Tag: dinner

  • ಟೆಕ್‌ ದಿಗ್ಗಜರಿಗೆ ಟ್ರಂಪ್‌ ಡಿನ್ನರ್‌ – ಭಾರತೀಯ ಮೂಲದ ಐವರು ಸಿಇಒಗಳು ಭಾಗಿ

    ಟೆಕ್‌ ದಿಗ್ಗಜರಿಗೆ ಟ್ರಂಪ್‌ ಡಿನ್ನರ್‌ – ಭಾರತೀಯ ಮೂಲದ ಐವರು ಸಿಇಒಗಳು ಭಾಗಿ

    – ಅಮೆರಿಕದಲ್ಲಿ ನೀವು ಎಷ್ಟು ಹೂಡಿಕೆ ಮಾಡುತ್ತೀರಿ?

    ವಾಷಿಂಗ್ಟನ್‌: ವಿಶ್ವದ ಮೇಲೆ ತೆರಿಗೆ ಸಮರ ಹಾಕಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ತಮ್ಮ ಅಧಿಕೃತ ನಿವಾಸ ಶ್ವೇತ ಭವನದಲ್ಲಿ (White House) ಟೆಕ್‌ ಕಂಪನಿಯ ಮುಖ್ಯಸ್ಥರಿಗೆ ಭೋಜನ ಕೂಟ (Dinner) ಆಯೋಜನೆ ಮಾಡಿದ್ದರು.

    ಈ ಔತಣಕೂಟದಲ್ಲಿ ಭಾರತೀಯ ಮೂಲದ ಸಿಇಒಗಳಾದ ಸುಂದರ್‌ ಪಿಚೈ(ಆಲ್ಫಾಬೆಟ್ ಇಂಕ್ -ಗೂಗಲ್), ಸತ್ಯ ನಾಡೆಲ್ಲಾ (ಮೈಕ್ರೋಸಾಫ್ಟ್), ಸಂಜಯ್ ಮೆಹ್ರೋತ್ರಾ (ಮೈಕ್ರಾನ್ ಟೆಕ್ನಾಲಜಿ), ವಿವೇಕ್ ರಣದಿವೆ – ಟಿಐಬಿಸಿಒ ಸಾಫ್ಟ್‌ವೇರ್‌ನ ಅಧ್ಯಕ್ಷ ಮತ್ತು ಸಿಇಒ), ಶ್ಯಾಮ್ ಶಂಕರ್ (ಪಲಂತಿರ್ ಟೆಕ್ನಾಲಜೀಸ್‌) ಭಾಗಿಯಾಗಿದ್ದರು.  ಇದನ್ನೂ ಓದಿ: ನಾವು ಭಾರತ, ರಷ್ಯಾವನ್ನು ಚೀನಾಗೆ ಬಿಟ್ಟು ಕೊಟ್ಟಿದ್ದೇವೆ: ಟ್ರಂಪ್‌


    ಭಾಗಿಯಾದ ಉಳಿದವರು ಯಾರು?
    ಬಿಲ್ ಗೇಟ್ಸ್, ಮಾರ್ಕ್ ಜುಕರ್‌ಬರ್ಗ್, ಟಿಮ್ ಕುಕ್, ಸ್ಯಾಮ್ ಆಲ್ಟ್‌ಮನ್, ಸೆರ್ಗೆ ಬ್ರಿನ್ ಮತ್ತು ಸಫ್ರಾ ಕ್ಯಾಟ್ಜ್‌ರಂತಹ ಪ್ರಭಾವಿ ವ್ಯಕ್ತಿಗಳು ಈ ಡಿನ್ನರ್‌ ಭಾಗವಹಿಸಿದ್ದರು. ಚುನಾವಣಾ ಸಮಯದಲ್ಲಿ ಆಪ್ತನಾಗಿದ್ದ ಎಲೋನ್‌ ಮಸ್ಕ್‌ ಭಾಗಿಯಾಗಿರಲಿಲ್ಲ.

    ಎಐ, ತಂತ್ರಜ್ಞಾನ ಹೂಡಿಕೆ, ಜಾಗತಿಕ ಮಟ್ಟದಲ್ಲಿ ಅಮೆರಿಕ ಕಂಪನಿಗಳ ಪ್ರಭಾವದ ಬಗ್ಗೆ ಮಾತುಕತೆ ನಡೆದಿದೆ. ಗೂಗಲ್, ಮೆಟಾ ಮತ್ತು ಆಪಲ್ ಅಮೆರಿಕದಲ್ಲಿ ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ತಿಳಿಸಿವೆ.  ಇದನ್ನೂ ಓದಿ:  ಪ್ರಧಾನಿ ಮೋದಿ ಜೊತೆಗಿನ ಟ್ರಂಪ್‌ ವೈಯಕ್ತಿಕ ಬಾಂಧವ್ಯ ಈಗ ಇಲ್ಲ: ಅಮೆರಿಕ ಮಾಜಿ ಅಧಿಕಾರಿ

    ನೀವು ಅಮೆರಿಕದಲ್ಲಿ ಎಷ್ಟು ಹೂಡಿಕೆ ಮಾಡುತ್ತಿದ್ದೀರಿ? ಅಮೆರಿಕಕ್ಕೆ ನಿಮ್ಮ ಕೊಡುಗೆ ಏನು ಎಂಬುದನ್ನು ಟ್ರಂಪ್‌ ಕಂಪನಿಗಳ ಮುಖ್ಯಸ್ಥರ ಜೊತೆ ನೇರವಾಗಿ ಕೇಳಿದ್ದಾರೆ.

  • ಊಟ ಮಾಡುವಾಗ ಗಂಟಲಲ್ಲಿ ಅನ್ನ ಸಿಲುಕಿ ಯುವಕ ಸಾವು

    ಊಟ ಮಾಡುವಾಗ ಗಂಟಲಲ್ಲಿ ಅನ್ನ ಸಿಲುಕಿ ಯುವಕ ಸಾವು

    ಕಾರವಾರ: ಊಟ ಮಾಡುತ್ತಿದ್ದ ವೇಳೆ ಅನ್ನದ ಅಗಳು ಗಂಟಲಲ್ಲಿ ಸಿಲುಕಿ ಯುವಕ ಸಾವನ್ನಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ (Karwar) ತಾಲೂಕಿನ ಬಿಣಗಾದಲ್ಲಿ ನಡೆದಿದೆ.

    ಬಿಣಗಾ ಮಾಳಸವಾಡ ನಿವಾಸಿ ಅಮಿತ್ ಮಾಳಸೇರ್ (38) ಮೃತ ದುರ್ದೈವಿ. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಅಮಿತ್, ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರಿಂದ ಚಿಕಿತ್ಸೆಯನ್ನು ಸಹ ಪಡೆಯುತ್ತಿದ್ದರು. ಇದನ್ನೂ ಓದಿ: ಹೃದಯಾಘಾತ – ಸಿನಿಮಾ ರೈಟರ್ ಎಸ್.ಎಸ್ ಡೇವಿಡ್ ನಿಧನ

    ಅಮಿತ್ ಭಾನುವಾರ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಅನ್ನದ ಅಗಳೊಂದು ಗಂಟಲಲ್ಲಿ ಸಿಲುಕಿತ್ತು. ತಕ್ಷಣ ಮನೆಯವರು ಅಮಿತ್‌ಗೆ ನೀರು ಕುಡಿಸಿದ್ದು, ಆತ ಅಲ್ಲೇ ಕುಸಿದು ಬಿದಿದ್ದ. ಕೂಡಲೇ ಆತನನ್ನು ಅಂಬುಲೆನ್ಸ್ ಮೂಲಕ ಕಾರವಾರದ ಕ್ರಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ವೈದ್ಯರು ಪರೀಕ್ಷಿಸಿದಾಗ ಗಂಟಲಲ್ಲಿ ಅನ್ನದ ಅಗಳು ಸಿಲುಕಿ ಅಮಿತ್ ಮೃತಪಟ್ಟಿದ್ದಾನೆಂದು ದೃಢಪಡಿಸಿದ್ದಾರೆ. ಇದನ್ನೂ ಓದಿ: ಸದ್ದಿಲ್ಲದೇ ಹಾಸ್ಯನಟ ಚಿಕ್ಕಣ್ಣ ಮದ್ವೆ ನಿಶ್ಚಯ

    ಘಟನೆ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಐಫೋನ್ ತಯಾರಕ ಫಾಕ್ಸ್‌ಕಾನ್ ಕಂಪನಿ ಮುಖ್ಯಸ್ಥನ ಜೊತೆ ಸಿಎಂ, ಡಿಸಿಎಂ ಡಿನ್ನರ್

    ಐಫೋನ್ ತಯಾರಕ ಫಾಕ್ಸ್‌ಕಾನ್ ಕಂಪನಿ ಮುಖ್ಯಸ್ಥನ ಜೊತೆ ಸಿಎಂ, ಡಿಸಿಎಂ ಡಿನ್ನರ್

    ಬೆಂಗಳೂರು: ತೈವಾನ್ ಮೂಲದ ಆಪಲ್ ಫೋನ್ (Apple Phone) ತಯಾರಿಸುವ ಫಾಕ್ಸ್‌ಕಾನ್ (Foxconn) ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷ ಯಂಗ್ ಲಿಯು (Young Liu) ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಚರ್ಚೆ ನಡೆಸಿದರು.

    ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಭೋಜನ ಕೂಟದ ವೇಳೆ ಫಾಕ್ಸ್‌ಕಾನ್ ಕಂಪನಿಗೆ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಎಲ್ಲಾ ರೀತಿಯ ಸಹಕಾರ, ನೆರವು ಒದಗಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ. ಸಾಂಸ್ಕೃತಿಕವಾಗಿ ಉನ್ನತ ಮೌಲ್ಯಗಳನ್ನು ಆಚರಿಸುತ್ತಿರುವ ರಾಜ್ಯದಲ್ಲಿ ಕೈಗಾರಿಕೆಗಳಿಗೆ ಅತ್ಯಗತ್ಯವಾದ ಕಾನೂನು ಮತ್ತು ಸುವ್ಯವಸ್ಥೆಯೂ ಉತ್ತಮವಾಗಿದೆ ಎಂದರು. ಇದನ್ನೂ ಓದಿ: ರಾಜ್ಯದ 2 ಮೆಟ್ರೋ ಕಾರಿಡಾರ್‌ಗಳಿಗೆ ಕೇಂದ್ರ ಅನುಮೋದನೆ: ಪ್ರಹ್ಲಾದ್ ಜೋಶಿ

    ಡಿಸಿಎಂ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್, ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕ್ ರೂಪ್ ಕೌರ್ ಸೇರಿದಂತೆ ಕೈಗಾರಿಕೆ ಮತ್ತು ಐಟಿ ಬಿಟಿ ಇಲಾಖೆಯ ಹಿರಿಯ ಅಧಿಕಾರಿಗಳು ಭೋಜನ ಕೂಟದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: TB Dam| ಮೊದಲ ಎಲಿಮೆಂಟ್ ಅಳವಡಿಸುವ ಕಾರ್ಯ ಯಶಸ್ವಿ

    ಫಾಕ್ಸ್ಕಾನ್ ಕಂಪನಿಗೆ ದೇವನಹಳ್ಳಿ ತಾಲೂಕು, ಕುಂದಾಣ ಹೋಬಳಿಗೆ ಸೇರಿದ ದೊಡ್ಡಗೊಲ್ಲಹಳ್ಳಿ ಮತ್ತು ಚಪ್ಪರದಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಕೈಗಾರಿಕೆ ಸ್ಥಾಪನೆಗಾಗಿ 300 ಎಕರೆ ಜಾಗ ಮಂಜೂರಾಗಿದ್ದು, ರಾಜ್ಯದಲ್ಲಿ ದೊಡ್ಡ ಮಟ್ಟದ ಹೂಡಿಕೆಗೆ ಮುಂದಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಜವಾಹರಲಾಲ್ ನೆಹರು ತಾರಾಲಯ ಆಧುನಿಕರಣಕ್ಕೆ ಅಗತ್ಯ ಪ್ರಸ್ತಾವನೆ ಸಲ್ಲಿಸಿ: ಬೋಸರಾಜು ಸೂಚನೆ

  • G20 ಡಿನ್ನರ್‌ಗೆ ಸಿರಿಧಾನ್ಯಗಳ ವೈವಿಧ್ಯತೆ – ಮೆನುವಿನಲ್ಲಿ ಏನೇನಿತ್ತು?

    G20 ಡಿನ್ನರ್‌ಗೆ ಸಿರಿಧಾನ್ಯಗಳ ವೈವಿಧ್ಯತೆ – ಮೆನುವಿನಲ್ಲಿ ಏನೇನಿತ್ತು?

