Tag: Dinakar thoogudeepa

  • ಅಣ್ಣ-ತಮ್ಮ ಬೇರೆ ಆಗಿದ್ದೀವಿ ಅಂತ ಯಾರು ಹೇಳಿದ್ದು?; ದರ್ಶನ್‌ ಜೊತೆ ಮನಸ್ತಾಪ ಇಲ್ಲ ಎಂದ ದಿನಕರ್‌ ತೂಗುದೀಪ

    ಅಣ್ಣ-ತಮ್ಮ ಬೇರೆ ಆಗಿದ್ದೀವಿ ಅಂತ ಯಾರು ಹೇಳಿದ್ದು?; ದರ್ಶನ್‌ ಜೊತೆ ಮನಸ್ತಾಪ ಇಲ್ಲ ಎಂದ ದಿನಕರ್‌ ತೂಗುದೀಪ

    – ದರ್ಶನ್‌ಗೆ ನಾನು ಸಿನಿಮಾ ಮಾಡೋದು ಕನ್ಫರ್ಮ್‌

    ಣ್ಣ ದರ್ಶನ್ (Darshan) ಜೊತೆಗಿನ ಮನಸ್ತಾಪದ ಬಗ್ಗೆ ಕೊನೆಗೂ ಮೌನಮುರಿದ್ದಾರೆ ಸಹೋದರ ದಿನಕರ್ ತೂಗುದೀಪ (Dinakar Thoogudeepa). ಅಣ್ಣ-ತಮ್ಮ ಬೇರೆ ಆಗಿದ್ದೀವಿ ಅಂತ ಯಾರು ಹೇಳಿದ್ದು? ಫ್ಯಾಮಿಲಿಯಲ್ಲಿ ಚಿಕ್ಕಪುಟ್ಟ ಮನಸ್ತಾಪವಿತ್ತು ಅಷ್ಟೆ. ಹಾಗಂತ ದೂರ ಆಗೋ ಮಾತಿಲ್ಲ ಎಂದು ದರ್ಶನ್‌ ಜೊತೆಗೆ ಯಾವುದೇ ಮನಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ‘ರಾಯಲ್’‌ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನಕರ್‌, ಗಂಡ-ಹೆಂಡತಿ ಮಧ್ಯೆ ಹೇಗೆ ಜಗಳವೋ ಹಾಗೆ ಅಣ್ಣ-ತಮ್ಮ ಅಂದ್ಮೇಲೆ ಇದ್ದೆ ಇರುತ್ತೆ. ಮಾತಾಡ್ತಾನೇ ಇರ್ತೀವಿ. ತಿಂಗಳಿಗೊಮ್ಮೆ ಆಗೊಮ್ಮೆ ಈಗೊಮ್ಮೆ. ಅತ್ತಿಗೆ ಜೊತೆ ಯಾವಾಗಲೂ ಕಾಂಟೆಕ್ಟ್‌ನಲ್ಲಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ರಣಬೀರ್ ಕಪೂರ್-ದೀಪಿಕಾ ಪಡುಕೋಣೆಯ ‘ಯೇ ಜವಾನಿ ಹೈ ದೀವಾನಿ’ ಜ.3ಕ್ಕೆ ರೀ-ರಿಲೀಸ್

    ಈ ಸಿನಿಮಾಗೆ ದರ್ಶನ್ ಸಾಥ್ ಕೊಡಬಹುದು. ಬೆನ್ನುನೋವಿದೆ.. ಟ್ರೀಟ್ಮೆಂಟ್‌ಗಾಗಿ ಮೈಸೂರಿಗೆ ಹೋಗಿದ್ದೀವಿ. ಅಜಯ್ ಹೆಗ್ಡೆ ಎರಡು ಬಾರಿ ಟ್ರೀಟ್ಮೆಂಟ್ ಮಾಡಿದಾರೆ ಹಾಗಾಗಿ ಅಲ್ಲೇ ಟ್ರೀಟ್ಮೆಂಟ್ ಎಂದರು.

