Tag: DineshGunduRao

  • ರಾಜ್ಯದಲ್ಲಿ ಬೇಬಿ ಅಂಬುಲೆನ್ಸ್ ಆರಂಭ – ವಿಶೇಷತೆ ಏನು?

    ರಾಜ್ಯದಲ್ಲಿ ಬೇಬಿ ಅಂಬುಲೆನ್ಸ್ ಆರಂಭ – ವಿಶೇಷತೆ ಏನು?

    ಬೆಂಗಳೂರು: ಶಿಶುಮರಣ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಬೇಬಿ ಅಂಬುಲೆನ್ಸ್‌ಗಳಿಗೆ (Ambulance) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್  (Dinesh Gundu Rao) ಚಾಲನೆ ನೀಡಿದ್ದಾರೆ.

    ರಾಜ್ಯದಲ್ಲಿ ಶಿಶುಮರಣ ಪ್ರಮಾಣ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಹುಟ್ಟಿದ ಮಗುವಿನಿಂದ ಹಿಡಿದು ಐದು ವರ್ಷದೊಳಗಿನ ಮಕ್ಕಳ ತುರ್ತು ಚಿಕಿತ್ಸೆಗಾಗಿ ಮತ್ತು ನವಜಾತ ಶಿಶುಗಳಿಗಾಗಿ ಬೇಬಿ ಅಂಬುಲೆನ್ಸ್‌ಗೆ ಚಾಲನೆ ನೀಡಲಾಗಿದೆ.  ಇದನ್ನೂ ಓದಿ: ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಕೆಗೆ 3 ತಿಂಗಳ ಅವಧಿ ವಿಸ್ತರಣೆ

    ತಾಯಿಯ ಗರ್ಭದಿಂದ ಬರುವ ಮಗು ಹೊರಗಿನ ಜಗತ್ತಿಗೆ ಹೊಂದಿಕೊಳ್ಳಲು ಹರಸಾಹಸ ಪಡುತ್ತದೆ. ಈ ಸಂದರ್ಭದಲ್ಲಿ ನವಜಾತ ಶಿಶುಗಳಿಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಮಗುವನ್ನು ಶಿಫ್ಟ್ ಮಾಡುವಾಗ ತುರ್ತು ಆರೋಗ್ಯ ಸೇವೆ ಒದಗಿಸಲು ರಾಜ್ಯದಲ್ಲಿ ಮೊದಲ ಬಾರಿಗೆ ನವಜಾತ ಶಿಶುಗಳ ಆಂಬುಲೆನ್ಸ್ ಸೇವೆಯನ್ನು ರಾಜ್ಯ ಆರೋಗ್ಯ ಇಲಾಖೆ ಪ್ರಾರಂಭಿಸಿದೆ.  ಇದನ್ನೂ ಓದಿ: ದೇವಾಲಯಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ: ರಾಮಲಿಂಗಾ ರೆಡ್ಡಿ

    ಎಲ್ಲೆಲ್ಲಿ ಕಾರ್ಯ ನಿರ್ವಹಿಸಲಿವೆ?
    ಬೇಬಿ ಅಂಬುಲೆನ್ಸ್ಗಳು ಬೆಂಗಳೂರು ಮಾತ್ರವಲ್ಲದೇ ಹುಬ್ಬಳ್ಳಿ, ಮೈಸೂರು ಮತ್ತು ಕಲಬುರಗಿಯಲ್ಲಿ ಸದ್ಯಕ್ಕೆ ಕಾರ್ಯ ನಿರ್ವಹಿಸಲಿವೆ. ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆ, ಮೈಸೂರಿನ ಚಲುವಾಂಬ ಆಸ್ಪತ್ರೆ, ರಾಯಚೂರಿನ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ನವಜಾತ ಅಂಬುಲೆನ್ಸ್‌ಗಳನ್ನು ನಿಗದಿಪಡಿಸಲಾಗಿದೆ. ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡುವುದರಿಂದ ಗಂಭೀರ ಅನಾರೋಗ್ಯ ಸಮಸ್ಯೆ ಇರುವ ನವಜಾತ ಶಿಶುಗಳು ಬದುಕುಳಿಯುವ ಸಾಧ್ಯತೆಗಳು ಹೆಚ್ಚಾಗಲಿದೆ. ಈ ಅಂಬುಲೆನ್ಸ್‌ನಲ್ಲಿ ಪರಿಣಿತ ವೈದ್ಯರು, ನರ್ಸ್‌ಗಳು ಇರುತ್ತಾರೆ.   ಇದನ್ನೂ ಓದಿ: ಬೆಂಗಳೂರಿಗೆ ಬಂತು ಡ್ರೈವರ್‌ಲೆಸ್ ಮೆಟ್ರೋ

    ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಇನ್ನೂ ಅವಧಿಪೂರ್ವವಾಗಿ ಜನಿಸುವ ಮಗು ಮತ್ತು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿರುವ ಶಿಶುಗಳ ಹೆಚ್ಚಿನ ಚಿಕಿತ್ಸೆಗೆ ಸುರಕ್ಷಿತವಾಗಿ ಕರೆದೊಯ್ಯುವ ನಿಟ್ಟಿನಲ್ಲಿ ಈ ಅಂಬುಲೆನ್ಸ್‌ಗಳು ಸಹಕಾರಿಯಾಗಲಿವೆ. ಈ ವಾಹನದಲ್ಲಿ ವೆಂಟಿಲೇಟರ್, ಆಕ್ಸಿಜನ್, ಪಲ್ಸ್‌ಗಳ ಚೆಕಪ್ ಮತ್ತು ಸೀರೆಂಜ್‌ಗಳು ಸೇರಿದಂತೆ ಆತ್ಯಾಧುನಿಕ ಜೀವ ರಕ್ಷಕ ಸಾಧನಗಳನ್ನು ಆಂಬ್ಯುಲೆನ್ಸ್ ಹೊಂದಿದೆ ಎಂದು ತಿಳಿಸಿದ್ದಾರೆ.   ಇದನ್ನೂ ಓದಿ:ಮಾಜಿ ಸಚಿವ ಗೋಪಾಲಯ್ಯಗೆ ಕೊಲೆ ಬೆದರಿಕೆ – ಮಾಜಿ ಕಾರ್ಪೊರೇಟರ್ ಪದ್ಮರಾಜ್ ವಿರುದ್ಧ ಎಫ್‌ಐಆರ್

  • ಧರ್ಮದ ಕವಚದ ಒಳಗೆ ಪಾಪ, ಅನ್ಯಾಯದ ಕೆಲಸ ಬಿಜೆಪಿ ಮಾಡುತ್ತಿದೆ: ದಿನೇಶ್ ಗುಂಡೂರಾವ್

    ಧರ್ಮದ ಕವಚದ ಒಳಗೆ ಪಾಪ, ಅನ್ಯಾಯದ ಕೆಲಸ ಬಿಜೆಪಿ ಮಾಡುತ್ತಿದೆ: ದಿನೇಶ್ ಗುಂಡೂರಾವ್

    ಉಡುಪಿ: ಬಿಜೆಪಿಯವರು (BJP) ಧರ್ಮದ ಕವಚದ ಒಳಗೆ ಅನ್ಯಾಯದ ಕೆಲಸ ಮಾಡುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಕಿಡಿಕಾರಿದ್ದಾರೆ.

    ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಕೋಮು ಪ್ರಚೋದನೆ ಮಾಡಿ ಮತ ಗಳಿಸುವುದೇ ಇವರ ಕಾಯಕ. ಜಾತಿ ಧರ್ಮ ಭಾಷೆ ಆಧಾರದಲ್ಲಿ ಸಮಾಜವನ್ನು ಕೆಡಿಸಿಬಿಟ್ಟಿದ್ದಾರೆ. ಅನೇಕ ಜನ ಜೈ ಶ್ರೀರಾಮ್ ಹೇಳಬಹುದು. ಜನರು ಎಷ್ಟರಮಟ್ಟಿಗೆ ಅದನ್ನು ಜೀವನದಲ್ಲಿ ಅಳವಡಿಸಿದ್ದಾರೆ ಎಂದು ನೋಡಬೇಕು. ಹೇಳೋದು ಸುಲಭ ಎಷ್ಟರ ಮಟ್ಟಿಗೆ ನೈತಿಕ ಜೀವನ ನಡೆಸುತ್ತಿದ್ದಾರೆ? ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ದೇಶಕ್ಕೆ ಒಂದೇ ಸಂವಿಧಾನ ಬೇಕೆಂಬ ಕನಸು ಸಾಕಾರಗೊಂಡಿದೆ – ಮೋದಿ ಬಣ್ಣನೆ

    ಈಶ್ವರಪ್ಪ ಬಗ್ಗೆ ಮಾತನಾಡಿ, ಈಶ್ವರಪ್ಪ (Eshwarappa)ಸಮಾಜದ ವ್ಯವಸ್ಥೆಗೆ ಧಕ್ಕೆ. ಸದಾ ಕೊಲ್ಲುವ, ಕೊಚ್ಚುವ, ಮುಗಿಸುವ ಮಾತುಗಳನ್ನಾಡುತ್ತಾರೆ. ಬಿಜೆಪಿಯ ಪ್ರಮುಖ ನಾಯಕನಿಗೆ ಇದು ಶೋಭೆಯೇ? ಬಾಯಿಗೆ ಬಂದಂತೆ ಮಾತನಾಡುವ ಈಶ್ವರಪ್ಪ ಬಿಜೆಪಿಯ ನಾಯಕನೇ? ಸಮಾಜವನ್ನು ಸದಾ ಆತಂಕದಲ್ಲಿ ಇಡುವುದು ಈಶ್ವರಪ್ಪನ ಕೆಲಸ ಮತ್ತು ಅವರಿಗೆ ಅದೇ ಲಾಭ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ರಾಮಮಂದಿರ ಮುಂದಿನ ತಲೆಮಾರಿಗೆ ಹೆಮ್ಮೆಯ ಸಂಕೇತ: ಮೋದಿ

    ಖರ್ಗೆ ಹೊಟ್ಟೆಯಲ್ಲಿ ಹುಳಹುಟ್ಟಿದೆ ಎಂದು ಈಶ್ವರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಈ ತರ ಹೇಳಿಕೆ ನೀಡುವ ಅನೇಕ ನಾಯಕರು ಬಿಜೆಪಿಯಲ್ಲಿದ್ದಾರೆ. ಸಿಟಿ ರವಿ, ಶೋಭಾ, ಸುನಿಲ್, ಸಿಂಹ, ಅನಂತಕುಮಾರ್ ಹೀಗೆ ದೊಡ್ಡ ಪಟ್ಟಿ ಇದೆ. ಪ್ರಚೋದನಕಾರಿ ವೈಷಮ್ಯ ಸೃಷ್ಟಿ ಮಾಡುವುದು ಮತ್ತು ಜನರ ನಡುವೆ ಘರ್ಷಣೆ ಸೃಷ್ಟಿಸುವುದೇ ಇವರ ಕೆಲಸ. ಆರ್ಥಿಕ ಪರಿಸ್ಥಿತಿ ತೆರಿಗೆ ಬಗ್ಗೆ ಚರ್ಚೆಯಾಗಲಿ ಆರೋಗ್ಯ ಶಿಕ್ಷಣದ ಬಗ್ಗೆ ಚರ್ಚೆ ನಡೆಸೋಣ. ಇಡಿ-ಐಟಿ ಸಿಬಿಐ ಸ್ವತಂತ್ರ ಸಂಸ್ಥೆಗಳಾಗಿ ಉಳಿದಿಲ್ಲ. ತನಿಖಾ ಸಂಸ್ಥೆಗಳೆಲ್ಲವೂ ಬಿಜೆಪಿಯ ಸಂಸ್ಥೆಗಳು. ಯಡಿಯೂರಪ್ಪನವರ ಬ್ಯಾಂಕ್ ಅಕೌಂಟ್‌ಗೆ ನೇರವಾಗಿ ದುಡ್ಡು ಹೋದರೂ ಚೆಕ್ ಮಾಡಿಲ್ಲ. ಚುನಾವಣೆ ಹತ್ತಿರ ಬರುವಾಗ ತೊಂದರೆ ಕೊಡುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಮೆರಿಕದ ರಸ್ತೆಯಲ್ಲಿ ಭಾರತೀಯ ಮೂಲದ ವ್ಯಕ್ತಿ ಮೇಲೆ ಹಲ್ಲೆ – 41 ವರ್ಷದ ವಿವೇಕ್ ಸಾವು