Tag: dinakar shetty

  • ಕುಮಟಾ ಬಿಜೆಪಿ ಶಾಸಕ ದಿನಕರ್ ಶೆಟ್ಟಿ ಆಯ್ಕೆ ಎತ್ತಿ ಹಿಡಿದ ಕೋರ್ಟ್ – ಏನಿದು ವಿವಾದ?

    ಕುಮಟಾ ಬಿಜೆಪಿ ಶಾಸಕ ದಿನಕರ್ ಶೆಟ್ಟಿ ಆಯ್ಕೆ ಎತ್ತಿ ಹಿಡಿದ ಕೋರ್ಟ್ – ಏನಿದು ವಿವಾದ?

    ಕಾರವಾರ: ಕುಮಟಾ ಬಿಜೆಪಿ ಶಾಸಕ ದಿನಕರ್ ಶೆಟ್ಟಿ (Dinakar Shetty) ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಧಾರವಾಡ ಕೋರ್ಟ್‌ ತೀರ್ಪು ನೀಡಿದೆ.

    2023 ರ ವಿಧಾನಸಭೆ ಚುನಾವಣೆಯಲ್ಲಿ 673 ಮತಗಳ ಅಲ್ಪ ಮತದಿಂದ ಗೆಲುವು ಕಂಡಿದ್ದ ಬಿಜೆಪಿ ಶಾಸಕ ದಿನಕರ್ ಶೆಟ್ಟಿಯ ಆಯ್ಕೆ ಪ್ರಶ್ನಿಸಿ ಅಲ್ಪ ಮತದಲ್ಲಿ ಪರಾಭವಗೊಂಡಿದ್ದ ಜೆಡಿಎಸ್‌ನ ಸೂರಜ್ ಸೂನಿ ಎರಡು ವರ್ಷದ ಹಿಂದೆ ಕೋರ್ಟ್‌ ಮೆಟ್ಟಿಲೇರಿದ್ದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ರಾಜ್ಯ ಸರ್ಕಾರ ಜನರ ಕ್ಷಮೆಯಾಚಿಸಬೇಕು: ರವಿಕುಮಾರ್

    ದೂರಿನ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಸೂರಜ್ ಸೋನಿ ಅವರ ಅರ್ಜಿಯನ್ನು ವಜಾ ಮಾಡಿ ಆದೇಶಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದಿನಕರ್ ಶೆಟ್ಟಿ 59,966 ಮತ ಗಳಿಸಿದ್ದರು. ಜೆಡಿಎಸ್‌ನ ಸೂರಜ್ ನಾಯ್ಕ ಸೋನಿ 59,293 ಮತ ಗಳಿಸಿದ್ದರು. 673 ಮತದಲ್ಲಿ ಬಿಜೆಪಿ ದಿನಕರ್ ಶೆಟ್ಟಿ ಗೆಲವು ಕಂಡಿದ್ದರು. ಈ ಗೆಲುವನ್ನು ಎತ್ತಿ ಹಿಡಿದ ಧಾರವಾಡ ಹೈಕೋರ್ಟ್, ಈ ಆದೇಶ ಮಾಡಿದೆ.

    ಕ್ಷೇತ್ರ- ಕುಮಟಾ ವಿಧಾನಸಭಾ ಕ್ಷೇತ್ರ
    ದಿನಕರ್ ಶೆಟ್ಟಿ (ಬಿಜೆಪಿ) – ಗೆಲುವು
    ಪಡೆದ ಮತಗಳ ಸಂಖ್ಯೆ – 59,966
    ಸೂರಜ್ ನಾಯ್ಕ ಸೋನಿ (ಜೆಡಿಎಸ್) – ಸೋಲು
    ಪಡೆದ ಮತಗಳ ಸಂಖ್ಯೆ – 59,293
    ಗೆಲುವಿನ ಅಂತರ – 673

  • ಯಾರು ಬೇಕಾದ್ರು ಬಿಡಬಹುದು, ಬರಬಹುದು ಜೆಡಿಎಸ್ ಮುಳುಗಲ್ಲ: ಎಚ್‍ಡಿಕೆ

    ಯಾರು ಬೇಕಾದ್ರು ಬಿಡಬಹುದು, ಬರಬಹುದು ಜೆಡಿಎಸ್ ಮುಳುಗಲ್ಲ: ಎಚ್‍ಡಿಕೆ

    ಬೆಂಗಳೂರು: ಜೆಡಿಎಸ್ ಪಕ್ಷವನ್ನು ಯಾರು ಬೇಕಾದ್ರು ಬಿಟ್ಟು ಹೋಗಬಹುದು, ಬರಬಹುದು ಯಾರಿಂದಲೂ ಪಕ್ಷ ಮುಳುಗಿ ಹೋಗುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ.

