Tag: digital payment

  • ನ.15 ರಿಂದ ಹೊಸ ಟೋಲ್ ನಿಯಮ – ಫಾಸ್ಟ್‌ಟ್ಯಾಗ್ ಇಲ್ಲದವರಿಗೆ‌ ಗುಡ್‌ನ್ಯೂಸ್‌, UPI ಪಾವತಿದಾರರಿಗೆ ಭಾರೀ ರಿಯಾಯಿತಿ

    ನ.15 ರಿಂದ ಹೊಸ ಟೋಲ್ ನಿಯಮ – ಫಾಸ್ಟ್‌ಟ್ಯಾಗ್ ಇಲ್ಲದವರಿಗೆ‌ ಗುಡ್‌ನ್ಯೂಸ್‌, UPI ಪಾವತಿದಾರರಿಗೆ ಭಾರೀ ರಿಯಾಯಿತಿ

    ನವದೆಹಲಿ: ಟೋಲ್ (Toll) ಪಾವತಿಗಳಿಗೆ ಸಂಬಂಧಿಸಿದಂತೆ ಡಿಜಿಟಲ್‌ ಪಾವತಿಯನ್ನ ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಮತ್ತೊಂದು ಹೊಸ ನಿಯಮ ಪರಿಚಯಿಸಿದೆ. ಇದರಿಂದ ಫಾಸ್ಟ್‌ಟ್ಯಾಗ್‌ ಹೊಂದಿಲ್ಲದವರು ಯುಪಿಐ ಪಾವತಿ ಮೂಲಕವೂ ರಿಯಾಯಿತಿ ಗಳಿಸಬಹುದಾಗಿದೆ. ನವೆಂಬರ್‌ 15ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ.

    ಸಹೌದು. ಫಾಸ್ಟ್‌ ಟ್ಯಾಗ್‌ (FASTag) ಹೊಂದದೇ ಇರುವ ವಾಹನಗಳು ನವೆಂಬರ್ 15ರಿಂದ ನಗದುರೂಪದಲ್ಲಿ ಟೋಲ್ ಶುಲ್ಕ ಪಾವತಿಸಲು ಬಯಸಿದ್ರೆ ಅವು ಎರಡುಪಟ್ಟು ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಆದ್ರೆ ಯುಪಿಐ (UPI) ರೂಪದಲ್ಲಿ ಶುಲ್ಕ ಪಾವತಿಸುವವರಿಗೆ ನಿಗದಿಗಿಂತ 1.25 ಪಟ್ಟು ಅಧಿಕ ಶುಲ್ಕ ವಿಧಿಸಲಾಗುತ್ತದೆ. ಇದನ್ನೂ ಓದಿ: ಮುಂಬೈಗೆ ಸೈಕ್ಲೋನ್ `ಶಕ್ತಿʼಯ ಭೀತಿ – ಸೋಮವಾರ ಗುಜರಾತ್‌ಗೂ ಅಪ್ಪಳಿಸಲಿದೆ ಚಂಡಮಾರುತ

    ಫಾಸ್ಟ್‌ಟ್ಯಾಗ್‌ ಬಳಕೆದಾರರಲ್ಲದವರಿಗೆ ಅವರ ಟೋಲ್ ಶುಲ್ಕ (Toll) ಪಾವತಿಯ ವಿಧಾನವನ್ನ ಆಧರಿಸಿ ವಿಭಿನ್ನ ಶುಲ್ಕಗಳನ್ನು ವಿಧಿಸಲು ರಸ್ತೆ ಸಾರಿಗೆ ಹಾಗೂ ಹೆದ್ದಾರಿ (MORTH) ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಹಾಗೂ ಆದಾಯ ನಿರ್ಧಾರ) ನಿಯಮಗಳು, 2008 ಅನ್ನು ತಿದ್ದುಪಡಿಗೊಳಿಸಿದೆ. ಟೋಲ್‌ ಪ್ಲಾಜಾಗಳಲ್ಲಿ (Toll Plaza) ಡಿಜಿಟಲ್ ಪಾವತಿ ಉತ್ತೇಜಿಸುವುದು ಹಾಗೂ ನಗದು ಬಳಕೆಯನ್ನು ಕಡಿಮೆಗೊಳಿಸುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಇಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

    ನವೆಂಬರ್‌ 15ರಿಂದ ನಿಯಮ ಜಾರಿ
    ಟೋಲ್‌ ಪ್ಲಾಜಾಗಳಲ್ಲಿ ನಗದು ವಹಿವಾಟು ಕಡಿಮೆಮಾಡಲು ಈ ಬದಲಾವಣೆ ತರಲಾಗಿದ್ದು, ನವೆಂಬರ್‌ 15ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಅಲ್ಲದೇ ಡಿಜಿಟಲ್‌ ಪಾವತಿ ಮಾಡುವುದರಿಂದ ಪಾರದರ್ಶಕತೆ ಕಾಯ್ದುಕೊಳ್ಳುವ ಜೊತೆಗೆ ವಾಹನ ದಟ್ಟಣೆಯೂ ಕಡಿಮೆಯಾಗಲಿದೆ, ಹೆದ್ದಾರಿ ಬಳಕೆದಾರರ ಪ್ರಯಾಣ ಸಮಯ ಉಳಿತಾಯ ಕೂಡ ಮಾಡಬಹುದಾಗಿದೆ. ಇದನ್ನೂ ಓದಿ: ಕಂದಮ್ಮಗಳ ಜೀವ ತೆಗೆದ ಕೆಮ್ಮಿನ ಸಿರಪ್ – ಕೇಂದ್ರ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ

    ಉದಾಹರಣೆಗೆ
    ಫಾಸ್ಟ್‌ಟ್ಯಾಗ್ ಮೂಲಕ ವಾಹನದ ಟೋಲ್ ಶುಲ್ಕ 100 ರೂ. ಆಗಿದ್ದರೆ, ನಗದು ರೂಪದಲ್ಲಿ ಪಾವತಿಸಿದರೆ 200 ರೂ. ಆಗುತ್ತದೆ, ಆದರೆ UPI ಮೂಲಕ ಡಿಜಿಟಲ್ ಆಗಿ ಪಾವತಿಸಿದರೆ 125 ರೂ. ಮಾತ್ರ ಆಗುತ್ತದೆ. ಇದರರ್ಥ ನವೆಂಬರ್ 15 ರಿಂದ FASTag ಅಲ್ಲದ ಬಳಕೆದಾರರು UPI ಮೂಲಕ ಪಾವತಿ ಮಾಡಿದ್ರೆ 100 ರೂ.ನಲ್ಲಿ 75 ರೂ. ಉಳಿತಾಯ ಮಾಡಬಹುದಾಗಿದೆ. ಇದನ್ನೂ ಓದಿ: ಬಿಹಾರದಲ್ಲಿ ವಿಧಾನಸಭೆ ಚುನಾವಣೆ; ತಯಾರಿ ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗ

  • ಗೂಗಲ್ ಪೇ, ಫೋನ್‌ಪೇ & ಪೇಟಿಎಂ ಬಳಕೆದಾರರಿಗೆ ಸೂಚನೆ – ಏ.1ರಿಂದ ಕೆಲವು ಮೊಬೈಲ್ ಸಂಖ್ಯೆಗಳಲ್ಲಿ ಯುಪಿಐ ಪಾವತಿ ಸಮಸ್ಯೆ

    ನವದೆಹಲಿ: ಜನಪ್ರಿಯ ಯುಪಿಐ ಪಾವತಿ ಆ್ಯಪ್‌ಗಳಾದ ಗೂಗಲ್ ಪೇ, ಫೋನ್‌ಪೇ ಮತ್ತು ಪೇಟಿಎಂ ಬಳಕೆದಾರರಿಗೆ ಒಂದು ಪ್ರಮುಖ ಅಪ್‌ಡೇಟ್ ಬಂದಿದೆ. ಇದೇ ಏ.1ರಿಂದ ಕೆಲವು ಮೊಬೈಲ್ ಸಂಖ್ಯೆಗಳಲ್ಲಿ ಯುಪಿಐ (UPI) ಪಾವತಿ ಮಾಡುವಾಗ ಸಮಸ್ಯೆ ಎದುರಾಗಬಹುದು ಎಂದು ತಿಳಿದು ಬಂದಿದೆ.

    ಈ ಬಗ್ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಬ್ಯಾಂಕ್‌ಗಳು ಮತ್ತು ಯುಪಿಐ ಅಪ್ಲಿಕೇಶನ್‌ಗಳಿಗೆ “ನಿಷ್ಕ್ರಿಯ ಮೊಬೈಲ್ ಸಂಖ್ಯೆ”ಗಳನ್ನು ತಮ್ಮ ವ್ಯವಸ್ಥೆಯಿಂದ ತೆಗೆದುಹಾಕಲು ಸೂಚನೆ ನೀಡಿದೆ. ದೀರ್ಘಕಾಲದಿಂದ ಸಕ್ರಿಯವಾಗಿಲ್ಲದ ಮೊಬೈಲ್ ಸಂಖ್ಯೆಗಳನ್ನು ಯುಪಿಐಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಿಂದ ತೆಗೆದುಹಾಕಬೇಕು ಎಂದು ಹೇಳಿದೆ.ಇದನ್ನೂ ಓದಿ:ಪ್ರಭಾಸ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌- ‌’ಕಲ್ಕಿ2898 ಎಡಿ’ ಸೀಕ್ವೆಲ್‌ ಬಗ್ಗೆ ಹೊರಬಿತ್ತು ಬಿಗ್‌ ಅಪ್‌ಡೇಟ್

    ಈ ನಿರ್ಧಾರದಿಂದಾಗಿ ಏ.1 ರಿಂದ ಅಂತಹ ಮೊಬೈಲ್ ಸಂಖ್ಯೆಗಳ ಮೂಲಕ ಯುಪಿಐ ಪಾವತಿಗಳು ಸ್ಥಗಿತಗೊಳ್ಳಲಿವೆ. ಸೈಬರ್ ಕ್ರೈಂಗಳ ಹೆಚ್ಚಳ ಮತ್ತು ತಾಂತ್ರಿಕ ದೋಷಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎನ್‌ಪಿಸಿಐ ತಿಳಿಸಿದೆ. ಒಂದು ವೇಳೆ ಟೆಲಿಕಾಂ ಸೇವಾ ಒದಗಿಸುವವರು ಈ ನಿಷ್ಕ್ರಿಯ ಸಂಖ್ಯೆಗಳನ್ನು ಬೇರೆಯವರಿಗೆ ಮರು ಹಂಚಿಕೆ ಮಾಡಿದರೆ, ಅದು ವಂಚನೆಗೆ ಕಾರಣವಾಗಬಹುದು ಎಂದು ಎನ್‌ಪಿಸಿಐ ಎಚ್ಚರಿಸಿದೆ.

    ಹೀಗಾಗಿ ಬಳಕೆದಾರರು ತಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಸಕ್ರಿಯವಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ. ಯುಪಿಐ ವಹಿವಾಟುಗಳಲ್ಲಿ ಮೊಬೈಲ್ ಸಂಖ್ಯೆಯು ಪ್ರಮುಖ ಗುರುತಿನ ಚಿಹ್ನೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹಣವು ಸರಿಯಾದ ಫಲಾನುಭವಿಗೆ ತಲುಪುವುದನ್ನು ಖಾತ್ರಿಪಡಿಸುತ್ತದೆ ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದೆ.

    ಈ ಹೊಸ ನಿಯಮದ ಪ್ರಕಾರ, ಬ್ಯಾಂಕ್‌ಗಳು ಮತ್ತು ಯುಪಿಐ ಅಪ್ಲಿಕೇಶನ್‌ಗಳು ಪ್ರತಿ ವಾರ ನಿಷ್ಕ್ರಿಯ ಸಂಖ್ಯೆಗಳ ಪಟ್ಟಿಯನ್ನು ನವೀಕರಿಸಬೇಕು ಎಂದು ಎನ್‌ಪಿಸಿಐ ಸೂಚಿಸಿದೆ. ಬಳಕೆದಾರರು ತಮ್ಮ ಯುಪಿಐ ಸೇವೆಗಳಲ್ಲಿ ಯಾವುದೇ ಅಡಚಣೆ ಎದುರಾಗದಂತೆ ತಮ್ಮ ಸಕ್ರಿಯ ಮೊಬೈಲ್ ಸಂಖ್ಯೆಯನ್ನು ಖಾತೆಗೆ ಲಿಂಕ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಲು ಕೋರಲಾಗಿದೆ.ಇದನ್ನೂ ಓದಿ: ಅಧಿಕಾರಕ್ಕಾಗಿ ಚಮಚಾಗಿರಿ ಮಾಡೋರಿಗೆ ಮಂಡ್ಯ ಜನರ ಬಗ್ಗೆ ಮಾತಾಡೋ ಯೋಗ್ಯತೆ ಇಲ್ಲ: ಡಿಕೆಶಿಗೆ ಅಶೋಕ್ ಟಾಂಗ್

  • ಕ್ಯೂಆರ್ ಕೋಡ್‌ಗೆ ಭರ್ಜರಿ ರೆಸ್ಪಾನ್ಸ್ – ಬಿಎಂಟಿಸಿಗೆ ಒಂದು ದಿನಕ್ಕೆ 1 ಕೋಟಿ ರೂ. ಆದಾಯ

    ಕ್ಯೂಆರ್ ಕೋಡ್‌ಗೆ ಭರ್ಜರಿ ರೆಸ್ಪಾನ್ಸ್ – ಬಿಎಂಟಿಸಿಗೆ ಒಂದು ದಿನಕ್ಕೆ 1 ಕೋಟಿ ರೂ. ಆದಾಯ

    – 16 ದಿನಗಳಲ್ಲಿ 16 ಕೋಟಿ ರೂ. ಆದಾಯ

    ಬೆಂಗಳೂರು: ಈಗೇನಿದ್ದರೂ ಡಿಜಿಟಲ್ ಜಮಾನ. ಅದರಂತೆ ಬಿಎಂಟಿಸಿ ಸಹ ಡಿಜಿಟಲ್ ಪೇಮೆಂಟ್ (Digital Payment) ಮೊರೆ ಹೋಗಿದ್ದು, ಬಿಎಂಟಿಸಿಯ ಆರು ಸಾವಿರ ಬಸ್‌ಗಳಲ್ಲೂ ಕ್ಯೂಆರ್ ಸಿಸ್ಟಮ್ ಮೂಲಕ ಟಿಕೆಟ್ ಪೇಮೆಂಟ್ ನೀಡುವ ವ್ಯವಸ್ಥೆ ಜಾರಿ ಮಾಡಿದೆ. ಈ ಕ್ಯೂಆರ್ ಕೋಡ್ (QR Code) ಸಿಸ್ಟಮ್‌ಗೆ ಬಿಎಂಟಿಸಿ (BMTC) ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

    ಒಂದು ದಿನಕ್ಕೆ ಕ್ಯೂಆರ್ ಕೋಡ್ ಮೂಲಕ ಬಿಎಂಟಿಸಿಗೆ ಒಂದು ಕೋಟಿ ರೂ. ಆದಾಯ ಗಳಿಸುತ್ತಿದೆ. ಆನ್‌ಲೈನ್ ಕ್ಯೂಆರ್ ಕೋಡ್ ಮೂಲಕ ಬಿಎಂಟಿಸಿ ಫೆಬ್ರವರಿ 1-16ರವರೆಗೆ 16 ಕೋಟಿ ರೂ. ಆದಾಯ ಪಡೆದಿದೆ. ಕೋವಿಡ್ ನಂತರ 2021ರಿಂದ ಬಿಎಂಟಿಸಿ ಬಸ್‌ಗಳಲ್ಲಿ ಡಿಜಿಟಲ್ ಪೇಮೆಂಟ್ ಜಾರಿ ಮಾಡಿದ್ದು, ವಾಯುವಜ್ರ ಹಾಗೂ ವಜ್ರ ಬಸ್‌ಗಳ ಪ್ರಯಾಣಿಕರು ಹೆಚ್ಚು ಡಿಜಿಟಲ್ ಪೇಮೆಂಟ್ ಬಳಸುತ್ತಿದ್ದಾರೆ. 2024ರಲ್ಲಿ ಕ್ಯೂಆರ್ ಕೋಡ್‌ನಿಂದ 100 ಕೋಟಿ ರೂ. ಆದಾಯ ಬಂದಿದೆ. ಇದನ್ನೂ ಓದಿ: ಸ್ಯಾಮ್‌ ಪಿತ್ರೋಡಾ ಮತ್ತೊಮ್ಮೆ ವಿವಾದ – ಬಿಜೆಪಿಯಿಂದ ಖಂಡನೆ.. ಅಂತರ ಕಾಯ್ದುಕೊಂಡ ಕಾಂಗ್ರೆಸ್

    ಇತ್ತೀಚೆಗೆ ಜನವರಿ 5ರಿಂದ ಬಸ್ ದರ ಏರಿಕೆಯಾದಾಗಿನಿಂದ ಚಿಲ್ಲರೆ ಸಮಸ್ಯೆ ತಪ್ಪಿಸಲು ಹೆಚ್ಚು ಜನ ಡಿಜಿಟಲ್ ಪೇಮೆಂಟ್ ಗೆ ಮೊರೆ ಹೋಗಿದ್ದಾರೆ. ಇದ್ರಿಂದ ಕಂಡಕ್ಟರ್ & ಪ್ರಯಾಣಿಕರು ಇಬ್ಬರೂ ನಿರಾಳವಾಗಿದ್ದಾರೆ.ಕ್ಯೂ ಆರ್ ಕೋಡ್ ಮೂಲಕ ಬಿಎಂಟಿಸಿಯ ಒಟ್ಟು ಆದಾಯದಲ್ಲಿ ಶೇಕಡಾ 35% ಆದಾಯ ಬರುತ್ತಿದೆ ಅಂತಾ ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ ರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ಬ್ಯಾನ್ ಆದ ಚೀನಿ ಡ್ರೋನ್ ಹಾರಿಸಿ ವಿವಾದ ಮೈಮೇಲೆ ಎಳೆದುಕೊಂಡ ರಾಹುಲ್ ಗಾಂಧಿ

  • ಡಿಜಿಟಲ್ ಪೇಮೆಂಟ್‌ನಲ್ಲಿ ಬೆಂಗಳೂರಿಗರೇ ಫಸ್ಟ್ – ಸೆಪ್ಟೆಂಬರ್‌ನಲ್ಲಿ ಬಿಎಂಟಿಸಿಗೆ ಬರೋಬ್ಬರಿ 8 ಕೋಟಿ ಆದಾಯ

    ಡಿಜಿಟಲ್ ಪೇಮೆಂಟ್‌ನಲ್ಲಿ ಬೆಂಗಳೂರಿಗರೇ ಫಸ್ಟ್ – ಸೆಪ್ಟೆಂಬರ್‌ನಲ್ಲಿ ಬಿಎಂಟಿಸಿಗೆ ಬರೋಬ್ಬರಿ 8 ಕೋಟಿ ಆದಾಯ

    – ತಿಂಗಳಿಗೆ ಒಂದು ಲಕ್ಷ ಡಿಜಿಟಲ್ ಪಾಸ್ ಸೇಲ್

    ಬೆಂಗಳೂರು: ಈಗೇನಿದ್ದರೂ ಡಿಜಿಟಲ್ ಜಮಾನ. ಬೆಳಗ್ಗೆ ಎದ್ದಾಗಿನಿಂದ ಮಲಗೋವರೆಗೂ ಎಲ್ಲವೂ ಆನ್‌ಲೈನ್, ಡಿಜಿಟಲ್ ಮಯ. ಯಾವುದೇ ವಸ್ತುಗಳನ್ನು ಕೊಳ್ಳಬೇಕಾದರೂ ಆನ್‌ಲೈನ್ ಪೇಮೆಂಟ್ ಮಾಡುತ್ತೇವೆ. ಹೀಗಾಗಿ ಬಿಎಂಟಿಸಿ ಬಸ್‌ಗಳಲ್ಲಿಯೂ ಡಿಜಿಟಲ್ ಪೇಮೆಂಟ್ (Digital Payment) ವ್ಯವಸ್ಥೆ ಜಾರಿ ಮಾಡಿದ್ದು, ಈ ಆನ್‌ಲೈನ್ ಪೇಮೆಂಟ್‌ಗೆ ಬೆಂಗಳೂರಿಗರಿಂದ ಭರ್ಜರಿ ರೆಸ್ಪಾನ್ಸ್ ದೊರೆತಿದೆ.

    ಬೆಂಗಳೂರಿಗರ (Bengaluru) ಪ್ರಮುಖ ಸಂಚಾರನಾಡಿ ಅಂದರೆ ಅದು ಬಿಎಂಟಿಸಿ (BMTC) ಬಸ್‌ಗಳು. ಪ್ರತಿನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸುತ್ತಾರೆ. ಬಿಎಂಟಿಸಿಯಲ್ಲಿ ಕ್ಯಾಶ್‌ಲೆಸ್ ಪೇಮೆಂಟ್‌ಗೆ ಒತ್ತುಕೊಟ್ಟಿದ್ದು, 2020ರಿಂದ ಡಿಜಿಟಲ್ ಪೇಮೆಂಟ್, ಕ್ಯೂಆರ್ ಕೋಡ್ ಸಿಸ್ಟಮ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಪ್ರಾರಂಭಿಕ ಹಂತದಲ್ಲಿ ಅಷ್ಟಾಗಿ ಜನ ಡಿಜಿಟಲ್ ಪೇಮೆಂಟ್ ಅಥವಾ ಯುಪಿಐ ಪೇಮೆಂಟ್ ಅನ್ನು ಬಳಸುತ್ತಿರಲಿಲ್ಲ. ವರ್ಷದಿಂದ ವರ್ಷಕ್ಕೆ ಡಿಜಿಟಲ್ ಪೇಮೆಂಟ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ಸೆಪ್ಟೆಂಬರ್ ಒಂದು ತಿಂಗಳಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ 16.5 ಲಕ್ಷ ಜನರು ಡಿಜಿಟಲ್ ಪೇಮೆಂಟ್ ಬಳಸಿದ್ದಾರೆ. ಈ 16.5 ಲಕ್ಷ ಜನರಿಂದ ಬರೋಬ್ಬರಿ ಎಂಟು ಕೋಟಿಗಿಂತ ಹೆಚ್ಚು ಆದಾಯವಾಗಿದೆ. ಅದರಲ್ಲೂ ಬಿಎಂಟಿಸಿಯ ಎಸಿ ವಜ್ರ, ವಾಯುವಜ್ರ ಬಸ್‌ಗಳಲ್ಲಿ 40% ಜನರು ಕ್ಯೂಆರ್ ಕೋಡ್ ಬಳಸಿ ಟಿಕೆಟ್ ದುಡ್ಡು ನೀಡುತ್ತಿದ್ದಾರೆ. ಪ್ರಯಾಣಿಕರು ಕಂಡಕ್ಟರ್ ಕೊರಳಿನಲ್ಲಿರುವ ಕ್ಯೂಆರ್ ಕೋಡಿಗೆ ಸ್ಕ್ಯಾನ್ ಮಾಡಿ ಪೇ ಮಾಡುತ್ತಿದ್ದಾರೆ. ಇದನ್ನೂ ಓದಿ: BBMP ವ್ಯಾಪ್ತಿಯ 110 ಹಳ್ಳಿ ಜನರ ಕನಸು ಶೀಘ್ರ ನನಸು – ಮುಂದಿನ ವಾರದಲ್ಲೇ ಮನೆಗಳಿಗೆ ಬರಲಿದೆ ಕಾವೇರಿ!

    ಇದರ ಜೊತೆಗೆ ಡಿಜಿಟಲ್ ಪಾಸ್ ಕೊಳ್ಳುವವರ ಸಂಖ್ಯೆ ಸಹ ಹೆಚ್ಚಾಗಿದೆ. ಒಂದು ತಿಂಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ತಿಂಗಳ ಪಾಸ್‌ಗಳು ಸೇಲ್ ಆಗಿವೆ. ಅದರಲ್ಲಿ 25,000 ಪಾಸ್‌ಗಳು ಬಿಎಂಟಿಸಿಯ ಆಪ್ ಮೂಲಕವೇ ಪ್ರಯಾಣಿಕರು ತೆಗೆದುಕೊಳ್ಳುತ್ತಿದ್ದಾರೆ. ಪ್ರತಿ ನಾಲ್ಕರಲ್ಲಿ ಒಬ್ಬರು ಪಾಸ್ ಅನ್ನು ಡಿಜಿಟಲ್ ಮೂಲಕ ತೆಗೆದುಕೊಳ್ಳುತ್ತಿದ್ದಾರೆ. ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಆನ್‌ಲೈನ್ ಮೂಲಕವೇ ಹೆಚ್ಚು ಪಾಸ್ ಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮತ್ತೆ ಕ್ಯಾಂಪಸ್‌ ನೇಮಕಾತಿ ಆರಂಭಿಸಿದ ಭಾರತೀಯ ಐಟಿ ಕಂಪನಿಗಳು

    ಇನ್ನೂ ಈ ಡಿಜಿಟಲ್ ಪೇಮೆಂಟ್‌ನಿಂದ ಚಿಲ್ಲರೆ ಸಮಸ್ಯೆ ನಿವಾರಣೆಯಾಗಲಿದೆ. ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವಿನ ವಾಗ್ವಾದ ಕೂಡ ತಪ್ಪಲಿದೆ. ಪ್ರಯಾಣಿಕರು ಇದೊಂದು ಒಳ್ಳೆಯ ಕ್ರಮ ಎನ್ನುತ್ತಾರೆ. ಒಟ್ಟಿನಲ್ಲಿ ಬಿಎಂಟಿಸಿಯ ಕ್ಯಾಶ್‌ಲೆಸ್ ಪೇಮೆಂಟ್ ವ್ಯವಸ್ಥೆಯಿಂದ ಬಿಎಂಟಿಸಿಯ ಅದಾಯ ಹೆಚ್ಚಾಗುತ್ತಿದೆ. ಇದನ್ನೂ ಓದಿ: ಲೆಬನಾನ್ ಪೇಜರ್ ಸ್ಫೋಟದ ಹಿಂದೆ ಟ್ಯಾಲೆಂಟೆಡ್ ಬ್ಯೂಟಿ!

  • UPI ಸಾಧನೆ – 5 ವರ್ಷದಲ್ಲಿ 92 ಕೋಟಿಯಿಂದ 8,375 ಕೋಟಿ ವಹಿವಾಟು ಏರಿಕೆ

    UPI ಸಾಧನೆ – 5 ವರ್ಷದಲ್ಲಿ 92 ಕೋಟಿಯಿಂದ 8,375 ಕೋಟಿ ವಹಿವಾಟು ಏರಿಕೆ

    ನವದೆಹಲಿ: ಆನ್‌ಲೈನ್ ಪಾವತಿ ಕಷ್ಟ, ಗ್ರಾಮೀಣ ಭಾಗದಲ್ಲಿ ಯುಪಿಐ ಪಾವತಿ ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದ ಮಂದಿಗೆ ಭಾರತ ಜನ ತಿರುಗೇಟು ನೀಡಿದ್ದಾರೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಡಿಜಿಟಲ್ ಪಾವತಿಗಳಲ್ಲಿ ಗಣನೀಯ ಏರಿಕೆಯಾಗಿದ್ದು, ಕೇವಲ 5 ವರ್ಷದಲ್ಲಿ ವಹಿವಾಟು 92 ಕೋಟಿಯಿಂದ 8,375 ಕೋಟಿಗೆ ಏರಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.

    ಲೋಕಸಭೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ, ಯುಪಿಐ ಪಾವತಿಗಳ ಗಣನೀಯ ವಿಸ್ತರಣೆಯಿಂದಾಗಿ ಕಳೆದ ಆರ್ಥಿಕ ವರ್ಷದಲ್ಲಿ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಬೆಳವಣಿಗೆಯನ್ನು 7.8%ಕ್ಕೆ ಇಳಿಸಲು ಸಹಾಯ ಮಾಡಿದೆ ಎಂದು ತಿಳಿಸಿದೆ.

    ಈ ಬಗ್ಗೆ ಲೋಕಸಭೆಗೆ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕೆ ಕರದ್ ಲಿಖಿತ ಉತ್ತರ ನೀಡಿದ್ದಾರೆ. ಯುಪಿಐ ವಹಿವಾಟುಗಳು ಗಣನೀಯ ಬೆಳವಣಿಗೆಯನ್ನು ಕಂಡಿದೆ. ಆರ್ಥಿಕ ವರ್ಷ 2017-18ರಲ್ಲಿ 92 ಕೋಟಿ ಇದ್ದರೆ 2022-23 ಆರ್ಥಿಕ ವರ್ಷದಲ್ಲಿ ವಹಿವಾಟು 8,375 ಕೋಟಿಗೆ ಏರಿಕೆಯಾಗಿದೆ. ಇದರಿಂದ ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರ (CAGR) 147% ಕ್ಕೆ ಏರಿಕೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.

    ಅದೇ ರೀತಿಯಲ್ಲಿ ಯುಪಿಐ ವಹಿವಾಟಿನ ಮೌಲ್ಯ ಆರ್ಥಿಕ ವರ್ಷ 2017-18ರಲ್ಲಿ 1 ಲಕ್ಷ ಕೋಟಿ ರೂ. ಯಿಂದ ಆರ್ಥಿಕ ವರ್ಷ 2022-23ರಲ್ಲಿ 137 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಸಿಎಜಿಆರ್ 168% ಏರಿಕೆಯನ್ನು ತೋರಿಸುತ್ತದೆ. ಇದನ್ನೂ ಓದಿ: ಮದ್ದೂರಿನ ವ್ಯಕ್ತಿಯೋರ್ವನಿಗೆ ಕೊರೊನಾ – ಮಂಡ್ಯದಲ್ಲಿ ವರ್ಷದ ಮೊದಲ ಕೇಸ್ ಪತ್ತೆ

    ಪ್ರಸಕ್ತ ಹಣಕಾಸು ವರ್ಷದಲ್ಲಿ ಡಿಸೆಂಬರ್ 11 ರವರೆಗೆ ಯುಪಿಐ 8,572 ಕೋಟಿ ವಹಿವಾಟುಗಳನ್ನು ಸಾಧಿಸಿದೆ. ಡಿಜಿಟಲ್ ಪಾವತಿ ವಹಿವಾಟುಗಳ ಒಟ್ಟಾರೆ ವಿಸ್ತರಣೆಗೆ ಯುಪಿಐ ಪ್ರಾಥಮಿಕ ಚಾಲಕವಾಗಿ ಹೊರಹೊಮ್ಮಿದೆ. ಆರ್ಥಿಕ ವರ್ಷ 2022-23 ರಲ್ಲಿ ಅಂತಹ ವಹಿವಾಟುಗಳಲ್ಲಿ 62% ಒಳಗೊಂಡಿದೆ. ಇದಲ್ಲದೇ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಮೌಲ್ಯದಲ್ಲಿ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯು ಆರ್ಥಿಕ ವರ್ಷ 2021-22 ರಲ್ಲಿ 9.9% ರಿಂದ ಆರ್ಥಿಕ ವರ್ಷ 2022-23 ರಲ್ಲಿ 7.8% ಕ್ಕೆ ಇಳಿದಿದೆ.

    2016 ರಲ್ಲಿ ಪ್ರಾರಂಭವಾದ ಯುಪಿಐ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಡಿಯಲ್ಲಿ ನಿಯಂತ್ರಿತ ಘಟಕವಾದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿMದ (NPCI) ರಚಿಸಲಾದ ತ್ವರಿತ ಪಾವತಿ ವ್ಯವಸ್ಥೆಯಾಗಿದೆ. ತಕ್ಷಣದ ಪಾವತಿ ಸೇವೆಯ ಮೂಲಸೌಕರ್ಯವನ್ನು ಹತೋಟಿಯಲ್ಲಿಟ್ಟುಕೊಂಡು, ಯಾವುದೇ 2 ಬ್ಯಾಂಕ್ ಖಾತೆಗಳ ನಡುವೆ ತಕ್ಷಣ ಹಣ ವರ್ಗಾವಣೆಯನ್ನು ಯುಪಿಐ ಸುಗಮಗೊಳಿಸುತ್ತದೆ. ಇದನ್ನೂ ಓದಿ: ಸ್ವಂತ ಮನೆಯಲ್ಲಿ ಪಿಜಿ ಮಾದರಿ ವಾಸ ಮಾಡ್ತಿದ್ದ ಮನೋರಂಜನ್

  • Paytm ಮುಖ್ಯಸ್ಥರಾಗಿ ವಿಜಯ್ ಶೇಖರ್ ಮರುನೇಮಕ

    Paytm ಮುಖ್ಯಸ್ಥರಾಗಿ ವಿಜಯ್ ಶೇಖರ್ ಮರುನೇಮಕ

    ನವದೆಹಲಿ: ಪೇಟಿಎಂನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾಗಿ ವಿಜಯ್ ಶೇಖರ್ ಅವರನ್ನು ಮರುನೇಮಕಗೊಳಿಸಲಾಗಿದೆ. ವಿಜಯ್ ಶೇಖರ್ ಅವರ ಪರವಾಗಿ ಶೇ.99.67 ರಷ್ಟು ಷೇರುದಾರರು ಮತ ಚಲಾಯಿಸಿದ್ದಾರೆ ಎಂದು ವರದಿಯಾಗಿದೆ.

    ಕಂಪನಿಯ ಶೇರುದಾರರಿಂದ ಬಹುಮತ ಪಡೆದ ವಿಜಯ್ ಶೇಖರ್ ಪೇಟಿಎಂನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾಗಿ ಮುಂದಿನ 5 ವರ್ಷಗಳಿಗೆ ಮರುನೇಮಕಗೊಂಡಿದ್ದಾರೆ. ಇದನ್ನೂ ಓದಿ: ರಕ್ತದೊತ್ತಡ, ಮಧುಮೇಹದ ರಾಜಧಾನಿಯಾಗುತ್ತಿದೆ ಭಾರತ – ಸುಧಾಕರ್ ಆತಂಕ

    ಶೇ.100 ಕ್ಕೆ ತುಂಬಾ ಹತ್ತಿರದಲ್ಲಿ ಮತ ಪಡೆದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ವಿಜಯ್ ಶೇಖರ್, ಇದು ನನ್ನ ನಾಯಕತ್ವದಲ್ಲಿ ಕಂಪನಿಯ ಹೂಡಿಕೆದಾರರು ಎಷ್ಟು ನಂಬಿಕೆ ಇಟ್ಟಿದ್ದಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಕಂಪನಿಯ ಬೆಳವಣಿಗೆ ಹಾಗೂ ಲಾಭದಾಯಕ ಗುರಿಯ ಬಗ್ಗೆ ಅವರು ವಿಶ್ವಾಸ ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಟ್ಟವಿಲ್ಲದಿದ್ದರೂ ನಾನು ನಾಯಕನೇ: ಡೇವಿಡ್ ವಾರ್ನರ್

    Live Tv
    [brid partner=56869869 player=32851 video=960834 autoplay=true]

  • Paytm ನಲ್ಲಿ ಸಮಸ್ಯೆ – ಪಾವತಿ ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ ಬಳಕೆದಾರರು

    Paytm ನಲ್ಲಿ ಸಮಸ್ಯೆ – ಪಾವತಿ ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ ಬಳಕೆದಾರರು

    ನವದೆಹಲಿ: ಡಿಜಿಟಲ್ ಪಾವತಿ ಅಪ್ಲಿಕೇಶನ್ ಪೇಟಿಎಂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹಲವು ಬಳಕೆದಾರರು ದೂರು ನೀಡಿದ್ದಾರೆ. ಅಪ್ಲಿಕೇಶನ್‌ನಲ್ಲಿ ಲಾಗ್‌ಇನ್ ಹಾಗೂ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ವರದಿಯಾಗಿದೆ. ಈ ಸಮಸ್ಯೆಯನ್ನು ಪೇಟಿಎಂ ಕೂಡಾ ಒಪ್ಪಿಕೊಂಡಿದ್ದು, ದೋಷವನ್ನು ಸರಿಪಡಿಸುವುದಾಗಿ ತಿಳಿಸಿದೆ.

    ಪೇಟಿಎಂನ ಸಮಸ್ಯೆ ಬೆಂಗಳೂರು ಸೇರಿದಂತೆ ದೆಹಲಿ, ಮುಂಬೈ, ಅಹಮದಾಬಾದ್, ಚೆನ್ನೈನಂತಹ ಹಲವಾರು ನಗರಗಳಲ್ಲಿ ಬಳಕೆದಾರರು ಎದುರಿಸಿರುವುದಾಗಿ ವರದಿಯಾಗಿದೆ. ದೂರು ನೀಡಿರುವ ಬಳಕೆದಾರರ ಪೈಕಿ ಶೇ.66 ರಷ್ಟು ಜನರು ಲಾಗ್‌ಇನ್ ಸಮಸ್ಯೆಯನ್ನು ಎದುರಿಸಿದ್ದಾರೆ. ಶೇ.5 ರಷ್ಟು ಜನರು ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಉಳಿದ ಶೇ.29 ರಷ್ಟು ಬಳಕೆದಾರರು ಇತರ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇದನ್ನೂ ಓದಿ: ಜಾಹೀರಾತುಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳುವಂತಿಲ್ಲ- ಇರಾನ್‌ನಲ್ಲಿ ಆದೇಶ

    ಬಳಕೆದಾರರು ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಒಪ್ಪಿಕೊಂಡಿರುವ ಪೇಟಿಎಂ, ಅದನ್ನು ಸರಿಪಡಿಸಲು ಕೆಲಸ ಮಾಡುತ್ತಿದೆ ಎಂದಿದೆ. ಪೇಟಿಎಂ ಅಪ್ಲಿಕೇಶನ್‌ನಲ್ಲಿ ಕೆಲವು ಬಳಕೆದಾರರು ಲಾಗ್‌ಇನ್ ಮಾಡುವಲ್ಲಿ ಸಮಸ್ಯೆ ಎದುರಿಸುತ್ತಿರಬಹುದು. ನಾವು ಈಗಾಗಲೇ ಈ ಸಮಸ್ಯೆಯನ್ನು ಶೀಘ್ರವಾಗಿ ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಅದನ್ನು ಸರಿಪಡಿಸಿದ ತಕ್ಷಣವೇ ಅದರ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಟ್ವೀಟ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಅಮೃತ ಮಹೋತ್ಸವಕ್ಕೆ 750 ಗ್ರಾಮೀಣ ಹೆಣ್ಣುಮಕ್ಕಳೇ ತಯಾರಿಸಿದ ಆಜಾದಿ ಉಪಗ್ರಹ ಉಡಾವಣೆ – ಏನಿದರ ವಿಶೇಷತೆ?

    Live Tv
    [brid partner=56869869 player=32851 video=960834 autoplay=true]

  • ನೆಟ್ ಇಲ್ಲದೇ ಮೊಬೈಲಿನಿಂದ ಹಣ ಪಾವತಿಸಿ – ಏನಿದು ಇ-ರುಪೀ?

    ನೆಟ್ ಇಲ್ಲದೇ ಮೊಬೈಲಿನಿಂದ ಹಣ ಪಾವತಿಸಿ – ಏನಿದು ಇ-ರುಪೀ?

    – ಚಾಲನೆ ನೀಡಿದ ಪ್ರಧಾನಿ ಮೋದಿ

    ನವದೆಹಲಿ: ದೇಶದಲ್ಲಿ ಡಿಜಿಟಲೀಕರಣ ಅತೀ ವೇಗವಾಗಿ ಹಬ್ಬುತ್ತಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಪಾವತಿಗೆ ಹೊಸ ಸ್ಪರ್ಶ ನೀಡಲು ಮುಂದಾಗಿದ್ದು, ಇ-ರುಪೀಗೆ ಪ್ರಧಾನಿ  ಚಾಲನೆ ನೀಡಿದ್ದಾರೆ.

    ದೇಶದಲ್ಲಿ ಈಗಾಗಲೇ ಪ್ರತಿ ಕ್ಷೇತ್ರದಲ್ಲಿ ಡಿಜಿಟಲೀಕರಣ ವೇಗ ಪಡೆದುಕೊಂಡಿದೆ. ನೋಟು ಅಮಾನ್ಯದ ಬಳಿಕ ಡಿಜಿಟಲ್ ಪೇಮೆಂಟ್ ಭಾರತದಲ್ಲಿ ಹೊಸ ಬದಲಾವಣೆಯನ್ನು ತಂದಿದೆ. ದೊಡ್ಡ ದೊಡ್ಡ ವ್ಯಾಪಾರಿಯಿಂದ ಹಿಡಿದು ಸಣ್ಣ ವ್ಯಾಪಾರಿ ಕೂಡ ಕ್ಯೂಆರ್ ಕೋಡ್ ಬಳಸಿ ನಗದು ರಹಿತ ವ್ಯವಹಾರ ನಡೆಸುತ್ತಿದ್ದಾರೆ. ಈಗ ಇಂಟರ್‍ ನೆಟ್ ಸಂಪರ್ಕ ಇಲ್ಲದೇ ಹಣವನ್ನು ಕಳುಹಿಸಬಹುದಾದ ಸೇವೆಗೆ ಮೋದಿ ಚಾಲನೆ ನೀಡಿದರು.

    ಏನಿದು ಇ-ರುಪೀ?
    ಡಿಜಿಟಲ್ ಪಾವತಿಯನ್ನು ಸರಳಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಹೊಸ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ. ಇದು ನಗದು ರಹಿತವಾಗಿ, ಇಂಟರ್‍ ನೆಟ್ ಸಂಪರ್ಕವಿಲ್ಲದೆ, ಕ್ಯೂಆರ್ ಕೋಡ್ ಅಥವಾ ಎಸ್‍ಎಂಎಸ್ ಆಧಾರಿತ ಇ-ವೋಚರ್‍ ನ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ. ಇದನ್ನೂ ಓದಿ: ಠಾಣೆಗೆ ಮುತ್ತಿಗೆ ಹಾಕಿದ ಆಫ್ರಿಕಾ ಪ್ರಜೆಗಳ ವಿರುದ್ಧ ಲಾಠಿಚಾರ್ಜ್

    ಯಾರು ಇ-ರುಪೀ ಫಲಾನುಭವಿಗಳಿರುತ್ತಾರೋ ಅವರ ಮೊಬೈಲ್‍ಗೆ ಸಂದೇಶದ ಮೂಲಕ ಕಳುಹಿಸಬಹುದು. ಕಾರ್ಡ್, ಡಿಜಿಟಲ್ ಪಾವತಿ ತಂತ್ರಾಂಶ ಅಥವಾ ಇಂಟರ್ನೆಟ್ ಬ್ಯಾಕಿಂಗ್ ಬಳಸದೇ ಇ-ರುಪೀ ಸಂದೇಶದ ಮೂಲಕ ವೋಚರ್ ಬಳಸಬಹುದಾಗಿದೆ.

    ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದೊಂದಿಗೆ ಈ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.

    ದೇಶದಲ್ಲಿ ಈಗಾಗಲೇ ಕೊರೊನಾದಿಂದಾಗಿ ಶಿಕ್ಷಣ ಕ್ಷೇತ್ರದಲ್ಲೂ ಡಿಜಿಟಲ್ ಬದಲಾವಣೆಗಳು ನಡೆಯುತ್ತಿವೆ. ಇದರೊಂದಿಗೆ ಇದೀಗ ಡಿಜಿಟಲ್ ಕ್ಷೇತ್ರಕ್ಕೆ ಇ-ರುಪೀ ಕಾಲಿಡುತ್ತಿದೆ.

  • ಕೊರೊನಾ ಎಫೆಕ್ಟ್: ಮಂಗಳೂರಿನ ಖಾಸಗಿ ಬಸ್‍ಗಳಲ್ಲಿ ಕ್ಯಾಶ್‍ಲೆಸ್ ಪ್ರಯಾಣ

    ಕೊರೊನಾ ಎಫೆಕ್ಟ್: ಮಂಗಳೂರಿನ ಖಾಸಗಿ ಬಸ್‍ಗಳಲ್ಲಿ ಕ್ಯಾಶ್‍ಲೆಸ್ ಪ್ರಯಾಣ

    – ವಿದೇಶಿ ಮಾದರಿ, ರಾಜ್ಯದಲ್ಲೇ ಪ್ರಥಮ ಪ್ರಯತ್ನ

    ಮಂಗಳೂರು: ಕೊರೊನಾ ಎಫೆಕ್ಟ್‍ನಿಂದಾಗಿ ಮಂಗಳೂರಿನಲ್ಲಿ ಖಾಸಗಿ ಬಸ್‍ಗಳು ಕ್ಯಾಶ್‍ಲೆಸ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಈ ಮೂಲಕ ಸುಗಮ ಪ್ರಯಾಣಕ್ಕೆ ಅನುಕೂಲವಾಗಿದೆ.

    ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರಿನ ಖಾಸಗಿ ಬಸ್‍ಗಳಲ್ಲಿ ಕ್ಯಾಶ್‍ಲೆಸ್ ವ್ಯವಹಾರಕ್ಕೆ ನೂತನ ತಂತ್ರಜ್ಞಾನ ಅಳವಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಚಾರ ನಡೆಸುವುದು ಖಾಸಗಿ ಬಸ್‍ಗಳು. ಆದರೆ ಲಾಕ್‍ಡೌನ್ ನಿಂದ ಎರಡು ತಿಂಗಳುಗಳ ಕಾಲ ಸಂಚಾರ ನಡೆಸದೇ ನಿಂತಿದ್ದ ಖಾಸಗಿ ಬಸ್‍ಗಳು ಮತ್ತೆ ಸಂಚಾರ ಆರಂಭಿಸುತ್ತಿವೆ. ಆದರೆ ಖಾಸಗಿ ಬಸ್‍ಗಳಲ್ಲಿ ಇನ್ನು ಕ್ಯಾಶ್‍ಲೆಸ್ ವಹಿವಾಟು ನಡೆಯಲಿದೆ.

    ಬಸ್‍ನಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಗೆ ಉಚಿತವಾಗಿ ಡಿಜಿಟಲ್ ಕಾರ್ಡ್ ಹಂಚಿಕೆ ಮಾಡಲಾಗುತ್ತಿದೆ. ನಂತರ ಪ್ರಯಾಣಿಕರು ಈ ಕಾರ್ಡ್ ಗೆ ರೀಚಾರ್ಜ್ ಮಾಡಿ ಖಾಸಗಿ ಬಸ್ ಗಳಲ್ಲಿ ಸಂಚಾರ ಮಾಡಬಹುದಾಗಿದೆ. ಪ್ರಯಾಣದ ಸಂದರ್ಭದಲ್ಲಿ ನಿರ್ವಾಹಕರ ಹತ್ತಿರದ ಮೆಷೀನ್ ಗೆ ಕಾರ್ಡ್ ತೋರಿಸಿದರೆ. ಸೆನ್ಸಾರ್ ಮೂಲಕ ಟಿಕೆಟ್ ದರ ಕಡಿತಗೊಳ್ಳುತ್ತದೆ. ಕೊರೊನಾ ವೇಗವಾಗಿ ಹರಡುತ್ತಿರುವ ಈ ಸಂಧರ್ಭದಲ್ಲಿ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಚಿಲ್ಲರೆ ಕಿರಿಕಿರಿ ಕೂಡ ತಪ್ಪಿದಂತಾಗುತ್ತದೆ.

  • ಸ್ವಚ್ಛನಗರಿ ಮೈಸೂರಿನ ಶೌಚಾಲಯದಲ್ಲೂ ಈಗ ಡಿಜಿಟಲ್ ಪೇಮೆಂಟ್

    ಸ್ವಚ್ಛನಗರಿ ಮೈಸೂರಿನ ಶೌಚಾಲಯದಲ್ಲೂ ಈಗ ಡಿಜಿಟಲ್ ಪೇಮೆಂಟ್

    ಮೈಸೂರು: ದೇಶದ ಎಲ್ಲೆಡೆ ಡಿಜಿಟಲ್ ಪೇಮೆಂಟ್‍ನದ್ದೇ ಸದ್ದು. ಅದರಲ್ಲೂ ನೋಟ್ ಬ್ಯಾನ್ ಆದ ಮೇಲಂತೂ ಡಿಜಿಟಲ್ ಪೇಮೆಂಟ್ ದೊಡ್ಡ ಕ್ರಾಂತಿಯ ರೀತಿ ಮಾರ್ಪಟಿದ್ದೆ. ಮೈಸೂರಿನ ಶೌಚಾಲಯದಲ್ಲೂ ಇದೀಗ ಡಿಜಿಟಲ್ ಪೇಮೆಂಟ್ ಶುರುವಾಗಿದೆ.

    ನೋಟ್ ಬ್ಯಾನ್ ಬಳಿಕವಂತೂ ಬೀದಿ ವ್ಯಾಪಾರಿಗಳಿಂದ ಹಿಡಿದು ಚಿಕ್ಕ ಚಿಕ್ಕ ಅಂಗಡಿ ಮಂದಿ ಡಿಜಿಟಲ್ ಪೇಮೆಂಟ್‍ಗೆ ಜೈ ಅಂದಿದ್ರು. ಆದ್ರೆ ಸಾರ್ವಜನಿಕ ಶೌಚಾಲಯಗಳಲ್ಲಿ ಮಾತ್ರ ಚಿಲ್ಲರೆ ಸಮಸ್ಯೆ ಎದುರಾಗಿ ಜನ ಪರದಾಡಿದ್ದಂತೂ ಸತ್ಯ. ಇದರ ಮಧ್ಯೆ ಸ್ವಚ್ಛನಗರಿ ಮೈಸೂರಿನಲ್ಲಿ ಅಪರೂಪದ ಶೌಚಾಲಯವಿದೆ. ಇಲ್ಲಿ ನಿಮಗೆ ಚಿಲ್ಲರೆ ಸಮಸ್ಯೆ ಎದುರಾಗಲ್ಲ. ಕಾರಣ ಈ ಶೌಚಾಲಯ ನಡೆಸುವವರು ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಮೊರೆಹೋಗಿದ್ದಾರೆ. ಶೌಚಾಲಯ ಬಳಸುವವರಿಗಾಗಿ ಪೇಟಿಎಂ ಅಳವಡಿಸಿದ್ದಾರೆ.

    ಮೈಸೂರಿನ ಮಹಾನಗರ ಪಾಲಿಕೆ ಹಿಂಭಾಗದಲ್ಲಿನ ಸಾರ್ವಜನಿಕ ಶೌಚಾಲಯಕ್ಕೆ ನಿತ್ಯ ಬರುವ ನೂರಾರು ಜನರಲ್ಲಿ ಶೇ. 20ರಷ್ಟು ಮಂದಿ ಪೇಟಿಎಂ ಮೂಲಕವೇ ಹಣ ಪಾವತಿ ಮಾಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ಸಾರ್ವಜನಿಕ ಶೌಚಾಲಯಗಳಲ್ಲಿಯೇ ಮೈಸೂರಿನ ಈ ಶೌಚಾಲಯ ಮಾದರಿಯಾಗಿದ್ದು. ಇದನ್ನು ನೋಡಿದ ಇನ್ನಷ್ಟು ಮಂದಿ ಡಿಜಿಟಲ್ ಪೇಮೆಂಟ್‍ನತ್ತ ಒಲವು ತೋರಿದ್ದಾರೆ.