Tag: Dileep Raj

  • ರಮೇಶ್‌ ಅರವಿಂದ್‌ ನಿರ್ಮಾಣದಲ್ಲಿ ‘ನೀನಾದೆ ನಾ’ ಸೀರಿಯಲ್‌

    ರಮೇಶ್‌ ಅರವಿಂದ್‌ ನಿರ್ಮಾಣದಲ್ಲಿ ‘ನೀನಾದೆ ನಾ’ ಸೀರಿಯಲ್‌

    ವರ್ ಯಂಗ್ ಹೀರೋ ರಮೇಶ್ ಅರವಿಂದ್ (Ramesh Aravind) ಅವರು ಸದ್ಯ ‘ಶಿವಾಜಿ ಸುರತ್ಕಲ್’ ಸಿನಿಮಾ ಸಕ್ಸಸ್ ನಡುವೆ ಇದೀಗ ಹೊಸ ಸೀರಿಯಲ್ ನಿರ್ಮಾಣಕ್ಕೆ(Produce) ಕೈ ಹಾಕಿದ್ದಾರೆ. ಈ ಮೂಲಕ ಯುವ ಉತ್ಸಾಹಿ ತಂಡಕ್ಕೆ ನಟ ರಮೇಶ್ ಅರವಿಂದ್ (Ramesh Aravind) ಸಾಥ್ ನೀಡಿದ್ದಾರೆ.

    ನಟ, ನಿರ್ದೇಶಕ, ಬರಹಗಾರನಾಗಿ ಸಕ್ಸಸ್ ಕಂಡಿರುವ ನಟ ರಮೇಶ್ ಅರವಿಂದ್ ಅವರು ಮತ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ನಂದಿನಿ 2, ಸುಂದರಿ ಸೀರಿಯಲ್‌ನ ನಿರ್ಮಾಣ ಮಾಡಿರುವ ರಮೇಶ್, ಇದೀಗ ‘ನೀನಾದೆ ನಾʼ (Neenadena Serial) ಎಂಬ ಸೀರಿಯಲ್‌ಗೆ ಕೈಜೋಡಿಸಿದ್ದಾರೆ.‌ ಇದೀಗ ಓದಿ: 7 ತಿಂಗಳ ಬಳಿಕ ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಧ್ರುವ ಸರ್ಜಾ

    ದೇವರ ಆಟ ಬಲ್ಲವರಾರು ಎಂಬ ಮಾತಿದೆ. ಈ ಕತೆನೂ ಒಂಥರ ಹಾಗೇನೇ ಅಪರಿಚಿತ ಹೃದಯಗಳ ಅನಿರೀಕ್ಷಿತ ಪ್ರೇಮಯಾನವೇ ‘ನೀನಾದೆ ನಾ’ ಧಾರಾವಾಹಿ. ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ್ರು ಕೂಡ ಸಂಸ್ಕಾರ-ಸಂಸ್ಕೃತಿ, ಆಚಾರ-ವಿಚಾರಗಳನ್ನು ಪರಿಪಾಲಿಸುವಲ್ಲಿ ಸದಾ ಮುಂದೆ ಈ ಕಥಾ ನಾಯಕಿ ‘ವೇದಾ’. ಅಜ್ಜಿಯ ಪ್ರೀತಿಯ ಮೊಮ್ಮಗಳು ‘ವೇದಾ’ ನೇರ ನಡೆಯನ್ನು ಹೊಂದಿರುತ್ತಾಳೆ. ಈಕೆಗೆ ಮನೆಯವರ ಸಮ್ಮುಖದಲ್ಲಿ, ಹುಟ್ಟಿ ಬೆಳೆದ ಊರಲ್ಲಿ, ಮನೆಯವರು ನೋಡಿದ ಹುಡುಗನೊಂದಿಗೆ ಮದುವೆಯಾಗಬೇಕು ಎಂಬ ಅಸೆ ಇರುತ್ತೆ ಆದರೆ ಮುಂದೆ ನಡೆಯೋದು ಮಾತ್ರ ವಿಧಿಲಿಖಿತ. ಇನ್ನು ಕಥಾ ನಾಯಕ ವಿಕ್ರಮ್. ಗುಂಡಾಗಿರಿ ಮಾಡಿಕೊಂಡು, ತನ್ನ ಬಾಸ್ ಹೇಳಿದನ್ನು ಚಾಚು ತಪ್ಪದೆ ಮಾಡೋ ಈತನಿಗೆ , ಆಚಾರ-ವಿಚಾರ ಸಂಸ್ಕಾರವಂತೂ ಇಲ್ವೇ ಇಲ್ಲ, ಪದವಿ ಪಡೆದಿದ್ರು ಕೂಡ ಈತ ಹೀಗಿರೋದ್ರಿಂದ ಅಪ್ಪನಿಗೂ ಇವನ ಮೇಲೆ ಸಿಕ್ಕಾಪಟ್ಟೆ ಕೋಪವಿರುತ್ತೆ.

