Tag: Digvesh Rathi

  • 5 ಎಸೆತಗಳಲ್ಲಿ 5 ವಿಕೆಟ್‌ – ಮತ್ತೆ ದಿಗ್ವೇಶ್‌ ರಾಥಿ ಕಮಾಲ್‌

    5 ಎಸೆತಗಳಲ್ಲಿ 5 ವಿಕೆಟ್‌ – ಮತ್ತೆ ದಿಗ್ವೇಶ್‌ ರಾಥಿ ಕಮಾಲ್‌

    ಲಕ್ನೋ: ಐಪಿಎಲ್‌ನಲ್ಲಿ (IPL) ತನ್ನ ಬೌಲಿಂಗ್‌ನಿಂದಲೇ ಸುದ್ದಿಯಾಗಿದ್ದ ಬೌಲರ್‌ ದಿಗ್ವೇಶ್‌ ರಾಥಿ (Digvesh Rathi) ಈಗ ಸ್ಥಳೀಯ ಕ್ರಿಕೆಟ್‌ ಪಂದ್ಯದಲ್ಲಿ 5 ಎಸೆತಗಳಲ್ಲಿ 5 ವಿಕೆಟ್‌ ಕಬಳಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

    ಲಕ್ನೋ ಸೂಪರ್‌ ಜೈಂಟ್ಸ್‌ (LSG) ತಂಡ ಮಾಲೀಕ ಸಂಜೀವ್‌ ಗೋಯೆಂಕಾ (Sanjiv Goenka) ದಿಗ್ವೇಶ್‌ ರಾಥಿ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, ಸ್ಥಳೀಯ ಟಿ20 ಪಂದ್ಯದಲ್ಲಿ ದಿಗ್ವೇಶ್ ರಾಥಿ 5 ವಿಕೆಟ್ ಪಡೆದಿರುವ ಈ ಕ್ಲಿಪ್ ಅನ್ನು ಆಕಸ್ಮಿಕವಾಗಿ ನೋಡಿದೆ. ಐಪಿಎಲ್ 2025 ರಲ್ಲಿ ಉದಯವಾದ ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: `ಬನ್ನಿ ಹಾಪ್ ಕ್ಯಾಚ್’ ರೂಲ್ಸ್‌ಗೆ ಐಸಿಸಿ ಬ್ರೇಕ್ – ಶೀಘ್ರವೇ ಹೊಸ ರೂಲ್ಸ್

    26 ವರ್ಷದ ದಿಗ್ವೇಶ್‌ ಈ ಬಾರಿ ಐಪಿಎಲ್‌ನಲ್ಲಿ ಕಮಾಲ್‌ ಮಾಡಿದ್ದರು. 13 ಪಂದ್ಯಗಳಲ್ಲಿ 14 ವಿಕೆಟ್‌ ಪಡೆದು ಮಿಂಚಿದ್ದರು. ಚೊಚ್ಚಲ ಐಪಿಎಲ್‌ ಆವೃತ್ತಿಯಲ್ಲಿ ಉದ್ಧಟತನ ತೋರಿದ್ದಕ್ಕೆ ದಿಗ್ವೇಶ್ ಅವರನ್ನು ಅಮಾನತು ಮಾಡಲಾಗಿತ್ತು. ಇದನ್ನೂ ಓದಿ: ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಉದ್ಧಟತನ – ಒಂದು ಪಂದ್ಯಕ್ಕೆ ದಿಗ್ವೇಶ್ ಅಮಾನತು, ಭಾರೀ ದಂಡ

    ವಿಕೆಟ್‌ ಪಡೆದ ನಂತರ ನೋಟ್‌ಬುಕ್ ಸಂಭ್ರಮಾಚರಣೆ ಮಾಡಿದ್ದಕ್ಕಾಗಿ ರಾಥಿ ಅವರಿಗೆ ದಂಡ ವಿಧಿಸಲಾಗಿತ್ತು.

     

  • ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಉದ್ಧಟತನ – ಒಂದು ಪಂದ್ಯಕ್ಕೆ ದಿಗ್ವೇಶ್ ಅಮಾನತು, ಭಾರೀ ದಂಡ

    ತನ್ನ ಚೊಚ್ಚಲ ಐಪಿಎಲ್‌ನಲ್ಲೇ ಉದ್ಧಟತನ – ಒಂದು ಪಂದ್ಯಕ್ಕೆ ದಿಗ್ವೇಶ್ ಅಮಾನತು, ಭಾರೀ ದಂಡ

    ಲಕ್ನೋ: ತನ್ನ ಚೊಚ್ಚಲ ಐಪಿಎಲ್‌ ಆವೃತ್ತಿಯಲ್ಲೇ ಉದ್ಧಟತನ ತೋರಿದ ಲಕ್ನೋ ಸೂಪರ್‌ ಜೈಂಟ್ಸ್‌ (LSG) ತಂಡದ ಆಟಗಾರ ದಿಗ್ವೇಶ್ ರಾಥಿಗೆ (Digvesh Rathi) ಐಪಿಎಲ್‌ ಮಂಡಳಿ ಬಿಸಿ ಮುಟ್ಟಿಸಿದೆ. .

    ರಾಥಿ 2 ಹೆಚ್ಚುವರಿ ಡಿಮೆರಿಟ್‌ ಅಂಕ ಪಡೆದಿದ್ದಕ್ಕಾಗಿ 1 ಪಂದ್ಯದಿಂದ ಅಮಾನತುಗೊಳಿಸಿದೆ. ಅಲ್ಲದೇ ಸೋಮವಾರ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ನಡೆದ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ (Abhishek Sharma) ಔಟಾದ ಬಳಿಕ ಉದ್ಧಟತನಕ್ಕಾಗಿ ತೋರಿ ಐಪಿಎಲ್‌ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯದ ಶೇ.50ರಷ್ಟು ಶುಲ್ಕವನ್ನು ದಂಡ ವಿಧಿಸಿದೆ. ಇನ್ನೂ ರಾಥಿ ಜೊತೆ ಮೈದಾನದಲ್ಲೇ ಜಗಳಕ್ಕಿಳಿದಿದ್ದ ಸನ್‌ರೈಸರ್ಸ್‌ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗಿದೆ.

    ಅಭಿ ಜೊತೆಗೆ ಕಿರಿಕ್‌ ಆಗಿದ್ದೇಕೆ?
    ಸ್ಫೋಟಕ ಪ್ರದರ್ಶನ ನೀಡುತ್ತಿದ್ದ ಅಭಿಷೇಕ್ ಶರ್ಮಾ ವಿಕೆಟ್‌ ಪಡೆದ ದಿಗ್ವೇಶ್‌, ನೋಟ್‌ ಬುಕ್‌ ಸೆಲೆಬ್ರೇಷನ್‌ ಮಾಡಿದರು. ಇದೇ ವೇಳೆ ಹೊರ ನಡಿ ಎನ್ನುವಂತೆ ಕೈ ಸನ್ನೆ ತೋರಿಸಿದ್ರು. ದಿಗ್ವೇಶ್ ನಡೆಯಿಂದ ಕುಪಿತಗೊಂಡ ಅಭಿ ಪ್ರತ್ಯುತ್ತರ ನೀಡಲು ಮುಂದಾದರು. ಇಬ್ಬರ ನಡುವಣ ಜಗಳವು ತಾರಕ್ಕೇರುತ್ತಿದ್ದಂತೆ, ಅಂಪೈರ್ ಹಾಗೂ ಸಹ ಆಟಗಾರರು ಮಧ್ಯ ಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದ್ರು.

    ಹಾಲಿ ಆವೃತ್ತಿಯಲ್ಲಿ ದಿಗ್ವೇಶ್ ರಾಥಿ ಆರ್ಟಿಕಲ್ 2.5ರ ಅಡಿಯಲ್ಲಿ ಮಾಡಿದ 3ನೇ ಹಂತದ ಅಪರಾಧ ಇದಾಗಿದ್ದು, ಈ ಬಾರಿ ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ.

    ಇದಕ್ಕೂ ಮುನ್ನ ಏ.1ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಒಂದು ಮತ್ತು ಏಪ್ರಿಲ್ 4 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ಸದ್ಯ ದಿಗ್ವೇಶ್ ರಾಥಿ ಡಿಮೆರಿಟ್ ಪಾಯಿಂಟ್ 5 ಕ್ಕೇರಿದ್ದು, ಮೇ 22 ರಂದು ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೆ ಅಮಾನತುಗೊಂಡಿದ್ದಾರೆ.

  • ಮೈದಾನದಲ್ಲೇ ಧೀಮಾಕು ತೋರಿಸಿದ ದಿಗ್ವೇಶ್ ರಥಿಗೆ ಬಿತ್ತು ಭಾರೀ ದಂಡ

    ಮೈದಾನದಲ್ಲೇ ಧೀಮಾಕು ತೋರಿಸಿದ ದಿಗ್ವೇಶ್ ರಥಿಗೆ ಬಿತ್ತು ಭಾರೀ ದಂಡ

    ಲಕ್ನೋ: ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲೇ ಧೀಮಾಕು ತೋರಿಸಿದ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ಬೌಲರ್‌ ದಿಗ್ವೇಶ್ ರಥಿಗೆ (Digvesh Rathi) ಬಿಸಿಸಿಐ ಭಾರೀ ದಂಡ ವಿಧಿಸಿದೆ.

    ಐಪಿಎಲ್ (IPL) ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯದ ಶುಲ್ಕದ 25% ಪ್ರತಿಶತ ದಂಡ ಮತ್ತು ಒಂದು ಡಿಮೆರಿಟ್‌ ಪಾಯಿಂಟ್‌ ನೀಡಲಾಗಿದೆ. ಇದನ್ನೂ ಓದಿ: ಆರ್‌ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ.. ಹೂಂ ಅಂತೀಯಾ: ಕನ್ನಡದಲ್ಲಿ ಸೊಗಸಾಗಿ ಹಾಡಿದ ಪಡಿಕ್ಕಲ್‌

     

    ಆಗಿದ್ದೇನು?
    ದಿಗ್ವೇಶ್ ರಥಿ ಮೂರನೇ ಓವರ್‌ ಎಸೆಯುತ್ತಿದ್ದರು. 5ನೇ ಎಸೆತದಲ್ಲಿ ಸ್ಟ್ರೈಕ್‌ನಲ್ಲಿದ್ದ ಪ್ರಿಯಾಂಶ್ ಆರ್ಯ ಅವರು ಬಲವಾಗಿ ಹೊಡೆಯಲು ಯತ್ನಿಸಿ ಶಾರ್ದೂಲ್‌ ಠಾಕೂರ್‌ ಕೈಗೆ ಕ್ಯಾಚ್‌ ನೀಡಿ ಹೊರ ನಡೆದರು.

    8 ರನ್‌ ಗಳಿಸಿ ಮೈದಾನ ತೊರೆಯುತ್ತಿದ್ದಾಗ ರಥಿ ಪ್ರಿಯಾಂಶ್ ಆರ್ಯ ಬಳಿ ಬಂದು ಪತ್ರ ಬರೆಯುವ ಮೂಲಕ ಸಂಭ್ರಮಿಸಿದ್ದರು. ಉದ್ದೇಶಪೂರ್ವಕವಾಗಿ ಆಟಗಾರನ ಬಳಿ ಬಂದು ಸಂಭ್ರಮಾಚರಣೆ ಮಾಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದ್ದಕ್ಕೆ ದಿಗ್ವೇಶ್ ರಥಿ ದಂಡ ವಿಧಿಸಿದೆ. ಇದನ್ನೂ ಓದಿ: ಸಿಡ್ನಿ ಸಿಕ್ಸರ್‌ ಪರ ಆಡಲಿದ್ದಾರೆ ಕೊಹ್ಲಿ!

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 7 ವಿಕೆಟ್‌ ನಷ್ಟಕ್ಕೆ 171 ರನ್‌ ಹೊಡೆಯಿತು. ಗುರಿ ಬೆನ್ನಟ್ಟಿದ ಪಂಜಾಬ್‌ 16.2 ಓವರ್‌ಗಳಲ್ಲಿ 177 ರನ್‌ ಹೊಡೆದು ಜಯಗಳಿಸಿತು. ಪ್ರಭಸಿಮ್ರನ್ ಸಿಂಗ್ (Prabhsimran Singh) ಮತ್ತು ಶ್ರೇಯಸ್‌ ಅಯ್ಯರ್‌ (Shreyas Iyer) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಪಂಜಾಬ್‌ ಕಿಂಗ್ಸ್‌ (Punjab Kings) ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

    ಈ ಜಯದಿಂದ ಐದನೇ ಸ್ಥಾನದಲ್ಲಿದ್ದ ಪಂಜಾಬ್‌ ಎರಡನೇ ಸ್ಥಾನಕ್ಕೆ ಜಿಗಿದರೆ ಮೂರನೇ ಸ್ಥಾನದಲ್ಲಿದ್ದ ಲಕ್ನೋ ಆರನೇ ಸ್ಥಾನಕ್ಕೆ ಜಾರಿದೆ.