Tag: dileep

  • ಶಬರಿಮಲೆಯಲ್ಲಿ ನಟ ದಿಲೀಪ್‌ಗೆ VIP ದರ್ಶನ – ಪೊಲೀಸ್, TDB ನಡೆಗೆ ಹೈಕೋರ್ಟ್ ಕ್ಲಾಸ್

    ಶಬರಿಮಲೆಯಲ್ಲಿ ನಟ ದಿಲೀಪ್‌ಗೆ VIP ದರ್ಶನ – ಪೊಲೀಸ್, TDB ನಡೆಗೆ ಹೈಕೋರ್ಟ್ ಕ್ಲಾಸ್

    ಕೊಚ್ಚಿ: ಶಬರಿಮಲೆಯ (Sabarimala) ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಸಾಲಿನಲ್ಲಿ ನಿಂತ ಭಕ್ತರನ್ನು ಕಡೆಗಣಿಸಿ ಮಾಲಿವುಡ್ ನಟ ದಿಲೀಪ್‌ಗೆ (Dileep) ದರ್ಶನ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕೇರಳದ ಹೈಕೋರ್ಟ್ ಪೊಲೀಸ್ ಇಲಾಖೆ ಮತ್ತು ಟ್ರಾವಂಕೂರ್ ದೇವಸ್ವಂ ಬೋರ್ಡ್ (TDB) ಅನ್ನು ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ:ಹಸೆಮಣೆ ಏರಿದ ‘ಸಿಂಗಾರ ಸಿರಿಯೇ’ ಖ್ಯಾತಿಯ ಪ್ರಮೋದ್ ಮರವಂತೆ

    ನ್ಯಾ. ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾ. ಮುರಳಿ ಕೃಷ್ಣ ಎಸ್ ಅವರಿಂದ ದ್ವಿಸದಸ್ಯ ಪೀಠ, ನಟನಿಗೆ ಯಾವ ಆಧಾರದ ಮೇಲೆ ವಿಶೇಷ ದರ್ಶನ ಅವಕಾಶ ನೀಡಲಾಯಿತು ಎಂದು ಪ್ರಶ್ನಿಸಿದೆ. ದಿಲೀಪ್ (Dileep) ದರ್ಶನ ಪಡೆದ ದಿನದ ಸಿಸಿಟಿವಿ ದೃಶ್ಯಾವಳಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಪೊಲೀಸರಿಗೆ ಆದೇಶಿಸಿದೆ.

    ನಟನಿಗೆ ವಿಶೇಷ ಸೌಲಭ್ಯ ನೀಡಿರುವುದರಿಂದ ಬೇರೇ ಭಕ್ತರಿಗೆ ದರ್ಶನಕ್ಕೆ ಅಡ್ಡಿಯಾಗುವುದಿಲ್ಲವೇ? ಭಕ್ತರ ಸಾಲಿನಲ್ಲಿ ಮಕ್ಕಳು ಮತ್ತು ವೃದ್ಧರು ಇರುತ್ತಾರೆ. ಅವರು ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಲ್ಲಲ್ಲು ಸಾಧ್ಯವೇ? ಅನೇಕರು ದರ್ಶನ ಪಡೆಯದೇ ಹಾಗೆಯೇ ತೆರಳಿದ್ದಾರೆ. ಅವರೆಲ್ಲಾ ಯಾರ ಬಳಿ ದೂರು ಸಲ್ಲಿಸಬೇಕು ಎಂದು ಪ್ರಶ್ನಿಸಿ ಕೇರಳ ಹೈಕೋರ್ಟ್ ಚಾಟಿ ಬೀಸಿದೆ.

    ನ್ಯಾಯಾಲಯದ ಆದೇಶದಂತೆ ಸಾಂವಿಧಾನಿಕ ಅಧಿಕಾರ ಹೊಂದಿರುವವರು ಮಾತ್ರ ಈ ರೀತಿಯ ವಿಶೇಷ ಸವಲತ್ತುಗಳನ್ನು ಶಬರಿಮಲೆಯಲ್ಲಿ ಪಡೆಯಬಹುದು. ಡಿ.5ರಂದು ನಟ ದಿಲೀಪ್‌ಗೆ ನೀಡಿದ ವಿಶೇಷ ದರ್ಶನದಿಂದ ಕಾನೂನು ಉಲ್ಲಂಘನೆ ಆಗಿದೆ ಎಂದು ಅಭಿಪ್ರಾಯಪಟ್ಟಿದೆ.

    ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ದೇವರ ದರ್ಶನಕ್ಕಾಗಿ ಡಿ.5ರಂದು ಹಲವು ಗಂಟೆಗಳ ಕಾಲ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ಕಾಯುತ್ತಿದ್ದರು. ಈ ವೇಳೆ ಸೇರಿದ್ದ ಭಕ್ತರನ್ನು ತಡೆದು ದಿಲೀಪ್‌ಗೆ ವಿಶೇಷ ಪೂಜೆ ಸಲ್ಲಿಸಲು ದೇವಸ್ಥಾನದ ಆಡಳಿತ ಮಂಡಳಿ ಅವಕಾಶ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

    ಸುದ್ದಿಯೊಂದನ್ನು ಆಧರಿಸಿ ಹೈಕೋರ್ಟ್, ಸ್ವಯಂ ಪ್ರೇರಿತವಾಗಿ ಈ ಪ್ರಕರಣವನ್ನು ಕೈಗೆತ್ತಿಕೊಂಡು ಸರ್ಕಾರಕ್ಕೆ ಚಾಟಿ ಬೀಸಿದೆ.

  • ನಟ ಪ್ರವೀಣ್ ತೇಜ ಕಾರಿನ ಗಾಜು ಪುಡಿಪುಡಿ : ಹಲ್ಲೆ ಮಾಡಿದವನ ವಿರುದ್ಧ ದೂರು

    ನಟ ಪ್ರವೀಣ್ ತೇಜ ಕಾರಿನ ಗಾಜು ಪುಡಿಪುಡಿ : ಹಲ್ಲೆ ಮಾಡಿದವನ ವಿರುದ್ಧ ದೂರು

    ಚೂರಿಕಟ್ಟೆ ಸೇರಿದಂತೆ ಕನ್ನಡದ ಅನೇಕ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಪ್ರವೀಣ್ ತೇಜ (Praveen Tej) ಮೇಲೆ ಹಲ್ಲೆಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತಮ್ಮ ಮೇಲೆ ದಿಲೀಪ್ (Dileep) ಎನ್ನುವವ ಹಲ್ಲೆ ಮಾಡಿ, ದುಬಾರಿ ಕಾರಿನ ಗಾಜನ್ನು ಪುಡಿ ಪುಡಿ ಮಾಡಿದ್ದಾನೆ. ಜೊತೆಗೆ ತಮ್ಮ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಪ್ರವೀಣ್ ಕೋಣನಕುಂಟೆ  (Konanakunte) ಠಾಣೆಗೆ (Police) ದೂರು (Complaint) ನೀಡಿದ್ದಾರೆ. ದಿಲೀಪ್ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

    ಫೆಬ್ರವರಿ 12 ರಂದು ಬನ್ನೇರುಘಟ್ಟ ರಸ್ತೆಯಲ್ಲಿರುವ ಗೆಳೆಯನ ಅಪಾರ್ಟ್ ಮೆಂಟ್ ನಲ್ಲಿ ನಡೆಯುತ್ತಿದ್ದ ಹುಟ್ಟು ಹಬ್ಬದಲ್ಲಿ ಪ್ರವೀಣ್ ಪಾಲ್ಗೊಂಡಿದ್ದಾರೆ. ಈ ಸಮಯದಲ್ಲಿ ದಿಲೀಪ್ ಎಂಬ ಪರಿಚಿತನೊಬ್ಬನಿಂದ ಗಲಾಟೆ ಶುರುವಾಗಿದೆ. ಪ್ರವೀಣ್ ಅವರ ವೃತ್ತಿಯ ಬಗ್ಗೆ ದಿಲೀಪ್ ಕೆಟ್ಟದ್ದಾಗಿ ಮಾತನಾಡಿದ್ದಾನಂತೆ. ಮಾತಿಗೆ ಮಾತು ಬೆಳೆದು ಅದು ಹೊಡೆದಾಟದ ಹಂತಕ್ಕೆ ತಲುಪಿದೆ. ಪ್ರವೀಣ್ ಮೇಲೆ ದೈಹಿಕ ಹಲ್ಲೆಯಾಗಿದ್ದು, ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ ಎಂದು ದೂರಿನಲ್ಲಿ ಬರೆಯಲಾಗಿದೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ಘಟನೆಯಿಂದ ನೊಂದಿದ್ದ ಪ್ರವೀಣ್ ಆ ರಾತ್ರಿ ಅದೇ ಅಪಾರ್ಟ್ ಮೆಂಟ್ ನಲ್ಲಿ ಉಳಿದುಕೊಂಡಿದ್ದಾರೆ. ಬೆಳಗ್ಗೆ ಮನೆಗೆ ಹೊರಡಲು ಕಾರು ಬಳಿ ಬಂದರೆ ಕಾರಿನ ಗ್ಲಾಸ್ ಗಳನ್ನು ಹೊಡೆದು ಹಾಕಲಾಗಿತ್ತು. ಸಿಸಿ ಟಿವಿ ಪರಿಶೀಲನೆ ಮಾಡಿದಾಗ ದಿಲೀಪ್ ಅವರೇ ಕಾರಿನ ಗಾಜು ಒಡೆದಿದ್ದಾರೆ ಎನ್ನುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ‘ಹೊಂದಿಸಿ ಬರೆಯಿರಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಪ್ರವೀಣ್ ತೇಜ್, ಈವರೆಗೂ ಯಾವುದೇ ಗಲಾಟೆ ಅಥವಾ ಗಾಸಿಪ್ ಗಳಲ್ಲಿ ಕಾಣಿಸಿಕೊಂಡಿಲ್ಲ. ಇದೇ ಮೊದಲ ಬಾರಿಗೆ ಅವರು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್, ಸೂಕ್ತ ಕ್ರಮದ ಭರವಸೆ ನೀಡಿದ್ದಾರಂತೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಜಯ್ ವರ್ಮಾ ಜೊತೆಗಿನ ಡೇಟಿಂಗ್ ಸುದ್ದಿ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ರು ತಮನ್ನಾ

    ವಿಜಯ್ ವರ್ಮಾ ಜೊತೆಗಿನ ಡೇಟಿಂಗ್ ಸುದ್ದಿ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ರು ತಮನ್ನಾ

    ವಿಜಯ್ ವರ್ಮಾ (Vijay Varma) ಜೊತೆಗಿನ ಡೇಟಿಂಗ್ (Dating) ವಿಚಾರವಾಗಿ ಸಖತ್ ಸುದ್ದಿ ಮಾಡ್ತಿರುವ ಬೆನ್ನಲ್ಲೇ ತಮನ್ನಾ (Tamannaah Bhatia) ಇದೀಗ ಮಲಯಾಳಂ (Mollywood) ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಹೊಸ ಬಗೆಯ ಪಾತ್ರದ ಮೂಲಕ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಇತ್ತೀಚೆಗೆ ಸೌತ್ ಸಿನಿರಂಗದಲ್ಲಿ ಅತೀ ಹೆಚ್ಚು ಚರ್ಚೆಗೆ ಒಳಗಾಗಿರುವ ನಟಿ ಅಂದರೆ ತಮನ್ನಾ ಭಾಟಿಯಾ. ಹೊಸ ವರ್ಷವನ್ನ ಗೋವಾದಲ್ಲಿ ವಿಜಯ್ ವರ್ಮಾಗೆ ಲಿಪ್‌ಲಾಕ್ ಮಾಡುವ ಮೂಲಕ ತಮನ್ನಾ ಸುದ್ದಿಯಲ್ಲಿದ್ದರು. ಮದುವೆಯ ಗುಡ್ ನ್ಯೂಸ್‌ಗಾಗಿ ಕಾಯ್ತಿರುವ ಫ್ಯಾನ್ಸ್ ಸಿನಿಮಾ ಬಗ್ಗೆ ಸಿಹಿ ಸುದ್ದಿ ಸಿಕ್ಕಿದೆ. ಇದನ್ನೂ ಓದಿ: ಸಂಕ್ರಾಂತಿ ಹಾಡಿಗೆ ಸುಂದರಿಯರ ಜೊತೆ ಕುಣಿದ ರಮೇಶ್ ಅರವಿಂದ್

    ಅರುಣ್ ಗೋಪಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ `ಬಾಂದ್ರಾ’ (Bandra Film) ಚಿತ್ರದಲ್ಲಿ ತಮನ್ನಾ, ದಿಲೀಪ್‌ಗೆ (Actor Dileep)  ನಾಯಕಿಯಾಗುವ ಮೂಲಕ ಮಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ. ದಿಲೀಪ್‌ಗೆ ಜೋಡಿಯಾಗಿ ರಾಜಕುಮಾರಿ ಕಿಂಡ ಪಾತ್ರದಲ್ಲಿ ಮಿಲ್ಕಿ ಬ್ಯೂಟಿ ಮಿಂಚಲಿದ್ದಾರೆ. ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ಮೂಡಿ ಬರಲಿದೆ.

    ವಿಭಿನ್ನ ಕಥೆಯ ಮೂಲಕ ತಮನ್ನಾ ಮಾಲಿವುಡ್‌ಗೆ  (Mollywood) ಎಂಟ್ರಿ ಕೊಡ್ತಿದ್ದಾರೆ. ಈ ಚಿತ್ರದಿಂದ ನಟಿ ಮಲಯಾಳಂ ಪ್ರೇಕ್ಷಕರ ಮನ ಗೆಲ್ಲುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ – ನಟ ದಿಲೀಪ್ ಸ್ನೇಹಿತ ಅರೆಸ್ಟ್‌

    ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ – ನಟ ದಿಲೀಪ್ ಸ್ನೇಹಿತ ಅರೆಸ್ಟ್‌

    ತಿರುವನಂತಪುರಂ: ಖ್ಯಾತ ನಟಿಯೊಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ಸ್ನೇಹಿತ ಶರತ್ ಜಿ ನಾಯರ್ ಅವರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

    ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸಿದ ಆರೋಪದಡಿ ಪೊಲೀಸರು ಶರತ್ ಜಿ ನಾಯರ್ ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನಟ ದಿಲೀಪ್ ಜಾಮೀನು ಪಡೆದ ನಂತರ ಅವರ ಮನೆಗೆ ಶರತ್ ಜಿ ನಾಯರ್ ಭೇಟಿ ನೀಡಿದ್ದಾರೆ ಎಂಬ ಚಲನಚಿತ್ರ ನಿರ್ದೇಶಕ ಬಾಲಚಂದ್ರಕುಮಾರ್ ಹೇಳಿಕೆ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ.

    ದಿಲೀಪ್ ಅವರು, ನಟಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಸಂಚು ರೂಪಿಸಿದ್ದ ಆಡಿಯೋ ಟಿವಿಗಳಲ್ಲಿ ಪ್ರಸಾರವಾದ ಬಳಿಕ ದಿಲೀಪ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಉದ್ದೇಶಪೂರ್ವಕವಾಗಿ ತನ್ನನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿಸಲು ತನಿಖಾಧಿಕಾರಿ ಯತ್ನಿಸಿದ್ದಾರೆ ಎಂದು ದಿಲೀಪ್ ಆರೋಪಿಸಿದ್ದರು. ಇದನ್ನೂ ಓದಿ:  ಕನ್ನಡಿಗ ಅನಿಲ್ ಹೆಗ್ಡೆಗೆ ಬಿಹಾರ್ ರಾಜ್ಯಸಭಾ ಟಿಕೆಟ್

    police (1)

    ತಮಿಳು, ತೆಲುಗು, ಮಲಯಾಳಂ, ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಖ್ಯಾತಿ ನಟಿಯನ್ನು 2017ರ ಫೆಬ್ರವರಿ 17ರಂದು ರಾತ್ರಿ ವಾಹನದಲ್ಲಿ ಅಪಹರಿಸಿ ಸುಮಾರು ಎರಡು ಗಂಟೆಗಳ ಕಾಲ ಕಿರುಕುಳ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ನಟಿಯನ್ನು ಬ್ಲ್ಯಾಕ್ ಮೇಲ್ ಮಾಡುವ ಸಲುವಾಗಿ ಇಡೀ ಕೃತ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿಯಲಾಗಿತ್ತು.

    ಈ ಪ್ರಕರಣದಲ್ಲಿ 10 ಮಂದಿ ಶಾಮೀಲಾಗಿದ್ದು, ಅದರಲ್ಲಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ನಂತರ ಆರೋಪಿ ದಿಲೀಪ್‍ರನ್ನು ಬಂಧಿಸಿ ಇದೀಗ ಜಾಮೀನಿನ ಆಧಾರದ ಮೇಲೆ ಬಿಡುಗಡೆಗೊಳಿಸಲಾಗಿದೆ. ಇದನ್ನೂ ಓದಿ: ಎಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು

  • ಕೆಲವೇ ಹೊತ್ತಿನಲ್ಲಿ ಮಲಯಾಳಂ ಸ್ಟಾರ್ ನಟ ದಿಲೀಪ್ ಪ್ರಕರಣ ತೀರ್ಪು

    ಕೆಲವೇ ಹೊತ್ತಿನಲ್ಲಿ ಮಲಯಾಳಂ ಸ್ಟಾರ್ ನಟ ದಿಲೀಪ್ ಪ್ರಕರಣ ತೀರ್ಪು

    ನಟಿ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಮಲಯಾಳಂ ಸ್ಟಾರ್ ನಟ ದಿಲೀಪ್ ಪ್ರಕರಣದ ತೀರ್ಪು ಇಂದು ಮಧ್ಯಾಹ್ನ 1.45ಕ್ಕೆ ಪ್ರಕಟವಾಗಲಿದೆ. ನಟಿ ಮೇಲಿನ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳು ದಿಲೀಪ್ ವಿರುದ್ಧ ಕೊಲೆ ಸಂಚು ಆರೋಪ ಹೊರಿಸಿದ್ದರು. ಇವತ್ತು ಈ ಪ್ರಕರಣದ ತೀರ್ಪು ಹೊರಡಿಸಲಿದೆ ಕೇರಳ ಹೈಕೋರ್ಟ್. ಇದನ್ನೂ ಓದಿ : ವಿಜಯ್ ದುನಿಯಾದಲ್ಲಿ ‘ಭೀಮ’ ಎಂಟ್ರಿ : ನಟಿ ಮಾಲಾಶ್ರೀ ಬಳಿ ಇತ್ತು ಭೀಮ ಟೈಟಲ್

    ಕೇರಳ ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಜಿಯಾದ್ ರೆಹಮಾನ್ ಇಂದು ತೀರ್ಪು ಪ್ರಕಟಿಸಲಿದ್ದು, ಕೇರಳ ಚಿತ್ರೋದ್ಯಮ ತೀರ್ಪಿಗಾಗಿ ಎದುರು ನೋಡುತ್ತಿದೆ. ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲೀಪ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪುನ್ನು ಕೂಡ ಕೇರಳ ಹೈಕೋರ್ಟ್ ಪ್ರಕಟಿಸಿತ್ತು. ಎರಡು ವಾರಗಳ ವಿಸ್ತ್ರತ ವಿಚಾರಣೆಯ ನಂತರ ನ್ಯಾಯಮೂರ್ತಿ ಗೋಪಿನಾಥ್ ನೇತೃತ್ವದ ಪೀಠ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಿತ್ತು. ಇದನ್ನೂ ಓದಿ : ಕನ್ನಡದಲ್ಲೂ ಬಂತು ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

    ಮೊನ್ನೆಯಷ್ಟೇ ಆ ನಟಿಯ ತಮಗಾದ ಅನ್ಯಾಯದ ಕುರಿತು ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಪ್ರಕರಣದ ಕುರಿತು ಎಳೆ ಎಳೆಯಾಗಿ ಘಟನೆಗಳನ್ನು ಬಿಚ್ಚಿಟ್ಟಿದ್ದರು. ಅಂದಿನ ಪರಿಸ್ಥಿತಿಯನ್ನೂ ವಿವರಿಸಿದ್ದರು. ಈಗ ಆ ಪ್ರಕರಣವೆಲ್ಲ ಏನಾಗಲಿವೆ ಎನ್ನುವ ಕುತೂಹಲ ಹೆಚ್ಚಿದೆ. ಇದನ್ನೂ ಓದಿ : ಮಗನೊಂದಿಗೆ ನಿಖಿಲ್ ಕುಮಾರ್ ಸ್ವಾಮಿ ಜಾಲಿ ಟ್ರೀಪ್

    ನಟಿಗೆ ಆದ ದೌರ್ಜನ್ಯದ ಕುರಿತಾಗಿ ಕೇರಳ ಚಿತ್ರೋದ್ಯಮ ವಿಷಾದ ವ್ಯಕ್ತ ಪಡಿಸಿತ್ತು. ನಟಿಯ ಬೆನ್ನಿಗೆ ನಿಂತು ಧೈರ್ಯ ತುಂಬಿತ್ತು. ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಸಂದೇಶವನ್ನೂ ನೀಡಲಾಗಿತ್ತು. ಇವೆಲ್ಲ ಕಾರಣದಿಂದಾಗಿ ದಿಲೀಪ್ ಮೇಲಿನ ಪ್ರಕರಣ ಮಹತ್ವ ಪಡೆದುಕೊಂಡಿದೆ.

