Tag: Digvijay Sing

  • ನಾನು ಪ್ರಚಾರಕ್ಕಿಳಿದ್ರೆ, ಕಾಂಗ್ರೆಸ್ಸಿಗೆ ಸೋಲಾಗುತ್ತೆ: ದಿಗ್ವಿಜಯ್ ಸಿಂಗ್

    ನಾನು ಪ್ರಚಾರಕ್ಕಿಳಿದ್ರೆ, ಕಾಂಗ್ರೆಸ್ಸಿಗೆ ಸೋಲಾಗುತ್ತೆ: ದಿಗ್ವಿಜಯ್ ಸಿಂಗ್

    ನವದೆಹಲಿ: ಕಾಂಗ್ರೆಸ್ ಪರವಾಗಿ ನಾನು ಪ್ರಚಾರ ನಡೆಸಿದ್ದೆ ಆದರೆ, ಪಕ್ಷಕ್ಕೆ ಸೋಲಾಗುತ್ತದೆ ಎಂದು ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಗೊಂದಲದ ಹೇಳಿಕೆಯನ್ನು ನೀಡಿದ್ದಾರೆ.

    ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದಿಂದ ಯಾರಿಗೇ ಟಿಕೆಟ್ ನೀಡಿದರೂ, ಅಥವಾ ಶತ್ರುಗಳಿಗೇ ಟಿಕೆಟ್ ನೀಡಿದರೂ ಅವರನ್ನು ನೀವು ಗೆಲ್ಲಿಸಿ. ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ನಾನು ಪ್ರಚಾರವಾಗಲಿ, ಭಾಷಣ ಮಾಡುವುದಿಲ್ಲ. ಒಂದು ವೇಳೆ ನಾನು ಭಾಷಣ ಮಾಡಿದರೇ, ಕಾಂಗ್ರೆಸ್ಸಿಗೆ ಅಲ್ಪ ಮತಗಳು ಬೀಳುತ್ತವೆ. ಹೀಗಾಗಿ ನಾನು ಇದಕ್ಕೆ ಮುಂದಾಗುವಿದಲ್ಲವೆಂದು ಹೇಳಿದ್ದಾರೆ.

    ದಿಗ್ವಿಜಯ್ ಸಿಂಗ್ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪ್ರಾದೇಶಿಕ ಸಮಿತಿ ಅಧ್ಯಕ್ಷ ಕಮಲ್ ನಾಥ್, ಅವರು ಯಾವ ಸಂದರ್ಭದಲ್ಲಿ ಆ ರೀತಿ ಹೇಳಿಕೆ ನೀಡಿದ್ದಾರೆ ಎನ್ನುವುದು ತಿಳಿದಿಲ್ಲ. ಈ ಬಗ್ಗೆ ಚರ್ಚಿಸಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.

    ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆದರೆ ಕಾಂಗ್ರೆಸ್ಸಿನ ಹಿರಿಯ ನಾಯಕರೊಬ್ಬರು ಗೊಂದಲದ ಹೇಳಿಕೆ ನೀಡಿರುವುದು ಈಗ ಚರ್ಚೆಗೆ ಕಾರಣವಾಗಿದೆ.

    ಬಿಎಸ್‍ಪಿ ಮಾಯಾವತಿಯವರು ಮಧ್ಯಪ್ರದೇಶ ಹಾಗೂ ರಾಜಸ್ಥಾನ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ಸಿನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ನೇರವಾಗಿ ಹೇಳಿದ್ದರು. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮೈತ್ರಿಗೆ ಒಪ್ಪಿಗೆ ಸೂಚಿಸಿದ್ದರೂ ಮಧ್ಯಪ್ರದೇಶ ಹಿರಿಯ ಮುಖಂಡರು ಮೈತ್ರಿಗೆ ಅಡ್ಡವಾಗಿದ್ದಾರೆ ಎಂದು ಮಾಯಾವತಿ ತನ್ನ ಆಪ್ತರ ಜೊತೆ ಹೇಳಿಕೊಂಡಿದ್ದರು ಎಂದು ವರದಿಯಾಗಿತ್ತು. ಈ ವಿಚಾರ ಮಧ್ಯಪ್ರದೇಶ ಚುನಾವಣೆಯಲ್ಲಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ದಿಗ್ವಿಜಯ್ ಸಿಂಗ್ ಅವರು ಪ್ರಚಾರದ ವಿಚಾರವಾಗಿ ಗೊಂದಲಕಾರಿ ಹೇಳಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv