Tag: Direction

  • ರಣವೀರ್ ಸಿಂಗ್ ಚಿತ್ರಕ್ಕೆ ಹನುಮಾನ್ ಚಿತ್ರ ಖ್ಯಾತಿಯ ಡೈರೆಕ್ಟರ್ ಎಂಟ್ರಿ

    ರಣವೀರ್ ಸಿಂಗ್ ಚಿತ್ರಕ್ಕೆ ಹನುಮಾನ್ ಚಿತ್ರ ಖ್ಯಾತಿಯ ಡೈರೆಕ್ಟರ್ ಎಂಟ್ರಿ

    ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ (Ranveer Singh) ನಟನೆಯ ಹೊಸ ಚಿತ್ರಕ್ಕೆ ಹನುಮಾನ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕೆ ಆ ಚಿತ್ರಕ್ಕೆ ರಾಕ್ಷಸ  (Rakshasa)ಎನ್ನುವ ಹೆಸರನ್ನೂ ಇಡಲಾಗಿದೆಯಂತೆ. ಹೆಚ್ಚಿನ ಮಾಹಿತಿ ಇಲ್ಲದೇ ಇದ್ದರೂ, ಮುಂದಿನ ದಿನಗಳಲ್ಲಿ ಇದು ಬಹಿರಂಗವಾಗಬಹುದು ಎನ್ನುತ್ತಿದೆ ಬಿಟೌನ್.

    ಈ ನಡುವೆ  ಹನುಮಾನ್ 2 ಚಿತ್ರದ ಕುರಿತಂತೆ ಮತ್ತೊಂದು ಹೊಸ ಅಪ್ ಡೇಟ್ ನೀಡಿದ್ದಾರೆ ನಿರ್ದೇಶಕ ಪ್ರಶಾಂತ್. ಅಂಜನಾದ್ರಿ 2.0 ಹೆಸರಿನ ವಿಡಿಯೋವೊಂದನ್ನು ಶೇರ್ ಮಾಡಿರುವ ನಿರ್ದೇಶಕರು ಅಂಜನಾದ್ರಿ ಗ್ರಾಮದ ಹಿನ್ನೆಲೆಯನ್ನು ತೋರಿಸುವಂತಹ ವಿವರಗಳನ್ನು ಈ ವಿಡಿಯೋದಲ್ಲಿ ನೀಡಿದ್ದಾರೆ.

    ಈ ಹಿಂದೆ ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಐತಿಹಾಸಿಕ ಕ್ಷಣದಲ್ಲಿ ಇಡೀ ದೇಶವೇ ಸಾಕ್ಷಿಯಾಗಿತ್ತು. ಈ ಶುಭ ದಿನದಂದು, ಹನುಮಾನ್ ಸಿನಿಮಾ ನಿರ್ದೇಶಕ ಪ್ರಶಾಂತ್ ವರ್ಮಾ (Prashant Verma) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ತಮ್ಮ ಮುಂಬರುವ ಚಿತ್ರ ‘ಜೈ ಹನುಮಾನ್’ (Hanuman 2) ಸಿನಿಮಾಗಾಗಿ ತಯಾರಿಯನ್ನು ಪ್ರಾರಂಭಿಸಿದ್ದಾರೆ. ಅದರ ಭಾಗವಾಗಿ ಇಂದು ಜೈ ಹನುಮಾನ್ ಸಿನಿಮಾದ ಸ್ಟ್ರಿಪ್ಟ್ ಪೂಜೆ ನೆರವೇರಿಸಿದ್ದಾರೆ.

    ಪ್ರಶಾಂತ್ ವರ್ಮಾ ಅವರ ಸೂಪರ್ ಹೀರೋ ಚಿತ್ರ ಹನುಮಾನ್ ಜನವರಿ 12 ರಂದು ಬಿಡುಗಡೆಯಾಯಿತು. ತೇಜ ಸಜ್ಜ (Teja Sajja), ವರಲಕ್ಷ್ಮಿ ಶರತ್‌ಕುಮಾರ್, ಅಮೃತ ಅಯ್ಯರ್ ಮತ್ತು ವಿನಯ್ ರೈ ನಟಿಸಿರುವ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಕ್ಸಸ್ ಬೆನ್ನಲ್ಲೇ ಜೈ ಹನುಮಾನ್ ಸಿನಿಮಾದ ಕೆಲಸ ಶುರುವಾಗಿವೆ.

     

    ಹನುಮಾನ ಸಿನಿಮಾ ಮೂಲಕ ಪ್ರಶಾಂತ್ ವರ್ಮಾ ರಾಷ್ಟ್ರವ್ಯಾಪಿ ಜನಪ್ರಿಯರಾಗಿದ್ದಾರೆ. ಸೃಜನಶೀಲ ನಿರ್ದೇಶಕರು ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್ (PVCU) ನಿಂದ ಮತ್ತೊಂದು ಮಹಾಕಾವ್ಯ ಸಾಹಸವನ್ನು ಪ್ರೇಕ್ಷಕರ ಎದುರು ತರುತ್ತಿದ್ದಾರೆ. ಅದರ ಭಾಗವಾಗಿ ಜೈ ಹನುಮಾನ್ ಸಿನಿಮಾ ಘೋಷಿಸಿದ್ದು, ದೊಡ್ಡ ಮಟ್ಟದಲ್ಲಿ ಮೂಡಿಬರಲಿರುವ ಸೀಕ್ವೆಲ್‌ಗಾಗಿ ನಿರ್ದೇಶಕರು ಈಗಾಗಲೇ ಸ್ಕ್ರಿಪ್ಟ್ ನ್ನು ಸಿದ್ಧಪಡಿಸಿದ್ದಾರೆ.

  • ನಿರ್ದೇಶನಕ್ಕೆ ಮುಂದಾದ ಲೇಡಿ ಸೂಪರ್ ಸ್ಟಾರ್

    ನಿರ್ದೇಶನಕ್ಕೆ ಮುಂದಾದ ಲೇಡಿ ಸೂಪರ್ ಸ್ಟಾರ್

    ಕ್ಷಿಣದ ಲೇಡಿ ಸೂಪರ್ ಸ್ಟಾರ್ ನಯನತಾರಾ ನಟನೆಗೆ ಕೊಂಚ ವಿರಾಮ ತೆಗೆದುಕೊಂಡು ನಿರ್ದೇಶನಕ್ಕೆ (Directio) ಹಾರಲಿದ್ದಾರೆ. ನಿರ್ದೇಶನ ಅವರ ಕನಸಂತೆ. ಹಾಗಾಗಿ ಶೀಘ್ರದಲ್ಲೇ ಆ ಕನಸನ್ನು ನನಸು ಮಾಡಿಕೊಳ್ಳಲಿದ್ದಾರೆ ಸ್ಟಾರ್ ನಟಿ. ಸಿನಿಮಾ ಯಾವುದು? ಕಥೆ ಏನು? ಯಾವುದನ್ನೂ ಇನ್ನೂ ಬಿಟ್ಟುಕೊಡದ ನಯನತಾರಾ, ಮುಂದಿನ ದಿನಗಳಲ್ಲಿ ಹಲವು ವಿಷಯಗಳು ಬಹಿರಂಗಗೊಳ್ಳಲಿವೆ.

    ಈ ನಡುವೆ ನಯನತಾರಾ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಖ್ಯಾತ ನಟ ಕಮಲ್ ಹಾಸನ್ ಅವರ ಹೊಸ ಚಿತ್ರಕ್ಕೆ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಇದೇ ಸಿನಿಮಾಗೆ ತ್ರಿಷಾ ನಾಯಕಿ ಎಂದು ಹೇಳಲಾಗಿತ್ತು. ತ್ರಿಷಾ ಬದಲಾಗಿ ಇದೀಗ ನಯನತಾರಾ ಹೆಸರು ಕೇಳಿ ಬಂದಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಈ ಜೋಡಿಯನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಈಗಲೇ ಕಾತರದಿಂದ ಕಾಯುವಂತಾಗಿದೆ.

    ಭಾರತೀಯ ಸಿನಿಮಾ ರಂಗದ ಇಬ್ಬರು ದಂತಕಥೆಗಳು ಬರೋಬ್ಬರಿ 36 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ. ನಿರ್ದೇಶಕ ಮಣಿರತ್ನಂ (Mani Ratnam) ಮತ್ತು ಕಮಲ್ ಹಾಸನ್ (Kamal Haasan) ‘ನಾಯಗನ್’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆನಂತರ ಈ ಜೋಡಿ ಮತ್ತೆ ಒಟ್ಟಾಗಿ ಕೆಲಸ ಮಾಡಲೇ ಇಲ್ಲ. ಇದೀಗ ಮೂರುವರೆ ದಶಕದ ಬಳಿಕ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಕಮಲ್ ಹಾಸನ್ ನಟನೆಯ 234ನೇ ಚಿತ್ರಕ್ಕೆ ಮಣಿರತ್ನಂ ನಿರ್ದೇಶನ ಮಾಡುತ್ತಿದ್ದಾರೆ.

     

    ಈ ಸಿನಿಮಾ ಶುರುವಾಗುವುದಕ್ಕೆ ಇನ್ನೂ ಹಲವು ತಿಂಗಳು ಬೇಕು. ಅದಕ್ಕೂ ಮುನ್ನ ಅನೇಕ ವಿಷಯಗಳು ಹೊರ ಬಂದಿವೆ. ಈ ಸಿನಿಮಾದಲ್ಲಿ ಸ್ಟಾರ್ ನಟರೇ ದಂಡೇ ಇರಲಿದ್ದು, ತ್ರಿಷಾ (Trisha) ನಾಯಕಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು, ಇದೀಗ ನಯನತಾರಾ ಹೆಸರು ಸೇರ್ಪಡೆ ಆಗಿದೆ. ಅಲ್ಲದೇ, ದುಲ್ಕರ್ ಸಲ್ಮಾನ್ (Dulquer Salmaan) ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರಂತೆ.

  • ಸಿನಿಮಾ ನಿರ್ದೇಶನ ಮಾಡುವ ಆಸೆ ಇದೆ: ಶಿವರಾಜ್ ಕುಮಾರ್

    ಸಿನಿಮಾ ನಿರ್ದೇಶನ ಮಾಡುವ ಆಸೆ ಇದೆ: ಶಿವರಾಜ್ ಕುಮಾರ್

    ಪ್ಪುಗಾಗಿ ನಾನು ಸಿನಿಮಾ ಮಾಡಬೇಕು ಎಂದು ಹಲವಾರು ಹೇಳಿದ್ದರು ಶಿವರಾಜ್ ಕುಮಾರ್ (Shivaraj Kumar). ಅಲ್ಲದೇ, ಅಪ್ಪು, ರಾಘವೇಂದ್ರ ರಾಜಕುಮಾರ್ ಮತ್ತು ತಾವು ಒಟ್ಟಿಗೆ ನಟಿಸಬೇಕು ಎನ್ನುವ ಆಸೆಯನ್ನೂ ವ್ಯಕ್ತ ಪಡಿಸಿದ್ದರು. ಈ ಎರಡೂ ಕನಸುಗಳು ಈಡೇರಲಿಲ್ಲ. ಇದೀಗ ಶಿವರಾಜ್ ಕುಮಾರ್ ಮತ್ತೊಂದು ಮನದ ಬಯಕೆಯನ್ನು ಹೊರ ಹಾಕಿದ್ದಾರೆ. ತಾವು ಸಿನಿಮಾವೊಂದನ್ನು ನಿರ್ದೇಶನ (Direction) ಮಾಡಬೇಕು ಎಂದಿದ್ದಾರೆ.

    ಈಗಾಗಲೇ ತಾವೊಂದು ಕಥೆಯನ್ನೂ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಅದನ್ನು ಈಡೇರಿಸಿಕೊಳ್ಳುವ ಮಾತುಗಳನ್ನೂ ಹೇಳಿದ್ದಾರೆ. ಈ ಕನಸು ನನಸಾಗತ್ತೋ ಇಲ್ಲವೋ ಗೊತ್ತಿಲ್ಲ. ನಿರ್ದೇಶನವನ್ನು ಮಾಡಬೇಕು ಎನ್ನುವ ತುಡಿತ ಇದ್ದೇ ಇದೆ ಎಂದಿದ್ದಾರೆ. ಅಪ್ಪು ಮತ್ತು ಅನಂತ್ ನಾಗ್ ಅವರಿಗೆ ಸಿನಿಮಾ ಮಾಡಬೇಕು ಎಂದು ಈ ಹಿಂದೆಯೂ ಶಿವಣ್ಣ ಹೇಳಿದ್ದರು.

     

    ತಾವು ಯಾವ ರೀತಿಯ ಮತ್ತು ಎಂತಹ ಕಥೆಯನ್ನು ಸಿನಿಮಾ ಮಾಡಬೇಕು ಎನ್ನುವ ಸ್ಪಷ್ಟತೆ ಇದೆಯಂತೆ. ಧನುಷ್ ರೀತಿಯ ಕಲಾವಿದರು ತಮ್ಮ ಕಥೆಗೆ ಒಪ್ಪುತ್ತಾರೆ ಎಂದೆಲ್ಲ ಅವರು ಹೇಳಿಕೊಂಡಿದ್ದಾರೆ. ಶಿವಣ್ಣರ ಆಸೆ ಆದಷ್ಟು ಬೇಗ ಈಡೇರಲಿ ಎನ್ನುವುದು ಅವರ ಅಭಿಮಾನಿಗಳ ಆಸೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದುಲ್ಕರ್ ಸಲ್ಮಾನ್ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ಡೈರೆಕ್ಟರ್

    ದುಲ್ಕರ್ ಸಲ್ಮಾನ್ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ಡೈರೆಕ್ಟರ್

    ನ್ನಡದ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಈಗಾಗಲೇ ಮಲಯಾಳಂ (Malayalam) ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಕೂಡ ಮುಗಿದಿದೆ. ಇದೀಗ ಮತ್ತೊಂದು ಅಚ್ಚರಿ ಸುದ್ದಿಯೊಂದು ಮಲಯಾಳಂ ಚಿತ್ರೋದ್ಯಮದಿಂದ ಬಂದಿದ್ದು, ದುಲ್ಕರ್ ಸಲ್ಮಾನ್ ಗಾಗಿ ರಾಜ್ ಶೆಟ್ಟಿ ಚಿತ್ರವೊಂದನ್ನು ನಿರ್ದೇಶನ (Direction) ಮಾಡಲಿದ್ದಾರೆ.

    ಈ ಅಚ್ಚರಿಯ ಸುದ್ದಿಯನ್ನು ಹಂಚಿಕೊಂಡಿದ್ದು ಸ್ವತಃ ದುಲ್ಕರ್ ಸಲ್ಮಾನ್ (Dulquer Salmaan). ಅವರದ್ದೇ ನಿರ್ಮಾಣ ಸಂಸ್ಥೆಯಿಂದ ಈ ಚಿತ್ರ ಮೂಡಿ ಬರಲಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಅಲ್ಲಿಗೆ ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರರಂಗಕ್ಕೆ ನಿರ್ದೇಶಕರಾಗಿ ಹಾರಲಿದ್ದಾರೆ ಎನ್ನುವುದು ಲೇಟೆಸ್ಟ್ ಮಾಹಿತಿ.  ಇದನ್ನೂ ಓದಿ: ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ತಾತ್ಕಾಲಿಕ ಸ್ಥಗಿತ- ಪ್ರವಾಸಿಗರಿಗೆ ನಿರಾಸೆ

    ರಾಜ್ ಬಿ ಶೆಟ್ಟಿ (Raj B Shetty)ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ದುಲ್ಕರ್ ಮಾತನಾಡಿದ್ದು, ಉಳಿದಂತೆ ಯಾವ ವಿಚಾರವನ್ನೂ ಅವರು ಹಂಚಿಕೊಂಡಿಲ್ಲ. ಬಟ್, ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರೋದ್ಯಮಕ್ಕೆ ನಿರ್ದೇಶಕರಾಗಿ ಬರುವುದು ಪಕ್ಕಾ ಎನ್ನುವುದನ್ನು ಖಚಿತ ಪಡಿಸಿದ್ದಾರೆ.

     

    ಸದ್ಯ ಶೆಟ್ಟರು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಟೋಬಿ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕು. ಅದರ ನಡುವೆ ರಮ್ಯಾಗಾಗಿ ಒಂದು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶಿವರಾಜ್ ಕುಮಾರ್ ಜೊತೆ ಒಂದು ಸಿನಿಮಾ ಮಾಡಬೇಕಿದೆ. ಈ ಮಧ್ಯ ಯಾವಾಗ ನಿರ್ದೇಶನ ಮಾಡುತ್ತಾರೋ ಕಾದು ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಪ್ಪುಗಾಗಿ ನಾನು ಸಿನಿಮಾ ಮಾಡಬೇಕಿತ್ತು: ಭಾವುಕರಾದ ಉಪೇಂದ್ರ

    ಅಪ್ಪುಗಾಗಿ ನಾನು ಸಿನಿಮಾ ಮಾಡಬೇಕಿತ್ತು: ಭಾವುಕರಾದ ಉಪೇಂದ್ರ

    ಪುನೀತ್ ರಾಜಕುಮಾರ್ (Puneeth Rajkumar) ಗಾಗಿ ಸಿನಿಮಾವೊಂದನ್ನು ನಿರ್ದೇಶನ (Direction) ಮಾಡುವ ಕನಸು ಕಂಡಿದ್ದರಂತೆ ನಟ ಉಪೇಂದ್ರ (Upendra). ಈ ವಿಷಯವನ್ನು ಹಲವಾರು ಬಾರಿ ಅಪ್ಪು ಜೊತೆ ಅವರು ಮಾತನಾಡಿದ್ದರಂತೆ. ನಟನೆ, ಸಿನಿಮಾ ನಿರ್ದೇಶನ ಹೀಗೆ ತಮ್ಮಲ್ಲಿ ತಾವು ಕಳೆದು ಹೋಗಿದ್ದ ಉಪೇಂದ್ರರಿಗೆ ಕೊನೆಗೂ ಅಪ್ಪುಗಾಗಿ ಸಿನಿಮಾ ಮಾಡಲಿಲ್ಲವಂತೆ. ಇಂಥದ್ದೊಂದು ನೋವಿನ ಸಂಗತಿಯನ್ನು ಉಪ್ಪಿ ಹಂಚಿಕೊಂಡಿದ್ದಾರೆ.

    ನಿನ್ನೆ ಶಿಡ್ಲಘಟ್ಟದಲ್ಲಿ ನಡೆದ ಕಬ್ಜ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಉಪ್ಪಿ, ‘ಆದಷ್ಟು ಬೇಗ ಶಿವಣ್ಣನ (Shivraj Kumar) ಜೊತೆ ಸಿನಿಮಾ ಮಾಡುತ್ತೇನೆ. ಅಪ್ಪುಗೆ ಆ್ಯಕ್ಷನ್-ಕಟ್ ಹೇಳುವ ಆಸೆ ಇತ್ತು. ಅದು ಇಡೇರಲಿಲ್ಲ. ಕಬ್ಜ ಬಗ್ಗೆ ಹೇಳುವುದಾದರೆ, ಇಂದಿನ ಹೀರೋ ಸಂಗೀತ ನಿರ್ದೇಶಕ ರವಿ ಬಸ್ರೂರ್. ಈ ಚಿತ್ರದಲ್ಲಿ ಅವರು ಮಾಸ್, ಕ್ಲಾಸಿಕ್ ಹಾಗೂ ಮೆಲೋಡಿ ಗೀತೆಗಳನ್ನು ಕೊಟ್ಟಿದ್ದಾರೆ. ಚಂದ್ರು ಈ ಸಿನಿಮಾ ಮೂಲಕ ಪ್ರತಿಯೊಬ್ಬರ ಹೃದಯ ಕಬ್ಜ ಮಾಡಲಿದ್ದಾರೆ’ ಎಂದರು.

    ಪಕ್ಕದಲ್ಲಿಯೇ ಇದ್ದ ಶಿವರಾಜ್ ಕುಮಾರ್ ಅವರತ್ತ ನೋಡಿ ಉಪೇಂದ್ರ, ‘ಶಿವಣ್ಣ ಓಂ ಸಿನಿಮಾ ಪಾರ್ಟ್ 2 ಮಾಡೋಣವಾ?’ ಎಂದರು. ಉಪ್ಪಿ ಮಾತು ಕೇಳಿದ ಶಿವಣ್ಣ ಉತ್ಸಾಹದಿಂದಲೇ ‘ಆಗಲಿ’ ಎಂದು ಒಪ್ಪಿಗೆ ಸೂಚಿಸಿದರು. ‘ಈಗಾಗಲೇ ನಿರ್ಮಾಪಕರು ರೆಡಿ ಇದ್ದಾರೆ. ನಿರ್ದೇಶಕ ಆಗಿ ನಾನಿದ್ದೇನೆ. ನೀವು ಯಾವಾಗ ಡೇಟ್ ಕೊಡ್ತೀರೋ ಅವತ್ತಿನಿಂದ ಹೊಸ ಸಿನಿಮಾ ಶುರು ಮಾಡೋಣ’ ಎಂದು ಎಲ್ಲರ ಸಂಭ್ರಮಕ್ಕೆ ಕಾರಣರಾದರು ಉಪೇಂದ್ರ.

    ಉಪೇಂದ್ರರ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, ‘ನಾನು ಉಪೇಂದ್ರ ಅಭಿಮಾನಿ.  ಅವರು ಓಂ ಸಿನಿಮಾ ಮೂಲಕ ಇಡೀ ಭಾರತಕ್ಕೆ ರೌಡಿಸಂ ಚಿತ್ರ ನೀಡಿದವರು. ಅವರ ಜೊತೆ ಕೆಲಸ ಮಾಡುವುದೇ ಖುಷಿ. ಆರ್.ಚಂದ್ರು ಕೂಡ ಅದ್ಭುತವಾದ ಸಿನಿಮಾಗಳನ್ನು ನೀಡುತ್ತಾ ಬರುತ್ತಿದ್ದಾರೆ’ ಎಂದು ತಂಡಕ್ಕೆ ಶುಭ ಹಾರೈಸಿ ‘ಓಂ’ ಸಿನಿಮಾ ಡೈಲಾಗ್ ಹೇಳಿದರು.

  • ‘ಸಂಕ್ರಾಂತಿ ಹಬ್ಬ’ಕ್ಕೆ ಹೊಸ ಪೋಸ್ಟರ್ ರಿಲೀಸ್ ಮಾಡಿದ ನಿರ್ದೇಶಕ ಆಸ್ಕರ್ ಕೃಷ್ಣ

    ‘ಸಂಕ್ರಾಂತಿ ಹಬ್ಬ’ಕ್ಕೆ ಹೊಸ ಪೋಸ್ಟರ್ ರಿಲೀಸ್ ಮಾಡಿದ ನಿರ್ದೇಶಕ ಆಸ್ಕರ್ ಕೃಷ್ಣ

    ನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ನಿರ್ದೇಶನದ (Direction) ಸಿನಿಮಾದಲ್ಲಿ ನಾಯಕನಾಗಿ ನಟಿಸುವವರ ಸಂಖ್ಯೆ ತೀರಾ ಕಡಿಮೆ. ಅವರಲ್ಲಿ ಆಸ್ಕರ್ ಕೃಷ್ಣ (Oscar Krishna) ಕೂಡ ಒಬ್ಬರು. ಸ್ಕರ್ ಸಿನಿಮಾದ ಮೂಲಕ ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದವರು ಇದೀಗ ‘ಕೃತ್ಯ’ ಸಿನಿಮಾದ ಮೂಲಕ ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸುತ್ತಿದ್ದಾರೆ. ಈ ಸಿನಿಮಾದ ಹೊಸ ಪೋಸ್ಟರ್ (Poster) ಅನ್ನು ಸಂಕ್ರಾಂತಿ ಹಬ್ಬದ ದಿನದಂದು ರಿಲೀಸ್ ಮಾಡಿದ್ದಾರೆ.

    ಈ ಹಿಂದೆ ಕೃಷ್ಣ ಅವರು ‘ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡ್ಸಬಿಟ್ಟ’ ಚಿತ್ರದಲ್ಲೂ ನಾಯಕರಾದರು. ಎರಡನೇ ಬಾರಿ ಕೃತ್ಯ ಸಿನಿಮಾದ ಮೂಲಕ ಮತ್ತೆ ನಾಯಕರಾಗುತ್ತಿರುವುದು ವಿಶೇಷ. ಈ ಹಿಂದೆ ಇದೇ ಸಿನಿಮಾದ ಪೋಸ್ಟರ್ ಅನ್ನು ಶ್ರೀಮುರಳಿ ಬಿಡುಗಡೆ ಮಾಡಿ, ಕೃತ್ಯದ ಕೆಲ ವಿಷಯಗಳನ್ನೂ ಹಂಚಿಕೊಂಡಿದ್ದರು. ಇದನ್ನೂ ಓದಿ: ಬಿಗ್ ಬಾಸ್ ನಂದು- ಜಶ್ವಂತ್ ಬ್ರೇಕಪ್‌ಗೆ ಕಾರಣವಾದ್ರಾ ಸಾನ್ಯ ಅಯ್ಯರ್?

    ’ಆಸ್ಕರ್’, ’ಮಿಸ್ ಮಲ್ಲಿಗೆ’ ’ಮೋನಿಕಾ ಈಸ್ ಮಿಸ್ಸಿಂಗ್’ ’ಮನಸಿನ ಮರೆಯಲಿ’ ಹಾಗೂ ಇತ್ತೀಚಿನ ’ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡ್ಸುಬಿಟ್ಟ’ ಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ನಿರ್ದೇಶಕ ಆಸ್ಕರ್ ಕೃಷ್ಣ’ಕೃತ್ಯ’ ಸಿನಿಮಾಗೆ ನಿರ್ದೇಶನ ಮಾಡುವುದರ ಜತೆಗೆ ನಿರ್ಮಾಣ ಮತ್ತು ನಾಯಕನ ಸ್ಥಾನವನ್ನೂ ಅಲಂಕರಿಸಿರುವುದು ವಿಶೇಷ. ಗೌತಮ್‌ ರಾಮಚಂದ್ರ ಈ ಚಿತ್ರದ ಸಹ ನಿರ್ಮಾಪಕ. ಆಸ್ಕರ್‌ ಕೃಷ್ಣರೊಂದಿಗೆ ಹಲವು ವರ್ಷಗಳಿಂದ ಒಡನಾಟದಲ್ಲಿರುವ ಗೌತಮ್‌ ರಾಮಕೃಷ್ಣರವರು ಸಾಫ್ಟ್‌ವೇರ್ ಉದ್ಯೋಗಿ. ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಇವರ ಜೊತೆ ಸೇರಿಕೊಂಡು ಬಂಡವಾಳ ಹೂಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Exclusive- ಅಮ್ಮ ಮತ್ತು ಮಗನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್

    Exclusive- ಅಮ್ಮ ಮತ್ತು ಮಗನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್

    ನ್ನಡದ ಟಾಕಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ಸೃಜನ್ ಲೋಕೇಶ್ (Srujan Lokesh) ಮೊನ್ನೆಯಷ್ಟೇ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದರು. ನಟನೆ ಮಾತ್ರವಲ್ಲ, ಇನ್ಮುಂದೆ ನಿರ್ದೇಶನವನ್ನೂ ಮಾಡುತ್ತಿದ್ದೇನೆ ಎಂದು ಘೋಷಿಸಿದ್ದರು. ಮೈಸೂರಿನ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವುದರ ಮೂಲಕ ಚಿತ್ರಕ್ಕೆ ಚಾಲನೆ ಕೊಡುತ್ತಿರುವುದಾಗಿ ತಿಳಿಸಿದ್ದರು. ಈ ಸಿನಿಮಾದ ಬಗೆಗಿನ ಹೊಸ ಅಪ್ ಡೇಟ್ ಅಂದರೆ, ಈ ಸಿನಿಮಾದಲ್ಲಿ ಸೃಜನ್ ಅವರ ತಾಯಿ ಗಿರಿಜಾ ಲೋಕೇಶ್ ಜೊತೆಗೆ ಸೃಜನ್ ಪುತ್ರ (Son) ಕೂಡ ನಟಿಸುತ್ತಿದ್ದಾರೆ.

    ಸೃಜನ್ ನಿರ್ದೇಶನದ (Direction) ಜೊತೆಗೆ ನಾಯಕನಾಗಿ ನಟಿಸುತ್ತಿದ್ದರೆ, ಗಿರಿಜಾ ಲೋಕೇಶ್ (Girija Lokesh) ಮತ್ತು ಸೃಜನ್ ಪುತ್ರ ಯಾವೆಲ್ಲ ಪಾತ್ರ ಮಾಡಲಿದ್ದಾರೆ ಎನ್ನುವುದು ಸಸ್ಪೆನ್ಸ್. ಒಂದೇ ಸಿನಿಮಾದಲ್ಲಿ ಒಂದು ಕುಟುಂಬದ ಮೂರು ತಲೆಮಾರಿನ ಕಲಾವಿದರು ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಸಿನಿಮಾ ಟೈಟಲ್, ಮುಹೂರ್ತ, ಶೂಟಿಂಗ್ ಇತ್ಯಾದಿ ವಿಷಯಗಳನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿರುವ ಸೃಜನ್, ನಾಯಕಿಗಾಗಿ ಹುಡುಕಾಟ ನಡೆಸಿದ್ದಾರಂತೆ. ಇದನ್ನೂ ಓದಿ: ಮನೆಯಲ್ಲಿ ಹೆಚ್ಚು ಕ್ಷಮಾಪಣೆ ಕೇಳಿಸಿಕೊಂಡಿದ್ದು ಜಯಶ್ರೀ & ಸೋನು – ಕಾರಣ ಇಷ್ಟೆ!

    ಸಿನಿಮಾದ ಸ್ಕ್ರಿಪ್ಟ್ ಬಹುತೇಕ ಮುಗಿದಿದೆ. ನಾಯಕಿಯ ಹುಡುಕಾಟ ನಡೆದಿದೆ. ಎರಡೆರಡು ಜವಾಬ್ದಾರಿಯನ್ನು ಸೃಜನ್ ಹೊತ್ತಿರುವುದರಿಂದ ಪಕ್ಕಾ ತಯಾರಿಯೊಂದಿಗೆ ಅಖಾಡಕ್ಕೆ ಇಳಿಯಲಿದ್ದಾರಂತೆ. ಈಗಾಗಲೇ ನಿರ್ಮಾಣದ ಜೊತೆಗೆ ನಟನೆಯನ್ನೂ ಮಾಡಿರುವ ಸೃಜನ್, ಈ ಬಾರಿ ಸಂದೇಶ್ ಪ್ರೊಡಕ್ಷನ್ (Sandesh Production) ಜೊತೆ ಕೈ ಜೋಡಿಸಿದ್ದಾರೆ. ಸಂದೇಶ್ ಪ್ರೊಡಕ್ಷನ್ ಜೊತೆ ಈ ಹಿಂದೆಯೇ ಸೃಜನ್ ಸಿನಿಮಾ ಮಾಡಬೇಕಿತ್ತು. ಅದೀಗ ಈಡೇರಿದಂತಾಗಿದೆ.

    ಕಿರುತೆರೆಯಲ್ಲಿ ಸೃಜನ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರೂ, ಅದರಿಂದ ಕೊಂಚ ಬಿಡುವು ತಗೆದುಕೊಂಡು ತಮ್ಮ ಚೊಚ್ಚಲು ನಿರ್ದೇಶನದ ಚಿತ್ರದತ್ತ ಚಿತ್ತ ಹರಿಸಿದ್ದಾರೆ. ಶೂಟಿಂಗ್ ಗೂ (Shooting) ಮುನ್ನ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ತಮ್ಮ ತಂಡದೊಂದಿಗೆ ನಿರಂತರ ಕೆಲಸ ಮಾಡುತ್ತಿದ್ದಾರೆ. ಅತೀ ಶೀಘ್ರದಲ್ಲೇ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ಸೃಜನ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡಿಸೆಂಬರ್ ನಲ್ಲಿ ರಕ್ಷಿತ್ ಶೆಟ್ಟಿ ನಿರ್ದೇಶನದ ರಿಚರ್ಡ್ ಆಂಟೋನಿ ಸಿನಿಮಾ

    ಡಿಸೆಂಬರ್ ನಲ್ಲಿ ರಕ್ಷಿತ್ ಶೆಟ್ಟಿ ನಿರ್ದೇಶನದ ರಿಚರ್ಡ್ ಆಂಟೋನಿ ಸಿನಿಮಾ

    ಟನೆಯಲ್ಲೇ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿ ಅವರು ಯಾವಾಗ ನಿರ್ದೇಶನ ಮಾಡಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಿಂದ ಕೇಳಿ ಬಂದಿತ್ತು. ಈಗಾಗಲೇ ಅನೌನ್ಸ್ ಆಗಿರುವ ರಿಚರ್ಡ್ ಆಂಟೋನಿ ಸಿನಿಮಾ ಯಾವಾಗ ಸೆಟ್ಟೇರಲಿದೆ ಎನ್ನುವ ಚರ್ಚೆ ಕೂಡ ಶುರುವಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಸದ್ಯ ಅವರು ಹೇಮಂತ್ ರಾವ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ಶೂಟಿಂಗ್ ಮುಗಿದ ತಕ್ಷಣವೇ ರಿಚರ್ಡ್ ಆಂಟೋನಿ ಶುರು ಮಾಡುವುದಾಗಿ ತಿಳಿಸಿದ್ದಾರೆ.

    ಸಪ್ತ ಸಾಗರದಾಚೆ ಸಿನಿಮಾದ ಶೂಟಿಂಗ್ ನಡೆಯಬೇಕಿದೆ. ಅದಕ್ಕಾಗಿ ಅವರು ಲುಕ್ ಕೂಡ ಬದಲಾಯಿಸಿಕೊಂಡಿದ್ದಾರೆ. ಅಂದುಕೊಂಡಂತೆ ಆದರೆ, ಡಿಸೆಂಬರ್ ಅಥವಾ ಜನವರಿ ಮೊದಲ ವಾರದಲ್ಲೇ ತಮ್ಮ ನಿರ್ದೇಶನದ ರಿಚರ್ಡ್ ಆಂಟೋನಿ ಸಿನಿಮಾ ಶುರು ಮಾಡುವುದಾಗಿ ತಿಳಿಸಿದ್ದಾರೆ. ಈ ಕುರಿತಂತೆ ಈಗಿನಿಂದಲೇ ಸ್ಕ್ರಿಪ್ಟ್ ಮತ್ತಿತರ ಕೆಲಸಗಳನ್ನೂ ಪ್ರಾರಂಭಿಸಿದ್ದಾರಂತೆ. ಡಿಸೆಂಬರ್ ಹೊತ್ತಿಗೆ ಶೂಟಿಂಗ್ ಮುನ್ನ ಮಾಡಬೇಕಾದ ಕೆಲಸಗಳನ್ನು ಮುಗಿಸುತ್ತಾರಂತೆ. ಇದನ್ನೂ ಓದಿ:ಅಂಡರ್ ವರ್ಲ್ಡ್ ನಿಂದಾಗಿ ಬಾಲಿವುಡ್ ನಟಿ ಸೋನಾಲಿ ಬೇಂದ್ರೆಗೆ ಹಿನ್ನೆಡೆ

    ಸದ್ಯ ಚಾರ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಕ್ಷಿತ್, ಇನ್ನೂ ಹಲವು ಸಿನಿಮಾಗಳನ್ನು ಅವರದ್ದೇ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಿದ್ದಾರೆ. ಅದಕ್ಕೂ ಸಿದ್ಧತೆ ನಡೆಸಿದ್ದಾರೆ. ರಚರ್ಡ್ ಆಂಟೋನಿ ಸಿನಿಮಾ ಉಳಿದವರು ಕಂಡಂತೆ ಚಿತ್ರದ ಮುಂದುವರಿಕೆಯ ಭಾಗವಾಗಿದ್ದರಿಂದ, ಪಕ್ಕಾ ತಯಾರಿ ಮಾಡಿಕೊಂಡೇ ಚಿತ್ರೀಕರಣಕ್ಕೆ ಇಳಿಯಲಿದ್ದಾರಂತೆ ರಕ್ಷಿತ್.

    Live Tv

  • ಇನ್ನೆರಡು ತಿಂಗಳಲ್ಲಿ ಶಿವರಾಜ್ ಕುಮಾರ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ಸಿನಿಮಾ: ರಮೇಶ್ ರೆಡ್ಡಿ

    ಇನ್ನೆರಡು ತಿಂಗಳಲ್ಲಿ ಶಿವರಾಜ್ ಕುಮಾರ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ಸಿನಿಮಾ: ರಮೇಶ್ ರೆಡ್ಡಿ

    ರ್ಜುನ್ ಜನ್ಯ ನಿರ್ದೇಶನದ ಚೊಚ್ಚಲು ಸಿನಿಮಾ ಇನ್ನೆರಡು ತಿಂಗಳಲ್ಲಿ ಸೆಟ್ಟೇರಲಿದೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ಗೆ ತಿಳಿಸಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ. ಇಂದು ಬೆಳಗ್ಗೆ ಅರ್ಜುನ್ ಜನ್ಯ ಅವರ ಜೊತೆ ಶಿವರಾಜ್ ಕುಮಾರ್ ಮನೆಗೆ ಆಗಮಿಸಿದ್ದ ಅವರು, ಒಂದೊಳ್ಳೆ ಕಥೆಯೊಂದಿಗೆ ನಮ್ಮ ಬ್ಯಾನರ್ ನಲ್ಲಿ ಶಿವರಾಜ್ ಕುಮಾರ್ ಅವರಿಗಾಗಿ ಸಿನಿಮಾ ಮಾಡುತ್ತಿದ್ದೇನೆ ಎಂದಿದ್ದಾರೆ.  ಅಲ್ಲದೇ, ಇದೊಂದು ಒಳ್ಳೆಯ ಸಿನಿಮಾ ಆಗಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತ ಪಡಿಸಿದ್ದಾರೆ.

    ಪಡ್ಡೆಹುಲಿ, ನಾತಿಚರಾಮಿ, 100, ಗಾಳಿಪಟ 2 ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ರಮೇಶ್ ರೆಡ್ಡಿ ಅವರು ನಾತಿಚರಾಮಿ ಸಿನಿಮಾಗಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಗಾಳಿಪಟ 2  ಇನ್ನಷ್ಟೇ ರಿಲೀಸ್ ಆಗಬೇಕು. ಈ ನಡುವೆ ಶ್ರೀಮುರುಳಿಗಾಗಿ ಒಂದು ಸಿನಿಮಾವನ್ನು ನಿರ್ಮಾಣ ಮಾಡುವುದಾಗಿಯೂ ರಮೇಶ್ ರೆಡ್ಡಿ ಅವರು ಘೋಷಿಸಿದ್ದರು. ಇದೀಗ ಅರ್ಜುನ್ ಜನ್ಯ ಅವರನ್ನು ನಿರ್ಮಾಪಕರನ್ನಾಗಿ ಲಾಂಚ್ ಮಾಡುತ್ತಿದ್ದಾರೆ. ಈ ಹಿಂದೆಯೂ ಇವರು ಖ್ಯಾತ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರನ್ನು ಲಾಂಚ್ ಮಾಡಿದ್ದರು. ಇದನ್ನೂ ಓದಿ: ರಣ್‌ವೀರ್ ಅವರನ್ನು ದೀಪಿಕಾ ಪಡುಕೋಣೆ ಮದುವೆಯಾಗಿದ್ದು ಏಕೆ? ರಿವೀಲ್ ಆಯ್ತು ಸೀಕ್ರೆಟ್

    ಅರ್ಜುನ್ ಜನ್ಯ ಅವರು ಕಥೆ ಹೇಳಿದಾಗ ತುಂಬಾ ಖುಷಿ ಆಯಿತು. ಶಿವರಾಜ್ ಕುಮಾರ್ ಅವರಿಗೆ ಸಿನಿಮಾ ಮಾಡಬೇಕು ಎಂದು ನಾನೂ ಅಂದುಕೊಂಡಿದ್ದೆ. ಅದು ಈಗ ಕೂಡಿ ಬಂದಿದೆ. ಅತ್ಯುತ್ತಮ ನಾಯಕಿ ಮತ್ತು ವಿಲನ್ ಪಾತ್ರಧಾರಿಯನ್ನು ಹುಡುಕುತ್ತಿದ್ದೇವೆ. ಸದ್ಯದಲ್ಲೇ ಎಲ್ಲ ಮಾಹಿತಿಯನ್ನೂ ಕೊಡಲಿದ್ದೇವೆ. ಅಂದುಕೊಂಡಂತೆ ಆದರೆ, ಇನ್ನೆರಡು ತಿಂಗಳು ಬಳಿಕೆ ಈ ಸಿನಿಮಾ ಸೆಟ್ಟೇರಲಿದೆ ಎನ್ನುತ್ತಾರೆ ನಿರ್ಮಾಪಕ ರಮೇಶ್ ರೆಡ್ಡಿ.

    Live Tv

  • Breaking- ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರನ್ನು ನಿರ್ದೇಶಕ ಆಗಿ ಲಾಂಚ್ ಮಾಡ್ತಿದ್ದಾರೆ ರಮೇಶ್ ರೆಡ್ಡಿ

    Breaking- ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರನ್ನು ನಿರ್ದೇಶಕ ಆಗಿ ಲಾಂಚ್ ಮಾಡ್ತಿದ್ದಾರೆ ರಮೇಶ್ ರೆಡ್ಡಿ

    ನ್ನಡದ ಮತ್ತೋರ್ವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ನಿರ್ದೇಶಕರಾಗಿ ಲಾಂಚ್ ಆಗಲಿದ್ದಾರೆ ಎಂದು ಮೊನ್ನೆಯಷ್ಟೇ ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿ ಮಾಡಿತ್ತು. ಅದೀಗ ನಿಜವಾಗಿದೆ. ಶಿವರಾಜ್ ಕುಮಾರ್ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದ ಮೂಲಕ ಅರ್ಜುನ್ ಜನ್ಯ ನಿರ್ದೇಶಕರಾಗುವುದು ಪಕ್ಕಾ ಆಗಿದೆ. ಕನ್ನಡದ ಹೆಸರಾಂತ ನಿರ್ಮಾಪಕ ರಮೇಶ್ ರೆಡ್ಡಿ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅರ್ಜುನ್ ಅವರನ್ನು ನಿರ್ದೇಶಕನನ್ನಾಗಿ ಲಾಂಚ್ ಮಾಡುತ್ತಿದ್ದಾರೆ.

    ವಿ.ಹರಿಕೃಷ್ಣ ಸಂಗೀತ ನಿರ್ದೇಶನದಿಂದ ಸಿನಿಮಾ ನಿರ್ದೇಶಕನಾಗಿ ಬದಲಾಗುತ್ತಿದ್ದಂತೆ, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುವಲ್ಲಿ ಸಖತ್ ಬ್ಯುಸಿಯಾಗಿದ್ದರು. ಈ ನಡುವೆಯೂ ಅವರು ಸುಂದರವಾದ ಕಥೆಯೊಂದನ್ನು ಬರೆದಿದ್ದಾರಂತೆ. ತಾವೇ ಬರೆದ ಕಥೆಯನ್ನೇ ಸಿನಿಮಾ ಮಾಡುವುದಾಗಿ ಆಪ್ತರೊಂದಿಗೆ ತಿಳಿಸಿದ್ದಾರೆ. ಇದನ್ನೂ ಓದಿ:ಒಲವೇ ಜೀವನ ಲೆಕ್ಕಾಚಾರ ಅಂತಿದ್ದಾರೆ ಯುವ ಜೋಡಿ

    ಶಿವರಾಜ್ ಕುಮಾರ್ ಅವರಿಗಾಗಿ ಈ ಕಥೆಯನ್ನು ಅರ್ಜುನ್ ಜನ್ಯ ಬರೆದಿದ್ದು, ಶಿವಣ್ಣನಿಗೆ ಕಥೆಯನ್ನೂ ಹೇಳಿದ್ದಾರಂತೆ. ಇತ್ತೀಚೆಗೆ ಶಿವರಾಜ್ ಕುಮಾರ್ ನಟನೆಯ ಬಹುತೇಕ ಚಿತ್ರಗಳಿಗೆ ಅರ್ಜುನ್ ಜನ್ಯ ಮ್ಯೂಸಿಕ್ ಮಾಡಿದ್ದಾರೆ. ಹಿಟ್ ಹಾಡುಗಳನ್ನೂ ಕೊಟ್ಟಿದ್ದಾರೆ. ಅಲ್ಲದೇ, ಒಂದಷ್ಟು ಸಿನಿಮಾಗಳಿಗೆ ಅರ್ಜುನ್ ಬಂಡವಾಳವನ್ನೂ ಹೂಡಿದ್ದಾರೆ. ಅನೇಕ ವಿಭಾಗಗಳಲ್ಲಿ ಪರಿಣಿತಿ ಪಡೆದಿರುವುದರಿಂದ ನಿರ್ದೇಶಕರಾಗಿ ಇಲ್ಲಿಯೂ ಹೆಸರು ಮಾಡುವ ಕನಸು ಇವರದ್ದು.

    Live Tv