Tag: Diplomatic Passport

  • ಪ್ರಧಾನಿಗೆ ಎರಡು ಪತ್ರ ಬರೆದ್ರೂ ಉತ್ತರ ಇಲ್ಲ: ಸಿದ್ದರಾಮಯ್ಯ

    ಪ್ರಧಾನಿಗೆ ಎರಡು ಪತ್ರ ಬರೆದ್ರೂ ಉತ್ತರ ಇಲ್ಲ: ಸಿದ್ದರಾಮಯ್ಯ

    ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಎರಡು ಪತ್ರ ಬರೆದರೂ ಉತ್ತರ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

    ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಏಪ್ರಿಲ್ 27ಕ್ಕೆ ರಾಜತಾಂತ್ರಿಕ ಪಾಸ್‌ಪೋರ್ಟ್‌ (Diplomatic Passport) ಬಳಸಿ ದೇಶ ಬಿಟ್ಟು ಹೋಗಿದ್ದಾರೆ. ಅವರು ಬೇರೆ ದೇಶಕ್ಕೆ ಹೋಗಿ ತಪ್ಪಿಸಿಕೊಂಡಿದ್ದಾರೆ. ಆರೋಪಿಯನ್ನ ಸುರಕ್ಷಿತವಾಗಿ ಇರಿಸಬೇಕಲ್ಲವಾ? ಅದಕ್ಕಾಗಿ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದು ಮಾಡುವಂತೆ ಪತ್ರ ಬರೆದಿದ್ದೇನೆ. ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ ಎಂದರು. ಇದನ್ನೂ ಓದಿ:  ಎಲ್ಲೇ ಇದ್ದರೂ ಕೂಡಲೇ ಸ್ವದೇಶಕ್ಕೆ ಬಾ, ನನ್ನ ತಾಳ್ಮೆ ಪರೀಕ್ಷಿಸಬೇಡ – ಪ್ರಜ್ವಲ್‌ಗೆ ಹೆಚ್‌ಡಿಡಿ ಸೂಚನೆ 

     

    ನನ್ನ ಮೊದಲ ಪತ್ರಕ್ಕೆ ಉತ್ತರ ಬಾರದ ಕಾರಣ ಎರಡನೇ ಪತ್ರ ಬರೆದಿದ್ದೇನೆ. ಪ್ರಜ್ವಲ್ ಮೇಲೆ ಐಪಿಸಿ ಸೆಕ್ಷನ್ 377ರ ಅಡಿ ಕೇಸ್‌ ದಾಖಲಾಗಿದ್ದು ಮೂರು ದೂರು ಬಂದಿವೆ. ಆರೆಸ್ಟ್ ಆಗಿಬಿಡುತ್ತೇನೆ ಎಂದು ವಿದೇಶಕ್ಕೆ ಹೋಗಿ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಿದರು.

    ಮೊದಲ ಪತ್ರಕ್ಕೆ ಕೇಂದ್ರದಿಂದ ಇವತ್ತಿನವರೆಗೂ ಉತ್ತರ ಬಂದಿಲ್ಲ. ವಿಶೇಷ ತನಿಖಾ ತಂಡ (SIT) ಕೋರ್ಟ್‌ನಿಂದ ವಾರೆಂಟ್‌ ವಾರೆಂಟ್ ತಗೊಂಡಿದ್ದಾರೆ. ಆ ವಾರೆಂಟ್ ಮಾಹಿತಿಯನ್ನೂ ಕೇಂದ್ರಕ್ಕೆ ಕಳುಹಿಸಿಕೊಟ್ಟು ಅವರು ಒಂದು ಪತ್ರ ಬರೆದಿದ್ದಾರೆ. ಆದರೆ ಕೇಂದ್ರ ಸರ್ಕಾರದಿಂದ ಯಾವುದಕ್ಕೂ ಉತ್ತರ ಬಂದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪಿಎಂ ಹುದ್ದೆಗೆ ರಾಜ್ಯದಿಂದ ಯಾರೂ ಅಭ್ಯರ್ಥಿ ಇಲ್ಲ ಎಂದಿಲ್ಲ: ಸಿಎಂ ಸ್ಪಷ್ಟನೆ

     

    ಫೋನ್ ಟ್ಯಾಪಿಂಗ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಂದಿನ ನನ್ನ ಆಡಳಿತದಲ್ಲಿ ಆಗಲಿ, ಈಗಿನ ಆಡಳಿತದಲ್ಲಾಗಲೀ ನಾವು ಫೋನ್ ಟ್ಯಾಪಿಂಗ್ ಮಾಡಿಲ್ಲ. ಮುಂದೆಯೂ ಫೋನ್ ಟ್ಯಾಪಿಂಗ್ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.