    ನವದೆಹಲಿ: ಜಿ20 ಶೃಂಗಸಭೆಯ (G20 Summit) ಮೊದಲ ದಿನ ಅಂತ್ಯಗೊಂಡಿದೆ. ದೆಹಲಿಯ ಭಾರತ್ ಮಂಟಪದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶ್ವ ನಾಯಕರು ಹಾಗೂ ಪ್ರತಿನಿಧಿಗಳಿಗೆ ಔತಣಕೂಟವನ್ನು (Dinner) ಆಯೋಜಿಸಿದ್ದು, ಭಾರತದ ವೈವಿಧ್ಯಮಯ ಭಕ್ಷ್ಯಗಳನ್ನು ನೀಡಲಾಗಿದೆ.

    ರಾಷ್ಟ್ರದ ಹಾಗೂ ವಿಶ್ವದ ನಾಯಕರಿಗೆ ದೇಶದ ವಿಶಿಷ್ಟ ಭೋಜನದ ಅನುಭವವನ್ನು ನೀಡಲಾಗಿದೆ. ಬೆಳ್ಳಿ, ಚಿನ್ನ ಲೇಪಿತ ಪಾತ್ರೆಗಳಲ್ಲಿ ಊಟವನ್ನು ಬಡಿಸಿ, ದೇಶದ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯ ನೋಟವನ್ನು ಪ್ರದರ್ಶಿಸಲಾಗಿದೆ.

    ಭೋಜನದ ಮೆನುವಿನಲ್ಲೇನಿದೆ?
    ಭಾರತ ತನ್ನ ಎಲ್ಲಾ ವೈವಿಧ್ಯತೆಗಳೊಂದಿಗೆ ರುಚಿಯು ದೇಶದ ಪ್ರತಿ ಪ್ರದೇಶಕ್ಕೂ ಹೇಗೆ ಸಂಪರ್ಕಿಸುತ್ತದೆ ಎಂಬ ಪರಿಚಯದೊಂದಿಗೆ ಮೆನುವನ್ನು (Menu) ಪ್ರಾರಂಭಿಸಲಾಗಿದೆ. ಸಂಪ್ರದಾಯಗಳು, ಪದ್ಧತಿಗಳು ಹಾಗೂ ಹವಾಮಾನದ ಸಂಯೋಜನೆಯೊಂದಿಗೆ ಭಾರತ ಹಲವು ವಿಧಗಳಲ್ಲಿ ವೈವಿಧ್ಯಮಯವಾಗಿದೆ. ಈ ಎಲ್ಲಾ ರುಚಿ ನಮ್ಮನ್ನು ಸಂಪರ್ಕಿಸುತ್ತದೆ ಎಂದು ಬರೆಯಲಾಗಿದೆ.

    ಮೆನುವಿನಲ್ಲಿ ಸಿರಿಧಾನ್ಯಗಳ (Millets) ಬಗ್ಗೆ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಅವುಗಳ ಪೌಷ್ಟಿಕಾಂಶ ಮಾತ್ರವಲ್ಲದೇ ಕೃಷಿ ಕ್ಷೇತ್ರಕ್ಕೆ ಎಷ್ಟು ಮೌಲ್ಯಯುತವಾಗಿದೆ ಎಂಬುದನ್ನು ವಿವರಿಸಲಾಗಿದೆ.

    ಬಡಿಸಲಾದ ವಿಶೇಷ ಖಾದ್ಯಗಳೇನು?
    ಮುಖ್ಯ ಅಡುಗೆ:
    ವನವರ್ಣಂ: ಮಶ್ರೂಮ್‌ನೊಂದಿಗೆ ಟಾಪಿಂಗ್ ಮಾಡಲಾದ ಹಲಸು ಹಣ್ಣಿನ ಗ್ಯಾಲೆಟ್, ಕುರುಕಲು ಅನುಭವ ನೀಡುವ ಸಣ್ಣ ರಾಗಿ ಮತ್ತು ಕರಿಬೇವಿನ ಎಲೆಯೊಂದಿಗೆ ಫ್ರೈ ಮಾಡಲಾದ ಕೇರಳದ ಕೆಂಪು ಅನ್ನ. ಇದನ್ನೂ ಓದಿ: ಜಿ20 ಸಭೆಯಲ್ಲಿ ರಷ್ಯಾ-ಉಕ್ರೇನ್‌ ವಾರ್‌; ವಿಶ್ವ ನಾಯಕರ ಘೋಷಣೆಯೇನು?

    ಭಾರತೀಯ ಬ್ರೆಡ್‌ಗಳು:
    ಮುಂಬೈ ಪಾವ್: ಈರುಳ್ಳಿ ಬೀಜದ ಸುವಾಸನೆಯ ಮೃದುವಾದ ಬನ್.
    ಬಕರಖಾನಿ: ಏಲಕ್ಕಿ ಸುವಾಸನೆಯ ಸಿಹಿ ರೋಟಿ.

    ಸಿಹಿತಿಂಡಿ:
    ಮಧುರಿಮಾ ಪಾಟ್ ಆಫ್ ಗೋಲ್ಡ್: ಏಲಕ್ಕಿ ಸುವಾಸನೆಯ ಬಾರ್ನ್ಯಾರ್ಡ್ ಧಾನ್ಯದ ಪುಡಿಂಗ್, ಅಂಬೆಮೊಹರ್ ಅನ್ನ, ಅಂಜೂರ-ಪೀಚ್ ಮಿಶ್ರಣದ ಕಾಂಪೋಟ್.

    ಪಾನೀಯಗಳು:
    ಕಾಶ್ಮೀರಿ ಕಹ್ವಾ, ಫಿಲ್ಟರ್ ಕಾಫಿ ಮತ್ತು ಡಾರ್ಜಿಲಿಂಗ್ ಚಹಾ.

    ಚಾಕ್ಲೇಟ್ ಫ್ಲೇವರ್‌ನ ಪಾನ್ ಎಲೆಗಳು. ಇದನ್ನೂ ಓದಿ: ಜಿ20 ಅತಿಥಿಗಳಿಗೆ ಭಾರತದ ವಾಸ್ತವತೆ ಮರೆಮಾಡುವ ಅಗತ್ಯವಿಲ್ಲ: ರಾಹುಲ್ ಗಾಂಧಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಿ20ಯಲ್ಲಿ ಭಾಗಿಯಾಗುವ ಗಣ್ಯರಿಗೆ ಭವ್ಯ ಭೋಜನ – ಚಿನ್ನ, ಬೆಳ್ಳಿ ಲೇಪಿತ ತಟ್ಟೆಯಲ್ಲಿ ಊಟದ ವ್ಯವಸ್ಥೆ

    ಜಿ20ಯಲ್ಲಿ ಭಾಗಿಯಾಗುವ ಗಣ್ಯರಿಗೆ ಭವ್ಯ ಭೋಜನ – ಚಿನ್ನ, ಬೆಳ್ಳಿ ಲೇಪಿತ ತಟ್ಟೆಯಲ್ಲಿ ಊಟದ ವ್ಯವಸ್ಥೆ

    ನವದೆಹಲಿ: ಜಿ20 ಶೃಂಗಸಭೆಗೆ (G20 Summit) ಭಾರತ ಸಂಪೂರ್ಣ ಸಿದ್ಧವಾಗಿದೆ. ವಿದೇಶಿ ಗಣ್ಯರ ವಾಸ್ತವ್ಯಕ್ಕೆ ಹೋಟೆಲ್‌ಗಳನ್ನು ಬುಕ್ ಮಾಡಲಾಗಿದ್ದು, ಇಲ್ಲಿ ಭೋಜನದ (Dinner) ವೇಳೆ ವಿಶೇಷ ಅನುಭೂತಿ ನೀಡಲು ಚಿನ್ನ (Gold) ಲೇಪಿತ ತಟ್ಟೆ (Plate), ಬೆಳ್ಳಿ (Silver) ಲೋಟಗಳಲ್ಲಿ (Glass) ಅತಿಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಈ ಮೂಲಕ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

    ಇದಕ್ಕಾಗಿ ಐಕಾನಿಕ್ ಐಟಿಸಿ ತಾಜ್ ಸೇರಿದಂತೆ 11 ಹೋಟೆಲ್‌ಗಳಿಗೆ ತಟ್ಟೆ ಮತ್ತು ಲೋಟಗಳನ್ನು ಸರಬರಾಜು ಮಾಡುವ ಕ್ರೋಕರಿ ಕಂಪನಿಗೆ ಚಿನ್ನ ಮತ್ತು ಬೆಳ್ಳಿ ಲೇಪಿತ ಅಗತ್ಯಗಳನ್ನು ಪೂರೈಕೆ ಮಾಡಲು ಜವಾಬ್ದಾರಿ ನೀಡಲಾಗಿದೆ. ಪಾತ್ರೆಗಳ ಮೇಲೆ ಜೈಪುರ, ಉದಯಪುರ, ವಾರಣಾಸಿ ಮತ್ತು ಕರ್ನಾಟಕದ ಸಂಕೀರ್ಣ ಕಲಾತ್ಮಕತೆ ಇರಲಿದ್ದು, ಇದು ಭಾರತದ ವೈವಿಧ್ಯಮಯ ಸಾಂಸ್ಕೃತಿಕತೆಯನ್ನು ಪ್ರತಿಬಿಂಬಿಸುತ್ತದೆ. ಇದನ್ನೂ ಓದಿ: ಜಿ20 ಶೃಂಗಸಭೆಯಲ್ಲಿ ಭಗವದ್ಗೀತೆಯ ನೀತಿಗಳನ್ನು ಹರಡಲಿರುವ ಗೀತಾ ಅಪ್ಲಿಕೇಷನ್!

     

    ಈ ವಸ್ತುಗಳು ತಯಾರಾದ ಬಳಿಕ ಪ್ರತಿ ವಸ್ತುವನ್ನು R&D ಲ್ಯಾಬ್‌ನಲ್ಲಿ ಸಂಪೂರ್ಣ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಪಾತ್ರೆಗಳ ವಿನ್ಯಾಸವು ಪ್ರತಿ ಹೋಟೆಲ್‌ನ ನಿರ್ದಿಷ್ಟ ಅವಶ್ಯಕತೆಗಳಿಗೆ ಅನುಗುಣವಾಗಿರುತ್ತದೆ. ಉದಾಹರಣೆಗೆ ‘ಮಹಾರಾಜ ಥಾಲಿ’ ಸೆಟ್, ಉಪ್ಪು ಮತ್ತು ಮೆಣಸಿನಕಾಯಿಗಾಗಿ ಪ್ರತ್ಯೇಕ ಬೆಳ್ಳಿಯ ಪೆಟ್ಟಿಗೆಗಳು ಮತ್ತು 5-6 ಬೌಲ್‌ಗಳನ್ನು ಒಳಗೊಂಡಿರುತ್ತದೆ. ಎಲ್ಲವನ್ನೂ ಹೋಟೆಲ್‌ನ ಮೆನು ಮತ್ತು ಶೈಲಿಗೆ ಹೊಂದಿಸಲು ವಿನ್ಯಾಸಗೊಳಿಸಲಾಗಿದೆ. ಇದನ್ನೂ ಓದಿ: G20 ಸಭೆಗೆ ಆಗಮಿಸುತ್ತಿರೋ ಜೋ ಬೈಡನ್‌ಗಾಗಿ ಮೂರು ಹಂತದ ಭದ್ರತೆ

    ಕ್ರೋಕರಿ ಕಂಪನಿಯು ರಾಷ್ಟ್ರೀಯ ಪಕ್ಷಿಯಾದ ನವಿಲನ್ನು ವಿನ್ಯಾಸದಲ್ಲಿ ಅಳವಡಿಸಿಕೊಂಡಿದೆ. ಇದು ಈ ಹಿಂದೆ ಅತಿಥಿಗಳಿಂದ ಮೆಚ್ಚುಗೆಯನ್ನು ಗಳಿಸಿತ್ತು. ಮಹಾರಾಜ ಥಾಲಿ ಜೊತೆಗೆ, ದಕ್ಷಿಣ ಭಾರತದ ವಿನ್ಯಾಸಗಳನ್ನು ಸಹ ಸಂಗ್ರಹದಲ್ಲಿ ಒಳಗೊಳಿಸಲಾಗುತ್ತಿದೆ. ಕಂಪನಿಯ ಮಾಲೀಕ ರಾಜೀವ್, ಮಾಜಿ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಭೇಟಿ ನೀಡಿದಾಗ ವಿಶೇಷ ಊಟದ ಸೆಟ್‌ಗಳನ್ನು ಪ್ರಸ್ತುತಪಡಿಸಿದ್ದರು. ಇವುಗಳನ್ನು ಕಂಡು ಒಬಾಮಾ ತುಂಬಾ ಪ್ರಭಾವಿತರಾಗಿ ತಮ್ಮೊಂದಿಗೆ ಊಟದ ಸೆಟ್ ಅನ್ನು ಕೊಂಡೊಯ್ದಿದ್ದರು. ಇದನ್ನೂ ಓದಿ: ಇಂಡಿಯಾ, ಭಾರತದ ನಡುವಿನ ವ್ಯತ್ಯಾಸ ವಿವರಿಸಿದ್ದ ಲಾಲೂ ಹಳೆಯ ವೀಡಿಯೋ ವೈರಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಜಯ್ ದೇವರಕೊಂಡ ಫ್ಯಾಮಿಲಿ ಜೊತೆ ರಶ್ಮಿಕಾ ಡಿನ್ನರ್: ಏನಿದು ಎಂದ ಫ್ಯಾನ್ಸ್

    ವಿಜಯ್ ದೇವರಕೊಂಡ ಫ್ಯಾಮಿಲಿ ಜೊತೆ ರಶ್ಮಿಕಾ ಡಿನ್ನರ್: ಏನಿದು ಎಂದ ಫ್ಯಾನ್ಸ್

    ಶ್ಮಿಕಾ (Rashmika Mandanna) ಅಂತೂ ಬಾಲಿವುಡ್‌ನಲ್ಲಿ ಸೆಟ್ಲ್ ಆಗಿದ್ದಾರೆ. ಈಗಷ್ಟೇ ಆನಿಮಲ್ ಸಿನಿಮಾ ಮುಗಿಸಿದ್ದಾರೆ, ಇನ್ನು ವಿಜಯ್ ದೇವರಕೊಂಡ (Vijay Devarakonda) ಟರ್ಕಿಯಲ್ಲಿ ಶೂಟಿಂಗ್ ಮುಗಿಸಿ ಬಂದಿದ್ದಾರೆ. ಇಬ್ಬರೂ ಒಂದು ರಿಲ್ಯಾಕ್ಸ್ ಡಿನ್ನರ್ ಮಾಡಿದ್ದಾರೆ. ವಿಶೇಷ ಅಂದ್ರೆ ಡಿನ್ನರ್‌ಲ್ಲಿ ವಿಜಯ್ ಕುಟುಂಬಸ್ಥರೂ ಇದ್ದಾರೆ. ಮೊಬೈಲ್‌ನಲ್ಲಿ ಸೆರೆಯಾಗಿದ್ದಾರೆ. ಈ ಮೀಟಿಂಗ್ ರಹಸ್ಯ ಏನು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

    ಕೆಲವೊಮ್ಮೆ ನೇರವಾಗಿ, ಇನ್ನೊಮ್ಮೆ ಸೀಕ್ರೇಟಾಗಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಜೊತೆ ಜೊತೆಯಾಗಿ ಕಾಣಿಸ್ಕೊಳ್ತಾರೆ. ಇದುವೇ ಅಭಿಮಾನಿಗಳಿಗೆ ಸಾಕಷ್ಟು ತಲೆನೋವು ಆಗಿರುವ ವಿಷಯ. ಕೋಸ್ಟಾರ್‌ಗಳು ಸಿನಿಮಾ ಮಾಡ್ತಿರುವಾಗ ಒಟ್ಟಿಗೆ ಕಾಣಿಸ್ಕೊಳ್ಳೋದೆಲ್ಲಾ ಸಾಮಾನ್ಯ. ಆದರೆ ಮುಗಿದ್ಮೇಲೂ ಜೊತೆಯಾಗಿ ಹಿತವಾಗಿ ಎಂದು ಸುತ್ತಾಡಿದ್ರೆ ಏನನ್ನೋದು? ಅದೇ ಆಗ್ಬಿಟ್ಟಿದೆ ಈಗ. ಹೈದ್ರಾಬಾದ್‌ನಲ್ಲಿ ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ಫ್ಯಾಮಿಲಿ (Family) ಸಮೇತ ಡಿನ್ನರ್ ಮಾಡುವ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ:ಕೆಂಪು ಬಣ್ಣದ ಸೀರೆಯಲ್ಲಿ ಗ್ಲ್ಯಾಮರಸ್ ಆಗಿ ಮಿಂಚಿದ ಮಾನ್ವಿತಾ

    ರಶ್ಮಿಕಾ ನಿಂತಲ್ಲಿ ನಿಲ್ಲಲ್ಲ ಕೂತಲ್ಲಿ ಕೂರಲ್ಲ. ಹೀಗಾಗೇ ಈಗ ತಗ್ಲಾಕ್ಕೊಂಡಿದ್ದಾರೆ. ಊಟ (Dinner) ಮಾಡ್ತಾ ಕುರ್ಚಿಯಿಂದ ಎದ್ದು ನಿಂತಲ್ಲೇ ಸಣ್ಣದೊಂದು ಸ್ಟೆಪ್ ಹಾಕಿದ್ದಾರೆ. ಆಗಲೇ ದೂರದ ಟೇಬಲ್‌ನಲ್ಲಿದ್ದ ಹುಡುಗರ ಮೊಬೈನಲ್‌ನಲ್ಲಿ ಸೆರೆಯಾಗಿದ್ದು. ಪಕ್ಕದಲ್ಲಿ ನೋಡಿದ್ರೆ ಇದ್ದಿದ್ದು ವಿಜಯ್ ದೇವರಕೊಂಡ. ಅವರ ಪಕ್ಕದಲ್ಲಿ ಇಡೀ ದೇವರಕೊಂಡ ಫ್ಯಾಮಿಲಿ.

    ಅದೇನೇ ಇದ್ರೂ ರಶ್ಮಿಕಾ ಹಾಗೂ ವಿಜಯ್ ಬಗ್ಗೆ ಗುಸುಗುಸು ಹೆಚ್ಚಾಗೋದಕ್ಕೂ ಹೀಗೆ ಕಾಣಿಸ್ಕೊಂಡಿದ್ದಕ್ಕೂ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಆದರೂ ಫ್ಯಾನ್ಸ್ ಕೇಳ್ತಿದ್ದಾರೆ. ಬೆಸ್ಟ್ ಫ್ರೆಂಡ್ಸ್ ಜೊತೆಯಾಗಿ ಊಟ ಮಾಡಿದ್ರೂ ತಪ್ಪೇನ್ರಪ್ಪಾ ಎಂದು. ಇದಕ್ಕೆ ರಶ್ಮಿಮಾ ಮತ್ತು ವಿಜಯ್ ದೇವರಕೊಂಡ ಅಷ್ಟೇ ಉತ್ತರ ನೀಡಬೇಕಿದೆ.

  • ವಾಷಿಂಗ್ಟನ್‌ನಲ್ಲಿ ಅದ್ಧೂರಿ ಸ್ವಾಗತ – ಮೋದಿಗಾಗಿ ಖಾದ್ಯ ತಯಾರಿಸಿದ್ದಾರೆ ಜಿಲ್ ಬೈಡೆನ್

    ವಾಷಿಂಗ್ಟನ್‌ನಲ್ಲಿ ಅದ್ಧೂರಿ ಸ್ವಾಗತ – ಮೋದಿಗಾಗಿ ಖಾದ್ಯ ತಯಾರಿಸಿದ್ದಾರೆ ಜಿಲ್ ಬೈಡೆನ್

    ವಾಷಿಂಗ್ಟನ್‌: ಎರಡನೇ ದಿನದ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಈಗ ವಾಷಿಂಗ್ಟನ್‌ ತಲುಪಿದ್ದಾರೆ.

    ಅಂತಾರಾಷ್ಟ್ರೀಯ ಯೋಗ ದಿನದಂದು (International Yoga Day) ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಕಟ್ಟಡದಲ್ಲಿ ಯೋಗ ಕಾರ್ಯಕ್ರಮವನ್ನು ನಡೆಸಿದ ಬಳಿಕ ವಾಷಿಂಗ್ಟನ್‌ಗೆ ತೆರಳಿದ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.   ಇದನ್ನೂ ಓದಿ: ಯೋಗಕ್ಕೆ ಯಾವುದೇ ಹಕ್ಕುಸ್ವಾಮ್ಯ, ಪೇಟೆಂಟ್‌ಗಳಿಲ್ಲ: ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಮೋದಿ ಭಾಷಣ

    ಆಂಡ್ರ್ಯೂಸ್ ಏರ್ ಬೇಸ್‌ನಲ್ಲಿ ಇಳಿದ ಮೋದಿ ಅವರಿಗೆ ಗೌರವ ವಂದನೆಯನ್ನು ನೀಡುವ ಮೂಲಕ ಸ್ವಾಗತಿಸಲಾಯಿತು. ಈ ವೇಳೆ ಎರಡೂ ದೇಶಗಳ ರಾಷ್ಟ್ರಗೀತೆಗಳನ್ನು ನುಡಿಸಲಾಯಿತು.

    ನಂತರ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತ ಭವನಕ್ಕೆ  (White House) ಆಗಮಿಸಿದ ಮೋದಿ ಅವರಿಗೆ ಅಧ್ಯಕ್ಷ ಜೋ ಬೈಡನ್‌ (Joe Biden) ಮತ್ತು ಪತ್ನಿ ಜಿಲ್ ಬಿಡೆನ್ (Jill Biden) ಸ್ವಾಗತಿಸಿದರು. ವಿಶೇಷವಾಗಿ ವೈಟ್‍ಹೌಸ್‍ನಲ್ಲಿ ಪ್ರಧಾನಿ ಮೋದಿಗೆ ಬೈಡೆನ್ ದಂಪತಿ ಔತಣಕೂಟ ಏರ್ಪಡಿಸಿದ್ದಾರೆ.

    ಮೋದಿಗೆ ಸಸ್ಯಾಹಾರಿ ಭೋಜನವನ್ನು ಆಯೋಜಿಸಲಾಗಿದ್ದು ವಿಶೇಷವಾಗಿ ಸಿರಿಧಾನ್ಯಗಳ ಖಾದ್ಯ ಮಾಡಲಾಗಿದೆ. ಮೋದಿ ಔತಣಕೂಟಕ್ಕೆ ಬೈಡೆನ್ ಪತ್ನಿ ಉತ್ಸುಕರಾಗಿದ್ದಾರೆ. ಖುದ್ದು ಜಿಲ್ ಬೈಡೆನ್ ಅವರೇ ಖಾದ್ಯ ತಯಾರಿಸಿದ್ದಾರೆ ಎಂದು ವೈಟ್‍ಹೌಸ್ ಶೆಫ್ ಹೇಳಿದ್ದಾರೆ.

    ಇಂದು ಮೋದಿ ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ಅಮೆರಿಕ ಸಂಸತ್ತಿನಲ್ಲಿ ಎರಡನೇ ಬಾರಿ ಭಾಷಣ ಮಾಡಿದ ಭಾರತದ ಮೊದಲ ಪ್ರಧಾನಿ ಎನ್ನಿಸಿಕೊಳ್ಳಲಿದ್ದಾರೆ.

  • ರಾತ್ರಿ ಊಟ ಬಡಿಸಲು ನಿರಾಕರಿಸಿದ್ದಕ್ಕೆ ಪತ್ನಿಯನ್ನು ಕೊಡಲಿಯಿಂದ ಕೊಂದ ಪತಿ

    ರಾತ್ರಿ ಊಟ ಬಡಿಸಲು ನಿರಾಕರಿಸಿದ್ದಕ್ಕೆ ಪತ್ನಿಯನ್ನು ಕೊಡಲಿಯಿಂದ ಕೊಂದ ಪತಿ

    ರಾಯ್ಪುರ್: ರಾತ್ರಿ ಊಟ (Dinner) ನೀಡಲು ನಿರಾಕರಿಸಿದ ಪತ್ನಿಯನ್ನು (Wife) ಕೊಡಲಿಯಿಂದ ಕೊಂದ ಘಟನೆ ಛತ್ತಿಸ್‍ಗಢದಲ್ಲಿ (Chhattisgarh) ನಡೆದಿದೆ.

    ಮಂಜೀತಾ ಶ್ರೀವಾಸ್ (32) ಮೃತ ಮಹಿಳೆ. ಈಕೆಯ ಪತಿ ಯೋಗೇಂದ್ರ ಶ್ರೀನಿವಾಸ್ (38) ಕೊರ್ಬಾದ ಖಾಸಗಿ ಕ್ಲಿನಿಕ್‍ನಲ್ಲಿ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಯೋಗೇಂದ್ರ ರಾತ್ರಿ ಕೆಲಸ ಮುಗಿಸಿ ಹಿಂತಿರುಗಿ ಪುಸ್ತಕ ಓದುತ್ತಿದ್ದಾಗ ಪತ್ನಿಗೆ ಊಟ ಬಡಿಸುವಂತೆ ಕೇಳಿದ್ದ. ಆದರೆ ಮಂಜೀತಾ ಊಟ ನೀಡಲು ನಿರಾಕರಿಸಿದ್ದಾಳೆ.

