Tag: digital india

  • ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರೋ ಭಾರತೀಯರಿಗೂ ರಕ್ಷಣೆ ಸಿಕ್ತಿದೆ: ಜೈಶಂಕರ್ ಶ್ಲಾಘನೆ

    ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರೋ ಭಾರತೀಯರಿಗೂ ರಕ್ಷಣೆ ಸಿಕ್ತಿದೆ: ಜೈಶಂಕರ್ ಶ್ಲಾಘನೆ

    – ಕೇಂದ್ರ ಸರ್ಕಾರದ ಸಾಧನೆಗಳನ್ನು ಹಾಡಿಹೊಗಳಿದ ವಿದೇಶಾಂಗ ಸಚಿವ

    ಚಿಕ್ಕೋಡಿ: ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿ (Narendra Modi) ದೇಶಕ್ಕೆ ಬಲಿಷ್ಠ ಬುನಾದಿ ಹಾಕಿದ್ದಾರೆ. ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತದ ಪ್ರಜೆಗಳಿಗೂ ರಕ್ಷಣೆ ಸಿಗ್ತಿದೆ ಎಂದು ಭಾರತೀಯ ವಿದೇಶಾಂಗ ಸಚಿವ ಡಾ.ಎಸ್‌ ಜೈಶಂಕರ್ (S Jaishankar) ಶ್ಲಾಘಿಸಿದರು.

    ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಖಾಸಗಿ ಶಾಲೆಯ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೆಲವೇ ವರ್ಷಗಳಲ್ಲಿ ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ದೇಶಗಳ ಪೈಕಿ ಮೊದಲ ಸ್ಥಾನಕ್ಕೆ ಬರಲಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಹಿಮಾಚಲ ಪ್ರದೇಶ: 15 ಬಿಜೆಪಿ ಶಾಸಕರ ಅಮಾನತುಗೊಳಿಸಿದ ಸ್ಪೀಕರ್‌ 

    ಭಾರತದ ಪ್ರಜೆಗಳಿಗೆ ಪ್ರಧಾನಿ ಮೋದಿ ಹಲವಾರು ಯೋಜನೆಗಳನ್ನು ನೀಡಿದ್ದಾರೆ. ಮುದ್ರಾ, ಉಜ್ವಲಾ ಯೋಜನೆ ವಿತರಣೆ ಸೇರಿದಂತೆ ಅನೇಕ ಯೋಜನೆಗಳನ್ನ ನೀಡಿದ್ದಾರೆ. ಭಾರತದಲ್ಲಿ ಡಿಜಿಟಲ್ ಇಂಡಿಯಾ ಅನ್ನೋದು ಬಹಳ ಪ್ರಭಾವ ಬೀರಿದೆ. ಅಮೆರಿಕಕ್ಕಿಂತಲೂ ಭಾರತದಲ್ಲಿ ಡಿಜಿಟಲ್ ಹೆಚ್ಚು ಉಪಯೋಗವಾಗ್ತಿದೆ. ಕೋವಿಡ್‌ ಬಂದಾಗ ಭಾರತ ನಷ್ಟ ಅನುಭವಿಸಲಿದೆ ಎಂದು ಪಾಶ್ಚಿಮಾತ್ಯ ದೇಶಗಳು ಟೀಕಿಸಿದ್ದವು. ವಾಕ್ಸಿನ್ ಅಂತೂ ಬಹಳ ಕಷ್ಟದ ಮಾತಾಗಿತ್ತು. ಆದ್ರೆ ಭಾರತ ತನ್ನ ಪ್ರತಿಯೊಬ್ಬ ಪ್ರಜೆಗೂ ವ್ಯಾಕ್ಸಿನ್ ನೀಡುವಲ್ಲಿ ಯಶಸ್ವಿಯಾಯ್ತು. ಇಂದು ಭಾರತದ ಪ್ರಗತಿ ಹಾಗೂ ಉನ್ನತಿ ಬಗ್ಗೆ ಬಹಳ ಚರ್ಚೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ಹಾಡಿಹೊಗಳಿದರು.

    ಶಿಕ್ಷಣದಿಂದ ಮಾತ್ರ ಒಂದು ದೇಶ ಬಹಳ ಉನ್ನತಿ ಹೊಂದಲು ಸಾಧ್ಯ. ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ಶಿಕ್ಷಣಕ್ಕೆ ಬಹಳ ಪ್ರಾಮುಖ್ಯತೆ ನೀಡಿದೆ. ಪ್ರತಿದಿನ ಭಾರತದಲ್ಲಿ 30 ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತೆ. ವಾರಕ್ಕೊಂದರಂತೆ ಭಾರತದಲ್ಲಿ ಹೊಸ ವಿಶ್ವವಿದ್ಯಾಲಯ ಪ್ರಾರಂಭವಾಗ್ತಿದೆ‌. ಇವೆಲ್ಲವೂ ಸರ್ಕಾರ ಮಾಡಲೇಬೇಕಾದ ಕೆಲಸಗಳು. ಮುಂದಿನ ದಿನಗಳಲ್ಲಿ ಎಲ್ಲವೂ ಡಿಜಿಟಲ್‌ ಆಗಲಿದೆ. ಈಗಾಗಲೇ ಕೃತಕ ಬುದ್ಧಿಮತ್ತೆ ತಾಂತ್ರಿಕತೆ, ಎಲೆಕ್ಟ್ರಿಕಲ್‌ ವಾಹನ ಈ ಜನರೇಷನ್‌ನ ನಾಡಿಮಿಡಿತವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕೇವಲ 100 ರೂ. ಕ್ಯಾನ್ಸರ್‌ಗೆ ಚಿಕಿತ್ಸೆ – ಟಾಟಾ ಸಂಸ್ಥೆಯಿಂದ ಮಾತ್ರೆ ಅಭಿವೃದ್ಧಿ

    ಭಾರತದಲ್ಲಿ ಮೊದಲು 77 ಪಾಸ್‌ಪೋರ್ಟ್ ಕೇಂದ್ರಗಳಿದ್ದವು. ಈಗ 575 ಪಾಸ್‌ಪೋರ್ಟ್ ಕೇಂದ್ರಗಳಿವೆ. ಕೋಟ್ಯಂತರ ಜನರು ವಿದೇಶಗಳಲ್ಲಿ ನೆಲೆಸಿದ್ದಾರೆ‌. ಅವರೆಲ್ಲರನ್ನು ವಂದೇ ಭಾರತ ಎಂಬ ವೇದಿಕೆಯಡಿಯಲ್ಲಿ ಒಗ್ಗೂಡಿಸಲಾಗಿದೆ. ವಿದೇಶಗಳಲ್ಲಿ ಅನೇಕ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದೇಶಗಳಲ್ಲಿ ನೆಲೆಸುವ ಪ್ರತಿಯೊಬ್ಬ ಭಾರತೀಯನನ್ನ ಕಾಪಾಡುವುದು ನಮ್ಮ ಕರ್ತವ್ಯ. ಪ್ರಧಾನಿ ಮೋದಿ ಸರ್ಕಾರದಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತದ ಪ್ರಜೆಗಳಿಗೂ ರಕ್ಷಣೆ ಸಿಗ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಹಿಳೆಯರು ಏನನ್ನು ಧರಿಸಬೇಕು ಅನ್ನೋದು ಅವರ ವೈಯಕ್ತಿಕ ವಿಚಾರ – ಹಿಜಬ್‌ ಬಗ್ಗೆ ಕೇಳಿದ್ದಕ್ಕೆ ರಾಹುಲ್‌ ಉತ್ತರ

  • ಮೇಡ್‌ ಇನ್‌ ಇಂಡಿಯಾ BharOS ಬಿಡುಗಡೆ – ಆಂಡ್ರಾಯ್ಡ್‌ಗಿಂತ ಭಿನ್ನ ಹೇಗೆ?

    ಮೇಡ್‌ ಇನ್‌ ಇಂಡಿಯಾ BharOS ಬಿಡುಗಡೆ – ಆಂಡ್ರಾಯ್ಡ್‌ಗಿಂತ ಭಿನ್ನ ಹೇಗೆ?

    ನವದೆಹಲಿ: ಐಐಟಿ ಮದ್ರಾಸ್‌ ಅಭಿವೃದ್ಧಿ ಪಡಿಸಿದ ಮೇಡ್‌ ಇನ್‌ ಇಂಡಿಯಾ BharOS ಮೊಬೈಲ್‌ ಆಪರೇಟಿಂಗ್‌ ಸಿಸ್ಟಂ (Mobile Operating System) ಇಂದು ಲೋಕಾರ್ಪಣೆಯಾಗಿದೆ.

    ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು BharOS ಬಿಡುಗಡೆ ಮಾಡಿದರು. ಈ ವೇಳೆ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ಉಪಸ್ಥಿತರಿದ್ದರು.

    ಈ ವೇಳೆ ಮಾತನಾಡಿದ ಧರ್ಮೇಂದ್ರ ಪ್ರಧಾನ್‌, ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿದ್ದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಎಂಟು ವರ್ಷಗಳ ಹಿಂದೆ ನಮ್ಮ ಪ್ರಧಾನಿ ನರೇಂದ್ರ ಮೋದಿಜಿ ಡಿಜಿಟಲ್ ಇಂಡಿಯಾದ ಬಗ್ಗೆ ಮೊದಲ ಬಾರಿಗೆ ಮಾತನಾಡಿದಾಗ ನಮ್ಮ ಕೆಲವು ಸ್ನೇಹಿತರು ಅವರನ್ನು ಅಪಹಾಸ್ಯ ಮಾಡಿದರು. ಆದರೆ ಇಂದು ತಂತ್ರಜ್ಞರು, ನವೋದ್ಯಮಿಗಳು, ಉದ್ಯಮಗಳು ಮತ್ತು ನೀತಿ ನಿರೂಪಕರು ಮತ್ತು ಶೈಕ್ಷಣಿಕ ಸಂಸ್ಥೆಗಳು ಎಂಟು ವರ್ಷಗಳ ನಂತರ ಮೋದಿಯವರ ದೃಷ್ಟಿಕೋನವನ್ನು ಒಪ್ಪಿಕೊಂಡಿದ್ದಾರೆ ಎಂದರು.

    ಏನಿದು BharOS?
    BharOS ಒಂದು AOSP (ಆಂಡ್ರಾಯ್ಡ್ ಓಪನ್ ಸೋರ್ಸ್ ಪ್ರಾಜೆಕ್ಟ್) ಆಪರೇಟಿಂಗ್ ಸಿಸ್ಟಮ್ ಆಗಿದ್ದು ಅದನ್ನು ಸುರಕ್ಷಿತ ಮತ್ತು ಶಕ್ತಿಯುತವಾಗಿ ವಿನ್ಯಾಸಗೊಳಿಸಲಾಗಿದೆ. ಇದನ್ನು ಐಐಟಿ ಮದ್ರಾಸ್‌ನ (IIT Madras) ಲಾಭ ರಹಿತ ಸಂಸ್ಥೆ JandK ಆಪರೇಷನ್ಸ್ ಪ್ರೈವೇಟ್ ಲಿಮಿಟೆಡ್ (JandKops) ಅಭಿವೃದ್ಧಿಪಡಿಸಿದೆ.

    ಆಂಡ್ರಾಯ್ಡ್‌ಗಿಂತ ಇದು ಭಿನ್ನವೇ?
    ತಾಂತ್ರಿಕವಾಗಿ ಈ ಓಎಸ್‌ ಗೂಗಲ್‌ (Google) ಆಂಡ್ರಾಯ್ಡ್‌ಗಿಂತ (Android) ಭಿನ್ನವಾಗಿಲ್ಲ. BharOS ಮತ್ತು ಗೂಗಲ್‌ ಆಂಡ್ರಾಯ್ಡ್‌ ಓಎಸ್‌ ನಡುವಿನ ಪ್ರಮುಖ ವ್ಯತ್ಯಾಸ ಏನೆಂದರೆ BharOS ಓಎಸ್‌ ಗೂಗಲ್‌ ಸೇವೆಗಳನ್ನು ನೀಡುವುದಿಲ್ಲ. ಪ್ರಿಲೋಡೆಡ್‌ ಗೂಗಲ್‌ ಅಪ್ಲಿಕೇಶನ್‌ಗಳು ಇರುವುದಿಲ್ಲ. ಬೋಲ್ಟ್‌ವೇರ್‌ ಅಥವಾ ಅನಗತ್ಯ ಪ್ರಿಲೋಡೆಡ್‌ ಅಪ್ಲಿಕೇಶನ್‌ಗಳು ಇರುವುದಿಲ್ಲ. ಗೂಗಲ್‌ ಪ್ಲೇ ಸ್ಟೋರ್‌ ಇಲ್ಲದ ಕಾರಣ ಬಳಕೆದಾರರು ಹೊರಗಡೆಯಿಂದ ಥರ್ಡ್‌ ಪಾರ್ಟಿ ಆಪ್‌ ಡೌನ್‌ಲೋಡ್‌ ಮಾಡಬೇಕಾಗುತ್ತದೆ.

    ಎಲ್ಲರೂ ಬಳಕೆ ಮಾಡಬಹುದೇ?
    ಸದ್ಯಕ್ಕೆ ಈ ಓಎಸ್‌ ಜನ ಸಾಮಾನ್ಯರ ಬಳಕೆಗೆ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಬೇಕಿದೆ. ಸ್ಮಾರ್ಟ್‌ಫೋನ್‌ ಕಂಪನಿಗಳು ಒಪ್ಪಂದ ಮಾಡಿಕೊಂಡು ಈ ಓಸ್‌ನೊಂದಿಗೆ ಫೋನ್‌ ಬಿಡುಗಡೆ ಮಾಡಿದರೆ ಆಗ ಜನ ಸಾಮಾನ್ಯರ ಬಳಕೆಗೆ ಲಭ್ಯವಾಗಲಿದೆ.

    ಯಾರು ಬಳಕೆ ಮಾಡಬಹುದು?
    ಗೂಗಲ್‌ ಆಂಡ್ರಾಯ್ಡ್‌ ಅಭಿವೃದ್ಧಿ ಪಡಿಸಿದ್ದರೆ ಆಪಲ್‌ ಐಓಎಸ್‌ ಅನ್ನು ಅಭಿವೃದ್ಧಿ ಪಡಿಸಿದೆ. ಎರಡೂ ಅಮೆರಿಕದ ಕಂಪನಿಗಳು. ಈ ಕಾರಣಕ್ಕೆ ಕಟ್ಟುನಿಟ್ಟಾದ ಗೌಪ್ಯತೆ ಮತ್ತು ಭದ್ರತಾ ಅವಶ್ಯಕತೆಗಳನ್ನು ಹೊಂದಿರುವ ಭಾರತದ ಸಂಸ್ಥೆಗಳು ಈ ಓಎಸ್‌ ಹೊಂದಿರುವ ಫೋನ್‌ಗಳನ್ನು ಬಳಕೆ ಮಾಡಬಹುದು. ಇದನ್ನೂ ಓದಿ: ವಿದೇಶಕ್ಕೆ Made In India ಪೋನ್- 110 ಪಟ್ಟು ಹೆಚ್ಚಳ, ಶೇ.40 ಐಫೋನ್‌ ರಫ್ತು

    ಸವಾಲುಗಳೇನು?
    ಓಎಸ್‌ ಬಿಡುಗಡೆ ಮಾಡಿದ ಮಾತ್ರಕ್ಕೆ ಅದು ಯಶಸ್ವಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಓಎಸ್‌ ಅಭಿವೃದ್ಧಿ ಮಾಡಬೇಕಾದರೆ ಬಹಳಷ್ಟು ಹಣದ ಹೂಡಿಕೆ ಬೇಕಾಗುತ್ತದೆ. ಈ ಹಿಂದೆ ಸ್ಯಾಮ್‌ಸಂಗ್‌ ಕಂಪನಿ ಬಾಡಾ, ಬ್ಲ್ಯಾಕ್‌ಬೆರಿ ಕಂಪನಿ ಬ್ಲ್ಯಾಕ್‌ಬೆರಿ ಓಎಸ್‌, ನೋಕಿಯಾ ಸಿಂಬಿಯನ್‌, ಮೈಕ್ರೋಸಾಫ್ಟ್‌ ವಿಂಡೋಸ್‌ ಮೊಬೈಲ್‌ ಓಎಸ್‌ ಬಿಡುಗಡೆ ಮಾಡಿತ್ತು. ಮಾರುಕಟ್ಟೆಯ ದೊಡ್ಡ ಕಂಪನಿಗಳೇ ಈ ಓಎಸ್‌ ಬಿಡುಗಡೆ ಮಾಡಿದ್ದರೂ ಅದು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿಲ್ಲ. ಮುಖ್ಯವಾಗಿ ಆಪ್‌ ಡೆವಲಪರ್‌ಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗುತ್ತದೆ. ಬಳಿಕ ಭದ್ರತೆಗೆ ಸಂಬಂಧಿಸಿದಂತೆ ಅಪ್‌ಡೇಟ್‌ ನೀಡಬೇಕಾಗುತ್ತದೆ. ಆದರೆ BharOS ಹಿಂದೆ ಕೇಂದ್ರ ಸರ್ಕಾರ ನಿಂತಿರುವುದು ವಿಶೇಷ.

    ಭಾರತದ ವಿಶ್ವದಲ್ಲೇ ಎರಡನೇ ದೊಡ್ಡ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಾಗಿದೆ. ಭಾರತದಲ್ಲಿ 120 ಕೋಟಿ ಮೊಬೈಲ್‌ ಬಳಕೆದಾರರಿದ್ದರೆ 60 ಕೋಟಿ ಸ್ಮಾರ್ಟ್‌ಫೋನ್‌ ಬಳಕೆದಾರರಿದ್ದಾರೆ. ಗುಣಮಟ್ಟದ ಉತ್ಪನ್ನ ತಯಾರಾದರೆ ಅದು ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆಪಲ್‌ (Apple) ಮತ್ತು ಗೂಗಲ್‌ ಕಂಪನಿಗಳು ಐಓಎಸ್‌ ಮತ್ತು ಆಂಡ್ರಾಯ್ಡ್‌ ಓಎಸ್‌ಗೆ ಬಿಲಿಯನ್‌ಗಟ್ಟಲೇ ಡಾಲರ್‌ ಹಣವನ್ನು ಹೂಡಿಕೆ ಮಾಡಿದ್ದರಿಂದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದೆ. ಗೂಗಲ್‌ ಕಂಪನಿ ಶುದ್ಧವಾದ ಆಂಡ್ರಾಯ್ಡ್‌ ಓಎಸ್‌ನಲ್ಲೇ ಫೋನ್‌ ಬಿಡುಗಡೆ ಮಾಡಿದರೆ ಉಳಿದ ಫೋನ್‌ ತಯಾರಕ ಕಂಪನಿಗಳು ಕಸ್ಟಮೈಸ್ಡ್‌ ಆವೃತ್ತಿ(ತಮಗೆ ಬೇಕಾದ ವಿಶೇಷತೆಯನ್ನು ಸೇರಿಸುವುದು)  ಫೋನ್‌ ಬಿಡುಗಡೆ ಮಾಡುತ್ತಿರುವ ಕಾರಣ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್‌ ಫೋನ್‌ಗಳು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆಯಲ್ಲಿ ಮೇಳೈಸಿದ ಡಿಜಿಟಲ್ ಇಂಡಿಯಾ

    ಮದುವೆಯಲ್ಲಿ ಮೇಳೈಸಿದ ಡಿಜಿಟಲ್ ಇಂಡಿಯಾ

    ನವದೆಹಲಿ: ಭಾರತದಲ್ಲಿ ಡಿಜಿಟಲ್ (Digital) ಯುಗ ಆರಂಭವಾಗಿ ಸಾಕಷ್ಟು ದಿನಗಳು ಕಳೆದಿದೆ. ಇದು ಎಷ್ಟರ ಮಟ್ಟಿಗೆ ಎಂದರೆ ಪ್ರತಿಯೊಂದು ಕ್ಷೇತ್ರಕ್ಕೂ ಕಾಲಿಡುವ ಮಟ್ಟಕ್ಕೆ ಬೆಳೆಯುತ್ತಿದೆ. ಮದುವೆ ಹಾಗೂ ಇತರ ಸಮಾರಂಭಗಳಿಗೆ ಭಾರತದಲ್ಲಿ ಡೋಲು ಬಾರಿಸಿ ಸಂಭ್ರಮಿಸುವುದು ಈ ಹಿಂದಿನಿಂದಲು ನಡೆದುಕೊಂಡು ಬರುತ್ತಿದೆ. ಈ ವೇಳೆ ಅವರಿಗೆ ಹಣ ಪಾವತಿಸಲಾಗುತ್ತದೆ. ಇದೀಗ ಡಿಜಿಟಲ್ ಮಾರ್ಪಡಿಗೆ ಸರಿಯಾಗಿ ಹಣದ ಬದಲು ಕ್ಯೂಆರ್ ಕೋಡ್ ಸ್ಕ್ಯಾನರ್ (QR Codes) ಡೋಲಿನಲ್ಲಿ ಅಂಟಿಸಿಕೊಂಡು ಒಬ್ಬ ಡಿಜಿಟಲ್ ಇಂಡಿಯಾಗೆ ಬೆಂಬಲ ನೀಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾನೆ.

    ಉತ್ತರ ಭಾರತದಲ್ಲಿ ಮದುವೆ ಸಮಾರಂಭಗಳಲ್ಲಿ ಡೋಲು ಬಾರಿಸಲು ಬರುತ್ತಾರೆ ಅವರಿಗೆ ಮದುವೆ ಮುಗಿದ ಮೇಲೆ ಹಣ ಪಾವತಿಸಲಾಗುತ್ತದೆ. ಇಲ್ಲೊಂದು ಮದುವೆಯಲ್ಲಿ ಡೋಲು ಬಾರಿಸುವವ ಹಣವನ್ನು ನಗದು ರೂಪದಲ್ಲಿ ಪಡೆಯದೇ ತನ್ನ ಡೋಲಿನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ಅಂಟಿಸಿಕೊಂಡು ಪಡೆಯುತ್ತಿರುವುದು ಗಮನಸೆಳೆದಿದೆ. ಇದನ್ನೂ ಓದಿ: ಭಾರತ ಜಾತ್ಯತೀತ ರಾಷ್ಟ್ರ ಎಂದ ಸುಪ್ರೀಂ – ಠಾಕೂರ್‌ ಚಂದ್ರರನ್ನು ʼಪರಮಾತ್ಮʼ ಎಂದು ಘೋಷಿಸಲು ಕೋರಿದ್ದ PIL ವಜಾ

    ಈ ರೀತಿ ಡೋಲಿನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ಅಂಟಿಸಿಕೊಂಡು ಹಣ ಪಡೆಯುತ್ತಿದ್ದ ವೀಡಿಯೋವನ್ನು ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ (Ashwini Vaishnaw) ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಮದುವೆಯಲ್ಲೂ ಡಿಜಿಟಲ್ ಇಂಡಿಯಾ ಕಾಣಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಗುಜರಾತ್ ಆಯ್ತು, ಇಂದಿನಿಂದಲೇ ಕರ್ನಾಟಕ ಚುನಾವಣೆಗೆ ತಯಾರಿ

    ಈಗಾಗಲೇ ದೇಶದಾದ್ಯಂತ ಡಿಜಿಟಲ್ ಕ್ರಾಂತಿ ನಡೆಯುತ್ತಿದ್ದು, ಡಿಜಿಟಲ್ ಇಂಡಿಯಾದ ಭಾಗವಾಗಿ ಪ್ರತಿ ಕ್ಷೇತ್ರದಲ್ಲೂ ಡಿಜಿಟಲ್ ಶಕ್ತಿಯಾಗುತ್ತಿದೆ. ವ್ಯವಹಾರ ಸೇರಿದಂತೆ ಪ್ರತಿಯೊಂದು ಕೆಲಸ ಕಾರ್ಯಗಳು ಡಿಜಿಟಲ್ ಮೂಲಕ ಜನರಿಗೆ ಉತ್ತಮ ಸೇವೆ ಪಡೆಯುತ್ತಿದ್ದಾರೆ. ಅದರಲ್ಲೂ ಡಿಜಿಟಲ್ ಆರ್ಥಿಕತೆ ದೇಶದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಪ್ರತಿ ಅಂಗಡಿಗಳಲ್ಲೂ ಕ್ಯೂಆರ್ ಕೋಡ್ ಬಳಸಿ ನಗದು ರಹಿತ ವ್ಯವಹಾರ ಹೆಚ್ಚಾಗಿ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • 2024 ಮೋದಿ ಒನ್ಸ್‌ಮೋರ್‌ – ಜರ್ಮನಿ ಭಾರತೀಯರಿಂದ ಘೋಷಣೆ

    2024 ಮೋದಿ ಒನ್ಸ್‌ಮೋರ್‌ – ಜರ್ಮನಿ ಭಾರತೀಯರಿಂದ ಘೋಷಣೆ

    ಬರ್ಲಿನ್: ಜರ್ಮನಿಯ ಬರ್ಲಿನ್‌ಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರಮೋದಿ ಅವರು ಜರ್ಮನಿಯ ಭಾರತೀಯರನ್ನುದ್ದೇಶಿಸಿ ಮಾತನಾಡಿದರು. ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರ ಸಹ-ಅಧ್ಯಕ್ಷತೆಯಲ್ಲಿ ಬರ್ಲಿನ್‌ನಲ್ಲಿ ಕಾರ್ಯಕ್ರಮ ನಡೆಯಿತು.

    ಬರ್ಲಿನ್‌ನ ಮುಖ್ಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರಮೋದಿ ಭಾಷಣ ಮಾಡಲು ವೇದಿಕೆಗೆ ಬರುತ್ತಿದ್ದಂತೆ ಅಲ್ಲಿ ನೆಲೆಸಿರುವ ಭಾರತೀಯರು `2024 ಒನ್ಸ್ಮೋರ್ ಮೋದಿ’ (2024ರ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬರಬೇಕು) ಎಂದು ಜಯಘೋಷ ಕೂಗಿದರು. ಇದನ್ನೂ ಓದಿ: ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ: ಹರಿಯಾಣ ಶಾಸಕ ಅಸೀಮ್‌ ಪ್ರತಿಜ್ಞೆ

    NARENDRA MODI (2)

    ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಿಮ್ಮೆಲ್ಲರನ್ನು ನೋಡಿ ತುಂಬಾ ಸಂತೋಷವಾಗುತ್ತಿದೆ. ಯುವಸಮೂಹವೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಇನ್ನಷ್ಟು ಖುಷಿ ನೀಡಿದೆ ಎಂದರು.

    ಈ ಹಿಂದೆ ವಿದೇಶಿಯರ ಆಳ್ವಿಕೆಯಿಂದ ದೇಶ ತನ್ನ ಸ್ವಾಭಿಮಾನವನ್ನೇ ಕಳೆದುಕೊಂಡಿತ್ತು. ಇಂದು ಅಭಿವೃದ್ಧಿಯ ಆದಿಯಲ್ಲಿ ಮುನ್ನಡೆಯುತ್ತಿದೆ. ದೇಶದ ಸಂಪನ್ಮೂಲದಲ್ಲಿ ಎಂದಿಗೂ ಕೊರತೆಯಾಗುವುದಿಲ್ಲ ಎಂದೂ ಅವರು ಹೇಳಿದರು. ಇದನ್ನೂ ಓದಿ: ಬಾಬರಿ ಧ್ವಂಸ ವೇಳೆ ಶಿವಸೇನೆ ಎಲ್ಲಿತ್ತು ಎಂದು ನಿಮ್ಮ ನಾಯಕರನ್ನು ಕೇಳಿ: ಬಿಜೆಪಿಗೆ ರಾವತ್ ತಿರುಗೇಟು

    ಮುಂದುವರಿದು, ಯಾವುದೇ ಸುಧಾರಣೆಗೆ ರಾಜಕೀಯ ಇಚ್ಛಾಶಕ್ತಿ ಬೇಕು. ಇಂದು ಭಾರತದಲ್ಲಿ ಜೀವನ ಗುಣಮಟ್ಟ, ಶಿಕ್ಷಣದ ಗುಣಮಟ್ಟ ಸೇರಿದಂತೆ ಎಲ್ಲ ಕ್ಷೇತ್ರಗಳೂ ಮುನ್ನಡೆಯುತ್ತಿವೆ. ಅಧಿಕಾರ ಶಾಹಿಯಾಗಿದ್ದ ಕಚೇರಿಗಳು ಉತ್ತಮ ಫಲಿತಾಂಶವನ್ನು ಪಡೆಯುತ್ತಿವೆ. ಸರ್ಕಾರ ತನ್ನ ಸುಧಾರಣೆಗಳ ಮೂಲಕ ದೇಶವನ್ನು ಪರಿವರ್ತಿಸುತ್ತಿದೆ ಎಂದು ತಿಳಿಸಿದರು.

    NARENDRA MODI (3)

    ಡಿಜಿಟಲ್ ಕ್ಷೇತ್ರದ ಬಗ್ಗೆ ರಾಜಕೀಯ ಇಚ್ಚಾಶಕ್ತಿಯಿದೆ. 2021ರಲ್ಲಿ ಪ್ರಪಂಚದಾದ್ಯಂತ ನಡೆದ ನೈಜ ಪಾವತಿಗಳಲ್ಲಿ ಶೇ.40 ರಷ್ಟು ಭಾರತದಲ್ಲೇ ನಡೆದಿದೆ. ಇದು ಡಿಜಿಟಲ್ ಇಂಡಿಯಾದ ಪೂರಕ ಬೆಳವಣಿಗೆ ಎಂದರು.

    ರೈತರ ಪರಿಹಾಧನ, ವಿದ್ಯಾರ್ಥಿವೇತನ ಇತರ ಸರ್ಕಾರದ ನೆರವುಗಳು ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸುಮಾರು 10 ಸಾವಿರ ಸೇವೆಗಳು ಆನ್‌ಲೈನ್‌ನಲ್ಲೇ ಲಭ್ಯವಾಗುತ್ತಿದೆ. ಹಾಗಾಗಿ ಯಾರಿಗೂ ವಂಚನೆಯಾಗುವುದಿಲ್ಲ. ಇನ್ನು ಮುಂದೆ `ನಾನು ದೆಹಲಿಯಿಂದ 1 ರೂ. ಕಳುಹಿಸಿದರೆ, ಜನರಿಗೆ 15 ಪೈಸೆ ಮಾತ್ರ ತಲುಪುತ್ತದೆ’ ಎಂದು ಯಾವ ಪ್ರಧಾನಿಯೂ ಹೇಳಬೇಕಾಗಿಲ್ಲ’ ಎಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದರು. ಇದನ್ನೂ ಓದಿ: ಜಹಾಂಗೀರ್‌ಪುರಿ ಹಿಂಸಾಚಾರ – ಆರೋಪಿಗಳನ್ನು ಮುಗ್ದರೆಂದ ಜಮಿಯತ್ ನಿಯೋಗ

    NARENDRA MODI (3) (1)

    ಭಾರತ ಕಳೆದ 3 ದಶಕಗಳಿಂದ ರಾಜಕೀಯ ಅಸ್ಥಿರ ವಾತಾವರಣ ಕಂಡಿತ್ತು. 30 ವರ್ಷಗಳ ನಂತರ 2014 ರಲ್ಲಿ ಪೂರ್ಣ ಬಹುಮತದ ಸರ್ಕಾರ ಸ್ಥಾಪಿತವಾದ ಮೇಲೆ 2019ರಿಂದ ಸರ್ಕಾರವನ್ನು ಬಲಪಡಿಸಲಾಗಿದೆ. ನಾವಿಂದು 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಸಿಕ್ಕಿದ ಬಳಿಕ ಜನಿಸಿದ ಮೊದಲ ಪ್ರಧಾನಿ ನಾನು. 100 ವರ್ಷಗಳ ಸ್ವಾತಂತ್ರ‍್ಯವನ್ನು ಆಚರಿಸುವ ಗುರಿಯತ್ತ ವೇಗವಾಗಿ ಹೆಜ್ಜೆ ಇಡುತ್ತಿದೆ ಭಾರತ ಎಂದು ಹೇಳಿದರು.

  • ಮೋದಿಯ ಡಿಜಿಟಲ್ ಇಂಡಿಯಾ ಮೂಲಕ ಪ್ರತಿ ಮನೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು: ಉದಯ್ ಗರುಡಚಾರ್

    ಮೋದಿಯ ಡಿಜಿಟಲ್ ಇಂಡಿಯಾ ಮೂಲಕ ಪ್ರತಿ ಮನೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು: ಉದಯ್ ಗರುಡಚಾರ್

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯ ಡಿಜಿಟಲ್ ಇಂಡಿಯಾ ಕನಸಿನ ಭಾರತ ನನಸು ಮಾಡಲು ಪ್ರತಿ ಮನೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಚಿಕ್ಕಪೇಟೆ ಶಾಸಕರಾದ ಉದಯ್ ಗರುಡಾಚಾರ್ ಅಭಿಪ್ರಾಯಪಟ್ಟಿದ್ದಾರೆ.

    ಸ್ಲಂ ಪ್ರದೇಶದ ಶಾಲಾ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಆನಾಥ ಮಕ್ಕಳಿಗೆ ಉಚಿತ ಕಂಪ್ಯೂಟರ್ ತರಬೇತಿ ಮತ್ತು ಪ್ರಾಜೆಕ್ಟ್ ವರ್ಕ್ ಮಾಡಲು ಅನುಕೂಲಕ್ಕೆ ಬಿಗ್-ಬಿ ಮತ್ತು ಮಣಿಪಾಲ್ ಇನ್ಸ್ಟಿಟ್ಯೂಟ್ ಸಹಯೋಗದಲ್ಲಿ ಸ್ಲಂ ಪ್ರದೇಶದ ಶಾಲಾ ಮಕ್ಕಳು ಮತ್ತು ಆನಾಥ ಮಕ್ಕಳು ಕಾಲೇಜು ,ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿ ಮತ್ತು ಪ್ರಾಜೆಕ್ಟ್ ವರ್ಕ್ ಮಾಡಲು ತರಬೇತಿ ಕೇಂದ್ರ ಉದ್ಘಾಟನೆಯನ್ನು ಉದಯ್ ಗರುಡಾಚಾರ್, ಅರಣ್ಯ ಅಭಿವೃದ್ದಿ ನಿಗಮ ನಿರ್ದೇಶಕಿ ಭಾಗ್ಯವತಿ ಅಮರೇಶ್, ಮಾಹಿತಿ ಹಕ್ಕು ಅಧ್ಯಯನ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಮರೇಶ್ (ಅಂಬರೀಶ್) ಮತ್ತು ಚಲನಚಿತ್ರ ನಿರ್ಮಾಪಕ ಜಾಕ್ ಮಂಜು ಉದ್ಘಾಟನೆ ಮಾಡಿದರು. ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್‍ನಲ್ಲಿ ಮತ್ತೆ ಬಿರುಕು – ಚರಣ್‍ಜಿತ್ ಸಿಂಗ್ ಛನ್ನಿ Vs ಸಿಧು

    ಬಳಿಕ ಮಾತನಾಡಿದ ಉದಯ್ ಗರುಡಾಚಾರ್, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಸ್ಲಂ ಪ್ರದೇಶವಿದೆ. ಅಲ್ಲಿ ಪ್ರತಿಭಾವಂತ ಮಕ್ಕಳು ಇದ್ದಾರೆ ಅವರಿಗೆ ಉತ್ತಮ ಕಂಪ್ಯೂಟರ್ ತಂತ್ರಜ್ಞಾನ ಹೊಂದಲು ಮತ್ತು ಶಾಲಾ, ಕಾಲೇಜು ಮಕ್ಕಳ ಪ್ರಾಜೆಕ್ಟ್ ವರ್ಕ್ ಮಾಡಲು ಉಚಿತವಾಗಿ ಕಲಿಸುವುದರಿಂದ ಶ್ರೀಮಂತರ ಮಕ್ಕಳಿಗೆ ಸಿಗುವ ಕಂಪ್ಯೂಟರ್ ಶಿಕ್ಷಣ ಸ್ಲಂ ಪ್ರದೇಶದ ಮಕ್ಕಳಿಗೆ ಸಿಕ್ಕರೆ ಭಾರತ ಭವಿಷ್ಯ ಉಜ್ವಲವಾಗಲಿದೆ .ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾ ಯಶ್ವಸಿಯಾಗಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಹೇಳಿದರು. ಇದನ್ನೂ ಓದಿ: ಪುನೀತ್ ಅಂತ್ಯಸಂಸ್ಕಾರಕ್ಕೆ ಶ್ರಮಿಸಿದ ಎಲ್ಲರಿಗೂ ಅಶ್ವಿನಿ ಧನ್ಯವಾ

    ಭಾಗ್ಯವತಿ ಅಮರೇಶ್ ಮಾತನಾಡಿ, ಶಿಕ್ಷಣದಿಂದ ದೇಶ ಅಭಿವೃದ್ದಿ ಸಾಧ್ಯ. ಆರ್ಥಿಕವಾಗಿ ಸಬಲರಾದವರಿಗೆ ಉನ್ನತ ಶಿಕ್ಷಣ ಸಿಗುತ್ತದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಉಚಿತವಾಗಿ ಕಂಪ್ಯೂಟರ್ ತರಬೇತಿ ಮತ್ತು ಪ್ರಾಜೆಕ್ಟ್ ವರ್ಕ್ ಮಾಡಲು 10 ಕಂಪ್ಯೂಟರ್‍ ಗಳನ್ನು ಅಳವಡಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಆಶಯ ನಮ್ಮದು ಎಂದು ಹೇಳಿದರು. ಇದನ್ನೂ ಓದಿ: ನಾನು ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ: ಅರವಿಂದ್ ಕೇಜ್ರಿವಾಲ್

    ಕಾರ್ಯಕ್ರಮದಲ್ಲಿ ಬಿ.ಜೆ.ಪಿ.ಪ್ರಮುಖ ಮುಖಂಡರು, ಸ್ಲಂ ಪ್ರದೇಶದ ಮಕ್ಕಳು ಮತ್ತು ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.

  • ಭಾರತದಲ್ಲಿ 2022ರ ಹಜ್‌ ಪ್ರಕ್ರಿಯೆ ಶೇ.100 ಡಿಜಿಟಲ್‌ ಆಗಿರುತ್ತದೆ: ಕೇಂದ್ರ ಸಚಿವ ನಖ್ವಿ

    ಭಾರತದಲ್ಲಿ 2022ರ ಹಜ್‌ ಪ್ರಕ್ರಿಯೆ ಶೇ.100 ಡಿಜಿಟಲ್‌ ಆಗಿರುತ್ತದೆ: ಕೇಂದ್ರ ಸಚಿವ ನಖ್ವಿ

    ಮುಂಬೈ: ಭಾರತದಲ್ಲಿ 2022 ಹಜ್‌ ಪ್ರಕ್ರಿಯೆ ಶೇ.100 ಡಿಜಿಟಲ್‌ ಆಗಿರುತ್ತದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

    ಮುಂಬೈನ ಹಜ್ ಹೌಸ್‌ನಲ್ಲಿ ಆನ್‌ಲೈನ್ ಬುಕಿಂಗ್ ಸೌಲಭ್ಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂಡೋನೇಷ್ಯಾ ನಂತರ ಭಾರತ ಎರಡನೇ ಅತಿದೊಡ್ಡ ಸಂಖ್ಯೆಯಲ್ಲಿ ಹಜ್ ಯಾತ್ರಿಕರನ್ನು ಕಳುಹಿಸುತ್ತದೆ ಎಂದು ಹೇಳಿದರು.

    2020 ರಲ್ಲಿ ಮತ್ತು ಈ ವರ್ಷ ಕೋವಿಡ್ -19 ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದಾಗಿ ಹಜ್ ನಡೆಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

    700 ಕ್ಕೂ ಹೆಚ್ಚು ಮಹಿಳೆಯರು ‘ಮೆಹ್ರಾಮ್’ (ಪುರುಷ ಒಡನಾಡಿ) ಇಲ್ಲದೆ ಹಜ್ 2021 ಗೆ ಅರ್ಜಿ ಸಲ್ಲಿಸಿದ್ದಾರೆ. ಅದೇ ವರ್ಗದ ಅಡಿಯಲ್ಲಿ 2,100 ಕ್ಕೂ ಹೆಚ್ಚು ಮಹಿಳೆಯರು ಹಜ್ 2020 ಗೆ ಅರ್ಜಿ ಸಲ್ಲಿಸಿದ್ದಾರೆ. ಅವರು ಯಾತ್ರೆ ಮಾಡಲು ಬಯಸಿದರೆ ಅವರ ಅರ್ಜಿಗಳು 2022 ಹಜ್‌ಗೆ ಅರ್ಹವಾಗಿರುತ್ತವೆ ಎಂದು ನಖ್ವಿ ವಿವರ ನೀಡಿದರು.

    ಇತರ ಮಹಿಳೆಯರು ಕೂಡ ‘ಮೆಹ್ರಾಮ್’ ವರ್ಗವಿಲ್ಲದೆ ಹಜ್ 2022 ಗೆ ಅರ್ಜಿ ಸಲ್ಲಿಸಬಹುದು. ಈ ವರ್ಗದ ಎಲ್ಲ ಮಹಿಳೆಯರಿಗೆ ಲಾಟರಿ ಪದ್ಧತಿಯಿಂದ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದರು.

    ಅಕ್ಟೋಬರ್ 21 ರಂದು ನವದೆಹಲಿಯಲ್ಲಿ ನಡೆಯಲಿರುವ ಮುಂಬರುವ ಹಜ್ ಪರಿಶೀಲನಾ ಸಭೆಯಲ್ಲಿ ಸಂಬಂಧಿಸಿದ ವಿವಿಧ ಇಲಾಖೆಗಳ ಸಮಾಲೋಚನೆಯ ನಂತರ ಹಜ್ 2022 ಅನ್ನು ಘೋಷಿಸಲಾಗುತ್ತದೆ. ಇದನ್ನೂ ಓದಿ: ಮೋದಿಗೆ ಸಿಕ್ಕ ಗಿಫ್ಟ್‌ಗಳಿಗೆ ಭರ್ಜರಿ ಬೆಲೆ- ಚೋಪ್ರಾ ಜಾವೆಲಿನ್‍ಗೆ 1.50 ಕೋಟಿ 

    ಹಜ್ ಪರಿಶೀಲನಾ ಸಭೆಯಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳು, ವಿದೇಶಾಂಗ ವ್ಯವಹಾರಗಳು, ಆರೋಗ್ಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು, ಸೌದಿ ಅರೇಬಿಯಾದ ಭಾರತದ ರಾಯಭಾರಿ, ಜೆಡ್ಡಾದಲ್ಲಿನ ಭಾರತದ ಕಾನ್ಸುಲ್ ಜನರಲ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿರುತ್ತಾರೆ.

  • ವಿಕ್ರಮಾದಿತ್ಯ ನೌಕೆಯಲ್ಲಿ ನಾವ್‌-ಇಕ್ಯಾಶ್‌ ಕಾರ್ಡ್‌ ಸೇವೆಗೆ ಚಾಲನೆ

    ವಿಕ್ರಮಾದಿತ್ಯ ನೌಕೆಯಲ್ಲಿ ನಾವ್‌-ಇಕ್ಯಾಶ್‌ ಕಾರ್ಡ್‌ ಸೇವೆಗೆ ಚಾಲನೆ

    ನವದೆಹಲಿ: ಭಾರತೀಯ ನೌಕಾಪಡೆಯ ವಿಮಾನ ವಾಹನ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯ ನೌಕೆಯಲ್ಲಿ ಎಸ್‌ಬಿಐನ ನಾವ್‌ ಇಕ್ಯಾಶ್‌ ಕಾರ್ಡ್‌ ಸೇವೆಗೆ ಚಾಲನೆ ಸಿಕ್ಕಿದೆ.

    ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ಸಿಎಸ್‌ ಶೆಟ್ಟಿ ಮತ್ತು ಪಶ್ಚಿಮ ನೌಕೆ ಕಮಾಂಡಿಂಗ್‌ ಮುಖ್ಯ ಅಧಿಕಾರಿ ಅಡ್ಮಿರಲ್‌ ಆರ್‌. ಹರಿಕುಮಾರ್‌ ಅವರು ಈ ಸೇವೆಯನ್ನು ಕಾರವಾರದಲ್ಲಿ ಬಿಡುಗಡೆ ಮಾಡಿದರು.

    ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್‌ ಇಂಡಿಯಾಗೆ ಈ ಸೇವೆ ಬಲ ತುಂಬಲಿದೆ. ಇದು ಬ್ಯಾಂಕಿಂಗ್ ಕಾರ್ಯಾಚರಣೆಗಳಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ಸಮುದ್ರದ ಹಡಗುಗಳಲ್ಲಿ ಕರ್ತವ್ಯ ಮಾಡುತ್ತಿರುವ ಭದ್ರತಾ ಸಿಬ್ಬಂದಿ, ಅರೆಸೇನಾ ಪಡೆ, ಕುಗ್ರಾಮಗಳಲ್ಲಿ ಸೇವೆ ಮಾಡುತ್ತಿರುವ ಸೇನಾ ಸಿಬ್ಬಂದಿ ಈ ಸೇವೆಯನ್ನು ಬಳಸಬಹುದಾಗಿದೆ. ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ಇತಿಹಾಸ ಸೃಷ್ಟಿ – ಪತಿ ಬಳಿಕ ಪತ್ನಿಗೆ 3 ಸ್ಟಾರ್

    ಹೆಚ್ಚಿನ ಸಮಯ ಸಮುದ್ರಗಳಲ್ಲಿ ಮತ್ತು ದೂರದ ಪ್ರದೇಶಗಳಿಗೆ ಕರ್ತವ್ಯ ಮಾಡುತ್ತಿರುವ ಸಿಬ್ಬಂದಿ ನಗದು ವ್ಯವಹಾರಕ್ಕೆ ಸಮಸ್ಯೆ ಆಗುತ್ತಿತ್ತು. ಈಗ ನಾವ್‌ ಇಕ್ಯಾಶ್‌ ಕಾರ್ಡ್‌ ಈ ಸಮಸ್ಯೆಗಳನ್ನು ನಿವಾರಿಸಿದೆ.

    ಡ್ಯುಯಲ್ ಚಿಪ್ ಕಾರ್ಡ್‌ ಆಫ್‌ಲೈನ್ ಮತ್ತು ಆನ್‌ಲೈನ್ ಪರಿಸರದಲ್ಲಿ ಕಾರ್ಯನಿರ್ವಹಿಸುತ್ತದೆ. ಆನ್‌ಲೈನ್ ಮೋಡ್‌ನಲ್ಲಿ ಸಾಮಾನ್ಯ ಡೆಬಿಟ್ ಕಾರ್ಡ್ ಆಗಿಯೂ ಬಳಸಬಹುದು.

  • UPI :  ಸೆಪ್ಟೆಂಬರ್​ನಲ್ಲಿ 6.54 ಲಕ್ಷ ಕೋಟಿ ರೂ. ವಹಿವಾಟು

    UPI : ಸೆಪ್ಟೆಂಬರ್​ನಲ್ಲಿ 6.54 ಲಕ್ಷ ಕೋಟಿ ರೂ. ವಹಿವಾಟು

    ಬೆಂಗಳೂರು : ಯುಪಿಐ (Unified Payments Interface – UPI) ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್​ ತಿಂಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಕೇಂದ್ರದ ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಕೂ ಮೂಲಕ ಹಂಚಿಕೊಂಡಿದ್ದಾರೆ.

    2021ರ ಜನವರಿಯಿಂದ ಸೆಪ್ಟೆಂಬರ್ ಅವಧಿಯ ಪ್ರತಿ ತಿಂಗಳ ಯುಪಿಐ ವಹಿವಾಟು ಅಂಕಿಅಂಶವನ್ನು ಕೂ ಮಾಡಿರುವ ಸಚಿವರು, ತಿಂಗಳಿನಿಂದ ತಿಂಗಳಿಗೆ ವಹಿವಾಟಿನ ಗಾತ್ರ ಗಮನಾರ್ಹ ಪ್ರಮಾಣದಲ್ಲಿ ವೃದ್ಧಿಯಾಗಿರುವುದನ್ನು ತೋರಿಸಿದ್ದಾರೆ. ಜನವರಿ 2021ರಲ್ಲಿ   4.31 ಲಕ್ಷ ಕೋಟಿ ರೂ., ಮೊತ್ತದ ವಹಿವಾಟು ಯುಪಿಐ ಮೂಲಕ ನಡೆದಿದ್ದರೆ, ಸೆಪ್ಟೆಂಬರ್​ ತಿಂಗಳಲ್ಲಿ ಈ ಮೊತ್ತವು  6.54 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

    ಅಮೆರಿಕ ಡಾಲರ್​ ಎದುರಿನ ಭಾರತೀಯ ರೂಪಾಯಿ ಮೌಲ್ಯದ ಲೆಕ್ಕಾಚಾರದಲ್ಲಿ ಕಳೆದ ಆಗಸ್ಟ್​ನಲ್ಲಿ ನಡೆದಿರುವ ಯುಪಿಐ ವಹಿವಾಟಿನ ಮೊತ್ತ 86.19 ಶತಕೋಟಿ ಡಾಲರ್. ಸೆಪ್ಟೆಂಬರ್ ತಿಂಗಳಲ್ಲಿ ಇದು 88.25 ಶತಕೋಟಿ ಡಾಲರ್​ಗೆ ಮುಟ್ಟಿದೆ. ಇದನ್ನೂ ಓದಿ: ಬ್ರಾಡ್‍ಬ್ಯಾಂಡ್ ಉತ್ತೇಜಿಸಲು ಜನರಿಗೆ ಪ್ರತಿ ತಿಂಗಳು 200 ರೂ. ಕ್ಯಾಶ್‍ಬ್ಯಾಕ್ ನೀಡಿ – ಟ್ರಾಯ್ ಶಿಫಾರಸು


    ಅಶ್ವಿನಿ ವೈಷ್ಣವ್ ಸಹ ತಾವು ಮಾಡಿರುವ ಕೂನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. #UPIChalega ಹ್ಯಾಷ್​ಟ್ಯಾಗ್​ನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ಯುಪಿಐ ವಹಿವಾಟು ಗಾತ್ರವು ಪ್ರತಿವರ್ಷ 1 ಲಕ್ಷ ಕೋಟಿ ಡಾಲರ್ ಆರ್ಥಿಕ ಪ್ರಗತಿ ಸಾಧಿಸಲು ಅಗತ್ಯ ವೇಗ ಸಿಗುತ್ತಿರುವ ಉದಾಹರಣೆ’ ಎಂದು ವಿವರಿಸಿದ್ದಾರೆ.

  • ಎಲ್ಲಾ ಪ್ರಜೆಗಳಿಗೆ ಸಿಗಲಿದೆ ಹೆಲ್ತ್ ಐಡಿ ಕಾರ್ಡ್ – ವಿಶೇಷತೆ ಏನು? ಲಾಭ ಏನು?

    ಎಲ್ಲಾ ಪ್ರಜೆಗಳಿಗೆ ಸಿಗಲಿದೆ ಹೆಲ್ತ್ ಐಡಿ ಕಾರ್ಡ್ – ವಿಶೇಷತೆ ಏನು? ಲಾಭ ಏನು?

    ನವದೆಹಲಿ: ಇನ್ನು ಮುಂದೆ ದೇಶದ ಎಲ್ಲ ಪ್ರಜೆಗಳು ಒಂದೇ ಕ್ಲಿಕ್ ನಲ್ಲಿ ತಮ್ಮ ಆರೋಗ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದು.

    ದೇಶದ ಜನತೆಗೆ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಸಮರ್ಪಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಯೊಬ್ಬ ಭಾರತೀಯರು ಈಗ ಡಿಜಿಟಲ್ ಹೆಲ್ತ್ ಐಡಿಯನ್ನು ಪಡೆಯಬಹುದು. ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಹೇಗೆ ಯುಪಿಐ ಕಾರ್ಯನಿರ್ವಹಿಸುತ್ತದೋ ಅದೇ ರೀತಿಯಾಗಿ ಇದು ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.

    https://twitter.com/PIB_India/status/1442376458509316098

    ಪ್ರತಿಯೊಬ್ಬ ನಾಗರಿಕರ ಆರೋಗ್ಯ ದಾಖಲೆಗಳು ಈಗ ಡಿಜಿಟಲ್ ನಲ್ಲಿ ಸುರಕ್ಷಿತವಾಗಿರುತ್ತದೆ. ಬಡ ಮತ್ತು ಮಧ್ಯಮ ವರ್ಗದ ವೈದ್ಯಕೀಯ ಚಿಕಿತ್ಸೆಯಲ್ಲಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಇದು ದೊಡ್ಡ ಪಾತ್ರವನ್ನು ವಹಿಸುತ್ತದೆ. ಮೂರು ವರ್ಷಗಳ ಹಿಂದೆ, ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆಯಂದು ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತರಲಾಯಿತು. ಇಂದಿನಿಂದ ದೇಶಾದ್ಯಂತ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಆರಂಭವಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಮೋದಿ ಹೇಳಿದರು.

    130 ಕೋಟಿ ಆಧಾರ್ ಐಡಿಗಳು, 118 ಕೋಟಿ ಮೊಬೈಲ್ ಚಂದಾದಾರರು, ಸುಮಾರು 80 ಕೋಟಿ ಇಂಟರ್ನೆಟ್ ಬಳಕೆದಾರರು ಮತ್ತು 43 ಕೋಟಿ ಜನ್ ಧನ್ ಬ್ಯಾಂಕ್ ಖಾತೆಗಳು – ಇಂತಹ ಬೃಹತ್, ಸಂಪರ್ಕಿತ ಮೂಲಸೌಕರ್ಯವನ್ನು ಪ್ರಪಂಚದಲ್ಲಿ ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಆರೋಗ್ಯ ಕಾರ್ಡ್ ನಲ್ಲಿ 14 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆ ಇರಲಿದೆ. ಪ್ರತಿ ಪ್ರಜೆಯ ಆರೋಗ್ಯ ಖಾತೆಯಾಗಿ ಇದು ಕೆಲಸ ಮಾಡುತ್ತದೆ. ಈ ಕಾರ್ಡ್ ನಲ್ಲಿ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳ ಸಂಗ್ರಹ ಇರಲಿದೆ. ವೈಯಕ್ತಿಕ ಆರೋಗ್ಯ ದಾಖಲೆಗಳನ್ನು ಮೊಬೈಲ್ ಅಪ್ಲಿಕೇಷನ್ ಸಹಾಯದಿಂದ ಲಿಂಕ್ ಮಾಡಬಹುದು.

    ಕಳೆದ ವರ್ಷ ಘೋಷಣೆ:
    ಕಳೆದ ವರ್ಷದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಪ್ರಾಯೋಗಿಕ ಯೋಜನೆಯನ್ನು ಪ್ರಧಾನಿ ಘೋಷಿಸಿದ್ದರು. 6 ಕೇಂದ್ರಾಡಳಿತ ಪ್ರದೇಶದಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ.

    ಲಾಭ ಹೇಗೆ?
    ಈ ಸೇವೆ ದೇಶವ್ಯಾಪಿ ಇರಲಿದೆ. ವ್ಯಕ್ತಿ ಯಾವುದೇ ಮೂಲೆಗೆ ಹೋದಾಗ ಸಮಸ್ಯೆಯಾಗಿ ಆಸ್ಪತ್ರೆ ಸೇರಿದಾಗ ಆತನ ಆರೋಗ್ಯದ ಮಾಹಿತಿ ಕೂಡಲೇ ಸಿಗುವುದಿಲ್ಲ. ಆದರೆ ಈ ಆಪ್‍ನಲ್ಲಿ ವಿವರ ನೀಡಿದ್ದರೆ ಕೂಡಲೇ ವೈದ್ಯರಿಗೆ ಈ ಹಿಂದೆ ರೋಗಿಗೆ ಏನಾಗಿತ್ತು? ಯಾವ ಕಾರಣಕ್ಕೆ ಶಸ್ತ್ರ ಚಿಕಿತ್ಸೆ ನೀಡಲಾಗಿತ್ತು? ಈ ಹಿಂದೆ ಎಲ್ಲಿ ಚಿಕಿತ್ಸೆ ನೀಡಲಾಗಿತ್ತು ಈ ಎಲ್ಲ ವಿವರಗಳು ಕೂಡಲೇ ಸಿಗಲಿದೆ. ಇದರಿಂದಾಗಿ ಕಡಿಮೆ ಅವಧಿಯಲ್ಲಿ ರೋಗಿಗೆ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.  ಇದನ್ನೂ ಓದಿ: ಪ್ರತಿಭಟನೆ ವೇಳೆ ಡಿಸಿಪಿ ಮೇಲೆ ಕಾರು ಹತ್ತಿಸಲು ಯತ್ನ

    ಈ ಐಡಿ ಕಾರ್ಡ್ ಎಲ್ಲರಿಗೂ ಕಡ್ಡಾಯವಲ್ಲ. ಜನರು ಸ್ವಇಚ್ಛೆಯಿಂದ ಕಾರ್ಡ್ ಮಾಡಿಸಬಹುದು. ಆರಂಭದಲ್ಲಿ ಹೆಲ್ತ್ ಐಡಿ, ವೈಯಕ್ತಿಕ ಆರೋಗ್ಯ ಮಾಹಿತಿ, ಡಿಜಿ ಡಾಕ್ಟರ್ ಮತ್ತು ಹೆಲ್ತ್ ರಿಜಿಸ್ಟ್ರಿ ಇರಲಿದೆ. ನಂತರದ ದಿನಗಳಲ್ಲಿ ಇ ಫಾರ್ಮಾಸಿ ಮತ್ತು ಟೆಲಿಮೆಡಿಸಿನ್ ಸೇವೆಗಳನ್ನು ಸೇರಿಸಲಾಗುತ್ತದೆ ಎಂದು ವರದಿಯಾಗಿದೆ. ಈಗಾಗಲೇ ಹಲವು ದೇಶಗಳಲ್ಲಿ ಸರ್ಕಾರವೇ ಈ ರೀತಿಯ ಆರೋಗ್ಯ ಕಾರ್ಡ್‍ಗಳನ್ನು ನೀಡಿವೆ.

  • 54 ಕೋಟಿ ಜನರಿಗೆ ಲಸಿಕೆ, ಹಳ್ಳಿಗಳಲ್ಲೂ ಡಿಜಿಟಲ್ ಉದ್ಯಮಿಗಳು ತಯಾರಾಗುತ್ತಿದ್ದಾರೆ: ಮೋದಿ

    54 ಕೋಟಿ ಜನರಿಗೆ ಲಸಿಕೆ, ಹಳ್ಳಿಗಳಲ್ಲೂ ಡಿಜಿಟಲ್ ಉದ್ಯಮಿಗಳು ತಯಾರಾಗುತ್ತಿದ್ದಾರೆ: ಮೋದಿ

    – ಕೆಂಪುಕೋಟೆಯಲ್ಲಿ ಪ್ರಧಾನಿ ಭಾಷಣ
    – ಒಲಿಂಪಿಕ್ಸ್ ಕ್ರೀಡಾಪಟುಗಳು ಹೃದಯವನ್ನು ಗೆದ್ದಿದ್ದಾರೆ
    – ಮೂಲ ಸೌಕರ್ಯ ಅಭಿವೃದ್ಧಿಗೆ ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆ

    ನವದೆಹಲಿ: ಇಂದು ಭಾರತದಲ್ಲಿ ಅತಿದೊಡ್ಡ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು. ಇದುವರೆಗೆ 54 ಕೋಟಿಗೂ ಹೆಚ್ಚು ಜನರು ಲಸಿಕೆಯ ಡೋಸ್ ಪಡೆದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    75 ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ, ನಮ್ಮ ವೈದ್ಯರು, ದಾದಿಯರು, ಪ್ಯಾರಾಮೆಡಿಕಲ್ ಸಿಬ್ಬಂದಿ, ನೈರ್ಮಲ್ಯ ಕೆಲಸಗಾರರು, ವಿಜ್ಞಾನಿಗಳು ಮತ್ತು ಕೋಟ್ಯಂತರ ನಾಗರಿಕರು ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಇತರರ ಸೇವೆಗಾಗಿ ಪ್ರತಿ ಕ್ಷಣವನ್ನೂ ಮೀಸಲಿಟ್ಟವರು ನಮ್ಮ ಮೆಚ್ಚುಗೆಗೆ ಅರ್ಹರು ಎಂದು ಹೇಳಿದ ಮೋದಿ ಕೊರೊನಾ ವಾರಿಯರ್ಸ್‍ಗಳ ಸೇವೆಯನ್ನು ಶ್ಲಾಘಿಸಿದರು.

    ಮುಂದಿನ ದಿನಗಳಲ್ಲಿ, ನಾವು ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಯನ್ನು ಪ್ರಾರಂಭಿಸುತ್ತೇವೆ. 100 ಲಕ್ಷ ಕೋಟಿ ರಾಷ್ಟ್ರೀಯ ಮೂಲಸೌಕರ್ಯ ಮಾಸ್ಟರ್ ಪ್ಲಾನ್ ಇದಾಗಿದ್ದು, ಈ ಯೋಜನೆ ಸಮಗ್ರ ಮೂಲಸೌಕರ್ಯಕ್ಕೆ ಅಡಿಪಾಯವನ್ನು ನೀಡುತ್ತದೆ ಎಂದು ತಿಳಿಸಿದರು. ಇದರ ಜೊತೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ 75 ವಂದೇ ಭಾರತ್ ರೈಲುಗಳು 75 ವಾರಗಳಲ್ಲಿ ಭಾರತದ ಮೂಲೆ ಮೂಲೆಯನ್ನು ಸಂಪರ್ಕಿಸುತ್ತದೆ ಎಂದು ತಿಳಿಸಿದರು.

    ಮೋದಿ ಭಾಷಣದ ಮುಖ್ಯಾಂಶಗಳು:
    21 ನೇ ಶತಮಾನದಲ್ಲಿ ಭಾರತದ ಸಾಮರ್ಥ್ಯಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಂಪೂರ್ಣವಾಗಿ ಬಳಸಿಕೊಳ್ಳುವುದು ಅತ್ಯಗತ್ಯ. ಇದಕ್ಕಾಗಿ, ನಾವು ಹಿಂದುಳಿದಿರುವ ವಿಭಾಗ, ಹಿಂದುಳಿದಿರುವ ಪ್ರದೇಶವನ್ನು ಕೈ ಹಿಡಿಯಬೇಕು. ಇದನ್ನೂ ಓದಿ: ದೇಶಕ್ಕೆ ಹೆಮ್ಮೆ ತಂದಿದ್ದೀರಿ – ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಕೋವಿಂದ್ ಅಭಿನಂದನೆ

    ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಲಿಮಿಟೇಶನ್ ಕಮಿಷನ್ ಅನ್ನು ರಚಿಸಲಾಗಿದೆ ಮತ್ತು ಭವಿಷ್ಯದಲ್ಲಿ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿವೆ. ಒಂದೆಡೆ ಲಡಾಖ್ ಆಧುನಿಕ ಮೂಲಸೌಕರ್ಯಗಳ ಸೃಷ್ಟಿಗೆ ಸಾಕ್ಷಿಯಾಗಿದ್ದರೆ, ಮತ್ತೊಂದೆಡೆ ಇಂಡಸ್ ಸೆಂಟ್ರಲ್ ಯೂನಿವರ್ಸಿಟಿ ಲಡಾಖ್ ಅನ್ನು ಉನ್ನತ ಶಿಕ್ಷಣದ ಕೇಂದ್ರವನ್ನಾಗಿಸುತ್ತದೆ.

    ಕಳೆದ 7 ವರ್ಷಗಳಲ್ಲಿ ಆರಂಭವಾದ ಅನೇಕ ಯೋಜನೆಗಳ ಪ್ರಯೋಜನಗಳು ಕೋಟ್ಯಂತರ ಬಡವರ ಮನೆಬಾಗಿಲನ್ನು ತಲುಪಿವೆ. ಇಂದು ಸರ್ಕಾರದ ಯೋಜನೆಗಳು ವೇಗವನ್ನು ಪಡೆದುಕೊಂಡಿವೆ ಮತ್ತು ಅವುಗಳ ಗುರಿಗಳನ್ನು ತಲುಪುತ್ತಿವೆ.

    ಟೋಕಿಯೋ ಒಲಿಂಪಿಕ್ಸ್ ನಲ್ಲಿ ನಮಗೆ ಹೆಮ್ಮೆ ತಂದ ಕ್ರೀಡಾಪಟುಗಳು ಇಂದು ನಮ್ಮ ನಡುವೆ ಇದ್ದಾರೆ. ಅವರು ನಮ್ಮ ಹೃದಯವನ್ನು ಗೆಲ್ಲುವುದರ ಜೊತೆಗೆ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ಆಗಿದ್ದಾರೆ.

    ಜನೌಷಧಿ ಯೋಜನೆಯಡಿ ಬಡವರು ಮತ್ತು ನಿರ್ಗತಿಕರಿಗೆ ಕೈಗೆಟುಕುವ ದರದಲ್ಲಿ ಔಷಧಗಳು ಸಿಗುತ್ತಿವೆ. ಇಲ್ಲಿಯವರೆಗೆ 75 ಸಾವಿರಕ್ಕೂ ಕ್ಕೂ ಹೆಚ್ಚು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಈಗ ನಾವು ಆಧುನಿಕ ಪ್ರಯೋಗಾಲಯಗಳು ಮತ್ತು ಬ್ಲಾಕ್ ಮಟ್ಟದಲ್ಲಿ ಉತ್ತಮ ಆಸ್ಪತ್ರೆಗಳನ್ನು ನಿರ್ಮಿಸುವ ಕೆಲಸ ಮಾಡುತ್ತಿದ್ದೇವೆ.

    ಮುಂದಿನ ತಲೆಮಾರಿನ ಮೂಲಸೌಕರ್ಯ, ವಿಶ್ವ ದರ್ಜೆಯ ತಯಾರಿಕೆ, ಹೊಸತನ ಮತ್ತು ಹೊಸ ಯುಗದ ತಂತ್ರಜ್ಞಾನಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕು.

    ಇಂದು ನಮ್ಮ ಹಳ್ಳಿಗಳು ವೇಗವಾಗಿ ಬದಲಾಗುತ್ತಿರುವುದನ್ನು ನಾವು ನೋಡುತ್ತೇವೆ. ಕಳೆದ ಕೆಲವು ವರ್ಷಗಳಲ್ಲಿ, ರಸ್ತೆ ಮತ್ತು ವಿದ್ಯುತ್‍ನಂತಹ ಸೌಲಭ್ಯಗಳು ಹಳ್ಳಿಗಳನ್ನು ತಲುಪಿವೆ. ಇಂದು, ಆಪ್ಟಿಕಲ್ ಫೈಬರ್ ನೆಟ್ವರ್ಕ್ ಹಳ್ಳಿಗಳಿಗೆ ಡೇಟಾ ಶಕ್ತಿಯನ್ನು ಒದಗಿಸುತ್ತದೆ, ಇಂಟರ್ನೆಟ್ ಅಲ್ಲಿಗೆ ತಲುಪುತ್ತಿದೆ. ಹಳ್ಳಿಗಳಲ್ಲೂ ಡಿಜಿಟಲ್ ಉದ್ಯಮಿಗಳು ತಯಾರಾಗುತ್ತಿದ್ದಾರೆ.