    ಇದೇ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ (R Ashok) ಜೊತೆ ಬಹುಶಃ ಪ್ರಜ್ವಲ್ ರೇವಣ್ಣ ಮಾತನಾಡಿರಬಹುದು. ಕೇಂದ್ರ ಸರ್ಕಾರದ ಜೊತೆ ಅವರು ಪಾಲುದಾರರು ಅಲ್ವಾ ಎಂದು ವ್ಯಂಗ್ಯವಾಡಿದರು.

     

  • ಪ್ರಜ್ವಲ್‌ ರೇವಣ್ಣ ಕೇಸ್‌ – ಏನಿದು ರಾಜತಾಂತ್ರಿಕ ಪಾಸ್‌ಪೋರ್ಟ್‌? ವಿದೇಶದಲ್ಲಿ ಬಂಧನ ಸಾಧ್ಯವೇ? ಏನು ಸವಲತ್ತು ಸಿಗುತ್ತೆ?

    ಪ್ರಜ್ವಲ್‌ ರೇವಣ್ಣ ಕೇಸ್‌ – ಏನಿದು ರಾಜತಾಂತ್ರಿಕ ಪಾಸ್‌ಪೋರ್ಟ್‌? ವಿದೇಶದಲ್ಲಿ ಬಂಧನ ಸಾಧ್ಯವೇ? ಏನು ಸವಲತ್ತು ಸಿಗುತ್ತೆ?

    ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಜರ್ಮನಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್ (Diplomatic Passport) ಬಳಸಿ ತೆರಳಿದ್ದಾರೆ. ಹೀಗಾಗಿ ಈ ಪಾಸ್‌ಪೋರ್ಟ್‌ ರದ್ದುಪಡಿಸಬೇಕೆಂಬ ಆಗ್ರಹ ಕೇಳಿಬಂದಿದೆ. ಹೀಗಾಗಿ ಇಲ್ಲಿ ರಾಜತಾಂತ್ರಿಕ ಪಾಸ್‌ಪೋರ್ಟ್‌ ಎಂದರೇನು? ಯಾರಿಗೆ ಈ ಪಾಸ್‌ಪೋರ್ಟ್‌ ಸಿಗುತ್ತೆ? ವಿಶೇಷವಾಗಿ ಸಿಗುವ ಸವಲತ್ತುಗಳು ಏನು? ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ರಾಜತಾಂತ್ರಿಕ ಪಾಸ್‌ಪೋರ್ಟ್ ಎಂದರೇನು?
    ಭಾರತದಲ್ಲಿ (India) ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ರಾಜತಾಂತ್ರಿಕ ಶೀರ್ಷಿಕೆಯನ್ನು ಹೊಂದಿರುವ ಮತ್ತು ತಮ್ಮ ಅಧಿಕೃತ ಕರ್ತವ್ಯಗಳನ್ನು ಪೂರೈಸಲು ಇತರ ದೇಶಗಳಿಗೆ ಭೇಟಿ ನೀಡುವ ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ನೀಡಲಾಗುತ್ತದೆ. ಸಾಮಾನ್ಯ ಪಾಸ್‌ಪೋರ್ಟ್‌ಗಳಿಗಿಂತ ವಿಭಿನ್ನವಾಗಿ ಕಾಣುವ ಟೈಪ್ ಡಿ ಪಾಸ್‌ಪೋರ್ಟ್‌ ಇದಾಗಿದೆ. ರಾಜತಾಂತ್ರಿಕ ಪಾಸ್‌ಪೋರ್ಟ್‌ನ ಕವರ್ ಸಾಮಾನ್ಯ ಕಡು ನೀಲಿ ಬಣ್ಣಕ್ಕೆ ಬದಲಾಗಿ ಮರೂನ್ ಕವರ್ ಹೊಂದಿರುತ್ತದೆ.