    ಇದೇ ಕಾರಣಕ್ಕೆ ಯೋಗೇಂದ್ರ ಹಾಗೂ ಮಂಜೀತಾ ನಡುವೆ ಜಗಳವಾಗಿದೆ. ಈ ವೇಳೆ ಕೋಪದ ಭರದಲ್ಲಿ ಯೋಗೇಂದ್ರ ಪತ್ನಿ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಮಂಜೀತಾ ಜೋರಾಗಿ ಕಿರುಚಿದ್ದಾಳೆ. ತಾಯಿಯ ಕಿರುಚಾಟ ಕೇಳಿದ ಯೋಗೇಂದ್ರ ಹಾಗೂ ಮಂಜಿತಾ ಮಕ್ಕಳು ಸ್ಥಳಕ್ಕೆ ಓಡಿ ಹೋಗಿದ್ದಾರೆ. ಈ ವೇಳೆ ರಕ್ತದ ಮಡುವಿನಲ್ಲಿ ಬಿದ್ದಿರುವ ತಾಯಿಯನ್ನು ನೋಡಿದ್ದಾರೆ. ಇದನ್ನೂ ಓದಿ: ವಿವಾಹಿತೆಯೊಂದಿಗೆ ಪ್ರೇಮ- ಹೋಟೆಲ್‌ನಲ್ಲಿ ರಾತ್ರಿ ತನ್ನೊಂದಿಗೆ ಇರಲು ನಿರಾಕರಿಸಿದ್ದಕ್ಕೆ ಕೊಲೆ

    ಕೂಡಲೇ ತಾಯಿ ಕೊಲೆಯಾದ ಬಗ್ಗೆ ಮಕ್ಕಳು ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಅದಾದ ಬಳಿಕ ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿ ಆರೋಪಿ ಯೋಗೇಂದ್ರನನ್ನು ಬಂಧಿಸಿದ್ದಾರೆ. ದಂಪತಿ ಆಗಾಗ್ಗೆ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡುತ್ತಿದ್ದರು. ಆರೋಪಿಯು ತನ್ನ ಹೆಂಡತಿಯ ವಾದದ ಸ್ವಭಾವದಿಂದ ತೀವ್ರ ಸಮಸ್ಯೆ ಹೊಂದಿದ್ದನು ಪೊಲೀಸ್‌ ಮೂಲಗಳು ತಿಳಿಸಿದೆ. ಇದನ್ನೂ ಓದಿ: ಶೀಘ್ರವೇ 2ನೇ ಬೂಸ್ಟರ್ ಡೋಸ್? – ಕೇಂದ್ರ ಆರೋಗ್ಯ ಸಚಿವರಿಗೆ ವೈದ್ಯಾಧಿಕಾರಿಗಳ ಡಿಮಾಂಡ್

    Live Tv
    [brid partner=56869869 player=32851 video=960834 autoplay=true]

  • ಅಡುಗೆ ಮಾಡುವ ಮುನ್ನ ಅಕ್ಕಿ ತೊಳೆದಿರಲಿಲ್ಲ- 31 ವಿದ್ಯಾರ್ಥಿಗಳು ಅಸ್ವಸ್ಥ

    ಅಡುಗೆ ಮಾಡುವ ಮುನ್ನ ಅಕ್ಕಿ ತೊಳೆದಿರಲಿಲ್ಲ- 31 ವಿದ್ಯಾರ್ಥಿಗಳು ಅಸ್ವಸ್ಥ

    ಹೈದರಾಬಾದ್: ಸರ್ಕಾರಿ ಶಾಲೆಯ (Govt School) ವಸತಿ ನಿಲಯದಲ್ಲಿ (Hostel) ರಾತ್ರಿ ಊಟ (Dinner) ಸೇವಿಸಿದ ಬಳಿಕ 31 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ (Hospital) ಸೇರಿರುವ ಘಟನೆ ತೆಲಂಗಾಣದ (Telangana) ಕುಮಾರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಕಾಗಜನಗರ ಪಟ್ಟಣದ ಬಾಲಕರ ವಸತಿ ಶಾಲೆಯ ವಿದ್ಯಾರ್ಥಿಗಳು ಸೋಮವಾರ ರಾತ್ರಿ ಊಟ ಮಾಡಿದ ಬಳಿಕ ಹೊಟ್ಟೆನೋವು, ವಾಂತಿಭೇದಿ ಕಾಣಿಸಿಕೊಂಡಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯ ಮಾಧ್ಯಮದವರು ಶಾಲೆಗೆ ಬಂದಿದ್ದಾರೆ ಆದರೆ ಸಿಬ್ಬಂದಿ ಅವರನ್ನು ಆವರಣಕ್ಕೆ ಪ್ರವೇಶಿಸಲು ಬಿಡಲಿಲ್ಲ.

    ಬಳಿಕ ವಸತಿ ನಿಲಯದ ಸಿಬ್ಬಂದಿ ಅಸ್ವಸ್ಥ ವಿದ್ಯಾರ್ಥಿಗಳನ್ನು ಹಿಂಬಾಗಿಲಿನಿಂದ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ವಿದ್ಯಾರ್ಥಿಗಳನ್ನು ತಮ್ಮ ವಾಹನಗಳಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲೂ ಇದೆ ಐಸಿಸ್‌ ಗ್ಯಾಂಗ್‌ – ಮೂವರು ಶಂಕಿತ ಉಗ್ರರ ವಿರುದ್ಧ ಎಫ್‌ಐಆರ್

    ವಸತಿ ನಿಲಯದಲ್ಲಿ ಸಿಬ್ಬಂದಿ ಕೊರತೆಯಿರುವುದರಿಂದ ಅಡುಗೆ ಮಾಡುವ ಮುನ್ನ ಅಕ್ಕಿಯನ್ನು ತೊಳೆದಿರಲಿಲ್ಲ. ವಿದ್ಯಾರ್ಥಿಗಳಿಗೆ ನೀಡಿದ ಆಹಾರದಲ್ಲಿ ಕ್ರಿಮಿ ಕೀಟಗಳು ಕಾಣಿಸಿಕೊಂಡಿರುವ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯ ವಿದ್ಯಾರ್ಥಿಗಳ ಸ್ಥಿತಿ ಸ್ಥಿರವಾಗಿದೆ, ಘಟನೆಯ ಕುರಿತು ತನಿಖೆಗೆ ಆದೇಶ ನೀಡಲಾಗಿದೆ ಎಂದು ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ(ಡಿಎಂಹೆಚ್‌ಒ) ಪ್ರಭಾಕರ ರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ಹೊಟ್ಟೆಯಲ್ಲಿ 1 ಕೆ.ಜಿ ಚಿನ್ನ ಬಚ್ಚಿಟ್ಟುಕೊಂಡು ಸ್ಮಗ್ಲಿಂಗ್ ಮಾಡುತ್ತಿದ್ದ ವ್ಯಕ್ತಿಯ ಬಂಧನ

