Tag: diljaan

  • ಅಪಘಾತದಲ್ಲಿ ಗಾಯಕ ದಿಲ್‍ಜಾನ್ ಸಾವು- ಸಿಎಂ ಸಂತಾಪ

    ಅಪಘಾತದಲ್ಲಿ ಗಾಯಕ ದಿಲ್‍ಜಾನ್ ಸಾವು- ಸಿಎಂ ಸಂತಾಪ

    ಚಂಡೀಗಢ: ಪಂಜಾಬಿ ಗಾಯಕ ದಿಲ್‍ಜಾನ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಸಿಎಂ ಅಮರೀಂದರ್ ಸಿಂಗ್ ಸಂತಾಪ ಸೂಚಿಸಿದ್ದಾರೆ. ಅಮೃತಸರ-ದೆಹಲಿ ರಾಷ್ಟ್ರೀಯ ಹೆದ್ದಾರಿ ಬಳಿ ದಿಲ್‍ಜಾನ್ ಪ್ರಯಾಣಿಸುತ್ತಿದ್ದ ಕಾರ್ ಮುಂದಿನ ಟ್ರಕ್ ಗುದ್ದಿದೆ. ಪರಿಣಾಮ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ದಿಲ್‍ಜಾನ್ ಸಾವನ್ನಪ್ಪಿದ್ದಾರೆ.

    ಕರ್ತಾರಪುರ ಮೂಲದ 31 ವರ್ಷದ ದಿಲ್‍ಜಾನ್ ಜಲಂಧರ್ ನಿಂದ ಅಮೃತಸರ್ ನತ್ತ ಪ್ರಯಾಣ ಬೆಳೆಸುತ್ತಿದ್ದರು. ಬೆಳಗಿನ ಜಾವ ಸುಮಾರು 2.30ಕ್ಕೆ ಅಪಘಾತ ಸಂಭವಿಸಿದೆ. ಈ ವೇಳೆ ಸ್ಥಳೀಯರು ಕೂಡಲೇ ಗಂಭೀರವಾಗಿ ಗಾಯಗೊಂಡಿದ್ದ ದಿಲ್‍ಜಾನ್ ಅವರನ್ನ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ವೈದ್ಯರು ದಿಲ್‍ಜಾನ್ ಸಾವನ್ನಪ್ಪಿರೋದನ್ನ ಖಚಿತ ಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹೆದ್ದಾರಿ ಬದಿ ನಿಂತಿದ್ದ ಟ್ರಕ್‍ಗೆ ದಿಲ್‍ಜಾನ್ ಕಾರ್ ಡಿಕ್ಕಿಯಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಕೆಲವರು ಡಿವೈಡರ್ ಡಿಕ್ಕಿಯಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆ ನಡೆಸಿ ಆಸ್ಪತ್ರೆಯಲ್ಲಿರಿಸಲಾಗಿದೆ. ಮೃತ ದಿಲ್‍ಜಾನ್ ಪತ್ನಿ ಮತು ಮಕ್ಕಳು ಕೆನಡಾದಲ್ಲಿರುವ ಬಗ್ಗೆ ವರದಿಯಾಗಿದೆ.