಾನೋ(ಕೆನಡಾ) ಹಿನ್ನೆಲೆ ಸಂಗೀತ ಹಾಗೂ ಬಾಬು ಶಿವಪುರ ಅವರ ಸಂಕಲನವಿರುವ ಈ ಚಿತ್ರಕ್ಕೆ ಅಮೇರಿಕಾದ ಜೆ ಹೆಚ್ ಜೆ ಸ್ಟುಡಿಯೋ ವಿ ಎಫ್ ಎಕ್ಸ್ ಮಾಡಲಿದೆ.  ಹೆಸರಾಂತ ತಂತ್ರಜ್ಞರು ಈ ಚಿತ್ರದಲ್ಲಿ ಭಾಗಿಯಾಗುತ್ತಿದ್ದು, ಉತ್ತಮ ಗುಣಮಟ್ಟದಲ್ಲಿ ಚಿತ್ರ ಮೂಡಿ ಬರಲಿದೆ. ತಾರಾಬಳಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಿವುದಾಗಿ ನಿರ್ದೇಶಕ ಅಫ್ಜಲ್ ತಿಳಿಸಿದ್ದಾರೆ.

  • ಜಗತ್ತಿನ ಬೆಸ್ಟ್ ಡೈರೆಕ್ಟರ್ ಉಪೇಂದ್ರ : ಹೊಗಳಿದ ನಿರ್ದೇಶಕ ಪ್ರಶಾಂತ್ ನೀಲ್

    ಜಗತ್ತಿನ ಬೆಸ್ಟ್ ಡೈರೆಕ್ಟರ್ ಉಪೇಂದ್ರ : ಹೊಗಳಿದ ನಿರ್ದೇಶಕ ಪ್ರಶಾಂತ್ ನೀಲ್

    ಪ್ಪಿ ಗ್ರೆಟಸ್ಟ್ ಡೈರೆಕ್ಟರ್ ಇನ್ ದಿಸ್ ವರ್ಲ್ಡ್’ ಇದೇ ಮೊದಲ ಬಾರಿಗೆ ಕೆಜಿಎಫ್ ಸಾರಥಿ ಪ್ರಶಾಂತ್ ನೀಲ್ (Prashant Neel) ಈ ಸಾಲಿಗೆ ಧ್ವನಿಯಾಗಿದ್ದಾರೆ. ಇದುವರೆಗೆ ಎಲ್ಲಿಯೂ ಅವರು ಉಪೇಂದ್ರ (Upendra) ಬಗ್ಗೆ ಮಾತಾಡಿರಲಿಲ್ಲ. ಈಗ ಅದನ್ನು ಸುಳ್ಳು ಮಾಡಿದ್ದಾರೆ. ಉಪ್ಪಿ ಗ್ರೇಟ್ ಡೈರೆಕ್ಟರ್ ಎನ್ನುವುದಕ್ಕೆ ನೀಲ್ ಕೊಟ್ಟ ಕಾರಣ ಏನು? ಅದ್ಯಾವ ಸಿನಿಮಾಗಳನ್ನು ವಿಶ್ವ ದರ್ಜೆಗೆ ಏರಿಸಿದರು? ರಿಯಲ್‌ಸ್ಟಾರ್‌ಗೆ ಬಹುಪರಾಕ್ ಹಾಕಿದ್ದೇಕೆ ? ಆ ಮೈಂಡ್ ಬ್ಲೋಯಿಂಗ್ ಸ್ಟೋರಿ ಇಲ್ಲಿದೆ.

    ಉಪ್ಪಿ…ರಿಯಲ್ ಸ್ಟಾರ್…ಅದ್ಯಾವ ಗಳಿಗೆಯಲ್ಲಿ ಇವರು ಓಂ ಸಿನಿಮಾಕ್ಕೆ ಓಂಕಾರ ಹಾಕಿದರೋ…ಅದ್ಯಾವ ಕ್ಷಣದಲ್ಲಿ ಎ ಸಿನಿಮಾಕ್ಕೆ ನಾಯಕರಾದರೊ…ಅದ್ಯಾವ ಅಮೃತ ಗಳಿಗೆಯಲ್ಲಿ ಉಪೇಂದ್ರ ಟೈಟಲ್ ಇಟ್ಟು ವಿಶ್ವವನ್ನು ಬೆಚ್ಚಿಬೀಳಿಸಿದರೋ…ಅಲ್ಲಿಂದ ಇದುವರೆಗೆ ಉಪ್ಪಿ ದರ್ಬಾರ್ ನಿಂತಿಲ್ಲ. ಯರ‍್ಯಾರೋ ಬಂದರು ಹೋದರು. ಆದರೆ ಉಪ್ಪಿ ಮಾತ್ರ ಅಂದಿಗೂ ಇಂದಿಗೂ…ಮುಂದೆಂದಿಗೂ ಅದೇ ಚಿನ್ನದ ಕುದುರೆ ಮೇಲೆ ಸವಾರಿ ಮಾಡುತ್ತಿರುತ್ತಾರೆ. ಕಾರಣ ಅವರ ಸಿನಿಮಾ ಬರೀ ಸಿನಿಮಾ ಅಗಿರಲಿಲ್ಲ. ಅವೆಲ್ಲ ನಮ್ಮ ಬದುಕಿಗೆ ಕನ್ನಡಿ. ಮನಸಿನ ದ್ವಂದ್ವಕ್ಕೆ ಮುನ್ನುಡಿ. ದಟ್ ಈಸ್ ಪವರ್ ಆಫ್ ಉಪೇಂದ್ರ. ಪ್ರಶಾಂತ್ ನೀಲ್ ಕೂಡ ಇದೇ ಮಾತನ್ನು ಹೇಳಿದ್ದಾರೆ. ವಿಶ್ವದ ಬೆಸ್ಟ್ ಡೈರೆಕ್ಟರ್ ಈಸ್ ಉಪೇಂದ್ರ.

    ಉಪ್ಪಿ ಸಿನಿಮಾಗಳನ್ನು ನೋಡುತ್ತಾ ಬೆಳೆದ ನೀಲ್ ಇಂದು ಪ್ಯಾನ್ ಇಂಡಿಯಾ ಡೈರೆಕ್ಟರ್. ಆದರೆ ಅದಕ್ಕೆಲ್ಲ ಸ್ಪೂರ್ತಿ ಉಪ್ಪಿ. ರ‍್ಲೆ ನನ್ಮಗ, ಶ್ ಹಾಗೂ ಓಂ. ಈ ಮೂರೂ ಸಿನಿಮಾಗಳನ್ನು ಜನರು ಈಗಲೂ ಫಸ್ಟ್ ಟೈಮ್ ನೋಡಿದಂತೆ ಕಣ್ಣಗಲಿಸತ್ತಾರೆ. ರ‍್ಲೆ ನನ್ಮಗ ಸೈಡಿಗಿಡಿ. ಶ್ ಹಾಗೂ ಓಂ ಮಾತ್ರ ಯಾವತ್ತಿಗೂ ಅಚ್ಚರಿಗೊಳಿಸುತ್ತವೆ. ವಿಶ್ವದ ಸಾವಿರಾರು ಸಿನಿಮಾ ನೋಡಿರುವ ನೀಲ್ ಕೂಡ ಇದನ್ನು ಒಪ್ಪುತ್ತಾರೆ. ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಇದನ್ನು ಉಚ್ಛರಿಸಿದ್ದಾರೆ.

    ಕನ್ನಡ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನೀಲ್ ಈ ಮಾತು ಹೇಳಿದ್ದಾರೆ. ಓಹೋ…ಎಷ್ಟಿದ್ದರೂ ಕನ್ನಡ ಮಾಧ್ಯಮ ? ಅದಕ್ಕಾಗಿ ಉಪ್ಪಿಯನ್ನು ನೆನಪು ಮಾಡಿಕೊಂಡಿದ್ದಾರೆ. ಪರಭಾಷೆಗೆ ಇಂಟರ್‌ವ್ಯೂವ್ ಕೊಟ್ಟಿದ್ದರೆ ಇನ್ಯಾರೊ ನಿರ್ದೇಶಕನ ಹೆಸರನ್ನು ಹೇಳುತ್ತಿದ್ದರೇನೊ ? ಹೀಗಂತ ಜನರು ಅಂದುಕೊಳ್ಳುತ್ತಿದ್ದರು. ಅಷ್ಟರಲ್ಲಿ ಸ್ವಯಂ ಪ್ರೇರಿತರಾಗಿ ಗುಡುಗಿದರು ನೀಲ್. ಇದು ನೋಡಿ ಉಪ್ಪಿ ತಾಕತ್ತು ಹಾಗೂ ನಿರ್ದೇಶನದ ದೌಲತ್ತು. ಇಡೀ ವಿಶ್ವದಲ್ಲಿ ಉಪ್ಪಿಯನ್ನು ಮೀರಿಸುವ ಪ್ರತಿಭಾವಂತರಿದ್ದಾರೆ, ಬುದ್ಧಿವಂತರಿದ್ದಾರೆ, ನಿರ್ದೇಶಕರೂ ಇದ್ದಾರೆ. ಆದರೆ `ಉಪೇಂದ್ರ’ ಎನ್ನುವ ಚಿತ್ರವನ್ನು ಯಾರಿಗೂ ಹೆಣೆಯಲು ಸಾಧ್ಯ ಇಲ್ಲ. ಅದೊಂದೇ ಮಾಸ್ಟರ್ ಪೀಸ್. ಬರೀ ಮೂರು ಸಿನಿಮಾ ಹೆಸರು ಹೇಳಿದ ನೀಲ್, ಉಪೇಂದ್ರ ಸಿನಿಮಾ ಯಾಕೆ ನೆನಪಿಸಿಕೊಳ್ಳಲಿಲ್ಲ ? ಹೀಗಂತ ಅಂದುಕೊಳ್ಳುವಾಗಲೇ ನೀಲ್ ಬಿಟ್ಟರಲ್ಲ ಪಾಶು ಪತಾಸ್ತ್ರ.

    ಕೆಜಿಎಫ್ ಸಾರಥಿ ಇಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮೆರೆಯುತ್ತಿದ್ದಾರೆ. ಆದರೆ ಅವರಿಗೆ ಹುರುಪು ತುಂಬಿದ್ದು ಮಾತ್ರ ಒನ್ ಆನ್ ಓನ್ಲಿ ಉಪ್ಪಿ. ಈಗ ಉಪೇಂದ್ರ ಕೂಡ ಗ್ಲೋಬಲ್ ಸಿನಿಮಾ ಸವಾರಿ ಹೊರಟಿದ್ದಾರೆ. `ಯುಐ’…ಇನ್ನೇನು ತಿಂಗಳಲ್ಲಿ ವಿಶ್ವಾದ್ಯಂತ ದಿಬ್ಬಣ ಹೊರಡಲಿದೆ. `ನನ್ನ ಮುಂದೆ ಬಂದವರು ಎಲ್ಲೆಲ್ಲೋ ಹೋಗಿ ಪಟಾಕಿ ಹಚ್ಚುತ್ತಿದ್ದಾರೆ. ನಾನಿಲ್ಲಿ ಬರೀ ಕಡ್ಡಿ ಗೀರುತ್ತಾ ಕೂಡಬೇಕಾ?’ ಬಹುಶಃ ಹೀಗಂದುಕೊಂಡೇ ಮೈ ಕೊಡವಿದ್ದಾರೆ. ಯುಐ ಅಬ್ಬರ, ಆರ್ಭಟ, ಉಪ್ಪಿಯನ್ನು ಇನ್ಯಾವ ರತ್ನ ಖಚಿತ ಸಿಂಹಾಸನದಲ್ಲಿ ರಾರಾಜಿಸುತ್ತದೋ? ಬುದ್ಧಿವಂತರಿಗೂ ಗೊತ್ತಿಲ್ಲ.

  • ‘ಕಾಂತಾರ’ದ ಫಾರೆಸ್ಟ್ ಗಾರ್ಡ್ ರವಿ ಈಗ ಡೈರೆಕ್ಟರ್

    ‘ಕಾಂತಾರ’ದ ಫಾರೆಸ್ಟ್ ಗಾರ್ಡ್ ರವಿ ಈಗ ಡೈರೆಕ್ಟರ್

    ವಿ ಬಸ್ರೂರ್ ಬಹುಬೇಡಿಕೆ ಸಂಗೀತ ನಿರ್ದೇಶಕರಲ್ಲಿ ಒಬ್ಬರು.. ಕೆಜಿಎಫ್  ಸರಣಿ ಸಿನಿಮಾ ಬಹುದೊಡ್ಡ ಯಶಸ್ಸಿನ ಬಳಿಕ ಬಾಲಿವುಡ್, ಟಾಲಿವುಡ್ ಗಳಿಗೂ ಪಯಣಿಸಿರುವ ಅವರು ಸ್ಟಾರ್ ಹೀರೋ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಇವರ ಗರಡಿಯಿಂದ ಬಂದ ಸಾಕಷ್ಟು ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡುತ್ತಿದ್ದಾರೆ. ಇದೀಗ ರವಿ ಬಸ್ರೂರ್ ಅಖಾಡದಿಂದ ಯುವ ಸಿನಿಮೋತ್ಸಾಹಿಗಳು ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಿರ್ದೇಶಕರಾಗಿ (Director) ಸೂಚನ್ ಶೆಟ್ಟಿ (Suchan Shetty) ಹೊಸ ಪಯಣ ಪ್ರಾರಂಭಿಸಿದ್ದಾರೆ.

    ಸೂಚನ್ ಶೆಟ್ಟಿ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಸೂಚನ್ ಅವರ ಚೊಚ್ಚಲ ಪ್ರಯತ್ನದ ಸಿನಿಮಾಗೆ ಗಾಡ್ ಪ್ರಾಮಿಸ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ರವಿ ಬಸ್ರೂರ್ ಸಾರಥ್ಯದ ಕಟಕ, ಗಿರ್ಮಿಟ್, ಕಡಲ್ ಸಿನಿಮಾಗಳಿಗೆ ಬಹರಗಾರನಾಗಿ, ಸಹ ನಿರ್ದೇಶಕನಾಗಿ, ನಟನಾಗಿ ಕೆಲಸ ಮಾಡಿರುವ ಸೂಚನ್ ಈ ಅನುಭವದೊಂದಿಗೆ ನಿರ್ದೇಶನದ ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ಯಾನ್ ಇಂಡಿಯಾ ಕಾಂತಾರ (Kantara) ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ (Forest Guard) ರವಿ ಪಾತ್ರದಲ್ಲಿ, ರವಿ ಬಸ್ರೂರ್ ಅವರ ಕಡಲ್ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿರುವ ಸೂಚನ್ ಶೆಟ್ಟಿ ಗಾಡ್ ಪ್ರಾಮಿಸ್ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ.

    ನಮ್ಮ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವಂತಹ ಸಿನಿಮಾ ಮಾಡುವ ಕನಸಿನೊಂದಿಗೆ 2016ರಲ್ಲಿ ಶುರುವಾದ ಮೈತ್ರಿ ಪ್ರೊಡಕ್ಷನ್ ಸೂಚನ್ ಶೆಟ್ಟಿ ಚೊಚ್ಚಲ ಕನಸಿಗೆ ಜೊತೆಯಾಗಿದೆ. ಗಾಡ್ ಪ್ರಾಮಿಸ್ ಸಿನಿಮಾವನ್ನು ಮೈತ್ರಿ ಪ್ರೊಡಕ್ಷನ್ ನಡಿ ಮೈತ್ರಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕರಾವಳಿಯ ಭೂಗತ ಕಥೆ ಹಫ್ತಾ ಸಿನಿಮಾವನ್ನು ನಿರ್ಮಿಸಿದ್ದ ಈ ಪ್ರೊಡಕ್ಷನ್ ಎರಡನೇ ಕಾಣಿಕೆ ಗಾಡ್ ಪ್ರಾಮಿಸ್..ಹಳ್ಳಿ ಸೊಗಡನ್ನು ಬಿಂಬಿಸುವ ಟೈಟಲ್ ಪೋಸ್ಟರ್ ಕುತೂಹಲವನ್ನು ಹೆಚ್ಚು ಮಾಡಿದೆ.

     

    ಗಾಡ್ ಪ್ರಾಮಿಸ್ ನೈಜ ಘಟನೆಯ ಸ್ಫೂರ್ತಿ ಪಡೆದ ಫ್ಯಾಮಿಲಿ ಹಾಗೂ ಕಾಮಿಡಿ ಕಥಾಹಂದರ ಹೊಂದಿದೆ. ಕಬ್ಜ-ಸಲಾರ್ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿರುವ ಎಜೆ ಶೆಟ್ಟಿ ಹಾಗೂ ಭುವನ್ ಗೌಡ ಜೊತೆ ಕೆಲಸ ಮಾಡಿರುವ ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ರವಿ ಬಸ್ರೂರ್ ಜೊತೆ ಸಲಾರ್, ಕೆಜಿಎಫ್ ಸರಣಿ ಚಿತ್ರಗಳಿಗೆ ಕೆಲಸ ಮಾಡಿರುವ 400ಕ್ಕೂ ಮ್ಯೂಸಿಕ್ ಪ್ರೊಡ್ಯೂಸರ್ ಆಗಿ ಭರತ್ ಮಧುಸೂದನನ್  ಸಂಗೀತ ನಿರ್ದೇಶನ, ಲವ್ ಮಾಕ್ಟೇಲ್-2, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ವಿಕ್ರಾಂತ್ ರೋಣ ಸೇರಿದಂತೆ  ಐವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಆನ್ ಲೈನ್ ಎಡಿಟರ್ ಆಗಿ ಕೆಲಸ ಮಾಡಿರುವ, ಖ್ಯಾತ ಸಂಕಲನಕಾರರಾದ ಕೆಎಂ ಪ್ರಕಾಶ್, ರುತ್ವಿಕ್. ಪ್ರತಿಕ್ ಶೆಟ್ಟಿ ಬಳಗದಲ್ಲಿ ದುಡಿದಿರುವ ನವೀನ್ ಶೆಟ್ಟಿ ಈ ಚಿತ್ರದ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಯಶಸ್ವಿ ತಂತ್ರಜ್ಞನರ ಸಿನಿಮಾವಾಗಿರುವ ಗಾಡ್ ಪ್ರಾಮಿಸ್ ತಂಡದಲ್ಲಿ ಯಾವೆಲ್ಲಾ ಕಲಾಬಳಗದ ಇರಲಿದೆ ಅನ್ನೋದು ಚಿತ್ರತಂಡ ಶೀಘ್ರದಲ್ಲೇ ರಿವೀಲ್ ಮಾಡಲಿದೆ. ಮಾರ್ಚ್ ನಿಂದ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

  • ಜಯದೇವ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ.ರವೀಂದ್ರನಾಥ್ ಆಯ್ಕೆ

    ಜಯದೇವ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ.ರವೀಂದ್ರನಾಥ್ ಆಯ್ಕೆ

    ಬೆಂಗಳೂರು: ಜಯದೇವ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ.ರವೀಂದ್ರನಾಥ್ ಅವರು ಆಯ್ಕೆಯಾಗಿದ್ದಾರೆ.