  • ದೌರ್ಜನ್ಯ ಖಂಡಿಸಿ, ಭಾವನಾ ಮೆನನ್ ಬೆಂಬಲಕ್ಕೆ ನಿಂತ ತಮಿಳು ನಟ ಸೂರ್ಯ

    ದೌರ್ಜನ್ಯ ಖಂಡಿಸಿ, ಭಾವನಾ ಮೆನನ್ ಬೆಂಬಲಕ್ಕೆ ನಿಂತ ತಮಿಳು ನಟ ಸೂರ್ಯ

    ನ್ನಡದಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ, ಮಲಯಾಳಿ ನಟಿ ಭಾವನಾ ಮೆನನ್ ಮೇಲಿನ ದೌರ್ಜನ್ಯ ಖಂಡಿಸಿರುವ ಸಾಲಿನಲ್ಲಿ ನಟ ಸೂರ್ಯ ಇದೀಗ ಸೇರ್ಪಡೆಗೊಂಡಿದ್ದಾರೆ. ತಮ್ಮ ಹೊಸ ಸಿನಿಮಾ ‘ಎತುರ್ಕುಂ ತೂನಿಂದವನ್’ ಸಿನಿಮಾದ ಪ್ರಚಾರಕ್ಕಾಗಿ ಕೊಚ್ಚಿಗೆ ತೆರಳಿದ್ದ ಸೂರ್ಯ, ಕೇರಳದಲ್ಲಿ ನಡೆದ ನಟಿ ಮೇಲಿನ ಹಲ್ಲೆ ಮತ್ತು ದೌರ್ಜನ್ಯವನ್ನು ಯಾವ ನಾಗರೀಕ ಸಮಾಜ ಒಪ್ಪಿಕೊಳ್ಳುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಆ ನಟಿಯೊಂದಿಗೆ ನಾವೆಲ್ಲರೂ ಇದ್ದೇವೆ. ಅವರು ಧೈರ್ಯದಿಂದ ಜೀವನ ನಡೆಸಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ : ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಸಿನಿಮಾ ಏನಾಯ್ತು? ಗುಡ್ ನ್ಯೂಸ್ ಕೊಡುತ್ತಂತೆ ಚಿತ್ರತಂಡ

    ನಟಿ ಭಾವನಾ ಮೇಲೆ 2017ರಲ್ಲಿ ಕೇರಳದಲ್ಲಿ ಹಲ್ಲೆ ನಡೆಯಿತು. ಪ್ರಭಾವಿ ನಟರೊಬ್ಬರು ಇದರ ಹಿಂದೆ ಇದ್ದಾರೆ ಎಂದು ಸ್ಟಾರ್ ನಟ ದಿಲೀಪ್ ಮೇಲೆ  ಆರೋಪ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲೀಪ್ ಅವರ ಬಂಧನ ಕೂಡ ಆಗಿತ್ತು. ಈಗವರು ಜಾಮೀನನ ಮೇಲೆ ಆಚೆ ಬಂದಿದ್ದಾರೆ. ಈ ಪ್ರಕರಣ ಮತ್ತೆ ಇದೀಗ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ : ಜೊತೆ ಜೊತೆಯಲಿ ಅನಿರುದ್ಧಅವರ ಮೊದಲ ಪತ್ನಿ ನಟಿ ಸೋನು ಗೌಡ

    ಇತ್ತೀಚೆಗಷ್ಟೇ ತಮ್ಮ ಮೇಲೆ ಆದ ದೌರ್ಜನ್ಯದ ಕುರಿತು ಬಹಿರಂಗವಾಗಿ ಭಾವನಾ ಮಾತನಾಡಿದ್ದರು. ಅದೊಂದು ನಕರದ ಸನ್ನಿವೇಶವೆಂದು ಹೇಳಿಕೊಂಡಿದ್ದರು. ಅಂತಹ ಘಟನೆ ನನ್ನ ಜೀವನದಲ್ಲಿ ನಡೆಯಿತಲ್ಲ ಎಂದು ಮಾನಸಿಕವಾಗಿ ಕುಸಿದು ಹೋಗಿದ್ದೆ ಎಂದೂ ಅವರು ನೋವನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ : ದೂರದರ್ಶನದಲ್ಲಿ ಸಿಗ್ತಾರೆ ದಿಯಾ ಹೀರೋ

    ಈ ಎಲ್ಲವನ್ನೂ ಮರೆತು ಮತ್ತೆ ಸಹಜ ಜೀವನಕ್ಕೆ ಬರಲು ಹಲವು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದ ಭಾವನಾ ಇತ್ತೀಚೆಗಷ್ಟೇ ಬಿಡುಗಡೆಯಾದ ಭಜರಂಗಿ 2 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಆ ಸಿನಿಮಾದಲ್ಲಿಯ ಪಾತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡರು. ಇದೀಗ ಮತ್ತೆ ನಟನೆಯಲ್ಲಿ ಭಾವನಾ ಸಕ್ರೀಯರಾಗಿದ್ದಾರೆ.

  • ನನ್ನ ಘನತೆಯನ್ನು ಮಿಲಿಯನ್ ತುಂಡುಗಳಾಗಿ ಚೂರುಚೂರು ಮಾಡಲಾಗಿದೆ: ಭಾವನಾ ಮೆನನ್

    ನನ್ನ ಘನತೆಯನ್ನು ಮಿಲಿಯನ್ ತುಂಡುಗಳಾಗಿ ಚೂರುಚೂರು ಮಾಡಲಾಗಿದೆ: ಭಾವನಾ ಮೆನನ್

    ತಿರುವನಂತಪುರಂ: ನನ್ನ ಘನತೆಯನ್ನು ಮಿಲಿಯನ್ ತುಂಡುಗಳಾಗಿ ಚೂರುಚೂರು ಮಾಡಲಾಗಿದೆ ಎಂದು ನಟಿ ಭಾವನಾ ಮೆನನ್ ಬೇಸರ ವ್ಯಕ್ತಪಡಿಸಿದ್ದಾರೆ.

    ಖಾಸಗಿ ಯೂಟ್ಯೂಬ್ ಚಾನೆಲ್‍ನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಐದು ವರ್ಷಗಳ ಹಿಂದೆ ಲೈಂಗಿಕ ಕಿರುಕುಳಕ್ಕೆ ಒಳಗಾದ ನಂತರ ನಾನು ಆಘಾತಕ್ಕೊಳಗಾಗಿದ್ದೆ. ನಂತರ ಸಮಾಜದ ಮುಂದೆ ಹೋದ ನನ್ನ ಘನತೆಯನ್ನು ಮರಳಿ ಪಡೆಯಲು ಬಯಸಿದ್ದೇನೆ. ಮಲಯಾಳಂ, ತಮಿಳು, ಕನ್ನಡ ಮತ್ತು ತೆಲುಗು ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿರುವ ನಟಿ, ತಮ್ಮ ಆಘಾತಕಾರಿ ಅವಧಿಯಲ್ಲಿ ಪತಿ, ನಿಕಟ ಸಂಬಂಧಿಗಳು, ಸ್ನೇಹಿತರು ಮತ್ತು ಸಾರ್ವಜನಿಕರು ಸೇರಿದಂತೆ ನನ್ನ ಕುಟುಂಬವು ನನ್ನನ್ನು ಬೆಂಬಲಿಸಿತ್ತು ಎಂದು ಹೇಳಿದರು. ಇದನ್ನೂ ಓದಿ: ಉಕ್ರೇನ್‌ ದೇಶವಾಗಿ ಉಳಿಯುವುದೇ ಅನುಮಾನ: ಪುಟಿನ್‌ ನೇರ ಎಚ್ಚರಿಕೆ

    ಸಮಾಜದಲ್ಲಿ ನನ್ನ ಘನತೆಯನ್ನು ಮಿಲಿಯನ್ ತುಂಡುಗಳಾಗಿ ಚೂರುಚೂರು ಮಾಡಲಾಗಿದೆ. ನನ್ನ ಸಂಪೂರ್ಣ ಇಚ್ಛಾಶಕ್ತಿಯೇ ನನ್ನನ್ನು ಮುಂದುವರಿಸಿದೆ. ನನ್ನ ಕುಟುಂಬ ಮತ್ತು ಸ್ನೇಹಿತರು ನನಗೆ ಬಲವಾದ ಬೆಂಬಲವನ್ನು ನೀಡಿದ ಹೊರತಾಗಿಯೂ ನಾನು ಒಂಟಿತನ ಅನುಭವಿಸುತ್ತಿದ್ದೇನೆ ಎಂದರು.

    2020ರಂದು ಬೆಳಗ್ಗೆಯಿಂದ ಸಂಜೆಯವರೆಗೆ 15 ದಿನಗಳ ಕಾಲ ನ್ಯಾಯಾಲಯದಲ್ಲಿ ಹೇಗೆ ಇದ್ದೆ ಎಂದು ಅವರು ನೆನಪಿಸಿಕೊಂಡರು. ಪ್ರತಿ ಬಾರಿಯೂ ಒಬ್ಬ ವಕೀಲರು ನನಗೆ ಪ್ರಶ್ನೆ ಮಾಡುತ್ತಿದ್ದಾಗ ನಾನು ನಿರಪರಾಧಿಯೆಂದು ಸಾಬೀತುಪಡಿಸಿಕೊಳ್ಳಲು ಸಾಕಷ್ಟು ಹೋರಾಡಿದ್ದೇನೆ ಎಂದು ತಿಳಿಸಿದರು.

    ಆಘಾತಕಾರಿ ಘಟನೆಯ ನಂತರ ದುಷ್ಕರ್ಮಿಗಳು ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಸಿಕ್ಕಾಪಟ್ಟೆ ಅವಮಾನಿಸುತ್ತಿದ್ದಾರೆ. ಘಟನೆಯ ನಂತರ ಆಶಿಕ್ ಅಬು ಮತ್ತು ಶಾಜಿ ಕೈಲಾಸ್, ನಟ-ನಿರ್ದೇಶಕ ಪೃಥ್ವಿರಾಜ್ ಮತ್ತು ನಟ ಜಯಸೂರ್ಯ ಅವರಂತಹ ನಿರ್ದೇಶಕರು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ನನಗೆ ನಟಿಸಲು ಅವಕಾಶವನ್ನು ನಿರಾಕರಿಸಿದರು ಎಂದರು. ಇದನ್ನೂ ಓದಿ: ಉಕ್ರೇನ್‍ನಿಂದ ಮರಳಿದ ವಿದ್ಯಾರ್ಥಿಗಳಿಗೆ ಸೀಟ್ ನೀಡಿ ಶುಲ್ಕವನ್ನು ಸರ್ಕಾರವೇ ಭರಿಸಲಿ: ದಿಗ್ವಿಜಯ್ ಸಿಂಗ್

    2017ರಲ್ಲಿ ಚಿತ್ರೀಕರಣವನ್ನು ಮುಗಿಸಿ ತ್ರಿಶೂರ್‍ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದಾಗ ಭಾವನಾ ಅವರನ್ನು ಅಪಹರಿಸಿ ಎರಡು ಗಂಟೆಗಳ ಕಾಲ ಕಾರಿನಲ್ಲಿಯೇ ಕಿರುಕುಳ ನೀಡಲಾಗಿತ್ತು. ಈ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದರು. ಈ ಘಟನೆ ನಡೆದು ಐದು ವರ್ಷ ಕಳೆದಿದೆ. ಈಗ ಭಾವನಾ ಆ ಘಟನೆ ಬಗ್ಗೆ ಮಾತನಾಡಿದ್ದಾರೆ.

  • ತನಿಖಾಧಿಕಾರಿ ವಿರುದ್ಧ ಕೊಲೆ ಸಂಚು ಆರೋಪ – 3ನೇ ದಿನಕ್ಕೆ ಕಾಲಿಟ್ಟ ನಟ ದಿಲೀಪ್ ವಿಚಾರಣೆ!

    ತನಿಖಾಧಿಕಾರಿ ವಿರುದ್ಧ ಕೊಲೆ ಸಂಚು ಆರೋಪ – 3ನೇ ದಿನಕ್ಕೆ ಕಾಲಿಟ್ಟ ನಟ ದಿಲೀಪ್ ವಿಚಾರಣೆ!

    ತಿರುವನಂತಪುರಂ: ಮಾಲಿವುಡ್ ಖ್ಯಾತ ನಟ ದಿಲೀಪ್ ತನಿಖಾಧಿಕಾರಿ ವಿರುದ್ಧ ಕೊಲೆ ಸಂಚು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಸತತ ಮೂರನೇ ದಿನವೂ ವಿಚಾರಣೆ ಮುಂದುವರಿದಿದೆ.

