Tag: Dipika Padukone

  • ದೀಪಿಕಾ ಪಡುಕೋಣೆಯನ್ನು ಸಮರ್ಥಿಸಲು ಬಂದಿಲ್ಲ: ಕಂಗನಾ ರಣಾವತ್

    ದೀಪಿಕಾ ಪಡುಕೋಣೆಯನ್ನು ಸಮರ್ಥಿಸಲು ಬಂದಿಲ್ಲ: ಕಂಗನಾ ರಣಾವತ್

    ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಹೊಸ ಹೊಸ ಹೇಳಿಕೆಗಳ ಮೂಲಕ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಕಂಗನಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ದೀಪಿಕಾ ಪಡುಕೋಣೆಯವರ ಸಿನಿಮಾ ಪ್ರಚಾರ ಮಾಡಲು ಬಂದಿಲ್ಲ ಎಂದು ಪತ್ರಕರ್ತರಿಗೆ ತಿರುಗೇಟು ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

    ಹೊಸ ರಿಯಾಲಿಟಿ ಶೋ ಲಾಕ್ ಅಪ್ ಪ್ರಚಾರ ಕಾರ್ಯಕ್ರಮದಲ್ಲಿ ಕಂಗನಾ ಪತ್ರಕರ್ತೆಯ ಮೇಲೆ ಕಿಡಿಕಾರಿದ್ದಾರೆ. ಪ್ರಭಾವಿ ಫ್ರೆಡ್ಡಿ ಬರ್ಡಿಯವರು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಗೆಹ್ರೈಯಾನ್ ಚಿತ್ರದ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ದೀಪಿಕಾ ಅವರ ಬಟ್ಟೆಗಳು ಚಿಕ್ಕದಾಗುತ್ತಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಶೀರ್ಷಿಕೆ ಬರೆದು ಪೋಸ್ಟ್ ಮಾಡಿದ್ದರು. ಈ ಕುರಿತು ಕಂಗನಾ ಒಬ್ಬ ಮಹಿಳಾ ಸಬಲೀಕರಣ ಪ್ರತಿಪಾದಕರಾಗಿರುವುದನ್ನು ಪರಿಗಣಿಸಿ ಪತ್ರಕರ್ತೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಫರ್ಹಾನ್ ಅಖ್ತರ್, ಶಿಬಾನಿ ದಾಂಡೇಕರ್

    ಈ ಪ್ರಶ್ನೆಗೆ ಕಂಗನಾ, ದೀಪಿಕಾ ಪಡುಕೋಣೆ ತನ್ನನ್ನು ತಾನು ಸಮರ್ಥಿಸಿಕೊಳ್ಳಬಲ್ಲಳು. ನಾನು ಇಲ್ಲಿ ಗೆಹ್ರೈಯಾನ್ ಸಿನಿಮಾದ ಪ್ರಚಾರಕ್ಕೆ ಬಂದಿಲ್ಲ ಎಂದು ಖಾರವಾಗಿ ಉತ್ತರಿಸಿದ್ದಾರೆ.

    ದೀಪಿಕಾ ಮುಗ್ಧಳಲ್ಲ ಅಂತ ಹೇಳಿ ಪತ್ರಕರ್ತೆಗೆ ನೀವು ನನ್ನ ಜೊತೆಗೆ ಹೊರಗೆ 45 ನಿಮಿಷಗಳ ಕಾಲ ಸಿಗಿ ಈ ವಿಷಯದ ಬಗ್ಗೆ ಮಾತನಾಡುತ್ತೇನೆ. ಆದರೆ ಈವೆಂಟ್‍ನಲ್ಲಿ ಮಾತನಾಡುವುದಿಲ್ಲ ಎಂದು ಹೇಳಿದರು.

    ನೋಡಿ, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗದವರನ್ನು ರಕ್ಷಿಸಲು ನಾನು ಇಲ್ಲಿದ್ದೇನೆ ಸರಿ? ಅವಳು ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲಳು. ದೀಪಿಕಾಗೆ ಅವಳದ್ದೇ ಆದ ಸವಲತ್ತು, ವೇದಿಕೆ ಇದೆ. ನಾನು ಅವರ ಚಲನಚಿತ್ರವನ್ನು ಇಲ್ಲಿ ಪ್ರಚಾರ ಮಾಡಲು ಬಂದಿಲ್ಲ ಕುಳಿತುಕೊಳ್ಳಿ ಎಂದು ಕಂಗನಾ ಪತ್ರಕರ್ತೆಗೆ ಉತ್ತರಿಸಿದ್ದಾರೆ. ಇದನ್ನೂ ಓದಿ: ‘ನಿಮ್ಮ ಶಾಯರಿ ಏಕೆ ಕೆಟ್ಟದಾಗಿದೆ’ – ಟ್ರೋಲಿಗರ ಪ್ರಶ್ನೆಗೆ ಸಾರಾ ಖಡಕ್ ಉತ್ತರ

    ಮುಂಬೈನ ಹೋಟೆಲ್‍ನಲ್ಲಿ ಕಂಗನಾ ರಣಾವತ್ ಮತ್ತು ಏಕ್ತಾ ಕಪೂರ್ ತಮ್ಮ ಹೊಸ ಶೋ ‘ಲಾಕ್ ಅಪ್’ ಅನ್ನು ಪ್ರಚಾರ ಮಾಡಲು ಬಂದಾಗ ಈ ಘಟನೆ ನಡೆದಿದೆ.

  • ಮದುವೆಗೂ 4 ವರ್ಷ ಹಿಂದೆಯೇ ಡೀಪ್‌ವೀರ್ ಎಂಗೇಜ್‌ಮೆಂಟ್ ವಿಚಾರ ನಿಮಗೆ ಗೊತ್ತಾ?

    ಮದುವೆಗೂ 4 ವರ್ಷ ಹಿಂದೆಯೇ ಡೀಪ್‌ವೀರ್ ಎಂಗೇಜ್‌ಮೆಂಟ್ ವಿಚಾರ ನಿಮಗೆ ಗೊತ್ತಾ?

    6 ವರ್ಷಗಳ ಒಡನಾಟದ ಬಳಿಕ ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ವಿಚಾರ ನಮಗೆಲ್ಲರಿಗೂ ಗೊತ್ತೇ ಇದೆ. ಆದರೆ ಜೋಡಿ ಹಕ್ಕಿಗಳು ಮದುವೆಗೂ 4 ವರ್ಷ ಮುನ್ನವೇ ನಿಶ್ಚಿತಾರ್ಥ ಮಾಡಿಕೊಂಡಿದ್ದುದರ ಬಗ್ಗೆ ನಿಮಗೆ ತಿಳಿದಿದ್ಯಾ?

    ದೀಪಿಕಾ ಹಾಗೂ ರಣ್‌ವೀರ್ 2018ರಲ್ಲಿ ಇಟಲಿಯಲ್ಲಿ ತಮ್ಮ ಕುಟುಂಬ ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಜೀವನದ ಗಂಟನ್ನು ಬೆಸೆದುಕೊಂಡಿದ್ದರು. ಆದರೆ ಅವರು ಅದಕ್ಕೂ 4 ವರ್ಷಗಳ ಹಿಂದೆಯೇ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.

    ಹೌದು. 2018ರ ಫಿಲ್ಮ್ಫೇರ್ ಸಂದರ್ಶನದಲ್ಲಿ ದೀಪಿಕಾ, ರಣ್‌ವೀರ್‌ನೊಂದಿಗಿನ ಸಂಬಂಧದ ಬಗ್ಗೆ ತಿಳಿಸಿದ್ದರು. ಇದೇ ಸಂದರ್ಭದಲ್ಲಿ ತಾವು 4 ವರ್ಷಗಳ ಹಿಂದೆಯೇ ಎಂಗೇಜ್‌ಮೆಂಟ್ ಆಗಿದ್ದುದರ ಬಗೆಗಿನ ರಹಸ್ಯವನ್ನೂ ಬಿಚ್ಚಿಟ್ಟಿದ್ದರು. ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಟ್ಟ ಶುಭಾ ಪೂಂಜಾ

    ನಮ್ಮ 6 ವರ್ಷಗಳ ಸುದೀರ್ಘ ಸಂಬಂಧದಲ್ಲಿ ಹಲವು ಏರಿಳಿತಗಳು ಎದುರಾಗಿವೆ. ಆದರೆ ನಾವು ಎಂದಿಗೂ ದೂರವಾಗಲಿಲ್ಲ. ನಮ್ಮಲ್ಲಿ ಎಂದಿಗೂ ದೊಡ್ಡ ಜಗಳಗಳು ನಡೆದಿಲ್ಲ. ಸಮಯ ತೆಗೆದುಕೊಂಡು ಎಲ್ಲವನ್ನೂ ಸರಿಪಡಿಸಿಕೊಳ್ಳುವಂತಹ ಸನ್ನಿವೇಶಗಳೂ ಎದುರಾಗಿಲ್ಲ. ಇವೆಲ್ಲದರ ನಡುವೆ ನಾವು ನಾಲ್ಕು ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ಈ ವಿಚಾರ ಅವನ ಮತ್ತು ನನ್ನ ಹೆತ್ತವರಿಗೆ ಹಾಗೂ ಸಹೋದರರಿಗೆ ಮಾತ್ರವೇ ತಿಳಿದಿತ್ತು ಎಂದು ಹೇಳಿದ್ದರು.

    ಈ ವಿಚಾರ ಹಳೆಯದಾದ್ರೂ ಈ ಅವರ ಹೆಚ್ಚಿನ ಅಭಿಮಾನಿಗಳು ಇದರ ಬಗ್ಗೆ ಯೋಚಿಸಿರುವುದು ತೀರಾ ಕಡಿಮೆ. ಇಂದು ದೀಪಿಕಾ ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅದೇನೇ ಆದರೂ ದೀಪಿಕಾ – ರಣ್‌ವೀರ್ ಜೋಡಿ ಬಿ-ಟೌನ್‌ನ ಅತೀ ಪ್ರೀತಿಯ ಜೋಡಿಗಳಲ್ಲಿ ಒಬ್ಬರು ಅನ್ನೋದ್ರಲ್ಲಿ ತಪ್ಪೇನಿಲ್ಲ. ಇದನ್ನೂ ಓದಿ: ಕತ್ರಿನಾ ಕೈಫ್ ವಜ್ರ ಖಚಿತ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ?

  • ಚಿಕ್ಕಮಗ್ಳೂರಿನಲ್ಲಿದ್ದಾರೆ ಸನ್ನಿ ಲಿಯೋನ್, ದೀಪಿಕಾ ಪಡುಕೋಣೆ!

    ಚಿಕ್ಕಮಗ್ಳೂರಿನಲ್ಲಿದ್ದಾರೆ ಸನ್ನಿ ಲಿಯೋನ್, ದೀಪಿಕಾ ಪಡುಕೋಣೆ!

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಗೆ ಬಾಲಿವುಡ್ ನಟಿಯರಾದ ಸನ್ನಿ ಲಿಯೋನ್ ಹಾಗೂ ದೀಪಿಕಾ ಪಡುಕೋಣೆ ಆಗಮಿಸಲಿದ್ದಾರೆ. ಅಯ್ಯೋ, ಹೌದಾ ನಮ್ಗೆ ಗೊತ್ತೇ ಇಲ್ಲ ಅಂತ ಗಾಬರಿಯಾಗಬೇಡಿ.

    ಕಳಸ ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಚೆನ್ನಯ್ಯ ಮಾಡಿದ ರಸ್ತೆ ಮೂರೇ ತಿಂಗಳಿಗೆ ಅಡಿಯಷ್ಟು ಗುಂಡಿ ಬಿದ್ದು ಹಾಳಾಗಿ ಹೋಗಿದೆ. ಇದರಿಂದಾಗಿ ಸ್ಥಳೀಯರು ಸರ್ಕಾರದ ವಿರುದ್ಧ ಈ ರೀತಿ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

    ಕಳಸ ಪಟ್ಟಣದ ಯುವಕರು ಗುಂಡಿ ಬಿದ್ದ ರಸ್ತೆಯನ್ನ ಸ್ವಿಮ್ಮಿಂಗ್ ಪೂಲ್ ನಂತೆ ಫೋಟೋಶಾಪ್‍ನಲ್ಲಿ ಎಡಿಟ್ ಮಾಡಿ ಎಂಜಿನಿಯರ್ ಹಾಗೂ ಕಂಟ್ರಾಕ್ಟರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುಂಡಿ ಬಿದ್ದ ರಸ್ತೆಯಲ್ಲಿ ದೀಪಿಕಾ ಪಡುಕೋಣೆ ಹಾಗೂ ಸನ್ನಿ ಲಿಯೋನ್‍ರನ್ನು ಕೂರಿಸಿ ಇಂದು ಬೆಳಗ್ಗೆ ಸನ್ನಿ ಹಾಗೂ ಪಡುಕೋಣೆ 10 ಗಂಟೆಗೆ ಈಜು ಕೊಳವನ್ನ ಉದ್ಘಾಟಿಸಲಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಮತ್ಸ್ಯ ಕನ್ಯೆ ವೇಷ ಧರಿಸಿ ನಟಿ ಸೋನು ಗೌಡ ಬೆಂಗ್ಳೂರಲ್ಲಿ ವಿಶಿಷ್ಟ ಪ್ರತಿಭಟನೆ

    ಇದೇ ಈಜು ಕೊಳದ ಬಳಿ ತಮಿಳಿನ ಖ್ಯಾತ ನಟ ವಿಜಯ್ ಸೆಲ್ಫಿ ತೆಗೆದುಕೊಂಡಿರುವ ಫೋಟೋಗಳು ಕೂಡ ವಾಟ್ಸಾಪ್‍ನಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ವೈರಲ್ ಆಗಿದೆ. ಮೂರು ತಿಂಗಳ ಹಿಂದೆ ಬಾಳೂರು ಹ್ಯಾಂಡ್‍ಪೋಸ್ಟ್ ನಿಂದ ಕಳಸಾದ ಅಂಬಾತೀರ್ಥ ಬಸ್ ನಿಲ್ದಾಣದವರೆಗೆ ನಿರ್ಮಿಸಿರೋ ರಸ್ತೆ ಇದಾಗಿದೆ. ಎರಡು ವರ್ಷ ನಿರ್ವಹಣೆಯ ಜವಾಬ್ದಾರಿ ಹೊತ್ತಿರೋ ಎಂಜಿನಿಯರ್ ಹಾಗೂ ಕಂಟ್ರಾಕ್ಟರ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳಿಯರು ಎಂಜಿನಿಯರ್ ಚೆನ್ನಯ್ಯ ಹಾಗೂ ಕಂಟ್ರಾಕ್ಟರ್ ಹಾಲಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.