    ದರ್ಶನ್‌ಗೆ ನಾನು ಸಿನಿಮಾ ಮಾಡೋದು ಕನ್ಫರ್ಮ್. ನಿರ್ಮಾಪಕರ ಲಿಸ್ಟ್ ದರ್ಶನ್ ಕಡೆಗಿದೆ. ದರ್ಶನ್‌ಗೆ ಸಿನಿಮಾ ಮಾಡ್ಬೇಕು ಅಂದಾಗ ಕಥೆ ಕೇಳಲ್ಲ. ದರ್ಶನ್ ನನಗಿಂತ ಇಂಡಸ್ಟ್ರಿಯಲ್ಲಿ ಸೀನಿಯರ್ ಎಂದು ಅಣ್ಣನ ಕುರಿತು ಮಾತನಾಡಿದರು. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ – `ಮುದ್ದುಲಕ್ಷ್ಮಿ’ ಸೀರಿಯಲ್ ನಟ ಚರಿತ್ ಬಾಳಪ್ಪ ಬಂಧನ

  • ನ.8ರಂದು ದರ್ಶನ್ ನಟನೆಯ ‘ನವಗ್ರಹ’ ಚಿತ್ರ ರೀ ರಿಲೀಸ್

    ನ.8ರಂದು ದರ್ಶನ್ ನಟನೆಯ ‘ನವಗ್ರಹ’ ಚಿತ್ರ ರೀ ರಿಲೀಸ್

    ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಟನೆಯ ‘ನವಗ್ರಹ’ (Navagraha) ಸಿನಿಮಾ ಇದೀಗ ನವೆಂಬರ್ 8ರಂದು ರೀ ರಿಲೀಸ್ ಆಗುತ್ತಿದೆ. 16 ವರ್ಷಗಳ ಬಳಿಕ ಮತ್ತೆ ಈ ಸಿನಿಮಾ ತೆರೆ ಕಾಣುತ್ತಿದೆ. ಇದನ್ನೂ ಓದಿ:ಲೈಂಗಿಕ ದೌರ್ಜನ್ಯ ಆರೋಪ- ಜಾನಿ ಮಾಸ್ಟರ್‌ಗೆ ಜಾಮೀನು ಮಂಜೂರು

    ದರ್ಶನ್, ತರುಣ್ ಸುಧೀರ್, ಮರಿ ಟೈಗರ್ ವಿನೋದ್ ಪ್ರಭಾಕರ್, ಧರ್ಮ ಕೀರ್ತಿರಾಜ್, ಸೃಜನ್ ಲೋಕೇಶ್, ನಾಗೇಂದ್ರ ಅರಸ್, ಗಿರಿ ದಿನೇಶ್, ವರ್ಷ, ಶರ್ಮಿಳಾ ಮಾಂಡ್ರೆ ನಟನೆಯ ‘ನವಗ್ರಹ’ ಚಿತ್ರ ನವೆಂಬರ್ 8ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 16 ವರ್ಷಗಳ ಹಿಂದೆ 2008ರ ನ.7ರಂದು ಚಿತ್ರ ತೆರೆಕಂಡಿತ್ತು.

    ಈ ಚಿತ್ರವನ್ನು ತೂಗುದೀಪ ಸಂಸ್ಥೆಯ ನಿರ್ಮಾಣದಲ್ಲಿ ದಿನಕರ್ ತೂಗುದೀಪ ನಿರ್ದೇಶನ ಮಾಡಿದ್ದರು. ಇನ್ನೂ ದರ್ಶನ್ ನಟನೆಯ ಸಿನಿಮಾಗಳು ಮರು ಬಿಡುಗಡೆಯಾಗುತ್ತಿವೆ. ಈಗಾಗಲೇ ಪೊರ್ಕಿ, ಕರಿಯ, ಶಾಸ್ತ್ರಿ ಚಿತ್ರಗಳು ರಿಲೀಸ್ ಆಗಿವೆ.

  • ಇದು ಲೈಫಿಗೆ ಹತ್ತಿರಾದ ವಾಸ್ತವಗಳ ಸೆಲ್ಫಿ ಅಂದ್ರು ಪ್ರಜ್ವಲ್!

    ಇದು ಲೈಫಿಗೆ ಹತ್ತಿರಾದ ವಾಸ್ತವಗಳ ಸೆಲ್ಫಿ ಅಂದ್ರು ಪ್ರಜ್ವಲ್!

    ಪ್ರಜ್ವಲ್ ದೇವರಾಜ್ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಬಗ್ಗೆ, ಅದರ ಕಥೆಯ ಬಗ್ಗೆ ಭಾರೀ ಭರವಸೆ ಇಟ್ಟುಕೊಂಡಿದ್ದಾರೆ. ಇದರ ಕಥೆ, ತಮ್ಮ ಪಾತ್ರದಿಂದ ಕಾಡಿಸಿಕೊಂಡೇ ನಟಿಸಿದ್ದ ಪ್ರಜ್ವಲ್ ಈ ಚಿತ್ರದ ಕಥೆಯ ಆಚೀಚೆಗಿನ ಒಂದಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ.