    2017ರಲ್ಲಿ ನಟಿ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಕೇಸ್ ವಿಚಾರಣೆ ನಡೆಸುತ್ತಿದ್ದ ಅಧಿಕಾರಿಗಳ ಮೇಲೆ ಕೊಲೆ ಸಂಚು ಮಾಡಿರುವ ಆರೋಪ ದಿಲೀಪ್ ಅವರ ಮೇಲೆ ಬಂದಿದೆ. ಪರಿಣಾಮ ಮೂರು ದಿನಗಳಿಂದ ದಿಲೀಪ್ ಅವರನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದು, ಇಂದು ಸಹ ನಟ ಕೇರಳ ಪೊಲೀಸರ ಅಪರಾಧ ವಿಭಾಗದ ಮುಂದೆ ಹಾಜರಾಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ದುರ್ಮರಣ!

    ಕಳೆದ ಎರಡು ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು ದಿಲೀಪ್ ಮತ್ತು ಇತರ ನಾಲ್ವರು ಆರೋಪಿಗಳನ್ನು 22 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸದಂತೆ ದಿಲೀಪ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ಶನಿವಾರ ಹೈಕೋರ್ಟ್, ಈ ಕೇಸ್ ವಿಚಾರಣೆ ನಡೆಸಿ ಜನವರಿ 23, 24, 25ರ ಒಳಗಾಗಿ ತನಿಖಾ ವರದಿ ಸಲ್ಲಿಸುವಂತೆ ಪೊಲೀಸರಿಗೆ ತಿಳಿಸಿತ್ತು. ಅಲ್ಲದೆ ಮುಂದಿನ ವಿಚಾರಣೆಯನ್ನು ಜನವರಿ 27ಕ್ಕೆ ಮೂಂದೂಡಿದ್ದು, ಅಲ್ಲಿಯವರೆಗೆ ದಿಲೀಪ್ ಅವರನ್ನು ಬಂಧಿಸದಂತೆ ಆದೇಶಿಸಿತ್ತು.

    ತನಿಖಾಧಿಕಾರಿಗಳಿಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಕ್ರೈಂ ಬ್ರಾಂಚ್ ಜನವರಿ 9 ರಂದು ದಿಲೀಪ್ ಮತ್ತು ಇತರ ಐವರ ವಿರುದ್ಧ ಪ್ರಕರಣ ದಾಖಲಿಸಿದೆ. ಪ್ರಸ್ತುತ ಇವರ ವಿರುದ್ಧ ಐಪಿಸಿ ಸೆಕ್ಷನ್ 116, 118, 120 ಬಿ, 506 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭಾರೀ ಹಿಮಪಾತ – 42 ಮಂದಿ ಸಾವು

    ಏನಿದು ಪ್ರಕರಣ?: ದಿಲೀಪ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ಕ್ಲಿಪ್ ಟಿವಿಯಲ್ಲಿ ಪ್ರಸಾರವಾಗಿತ್ತು. ಇದನ್ನು ಆಧರಿಸಿ ಕೆಲದಿನಗಳ ಹಿಂದೆ ದಿಲೀಪ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಆಡಿಯೋದಲ್ಲಿ ತನಿಖಾಧಿಕಾರಿಗಳ ಮೇಲೆ ಕೊಲೆ ಮಾಡಲು ಸಂಚು ರೂಪಿಸಿರುವುದು ಸ್ಪಷ್ಟವಾಗಿ ರೆಕಾರ್ಡ್ ಆಗಿದ್ದು, ಆಡಿಯೋ ವೈರಲ್ ಆಗಿತ್ತು. ಪರಿಣಾಮ ಕೇರಳ ಪೊಲೀಸ್ ತಂಡವು ದಿಲೀಪ್ ಮತ್ತು ಆತನ ಸಹೋದರನ ಮನೆ, ಕಚೇರಿಗಳ ಮೇಲೆ ದಾಳಿ ಕೂಡ ನಡೆಸಿತ್ತು. ಬಳಿಕ ಕೇಸ್ ದಾಖಲಿಸಿಕೊಂಡು ದಿಲೀಪ್ ಬಂಧಿಸಲು ತಯಾರಿ ನಡೆಸಿತ್ತು.

  • ಜ.27ರವರೆಗೆ ನಟ ದಿಲೀಪ್‌ರನ್ನು ಬಂಧಿಸಬೇಡಿ: ಪೊಲೀಸರಿಗೆ ಕೇರಳ ಹೈಕೋರ್ಟ್‌ ಸೂಚನೆ

    ಜ.27ರವರೆಗೆ ನಟ ದಿಲೀಪ್‌ರನ್ನು ಬಂಧಿಸಬೇಡಿ: ಪೊಲೀಸರಿಗೆ ಕೇರಳ ಹೈಕೋರ್ಟ್‌ ಸೂಚನೆ

    ತಿರುವನಂತಪುರಂ: 2017ರಲ್ಲಿ ನಟಿ ಮೇಲಿನ ಲೈಂಗಿಕ ಕಿರುಕುಳ ಸಂಬಂಧಿಸಿದ ಕೇಸ್ ವಿಚಾರಣೆ ನಡೆಸುತ್ತಿದ್ದ ಅಧಿಕಾರಿಗಳ ಮೇಲೆ ದಾಳಿಗೆ ಸಂಚು ಆರೋಪ ಎದುರಿಸುತ್ತಿರುವ ಖ್ಯಾತ ಮಲೆಯಾಳಂ ನಟ ದಿಲೀಪ್‌ರನ್ನು ಜನವರಿ 27ರ ವರೆಗೆ ಬಂಧಿಸದಂತೆ ಕೇರಳ ಹೈಕೋರ್ಟ್ ಸೂಚನೆ ನೀಡಿದೆ.

    ದಿಲೀಪ್ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ಕ್ಲಿಪ್‍ವೊಂದನ್ನು ಟಿವಿ ವಾಹಿನಿಯೊಂದು ಬಿಡುಗಡೆ ಮಾಡಿತ್ತು. ಹೀಗಾಗಿ ಕೆಲದಿನಗಳ ಹಿಂದೆ ದಿಲೀಪ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಆಡಿಯೋ ವೈರಲ್ ಆಗುತ್ತಿದ್ದಂತೆ, ಅಪರಾಧ ವಿಭಾಗದ ಕೇರಳ ಪೊಲೀಸ್ ತಂಡವು ದಿಲೀಪ್ ಮತ್ತು ಆತನ ಸಹೋದರನ ಮನೆ, ಕಚೇರಿಗಳ ಮೇಲೆ ದಾಳಿ ಕೂಡ ನಡೆಸಿತ್ತು. ಬಳಿಕ ಕೇಸ್ ದಾಖಲಿಸಿಕೊಂಡು ದಿಲೀಪ್ ಬಂಧಿಸಲು ತಯಾರಿ ನಡೆಸಲಾಗಿತ್ತು. ಇದನ್ನೂ ಓದಿ: ನಟಿ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ – ನಟ ದಿಲೀಪ್‌ ಮನೆ ಮೇಲೆ ಕೇರಳ ಪೊಲೀಸರ ದಾಳಿ

    ಪ್ರಕರಣಕ್ಕೆ ಸಂಬಂಧಿಸದಂತೆ ದಿಲೀಪ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ಹೈಕೋರ್ಟ್ ಈ ಕೇಸ್ ವಿಚಾರಣೆ ನಡೆಸಿ ಜನವರಿ 23, 24, 25ರ ಒಳಗಾಗಿ ತನಿಖಾ ವರದಿ ಸಲ್ಲಿಸುವಂತೆ ಪೊಲೀಸರಿಗೆ ಹೈಕೋರ್ಟ್ ತಿಳಿಸಿದೆ. ಅಲ್ಲದೆ ಮುಂದಿನ ವಿಚಾರಣೆಯನ್ನು ಜನವರಿ 27ಕ್ಕೆ ಮೂಂದೂಡಿದ್ದು, ಅಲ್ಲಿಯ ವರೆಗೆ ದಿಲೀಪ್ ಅವರನ್ನು ಬಂಧಿಸದಂತೆ ಆದೇಶಿಸಿದೆ. ಇದನ್ನೂ ಓದಿ: ಸಾಲ ತೀರಿಸಲು ಬ್ಯಾಂಕ್ ರಾಬರಿ ಮಾಡಿದ್ದ ಟೆಕ್ಕಿ ಅರೆಸ್ಟ್

    ಕಳೆದ ವರ್ಷ ನ.25 ರಂದು ನಿರ್ದೇಶಕ ಬಾಲಚಂದ್ರ ಕುಮಾರ್, ದಿಲೀಪ್ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕೇರಳ ಸಿಎಂಗೆ ದೂರು ಸಲ್ಲಿಸಿದ್ದರು. ಬಳಿಕ ದಿಲೀಪ್ ಅವರ ಬಂಧನವಾಗಿತ್ತು. ಎರಡು ತಿಂಗಳ ಬಳಿಕ ಜಾಮೀನಿನ ಮೇಲೆ ದಿಲೀಪ್ ಬಿಡುಗಡೆಯಾಗಿದ್ದರು. ಬಳಿಕ ಕೇಸ್‍ಗೆ ಸಂಬಂಧಿಸಿದಂತೆ ಇದೀಗ ಮತ್ತೆ ಹೊಸ ವಿಚಾರ ಬಹಿರಂಗಪಡಿಸಿದ ಹಿನ್ನೆಲೆ ಮತ್ತೆ ತನಿಖೆ ಚುರುಕುಗೊಂಡಿದೆ.

  • ಜೀನಿ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

    ಜೀನಿ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

    – ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ
    – ರಾಜ್ಯವ್ಯಾಪಿ ಜನಪ್ರಿಯವಾಗುತ್ತಿದೆ ಸಿರಿಧಾನ್ಯಗಳ ಪೌಡರ್

    ಮೇಲ್ನೋಟಕ್ಕೆ ಎಷ್ಟೇ ಗಟ್ಟಿಮುಟ್ಟಾಗಿದ್ರು ಕಾಯಿಲೆಗಳು ಕಾಡಲು ಶುರು ಮಾಡಿವೆ. ಕಾಯಿಲೆ ಅಂದಾಕ್ಷಣ ದೊಡ್ಡದೊಡ್ಡ ಕಾಯಿಲೆಗಳೇ ಆಗಬೇಕೆಂದೇನಿಲ್ಲ. ದೊಡ್ಡ ಕಾಯಿಲೆಯಿಂದ ಹಿಡಿದು ಸಣ್ಣ ನೆಗಡಿ, ಕೆಮ್ಮೂ ಸಹ ಘಟಾನುಘಟಿಗಳನ್ನ ನಡುಗಿಸಿ ಬಿಡುತ್ತಿದೆ. ಇಷ್ಟಕ್ಕೆಲ್ಲ ಕಾರಣ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿರುವುದು.

    ರೋಗ ನಿರೋಧಕ ಶಕ್ತಿ ಕಡಿಮೆಯಾಗಲು ಕಾರಣ ಏನು ಅಂತ ನೋಡಿದರೆ ನಾವು ತಿನ್ನುತ್ತಿರುವ ಆಹಾರದಲ್ಲಿ ಯಾವುದೇ ಸತ್ವ ಇಲ್ಲ. ಜೊತೆಗೆ ಆಹಾರವೇ ಸ್ಲೋ ಪಾಯಿಸನ್ ಆಗಿ ನಮ್ಮನ್ನ ನಿಶ್ಯಕ್ತರನ್ನಾಗಿ ಮಾಡುತ್ತಿದೆ. ನಾವು ತಿನ್ನುತ್ತಿರುವ ಆಹಾರ ಬೆಳೆಯಲು ಭೂಮಿಗೆ ಹಾಕುತ್ತಿರುವ ರಸಗೊಬ್ಬರ, ಕೀಟಗಳಿಂದ ಕಾಪಾಡಲು ಕೀಟ ನಾಶಕ ಬಳಸುತ್ತಿದ್ದಾರೆ. ಬೆಳೆ ಬೆಳೆದ ಮೇಲೆ ಇದನ್ನು ನಾವು ಆಹಾರವಾಗಿ ಬಳಸುತ್ತಿದ್ದೇವೆ. ಇದರಲ್ಲಿ ಬಹುತೇಕ ಪೋಷಕಾಂಶಗಳು ನಾಶವಾಗಿ ನಮ್ಮ ದೇಹಕ್ಕೆ ರಸಗೊಬ್ಬರದ ಅಂಶ ಹಾಗೂ ಕೀಟ ನಾಶಕ ಅಂಶ ಸೇರ್ಪಡೆಯಾಗ್ತಿದೆ. ಇದು ನಮ್ಮ ಆರೋಗ್ಯ ಹಾಳಾಗಲು ಕಾರಣವಾಗಿದೆ.

    ಇದಕ್ಕೆಲ್ಲ ಪರಿಹಾರ ಏನು ಅಂತ ನೋಡೋದಾದ್ರೆ, ಮೊದಲು ನಮ್ಮ ಆಹಾರದ ಆರೋಗ್ಯವನ್ನ ಕಾಪಾಡಬೇಕು. ಅಂದ್ರೆ ರಸಗೊಬ್ಬರ ರಹಿತ, ಕೀಟ ನಾಶಕ ಬಳಸದೆ ಸಾವಯವ ಪದ್ಧತಿಯಲ್ಲಿ ಬೆಳೆದ ಆಹಾರವನ್ನ ಬಳಸಲು ಶುರು ಮಾಡಬೇಕು. ಇಷ್ಟಕ್ಕೆ ನಮ್ಮ ಆರೋಗ್ಯಕ್ಕೆ ಬೇಕಾದ ಅಂಶಗಳು ಸಿಗೋದು ಸ್ವಲ್ಪ ಕಷ್ಟ. ಯಾಕಂದ್ರೆ ನಮ್ಮಲ್ಲಿ ಒಂದೊಂದು ಧಾನ್ಯಗಳು ಒಂದೊಂದು ವಿಶೇಷ ಗುಣಗಳನ್ನ ಹೊಂದಿದೆ.