    ಕುಮುಟಾದ ಮಾಜಿ ಶಾಸಕ ದಿನಕರ್ ಶೆಟ್ಟಿ, ಪರಿಮಳ ನಾಗಪ್ಪ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವ್ರು ಯಾರನ್ನ ಬೇಕಾದ್ರು ಕರೆದುಕೊಂಡು ಹೋಗಬಹುದು. ಅದಕ್ಕೆ ಪರ್ಯಾಯ ವ್ಯಕ್ತಿಗಳ ಇದ್ದೇ ಇರುತ್ತಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ಕೊಡ್ತೀವಿ ಎಂದು ತಿಳಿಸಿದರು.

    ಚುನಾವಣೆ ವರ್ಷದಲ್ಲಿ ಇದೆಲ್ಲ ಸಹಜ. ಇದಕ್ಕೆಲ್ಲ ಆತಂಕ ಗಾಬರಿಯಾಗುವುದಿಲ್ಲ. ಯಾರೇ ಪಕ್ಷ ಬಿಟ್ಟು ಹೋಗೋರು ಹೋಗಬಹುದು ಇರೋರು ಇರಬಹುದು. ನನ್ನ ಗುರಿ ಇರೋದು ಜನರ ಮುಂದೆ ಹೋಗೋದು ಅಷ್ಟೆ ಎಂದು ಎಚ್‍ಡಿಕೆ ಹೇಳಿದ್ರು.

    ಕೇಂದ್ರದ ವಿರುದ್ಧ ಗರಂ: ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದ್ದು ಜನ್ರು ಸಾಯ್ತಿದ್ದಾರೆ. ಪರಿಹಾರವನ್ನು ಬಿಕಾರಿಗಳು ನೀಡಿದ ಹಾಗೆ ನೀಡಿದೆ. ಮೇಕೆದಾಟು ಡಿಪಿಆರ್(ಸಮಗ್ರ ಯೋಜನಾ ವರದಿ) ಆದ ಕೂಡಲೇ ತಮಿಳುನಾಡು ಸಿಎಂ ಪ್ರಧಾನಿಗೆ ಪತ್ರ ಬರೆದ್ರು. ತಕ್ಷಣ ಸಿಎಂಗೆ 24 ಗಂಟೆಯೊಳಗೆ ಭೇಟಿಗೆ ಪ್ರಧಾನಿಗಳು ಅವಕಾಶ ನೀಡ್ತಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ಬಂಡವಾಳ ಇಷ್ಟೇ ಎಂದು ಕಿಡಿಕಾರಿದ್ರು.

    ಭರವಸೆ ಕೊಟ್ರೆ ದಾಖಲೆ ರಿಲೀಸ್: ಬಿಜೆಪಿ ಹೈಕಮಾಂಡ್‍ಗೆ ಚೆಕ್ ಮೂಲಕ ಬಿಎಸ್‍ವೈ ಹಣ ನೀಡಿರೋ ದಾಖಲಾತಿಗಳು ಯಾವಾಗಬೇಕಾದ್ರು ಬಿಡುಗಡೆ ಮಾಡಲು ಸಿದ್ಧ. ಅವ್ರು ಚೆಕ್ ಮೂಲಕ ಹಣ ನೀಡಿರುವ ದಾಖಲಾತಿ ನನ್ನ ಬಳಿ ಇದೆ. ಅದನ್ನ ರಿಲೀಸ್ ಮಾಡಿದ್ರೆ ಅವ್ರ ವಿರುದ್ಧ ಕ್ರಮ ತೆಗೆದುಕೊಳ್ಳುವವರು ಯಾರು? ಈ ಬಗ್ಗೆ ಯಾರಾದ್ರೂ ಭರವಸೆ ಕೊಟ್ರೆ ದಾಖಲಾತಿ ಬಿಡುಗಡೆ ಮಾಡ್ತೀನಿ ಅಂದ್ರು.