    ಅಚಾನಕ್ ಆಗಿ ಒಂದು ದಿನ ದೇವರ ಸನ್ನಿಧಾನದಲ್ಲಿ ವಿಧಿಯಾಟದಂತೆ ವಿಕ್ರಮ್- ವೇದಾಳಿಗೆ ತಾಳಿ ಕಟ್ಟುತ್ತಾನೆ. ಶ್ರೀಮಂತ ಕುಟುಂಬದಲ್ಲಿ ಬೆಳೆದ ವೇದ ರೌಡಿಯಂತಿರುವ ವಿಕ್ರಮ್ ನನ್ನು ಗಂಡ ಎಂದು ಒಪ್ಪಿಕೊಳ್ತಾಳ.? ವಿದ್ಯಾವಂತಳಾಗಿರುವ ವೇದಾಳ ಮುಂದಿನ ನಡೆ ಏನು? ವಿರುದ್ಧ ಮನಸುಗಳು ಹೇಗೆ ಒಂದಾಗುತ್ತೆ ಎಂಬುದೇ ‘ನೀನಾದೆ ನಾ’ ಧಾರಾವಾಹಿಯ ಮುಖ್ಯ ಕಥಾ ಹಂದರ.

    ‘ನೀನಾದೆ ನಾ’ ಧಾರಾವಾಹಿಯು ಅದ್ಬುತ ತಾರಾಬಳಗವನ್ನು ಹೊಂದಿದ್ದು, ನಾಯಕನ ಪಾತ್ರದಲ್ಲಿ ದಿಲೀಪ್ ಶೆಟ್ಟಿ (Dileep Shetty) , ನಾಯಕಿಯಾಗಿ ಖುಷಿ (Khushi Shivu) ಅಭಿನಯಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಗೆ ಖ್ಯಾತ ನಟ ರಮೇಶ್ ಅರವಿಂದ್ ರವರು ‘ವಂದನ ಮೀಡಿಯಾ'(Vandhana Media) ಎಂಬ ಸಂಸ್ಥೆಯಡಿ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಹದಿನೈದು ವರ್ಷಗಳಿಂದ ಹೊಸತನಕ್ಕೆ ಮೊದಲ ಆಧ್ಯತೆ ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗ್ತಿದೆ ವಿಭಿನ್ನ ಪ್ರೇಮಕತೆ ʼನೀನಾದೆ ನಾ’ ಇದೇ ಮೇ 16 ಮಂಗಳವಾರದಿಂದ ರಾತ್ರಿ 9.30ಕ್ಕೆ ತಪ್ಪದೇ ವೀಕ್ಷಿಸಿ.

  • ಸೋಲು-ಗೆಲುವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದೇನೆ, ಯಾವುದೇ ರಿಗ್ರೆಟ್ ಇಲ್ಲ- ನಟ ದಿಲೀಪ್ ರಾಜ್

    ಸೋಲು-ಗೆಲುವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದೇನೆ, ಯಾವುದೇ ರಿಗ್ರೆಟ್ ಇಲ್ಲ- ನಟ ದಿಲೀಪ್ ರಾಜ್

    ಸ್ಯಾಂಡಲ್‍ವುಡ್ ನಟ ದಿಲೀಪ್ ರಾಜ್ ತಮ್ಮ ಜರ್ನಿಯ ಬಗ್ಗೆ ಒಂದಿಷ್ಟು ವಿಚಾರಗಳನ್ನ ಮನಸ್ಸುಬಿಚ್ಚಿ ಮಾತನಾಡಿದ್ದಾರೆ. ಬನ್ನಿ ಏನ್ ಹೇಳಿದ್ದಾರೆ ನೋಡೋಣ.

    • ಹೇಗಿದ್ದೀರಾ ಹೇಗೆ ನಡೆಯುತ್ತಿದೆ ಜೀವನ?
    ಸೂಪರ್ ಆಗಿದ್ದೀನಿ. ಜೀವನ ಅದರ ಪಾಡಿಗೆ ಅದು ನಡೆಯುತ್ತಿದೆ ಒಟ್ಟಿನಲ್ಲಿ ಆರಾಮಾಗಿದ್ದೀನಿ. ಲಾಕ್‍ಡೌನ್‍ನಿಂದ ಫ್ಯಾಮಿಲಿ ಜೊತೆ ಸಮಯ ಕಳೆಯಲು ಮಕ್ಕಳ ಜೊತೆ ಇರಲು ಸಮಯ ಸಿಕ್ತು. ವರ್ಷ ಪೂರ್ತಿ ಶೂಟಿಂಗ್‍ನಲ್ಲಿ ಬ್ಯುಸಿ ಇರ್ತಿದ್ದೆ. ಮಕ್ಕಳಿಗೆ ಸಮಯ ಕೊಡೋಕೆ ಆಗಿರಲಿಲ್ಲ. ಈಗ ಆ ಕೊರತೆ ನೀಗಿದೆ.

    • ಲಾಕ್‍ಡೌನ್ ನಿಮ್ಮ ಜೀವನಕ್ಕೆ ಎಷ್ಟು ಪ್ಲಸ್, ಎಷ್ಟು ಮೈನಸ್ ಆಯ್ತು?
    ಲಾಕ್‍ಡೌನ್ ಸಮಯ ಹೊಸತನ್ನು ಕಲಿಯೋದಕ್ಕೆ ಅಪ್‍ಡೇಟ್ ಆಗೋದಕ್ಕೆ ತುಂಬಾ ಸಹಕಾರಿಯಾಯ್ತು. ಕೆಲಸದ ಒತ್ತಡದಲ್ಲಿ ಈಗಿನ ಜನರಿಗೆ ಏನು ಬೇಕು ಯಾವ ರೀತಿ ಸ್ಕ್ರಿಪ್ಟ್ ಇಂಪ್ರುವೈಸ್ ಮಾಡ್ಕೋಬೇಕು ಅದರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ಹೊಸ ಹೊಸ ಟೆಕ್ನಿಕ್ ಬಗ್ಗೆ ತಿಳಿದುಕೊಂಡೆ. ಮೈನಸ್ ಅಂದ್ರೆ ಸಂಪಾದನೆ ಇರಲಿಲ್ಲ ಶೂಟಿಂಗ್ ಇರದೇ ಕೈಕಾಲು ಆಡುತ್ತಿರಲಿಲ್ಲ. ಕೆಲಸವಿಲ್ಲದೇ ಕೂರೋದು ಬಹಳ ಕಷ್ಟ.

    • ನಟನಾಗಿ ನೀವು ಅಳವಡಿಸಿಕೊಂಡಿರೋ ಪಾಲಿಸಿ?
    ವೇವ್ ಹೇಗೆ ಕರೆದುಕೊಂಡು ಹೋಗುತ್ತೋ ಹಾಗೆ ಹೋಗಬೇಕು. ಇದು ನಾನು ಜೀವನದಲ್ಲಿ ಕಲಿತಿರೋ ಮುಖ್ಯವಾದ ಪಾಠ. ಹೀರೋ ಆಗಬೇಕು ಎಂದು ಹೀರೋ ಪಾತ್ರನೇ ಮಾಡಿಕೊಂಡು ಕೂತ್ರೆ ಆಗೋದಿಲ್ಲ ನನ್ನ ಪ್ರಕಾರ ಕಲಾವಿದರು ಒಂದಕ್ಕೆ ಸ್ಟಿಕ್ಕಾನ್ ಆಗಬಾರದು ಇದು ನನ್ನ ಪಾಲಿಸಿ.

    • ಪಾರು ಸೀರಿಯಲ್ ಸಕ್ಸಸ್ ಬಗ್ಗೆ ಹೇಳಿ?
    ಪಾರು ಸೀರಿಯಲ್ ನನ್ನ ಪ್ರೊಡಕ್ಷನ್ ಹೌಸ್ ಧೃತಿ ಕ್ರಿಯೇಷನ್‍ಗೆ ಒಳ್ಳೆ ಹೆಸರು ತಂದು ಕೊಟ್ಟಿದೆ. ಹೊಸತನ ಹಾಗೂ ಹೊಸ ಪ್ಲೇವರ್ ಪಾರು ಧಾರಾವಾಹಿಯಲ್ಲಿತ್ತು. ಜನ ತುಂಬ ಪ್ರೀತಿಯಿಂದ ಮೆಚ್ಚಿಕೊಂಡ್ರು ಗೆಲ್ಲಿಸಿದ್ರು. ಇಂಡಸ್ಟ್ರಿಯಲ್ಲಿ ಒಂದೊಳ್ಳೆ ಬೆಂಚ್ ಮಾರ್ಕ್ ಸೃಷ್ಟಿ ಮಾಡಿದೆ. ನನ್ನ ನಿರ್ದೇಶನದಲ್ಲಿ ನನ್ನ ಪ್ರೊಡಕ್ಷನ್ ಹೌಸ್‍ನಿಂದ ಈ ಧಾರವಾಹಿ ಕೊಟ್ಟಿದಕ್ಕೆ ನನಗೆ ಬಹಳ ಖುಷಿ ಇದೆ.

    • ನಿಮ್ಮ ಪ್ರೋಡಕ್ಷನ್ ಹೌಸ್‍ನಲ್ಲಿ ಹಲವಾರು ಜನ ಕೆಲಸ ಮಾಡುತ್ತಾರೆ ಲಾಕ್‍ಡೌನ್ ಸಂಕಷ್ಟವನ್ನು ಹೇಗೆ ಎದುರಿಸಿದ್ರಿ?
    ಲಾಕ್‍ಡೌನ್ ಸಮಯದಲ್ಲಿ ಎಲ್ಲರಿಗೂ ಸಮಸ್ಯೆ ಆಗಿದೆ. ಎಷ್ಟೇ ಸಮಸ್ಯೆ ಎದುರಾದ್ರು ನಮ್ಮ ತಂಡವನ್ನು ಕಾಪಾಡೋದು ನಮ್ಮ ಕರ್ತವ್ಯ. ಅವರೆಲ್ಲ ನಮಗೋಸ್ಕರ ಕೆಲಸ ಮಾಡಿದ್ದಾರೆ. ನನ್ನ ಜೊತೆ ಯಾವಾಗಲೂ ನಿಂತಿದ್ದಾರೆ. ಕಷ್ಟದ ಸಮಯದಲ್ಲಿ ಅವರ ಜೊತೆ ನಾನು ನಿಲ್ಲಬೇಕು. ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ರೂ ಕೈಲಾದ ಸಹಾಯ ಮಾಡಿ ಬ್ಯಾಲೆನ್ಸ್ ಮಾಡಿದ್ದೇನೆ.

    • ನಿಮ್ಮ ಡ್ರೀಮ್ ಪ್ರಾಜೆಕ್ಟ್ ಯಾವುದು?
    ನನಗೆ ಡ್ರೀಮ್ ಪ್ರಾಜೆಕ್ಟ್ ಅಂತ ಯಾವುದೂ ಇಲ್ಲ. ಆದ್ರೆ ನಾನೊಬ್ಬ ದೊಡ್ಡ ನಟನಾಗಿ ಹೊರಹೊಮ್ಮಬೇಕು ಎಂಬ ಡ್ರೀಮ್ ಇದೆ. ಒಳ್ಳೊಳ್ಳೆ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡೋ ಆಸೆ ಇದೆ. ನನಗೆ ತುಂಬಾ ಖುಷಿ ಕೊಡೋದು ನಟನೆ, ಊಟ ಇಲ್ಲದೇ ಬೇಕಾದ್ರು ಇರ್ತೀನಿ ಸಿನಿಮಾ ಇಲ್ಲದೆ ಇರೋಕೆ ಸಾಧ್ಯವೇ ಇಲ್ಲ. ನಾನು ಹುಟ್ಟಿದ್ದೇ ಕಲಾವಿದನಾಗಲು. ಕೊನೆವರೆಗೂ ಕಲಾವಿದನಾಗಿಯೇ ಉಳಿಯಲು ಇಷ್ಟಪಡ್ತೀನಿ.

    • ನಿಮ್ಮ ಜೀವನದ ಸಪೋರ್ಟಿವ್ ಸಿಸ್ಟಮ್ ಯಾರು?
    ಪ್ರತಿಯೊಬ್ಬರ ಸಕ್ಸಸ್ ಹಿಂದೆ ಒಂದು ಬಲವಾದ ಶಕ್ತಿ ಇರುತ್ತೆ. ಅದೇ ರೀತಿ ನನ್ನ ಬೆನ್ನೆಲುಬಾಗಿ ನನ್ನ ಹಿಂದಿರುವ ಶಕ್ತಿ ನನ್ನ ಪತ್ನಿ. ಆಕೆಯ ಪ್ರೋತ್ಸಾಹದಿಂದ ನಾನು ಎಲ್ಲವನ್ನು ಸುಲಭವಾಗಿ ನಡೆಸಿಕೊಂಡು ಹೋಗುತ್ತಿದ್ದೇನೆ. ನನ್ನ ಪ್ರೊಡಕ್ಷನ್ ಹೌಸ್, ಮ್ಯಾನೇಜ್‍ಮೆಂಟ್ ಎಲ್ಲವನ್ನು ಆಕೆ ನೋಡಿಕೊಳ್ಳುತ್ತಾಳೆ. ಇದರಿಂದ ನನಗೆ ಬ್ಯಾಲೆನ್ಸ್ ಆಗಿ ಕೆಲಸ ಮಾಡಲು ಸಾಧ್ಯವಾಗಿದೆ. ನನ್ನ ಪತ್ನಿಯೇ ನನ್ನ ದೊಡ್ಡ ಶಕ್ತಿ.

    • ಇಲ್ಲಿವರೆಗಿನ ಪಯಣದಲ್ಲಿ ಕಲಿತಿದ್ದೇನು, ಪಡೆದುಕೊಂಡಿದ್ದೇನು?
    ನನ್ನ ಕೆರಿಯರ್ ನಲ್ಲಿ ಕಂಡ ಏರಿಳಿತಗಳ ಬಗ್ಗೆ ನನಗೆ ಯಾವುದೇ ಬೇಜಾರಿಲ್ಲ. ಸೋಲು, ಗೆಲುವು ಎಲ್ಲವನ್ನೂ ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದೇನೆ. ನನ್ನೊಳಗಿರುವ ಕಲೆ ಎಂಬ ಸೂಪರ್ ಪವರ್ ಹೊರ ಹಾಕೋದಕ್ಕೆ ಸರಿಯಾದ ಅವಕಾಶ ಸಿಕ್ಕಿಲ್ಲ ಅನ್ನೋ ಬೇಜಾರಿದೆ ಅಷ್ಟೇ. ಅದನ್ನು ಪಡೆದೇ ತೀರುತ್ತೇನೆ ಎಂಬ ಅಪಾರವಾದ ಬಯಕೆ ಮತ್ತು ಹಸಿವು ಈಗಲೂ ಕುಂದಿಲ್ಲ. ನನ್ನ ಜರ್ನಿ ಮೇಲೆ ತೃಪ್ತಿ ಇದೆ ಯಾವುದೇ ರಿಗ್ರಿಟ್ ಇಲ್ಲ. ಹಂಡ್ರೆಡ್ ಪರ್ಸೆಂಟ್ ಹ್ಯಾಪಿ ನಾನು. ಸ್ವಲ್ಪ ಸಿನಿಮಾ ಮಾಡಿದ್ದೀನೋ ಜಾಸ್ತಿ ಮಾಡಿದೆನೋ ಅದು ಸೆಕೆಂಡರಿ ಎಲ್ಲಾ ರೀತಿಯ ಅನುಭವಗಳು ಆಗಬೇಕು ಅದು ನನ್ನ ಜೀವನದಲ್ಲಿ ಆಗಿದೆ.

    • ಫಿಟ್ನೆಸ್ ಬಗ್ಗೆ ಏನ್ ಹೇಳ್ತೀರಾ? ನಿಮ್ಮ ಫಿಟ್ನೆಸ್ ಬಗ್ಗೆ ಹೇಳಿ?
    ನಾನು ಫಿಟ್ನೆಸ್ ಬಗ್ಗೆ ತುಂಬಾ ಕಾಳಜಿ ವಹಿಸುತ್ತೇನೆ. ಪ್ರತಿನಿತ್ಯ ವರ್ಕೌಟ್ ಮಾಡೋದ್ರ ಜೊತೆಗೆ ಕ್ರಿಕೆಟ್, ಬ್ಯಾಡ್ಮಿಂಟನ್ ಆಡುತ್ತೇನೆ. ಆಕ್ಟಿಂಗ್ ಫೀಲ್ಡ್‍ಗೆ ಬರುವವರಿಗೆ ಫಿಟ್ನೆಸ್ ತುಂಬಾ ಬೇಸಿಕ್ ರೆಸ್ಪಾನ್ಸಿಬಿಲಿಟಿ. ಗ್ಲಾಮರ್ ಲೋಕದಲ್ಲಿ ಔಟ್ ಲುಕ್, ಫಿಸಿಕ್ ಎಲ್ಲವೂ ಕೌಂಟ್ ಆಗುತ್ತೆ. ಈಗಂತೂ ತುಂಬಾ ಕಾಂಪಿಟೇಷನ್ ಇದೆ. ಆಕ್ಟಿಂಗನ್ನು ಪ್ರೊಫೇಷನ್ ಆಗಿ ತೆಗೆದುಕೊಂಡವರಿಗೆ ಫಿಟ್ನೆಸ್ ಈಸ್ ಮಸ್ಟ್ ಅಂಡ್ ಶುಡ್ ಆಗಿರಬೇಕು.