    ಸಿರಿಧಾನ್ಯಗಳು ಇತ್ತೇಚೆಗೆ ಸಾಮಾನ್ಯವಾಗಿ ಕಾಡುವ ಬಿಪಿ, ಶುಗರ್ ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ. ಬಿಜಾಪುರದಿಂದ ಬಿಳಿ ಜೋಳ, ಬಳ್ಳಾರಿ ನವಣೆ, ಹಾವೇರಿಯ ಕಡಲೆಕಾಳು, ಶಿರಾದ ಕೊರಲೆ, ಚಿಕ್ಕನಾಯಕನಹಳ್ಳಿಯ ಹೆಸರುಕಾಳು, ಚಿಕ್ಕಮಗಳೂರಿನ ಏಲಕ್ಕಿ, ಪುತ್ತೂರಿನ ಮೆಣಸು, ಬೆಳ್ತಂಗಡಿಯ ಗೋಡಂಬಿ, ಚಳ್ಳಕೆರೆಯ ಕಡಲೆ ಬೀಜ, ಕೋಲಾರದ ರಾಗಿ, ಮೈಸೂರಿನ ಹುರುಳಿಕಾಳು, ದಾವಣಗೆರೆಯ ಮುಸುಕಿನ ಜೋಳ, ಹೊಸದುರ್ಗದ ಸಾಮೆ ಊದಲು, ಕಲಬುರಗಿಯಿಂದ ತೊಗರಿಕಾಳು, ಬಾಗಲಕೋಟೆಯ ಸಜ್ಜೆ ಸೇರಿದಂತೆ 9 ಸಿರಿಧಾನ್ಯ ಹಾಗೂ 14 ಕಾಳುಗಳನ್ನ ಕರ್ನಾಟಕದ ಪ್ರತಿಯೊಂದು ಜಿಲ್ಲೆಯ ರೈತರಿಂದ ನೇರವಾಗಿ ಖರೀದಿ ಮಾಡಿ ಈ ಜೀನಿಯನ್ನ ತಯಾರಿಸಲಾಗುತ್ತದೆ. ರೈತರಿಂದ ನೇರವಾಗಿ ಸಿರಿಧಾನ್ಯಗಳನ್ನ ಖರೀದಿ ಮಾಡಿದ ನಂತರ ಅದನ್ನ ಅಕ್ಕಿ ಮಾಡಲಾಗುತ್ತದೆ.

    ಸಿರಿಧಾನ್ಯಗಳು ಸೇರಿದಂತೆ 14 ರೀತಿಯ ಕಾಳುಗಳನ್ನು ನೀರಿನಲ್ಲಿ ತೊಳೆದು ನೆರಳಿನಲ್ಲಿ ಒಣಗಿಹಾಕಲಾಗುತ್ತದೆ. ಒಣಗಿದ ಕಾಳುಗಳನ್ನ ಮಹಿಳೆಯರು ಕ್ಲೀನ್ ಮಾಡ್ತಾರೆ. ನಂತರ ಮಣ್ಣಿನ ಮಡಿಕೆಯಲ್ಲಿ ಹದವಾಗಿ ಹುರಿಯಲಾಗುತ್ತೆ. ಹುರಿದ ಕಾಳುಗಳನ್ನ ಸರಿಯಾದ ಪ್ರಮಾಣದಲ್ಲಿ ಒಟ್ಟಿಗೆ ಮಿಶ್ರಣ ಮಾಡಲಾಗುತ್ತದೆ.

    ನಂತರ ಹುರಿದ ಕಾಳುಗಳನ್ನ ಪೌಡರ್ ಮಾಡಿ ಪ್ಯಾಕ್ ಮಾಡಲಾಗುತ್ತದೆ. ನೀವು ಮನೆಯಲ್ಲಿ ಹೇಗೆ ಅಕ್ಕಿ ಹಿಟ್ಟು, ರಾಗಿ ಹಿಟ್ಟನ್ನ ಮಾಡುತ್ತಿರೋ ಅದೇ ರೀತಿ ಮಾಡಲಾಗುತ್ತದೆ. ಇದರ ಎಕ್ಸ್ಪೆರಿ ಡೇಟ್ ಕೇವಲ 5 ತಿಂಗಳು ಮಾತ್ರ. ನ್ಯಾಚುರಲ್ ಆಗಿ ಪೌಡರ್ ಪ್ಯಾಕೇಟ್ ಆದ 5 ತಿಂಗಳ ವರೆಗೆ ಕೆಡುವುದಿಲ್ಲ. ಓಪನ್ ಮಾಡಿದ ನಂತರ ಒಂದು ತಿಂಗಳಲ್ಲಿ ಖಾಲಿ ಮಾಡಬೇಕು. ಬಳಕೆ ಮಾಡುವಾಗ ಮಾತ್ರ ತೆರೆದು, ಉಳಿದ ಸಂದರ್ಭದಲ್ಲಿ ಪ್ಯಾಕೇಟ್ ಮುಚ್ಚಿಡಬೇಕು.

    ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಯರಗುಂಟೆ ಗ್ರಾಮದಲ್ಲಿ 200 ಜನರಿಗೆ ದಿಲೀಪ್ ಉದ್ಯೋಗ ನೀಡಿದ್ದಾರೆ. ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶದಿಂದಲೇ ಯಂತ್ರಗಳನ್ನ ಹಾಕದೇ ಕೈಯಿಂದಲೇ ಮಾಡಿಸಲಾಗುತ್ತಿದೆ. ಒಂದು ಯಂತ್ರ 20 ಜನರ ಕೆಲಸ ಕಸಿದುಕೊಳ್ಳುತ್ತದೆ. ಹಾಗಾಗಿ ನಾವು ಯಂತ್ರಗಳನ್ನ ಹಾಕೋದಿಲ್ಲ ಅಂತಾರೆ ದಿಲೀಪ್.

    ಮಧ್ಯಾಹ್ನ ಕಾರ್ಮಿಕರಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನೂ ಸಹ ದಿಲೀಪ್ ಮಾಡ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜೀನಿ ತಯಾರಿಕೆ ಮಾಡ್ತಿದ್ರು. ಬೆಂಗಳೂರಿನ ಕಂಪನಿಗಳಂತೆಯೇ ಕಾರ್ಮಿಕರಿಗೆ ಯೂನಿಫಾರಂ ಜೊತೆಗೆ ಹೈಜೆನಿಕ್ ಮೇಂಟೇನ್ ಮಾಡಲು ಹ್ಯಾಂಡ್ ಗ್ಲೌಸ್, ಮಾಸ್ಕ್, ಕ್ಯಾಪ್‍ಗಳನ್ನು ಇಲ್ಲಿನ ಕಾರ್ಮಿಕರು ಬಳಸ್ತಾರೆ. ಒಟ್ಟಾರೆ ಜೀನಿ ತಯಾರಿಕೆಯಲ್ಲಿ ಸುರಕ್ಷಿತಾ ಕ್ರಮಗಳನ್ನ ಜೀವಿತಾ ಎಂಟಪ್ರ್ರೈಸಸ್ ಅನುಸರಿಕೊಂಡು ಹೋಗುತ್ತಿದೆ.