Tag: Direct

  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಂಕಿತ ನಕ್ಸಲರು ಪ್ರತ್ಯಕ್ಷ!

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಂಕಿತ ನಕ್ಸಲರು ಪ್ರತ್ಯಕ್ಷ!

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಂಕಿತ ನಕ್ಸಲರು ಪ್ರತ್ಯಕ್ಷವಾಗಿದ್ದು, ಶಂಕಿತರನ್ನು ಬಂಧಿಸಲು ನಕ್ಸಲ್ ನಿಗ್ರಹ ದಳ (ಎಎನ್‍ಎಫ್) ಕೂಂಬಿಂಗ್ ಕಾರ್ಯಾಚರಣೆ ನಡೆಸಿದೆ.

    ಜಿಲ್ಲೆಯ ಸುಳ್ಯ, ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ಶಂಕಿತ ನಕ್ಸಲರು ಇರುವ ಮಾಹಿತಿ ಲಭ್ಯವಾಗಿದ್ದು, ಎಎನ್ಎಫ್ ಸುಪರಿಟೆಂಡೆಂಟ್ ಪೊಲೀಸ್ ಲಕ್ಷ್ಮಿ ಪ್ರಸಾದ್ ನೇತೃತ್ವದಲ್ಲಿ 32 ಜನ ಸಿಬ್ಬಂದಿ ತಂಡ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ.

    ಶುಕ್ರವಾರ ತಡರಾತ್ರಿ ಬಂದೂಕುಧಾರಿ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷನಿದ್ದ ಶಂಕಿತ ನಕ್ಸಲರ ಗುಂಪೊಂದು ಸುಳ್ಯ ತಾಲೂಕಿನ ಮಡಪ್ಪಾಡಿ ಕಾಣಿಸಿಕೊಂಡಿತ್ತು. ಶಂಕಿತ ನಕ್ಸಲರು ಸುಳ್ಯ ಎಪಿಎಂಸಿ ಮಾಜಿ ಅಧ್ಯಕ್ಷ ಹಾಡಿಕಲ್ ಜಯರಾಮ್ ಗೌಡಗೆ ಸೇರಿದ್ದ ಮಡಪ್ಪಾಡಿ ರಬ್ಬರ್ ಕಾರ್ಮಿಕರ ಶೆಡ್ ಗೆ ನುಗ್ಗಿ ಅಲ್ಲಿಯೇ ಊಟ ಮಾಡಿ ಹೋಗಿದ್ದಾರೆ ಎನ್ನಲಾಗಿದೆ.

  • ಆತ್ಮೀಯ ಗೆಳೆಯ ದಿವಾಕರ್ ಗೆ ಸಿಹಿ ಸುದ್ದಿ ನೀಡಿದ ಚಂದನ್ ಶೆಟ್ಟಿ

    ಆತ್ಮೀಯ ಗೆಳೆಯ ದಿವಾಕರ್ ಗೆ ಸಿಹಿ ಸುದ್ದಿ ನೀಡಿದ ಚಂದನ್ ಶೆಟ್ಟಿ

    ಬೆಂಗಳೂರು: ಬಿಗ್‍ಬಾಸ್ ಸೀಸನ್ ಐದರ ಆಟ ಮುಗಿದಿದೆ. ಈ ಕಾರ್ಯಕ್ರಮದಲ್ಲಿ ತಮ್ಮ ಸ್ನೇಹದಿಂದ ಚಂದನ್ ಶಟ್ಟಿ ಹಾಗೂ ದಿವಾಕರ್ ಕರುನಾಡ ಜನತೆಯ ಮನಗೆದ್ದಿದ್ದಾರೆ. ಈಗ ಚಂದನ್ ತಮ್ಮ ಆತ್ಮೀಯ ಗೆಳೆಯ ದಿವಾಕರ್‍ಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

    ಚಂದನ್ ಶೆಟ್ಟಿ ನಿರ್ದೇಶಕನಾಗಬೇಕೆಂದು ಸ್ಯಾಂಡಲ್ ವುಡ್ ಗೆ ಬಂದಿದ್ದರು. ಆದರೆ ಡೈರೆಕ್ಟ್ ಆಗಿ ಡೈರೆಕ್ಟರ್ ಕ್ಯಾಪ್ ಹಾಕಿಕೊಳ್ಳಲು ಗಾಂಧಿನಗರದಲ್ಲಿ ಸಾಧ್ಯವಿರದ ಕಾರಣ ಟ್ರ್ಯಾಕ್ ಸಿಂಗರ್, ಲಿರಿಕ್ ರೈಟರ್, ರ‍್ಯಾಪ್ ಸಿಂಗಿಂಗ್ ಕಮ್ ಡೈರೆಕ್ಷನ್ ಮತ್ತು ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದರು. ಆಲ್ಬಂ ಸಾಂಗ್‍ಗಳಿಂದ ಸೋಷಿಯಲ್ ಮಿಡಿಯದಲ್ಲಿ ಸೆನ್ಸೇಷನ್ ಹುಟ್ಟು ಹಾಕಿದರು. ಇದನ್ನೂ ಓದಿ: ರ‍್ಯಾಪರ್ ಚಂದನ್ ಶೆಟ್ಟಿ ಆಸೆಯನ್ನು ಈಡೇರಿಸಿದ ಕಿಚ್ಚ ಸುದೀಪ್!