    Live Tv
    [brid partner=56869869 player=32851 video=960834 autoplay=true]

  • ಆಟೋ ಚಾಲಕನ ಮನೆಯಲ್ಲಿ ಊಟ ಮಾಡಿದ ಕೇಜ್ರಿವಾಲ್ – ರಿಕ್ಷಾದಲ್ಲೇ ಪ್ರಯಾಣಿಸಿ ಸರಳತೆ ಮೆರೆದ್ರು

    ಆಟೋ ಚಾಲಕನ ಮನೆಯಲ್ಲಿ ಊಟ ಮಾಡಿದ ಕೇಜ್ರಿವಾಲ್ – ರಿಕ್ಷಾದಲ್ಲೇ ಪ್ರಯಾಣಿಸಿ ಸರಳತೆ ಮೆರೆದ್ರು

    ಗಾಂಧೀನಗರ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಅಹಮದಾಬಾದ್‍ನಲ್ಲಿರುವ ಆಟೋ ಚಾಲಕನ(Auto Driver) ಮನೆಯಲ್ಲಿ ಸೋಮವಾರ ರಾತ್ರಿ ಊಟ(Dinner) ಮಾಡಿದ್ದಾರೆ.

    ಮುಂಬರುವ ವಿಧಾನಸಭಾ ಚುನಾವಣೆಯ ಎಎಪಿಯ(AAP) ಪ್ರಚಾರದ ಸಲುವಾಗಿ ಅರವಿಂದ್ ಕ್ರೇಜಿವಾಲ್ ಅವರು ಎರಡು ದಿನಗಳ ಕಾಲ ಗುಜರಾತ್ ಪ್ರವಾಸ ಕೈಗೊಂಡಿದ್ದಾರೆ. ಸೋಮವಾರ ಅಹಮದಾಬಾದ್‍ನಲ್ಲಿ(Ahmedabad) ನಡೆದ ಆಟೋ ರಿಕ್ಷಾ ಚಾಲಕರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅರವಿಂದ್ ಕ್ರೇಜಿವಾಲ್ ಅವರನ್ನು ಆಟೋ ಚಾಲಕನೋರ್ವ ಅಹಮದಾಬಾದ್‍ನಲ್ಲಿರುವ ತಮ್ಮ ಮನೆಯಲ್ಲಿ ಔತಣಕೂಟಕ್ಕೆ ಬರುವಂತೆ ಆಹ್ವಾನಿಸಿದ್ದನು. ಇದನ್ನೂ ಓದಿ: ಸಚಿವ ಆನಂದ್ ಸಿಂಗ್, ಕಾರ್ಪೊರೇಟರ್ ನಡುವೆ ರಾಜೀನಾಮೆ ಸಮರ

    ನಗರದ ಘಟ್ಲೋಡಿಯಾ ಪ್ರದೇಶದ ನಿವಾಸಿ ವಿಕ್ರಮ್ ದಾಂತನಿ( Vikram Dantani) ಎಂಬ ಆಟೋ ಚಾಲಕ “ನಾನು ನಿಮ್ಮ ಅಭಿಮಾನಿ. ಸೋಶಿಯಲ್ ಮೀಡಿಯಾದಲ್ಲಿ ನಾನು ನೋಡಿದ ವೀಡಿಯೋ ಒಂದರಲ್ಲಿ, ನೀವು ಪಂಜಾಬ್‍ನ(Punjab) ಆಟೋ ಡ್ರೈವರ್‌ನ ಮನೆಗೆ ಊಟಕ್ಕೆ ಹೋಗಿದ್ದೀರಿ. ಹಾಗಾದರೆ, ನೀವು ನನ್ನ ಮನೆಗೆ ಊಟಕ್ಕೆ ಬರುತ್ತೀರಾ ಎಂದು ಕೇಳಿದ್ದನು. ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿದ ಅರವಿಂದ್ ಕೇಜ್ರಿವಾಲ್ ಅವರು, ಪಂಜಾಬ್ ಮತ್ತು ಗುಜರಾತ್ ಆಟೋ ಚಾಲಕರು ನನ್ನನ್ನು ಪ್ರೀತಿಸುತ್ತಿದ್ದಾರೆ. ನಾನು ಇಂದು ಸಂಜೆ ಬರಬೇಕೇ? ಅಥವಾ ರಾತ್ರಿ 8 ಗಂಟೆಗೆ ಬರಬೇಕೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗುಡ್‌ನ್ಯೂಸ್‌- ಪೊಲೀಸ್ ಇಲಾಖೆಯಲ್ಲಿ ದೊಡ್ಡ ನೇಮಕಾತಿಗೆ ಅಧಿಸೂಚನೆ

    ಆಟೋ ಚಾಲಕನ ಆಹ್ವಾನವನ್ನು ಸ್ವೀಕರಿಸಿದ ಕೇಜ್ರಿವಾಲ್ ಅವರು ರಾತ್ರಿ 7.30ರ ಸುಮಾರಿಗೆ ಹೊಟೇಲ್‍ನಿಂದ ಆಟೋದಲ್ಲಿ ಚಾಲಕನ ಮನೆಗೆ ತಲುಪಲು ಯೋಜಿಸಿದ್ದರು. ಮೊದಲಿಗೆ ಕೇಜ್ರಿವಾಲ್ ಅವರನ್ನು ಆಟೋದಲ್ಲಿ ಹೋಗದಂತೆ ಪೊಲೀಸರು ತಡೆದರು. ಇದರಿಂದ ಕೆಲ ಹೊತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಬಳಿಕ ಆಟೋ ಚಾಲಕನ ಮನೆಗೆ ತೆರಳಲು ಅವಕಾಶ ನೀಡಿ ಆಟೋ ಚಾಲಕನ ಪಕ್ಕದಲ್ಲಿ ಪೊಲೀಸ್‍ಯೊಬ್ಬರು ಕುಳಿತುಕೊಂಡ, ಮತ್ತೆರಡು ಪೊಲೀಸರ ಕಾರುಗಳು ಆಟೋವನ್ನು ಫಾಲೋವ್ ಮಾಡಿದವು. ನಂತರ ಆಟೋ ಚಾಲಕನ ಮನೆಗೆ ಭೇಟಿ ನೀಡಿ ಪ್ರೀತಿಯಿಂದ ಊಟಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]