    ನಿರ್ದೇಶಕ ದಿನಕರ್ ತೂಗುದೀಪ ಅವರ ಮಡದಿ ಮಾನಸಾ ಬರೆದ ಈ ಕಥೆಯನ್ನು ಆರಂಭಿಕವಾಗಿ ಕೇಳಿದಾಗಲೇ ಅದರ ಬಗ್ಗೆ ತಮ್ಮ ಪಾತ್ರದ ಬಗ್ಗೆ ಪ್ರಭಾವಿತನಾಗಿದ್ದಾಗಿ ಪ್ರಜ್ವಲ್ ಹೇಳಿಕೊಂಡಿದ್ದಾರೆ. ಇಡೀ ಕಥೆ ಎಲ್ಲರ ಬದುಕುಗಳನ್ನೂ ಒಂದಲ್ಲ ಒಂದು ರೀತಿಯಲ್ಲಿ ಪ್ರಖಭಾವಿಸುವಂತಿದೆ. ಪ್ರತೀ ಪ್ರೇಕ್ಷಕರೆದೆಯಲ್ಲಿ, ಪ್ರತೀ ಪಾತ್ರಗಳೂ ಶಾಶ್ವತವಾಗೊಂದು ಛಾಯೆಯನ್ನು ಉಳಿಸುವಂತಿವೆ. ಎಲ್ಲ ಸಂಕಟಗಳ ಆಯಸ್ಸು ಕಡಿಮೆ ಎಂಬ ಸೂತ್ರದಡಿಯಲ್ಲಿ ಹೊಸಾ ಭರವಸೆಯೊಂದನ್ನು ತುಂಬಿ ಕಳಿಸುವಂತಿವೆ ಎಂಬುದು ಪ್ರಜ್ವಲ್ ಅನಿಸಿಕೆ.

    ಅಂದಹಾಗೆ ಪ್ರಜ್ವಲ್ ದೇವರಾಜ್ ಈ ಚಿತ್ರದಲ್ಲಿ ಕೋಟ್ಯಾಧೀಶನ ಮಗ ವಿರಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಯಾವುದಕ್ಕೂ ಕಡಿಮೆ ಇಲ್ಲದಿದ್ದರೂ ಎಂಥಾದ್ದೋ ಕೊರತೆ, ಕೊರೆತಗಳ ನಡುವೆ ಕಂಗಾಲಾದ ಪಾತ್ರವದು. ಇಡೀ ಚಿತ್ರದ ಜೀವಾಳವಾಗಿರೋ ಆ ಪಾತ್ರದ ಅಸಲೀಯತ್ತೇನೆಂಬುದು ಬಿಡುಗಡೆಯ ನಂತರ ಗೊತ್ತಾಗಲಿದೆಯಾದರೂ, ಆ ಪಾತ್ರದ ಪ್ರಭಾವ ದೊಡ್ಡದೆಂಬುದು ಈಗಾಗಲೇ ಜಾಹೀರಾಗಿದೆ.

    ಪ್ರಜ್ವಲ್ ದೇವರಾಜ್ ನಿರ್ದೇಶಕ ತೂಗುದೀಪ ದಿನಕರ್ ಅವರ ಫ್ಯಾಮಿಲಿ ಫ್ರೆಂಡ್. ಪ್ರಜ್ವಲ್ ರನ್ನು ಚಿಕ್ಕಂದಿನಿಂದಲೂ ನೋಡುತ್ತಾ ಬಂದಿರೋ ದಿನಕರ್ ಅವರ ಸಿನಿಮಾ ಬೆಳವಣಿಗೆಗಳನ್ನೂ ಗಮನಿಸುತ್ತಲೇ ಇದ್ದರು. ಅದ್ಭುತ ಎನರ್ಜಿ ಇರೋ ಪ್ರಜ್ವಲ್ ಜೊತೆಗೊಂದು ಸಿನಿಮಾ ಮಾಡಬೇಕೆಂಬ ಆಸೆ ದಿನಕರ್ ಅವರಿಗೂ ಇತ್ತು. ಅದು ಪ್ರಜ್ವಲ್ ಅವರದ್ದೂ ಆಗಿತ್ತು. ಕಾಲವೇ ಅದಕ್ಕೆ ವೇದಿಕೆ ಸಿದ್ಧಪಡಿಸಿದೆ. ಪ್ರಜ್ವಲ್‍ಗಾಗಿ ಒಂದು ಪಾತ್ರವೂ ಸೃಷ್ಟಿಯಾಗಿದೆ. ಇಂಥಾ ಕಾಲಾಂತರಗಳ ಕನಸಿನಂತೆ ಮೂಡಿ ಬಂದಿರೋ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರ ವಾರದೊಪ್ಪತ್ತಿನಲ್ಲೇ ತೆರೆ ಕಾಣಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv