Tag: Dinesh Sharma

  • ಕಾಂಗ್ರೆಸ್ ಶಿಥಿಲಗೊಂಡ ಕಟ್ಟಡ, ಯಾವಾಗ ಬೇಕಾದರೂ ಬೀಳಬಹುದು: ದಿನೇಶ್ ಶರ್ಮಾ

    ಕಾಂಗ್ರೆಸ್ ಶಿಥಿಲಗೊಂಡ ಕಟ್ಟಡ, ಯಾವಾಗ ಬೇಕಾದರೂ ಬೀಳಬಹುದು: ದಿನೇಶ್ ಶರ್ಮಾ

    ಲಕ್ನೋ: ಕಾಂಗ್ರೆಸ್ ಶಿಥಿಲಗೊಂಡ ಕಟ್ಟಡ, ಯಾವಾಗ ಬೇಕಾದರೂ ಕುಸಿಯಬಹುದು ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಹೇಳಿದ್ದಾರೆ.

    ಪ್ರಭಾವಿ ಮತದಾತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವು ಪಕ್ಷಗಳು ಚುನಾವಣೆ ಗೆಲ್ಲುವುದು ಅಲ್ಲಾವುದ್ದೀನ್‌ ದೀಪವನ್ನು ಉಜ್ಜಿದಂತೆ ಎಂದು ಭಾವಿಸುತ್ತಾರೆ. ಆದರೆ ಇದರಿಂದ ಅಪರಾಧಿಗಳೊಂದಿಗೆ ಅವರು ಹೊಂದಿರುವ ಸಂಪರ್ಕ ಬಹಿರಂಗವಾಗುತ್ತದೆ ಎಂದು ಅವರು ಅರಿತುಕೊಳ್ಳುವುದಿಲ್ಲ. ಇದನ್ನೂ ಓದಿ: ಜಾನ್ವಿ, ನನ್ನ ಮಧ್ಯೆ ಹಲವು ಅಂಶ ಒಂದೇ ರೀತಿ ಇದ್ದರೂ, ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಲ್ಲ: ಸಾರಾ

    ಕಾಂಗ್ರೆಸ್ ಶಿಥಿಲಗೊಂಡ ಕಟ್ಟಡ, ಅದು ಯಾವಾಗ ಬೇಕಾದರೂ ಕುಸಿಯಬಹುದು. ಏಕೆಂದರೆ ಅದು ದೇಶವನ್ನು ಟೊಳ್ಳಾಗಿಸುವ ಕೆಲಸ ಮಾತ್ರ ಮಾಡಿದೆ. ಇಲ್ಲಿಯವರೆಗೂ ಗೈರುಹಾಜರಾಗಿದ್ದ ರಾಜಕೀಯ ಪಕ್ಷಗಳು ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಅಲ್ಲಾವುದ್ದೀನ್‌ ದೀಪ ಬೆಳಗಲು ಆರಂಭಿಸಿವೆ. ಆದರೆ ಈ ದೀಪವನ್ನು ಬೆಳಗಿಸುವ ಮೂಲಕ ಕಾಂಗ್ರೆಸ್ ಅವರು ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳನ್ನು ಎತ್ತಿ ತೋರಿಸುತ್ತಿದ್ದಾರೆ. ಇದು ರಾಜ್ಯದಲ್ಲಿ ಅಪರಾಧೀಕರಣದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದನ್ನೂ ಓದಿ:  ಅಕ್ರಮ ಆಸ್ತಿ ಖರೀದಿಸಿಲ್ಲ – 3 ಕೋಟಿ ಮಾನನಷ್ಟ ಕೇಸ್‌ ಹಾಕ್ತೀನಿ ಎಂದ ಚನ್ನಣ್ಣನವರ್‌

    ಕಾಂಗ್ರೆಸ್ ಪಕ್ಷಗಳಲ್ಲಿ ಕುಟುಂಬ ಆಡಳಿತ ರಾಜಕೀಯ ಜೋರಾಗಿದೆ. ಪಕ್ಷದ ಮುಖ್ಯಸ್ಥರ ಹುದ್ದೆಯಲ್ಲಿ ಕುಟುಂಬದ ವ್ಯಕ್ತಿಯೊಬ್ಬರು ಕುಳಿತಿದ್ದಾರೆ. ಕಾಂಗ್ರೆಸ್‍ನಲ್ಲಿ ಗಾಂಧಿ ಅಥವಾ ವಾದ್ರಾ ಕುಟುಂಬದವರಿದ್ದಾರೆ, ಸಮಾಜವಾದಿ ಪಕ್ಷದಲ್ಲಿ ಒಂದು ಕುಟುಂಬದ ಸದಸ್ಯರು ಮಾತ್ರ ಇದ್ದಾರೆ. ಬಿಜೆಪಿಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತ ಕೂಡ ಪಕ್ಷದ ಮುಖ್ಯಸ್ಥನಾಗುತ್ತಾನೆ ಎಂದಿದ್ದಾರೆ.

  • ಪ್ರಿಯಾಂಕ ಮಕ್ಕಳು ‘ಗರೀಬಿ ಹಠಾವೋ’ದ ಮುಂದಿನ ಹೋರಾಟಗಾರರು: ಯುಪಿ ಡಿಸಿಎಂ ವ್ಯಂಗ್ಯ

    ಪ್ರಿಯಾಂಕ ಮಕ್ಕಳು ‘ಗರೀಬಿ ಹಠಾವೋ’ದ ಮುಂದಿನ ಹೋರಾಟಗಾರರು: ಯುಪಿ ಡಿಸಿಎಂ ವ್ಯಂಗ್ಯ

    ಲಕ್ನೋ: ಉತ್ತರ ಪ್ರದೇಶ ಪೂರ್ವದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಮಕ್ಕಳು ‘ಗರೀಬಿ ಹಠಾವೋ’ದ ಮುಂದಿನ ಹೋರಾಟಗಾರರು ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ವ್ಯಂಗ್ಯವಾಡಿದ್ದಾರೆ.

    ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ಬಿಜೆಪಿ ಪ್ರಚಾರದಲ್ಲಿ ಮಾತನಾಡಿದ ಡಿಸಿಎಂ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಗರೀಬಿ ಹಠಾವೋ ಎಂದು ಹೇಳಿ ಹೊಸ ಆಂದೋಲವನ್ನೇ ಸೃಷ್ಟಿಸಿದರು. ಅದನ್ನು ಪುತ್ರ, ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಮುಂದುವರಿಸಿಕೊಂಡು ಅಧಿಕಾರಕ್ಕೆ ಬಂದರು. ಹೀಗಾಗಿ ಪ್ರಿಯಾಂಕಾ ಗಾಂಧಿ ಅವರ ಮಕ್ಕಳು ಕೂಡ ಗರೀಬಿ ಹಠಾವೋ ಎಂದು ಹೇಳಿಯೇ ರಾಜಕೀಯ ಪ್ರವೇಶ ಮಾಡುತ್ತಾರೆ ಎಂದು ಲೇವಡಿ ಮಾಡಿದರು.

    ದೇಶದಲ್ಲಿ ಬಡತನ ಇಲ್ಲವಾಗಿದೆಯೇ? ಸ್ವಾತಂತ್ರ್ಯ ನಂತರದ 70 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಹೆಚ್ಚು ಕಾಲ ಅಧಿಕಾರದಲ್ಲಿತ್ತು. ಕಾಂಗ್ರೆಸ್‍ನವರು ಗರೀಬಿ ಹಠಾವೋ ಎಂದು ಹೇಳಿದರೇ ಹೊರತು ಬಡತನವನ್ನು ತೊಲಗಿಸಲಿಲ್ಲ. ದೇಶದಲ್ಲಿ ಬಡವರು ಬಡವರಾಗಿ, ಶ್ರೀಮಂತರು ಶ್ರೀಮಂತರಾಗಿಯೇ ಉಳಿದಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

    ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1971ರಲ್ಲಿ ಗರೀಬಿ ಹಠಾವೋ ಅಭಿಯಾನ ಆರಂಭಿಸಿದರು. ಈ ಮೂಲಕ 1971ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 352 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಅಧಿಕಾರಕ್ಕೆ ಬಂದಿತ್ತು. ರಾಜೀವ್ ಗಾಂಧಿ ಅವರು ಕೂಡ ಗರೀಬಿ ಹಠಾವೋ ಅಭಿಯಾನವನ್ನು ಮುಂದುವರಿಸಿ ಪ್ರಧಾನಿಯಾಗಿದ್ದರು.