    ಚಂದನ್ ಶೆಟ್ಟಿ ಒಮ್ಮೆ ತಮ್ಮ `ಚಾಕ್‍ಲೇಟ್ ಗರ್ಲ್’ ಆಲ್ಬಂ ಸಾಂಗ್ ಲಾಂಚಿಂಗ್ ವೇಳೆ ಪಬ್ಲಿಕ್ ಟಿವಿಯೊಂದಿಗೆ ನಾನು ನಿರ್ದೇಶಕನಾಗಬೇಕು ಎಂದುಕೊಂಡಿದ್ದೇನೆ. ಸದ್ಯದಲ್ಲಿಯೇ ಆ ಯೋಜನೆಗೆ ಕೈ ಹಾಕುತ್ತೇನೆ ಎಂದಿದ್ದರು. ಇದನ್ನೂ ಓದಿ: ಚಂದನ್ ಶೆಟ್ಟಿ ಮದ್ವೆಯಾಗೋ ಹುಡುಗಿಯ ಬಳಿ ಈ ಗುಣಗಳು ಇರಬೇಕಂತೆ!

    ಇನ್ನೇನು ನಿರ್ದೇಶನದ ಜವಾಬ್ದಾರಿಯನ್ನು ಹೊರಬೇಕು ಎನ್ನುವಷ್ಟರಲ್ಲೇ ಸಿನಿಮಾಗಳಲ್ಲಿ ಹಾಡುತ್ತಾ, `ಬಿಗ್‍ಬಾಸ್ ಸೀಸನ್-5’ಗೆ ಎಂಟ್ರಿಕೊಟ್ಟರು. ಆದರೆ ತಾವು ನಿರ್ದೇಶಕನಾಗಬೇಕು ಎನ್ನುವ ಯೋಜನೆ ಹಾಗೆ ಉಳಿದ್ದಿತ್ತು. ಈಗ ಮತ್ತೆ ಚಂದನ್ ಆ ಕನಸಿನ ಕೋಟೆಯ ಬಾಗಿಲು ತಟ್ಟಲಿದ್ದಾರೆ. ತಮ್ಮ ಪ್ರತಿಭೆಯನ್ನು ಚಿತ್ರ ರಸಿಕರ ಮುಂದೆ ಸಾಬೀತು ಮಾಡಲಿದ್ದಾರೆ. ಇದನ್ನೂ ಓದಿ: ಚಂದನ್ ಶೆಟ್ಟಿ ನನಗೆ ಯಾಕೆ ಸ್ಪೆಷಲ್ ಅಂತ ಹೇಳಿದ್ರು ಅರ್ಜುನ್ ಜನ್ಯ

    ಚಂದನ್ ಶೆಟ್ಟಿ ಈ ಮೊದಲು ಕೆಲ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗ ಗೆಳೆಯ ದಿವಾಕರ್ ನಟಿಸುವ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರಂತೆ. ಈ ಬಗ್ಗೆ ಮಾಧ್ಯಮಕ್ಕೆ ಚಂದನ್ ಪ್ರತಿಕ್ರಿಯಿಸಿ, ಮುಂದಿನ ದಿನಗಳಲ್ಲಿ ದಿವಾಕರ್ ಏನಾದರೂ ಸಿನಿಮಾ ಮಾಡಿದರೆ ಅದಕ್ಕೆ ನಾನು ಸಂಗೀತ ನೀಡುತ್ತೇನೆ. ಜೊತೆಗೆ ನನ್ನ ಕಲ್ಪನೆಯ ದಿವಾಕರ್‍ನನ್ನು ಇಟ್ಟುಕೊಂಡು ಒಂದು ಕಥೆ ಮಾಡಿದ್ದೇನೆ. ಅದನ್ನು ಸಾಧ್ಯವಾದರೆ ನಿರ್ದೇಶನ ಮಾಡುತ್ತೇನೆ ಎಂದು ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ತಿಳಿಸಿದ್ದಾರೆ. ಇದನ್ನೂ ಓದಿ: ಬೌನ್ಸರ್ ಗಳು ನನ್ನನ್ನು ಪಬ್‍ನಿಂದ ಹೊರ ಹಾಕಿದ್ದೆ ಸ್ಫೂರ್ತಿ ಆಯ್ತು!