    69 ವಯಸ್ಸಾಗಿರುವ ಡಾ.ರವೀಂದ್ರನಾಥ್ ಅವರು ಜಯದೇವ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿದ್ದರು. ಇದೀಗ ಇಂದು ಜಯದೇವ ಆಸ್ಪತ್ರೆ (Jayadeva Hospital) ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ (Dr C.N Manjunath) ಅವಧಿ ಮುಕ್ತಾಯ ಹಿನ್ನೆಲೆ ಅವರ ಸ್ಥಾನಕ್ಕೆ ಡಾ.ರವೀಂದ್ರನಾಥ್ (Dr Ravindranath) ಅವರನ್ನು ನೇಮಿಸಲಾಗಿದೆ.

    ಡಾ.ಸಿ.ಎನ್ ಮಂಜುನಾಥ್ (Dr CN Manjunath ಅವರ ಸೇವಾವಧಿ ಇಂದಿಗೆ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಮಂಗಳವಾರ ಜಯದೇವ ಆಸ್ಪತ್ರೆ (Jayadeva Hospital) ಸಿಬ್ಬಂದಿ ಹೃದಯಪೂರ್ವಕ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿದ್ದರು. ಈ ವಿಶೇಷ ಕಾರ್ಯಕ್ರಮದಲ್ಲಿ ನೂರಾರು ಸಿಬ್ಬಂದಿ ಮಂಜುನಾಥ್ ಅವರಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಆರತಿ ಬೆಳಗಿ ಗೌರವಿಸಿದ್ದರು.

    ಬೀಳ್ಕೊಡುಗೆ ಸಮಾರಂಭದಲ್ಲಿ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿದ್ದ ಡಾ.ಸಿ.ಎನ್‌ ಮಂಜುನಾಥ್‌, ಜಯದೇವ ಹೃದ್ರೋಗ ಆಸ್ಪತ್ರೆ ಜನರ ಆಸ್ಪತ್ರೆಯಾಗಿದೆ. ನಾವು ಪಂಚತಾರಾ ಖಾಸಗಿ ಆಸ್ಪತ್ರೆಯಂತೆ ಮಾಡುವ ಗುರಿ ಇತ್ತು. ಅದು 100 ಕ್ಕೆ100 ಆಗಿದೆ. ಇಲ್ಲಿ ಪ್ರತಿಯೋಬ್ಬರಿಗೂ ಸೇವಾ ಮನೋಭಾವ ಬೆಳಸಲಾಗಿದೆ. ಸರ್ಕಾರದ ಸಹಕಾರ, ದಾನಿಗಳ ಸಹಕಾರದಿಂದ ಇವತ್ತು ಈ ಮಟ್ಟಕ್ಕೆ ಆಸ್ಪತ್ರೆ ಬೆಳೆದಿದೆ. ನಾನು ಇಲ್ಲಿಗೆ ಬಂದಾಗ 300 ಹಾಸಿಗೆ ಇತ್ತು, ಈಗ 2,000 ಸಾವಿರ ಹಾಸಿಗೆಗಳಿವೆ. 3,500 ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. 16 ವರ್ಷಗಳಲ್ಲಿ 75 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದೇನೆ. 8 ಲಕ್ಷ ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇನೆ. ಇಷ್ಟು ವರ್ಷಗಳ ಸೇವೆ ಸಂತೋಷ ತಂದಿದೆ ತಮ್ಮ ನೆನಪುಗಳನ್ನ ಹಂಚಿಕೊಂಡಿದ್ದರು.