Tag: Digital Rights

  • ಪುಷ್ಪಾ-2 ಡಿಜಿಟಲ್ ಹಕ್ಕು ಮಾರಾಟ ಎಷ್ಟು ಕೋಟಿಗೆ ಗೊತ್ತಾ?

    ಪುಷ್ಪಾ-2 ಡಿಜಿಟಲ್ ಹಕ್ಕು ಮಾರಾಟ ಎಷ್ಟು ಕೋಟಿಗೆ ಗೊತ್ತಾ?

    ಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಹೈವೋಲ್ಟೇಜ್ ಸಿನಿಮಾ `ಪುಷ್ಪಾ-2′ (Pushpa-2) ಡಿಜಿಟಲ್ ಮಾರ್ಕೆಟ್‌ನಲ್ಲಿ ಹಲ್‌ಚಲ್ ಮಾಡ್ತಿದೆ. ಈ ಸಿನಿಮಾದ ಡಿಜಿಟಲ್ ಹಕ್ಕು (Digital Rights) ಮಾರಾಟ ಭರ್ತಿ 270 ಕೋಟಿಗೆ ಮಾರಾಟವಾಗಿದ್ದು, ಸಿನಿಮಾ ಬಜಾರ್‌ನಲ್ಲಿ ಭಾರೀ ಹವಾ ಕ್ರಿಯೇಟ್ ಮಾಡಿದೆ. ಸಿನಿಮಾ ತೆರೆಗೂ ಮುನ್ನವೇ ಇಷ್ಟು ದೊಡ್ಡ ಮೊತ್ತಕ್ಕೆ ಡಿಜಿಟಲ್ ಹಕ್ಕು ಮಾರಾಟವಾಗಿರೋದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.

    ಸುಕುಮಾರ್ ನಿರ್ದೇಶನದಲ್ಲಿ, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್, ಸುನೀಲ್ ಸೇರಿದಂತೆ ಅತೀದೊಡ್ಡ ತಾರಾಗಣದಿಂದ ಪಾರ್ಟ್-1 ಸಿನಿಮಾ ಭಾರೀ ಸೌಂಡ್ ಮಾಡಿತ್ತು. ಇದೀಗ ಪಾರ್ಟ್-2 ಸಿನಿಮಾ ಕೂಡಾ ಡಿಫರೆಂಟ್ ಮೇಕಿಂಗ್, ವಿಭಿನ್ನ ಸಾಂಗ್ ಹಾಗೂ ನಾಯಕನಟ ಅಲ್ಲು ಅರ್ಜುನ್ ಗಂಗಮ್ಮನ ಪಾತ್ರ ಭಕ್ತಗಣ ಶಿಳ್ಳೆ ಹೊಡೆದು ಕೇಕೆ ಹಾಕುವಂತೆ ಮಾಡಿದೆ. ಸ್ಯಾಂಪಲ್ಸ್‌ ಇಂದಲೇ ಫ್ಯಾನ್ಸ್ ಕ್ರೇಜ್ ಹೆಚ್ಚಿಸಿರುವ ಸಿನಿಮಾ ಮಾರ್ಕೆಟ್‌ನಲ್ಲೂ ಟ್ರೆಂಡ್ ಸೃಷ್ಟಿಸಿದೆ. ಇದನ್ನೂ ಓದಿ: ದರ್ಶನ್‌ಗೆ ಬೆನ್ನುನೋವು – ಜೈಲು ವೈದ್ಯರಿಂದ ನಟನ ಆರೋಗ್ಯ ತಪಾಸಣೆ

    ಅಲ್ಲು ಅರ್ಜುನ್ ಕರಿಯರ್‌ನಲ್ಲೇ ತುಂಬಾನೇ ವಿಭಿನ್ನವಾದ ಸಿನಿಮಾ ಪುಷ್ಪ ಆಗಿದ್ದು, ಸದ್ಯ ಡಿಜಿಟಲ್ ರೈಟ್ಸ್‌ ಸೌಂಡ್ ಮಾಡುತ್ತಿದೆ. ಅಂದುಕೊಂಡಂತೆ ಆಗಿದ್ರೆ, ಪುಷ್ಪ-2 ಸಿನಿಮಾ ಆಗಸ್ಟ್ 15ಕ್ಕೆ ರಿಲೀಸ್ ಆಗಬೇಕಿತ್ತು. ಕಾರಣಾಂತರಗಳಿಂದ ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್ ಮಾಡಿದೆ ಚಿತ್ರತಂಡ. ಇದೇ ವರ್ಷ ಡಿಸೆಂಬರ್ 6ಕ್ಕೆ ಬೆಳ್ಳಿತೆರೆಗೆ ಅಪ್ಪಳಿಸಲಿದೆ ಪುಷ್ಪ-2 ಚಿತ್ರ. ಇದನ್ನೂ ಓದಿ: ದರ್ಶನ್ ವಿಚಾರದಲ್ಲಿ ನಾನು ಯಾವುದೇ ಪ್ರಭಾವ ಬೀರಿಲ್ಲ: ಜಮೀರ್

    ಸದ್ಯ ಟೀಸರ್ ಹಾಗೂ ಹಾಡುಗಳಿಂದ ಗಮನ ಸೆಳೆದ ಪುಷ್ಪ, ಇದೀಗ ಡಿಜಿಟಲ್ ಹಕ್ಕು ಮಾರಾಟದಿಂದ ಮತ್ತಷ್ಟು ಮಗದಷ್ಟು ಸುದ್ದಿಗೆ ಕಾರಣವಾಗಿದೆ. ನೆಟ್‌ಫ್ಲಿಕ್ಸ್ ಸಂಸ್ಥೆ ಬರೋಬ್ಬರಿ 270 ಕೋಟಿಗೆ ಪುಷ್ಪ-2 ಸಿನಿಮಾದ ಡಿಜಿಟಲ್ ಹಕ್ಕು ಖರೀದಿಸಿದೆ. ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆ ದೇಗುಲದಲ್ಲಿ ಜೂ.ಎನ್‌ಟಿಆರ್

  • ಪುಷ್ಪ 2 ದಾಖಲೆ: ನಿರ್ಮಾಪಕರ ಜೇಬಿಗೆ ಹರಿದು ಬರ್ತಿದೆ ಕೋಟಿ ಕೋಟಿ ಹಣ

    ಪುಷ್ಪ 2 ದಾಖಲೆ: ನಿರ್ಮಾಪಕರ ಜೇಬಿಗೆ ಹರಿದು ಬರ್ತಿದೆ ಕೋಟಿ ಕೋಟಿ ಹಣ

    ಭಾರತೀಯ ಸಿನಿಮಾ ರಂಗದಲ್ಲಿ ಪುಷ್ಪ 2 ದಾಖಲೆಗೆ ಕಾರಣವಾಗುತ್ತಿದೆ. ಈ ಸಿನಿಮಾದ ಡಿಜಿಟೆಲ್ ರೈಟ್ಸ್ (Digital Rights) ಬರೋಬ್ಬರಿ 275 ಕೋಟಿ ರೂಪಾಯಿ ಸೇಲ್ ಆಗಿದೆ ಎನ್ನುವ ಮಾಹಿತಿ ಸಿಗುತ್ತಿದೆ. ಈ ಹಣ ಸಿನಿಮಾ ರಿಲೀಸ್ ಆದ ನಂತರ ಮತ್ತಷ್ಟು ಏರಿಕೆಯೂ ಆಗಲಿದೆಯಂತೆ. ಇಷ್ಟೊಂದು ಮೊತ್ತದ ಹಣವನ್ನು ಕೊಟ್ಟು ಇದೇ ಮೊದಲ ಬಾರಿಗೆ ಡಿಜಿಟೆಲ್ ಹಕ್ಕುಗಳನ್ನು ಖರೀದಿಸಲಾಗಿದೆಯಂತೆ.

    ಅಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ 2 (Pushpa 2) ಸಿನಿಮಾ ಇದೇ ಆಗಸ್ಟ್ 15ರಂದು ಬಿಡುಗಡೆ ಮಾಡುವುದಾಗಿ ಈಗಾಗಲೇ ಚಿತ್ರತಂಡ ಘೋಷಣೆ ಮಾಡಿದೆ. ಅದೇ ರೀತಿಯ ಬಾಲಿವುಡ್ ನ ಹೆಸರಾಂತ ನಟ ಅಜಯ್ ದೇವಗನ್ (Ajay Devgan) ನಟನೆಯ ಸಿಂಗಂ ಅಗೇನ್ ಚಿತ್ರ ಕೂಡ ಅದೇ ದಿನಾಂಕದಂದು ರಿಲೀಸ್ ಆಗಬೇಕಿತ್ತು. ಆದರೆ, ಸಿಂಗಂ (Singam Again) ಸೈಡ್ ಗೆ ಹೋಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

    ಪುಷ್ಪ 2 ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಸಿನಿ ಪಂಡಿತರ ಲೆಕ್ಕಾಚಾರದಂತೆ ಸಾವಿರಾರು ಕೋಟಿ ರೂಪಾಯಿ ವ್ಯಾಪಾರ ಮಾಡುವ ಶಕ್ತಿ ಈ ಚಿತ್ರಕ್ಕಿದೆಯಂತೆ. ಅಲ್ಲದೇ, ದೊಡ್ಡ ಮಟ್ಟದಲ್ಲಿ ಮತ್ತು ಹಲವು ಭಾಷೆಗಳಲ್ಲಿ ಈ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಸಿಂಗಂ ಅಗೇನ್ ಚಿತ್ರದ ರಿಲೀಸ್ ಅನ್ನು ಮುಂದೂಡಿಕೆ ಮಾಡುವ ಯೋಚನೆ ಮಾಡಲಾಗಿದೆಯಂತೆ.

     

    ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿಂಗಂ ಅಗೇನ್, ಅನೇಕ ಹೆಸರಾಂತ ಕಲಾವಿದರು ಇದ್ದಾರೆ. ಆದರೂ, ರೋಹಿತ್ ಶೆಟ್ಟಿ ತಮ್ಮ ಸಿನಿಮಾವನ್ನು ಪುಷ್ಪ 2 ಎದುರು ರಿಲೀಸ್ ಮಾಡಲು ಮನಸ್ಸು ಮಾಡುತ್ತಿಲ್ಲ ಎನ್ನುವುದು ಬಿಟೌನ್ ಸಮಾಚಾರ.

  • ಅಮೆಜಾನ್ ತೆಕ್ಕೆಗೆ ಕಬ್ಜ: ಭಾರೀ ಮೊತ್ತಕ್ಕೆ ಸೇಲ್ ಆಯಿತು ಆರ್.ಚಂದ್ರು ನಿರ್ದೇಶನದ ಚಿತ್ರ

    ಅಮೆಜಾನ್ ತೆಕ್ಕೆಗೆ ಕಬ್ಜ: ಭಾರೀ ಮೊತ್ತಕ್ಕೆ ಸೇಲ್ ಆಯಿತು ಆರ್.ಚಂದ್ರು ನಿರ್ದೇಶನದ ಚಿತ್ರ

    ಕೆಜಿಎಫ್ ಸಿನಿಮಾದ ನಂತರ ಮತ್ತೊಂದು ಕನ್ನಡದ ಭಾರೀ ಬಜೆಟ್ ಸಿನಿಮಾ ಭಾರೀ ಮೊತ್ತಕ್ಕೆ ಸೇಲ್ ಆಗಿದೆ. ಆರ್.ಚಂದ್ರು ನಿರ್ದೇಶನದ ಕಬ್ಜ (Kabzaa) ಸಿನಿಮಾವನ್ನು ನೂರಾರು ಕೋಟಿ ಕೊಟ್ಟು ಅಮೆಜಾನ್ ಪ್ರೈಮ್ ಖರೀದಿಸಿದ್ದು, ಬಲ್ಲ ಮೂಲಗಳ ಪ್ರಕಾರ ಕೆಜಿಎಫ್ 2 ಸಿನಿಮಾವನ್ನು ಖರೀದಿಸಿದಷ್ಟೇ ಈ ಸಿನಿಮಾವನ್ನೂ ಕೊಂಡುಕೊಳ್ಳಲಾಗಿದೆ. ಹಾಗಾಗಿ ಕನ್ನಡದ ಮತ್ತೊಂದು ಸಿನಿಮಾಗೆ ಡಿಮಾಂಡ್ ಕ್ರಿಯೇಟ್ ಆಗಿದೆ.

    ಅಮೆಜಾನ್ ಪ್ರೈಮ್ ನಲ್ಲಿ ಭಾರತೀಯ ಸಿನಿಮಾ ರಂಗದಲ್ಲೇ ಅತೀ ಹೆಚ್ಚು ಹಣಕೊಟ್ಟು ಖರೀದಿಸಿದ ಸಿನಿಮಾ ಕೆಜಿಎಫ್ 2 ಎಂದು ಬಣ್ಣಿಸಲಾಗಿತ್ತು. ಇದೀಗ ಕಬ್ಜ ಕೂಡ ಅದೇ ಸಾಲಿಗೆ ಸೇರಿದೆ. ಈ ಪ್ರಮಾಣದ ಮೊತ್ತಕ್ಕೆ ಕಬ್ಜ ಸಿನಿಮಾ ಸೇಲ್ ಆಗಿದ್ದಕ್ಕೆ ಮೇಕಿಂಗ್ ಮತ್ತು ಸ್ಟಾರ್ ಗಳ ಕಾಂಬಿನೇಷನ್ ಕಾರಣ ಎಂದು ಹೇಳಲಾಗುತ್ತಿದೆ. ಟೀಸರ್ ಬಿಡುಗಡೆಗೂ ಮುನ್ನವೇ ಹಲವು ಓಟಿಟಿ ವೇದಿಕೆಗಳು ನಿರ್ದೇಶಕರನ್ನು ಸಂಪರ್ಕಿಸಿದ್ದವು. ಆಗ ಹೇಳಿದ ಮೊತ್ತಕ್ಕೂ ಟೀಸರ್ ಬಿಡುಗಡೆಯಾದ ನಂತರ ಆಗಿರುವ ವ್ಯಾಪಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದೂ ಹೇಳಲಾಗುತ್ತಿದೆ. ಇದನ್ನೂ ಓದಿ:ರೂಪೇಶ್‌ಗೆ ಕೊನೆಯುಸಿರು ಇರುವವರೆಗೂ ಪ್ರೀತಿ ಮಾಡುತ್ತೀನಿ ಎಂದ ಸಾನ್ಯ

    ಉಪೇಂದ್ರ (Upendra) ಮತ್ತು ಸುದೀಪ್ (Sudeep) ಕಾಂಬಿನೇಷನ್ ಕಬ್ಜ ಸಿನಿಮಾದ ಟೀಸರ್ ರಿಲೀಸ್ ಆದ ನಂತರ, ಈ ಸಿನಿಮಾವನ್ನೂ ಕೆಜಿಎಫ್ ಚಿತ್ರಕ್ಕೆ ಹೋಲಿಸಲಾಗುತ್ತಿದೆ. ಅದ್ಧೂರಿ ಮೇಕಿಂಗ್, ಸ್ಟಾರ್ ನಟರ ಸಮಾಗಮಾ, ಆರ್.ಚಂದ್ರು (R. Chandru) ಅವರ ಈವರೆಗೂ ಸಕ್ಸಸ್ ಮತ್ತು ಸಿನಿಮಾದ ಗುಣಮಟ್ಟದ ಕಾರಣದಿಂದಾಗಿ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಕಬ್ಜಗೆ ಬೇಡಿಕೆ ಹೆಚ್ಚಾಗಿದೆ. ಈ ಕಾರಣದಿಂದಾಗಿಯೇ ಒಂಬತ್ತು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರಲಿದೆ.

    ಸಿನಿ ಪಂಡಿತರ ಲೆಕ್ಕಾಚಾರದಂತೆ ಕಬ್ಜ ಸಿನಿಮಾ ಕೂಡ ಭಾರತೀಯ ಸಿನಿಮಾ ರಂಗದಲ್ಲಿ ದಾಖಲೆ ಬರೆಯಲಿದೆ ಎಂದು ಅಂದಾಜಿಸಲಾಗಿದೆ. ದೇಶ ಮತ್ತು ವಿದೇಶಗಳಲ್ಲಿ ಸೇರಿ ಸಾವಿರಾರು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಕೂಡ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಹಲವು ಅಚ್ಚರಿಗಳನ್ನು ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ ನಿರ್ದೇಶಕರು. ಸಿನಿಮಾಗೆ ಭಾರೀ ಬೇಡಿಕೆ (Demand) ಬಂದ ಕಾರಣದಿಂದಾಗಿ ಸದ್ಯ ನಿರ್ದೇಶಕರು ಮುಂಬೈನಲ್ಲಿ ಬೀಡು ಬಿಟ್ಟಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]