Tag: Dinosaur

  • ಖಾಸಗಿಯವ್ರ ಪಾಲಾಗುತ್ತಿದೆ ಟೈರನ್ನೊಸಾರಸ್ ಪಳಯುಳಿಕೆ – ವಿಜ್ಞಾನಿಗಳ ಆತಂಕವೇನು?

    ಖಾಸಗಿಯವ್ರ ಪಾಲಾಗುತ್ತಿದೆ ಟೈರನ್ನೊಸಾರಸ್ ಪಳಯುಳಿಕೆ – ವಿಜ್ಞಾನಿಗಳ ಆತಂಕವೇನು?

    ಭೂಮಿಯ ಮೇಲೆ ನಡೆದಾಡಿದ ಅತ್ಯಂತ ಉಗ್ರ ಪರಭಕ್ಷಕಗಳಲ್ಲಿ ಒಂದೆಂದು ಹೇಳಲಾಗುವ ಡೈನೋಸಾರ್ (Dinosaur) ಸಂತತಿಯ ಟೈರನ್ನೊಸಾರಸ್ ರೆಕ್ಸ್ (Tyrannosaur Rex) ಬಗ್ಗೆ ಜಗತ್ತಿಗೆ ಇಂದಿಗೂ ಕುತೂಹಲವಿದೆ. ಅದೇ ಕಾರಣಕ್ಕೆ ವಿಜ್ಞಾನಿಗಳು ಇಂದಿಗೂ ಅವುಗಳ ಬಗ್ಗೆ ಅಧ್ಯಯನ ನಡೆಸುತ್ತಲೇ ಇದ್ದಾರೆ. ಆದರೆ ಟೈರನ್ನೊಸಾರಸ್ ರೆಕ್ಸ್ ಪಳೆಯುಳಿಕೆಗಳ ಅಧ್ಯಯನದಲ್ಲಿ ಕೆಲವು ಅಡೆತಡೆಗಳು ಎದುರಾಗುತ್ತಿತ್ತು, ಅವುಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

    ಟೈರನ್ನೊಸಾರಸ್ ರೆಕ್ಸ್‌ನ ಗುಣಲಕ್ಷಣಗಳು ಮತ್ತು ಜೀವನಶೈಲಿಯ ಹಲವಾರು ವೈಶಿಷ್ಟ್ಯಗಳು ಇನ್ನೂ ಚರ್ಚೆಯಲ್ಲಿಯೇ ಉಳಿದಿವೆ. ಅವುಗಳ ಜೀವನಶೈಲಿ ಹೇಗಿತ್ತು? ಅವು ನಿಜವಾಗಿಯೂ ಎಷ್ಟು ದೊಡ್ಡದಾಗಿದ್ದವು? ಅದು ಎಷ್ಟು ವೇಗವಾಗಿ ಓಡಿ ಬೇಟೆಯಾಡುತ್ತಿತ್ತು ಎಂಬ ಪ್ರಶ್ನೆಗಳು ಇನ್ನೂ ಪ್ರಶ್ನೆಗಳಾಗಿಯೇ ಉಳಿದಿವೆ. ಇವುಗಳ ಪಳೆಯುಳಿಕೆಗಳು 66 ಮಿಲಿಯನ್ ವರ್ಷಗಳಿಗಿಂತಲೂ ಹಳೆಯದಾಗಿದ್ದು, ಉತ್ತರ ಅಮೆರಿಕಾದಾದ್ಯಂತ ಹೆಚ್ಚಾಗಿ ಪತ್ತೆಯಾಗಿವೆ. ಅಮೆರಿಕದ ಮೊಂಟಾನಾ ಮತ್ತು ದಕ್ಷಿಣ ಡಕೋಟಾದಲ್ಲಿ ಹೆಚ್ಚಾಗಿ ಇವುಗಳ ಪಳೆಯುಳಿಕೆಗಳು ಪತ್ತೆಯಾಗಿವೆ.

      

    ಟೈರನ್ನೊಸಾರಸ್ ಎಂದರೆ ಗ್ರೀಕ್ ಭಾಷೆಯಲ್ಲಿ ಕ್ರೂರ ಹಲ್ಲಿ ಎಂದರ್ಥ. ರೆಕ್ಸ್ ಲ್ಯಾಟಿನ್ ಭಾಷೆಯಲ್ಲಿ ರಾಜ ಎಂದರ್ಥ, ಆದ್ದರಿಂದ ಟಿ. ರೆಕ್ಸ್ ಕ್ರೂರ ಹಲ್ಲಿಗಳ ರಾಜ ಎಂದು ಸಹ ಕರೆಯಲಾಗುತ್ತದೆ.

    ಟೈರನ್ನೊಸಾರಸ್ ರೆಕ್ಸ್ ಅದೆಷ್ಟು ದೈತ್ಯ ಗೊತ್ತಾ?
    ಇಲ್ಲಿಯವರಿಗೂ ಪತ್ತೆಯಾದ ಟೈರನ್ನೊಸಾರಸ್‌ನ ಪಳಯುಳಿಕೆಗಳ ಮಾಹಿತಿ ಪ್ರಕಾರ, ಇವು 43 ಅಡಿ (13.1 ಮೀಟರ್) ಉದ್ದ, 13 ಅಡಿ (4 ಮೀಟರ್) ಎತ್ತರ ಮತ್ತು 24,000 ಪೌಂಡ್ (11,000 ಕೆಜಿ) ವರೆಗೆ ತೂಗುತ್ತವೆ. ಬಹುಶಃ ಇವು 50 ಅಡಿ (15 ಮೀಟರ್) ಉದ್ದ ಬೆಳೆಯಬಹುದು. 16 ಅಡಿ (5 ಮೀ) ಎತ್ತರಕ್ಕೆ ಬೆಳೆಯುತ್ತಿದ್ದವು, 33,000 ಪೌಂಡ್ (15,000 ಕೆಜಿ) ಹೊಂದಿದ್ದವು ಎಂದು ಪಳಯುಳಿಕೆಗಳ ಆಧಾರದ ಮೇಲೆ ಅಂದಾಜಿಸಲಾಗಿದೆ.

    ಪಳೆಯುಳಿಕೆಗಳ ಸೊಂಟದ ಆಕಾರದ ಆಧಾರದ ಮೇಲೆ, ಹೆಣ್ಣು ಟಿ. ರೆಕ್ಸ್ ಗಂಡಿಗಿಂತ ಸಾವಿರ ಪೌಂಡ್‌ಗಳಷ್ಟು ಹೆಚ್ಚಿನ ತೂಕ ಹೊಂದಿದ್ದವು ಎಂದು ನಂಬಲಾಗಿದೆ. ಈ ಗುಣಲಕ್ಷಣಕ್ಕೆ ಕಾರಣವೆಂದರೆ, ದೊಡ್ಡ ಗಾತ್ರದ ಮೊಟ್ಟೆಗಳನ್ನು ಇಡಬೇಕಾಗಿತ್ತು ಇದರಿಂದ ಹೆಣ್ಣು ಗಾತ್ರದಲ್ಲಿ ದೊಡ್ಡದಾಗಿದ್ದವು. ಅಲ್ಲದೇ ಹೆಣ್ಣು ಶಕ್ತಿಶಾಲಿಯಾಗಿದ್ದು, ಬೇಟೆಯಲ್ಲಿ ನೈಪುಣ್ಯತೆ ಹೊಂದಿದ್ದವು ಎಂದು ಅಧ್ಯಯನಗಳು ತಿಳಿಸಿವೆ.

    ಕೆನಡಾದಲ್ಲಿ ಪತ್ತೆಯಾದ ಪಳೆಯುಳಿಕೆ ಇದುವರೆಗೆ ಕಂಡುಬಂದಿರುವ ಅತ್ಯಂತ ಭಾರವಾದ ಟೈರನ್ನೊಸಾರಸ್ ರೆಕ್ಸ್ ಮಾದರಿದ್ದಾಗಿದೆ. ಇದು ಜೀವಿತಾವಧಿಯಲ್ಲಿ ಅಂದಾಜು 19,500 ಪೌಂಡ್‌ಗಳಷ್ಟು ತೂಕವಿತ್ತು ಎಂದು ಊಹಿಸಲಾಗಿದೆ. ಅವುಗಳ ಮೂಳೆಗಳು ಟೊಳ್ಳಾದ ರಚನೆಯನ್ನು ಹೊಂದಿದ್ದು ಅದು ನೀರಿನಲ್ಲಿ ತೇಲಲು ಸಹಾಯ ಮಾಡುತ್ತಿತ್ತು ಎನ್ನಲಾಗಿದೆ.

    ಟೈರನ್ನೊಸಾರಸ್ ಬುದ್ದಿವಂತಿಕೆ ಎಷ್ಟು ಗೊತ್ತಾ?
    ಟೈರನ್ನೊಸಾರಸ್‌ನ ಮೆದುಳಿನ ಮೇಲಿನ ಅಧ್ಯಯನಗಳು ಅದು ಬಬೂನ್‌ಗಳಂತೆಯೇ ಬುದ್ಧಿವಂತಿಕೆ ಹೊಂದಿದ್ದವು ಎಂದು ಹೇಳುತ್ತವೆ. ಇನ್ನೂ 2024ರ ಅಧ್ಯಯನಗಳು ಟೈರನ್ನೊಸಾರಸ್‌ನ ಬುದ್ಧಿಮತ್ತೆ ಮೊಸಳೆಗಳಷ್ಟಿತ್ತು ಎಂಬುದನ್ನು ಉಲ್ಲೇಖಿಸಿವೆ.

    ಟೈರನ್ನೊಸಾರಸ್‌ನ ಕೈಗಳಂತಿರುವ ಅಂಗಗಳ ಬಗ್ಗೆ ಇನ್ನೂ ತಿಳಿದಿಲ್ಲ. ಆದರೆ ಅವು ಬೇಟೆಯಾಡುವ ಪ್ರಾಣಿಗಳೊಂದಿಗೆ ಹೋರಾಡಲು ಸಹಕಾರಿಯಾಗಿದ್ದುವು ಎಂದು ಅಂದಾಜಿಸಲಾಗಿದೆ. ಅವು ಭೂಮಿಯ ಜೀವಿಗಳಲ್ಲಿಯೇ ಅತ್ಯಂತ ಬಲಿಷ್ಠ ದವಡೆಯನ್ನು ಹೊಂದಿದ್ದವು. ಭೂಮಿ ಮೇಲೆ ಸುಮಾರು 2.5 ಬಿಲಿಯನ್ ಸಂಖ್ಯೆಯಷ್ಟಿದ್ದವು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

    66 ಮಿಲಿಯನ್ ವರ್ಷಗಳ ಹಿಂದೆ ಕ್ಷುದ್ರಗ್ರಹವೊಂದು ಭೂಮಿಗೆ ಡಿಕ್ಕಿ ಹೊಡೆದ ಬಳಿಕ ಟೈರನ್ನೊಸಾರಸ್ ಮತ್ತು ಡೈನೋಸಾರ್‌ಗಳು ನಾಶವಾದವು ಎಂದು ನಂಬಲಾಗಿದೆ. ಇವುಗಳ ಬಗ್ಗೆ ನಿರಂತರ ಅಧ್ಯಯನ ನಡೆಯುತ್ತಲೇ ಇದೆ.

    ಟೈರನ್ನೊಸಾರಸ್ ಅಧ್ಯಯನಕ್ಕೆ ಇರುವ ತೊಡಕುಗಳೇನು?
    ಶ್ರೀಮಂತ ವ್ಯಕ್ತಿಗಳು ಟೈರನ್ನೊಸಾರಸ್ ರೆಕ್ಸ್ ಪಳೆಯುಳಿಕೆಗಳನ್ನು ಖರೀದಿಸುತ್ತಿರುವುದು ಅವುಗಳ ಸಂಶೋಧನೆಗೆ ತೊಡಕಾಗುತ್ತಿದೆ ಎಂದು ಸಂಶೋಧಕರು ಕಳವಳ ವ್ಯಕ್ತಪಡಿಸಿದ್ದಾರೆ. ಖಾಸಗಿ ಸಂಗ್ರಹಗಳಲ್ಲಿ ಪಳೆಯುಳಿಕೆಗಳನ್ನು ಇರಿಸಲಾಗುವುದರಿಂದ ಅವು ಸಂಶೋಧನೆಗೆ ಹೆಚ್ಚು ಲಭ್ಯವಾಗುತ್ತಿಲ್ಲ.

    ಡೈನೋಸಾರ್ ಅಸ್ಥಿಪಂಜರಗಳನ್ನು ಅಲಂಕಾರಿಕ ವಸ್ತುಗಳಂತೆ ಮಾರಾಟ ಮಾಡಲಾಗುತ್ತಿದೆ. ಪಳೆಯುಳಿಕೆಗಳು 1.55 ಮಿಲಿಯನ್‌ ಡಾಲರ್‌ನಿಂದ (13.18,007 ಕೋಟಿ ರೂ.) 38.68 ಮಿಲಿಯನ್ ಡಾಲರ್‌ವರೆಗೆ (3,28,92,44,698 ರೂ.) ಮಾರಾಟವಾಗುತ್ತವೆ. ಪ್ರಸ್ತುತ ಸಾರ್ವಜನಿಕ ಟ್ರಸ್ಟ್‌ಗಳಲ್ಲಿ 61 ಟಿ. ರೆಕ್ಸ್ ಪಳೆಯುಳಿಕೆಗಳಿವೆ. 71 ಪಳಯುಳಿಕೆಗಳು ಖಾಸಗಿಯವರ ಕೈಯಲ್ಲಿವೆ. ಇದರಿಂದ ವೈಜ್ಞಾನಿಕ ಅಧ್ಯಯನಕ್ಕೆ ಕಡಿಮೆ ಮಾದರಿಗಳು ಲಭ್ಯವಿದೆ. ಇದು ಸಂಶೋಧನೆಗಳಿಗೆ ತೀವ್ರ ಹಿನ್ನಡೆಗೆ ಕಾರಣವಾಗಿದೆ.

    ಈ ರೀತಿ ಹಣಕ್ಕಾಗಿ ಖಾಸಗಿ ವ್ಯಕ್ತಿಗಳು ಪಳಯುಳಿಕೆ ಸಂಗ್ರಹಕ್ಕೆ ಮುಂದಾಗುತ್ತಿದ್ದು, ಮಾರಾಟ ಮಾಡುತ್ತಿದ್ದಾರೆ. ಇದರಿಂದ ವಿಜ್ಞಾನಿಗಳಿಗೆ ಪಳಯುಳಿಕೆಗಳ ಮಾದರಿ ಲಭ್ಯವಾಗುತ್ತಿಲ್ಲ. ಇಂತಹ ಬೆಳವಣಿಗೆಯಿಂದಾಗಿ ಟೈರನ್ನೊಸಾರಸ್ ಬಗೆಗಿನ ಎಷ್ಟೋ ಅಂಶಗಳು ನಿಗೂಢವಾಗಿಯೇ ಉಳಿದಿವೆ ಎಂಬುದು ವಿಜ್ಞಾನಿಗಳ ಆತಂಕವಾಗಿದೆ.

  • ಚಿಲಿಯಲ್ಲಿ ವಿಭಿನ್ನ ಬಾಲ ಹೊಂದಿರುವ ಡೈನೋಸಾರ್ ಪ್ರಭೇದ ಪತ್ತೆ

    ಚಿಲಿಯಲ್ಲಿ ವಿಭಿನ್ನ ಬಾಲ ಹೊಂದಿರುವ ಡೈನೋಸಾರ್ ಪ್ರಭೇದ ಪತ್ತೆ

    ಸ್ಯಾಂಟಿಯಾಗೊ: 7.5 ಕೋಟಿ ವರ್ಷಗಳ ಹಿಂದೆ ಭೂಮಿಯಲ್ಲಿ ಬದುಕಿತ್ತು ಎನ್ನಲಾಗುತ್ತಿರುವ ಡೈನೋಸಾರ್ ಒಂದರ 80% ದಷ್ಟು ಅಸ್ತಿಪಂಜರ ಪತ್ತೆಯಾಗಿದೆ.

    ಚಿಲಿಯ ಪ್ಯಾಟಗೋನಿಯಾದಲ್ಲಿ ಮೂರು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಸಂಶೋಧನೆಯ ಮಾಹಿತಿಯನ್ನು ಇತ್ತೀಚೆಗೆ ಪ್ಯಾಲಿಯಂಟಾಲಜಿಸ್ಟ್ ಗಳು ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ ಈ ಡೈನೋಸಾರ್‌ನ ಬಾಲ ವಿಭಿನ್ನವಾಗಿದ್ದು, ಹೊಸದೊಂದು ಪ್ರಭೇಧದ ಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

    ಇದು ಡೈನೋಸಾರ್‌ನ ಹೊಸ ಪ್ರಭೇದ ಎಂಬುದಾಗಿ ಗುರುತಿಸಲಾಗಿದೆ. ಇದರ ಬಾಲ ಇಲ್ಲಿಯ ವರೆಗೆ ಗುರುತಿಸಲಾಗಿರುವ ಪ್ರಭೇದಗಳಿಗಿಂತಲೂ ಭಿನ್ನವಾಗಿದೆ ಎಂಬುದನ್ನು ಕಂಡುಹಿಡಿದಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ 7 ಜನರಿಗೆ ಓಮಿಕ್ರಾನ್ ಪತ್ತೆ – 12ಕ್ಕೆ ಏರಿದ ಕೇಸ್

    ಈ ಹೊಸ ಜಾತಿಯ ಡೈನೋಸಾರ್ ಅನ್ನು ಸ್ಟೆಗೌರೋಸ್ ಎಲೆಂಗಸ್ಸೆನ್ ಎಂದು ಕರೆಯಲಾಗಿದ್ದು, ಇದರ ಪಳೆಯುಳಿಕೆಯನ್ನು 2018ರಲ್ಲಿ ಕಂಡುಹಿಡಿಯಲಾಗಿತ್ತು. ಹೊಸ ರೀತಿಯ ದೇಹ ರಚನೆಯುಳ್ಳ ಡೈನೋಸಾರ್‌ನ ಪತ್ತೆಯಾಗಿರವುದು ನಿಜವಾಗಿಯೂ ಅದ್ಭುತ ಎಂದು ಸಂಶೊಧಕ ಅಲೆಗ್ಸಾಂಡರ್ ವರ್ಗಾಸ್ ತಿಳಿಸಿದ್ದಾರೆ.

    ಈ ಪ್ರಭೇದದ ಬಾಲದಲ್ಲಿ ಏಳು ಜತೆ ಆಸ್ಟಿಯೋಡರ್ಮ್‍ಗಳು ಇದ್ದು, ಇದು ಡೈನೋಸಾರ್‍ಗೆ ಆಯುಧವಾಗಿ ಕೆಲಸ ಮಾಡಲು ಸಹಾಯ ಮಾಡುತ್ತಿತ್ತು ಎಂದು ತಿಳಿದುಬಂದಿದೆ. ಇಲ್ಲಿಯವರೆಗೆ ಪತ್ತೆಯಾಗಿರುವ ಡೈನೋಸಾರ್‌ಗಳಿಗಿಂತ ಇದು ವಿಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಜರತಾರಿ ಸೀರೆ, ಆಭರಣ ಧರಿಸಿ ರೈಲ್ವೇ ನಿಲ್ದಾಣದಲ್ಲಿ ಊಟ ಹಂಚಿದ ಮಹಿಳೆ

    ಇದು ಜರಿ ಗಿಡವನ್ನು ಹೋಲುವ ಬಾಲದ ರಚನೆ ಹೊಂದಿದ್ದು, ಅಸ್ಥಿಪಂಜರದ 80% ದಷ್ಟು ಭಾಗಗಳನ್ನು ಕಂಡುಹಿಡಿಯಲಾಗಿದೆ. ಸುಮಾರು 7 ಅಡಿ ಉದ್ದ ಹಾಗೂ 150 ಕೆಜಿ ತೂಗಬಹುದಾದ ಪ್ರಭೇದ ಸಸ್ಯಾಹಾರಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.

     

  • ಡೈನೋಸಾರ್ ಮುಕ್ತವಾಗಿ ತಿರುಗಾಡುವುದನ್ನ ನೋಡಿದೆ- ಅನುಷ್ಕಾ

    ಡೈನೋಸಾರ್ ಮುಕ್ತವಾಗಿ ತಿರುಗಾಡುವುದನ್ನ ನೋಡಿದೆ- ಅನುಷ್ಕಾ

    ಮುಂಬೈ: ಡೈನೋಸಾರ್ ಮುಕ್ತವಾಗಿ ತಿರುಗಾಡುವುದನ್ನು ನಾನು ನೋಡಿದೆ ಎಂದು ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಪತಿ ವಿರಾಟ್ ಕೊಹ್ಲಿ ಕಾಲೆಳೆದಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಪತಿಯೊಂದಿಗೆ ಕಳೆಯುತ್ತಿರುವ ಕೆಲವು ಕ್ಷಣಗಳನ್ನು ಅನುಷ್ಕಾ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಂತಹದ್ದೇ ವಿಡಿಯೋವೊಂದನ್ನು ಇಂದು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಡೈನೋಸಾರ್ ರೀತಿ ಮನೆಗೆ ಪ್ರವೇಶಿಸುತ್ತಾರೆ. ಡೈನೋಸಾರ್‍ನಂತೆ ವಿರಾಟ್ ತನ್ನ ಕೈಗಳನ್ನು ಮುಂದಿಡುತ್ತಾರೆ. ಇದರ ನಂತರ ಅವರು ಕ್ಯಾಮೆರಾ ಕಡೆಗೆ ನೋಡಿ ಡೈನೋಸಾರ್‍ನಂತೆ ಶಬ್ದ ಮಾಡುತ್ತಾರೆ. ಈ ವಿಡಿಯೋಗೆ “ಡೈನೋಸಾರ್ ಮುಕ್ತವಾಗಿ ತಿರುಗಾಡುವುದನ್ನು ನಾನು ನೋಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

    ವಿಡಿಯೋ ಪೋಸ್ಟ್ ಮಾಡಿದ 2 ಗಂಟೆಯಲ್ಲಿ 28 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಕೆಲ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    https://www.instagram.com/p/CAZoId4pudl/?utm_source=ig_embed

    ಇದಕ್ಕೂ ಮೊದಲು ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಅನುಷ್ಕಾ ಮತ್ತು ಕೊಹ್ಲಿ ಫ್ಲಾಟ್ ಮುಂದಿನ ಖಾಲಿ ಜಾಗದಲ್ಲಿ ಕ್ರಿಕೆಟ್ ಆಡುತ್ತಿರುವುದು ಕಂಡುಬಂದಿತ್ತು. ಲಾಕ್‍ಡೌನ್ ಮಧ್ಯೆ ಅನುಷ್ಕಾ ಬೌಲರ್ ಆಗಿ ಕೊಹ್ಲಿ ಅಭ್ಯಾಸಕ್ಕೆ ಸಾಥ್ ನೀಡಿದರು.

  • ಬೆಂಗ್ಳೂರಿನಲ್ಲಿದೆ ಅಪರೂಪದ ಡೈನೋಸಾರ್ ಮೊಟ್ಟೆ

    ಬೆಂಗ್ಳೂರಿನಲ್ಲಿದೆ ಅಪರೂಪದ ಡೈನೋಸಾರ್ ಮೊಟ್ಟೆ

    ಬೆಂಗಳೂರು: ಭೂಮಿಯ ಮೇಲೆ ದೈತ್ಯ ಪ್ರಾಣಿ ಡೈನೋಸಾರ್ ಇತ್ತು ಎನ್ನುವುದಕ್ಕೆ ಹಲವು ಪುರಾವೆಗಳು ಸಿಕ್ಕಿವೆ. ಇಂದಿಗೂ ಅದರ ಬಗ್ಗೆ ಸಂಶೋಧನೆ ಮುಂದುವರೆಯುತ್ತಾಲೇ ಇದೆ. ಆದರೆ ಅತಿ ಅಪರೂಪದ ಡೈನೋಸಾರ್ ಮೊಟ್ಟೆ ಬೆಂಗಳೂರಿನಲ್ಲಿ ಇರುವುದು ವಿಶೇಷ.

    ಹೌದು. ಭೂಗರ್ಭ ಶಾಸ್ತ್ರಜ್ಞ ಪ್ರಕಾಶ್ ಅವರು ಈ ಡೈನೋಸಾರ್ ಮೊಟ್ಟೆಯನ್ನು ತಮ್ಮ ಸಂಶೋಧನೆಗಾಗಿ ತಂದಿಟ್ಟುಕೊಂಡಿದ್ದಾರೆ. 65 ದಶಲಕ್ಷ ವರ್ಷದ ಹಿಂದೆ ಜ್ವಾಲಮುಖಿ ಸ್ಪೋಟದಿಂದ ಕತ್ತಲು ಮತ್ತು ಶೀತಲ ವಾತಾವರಣ ನಿರ್ಮಾಣವಾಗಿತ್ತು. ಆಗ ಬಂದ ಕಪ್ಪು ಹೊಗೆಯಿಂದ ಭೂಮಿಯ ಮೇಲಿದ್ದ ಅಪರೂಪದ ಪ್ರಾಣಿ ಪಕ್ಷಿಗಳು ಸಾವನ್ನಪ್ಪಿದ್ದವು ಎನ್ನಲಾಗುತ್ತದೆ. ಬಹುತೇಕ ಜೀವಿಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋಗುತ್ತಿತ್ತಂತೆ, ಆಗ ಈ ಅಪರೂಪದ ಡೈನೋಸಾರ್ ಗುಜರಾತ್ ಭಾಗಕ್ಕೆ ಬಂದಿದ್ದು, ಅಲ್ಲಿ 22 ಮೊಟ್ಟೆ ಇಟ್ಟಿತ್ತು ಎನ್ನಲಾಗಿದೆ.

    ಆ ಬಳಿಕ ಈ ಪ್ರದೇಶದಲ್ಲಿ ಪ್ರವಾಹ ಬಂದು ಈ ಮೊಟ್ಟೆಯೆಲ್ಲಾ ಭೂಮಿಯ ಒಳಗೆ ಹುಗಿದು ಹೋಗಿತ್ತು. ಈ ವಿಶೇಷ ಮೊಟ್ಟೆಯನ್ನು ಸಂಶೋಧನೆಗಾಗಿ ವಿಜ್ಞಾನಿಗಳು ಹುಡುಕಿ ತಂದಿದ್ದರು. ಅದರಲ್ಲಿ ಒಂದು ಮೊಟ್ಟೆಯನ್ನು ಪ್ರಕಾಶ್ ಅವರು ತಂದು ಸಂಶೋಧನೆಗೆ ಬಳಕೆ ಮಾಡುತ್ತಿದ್ದಾರೆ. ಕಾಲಂತಾರದಲ್ಲಿ ಈ ಡೈನೋಸಾರ್ ಮೊಟ್ಟೆ ಕಲ್ಲಿನ ರೂಪಕ್ಕೆ ಬದಲಾಗಿರೋದು ವಿಶೇಷವಾಗಿದೆ ಎಂದು ಪ್ರಕಾಶ್ ಅವರು ತಿಳಿಸಿದ್ದಾರೆ.