Tag: Dinesh Kallahalli

  • ಕುಮಾರಸ್ವಾಮಿ ಡೀಲ್ ಹೇಳಿಕೆಯಿಂದ ಬೇಸರ: ದಿನೇಶ್ ಕಲ್ಲಹಳ್ಳಿ

    ಕುಮಾರಸ್ವಾಮಿ ಡೀಲ್ ಹೇಳಿಕೆಯಿಂದ ಬೇಸರ: ದಿನೇಶ್ ಕಲ್ಲಹಳ್ಳಿ

    – ಮಾಹಿತಿ ನೀಡಿದ್ದರವನ್ನೇ ಟಾರ್ಗೆಟ್

    ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಹಿಂಪಡೆದ ಬಗ್ಗೆ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಪ್ರತಿಕ್ರಿಯಿಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಡೀಲ್ ಆರೋಪದ ಹೇಳಿಕೆ ಬೇಸರ ತಂದಿದೆ. ದೂರು ನೀಡಿದ್ದವರನ್ನ ಟಾರ್ಗೆಟ್ ಮಾಡಲಾಗ್ತಿದೆ ಎಂದು ದಿನೇಶ್ ಆರೋಪಿಸಿದ್ದಾರೆ. ದಿನೇಶ್ ಕಲ್ಲಹಳ್ಳಿ ಪೊಲೀಸರಿಗೆ ಬರೆದ ಪತ್ರ ಸಹ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ದೂರು ಹಿಂಪಡೆಯುವ ಬಗ್ಗೆ ವಕೀಲರ ಜೊತೆ ಚರ್ಚಿಸಿದ್ದೇನೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನಮ್ಮ ವಕೀಲರು ಹೋಗಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ದೂರುದಾರ 5 ಕೋಟಿ ತೆಗೆದುಕೊಂಡು ಡೀಲ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆಯಿಂದ ಜನರು ನನ್ನನ್ನು ಸಂಶಯದಿಂದ ನೋಡುತ್ತಿದ್ದಾರೆ. ಈ ಆರೋಪ ನನ್ನ ಸಾಮಾಜಿಕ ಹೋರಾಟಕ್ಕೆ ಹಿನ್ನಡೆ ಅಂತ ನಾನು ಅರ್ಥೈಸಿಕೊಂಡಿದ್ದೇನೆ. ಮಾಹಿತಿ ನೀಡುವವರನ್ನ ಟಾರ್ಗೆಟ್ ಮಾಡೋದು ಬಹಳ ನೋವಿನ ಸಂಗತಿ ಎಂದು ಬೇಸರ ಹೊರ ಹಾಕಿದರು.

    ದಿನೇಶ್ ಪತ್ರ: ಮಾಜಿ ನೀರಾವರಿ ಮಂತ್ರಿ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನಿಡಿದ್ದು ಸರಿಯಷ್ಟೇ. ಬಟ್ಟೆಯ ಮೇಲೆ ಮುಳ್ಳು ಬಿದ್ದರೂ ಮುಳ್ಳಿನ ಮೇಲೆ ಬಟ್ಟೆ ಬಿದ್ದರೂ ಹರಿಯುವುದು ಬಟ್ಟೆಯ ಎಂಬ ನಾಣ್ಣುಡಿಯನ್ನು ಈ ಹಿಂದೆ ಮಹಿಳೆಯರ ವಿಷಯದಲ್ಲಿ ಬಳಕೆ ಮಾಡಲಾಗುತ್ತಿತ್ತು. ದುರಾದೃಷ್ಟವಶಾತ್ ಈಗಿನ ಸುಸಂಸ್ಕೃತ ನಾಗರಿಕ ಸಮಾಜದಲ್ಲಿ ಮಹಿಳೆಯರ ವಿಚಾರದಲ್ಲಿ ಈ ನಾಣ್ಣುಡಿಯಂತೆ ನಡೆಯುತ್ತಿದೆ. ಸಚಿವರದ್ದೆನ್ನಲಾದ ಲೈಂಗಿಕ ದೌರ್ಜನ್ಯ ಸಿಡಿಯನ್ನು ಪೊಲೀಸರಿಗೆ ದೂರಿನ ಜೊತೆಗೆ ಒಪ್ಪಿಸಿದ್ದೆ. ಆದರೆ ಈಗ ಇಡೀ ಸಮಾಜದಲ್ಲಿ ಮಹಿಳೆಯ ಚಾರಿತ್ಯ ಹರಣ ನಡೆಯುತ್ತಿದೆ.

    ಮಾರ್ಚ್ 2ರಂದು ಮಾಜಿ ಸಚಿವರ ವಿರುದ್ಧ ದಿನೇಶ್ ಕಲ್ಲಹಳ್ಳಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಶುಕ್ರವಾರ ಪೊಲೀಸರ ಮುಂದೆ ಹಾಜರಾಗಿ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು. ಇತ್ತ ವೀಡಿಯೋ ಸಂಚಲನ ಸೃಷ್ಟಿಸಿ ಮಾಜಿ ಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ದಿನೇಶ್ ಕಲ್ಲಹಳ್ಳಿ, ಇನ್ನೂ ಮೂವರ ವೀಡಿಯೋಗಳು ತಮ್ಮ ಬಳಿಯಲ್ಲಿರುವ ಬಗ್ಗೆ ಹೇಳಿದ್ದರು.

  • ಮಾಜಿ ಸಚಿವರ ವಿರುದ್ಧ ನೀಡಿದ್ದ ದೂರು ಹಿಂಪಡೆದ ದಿನೇಶ್ ಕಲ್ಲಹಳ್ಳಿ

    ಮಾಜಿ ಸಚಿವರ ವಿರುದ್ಧ ನೀಡಿದ್ದ ದೂರು ಹಿಂಪಡೆದ ದಿನೇಶ್ ಕಲ್ಲಹಳ್ಳಿ

    – ರಾಸಲೀಲೆ ಪ್ರಕರಣಕ್ಕೆ ಸ್ಫೋಟಕ್ಕೆ ತಿರುವು

    ಬೆಂಗಳೂರು: ಮಾಜಿ ಮಂತ್ರಿಗಳ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಯೂ ಟರ್ನ್ ತೆಗೆದುಕೊಂಡಿದ್ದಾರೆ. ದಾಖಲಿಸಿದ್ದ ದೂರನ್ನ ಹಿಂಪಡೆಯಲು ದಿನೇಶ್ ನಿರ್ಧರಿಸಿದ್ದು, ತಮ್ಮ ವಕೀಲರ ಮೂಲಕ ಪತ್ರವನ್ನ ಪೊಲೀಸ್ ಠಾಣೆಗೆ ತಲುಪಿಸಲು ಮುಂದಾಗಿದ್ದಾರೆ ಎಂದು ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ.

    ಮಾರ್ಚ್ 2ರಂದು ಮಾಜಿ ಸಚಿವರ ವಿರುದ್ಧ ದಿನೇಶ್ ಕಲ್ಲಹಳ್ಳಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಶುಕ್ರವಾರ ಪೊಲೀಸರ ಮುಂದೆ ಹಾಜರಾಗಿ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು. ಇತ್ತ ವೀಡಿಯೋ ಸಂಚಲನ ಸೃಷ್ಟಿಸಿ ಮಾಜಿ ಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ದಿನೇಶ್ ಕಲ್ಲಹಳ್ಳಿ, ಇನ್ನೂ ಮೂವರ ವೀಡಿಯೋಗಳು ತಮ್ಮ ಬಳಿಯಲ್ಲಿರುವ ಬಗ್ಗೆ ಹೇಳಿದ್ದರು.

    ಸದ್ಯದ ತಮ್ಮ ಲೆಟರ್ ಹೆಡ್ ನಲ್ಲಿಯೇ ಪತ್ರ ಬರೆದಿದ್ದಾರೆ. ಪತ್ರವನ್ನ ದಿನೇಶ್ ವಕೀಲರು ಪೊಲೀಸರಿಗೆ ತಲುಪಿಸಲಿದ್ದಾರೆ. ಆದ್ರೆ ದಿಢೀರ್ ಅಂತ ದಿನೇಶ್ ಯೂ ಟರ್ನ್ ಪಡೆದಿದ್ದು ಯಾಕೆ ಅನ್ನೋದರ ಬಗ್ಗೆ ಪ್ರಶ್ನೆ ಹುಟ್ಟಿಕೊಂಡಿದೆ. ಪೊಲೀಸ್ ವಿಚಾರಣೆಗೆ ಹಾಜರಾಗುವ ಮುನ್ನ ತಮಗೆ ಜೀವ ಬೆದರಿಕೆ ಇದೆ ಎಂದು ದಿನೇಶ್ ಹೇಳಿದ್ದರು.

  • ದಿನೇಶ್‌ಗೆ  ರಾಸಲೀಲೆ ಸಿಡಿ ಸಿಕ್ಕಿದ್ದು ಬೆಂಗಳೂರು ಹೋಟೆಲಿನಲ್ಲಿ

    ದಿನೇಶ್‌ಗೆ ರಾಸಲೀಲೆ ಸಿಡಿ ಸಿಕ್ಕಿದ್ದು ಬೆಂಗಳೂರು ಹೋಟೆಲಿನಲ್ಲಿ

    ಬೆಂಗಳೂರು: ರಮೇಶ್‌ ಜಾರಕಿಹೊಳಿ ರಾಸಲೀಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ದೂರುದಾರ ದಿನೇಶ್‌‌ ಕಲ್ಲಹಳ್ಳಿ ಅವರಿಗೆ ಸಿಡಿ ಎಲ್ಲಿ ಸಿಕ್ಕಿದೆ ಎಂಬ ವಿಚಾರ ಈಗ ಪೊಲೀಸ್‌ ತನಿಖೆಯಿಂದ ಲಭ್ಯವಾಗಿದೆ.

    ಮಾರ್ಚ್‌ 1 ರಂದು ದಿನೇಶ್‌ ಕಲ್ಲಹಳ್ಳಿ ಅವರಿಗೆ ಸಿಡಿ ಸಿಕ್ಕಿದೆ. ಬೆಂಗಳೂರಿನ ಗಾಂಧಿನಗರದ ರಾಮಕೃಷ್ಣ ಹೋಟೆಲಿನ ಪಾರ್ಕಿಂಗ್‌ ಜಾಗದಲ್ಲಿ ಸಂತ್ರಸ್ತ ಯುವತಿಯ ಸಂಬಂಧಿಕರು ದಿನೇಶ್‌ ಕಲ್ಲಹಳ್ಳಿಯವರಿಗೆ ನೀಡಿದ್ದಾರೆ. ಸಂಬಂಧಿಕರು ದಿನೇಶ್‌ ಅವರಿಗೆ ಸಿಡಿ ನೀಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಸಂಬಂಧ ಸಿಸಿಬಿ ಪೊಲೀಸರು ಹೋಟೆಲ್‌ಗೆ ಬಂದು ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲದೇ ಯಾರಿಗೂ ನೀಡಬಾರದು ಎಂದು ಸೂಚಿಸಿದ್ದಾರೆ.

    ಪಬ್ಲಿಕ್‌ ಟಿವಿ ಸ್ಟಿಂಗ್‌ನಲ್ಲಿ ಹೋಟೆಲ್‌ ಮ್ಯಾನೇಜರ್‌ ಪ್ರತಿಕ್ರಿಯಿಸಿ, ನಮ್ಮ ಹೋಟೆಲಿಗೆ ಬಂದು ಸಿಡಿ ನೀಡಿದ್ದಾರೆ ಎಂಬ ವಿಚಾರ ಪೊಲೀಸರು ಬಂದ ನಂತರವಷ್ಟೇ ತಿಳಿಯಿತು. ನಮಗೆ ದಿನೇಶ್‌ ಕಲ್ಲಹಳ್ಳಿ ಯಾರು ಎಂಬುದೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬಂದ ನಂತರ ದಿನೇಶ್‌ ಕಲ್ಲಹಳ್ಳಿ ಯಾರು ಎನ್ನುವುದು ಗೊತ್ತಾಗಿದೆ. ನಮ್ಮ ಹೋಟೆಲಿಗೆ ಪ್ರತಿನಿತ್ಯ ಹಲವು ಮಂದಿ ಬರುತ್ತಿರುತ್ತಾರೆ ಎಂದು ಹೇಳಿದರು.


    ಸಿಸಿಟಿವಿ ದೃಶ್ಯ ತೋರಿಸಬಹುದೇ ಎಂದು ಕೇಳಿದ್ದಕ್ಕೆ ಮ್ಯಾನೇಜರ್‌, ಇಲ್ಲ ಯಾರಿಗೂ ನಾವು ನೀಡುವುದಿಲ್ಲ. ಪೊಲೀಸರು ಯಾರಿಗೂ ಕೊಡಬಾರದು ಎಂದೂ ಸೂಚಿಸಿದ್ದಾರೆ ಎಂದರು.

    ಕೇವಲ ಕಬ್ಬನ್‌ ಪಾರ್ಕ್‌ ಪೊಲೀಸರು ಮಾತ್ರ ಹೋಟೆಲಿಗೆ ಬಂದಿಲ್ಲ. ಸಿಸಿಬಿ ಪೊಲೀಸರು ಸಹ ಹೋಟೆಲಿಗೆ ಬಂದು ಎರಡು ದಿನದ ದೃಶ್ಯಗಳನ್ನು ಪಡೆದುಕೊಂಡಿದ್ದಾರೆ.

  • ಇದು ಸಮ್ಮತಿಯ ದೈಹಿಕ ಕ್ರಿಯೆ – ದಿನೇಶ್ ಕಲ್ಲಹಳ್ಳಿ ವಿರುದ್ಧವೇ ದೂರು

    ಇದು ಸಮ್ಮತಿಯ ದೈಹಿಕ ಕ್ರಿಯೆ – ದಿನೇಶ್ ಕಲ್ಲಹಳ್ಳಿ ವಿರುದ್ಧವೇ ದೂರು

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಗ್ಗೆ ದೂರು ದಾಖಲಿಸಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ಧವೇ ದೂರು ದಾಖಲಾಗಿದೆ.

    ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕರ್ನಾಟಕ ಕನ್ನಡಪರ ಸಂಘಟನೆ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಪುಟ್ಟೇಗೌಡರು ದೂರು ದಾಖಲಿಸಿದ್ದಾರೆ.

    ಇದು ಇಬ್ಬರ ಸಮ್ಮತಿಯಿಂದ ನಡೆದಿರುವ ದೈಹಿಕ ಕ್ರಿಯೆ. ರಮೇಶ್ ಜಾರಕಿಹೊಳಿ ಖಾಸಗಿ ವಿಡಿಯೋ ವೈರಲ್ ಮಾಡಿಸಿದ್ದಾರೆ. ದಿನೇಶ್ ಕಲ್ಲಹಳ್ಳಿಗೂ ಈ ವೀಡಿಯೋಗೂ ಏನು ಸಂಬಂಧ? ಅವರ ಚಾರಿತ್ರ್ಯ ವಧೆ ಮಾಡಲು ನಡೆದಿರುವ ಕುತಂತ್ರ ಇದು ಎಂದು ಪುಟ್ಟೇಗೌಡರು ಆರೋಪಿಸಿದ್ದಾರೆ.

    ಖಾಸಗಿ ಜೀವನದಲ್ಲಿ ಏನು ಬೇಕಾದರೂ ಮಾಡಿಕೊಳ್ಳಬಹುದು. ಅದನ್ನು ಚಿತ್ರೀಕರಿಸಿ ಬಿತ್ತರಿಸಿರುವುದು ತಪ್ಪು. ಯುವತಿಗೆ ಅನ್ಯಾಯವಾಗಿದ್ದರೆ ಆಕೆಯೇ ದೂರು ನೀಡಬಹುದಿತ್ತು. ತಕ್ಷಣ ದಿನೇಶ್ ಕಲ್ಲಹಳ್ಳಿ ಬಂಧಿಸಿ, ವಿಚಾರಣೆ ನಡೆಸಬೇಕೆಂದು ಪುಟ್ಟೇಗೌಡರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • ನನ್ನ ಬಳಿ ಮೂವರು ಪ್ರಭಾವಿ ವ್ಯಕ್ತಿಗಳ ಸಿಡಿ ಇದೆ : ದಿನೇಶ್ ಕಲ್ಲಹಳ್ಳಿ

    ನನ್ನ ಬಳಿ ಮೂವರು ಪ್ರಭಾವಿ ವ್ಯಕ್ತಿಗಳ ಸಿಡಿ ಇದೆ : ದಿನೇಶ್ ಕಲ್ಲಹಳ್ಳಿ

    ಬೆಂಗಳೂರು: ನನ್ನ ಬಳಿ ಮೂವರು ಪ್ರಭಾವಿ ವ್ಯಕ್ತಿಗಳ ಸಿಡಿ ಇದೆ ಎಂದು ಎಂದು ಸಾಮಾಜಿಕ ಕಾರ್ಯಕರ್ತ, ಜಾರಕಿಹೊಳಿ ಪ್ರಕರಣದ ದೂರುದಾರ ದಿನೇಶ್ ಕಲ್ಲಹಳ್ಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಜಾರಕಿಹೊಳಿ ರಾಜೀನಾಮೆ ನೀಡಿದ ಬಳಿಕ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ನಾನು ಆರೋಪಿಸುತ್ತಿರುವ ಮೂವರ ಪೈಕಿ ಒಬ್ಬರು ಸಚಿವ ಸಂಪುಟದಲ್ಲಿದ್ದಾರೆ ಇಬ್ಬರು ಉನ್ನತ ಹುದ್ದೆಯಲ್ಲಿದ್ದಾರೆ. ನಾನು ಕಾನೂನು ತಜ್ಞರ ಜೊತೆಗೆ ಮಾತನಾಡಿ ಅವರ ಹೆಸರನ್ನು ಬಹಿರಂಗ ಪಡಿಸುತ್ತೇನೆ ಎಂದರು.

    ಯಾವ ಪಕ್ಷ, ಯಾರು, ಅವರ ಹೆಸರು ಎಲ್ಲಾ ವಿಚಾರವನ್ನು ನಾನು ಹೇಳುತ್ತೇನೆ. ಸರ್ಕಾರದ ಉನ್ನತ ಹುದ್ದೆಯಲ್ಲಿ ಇರುವವರು ಇದ್ದಾರೆ. ಅವರ ಸಿಡಿಗಳು ಇದೆ ಎನ್ನುವುದನ್ನು ಮಾತ್ರ ನಾನು ಹೇಳಬಹುದು. ಯಾರು ಎಂಬುದನ್ನು ನಾನು ಹೇಳುತ್ತೇನೆ. ಸತ್ಯಾ ಸತ್ಯಾಸತೆಯನ್ನು ಪರಿಶಿಲನೆಯಾಗಬೇಕು. ತನಿಕೆಯಾಗಬೇಕು ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂದಿದ್ದಾರೆ.

    ಅಧಿಕಾರ ದುರ್ಬಳಕೆ ಮಾಡಿ ಲೈಂಗಿಕ ತೃಷೆ ತೀರಿಸಿಕೊಳ್ಳುತ್ತಿದ್ದ ಸರ್ಕಾರದ ಪ್ರಭಾವಿ ವ್ಯಕ್ತಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಾಗಿತ್ತು. ದೂರು ನೀಡಿದ ಬಳಿಕ  ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ಪ್ರಭಾವಿ ನಾಯಕರ ವಿರುದ್ಧ ದೂರು ನೀಡುತ್ತಿದ್ದೇನೆ. ಸಂತ್ರಸ್ತೆಯ ಹೆಸರು ಬಹಿರಂಗ ಪಡಿಸುವುದಿಲ್ಲ. ಸಂತ್ರಸ್ತೆಗೆ ಬೆದರಿಕೆ ಇರುವ ಕಾರಣ ಮಹಿಳೆ ಬರುವುದಿಲ್ಲ ಎಂದು ತಿಳಿಸಿದ್ದರು.

    ಸಿಡಿ ಬಹಿರಂಗವಾದ ನಂತರ ರಮೇಶ್ ಜಾರಕಿಹೊಳಿ ರಾಜಿನಾಮೆಯನ್ನು ನೀಡಿದ್ದಾರೆ. ರಾಜಿನಾಮೆಯನ್ನು ಖಂಡಿಸಿ ಜಾರಕಿಹೊಳಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕವನ್ನು ಮಾಡಿ ಗೋಕಾಕ್ ಬಂದ್ ಮಾಡಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಬೆದರಿಕೆ ಕರೆ ಬರುತ್ತಿವೆ, ಸಂತ್ರಸ್ತೆ ಹೊರಗೆ ಬರುತ್ತಿಲ್ಲ, ನಾನೇ ದೂರು ನೀಡಲು ಬಂದೆ: ದಿನೇಶ್ ಕಲ್ಲಹಳ್ಳಿ

    ಬೆದರಿಕೆ ಕರೆ ಬರುತ್ತಿವೆ, ಸಂತ್ರಸ್ತೆ ಹೊರಗೆ ಬರುತ್ತಿಲ್ಲ, ನಾನೇ ದೂರು ನೀಡಲು ಬಂದೆ: ದಿನೇಶ್ ಕಲ್ಲಹಳ್ಳಿ

    ಬೆಂಗಳೂರು: ಬೆದರಿಕೆ ಇರುವುದರಿಂದ ಸಂತ್ರಸ್ತೆ ಎಲ್ಲೂ ಹೊರಗೆ ಬರುತ್ತಿಲ್ಲ. ನನಗೆ ಭಯ ಆಗುತ್ತಿದೆ ದೂರು ನೀಡಿ ಎಂದು ಮನವಿ ಮಾಡಿದರು. ಹೀಗಾಗಿ ನಾನು ದೂರು ನೀಡಲು ಬಂದಿದ್ದೇನೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.

    ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಭೇಟಿ ಬಳಿಕ ಮಾತನಾಡಿದ ಅವರು, ಇದು ತುಂಬಾ ಸೂಕ್ಷ್ಮವಾದ ವಿಚಾರ ಆಗಿರುವ ಕಾರಣ ಬಹಿರಂಗಪಡಿಸಲು ಸಾಧ್ಯವಿಲ್ಲ. ಸಂತ್ರಸ್ತೆಗೆ ಭಾರೀ ಪ್ರಮಾಣದಲ್ಲಿ ಬೆದರಿಕೆ ಕರೆಗಳು ಬರುತ್ತಿವೆ. ಒಂದೆರಡು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಬಳಿಕ ಬೆದರಿಕೆ ಕರೆಗಳು ಬರುತ್ತಿವೆ. ಹೀಗಾಗಿ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ತಿಳಿಸಿದರು.

    ಆಯುಕ್ತರನ್ನು ಭೇಟಿ ಮಾಡಿದ ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ತಿಳಿಸಿದ್ದಾರೆ. ಹೀಗಾಗಿ ದೂರು ನೀಡಲು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳುತ್ತಿದ್ದೇನೆ ಎಂದರು.

    ಕುಟುಂಬದ ಸದಸ್ಯರೊಬ್ಬರು ಆಗಮಿಸಿ ಸೋಮವಾರ ನನಗೆ ಸಿಡಿ ನೀಡಿದರು. ಕಿರು ಚಿತ್ರ ನಿರ್ಮಾಣಕ್ಕೆಂದು ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದಾಗ ಕೆಪಿಟಿಸಿಎಲ್‍ನಲ್ಲಿ ಕೆಲಸ ನೀಡುವುದಾಗಿ ಹೇಳಿಕೆ ನೀಡಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಹಲವು ಪ್ರಕರಣಗಳಲ್ಲಿ ನನಗೆ ತುಂಬಾ ನೋವು ಕೊಟ್ಟಿದ್ದಾರೆ. ನನ್ನಿಂದ ಅವರ ವಿರುದ್ಧ ಹೋರಾಟ ಮಾಡಲು ಆಗುತ್ತಿಲ್ಲ. ನ್ಯಾಯ ಕೊಡಿಸಿ ಎಂದು ನನ್ನ ಬಳಿ ಮನವಿ ಮಾಡಿದರು. ನಾನು ನಮ್ಮ ವಕೀಲರ ಜೊತೆ ಚರ್ಚೆ ನಡೆಸಿ, ಇದೀಗ ದೂರು ನೀಡಲು ಬಂದಿದ್ದೇನೆ ಎಂದು ತಿಳಿಸಿದರು.

    ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೊಬ್ಬರು ಈ ರೀತಿ ಮಾಡುವುದು ಅಕ್ಷಮ್ಯ ಅಪರಾಧ, ಈ ಬಗ್ಗೆ ಸಮಗ್ರ ತನಿಖೆಯಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಅವರು ತಿಳಿಸಿದರು. ಪೊಲೀಸರು ಸಂತ್ರಸ್ತೆಯನ್ನು ಕರೆಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.