    ವಿದ್ಯುತ್ ಖರೀದಿಯಲ್ಲಿ ಅಕ್ರಮ: ಇದೇ ವಿಚಾರವಾಗಿ ಶೋಭಾ ಕರಂದ್ಲಾಜೆಗೆ ತರಾಟೆಗೆ ತೆಗೆದುಕೊಂಡ ಅವ್ರು ನನ್ನ ಜೊತೆ ಹುಡುಗಾಟ ಆಡಬೇಡಿ. ಬಾಯ ಚಪಲಕ್ಕೆ ಹೇಳಿಕೆ ಕೊಡೋನು ನಾನಲ್ಲ. ಶೋಭಾ ಕರಂದ್ಲಾಜೆ ಅವರಿಂದ ನಾನು ತಿಳುವಳಿಕೆ ಕಲಿಯೋದು ಬೇಡ. ಯಾರು ಯಾರು ರಾಜ್ಯ ಸರ್ಕಾರದಲ್ಲಿ ಕೆಲವು ಕಂಟ್ರಾಕ್ಟ್ ನ್ನ ಅವಾರ್ಡ್ ಮಾಡಿ. ವಿದ್ಯುತ್ ಶಕ್ತಿ ಖರೀದಿ ಮಾಡುವಾಗ ಅವಾರ್ಡ್ ಮಾಡಿ ಯಾರು ಯಾರು ಅಕೌಂಟ್ ಗೆ ಚೆಕ್ ಮೂಲಕ ಹಣ ಪಡೆದಿದ್ದಾರೆ. ವೈಯಕ್ತಿಕ ಅಕೌಂಟ್ ಗಳಿಗೆ ಹಣ ಪಡೆದಿದ್ದಾರೆ ಅನ್ನೋ ಮಾಹಿತಿ ಇದೆ. ಪ್ರಚಾರಕ್ಕಾಗಿ ನಾನು ಆರೋಪ ಮಾಡ್ತಿಲ್ಲ ಅಂತ ಹೇಳುವ ಮೂಲಕ ಶೋಭಾ ಕರಂದ್ಲಾಜೆ ಅವಧಿಯಲ್ಲೂ ಅಕ್ರಮ ಆಗಿದೆ ಅನ್ನೊ ಹೊಸ ಬಾಂಬ್ ಸಿಡಿಸಿದ್ರು.

    ಬಿಎಸ್‍ವೈ ರೈತರಿಗಾಗಿ ಡಿ-ನೋಟಿಫಿಕೇಷನ್ ಮಾಡಿದ್ದೇನೆ ಅಂತಾರೆ ಅದರ ಬಗ್ಗೆ ಮಾತನಾಡಲು ಹೋದ್ರೆ ವೀರಶೈವರಿಗೆ ಅನ್ಯಾಯ ಮಾಡುವುದು ಬೇಡ ಅಂತಾರೆ. ವಿಧಾನಸೌಧದಲ್ಲಿ ಕಾರಿನಲ್ಲಿ ಸಿಕ್ಕ ಹಣ ಯಾರದ್ದು? ಎಲ್ಲಿಂದ ಎಲ್ಲಿಗೆ ಹೋಗುತ್ತಿತ್ತು? ಪ್ರಕರಣ ಹಾಗೇ ಮುಚ್ಚಿ ಹಾಕಿದ್ದಾರೆ. ಈ ಬಗ್ಗೆ ಮೊದಲು ಉತ್ತರ ಕೊಡಲಿ ಅಂತ ಸವಾಲ್ ಹಾಕಿದ್ರು.

    ಡಿವಿಎಸ್‍ಗೆ ಸವಾಲ್: ಕೇಂದ್ರ ಸಚಿವ ಸದಾನಂದಗೌಡ ಚೆಕ್ ಬಿಡುಗಡೆ ಮಾಡಿದ ನಂತರ ಕ್ರಮ ತೆಗೆದುಕೊಳ್ಳುವ ಭರವಸೆ ಜನರಿಗೆ ಕೊಟ್ರೆ ಬಿಎಸ್‍ವೈ ನೀಡಿರುವ ಚೆಕ್ ಅವರಿಗೆ ಕಳಿಸಿಕೊಡಲು ಸಿದ್ಧ ಸದಾನಂದಗೌಡರು ಜನರಿಗೆ ಹೇಳಲಿ ಚೆಕ್ ರಿಲೀಸ್ ಆದ ಮೇಲೆ ನಾನು ಕ್ರಮ ತೆಗೆದುಕೊಳ್ಳವಂತೆ ನೋಡಿಕೊಳ್ತೀನಿ ಅಂತ. ಬೇಕಾದ್ರೆ ಅವ್ರ ಮನೆಗೆ ಚೆಕ್ ಕಳಿಸಲು ನಾನು ಸಿದ್ದ ಅಂತ ಡಿವಿಎಸ್ ಅವ್ರಿಗೆ ಸವಾಲ್ ಹಾಕಿದ್ರು.

