Tag: dinner party

  • ಡಿನ್ನರ್ ಪಾರ್ಟಿ ನಂತರ ಚಿಕಿತ್ಸೆಗಾಗಿ ಅಮೆರಿಕಾಗೆ ಹಾರಿದ ಸಮಂತಾ

    ಡಿನ್ನರ್ ಪಾರ್ಟಿ ನಂತರ ಚಿಕಿತ್ಸೆಗಾಗಿ ಅಮೆರಿಕಾಗೆ ಹಾರಿದ ಸಮಂತಾ

    ಮಂತಾ (Samantha), ಒಪ್ಪಿಕೊಂಡಿದ್ದ ಸಿನಿಮಾಗಳನ್ನ ಮುಗಿಸಿಕೊಟ್ಟಿದ್ದಾರೆ. ಈಗ ತಮ್ಮ ಆರೋಗ್ಯದ ಕಡೆ ಗಮನ ವಹಿಸುತ್ತಿದ್ದಾರೆ. ಡಿವೋರ್ಸ್ ನಂತರ ಒಂದಲ್ಲಾ ಒಂದು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾ ಸೂಕ್ತ ಚಿಕಿತ್ಸೆಗಾಗಿ ಅಮೆರಿಕಾಗೆ (America) ಹಾರಿದ್ದಾರೆ. ತಮ್ಮ ಆರೋಗ್ಯ ಸುಧಾರಣೆಗೆ ಹೊಸ ಮಾದರಿಯ ಥೆರಪಿಯೊಂದನ್ನ ಮಾಡಿಸುತ್ತಿದ್ದಾರೆ. ಇದು ಆಮ್ಲಜನಕ ಥೆರಪಿಯಾಗಿದ್ದು, ಇದರ ಫೋಟೋವನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಅದಕ್ಕೂ ಮುನ್ನ ಫ್ರೆಂಡ್ಸ್ ಜೊತೆ ಡಿನ್ನರ್ ಪಾರ್ಟಿ (dinner party) ಮಾಡಿರುವ ಸಮಂತಾ, ಆನಂತರ ಅಮೆರಿಕಾ ವಿಮಾನ ಏರಿದ್ದಾರೆ.

    ನಾಗಚೈತನ್ಯ (NagaChaitanya) ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಮೇಲೆ ಮಯೋಸಿಟಿಸ್ ಕಾಯಿಲೆಯಿಂದ ಸಮಂತಾ ಬಳಲುತ್ತಿದ್ದರು. ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಚರ್ಮದ ಸಮಸ್ಯೆ, ಶ್ವಾಸಕೋಶದ ಸಮಸ್ಯೆಯನ್ನ ನಟಿ ಎದುರಿಸುತ್ತಿದ್ದರು. ಹಾಗಾಗಿ ಸಿನಿಮಾಗೆ ಕೊಂಚ ಬ್ರೇಕ್ ನೀಡಿ, ತಮ್ಮ ಹೆಲ್ತ್ ಕಡೆ ನಟಿ ಗಮನ ಕೊಡ್ತಿದ್ದಾರೆ. ಇದನ್ನೂ ಓದಿ:ರಿಷಬ್ ನಿರ್ಮಾಣದ ‘ಶಿವಮ್ಮ’ನಿಗೆ ಮತ್ತೆ ಅಂತಾರಾಷ್ಟ್ರೀಯ ಪ್ರಶಸ್ತಿ

    ಹೆಚ್‌ಬಿಓಟಿ ಹೆಸರಿನ ಚಿಕಿತ್ಸೆಯನ್ನು ಸ್ಯಾಮ್ ಪಡೆದುಕೊಳ್ಳುತ್ತಿದ್ದಾರೆ. ಹೆಚ್‌ಬಿಓಟಿ ಎಂದರೆ ಹೈಪರ್‌ಬ್ಯಾರಿಕ್ ಆಕ್ಸಿಜನ್ ಥೆರಪಿ ಎಂದರ್ಥ. ಈ ಚಿಕಿತ್ಸಾ ವಿಧಾನದಲ್ಲಿ ವ್ಯಕ್ತಿಗೆ ಪ್ರತ್ಯೇಕವಾಗಿ ಶುದ್ಧ ಆಮ್ಲಜನಕವನ್ನು ಸಾಮಾನ್ಯಕ್ಕಿಂತಲೂ ಹೆಚ್ಚಿನ ವೇಗದಲ್ಲಿ ನೀಡಲಾಗುತ್ತದೆ. ಈ ಥೆರಪಿ ಮಾಡಿಸಲು ವಿಶೇಷವಾದ ಕೋಣೆ ಅಥವಾ ಚೇಂಬರ್‌ಗಳನ್ನು ನಿರ್ಮಿಸಿ ಅದರಲ್ಲಿ ಚಿಕಿತ್ಸೆ ಪಡೆಯುವವರನ್ನು ಕೂರಿಸಿ ಅಥವಾ ಮಲಗಿಸಿ ವೇಗವಾಗಿ ಶುದ್ಧ ಆಮ್ಲಜನಕವನ್ನು ಅವರ ದೇಹಕ್ಕೆ ಹರಿಸಲಾಗುತ್ತದೆ. ಈ ಚಿಕಿತ್ಸೆಯಿಂದ ಶ್ವಾಸಕೋಶಗಳು ಹೆಚ್ಚು ಆಮ್ಲಜನಕವನ್ನು ಹೀರಿಕೊಳ್ಳುತ್ತವೆ ಹಾಗೂ ರಕ್ತದಲ್ಲಿಯೂ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ. ಚರ್ಮವು ಶುಷ್ಕವಾಗಿ ಬಿಳಿಚಿಕೊಳ್ಳುವುದರಿಂದ ರಕ್ಷಿಸುತ್ತದೆ. ರಕ್ತದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಾಗುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಶ್ವಾಸಕೋಶದ ಸೋಂಕುಗಳು ನಿವಾರಣೆಯಾಗುತ್ತದೆ. ಗಾಯಗಳು, ನೋವುಗಳು ಬೇಗನೆ ಮಾಯಲು, ವಾಸಿಯಾಗಲು ಪ್ರಾರಂಭವಾಗುತ್ತವೆ.

    ನಟಿ ಸಮಂತಾ, ವಿಜಯ್ ದೇವರಕೊಂಡ (Vijay Devarakonda) ಜೊತೆಗಿನ ‘ಖುಷಿ’ (Kushi)  ಸಿನಿಮಾ ಮುಗಿಸಿ ಕೊಟ್ಟಿದ್ದಾರೆ. ವರುಣ್ ಧವನ್ ಜೊತೆಗಿನ ಸಿಟಾಡೆಲ್ (Citadel) ಕೂಡ ಶೂಟಿಂಗ್ ಮುಗಿದಿದೆ. ಇಂಗ್ಲೀಷ್‌ನ ಒಂದು ಸಿನಿಮಾ, ಬಾಲಿವುಡ್ ಚಿತ್ರವೊಂದನ್ನ ನಟಿ ಓಕೆ ಎಂದಿದ್ದಾರೆ. ಸಮಂತಾ ಆರೋಗ್ಯದಲ್ಲಿ ಚೇತರಿಕೆ ಕಂಡ ಮೇಲೆ ಮತ್ತೆ ಸಿನಿಮಾ ಮಾಡಲಿದ್ದಾರೆ. ಅಲ್ಲಿಯವರೆಗೂ ನಟಿ ಬ್ರೇಕ್‌ ತೆಗೆದುಕೊಳ್ಳಲಿದ್ದಾರೆ.

    ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಟಿ ಸಮಂತಾ, ದಿನಕ್ಕೊಂದು ಪೋಸ್ಟ್ ಮಾಡಿ ತಮ್ಮ ಅಂತರಾಳದ ದುಗುಡಗಳನ್ನು ಅಭಿಮಾನಿಗಳ ಮುಂಚೆ ಬಿಚ್ಚಿಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದ ಮೂಲಕ ಸದಾ ಅಭಿಮಾನಿಗಳ ಜೊತೆ ಕನೆಕ್ಟ್ ಆಗುವ ಸಮಂತಾ, ಈ ಬಾರಿ ಆರು ತಿಂಗಳ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ದಿನಕ್ಕೂ ಅವು ಯಾತನೆಯ ದಿನಗಳು ಎಂದಿದ್ದಾರೆ.

     

    ಆರೋಗ್ಯದ ಸಮಸ್ಯೆಯಿಂದಾಗಿ ಸಿನಿಮಾ ರಂಗಕ್ಕೆ ಒಂದು ವರ್ಷಗಳ ಕಾಲ ಗೈರಾಗಿದ್ದ ಸಮಂತಾ, ಟ್ರೀಟ್ ಮೆಂಟ್ ನಂತರ ಮತ್ತೆ ಬಂದಿದ್ದರು. ಒಪ್ಪಿಕೊಂಡಿದ್ದ ಪ್ರಾಜೆಕ್ಟ್ ಗಳನ್ನು ಅವರು ಮುಗಿಸಿಕೊಡಬೇಕಿತ್ತು. ಹಾಗಾಗಿ ಆರು ತಿಂಗಳ ಕಾಲ ನೋವಿನಲ್ಲೇ ಕೆಲಸ ಮಾಡಿದ್ದಾರೆ. ಇನ್ನೂ ಸಾಧ್ಯವಿಲ್ಲ ಅನಿಸಿ, ಒಂದಷ್ಟು ಪ್ರಾಜೆಕ್ಟ್ ಗಳಿಗೆ ತೆಗೆದುಕೊಂಡಿದ್ದ ಅಡ್ವಾನ್ಸ್ ವಾಪಸ್ಸು ಮಾಡಿ ಮತ್ತೆ ಆರೋಗ್ಯದ ಕಡೆ ಗಮನ ಹರಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಊಟಕ್ಕಾಗಿ ಬಿಜೆಪಿಯಿಂದ ಜನರ ಕೋಟಿ-ಕೋಟಿ ಹಣ ಲೂಟಿ: ಜೀತು ಪಟ್ವಾರಿ

    ಊಟಕ್ಕಾಗಿ ಬಿಜೆಪಿಯಿಂದ ಜನರ ಕೋಟಿ-ಕೋಟಿ ಹಣ ಲೂಟಿ: ಜೀತು ಪಟ್ವಾರಿ

    ಭೋಪಾಲ್: ಬಿಜೆಪಿ (BJP) ರಾಜ್ಯ ಸರ್ಕಾರವು ಮುಖ್ಯಮಂತ್ರಿಗಳ (Chief Minister) ಮನೆಯಲ್ಲಿ ನಡೆದ ಪಕ್ಷದ ಸಭೆಗಳಲ್ಲಿ ಮಧ್ಯಾಹ್ನದ ಊಟ, ಚಹಾ ಮತ್ತು ರಾತ್ರಿಯ ಊಟಕ್ಕಾಗಿ 40 ಕೋಟಿ ರೂ. ಸಾರ್ವಜನಿಕ ಹಣವನ್ನು ಖರ್ಚು ಮಾಡಿದೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ (Congress) ಶಾಸಕ ಜೀತು ಪಟ್ವಾರಿ (Jitu Patwari) ಆರೋಪಿಸಿದ್ದಾರೆ.

    ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸುವ ವೇಳೆ ಮಾತನಾಡಿದ ಅವರು, 2014-18ರ ಅವಧಿಯಲ್ಲಿ ಆಡಳಿತ ಪಕ್ಷದ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡುವುದಕ್ಕಾಗಿಯೇ ಸರ್ಕಾರ ಕೋಟಿಗಟ್ಟಲೇ ಸಾರ್ವಜನಿಕ ಹಣ ಖರ್ಚು ಮಾಡಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan), ಆಡಳಿತ ಪಕ್ಷದ ಅಧಿಕಾರಿಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ 90 ಬಾರಿ ಊಟದ ವ್ಯವಸ್ಥೆ ಮಾಡಲು ಹಣವನ್ನು ಖರ್ಚು ಮಾಡಿದ್ದಾರೆ ಎಂದು ದೂರಿದ್ದಾರೆ.

    ಬಿಜೆಪಿ (BJP) ಈ ಆರೋಪವನ್ನು ತಳ್ಳಿಹಾಕಿದ್ದು, ಇದು ಶುದ್ಧ ಸುಳ್ಳು. ಸುಳ್ಳು ಹೇಳಿಕೆ ನೀಡಿರುವುದರ ವಿರುದ್ಧ `ಪ್ರಶ್ನಾ ಔರ್ ಸಂಬಂಧ ಸಮಿತಿ’ಗೆ (ಸದನದ ಉಲ್ಲೇಖ ಸಮಿತಿ) ದೂರು ಸಲ್ಲಿಸುವುದಾಗಿ ಹೇಳಿದೆ. ಇದನ್ನೂ ಓದಿ: ಮೆಸ್ಕಾಂ ಕಚೇರಿಯಲ್ಲಿದ್ದ ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಏಟು – ದಲಿತ ಸಂಘಟನೆಗಳ ಆಕ್ರೋಶ

    ಸದನದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಈ ಕುರಿತು ಉತ್ತರ ನೀಡುತ್ತಿದ್ದಂತೆ, ಪಟ್ವಾರಿ ದಾಖಲೆಗಳನ್ನು ಪ್ರಸ್ತುತಪಡಿಸಿದ್ದಾರೆ. ಊಟದ ವ್ಯವಸ್ಥೆ ಪಡೆಯುವುದಕ್ಕೆ ಬಿಜೆಪಿ ಕಚೇರಿ ಎಂದು ನಮೂದು ಮಾಡಿರುವ ರಶೀದಿಗಳನ್ನ ಸಲ್ಲಿಸಿದ್ದಾರೆ. ಅದರಲ್ಲಿ ಒಂದು ಕಪ್ ಚಹಾ 400 ರೂ.ಗೆ ಹಾಗೂ ಒಂದು ಪ್ಲೇಟ್ ಊಟಕ್ಕೆ 2 ಸಾವಿರ ರೂ. ವಿಧಿಸಲಾಗಿದೆ. ಒಂದು ವೇಳೆ ಸಲ್ಲಿಸಿರುವ ದಾಖಲೆಗಳು ನಕಲಿ ಎಂದು ಕಂಡುಬಂದರೆ ಅವರ ಸದನದ ಸದಸ್ಯತ್ವವನ್ನು ರದ್ದುಪಡಿಸಬಹುದು. ನಿಜವಾಗಿದ್ದರೆ, ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ನೀವು ಸದನವನ್ನು ದಾರಿ ತಪ್ಪಿಸುತ್ತಿದ್ದೀರಿ. ಬಿಜೆಪಿ ಕಾರ್ಯಕರ್ತರಿಗೆ ಊಟ ಬಡಿಸಲು ಸರ್ಕಾರದ ಒಂದು ಪೈಸೆಯೂ ಖರ್ಚು ಮಾಡಿಲ್ಲ ಎಂದು ನಾನು ಸಂಪೂರ್ಣ ಜವಾಬ್ದಾರಿಯಿಂದ ಹೇಳಬಲ್ಲೆ ಎಂದು ಹೇಳಿದರು. ಇದನ್ನೂ ಓದಿ: ವಿದೇಶಕ್ಕೆ Made In India ಪೋನ್- 110 ಪಟ್ಟು ಹೆಚ್ಚಳ, ಶೇ.40 ಐಫೋನ್‌ ರಫ್ತು

    ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ಮಾತನಾಡಿ, ಪಟ್ವಾರಿ ಅವರ ಹೇಳಿಕೆ ಮಹಾ ಸುಳ್ಳು. ಬಿಜೆಪಿಗೆ ಧಕ್ಕೆ ತರಲು ಈ ರೀತಿ ಹೇಳಿಕೆಗಳನ್ನೂ ನೀಡಲಾಗುತ್ತಿದೆ. ಈ ಹಿಂದೆ ಕಮಲ್ ನಾಥ್ ಅವರು ಮುಖ್ಯಮಂತ್ರಿಯಾಗಿದ್ದಾಗ (ಡಿಸೆಂಬರ್ 2018 ಮತ್ತು ಮಾರ್ಚ್ 2020ರ ನಡುವೆ) ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನಡೆದ್ದ 131 ಕೋಟಿ ಹಗರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಈ ತಂತ್ರ ರೂಪಿಸಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೋಗಲ್ಲ, ಹೋಗಲ್ಲ, ನಾನು ಹೋಗಲ್ಲ- ರಮೇಶ್ ಜಾರಕಿಹೊಳಿ

    ಹೋಗಲ್ಲ, ಹೋಗಲ್ಲ, ನಾನು ಹೋಗಲ್ಲ- ರಮೇಶ್ ಜಾರಕಿಹೊಳಿ

    ಬೆಳಗಾವಿ: ಜಲಸಂಪನ್ಮೂಲ ಹಾಗೂ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಆಯೋಜಿಸಿರುವ ಔತಣ ಕೂಟಕ್ಕೆ ನಾನು ಹೋಗಲ್ಲ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಮೂರು ಸಲ ಪುನರುಚ್ಚರಿಸಿದ್ದಾರೆ.

    ಬೆಳಗಾವಿ ಅಧಿವೇಶಕ್ಕೆ ಬರುವ ಎಲ್ಲ ಶಾಸಕರಿಗೂ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸಹೋದರರು ಪ್ರತಿವರ್ಷ ಔತಣ ಕೂಟ ಆಯೋಜಿಸುತ್ತಿದ್ದರು. ಆದರೆ ಈ ಬಾರಿ ಜಾರಕಿಹೊಳಿ ಸಹೋದರರು ನಿರಾಸಕ್ತಿ ತೋರಿದ್ದರಿಂದ ಸಚಿವ ಡಿ.ಕೆ.ಶಿವಕುಮಾರ್ ಆಯೋಜಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಮೇಶ್ ಚಾರಕಿಹೊಳಿ ಅವರು, ನಾನು ಯಾವುದೇ ಕಾರಣಕ್ಕೂ ಔತಣ ಕೂಟದಲ್ಲಿ ಭಾಗವಹಿಸುವುದಿಲ್ಲ ಅಂತ ಹೇಳಿ ಮತ್ತೊಮ್ಮೆ ಮುನಿಸು ಹೊರಹಾಕಿದ್ದಾರೆ. ನನಗೆ ಗಂಟಲು ನೋವಿತ್ತು ಹೀಗಾಗಿ ಇಂದು ನಡೆದ ಸಿಎಲ್‍ಪಿ ಸಭೆಗೆ ಬರಲಿಲ್ಲ ಎಂದರು.

    ಈ ಮೂಲಕ ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ವೈಮನಸ್ಸು ಮುಂದುವರಿದಿದೆ. ಲಕ್ಷ್ಮಿ ಹೆಬ್ಬಾಳ್ಕರ್ ವಿಚಾರದಿಂದ ಆರಂಭವಾದ ಒಡಕು ಈಗಲೂ ಎದ್ದು ಕಾಣುತ್ತಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊನ್ನೆ ಸಿದ್ದರಾಮಯ್ಯ, ಇಂದು ಡಿಕೆ ಶಿವಕುಮಾರ್ – ಎಂಎಲ್‍ಎ, ಎಂಎಲ್‍ಸಿಗಳಿಗೆ ಡಿನ್ನರ್ ಪಾರ್ಟಿ

    ಮೊನ್ನೆ ಸಿದ್ದರಾಮಯ್ಯ, ಇಂದು ಡಿಕೆ ಶಿವಕುಮಾರ್ – ಎಂಎಲ್‍ಎ, ಎಂಎಲ್‍ಸಿಗಳಿಗೆ ಡಿನ್ನರ್ ಪಾರ್ಟಿ

    – ಬುಧವಾರ ಪರಮೇಶ್ವರಿಂದ ಔತಣಕೂಟ ಆಯೋಜನೆ

    ಬೆಂಗಳೂರು: ಇತ್ತೀಚೆಗೆಷ್ಟೆ ಸಮನ್ವಯ ಸಮಿತಿ ಅಧ್ಯಕ್ಷ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಖಾಸಗಿ ಹೋಟೆಲ್‍ ನಲ್ಲಿ ಔತಣ ಕೂಟ ಆಯೋಜಿಸಿದ್ದರು. ಈಗ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ ಶಿವಕುಮಾರ್ ಔತಣ ಕೂಟ ಆಯೋಜಿಸಿದ್ದಾರೆ.

    ಇವತ್ತು ಬೆಂಗಳೂರಿನ ಖಾಸಗಿ ಹೋಟೆಲ್‍ ನಲ್ಲಿ ತಮ್ಮ ಪಕ್ಷದ ಶಾಸಕರು, ಸಂಸದರು ಮತ್ತು ಎಂಎಲ್‍ಸಿಗಳು ಸೇರಿದಂತೆ ನಾಯಕರನ್ನೆಲ್ಲಾ ರಾತ್ರಿ ಊಟಕ್ಕೆ ಕರೆದಿದ್ದಾರೆ. ಬುಧವಾರ ಉಪ ಮುಖ್ಯಮಂತ್ರಿ ಪರಮೇಶ್ವರ್ ರಾತ್ರಿ ಊಟ ಆಯೋಜಿಸಿದ್ದಾರೆ.

    ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್ ಅಧಿಕಾರವಧಿ ನಾಳೆ ಕೊನೆಯಾಗಲಿದ್ದು, ನಿಯೋಜಿತ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಧಿಕಾರ ಸ್ವೀಕರಿಸಲಿದ್ದಾರೆ. ಸಿದ್ದರಾಮಯ್ಯ ಆಯೋಜಿಸಿದ್ದ ರಾತ್ರಿ ಊಟಕ್ಕೆ ಸಚಿವ ಸ್ಥಾನ ಸಿಗದೇ ಮುನಿಸಿಕೊಂಡಿದ್ದ ಮಾಜಿ ಸಚಿವರಾದ ರಾಮಲಿಂಗಾ ರೆಡ್ಡಿ, ಹೆಚ್‍ಕೆ ಪಾಟೀಲ್, ರೋಷನ್ ಬೇಗ್, ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲವು ನಾಯಕರು ಗೈರಾಗಿದ್ದರು.

  • ಸಿಎಂ ಸಿದ್ದರಾಮಯ್ಯ ಒಂದು ರಾತ್ರಿಯ ಭೋಜನ ಕೂಟಕ್ಕೆ ಬೆಳ್ಳಿ ತಟ್ಟೆ ಬಳಕೆ, 10 ಲಕ್ಷ ರೂ. ಖರ್ಚು!

    ಸಿಎಂ ಸಿದ್ದರಾಮಯ್ಯ ಒಂದು ರಾತ್ರಿಯ ಭೋಜನ ಕೂಟಕ್ಕೆ ಬೆಳ್ಳಿ ತಟ್ಟೆ ಬಳಕೆ, 10 ಲಕ್ಷ ರೂ. ಖರ್ಚು!

    ಕಲಬುರಗಿ: ಕಳೆದ ಡಿಸೆಂಬರ್ 17 ರಂದು ಕಲಬುರಗಿಯಲ್ಲಿ ನಡೆದ ಸಾಧನಾ ಸಮಾವೇಶ ಮುಗಿದ ನಂತರ ಸಿಎಂ ಸಿದ್ದರಾಮಯ್ಯದ ಹಾಗೂ ಸಹೋದ್ಯೋಗಿಗಳ ಭೋಜನಕ್ಕೆ ಬೆಳ್ಳಿ ತಟ್ಟೆಯನ್ನು ಬಳಕೆ ಮಾಡಲಾಗಿದ್ದು, ಈ ಭೋಜನ ಕೂಟಕ್ಕಾಗಿ ಸುಮಾರು 10ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಕಲಬುರುಗಿ ಬಿಜೆಪಿ ಘಟಕದ ಮಾಜಿ ಜಿಲ್ಲಾಧ್ಯಕ್ಷ ರಾಜಕುಮಾರ್ ತೇಲ್ಕೂರ ಆರೋಪ ಮಾಡಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಧನಾ ಸಮಾವೇಶ ಮುಗಿದ ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಸಹೋದ್ಯೋಗಿಗಳಿಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಅವರ ಪರವಾಗಿ ಜಿಲ್ಲಾಡಳಿತ ಐವಾನ್ ಇ ಶಾಹಿ ಗೆಸ್ಟ್ ಹೌಸ್ ನಲ್ಲಿ ಭೋಜನ ವನ್ನು ಏರ್ಪಡಿಸಿತ್ತು. ಈ ವೇಳೆ ಎಲ್ಲರಿಗೂ ಬೆಳ್ಳಿ ತಟ್ಟೆಯಲ್ಲಿ ಊಟ ನೀಡಿಲಾಗಿದೆ. ಪ್ರತಿಯೊಬ್ಬರ ಊಟಕ್ಕೆ ಜಿಲ್ಲಾಡಳಿತ ತಲಾ 800 ರೂಪಾಯಿ ಖರ್ಚು ಮಾಡಿದೆ. ಈ ಮೂಲಕ ಸಾರ್ವಜನಿಕರ ಹಣವನ್ನು ಜಿಲ್ಲಾಡಳಿತ ಪೋಲು ಮಾಡಿದೆ. ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವ ಮೂಲಕ ಈ ನಾಯಕರು ಸಾಮಾನ್ಯ ಜನತೆಗೆ ಏನು ಸಂದೇಶ ಸಾರಲು ಹೊರಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

    ಜಿಲ್ಲಾಡಳಿತ ಆಯೋಜಿಸಿದ್ದ ಭೋಜನ ಕೂಟದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಶರಣ್ ಪ್ರಕಾಶ್ ಪಾಟೀಲ್, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ, ಅಳಂದ ಶಾಸಕ ಬಿ.ಆರ್.ಪಾಟೀಲ್ ಮೊದಲಾದವರು ಅಂದು ಸಿಎಂ ಜೊತೆ ಭೋಜನ ಸವಿದಿದ್ದಾರೆ.

    ಆದರೆ ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಡಳಿತ ಅಧಿಕಾರಿಗಳು, ಸಿಎಂ ಅವರ ಭೋಜನ ಕೂಟವನ್ನು ಜಿಲ್ಲೆಯ ಕಾಂಗ್ರೆಸ್ ಶಾಸಕರು ಏರ್ಪಡಿಸಿದ್ದು, ಅದಕ್ಕೆ ಜಿಲ್ಲಾಡಳಿತ ಯಾವುದೇ ಹಣ ನೀಡಿಲ್ಲ. ಇನ್ನು ಸಿಎಂ ಅವರಿಗೆ ನೀಡಿದ್ದು ಬೆಳ್ಳಿ ಲೇಪನದ ತಟ್ಟೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.