    ರಾಜತಾಂತ್ರಿಕ ಪಾಸ್‌ಪೋರ್ಟ್ 28 ಪುಟಗಳನ್ನು ಹೊಂದಿರುತ್ತದೆ. ಸಾಮಾನ್ಯ ಪಾಸ್‌ಪೋರ್ಟ್‌ಗಿಂತ ಭಿನ್ನವಾಗಿ ಮತ್ತು ವಯಸ್ಕರಿಗೆ 10 ವರ್ಷಗಳವರೆಗೆ ಮತ್ತು ಅಪ್ರಾಪ್ತರಿಗೆ ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ಐದು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಗೂ ನೀಡಲಾಗುತ್ತದೆ. ಇದನ್ನೂ ಓದಿ: ಡ್ರೈವರ್‌ ಕಾರ್ತಿಕ್‌ ಮಲೇಷ್ಯಾದಲ್ಲಿದ್ದಾನೆ, ಆತನನ್ನು ಅಲ್ಲಿಗೆ ಕಳುಹಿಸಿದ್ದು ಯಾರು: ಹೆಚ್‌ಡಿಕೆ ಪ್ರಶ್ನೆ

    ಯಾರಿಗೆ ಈ ಪಾಸ್‌ಪೋರ್ಟ್‌ ಸಿಗುತ್ತೆ?
    ಭಾರತೀಯ ವಿದೇಶಾಂಗ ಸೇವೆಗಳ (MEA) ಎ ಬ್ರ್ಯಾಂಚ್‌ನಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಭಾರತೀಯ ವಿದೇಶಾಂಗ ಸೇವೆಗಳ ಬಿ ಬ್ರ್ಯಾಂಚ್‌ನಲ್ಲಿ ಕೆಲಸ ಮಾಡುವ ಆಯ್ದ ಅಧಿಕಾರಿಗಳು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಅಧಿಕೃತ ಉದ್ದೇಶಗಳಿಗಾಗಿ ವಿದೇಶಕ್ಕೆ ಭೇಟಿ ನೀಡುವ ವ್ಯಕ್ತಿಗಳು, ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಕೆಲಸ ಮಾಡುವ ಅಧಿಕಾರಿಯ ಮಗಳು, ಮಗ, ಸಂಗಾತಿ, ಪೋಷಕರು, ರಾಜತಾಂತ್ರಿಕ ಸ್ಥಾನಮಾನವನ್ನು ಹೊಂದಿರುವ ವ್ಯಕ್ತಿಗಳು, ವಿದೇಶಿ ಪ್ರವಾಸಗಳಿಗಾಗಿ ಭಾರತ ಸರ್ಕಾರದಿಂದ ನೇಮಕಗೊಂಡ ಅಧಿಕಾರಿಗಳಿಗೆ ನೀಡಲಾಗುತ್ತದೆ.

    ರಾಜತಾಂತ್ರಿಕ ಪಾಸ್‌ಪೋರ್ಟ್‌ನಿಂದ ಲಾಭ ಏನು?
    1. ಅಧಿಕೃತ ಗುರುತು: ಭಾರತ ಸರ್ಕಾರವನ್ನು (India Government) ಪ್ರತಿನಿಧಿಸುವ ವ್ಯಕ್ತಿಗಳಿಗೆ ಅಧಿಕೃತ ಗುರುತಿನ ದಾಖಲೆಯಾಗಿ ಇದು ಕಾರ್ಯನಿರ್ವಹಿಸುತ್ತದೆ. ಇದು ಅವರ ಗುರುತನ್ನು ಮತ್ತು ಅಧಿಕೃತ ಸ್ಥಾನಮಾನವನ್ನು ಗುರುತಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಡ್ರೈವರ್‌ ಕಾರ್ತಿಕ್‌ ಮಲೇಷ್ಯಾದಲ್ಲಿದ್ದಾನೆ, ಆತನನ್ನು ಅಲ್ಲಿಗೆ ಕಳುಹಿಸಿದ್ದು ಯಾರು: ಹೆಚ್‌ಡಿಕೆ ಪ್ರಶ್ನೆ

    2. ರಾಜತಾಂತ್ರಿಕ ವಿನಾಯಿತಿ: ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರು ವಿಶಿಷ್ಟವಾಗಿ ಕೆಲವು ಸವಲತ್ತುಗಳು ಮತ್ತು ವಿನಾಯಿತಿಗಳಿಗೆ ಅರ್ಹರಾಗಿರುತ್ತಾರೆ. ಇದು ಆತಿಥೇಯ ದೇಶದಲ್ಲಿ ಬಂಧನ (Arrest) ಮತ್ತು ಕೆಲವು ಕಾನೂನು ಪ್ರಕ್ರಿಯೆಗಳಿಂದ ವಿನಾಯಿತಿ ಸಿಗುತ್ತದೆ.

    3. ವೀಸಾ ಸೌಲಭ್ಯ: ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿದವರಿಗೆ ವಿಶೇಷ ವೀಸಾ (Visa) ಸವಲತ್ತುಗಳು ಸಿಗುತ್ತವೆ. ಹಲವು ದೇಶಗಳು ವೇಗವಾಗಿ ವೀಸಾ ವಿತರಣೆ ಮಾಡುತ್ತದೆ ಮತ್ತು ವೀಸಾ ಪ್ರಕ್ರಿಯೆ ಸರಳವಾಗಿರುತ್ತದೆ.

    4. ರಾಜತಾಂತ್ರಿಕ ಚಾನೆಲ್‌ಗಳಿಗೆ ಪ್ರವೇಶ: ರಾಜತಾಂತ್ರಿಕ ಪಾಸ್‌ಪೋರ್ಟ್ ರಾಜತಾಂತ್ರಿಕ ಚಾನೆಲ್‌ಗಳು ಮತ್ತು ಭಾರತೀಯ ರಾಯಭಾರ ಕಚೇರಿಗಳು, ದೂತಾವಾಸಗಳು ಮತ್ತು ವಿಶ್ವಾದ್ಯಂತ ಇತರ ರಾಜತಾಂತ್ರಿಕ ಕಾರ್ಯಗಳಿಂದ ಒದಗಿಸಲಾದ ಸೇವೆಗಳಿಗೆ ಪ್ರವೇಶವನ್ನು ನೀಡುತ್ತದೆ.

    5. ಆದ್ಯತಾ ಸೇವೆಗಳು: ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರಿಗೆ ವಿಮಾನ ನಿಲ್ದಾಣಗಳಲ್ಲಿ ಮತ್ತು ವಲಸೆ ಪ್ರಕ್ರಿಯೆಗಳಲ್ಲಿ ಮೊದಲ ಆದ್ಯತೆ ಸಿಗುತ್ತದೆ. ಈ ಪಾಸ್‌ಪೋರ್ಟ್‌ ಹೊಂದಿದವರಿಗೆ ಪ್ರತ್ಯೇಕ ಕೌಂಟರ್‌ ಇರುತ್ತದೆ. ಇದರಿಂದಾಗಿ ಬಹಳಷ್ಟು ಸಮಯ ಉಳಿತಾಯವಾಗುತ್ತದೆ.

    6. ಅಧಿಕೃತ ಪ್ರಾತಿನಿಧ್ಯ: ರಾಜತಾಂತ್ರಿಕ ಪಾಸ್‌ಪೋರ್ಟ್ ಭಾರತೀಯ ಸರ್ಕಾರದ ಅಧಿಕೃತ ಪ್ರಾತಿನಿಧ್ಯವನ್ನು ಸೂಚಿಸುತ್ತದೆ ಮತ್ತು ವಿದೇಶಿ ಅಧಿಕಾರಿಗಳು ಮತ್ತು ರಾಜತಾಂತ್ರಿಕ ಸಮುದಾಯಗಳೊಂದಿಗೆ ವ್ಯವಹರಿಸುವ ಅಧಿಕಾರ ನೀಡುತ್ತದೆ.

    ಸಾಮಾನ್ಯ ನಾಗರಿಕ ಪಡೆಯಬಹುದೇ?
    ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ವ್ಯಕ್ತಿಗಳಿಗೆ ಅವರ ಅಧಿಕೃತ ಹುದ್ದೆ ಮತ್ತು ಸರ್ಕಾರದ ಒಳಗಡೆ ಅವರ ಪಾತ್ರದ ಆಧಾರದ ಮೇಲೆ ನೀಡಲಾಗುತ್ತದೆ. ಸಾಮಾನ್ಯ ಸಾರ್ವಜನಿಕರ ಬಳಕೆಗೆ ವಿತರಿಸುವುದಿಲ್ಲ. ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳ ವಿತರಣೆ ಮತ್ತು ಬಳಕೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಿಯಂತ್ರಿಸುತ್ತದೆ ಮತ್ತು ನಿರ್ದಿಷ್ಟ ನಿಯಮಗಳು ಮತ್ತು ಮಾರ್ಗಸೂಚಿಗೆ ಒಳಪಟ್ಟಿರುತ್ತದೆ.