    ನನ್ನ ಮೇಲೆ ದ್ವೇಷದ ರಾಜಕಾರಣ ಮಾಡಿದ್ದೋರೆ ಬಿಜೆಪಿಯವರು. ಯಡಿಯೂರಪ್ಪ ನನ್ನ ಮೇಲೆ ದ್ವೇಷ ರಾಜಕಾರಣ ಮಾಡಿದ್ರು. ಅವರೇ ಹಾಕಿಸಿದ ಮೂರು ಕೇಸ್ ಎದುರಿಸುತ್ತಿದ್ದೇನೆ.ಬಿಜೆಪಿಯವರು ದ್ವೇಷ ರಾಜಕಾರಣ ಬಗ್ಗೆ ಮಾತನಾಡೋದು ಎಷ್ಟು ಸರಿ ಅಂತ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಚಾಲಕರಿಂದ ಮನವಿ: ಓಲಾ,ಉಬರ್ ಟ್ಯಾಕ್ಸಿ ಚಾಲಕರ ವಿವಾದಕ್ಕೆ ಸಂಬಂಧಿಸಿದಂತೆ ಕ್ಯಾಬ್ ಚಾಲಕರು ಇಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವ್ರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ರು. ಬಳಿಕ ಮಾತಾಡಿದ ಕುಮಾರಸ್ವಾಮಿ ಸರ್ಕಾರದ ಜವಾಬ್ದಾರಿ ಮರೆತು ಅನ್ಯಾಯ ಮಾಡುತ್ತಿದೆ. ಸರ್ಕಾರ ಇವರ ಜವಾಬ್ದಾರಿ ತೆಗೆದುಕೊಳ್ಳುವ ಕಾರ್ಯ ಮಾಡಲೇಬೇಕು. ಇಂದು ಓಲಾ ಮತ್ತು ಉಬರ್ ಕಂಪನಿಗಳು ಸದೃಢವಾಗಿ ಬೆಳೆದಿದೆ. ಕಂಪನಿಗಳು ಬೆಳೆಯಲು ಕಾರಣ ಚಾಲಕರು. ಇಂದು ಅದನ್ನು ಓಲಾ ಮತ್ತು ಉಬರ್ ಕಂಪನಿಗಳು ಮರೆತಿದೆ. ನಾನು ಈಗಾಗಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಬಳಿ ದೂರವಾಣಿ ಮೂಲಕ ಮಾತನ್ನಾಡಿದ್ದೇನೆ. ಒಂದು ಲಕ್ಷ ಮಂದಿ ಚಾಲಕರು ಇಂದು ಬೀದಿಗೆ ಬಿದ್ದಿದ್ದಾರೆ. ಸರ್ಕಾರ ಓಲಾ ಮತ್ತು ಉಬರ್ ಕಂಪನಿಯ ಮಾಲೀಕರನ್ನು ಕರೆಸಿ ಮಾತನಾಡಬೇಕು ಅಂತ ಒತ್ತಾಯ ಮಾಡಿದ್ರು.

  • ತೆನೆ ಹೊರೆ ಇಳಿಸಿ ಕಮಲ ಹಿಡಿದ ದಿನಕರ್ ಶೆಟ್ಟಿ

    ತೆನೆ ಹೊರೆ ಇಳಿಸಿ ಕಮಲ ಹಿಡಿದ ದಿನಕರ್ ಶೆಟ್ಟಿ

    – ಮುಂದಿನ ತಿಂಗಳು ಮಾಜಿ ಶಾಸಕಿ ಪರಿಮಳ ನಾಗಪ್ಪ ಬಿಜೆಪಿ ಸೇರ್ಪಡೆ

    ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮೊದಲೇ ಪಕ್ಷಾಂತರ ಪರ್ವ ಜೋರಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮುಟಾ ಕ್ಷೇತ್ರದ ಮಾಜಿ ಶಾಸಕ ದಿನಕರ್ ಶೆಟ್ಟಿ ಜೆಡಿಎಸ್‍ಗೆ ಗುಡ್‍ಬೈ ಹೇಳಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಇಂದು ಬೆಂಗಳೂರಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಧ್ಯಕ್ಷ ಬಿಎಸ್ ಯಡಿಯರೂಪ್ಪ ಸಮ್ಮುಖದಲ್ಲಿ ದಿನಕರ್ ಶೆಟ್ಟಿ ಕಮಲ ಪಕ್ಷ ಸೇರ್ಪಡೆಯಾಗಿದ್ದಾರೆ. 2008ರಲ್ಲಿ ಜೆಡಿಎಸ್ ಶಾಸಕರಾಗಿ ದಿನಕರ್ ಶೆಟ್ಟಿ ಆಯ್ಕೆ ಆಗಿದ್ದರು.

    ಮಾಜಿ ಶಾಸಕಿ ಪರಿಮಳ ನಾಗಪ್ಪ ಕೂಡ ಜೆಡಿಎಸ್‍ಗೆ ಗುಡ್‍ಬೈ ಹೇಳಿ ಬಿಜೆಪಿ ಸೇರಲಿದ್ದಾರೆ. ಮಾರ್ಚ್ 16ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಯಡಿಯೂರಪ್ಪ ಸಮ್ಮುಖದಲ್ಲಿ ಪರಿಮಳ ನಾಗಪ್ಪ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಚಾಮರಾಜನಗರದಲ್ಲಿ ಪ್ರಭಾವಿ ನಾಯಕಿಯಾಗಿರುವ ಪರಿಮಳ ನಾಗಪ್ಪ ಹನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ.