Tag: digital currency

  • ಭಾರತದಲ್ಲಿ ಡಿಜಿಟಲ್‌ ರುಪಿ ಬಿಡುಗಡೆ – ಲಾಭ ಏನು? ಕ್ರಿಪ್ಟೋ ಕರೆನ್ಸಿಗಿಂತ ಭಿನ್ನ ಹೇಗೆ?

    ಭಾರತದಲ್ಲಿ ಡಿಜಿಟಲ್‌ ರುಪಿ ಬಿಡುಗಡೆ – ಲಾಭ ಏನು? ಕ್ರಿಪ್ಟೋ ಕರೆನ್ಸಿಗಿಂತ ಭಿನ್ನ ಹೇಗೆ?

    ಮುಂಬೈ: ಬಜೆಟ್‌ನಲ್ಲಿ ಘೋಷಣೆಯಾದಂತೆ ಭಾರತದಲ್ಲಿ ಡಿಜಿಟಲ್‌ ರುಪಿ(Digital Rupee) ಅಧಿಕೃತವಾಗಿ ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಸಗಟು(Central Bank Digital Currency Wholesale) ಕ್ಷೇತ್ರಕ್ಕೆ ರುಪಿಯನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಣಕಾಸು ಕ್ಷೇತ್ರದಲ್ಲಿ ಕ್ರಾಂತಿ ಮಾಡಬಹುದು ಎಂದು ವಿಶ್ಲೇಷಣೆಯಾಗುತ್ತಿರುವ ಡಿಜಿಟಲ್‌ ರುಪಿಯ ಬಗ್ಗೆ ಇಲ್ಲಿ ಕೆಲ ಮಾಹಿತಿಯನ್ನು ನೀಡಲಾಗಿದೆ.

    ಏನಿದು ಡಿಜಿಟಲ್‌ ರುಪಿ?
    ಸರಳವಾಗಿ ಹೇಳುವುದಾದರೆ ಡಿಜಿಟಲ್‌ ರೂಪದಲ್ಲಿರುವ ಹಣ. ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಅಥವಾ ಡಿಜಿಟಲ್‌ ರುಪಿಯನ್ನು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (Reserve Bank of India)) ಬಿಡುಗಡೆ ಮಾಡುತ್ತದೆ. 2022ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಡಿಜಿಟಲ್‌ ಕರೆನ್ಸಿಯನ್ನು ಆರ್‌ಬಿಐ ಬಿಡುಗಡೆ ಮಾಡಲಿದೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದ್ದರು.

    ಯಾರು ಬಳಸಬಹುದು?
    CBDC ಯನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಚಿಲ್ಲರೆ (Central Bank Digital Currency Retail) ಬಳಕೆ ಎಲ್ಲರಿಗೂ ಲಭ್ಯವಾದರೆ ಸಗಟು (Central Bank Digital Currency Wholesale) ಅನ್ನು ಆಯ್ದ ಹಣಕಾಸು ಸಂಸ್ಥೆಗಳ ಬಳಕೆಗೆ ಮಾತ್ರ ಅನುಮತಿ ನೀಡಲಾಗಿದೆ.

    ಕ್ರಿಪ್ಟೋ ಕರೆನ್ಸಿ Vs ಡಿಜಿಟಲ್‌ ರುಪಿ:
    ಬ್ಲಾಕ್‌ಚೈನ್ ತಂತ್ರಜ್ಞಾನದ(Blockchain Technology) ಅಡಿಯಲ್ಲಿ ಕ್ರಿಪ್ಟೋಕರೆನ್ಸಿ (Cryptocurrency) ವ್ಯವಹಾರ ನಡೆಯುತ್ತದೆ. ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆ ಮೂಲಕ ಇಲ್ಲಿ ಯಾವುದೇ ವ್ಯವಹಾರ ನಡೆಯುವುದಿಲ್ಲ. ಕ್ರಿಪ್ಟೋದಲ್ಲಿ ನಷ್ಟವಾದರೆ ಹೊಣೆಗಾರರು ಯಾರು ಇರುವುದಿಲ್ಲ. ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ಪರಿಣಾಮ ಬೀರುವುದರಿಂದ ಆರ್‌ಬಿಐ ಬಲವಾಗಿ ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ವಿರೋಧಿಸುತ್ತಿದೆ ಮತ್ತು ಇವುಗಳಿಗೆ ಭಾರತದಲ್ಲಿ ಕಾನೂನಿನ ಮಾನ್ಯತೆ ಇಲ್ಲ. ಆದರೆ ಡಿಜಿಟಲ್‌ ಕರೆನ್ಸಿ ಆರ್‌ಬಿಐ ನಿಯಂತ್ರಣದಲ್ಲಿ ಇರುತ್ತದೆ. ಹೇಗೆ ನಾಣ್ಯ ಮತ್ತು ರೂಪಾಯಿಗಳಿಗೆ ಕಾನೂನಿನ ಮಾನ್ಯತೆ ಇದೆಯೋ ಅದೇ ರೀತಿ ಈ ಡಿಜಿಟಲ್‌ ಕರೆನ್ಸಿಗೂ ಮಾನ್ಯತೆ ನೀಡಲಾಗಿದೆ. ಇದನ್ನೂ ಓದಿ: ನಕ್ಷತ್ರದ ಕಣ್ಣುಗಳಿರುವ ಅಪ್ಪು ದೇವರ ಮಗು ಎಂದು ಹಾಡಿ ಹೊಗಳಿದ ರಜನಿಕಾಂತ್

    ಎಲ್ಲಿ ಲಭ್ಯ?
    ಮೊದಲ ಹಂತದಲ್ಲಿ ಎಸ್‌ಬಿಐ, ಬ್ಯಾಂಕ್‌ ಆಫ್‌ ಬರೋಡಾ, ಎಚ್‌ಡಿಎಫ್‌ಸಿ, ಐಸಿಐಸಿಐ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕೋಟಕ್‌ ಮಹೀಂದ್ರಾ ಬ್ಯಾಂಕ್‌, ಯಸ್‌ ಬ್ಯಾಂಕ್‌ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಮತ್ತು ಎಚ್‌ಎಸ್‌ಬಿಸಿ ಸೇರಿದಂತೆ 9 ಬ್ಯಾಂಕ್‌ಗಳಿಗೆ ಡಿಜಿಟಲ್‌ ರುಪಿಯನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರಿ ಬಾಂಡ್‌ಗಳ ಖರೀದಿ ಮತ್ತು ಮಾರಾಟ ಮಾಡಲು ಇದನ್ನು ಬಳಸಲಾಗುತ್ತದೆ. ಸದ್ಯಕ್ಕೆ ಸರ್ಕಾರಿ ಸೆಕ್ಯುರಿಟಿಗಳ ವಹಿವಾಟಿಗೆ ಮಾತ್ರ ಡಿಜಿಟಲ್‌ ಕರೆನ್ಸಿ ಬಳಕೆಗೆ ಅನುಮತಿ ನೀಡಲಾಗಿದೆ.

    ಲಾಭ ಏನು?
    ಬಹಳ ಮುಖ್ಯವಾಗಿ ಬಿಟ್‌ ಕಾಯಿನ್‌ ಇತ್ಯಾದಿ ಕ್ರಿಪ್ಟೋ ಕರೆನ್ಸಿಗಳ ನಿಯಂತ್ರಣ ಯಾರ ಬಳಿಯು ಇರುವುದಿಲ್ಲ. ಆಗಾಗ ಏರಿಳಿತ ಸಂಭವಿಸುತ್ತಿರುತ್ತದೆ. ಆದರೆ ಡಿಜಿಟಲ್‌ ರುಪಿ ವ್ಯವಸ್ಥೆಯ ಮೇಲೆ ಆರ್‌ಬಿಐ ಸಂಪೂರ್ಣ ನಿಯಂತ್ರಣ ಹೊಂದಿರುತ್ತದೆ. ವಹಿವಾಟು ಶುಲ್ಕ ಇಳಿಕೆಯಾಗುವುದರಿಂದ ಎರಡು ಬ್ಯಾಂಕುಗಳ ನಡುವಿನ ವ್ಯವಹಾರ ಮತ್ತಷ್ಟು ಸರಳವಾಗಲಿದೆ. ಮುದ್ರಣ ವೆಚ್ಚ ಇರುವುದಿಲ್ಲ ಮತ್ತು ಹಾಳಾಗುವುದಿಲ್ಲ. ಅಷ್ಟೇ ಅಲ್ಲದೇ ಸಾಗಾಟ ಮಾಡುವ ಅವಶ್ಯಕತೆ ಇಲ್ಲ. ಇವುಗಳನ್ನು ಕಳ್ಳತನ ಮಾಡಲು ಸಾಧ್ಯವಿಲ್ಲ. ನಕಲಿ ನೋಟುಗಳ ಹಾವಳಿ ಕಡಿಮೆಯಾಗಲಿದೆ.

    RBI

    ವಹಿವಾಟಿನ ವೆಚ್ಚವನ್ನು ಕಡಿಮೆ ಮಾಡುವುದರ ಹೊರತಾಗಿಯೂ ಡಿಜಿಟೈಸ್ಡ್ ಕರೆನ್ಸಿಯನ್ನು ಹೊಂದುವುದರಿಂದ ಅಧಿಕೃತ ನೆಟ್‌ವರ್ಕ್‌ಗಳಲ್ಲಿ ನಡೆಯುವ ಎಲ್ಲಾ ವಹಿವಾಟುಗಳನ್ನು ಗಮನಿಸಲು ಸರ್ಕಾರಕ್ಕೆ ಸಹಾಯವಾಗಲಿದೆ. ದೇಶದ ಒಳಗಡೆ ಹಣ ಹೇಗೆ ಪ್ರವೇಶಿಸುತ್ತದೆ? ಹಣ ಹೇಗೆ ಹೋಗುತ್ತದೆ ಎನ್ನುವುದನ್ನು ಸುಲಭವಾಗಿ ಪತ್ತೆಹಚ್ಚಬಹುದು. ಭವಿಷ್ಯದಲ್ಲಿ ಉತ್ತಮ ಬಜೆಟ್‌ ಮತ್ತು ಆರ್ಥಿಕ ಯೋಜನೆಗಳನ್ನು ಮಾಡಲು ಇದು ಸಹಾಯವಾಗಬಹುದು.

    ಹಂತ ಹಂತವಾಗಿ ಅನುಷ್ಠಾನ:
    ಆರ್‌ಬಿಐ ಡಿಜಿಟಲ್‌ ಕರೆನ್ಸಿಯ ಸಾಧಕ ಬಾಧಕಗಳನ್ನು ಪರಿಶೀಲಿಸಿ ಹಂತ ಹಂತವಾಗಿ ಜಾರಿ ಮಾಡಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಉದ್ಯಮಗಳು, ಸಂಸ್ಥೆಗಳು, ಖಾಸಗಿ ವಲಯಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ.

    Live Tv
    [brid partner=56869869 player=32851 video=960834 autoplay=true]

  • ಆರ್‌ಬಿಐನಿಂದ ಶೀಘ್ರದಲ್ಲೇ ಪ್ರಾಯೋಗಿಕವಾಗಿ ಡಿಜಿಟಲ್ ಕರೆನ್ಸಿ ಬಿಡುಗಡೆ

    ಆರ್‌ಬಿಐನಿಂದ ಶೀಘ್ರದಲ್ಲೇ ಪ್ರಾಯೋಗಿಕವಾಗಿ ಡಿಜಿಟಲ್ ಕರೆನ್ಸಿ ಬಿಡುಗಡೆ

    ನವದೆಹಲಿ: ಶೀಘ್ರದಲ್ಲೇ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯು (CBDC) ಇ-ರೂಪಾಯಿಯನ್ನು (Digital Rupee) ಪ್ರಾಯೋಗಿಕ ಬಳಕೆ ಪ್ರಾರಂಭಿಸಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ ತಿಳಿಸಿದೆ.

    ಆರ್‌ಬಿಐ ಮತ್ತು ಸಿಬಿಡಿಸಿ ಈಗಾಗಲೇ ಡಿಜಿಟಲ್ ಕರೆನ್ಸಿ (Digital Currency) ಕುರಿತಾಗಿ ಹಲವು ಪ್ರಾಯೋಗಿಕ ಕೆಲಸಗಳಿಗೆ ಕೈ ಹಾಕಿದ್ದು, ಕರೆನ್ಸಿಗಳ ಬಗ್ಗೆ ಮತ್ತು ನಿರ್ದಿಷ್ಟವಾಗಿ ಡಿಜಿಟಲ್ ರೂಪಾಯಿಯ ಯೋಜಿತ ವೈಶಿಷ್ಟ್ಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಈಗಿನಿಂದಲೇ ಪ್ರಯತ್ನಿಸುತ್ತಿದೆ. ನಿರ್ದಿಷ್ಟ ಬಳಕೆಗಾಗಿ ಸಿಬಿಡಿಸಿ ಇ-ರೂಪಾಯಿಯ ಪ್ರಾಯೋಗಿಕ ಬಳಕೆಯನ್ನು ಪ್ರಾರಂಭಿಸಲಿದೆ ಎಂದು ಆರ್‌ಬಿಐ ತಿಳಿಸಿದೆ. ಪ್ರಾಯೋಗಿಕ ಯೋಜನೆಗಳ ವ್ಯಾಪ್ತಿ ವಿಸ್ತರಿಸಿದಂತೆ, ಕಾಲಕಾಲಕ್ಕೆ ಡಿಜಿಟಲ್ ರೂಪಾಯಿಯ ನಿರ್ದಿಷ್ಟ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳ ಕುರಿತು ಆರ್‌ಬಿಐ ಮಾಹಿತಿ ಪಡೆದುಕೊಂಡು ಇ-ರೂಪಾಯಿ ಕುರಿತಾಗಿ ದೇಶದಲ್ಲಿ ಮತ್ತಷ್ಟು ಕಾರ್ಯರೂಪಗಳೊಂದಿಗೆ ಜಾರಿಗೆ ತರಲು ಚಿಂತಿಸಿದೆ. ಇದನ್ನೂ ಓದಿ: ರಾಜಕೀಯವನ್ನು ರಾಜಕೀಯ ಮೈದಾನದಲ್ಲೇ ಮಾಡಬೇಕು, ಸರ್ಕಾರಿ ಕಚೇರಿಗಳಲ್ಲಲ್ಲ: ಡಿಕೆಶಿ

    ಇ-ರೂಪಾಯಿಯು ಬ್ಯಾಂಕ್ ನೋಟುಗಳಿಗಿಂತ ಹೆಚ್ಚೇನೂ ಭಿನ್ನವಾಗಿಲ್ಲ. ಆದರೆ ಡಿಜಿಟಲ್ ರೂಪದಲ್ಲಿರುವುದರಿಂದ ಆಗಿರುವುದರಿಂದ ಇದು ತುಂಬಾ ಸರಳ, ವೇಗ ಮತ್ತು ಅಗ್ಗವಾಗುವ ಸಾಧ್ಯತೆಯಿದೆ. ಡಿಜಿಟಲ್ ಹಣದ ಇತರ ರೂಪಗಳ ಎಲ್ಲಾ ವಹಿವಾಟಿನ ಪ್ರಯೋಜನಗಳನ್ನೂ ಇದು ಹೊಂದಲಿದ್ದು, ಈ ಮೂಲಕ ಗ್ರಾಹಕರಿಗೆ ಇನ್ನಷ್ಟು ಡಿಜಿಟಲ್ ಸೇವೆಗಳನ್ನು ನೀಡಲು ಮುಂದಾಗಿದ್ದೇವೆ ಎಂದು ಆರ್‌ಬಿಐ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ; ಶಿವಲಿಂಗದ ವೈಜ್ಞಾನಿಕ ಪರೀಕ್ಷೆಗೆ ಆಕ್ಷೇಪ – ತೀರ್ಪಿನ ದಿನಾಂಕ ಮುಂದೂಡಿದ ವಾರಣಾಸಿ ಕೋರ್ಟ್‌

    2022-23ರ ಕೇಂದ್ರ ಬಜೆಟ್‍ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಆರ್‌ಬಿಐ ಪ್ರಸಕ್ತ ಹಣಕಾಸು ವರ್ಷದಲ್ಲಿ ಡಿಜಿಟಲ್ ಕರೆನ್ಸಿಯನ್ನು ಹೊರತರಲಿದೆ ಎಂದು ಹೇಳಿದ್ದರು. ಇದೀಗ ಆರ್‌ಬಿಐ ಡಿಜಿಟಲ್ ಕರೆನ್ಸಿ ಹೊರತರಲು ಸಿದ್ಧವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಡಿಜಿಟಲ್‌ ಕರೆನ್ಸಿಯಿಂದ ತೆರಿಗೆ ಸೋರಿಕೆ ನಿಯಂತ್ರಿಸಬಹುದು: ಆರ್ಥಿಕ ತಜ್ಞ ವಿಜಯ್‌ ರಾಜೇಶ್‌

    ಡಿಜಿಟಲ್‌ ಕರೆನ್ಸಿಯಿಂದ ತೆರಿಗೆ ಸೋರಿಕೆ ನಿಯಂತ್ರಿಸಬಹುದು: ಆರ್ಥಿಕ ತಜ್ಞ ವಿಜಯ್‌ ರಾಜೇಶ್‌

    ಬೆಂಗಳೂರು: ದೇಶದಲ್ಲಿ ಆರ್‌ಬಿಐನಿಂದ ಡಿಜಿಟಲ್‌ ಕರೆನ್ಸಿಯನ್ನು ಪರಿಚಯಿಸುವ ಪ್ರಸ್ತಾವನೆಯನ್ನು ಕೇಂದ್ರ ಬಜೆಟ್‌ನಲ್ಲಿ ಮಂಡಿಸಲಾಗಿದೆ. ಡಿಜಿಟಲ್‌ ಕರೆನ್ಸಿಯ ಅಗತ್ಯತೆ ಹಾಗೂ ಅದರ ಚಲಾವಣೆಯಿಂದಾಗುವ ಪ್ರಯೋಜನಗಳ ಕುರಿತು ಆರ್ಥಿಕ ತಜ್ಞ ವಿಜಯ್‌ ರಾಜೇಶ್‌ ಪ್ರತಿಕ್ರಿಯೆ ನೀಡಿದ್ದಾರೆ.

    ವಿಜಯ್‌ ರಾಕೇಶ್‌ ಏನು ಹೇಳುತ್ತಾರೆ?
    ಡಿಜಿಟಲ್ ಕರೆನ್ಸಿ ಯೂರೋಪ್‌, ಅಮೆರಿಕಾದಲ್ಲಿ ಚಲಾವಣೆಯಲ್ಲಿದೆ. ಈಗ ನಮ್ಮ ಕೈಯಲ್ಲಿರುವ ಕ್ಯಾಶ್ ಇ-ಫಾರ್ಮ್‌ನಲ್ಲಿದೆ. ಡಿಜಿಟಲ್ ಫಾರ್ಮ್‌ನಲ್ಲಿರೋದನ್ನ ಡಿಜಿಟಲ್ ಕರೆನ್ಸಿ ಎನ್ನಲಾಗುತ್ತದೆ. ಕ್ರಿಪ್ಟೋ ಕರೆನ್ಸಿಯನ್ನು ನಿಯಂತ್ರಿಸುವುದು ಕಷ್ಟ. ಆದರೆ ಡಿಜಿಟಲ್ ಕರೆನ್ಸಿ ಕಾನೂನು ಬದ್ಧವಾಗಿರುತ್ತದೆ. ಡಿಜಿಟಲ್ ಕರೆನ್ಸಿ ಆರ್‌ಬಿಐ ಸಿರಿಸ್ ನಂಬರ್ ರೀತಿ ಅಲಾಟ್ ಮಾಡಬಹುದು‌. ಒಂದು ಕಾರ್ಡ್ ಅಥವಾ ಪಾಸ್‌ವರ್ಡ್ ರೀತಿ ನಿರ್ವಹಿಸಬಹುದು. ಇದನ್ನೂ ಓದಿ: Budget 2022: ತಾಲಿಬಾನ್‌ ಆಡಳಿತದ ಅಫ್ಘಾನಿಸ್ತಾನಕ್ಕೆ 200 ಕೋಟಿ ನೆರವು

    ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ನಕಲಿ ನೋಟು ಹಾವಳಿ ಕಡಿಮೆಯಾಗಲಿದೆ. ನೋಟುಗಳ ಮುದ್ರಣ ವೆಚ್ಚ ಕಡಿಮಯಾಗಲಿದೆ. ಆರ್ಥಿಕ ಚೇತರಿಕೆ ಶೀಘ್ರವಾಗಿ ಆಗಬಹುದು. ಡಿಜಿಟಲ್ ಕರೆನ್ಸಿ ಕಾನೂನು ಬದ್ಧವಾಗಿರುವುದರಿಂದ ತೆರಿಗೆ ಸೋರಿಕೆಯನ್ನು ಕಡಿಮೆ ಮಾಡಬಹುದು. ಹಣ ಎಲ್ಲಿಂದ, ಎಲ್ಲಿಗೆ, ಯಾರಿಗೆ ಹೋಗುತ್ತಿದೆ ಎನ್ನುವುದರ ವಿವರ ಡಿಜಿಟಲ್ ಕರೆನ್ಸಿ ಮೂಲಕ ಪಡೆಯಬಹುದು. ನಗದು ರಹಿತ ಅಭಿಯಾನಕ್ಕೆ ಹೆಚ್ಚು ಒತ್ತು ಕೊಟ್ಟ ಹಾಗೆ ಆಗುತ್ತದೆ. ವಹಿವಾಟು ಸರಳೀಕರಣವಾಗಲಿದೆ. ತೆರಿಗೆ ಹೆಚ್ಚು ಸಂಗ್ರಹಿಸಲು ಹಾಗೂ ಸರ್ಕಾರದ ಆದಾಯ ಸಂಗ್ರಹಕ್ಕೆ ಸಹಾಯವಾಗಲಿದೆ ಎಂದು ವಿಜಯ್‌ ರಾಜೇಶ್‌ ತಿಳಿಸಿದ್ದಾರೆ.

    ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿಂದು ಮಂಡಿಸಿದ 2022-23ನೇ ಸಾಲಿನ ಬಜೆಟ್‌ನಲ್ಲಿ ‘ಡಿಜಿಟಲ್ ರೂಪಾಯಿ’ಯನ್ನು ಮಾರುಕಟ್ಟೆಗೆ ಪರಿಚಯಿಸುವ ಪ್ರಸ್ತಾಪ ಪ್ರಕಟಿಸಿದ್ದಾರೆ. 2022-23ರಿಂದ ಅಂದರೆ ಪ್ರಸಕ್ತ ವರ್ಷದಿಂದಲೇ ಆರಂಭವಾಗುವಂತೆ ಭಾರತೀಯ ರಿಸರ್ವ್ ಬ್ಯಾಂಕ್, ಡಿಜಿಟಲ್ ರೂಪಾಯಿ ಅನ್ನು ಹಣಕಾಸು ಮಾರುಕಟ್ಟೆಗೆ ಪರಿಚಯಿಸಲಿದೆ. ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್ ಕರೆನ್ಸಿ(ಸಿಬಿಡಿಸಿ)ಯು ಡಿಜಿಟಲ್ ಆರ್ಥಿಕತೆಯನ್ನು ಹೆಚ್ಚಿಸಲಿದೆ. ಡಿಜಿಟಲ್ ಕರೆನ್ಸಿ ಹೆಚ್ಚು ಪರಿಣಾಮಕಾರಿ ಮತ್ತು ಅಗ್ಗದ ಕರೆನ್ಸಿ ನಿರ್ವಹಣಾ ವ್ಯವಸ್ಥೆಗೆ ಕಾರಣವಾಗುತ್ತದೆ. ಡಿಜಿಟಲ್ ಕರೆನ್ಸಿ ಬ್ಲಾಕ್‌ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಲಿದೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಕ್ರಿಪ್ಟೋ ಕರೆನ್ಸಿಗೆ ಭಾರತ ಎಂಟ್ರಿ – ಆರ್‌ಬಿಐ ನೀಡಲಿದೆ ಡಿಜಿಟಲ್‌ ರುಪಿ

  • ಕ್ರಿಪ್ಟೋ ಕರೆನ್ಸಿಗೆ ಭಾರತ ಎಂಟ್ರಿ – ಆರ್‌ಬಿಐ ನೀಡಲಿದೆ ಡಿಜಿಟಲ್‌ ರುಪಿ

    ಕ್ರಿಪ್ಟೋ ಕರೆನ್ಸಿಗೆ ಭಾರತ ಎಂಟ್ರಿ – ಆರ್‌ಬಿಐ ನೀಡಲಿದೆ ಡಿಜಿಟಲ್‌ ರುಪಿ

    ನವದೆಹಲಿ: ಭಾರತವೂ ಈಗ ಅಧಿಕೃತವಾಗಿ ಕ್ರಿಪ್ಟೋ ಕರೆನ್ಸಿಗೆ ಎಂಟ್ರಿಕೊಟ್ಟಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಬಜೆಟ್‌ ಭಾಷಣದಲ್ಲಿ (Union Budget 2022) ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಡಿಜಿಟಲ್‌ ರುಪಿಯನ್ನು ಬಿಡುಗಡೆ ಮಾಡಲಿದೆ ಎಂದು ಘೋಷಿಸಿದ್ದಾರೆ.

    ಬ್ಲಾಕ್‌ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿಕೊಂಡು ಆರ್‌ಬಿಐ 2022-23ನೇ ಹಣಕಾಸು ವರ್ಷದಲ್ಲಿ ಡಿಜಿಟಲ್ ರೂಪಾಯಿಯನ್ನು ನೀಡಲಿದೆ. ಇದರಿಂದ ಆರ್ಥಿಕತೆಗೆ ದೊಡ್ಡ ಉತ್ತೇಜನ ಸಿಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಇದರ ಜೊತೆ ಕ್ರಿಪ್ಟೋ ಮೇಲಿನ ಆದಾಯಕ್ಕೆ 30% ತೆರಿಗೆ ವಿಧಿಸಿದ್ದಾರೆ. ಇದರಿಂದಾಗಿ ಕ್ರಿಪ್ಟೋಗೆ ಭಾರತದಲ್ಲಿ ಕಾನೂನು ಮಾನ್ಯತೆ ಸಿಕ್ಕಿದೆ. ವಿಶ್ವದ ಕ್ರಿಪ್ಟೋ ಮಾರುಕಟ್ಟೆಯಲ್ಲಿ ಭಾರತದವರೇ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಭಾರತದ ನಿಲುವು ಏನು ಎನ್ನುವ ಕುತೂಹಲ ಇತ್ತು. ಇದನ್ನೂ ಓದಿ: Budget: 2022-23ರ ಹೊತ್ತಿಗೆ 5G ಮೊಬೈಲ್‌ ಸೇವೆ

    ಬೆಂಗಳೂರಿನ ಶ್ರೀಕೀ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದರಿಂದ ಬಿಟ್‌ ಕಾಯಿನ್‌ ಸೇರಿದಂತೆ ಕ್ರಿಪ್ಟೋ ಕರೆನ್ಸಿಗಳನ್ನು ಸರ್ಕಾರ ನಿಷೇಧ ಮಾಡುತ್ತಾ ಎಂಬ ಪ್ರಶ್ನೆ ಎದ್ದಿತ್ತು. ಈ ನಡುವೆ ಸರ್ಕಾರ ಮಸೂದೆ ಮಂಡನೆ ಕ್ರಿಪ್ಟೋ ಕರೆನ್ಸಿಗಳ ಮೇಲೆ ನಿಯಂತ್ರಣ ಹೇರಲಿದೆ ಎಂಬ ಸುದ್ದಿಯೂ ಪ್ರಕಟವಾಗಿತ್ತು. ಈಗ ಕೇಂದ್ರ ಸರ್ಕಾರವೇ ಡಿಜಿಟಲ್‌ ಕರೆನ್ಸಿ ತರುವುದಾಗಿ ಘೋಷಣೆ ಮಾಡಿ ಎಲ್ಲ ಗೊಂದಲಗಳಿಗೆ ಬ್ರೇಕ್‌ ಹಾಕಿದೆ. ಇದನ್ನೂ ಓದಿ: Budget 2022: ವರ್ಲ್ಡ್‌ ಕ್ಲಾಸ್‌ ಶಿಕ್ಷಣಕ್ಕೆ ಡಿಜಿಟಲ್‌ ವಿಶ್ವವಿದ್ಯಾಲಯ ಸ್ಥಾಪನೆ