Tag: Dilbar

  • 20 ವರ್ಷದ ಹಳೆಯ ನ್ಯೂ ‘ದಿಲ್‍ಬರ್’ ಹಾಡಿಗೆ ಸುಶ್ಮಿತಾ ಸೇನ್ ಬೆಲ್ಲಿ ಡ್ಯಾನ್ಸ್: ವಿಡಿಯೋ ನೋಡಿ

    20 ವರ್ಷದ ಹಳೆಯ ನ್ಯೂ ‘ದಿಲ್‍ಬರ್’ ಹಾಡಿಗೆ ಸುಶ್ಮಿತಾ ಸೇನ್ ಬೆಲ್ಲಿ ಡ್ಯಾನ್ಸ್: ವಿಡಿಯೋ ನೋಡಿ

    ಮುಂಬೈ: ಬಾಲಿವುಡ್ ನಟಿ ಸುಶ್ಮಿತಾ ಸೇನ್ 20 ವರ್ಷದ ಹಳೆಯ ನ್ಯೂ ‘ದಿಲ್‍ಬರ್’ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ತನ್ನ ಬೆಲ್ಲಿ ಡ್ಯಾನ್ಸ್ ವಿಡಿಯೋವನ್ನು ಸುಶ್ಮಿತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    20 ವರ್ಷಗಳ ಹಿಂದೆ ಸುಶ್ಮಿತಾ ದಿಲ್‍ಬರ್ ಹಾಡಿಗೆ ಹೆಜ್ಜೆ ಹಾಕಿದ್ದರು. ಆದರೆ ಈಗ ‘ಸತ್ಯಮೇವ ಜಯತೆ’ ಚಿತ್ರದಲ್ಲಿ ಈ ಹಾಡನ್ನು ರಿಮೀಕ್ಸ್ ಮಾಡಲಾಗಿದ್ದು, ಈ ರಿಮೀಕ್ಸ್ ಹಾಡಿನಲ್ಲಿ ನೋರಾ ಫತೇಹಿ ಮಾದಕತೆಯಿಂದ ತಮ್ಮ ಸೊಂಟವನ್ನು ಬಳುಕಿಸಿದ್ದಾರೆ.

    ದಿಲ್‍ಬರ್ ರಿಮೀಕ್ಸ್ ಹಾಡು ಸುಶ್ಮಿತಾ ಅವರಿಗೆ ಇಷ್ಟವಾಗಿದ್ದು, ಅಂದು ಸಹಜವಾಗಿ ಡ್ಯಾನ್ಸ್ ಮಾಡಿದ ಇವರು ಇಂದು ಬೆಲ್ಲಿ ಡ್ಯಾನ್ಸ್ ಮಾಡುವ ಮೂಲಕ ಎಲ್ಲರ ನಿದ್ದೆ ಕೆಡಿಸಿದ್ದಾರೆ.

    ತನ್ನ ಡ್ಯಾನ್ಸ್ ವಿಡಿಯೋದಲ್ಲಿ ಸುಶ್ಮಿತಾ ಬೆಲ್ಲಿ ಡ್ಯಾನ್ಸ್ ಮಾಡುತ್ತ ತಮ್ಮ ಎಬ್ಸ್ ನನ್ನು ಫ್ಲಾಂಟ್ ಮಾಡಿದ್ದಾರೆ. ತನ್ನ ವರ್ಕೌಟ್ ಬಳಿಕ ಸುಶ್ಮಿತಾ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದು, ಹಾಟ್ ಅವತಾರದಲ್ಲಿ ಮಿಂಚಿದ್ದಾರೆ.

    ಸದ್ಯ ಸುಶ್ಮಿತಾ ತನ್ನ ಡ್ಯಾನ್ಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅದಕ್ಕೆ, “ದಿಲ್‍ಬರ್ ಯಾವತ್ತಿದ್ದರೂ ಒಂದು ಒಳ್ಳೆಯ ಅನುಭವವಾಗಿರುತ್ತದೆ” ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.

    1999ರ ಜೂನ್ 11ರಂದು ಬಿಡುಗಡೆಯಾಗಿದ್ದ ‘ಸಿರ್ಫ್ ತುಮ್’ ಚಿತ್ರದಲ್ಲಿ ಈ ಹಾಡಿಗೆ ನಟ ಸಂಜಯ್ ಕಪೂರ್ ಜೊತೆ ಸುಶ್ಮಿತಾ ಸೇನ್ ಹೆಜ್ಜೆ ಹಾಕಿದ್ದರು. ಆ ಕಾಲದಲ್ಲೂ ಕೂಡ ಈ ಹಾಡು ಸಾಕಷ್ಟು ಹಿಟ್ ಆಗಿತ್ತು. ಆದರೆ ಸುಶ್ಮಿತಾ ಈಗ ಬೆಲ್ಲಿ ಡ್ಯಾನ್ಸ್ ಮಾಡುವ ಮೂಲಕ ಈ ಹಾಡನ್ನು ಮತ್ತೊಮ್ಮೆ ಹಿಟ್ ಆಗುವ ರೀತಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ‘ದಿಲ್‍ಬರ್’ ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ನಿದ್ದೆಗೆಡಿಸಿದ ದಂಗಲ್ ಬೆಡಗಿಯರು: ವಿಡಿಯೋ ನೋಡಿ

    ‘ದಿಲ್‍ಬರ್’ ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ನಿದ್ದೆಗೆಡಿಸಿದ ದಂಗಲ್ ಬೆಡಗಿಯರು: ವಿಡಿಯೋ ನೋಡಿ

    ಮುಂಬೈ: ದಂಗಲ್ ಬೆಡಗಿಯರಾದ ಫಾತಿಮಾ ಸನಾ ಶೇಖ್ ಹಾಗೂ ಸನ್ಯಾ ಮಲ್ಹೋತ್ರಾ ‘ದಿಲ್‍ಬರ್’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ಇವರಿಬ್ಬರ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇತ್ತೀಚಿಗೆ ಫಾತಿಮಾ ಹಾಗೂ ಸನ್ಯಾ ‘ಸತ್ಯಮೇವ್ ಜಯತೇ’ ಚಿತ್ರದ ದಿಲ್‍ಬರ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ಡ್ಯಾನ್ಸ್ ಶಾಕೇಬ್ ಶೇಖ್ ನೃತ್ಯ ನಿರ್ದೇಶನ ಮಾಡಿದ್ದು, ಸದ್ಯ ಫಾತಿಮಾ ಹಾಗೂ ಸನ್ಯಾ ತಮ್ಮ ಡ್ಯಾನ್ಸ್ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ದಿಲ್‍ಬರ್ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಒರಿಜನಲ್ ಹಾಡಿನಲ್ಲಿ ಸುಶ್ಮಿತಾ ಸೇನ್ ಹಾಗೂ ಸಂಜೀವ್ ಕಪೂರ್ ನಟಿಸಿದ್ದಾರೆ. ಸದ್ಯ ಈಗ ಈ ಹಾಡಿಗೆ ಫಾತಿಮಾ ಹಾಗೂ ಸನ್ಯಾ ಡ್ಯಾನ್ಸ್ ಮಾಡಿದ್ದು, ವಿಡಿಯೋ ಸಾಕಷ್ಟು ವೈರಲ್ ಆಗಿದೆ.

    ಸದ್ಯ ಫಾತಿಮಾ ಈಗ ಅಮೀರ್ ಖಾನ್ ಜೊತೆ “ಥಗ್ಸ್ ಆಫ್ ಹಿಂದೋಸ್ಥಾನ್” ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಿಗ್-ಬಿ ಅಮಿತಾಬ್ ಬಚ್ಚನ್ ಹಾಗೂ ಕತ್ರಿನಾ ಕೈಫ್ ಕೂಡ ನಟಿಸುತ್ತಿದ್ದಾರೆ. ಈ ಚಿತ್ರ ಇದೇ ವರ್ಷ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

    ಇತ್ತ ಸನ್ಯಾ, ವಿಶಾಲ್ ಭಾರದ್ವಾಜ್ ನಿರ್ದೇಶನದ ‘ಪಟಾಕಾ’ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 28, 2018ರಂದು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ದೀರಜ್ ವದ್ವಾನ್, ಅಜಯ್ ಕಪೂರ್, ರೇಖಾ ಭಾರದ್ವಾಜ್ ಹಾಗೂ ವಿಶಾಲ್ ಭಾರದ್ವಾಜ್ ನಿರ್ಮಾಣ ಮಾಡುತ್ತಿದ್ದಾರೆ.

    Choreography by @shazebsheikh ???? #shazebsheikhchoreography

    A post shared by Fatima Sana Shaikh (@fatimasanashaikh) on

    ????Choreography by @shazebsheikh #shazebsheikhchoreography #dilbar

    A post shared by Sanya Malhotra (@sanyamalhotra_) on