Tag: Digi Locker

  • ಡಿಜಿ ಲಾಕರ್​ನಲ್ಲಿ SSLC ಅಂಕಪಟ್ಟಿ – ವಲಸೆ ಪ್ರಮಾಣ ಪತ್ರವೂ ಇನ್ಮುಂದೆ ಆನ್‍ಲೈನಲ್ಲಿ

    ಡಿಜಿ ಲಾಕರ್​ನಲ್ಲಿ SSLC ಅಂಕಪಟ್ಟಿ – ವಲಸೆ ಪ್ರಮಾಣ ಪತ್ರವೂ ಇನ್ಮುಂದೆ ಆನ್‍ಲೈನಲ್ಲಿ

    ಬೆಂಗಳೂರು: ಎಸ್‍ಎಸ್‍ಎಲ್‍ಸಿ ಬೋರ್ಡ್ ತಂತ್ರಜ್ಞಾನವನ್ನು ಅಳವಡಿಕೊಂಡು ಹೊಸ ಹೊಸ ಕಾರ್ಯಕ್ರಮ ಜಾರಿಗೆ ತರುತ್ತಿದೆ. ಅಂಕಪಟ್ಟಿಗಳು ಮಕ್ಕಳಿಗೆ ಸುಲಭವಾಗಿ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಡಿಜಿ ಲಾಕರ್​ನಲ್ಲಿ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ ಸಿಗುವ ವ್ಯವಸ್ಥೆ ಮಾಡಿದೆ.

    ಕಳೆದ ವರ್ಷದಿಂದ ಡಿಜಿ ಲಾಕರ್​ನಲ್ಲಿ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ ಅಪ್ ಲೋಡ್ ಮಾಡಲಾಗ್ತಿತ್ತು. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಬೋರ್ಡ್ 2003 ರಿಂದ 2019 ವರೆಗಿನ ಉತ್ತೀರ್ಣರಾದ ಎಲ್ಲಾ ಅಂಕಪಟ್ಟಿಗಳನ್ನ ಡಿಜಿ ಲಾಕರ್​ಗೆ ಅಪ್ ಲೋಡ್ ಮಾಡಲಾಗಿದೆ. ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಬಳಸಿ ಅಂಕಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ: ಡಿಜಿ ಲಾಕರ್ ಮೂಲಕವೇ ವಾಹನದ ದಾಖಲೆಗಳನ್ನು ತೋರಿಸಿ: ಫೈಲ್ ಸೇವ್ ಮಾಡೋದು ಹೇಗೆ? 59 ಸೆಕೆಂಡಿನ ವಿಡಿಯೋ ನೋಡಿ

    ಕಳೆದ ವರ್ಷ ಕೇವಲ 2019 ಅವಧಿಯ ಅಂಕಪಟ್ಟಿಗಳನ್ನು ಮಾತ್ರ ಅಪ್ ಲೋಡ್ ಮಾಡಲಾಗಿತ್ತು. ಹಳೆಯ ವರ್ಷಗಳ ಅಂಕಪಟ್ಟಿ ಅಪ್ ಲೋಡ್ ಮಾಡುವಂತೆ ಮನವಿಗಳು ಬಂದಿದ್ದವು. ಹೀಗಾಗಿ 2003 ರಿಂದ 2019 ವರೆಗಿನ ಸುಮಾರು 1 ಕೋಟಿ 12 ಲಕ್ಷ ಅಂಕಪಟ್ಟಿಗಳನ್ನ ಡಿಜಿ ಲಾಕರ್​ಗೆ ಬೋರ್ಡ್ ಅಪ್ ಲೋಡ್ ಮಾಡಿದೆ.

    ಕೇವಲ ಅಂಕ ಪಟ್ಟಿ ಮಾತ್ರವಲ್ಲ ವಲಸೆ ಪ್ರಮಾಣ ಪತ್ರವೂ ಕೂಡಾ ಇನ್ನು ಮುಂದೆ ಆನ್‍ಲೈನ್‍ನಲ್ಲಿ ಸಿಗಲಿದೆ. ಇಷ್ಟು ದಿನ ವಲಸೆ ಪ್ರಮಾಣ ಪತ್ರ(ಮೈಗ್ರೇಷನ್ ಸರ್ಟಿಫಿಕೇಟ್) ವನ್ನ ಬೋರ್ಡ್ ಗೆ ಹೋಗಿ ಅರ್ಜಿ ಹಾಕಿ ಪಡೆಯಬೇಕಿತ್ತು. ಇದರಿಂದ ಮಕ್ಕಳು, ಪೋಷಕರಿಗೆ ತೊಂದರೆ ಆಗುತಿತ್ತು. ಈ ಸಮಸ್ಯೆ ನಿವಾರಣೆ ಮಾಡಲು ಇನ್ನು ಮುಂದೆ ವಲಸೆ ಪ್ರಮಾಣ ಪತ್ರ ಪಡೆಯಲು ಆನ್‍ಲೈನ್‍ನಲ್ಲೇ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಎಸ್‍ಎಸ್‍ಎಲ್‍ಸಿ ಬೋರ್ಡ್ ಕಲ್ಪಿಸಿದೆ.

    ಏನಿದು ಡಿಜಿ ಲಾಕರ್?
    ಕೇಂದ್ರ ಸರ್ಕಾರವು ಆನ್‍ಲೈನ್‍ಗಳಲ್ಲಿ ಡಿಜಿಟಲ್ ರೂಪದಲ್ಲಿ ದಾಖಲೆಗಳನ್ನು ಶೇಖರಣಾ ಮಾಡಿ ನಮಗೆ ಯಾವಾಗ ಬೇಕಾದರೂ ಪಡೆಯಬಹುದಾದ ನೂತನ ಡಿಜಿ ಲಾಕರ್ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಈ ಡಿಜಿ ಲಾಕರ್ ವೆಬ್‍ಸೈಟ್‍ನಲ್ಲಿ ಒಟ್ಟು 1 ಜಿಬಿವರೆಗಿನ ದಾಖಲೆಗಳನ್ನು ಶೇಖರಿಸಿಡಬಹುದಾಗಿದೆ. ಅಲ್ಲದೇ ಯಾವುದೇ ದಾಖಲೆಗಳ ಪರಿಶೀಲನೆಗೆ ಈ ಡಿಜಿ ಲಾಕರ್ ವ್ಯವಸ್ಥೆ ಬಲು ಸುಲಭವಾಗಿದೆ. ಇದರಲ್ಲಿ ಶೈಕ್ಷಣಿಕ ಪ್ರಮಾಣ ಪತ್ರ, ಅಂಕಪಟ್ಟಿ, ಗುರುತಿನ ಚೀಟಿ, ವಾಹನ ಚಾಲನಾ ಪರವಾನಿಗೆ, ವಿಮೆ ಹಾಗೂ ಮೊದಲಾದ ದಾಖಲೆಗಳನ್ನು ಇಮೇಜ್ ರೂಪದಲ್ಲಿ ಸಂಗ್ರಹಿಸಿಡಬಹುದಾಗಿದೆ.

    ಡಿಜಿ ಲಾಕರ್ ಪಡೆಯುವುದು ಹೇಗೆ?
    ಸಾರ್ವಜನಿಕರು ತಮ್ಮ ಸ್ಮಾರ್ಟ್ ಫೋನ್‍ಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್ ಡಿಜಿಲಾಕರ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿ, ಸೈನ್ ಅಪ್ ಆಯ್ಕೆ ಒತ್ತಬೇಕು, ನಂತರ ಹೊಸ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಹಾಕಿ, ಆಧಾರ್ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಂಡು ಸುಲಭವಾಗಿ ಬಳಸಿಕೊಳ್ಳಬಹುದಾಗಿದೆ.

  • ಡಿಜಿ ಲಾಕರ್ ಮೂಲಕವೇ ವಾಹನದ ದಾಖಲೆಗಳನ್ನು ತೋರಿಸಿ: ಫೈಲ್ ಸೇವ್ ಮಾಡೋದು ಹೇಗೆ? 59 ಸೆಕೆಂಡಿನ ವಿಡಿಯೋ ನೋಡಿ

    ಡಿಜಿ ಲಾಕರ್ ಮೂಲಕವೇ ವಾಹನದ ದಾಖಲೆಗಳನ್ನು ತೋರಿಸಿ: ಫೈಲ್ ಸೇವ್ ಮಾಡೋದು ಹೇಗೆ? 59 ಸೆಕೆಂಡಿನ ವಿಡಿಯೋ ನೋಡಿ

    ನವದೆಹಲಿ: ವಾಹನಗಳ ದಾಖಲೆಗಳನ್ನು ಸವಾರರು ತಮ್ಮ ಡಿಜಿ ಲಾಕರ್ ಆ್ಯಪ್ ಮೂಲಕವೇ ಪೊಲೀಸರಿಗೆ ತೋರಿಸಬಹುದೆಂದು ಕೇಂದ್ರ ಸರ್ಕಾರ ಡಿಜಿ ಲಾಕರ್ ಸೇವೆಗೆ ಅಧಿಕೃತ ಆದೇಶ ನೀಡಿದೆ.

    ಕೇಂದ್ರ ಸಾರಿಗೆ ಇಲಾಖೆಯು ದಾಖಲೆಗಳನ್ನು ಡಿಜಿ ಲಾಕರ್ ನಲ್ಲಿಯೇ ಪರಿಶೀಲಿಸಬಹುದೆಂದು ಮಾನ್ಯತೆ ನೀಡಿ, ಮಹತ್ವದ ಆದೇಶವನ್ನು ಹೊರಡಿಸಿದೆ. ಇದರಿಂದಾಗಿ ವಾಹನಸವಾರರು ಇನ್ನು ಮುಂದೆ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ವಾಹನಗಳನ್ನು ಅಡ್ಡಹಾಕಿ ದಾಖಲೆ ಕೇಳಿದರೆ, ಸವಾರರು ತಮ್ಮ ಮೊಬೈಲ್ ನಲ್ಲಿರುವ ದಾಖಲೆ ತೋರಿಸಿ ದಂಡ ಹಾಗೂ ಕಾನೂನಿನ ಕ್ರಮದಿಂದ ಪಾರಾಗಬಹುದಾಗಿದೆ.

    ಈ ಸಂಬಂಧ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಸ್ಮಾರ್ಟ್​ಕಾರ್ಡ್ ಅಥವಾ ಕಾಗದ ರೂಪದ ದಾಖಲೆಗಳಿಗೆ ಡಿಜಿಟಲ್ ದಾಖಲೆಗಳನ್ನು ಸಲ್ಲಿಸಬಹುದೆಂದು ಉಲ್ಲೇಖಿಸಲಾಗಿದೆ. ಸದ್ಯ ಇಲಾಖೆ ಡಿಜಿಲಾಕರ್ ​ಆ್ಯಪ್​ನಲ್ಲಿ ಚಾಲನಾ ಪರವಾನಗಿ, ನೋಂದಣಿ ಪತ್ರ ಮತ್ತು ವಾಯುಮಾಲಿನ್ಯ ಪ್ರಮಾಣಪತ್ರದ ಡಿಜಿಟಲ್ ಪ್ರತಿಗಳನ್ನು ಸಂಗ್ರಹಿಸಬಹುದಾಗಿದೆ.

    ಇದಲ್ಲದೇ ಕುಡಿದು, ಅಜಾಗರೂಕ ಚಾಲನೆ ಹಾಗೂ ಇನ್ನು ಮುಂತಾದ ಸಂದರ್ಭಗಳಲ್ಲಿ ಸಂಚಾರಿ ಪೊಲೀಸರು ಸವಾರರ ಮೂಲ ಚಾಲನಾ ಪತ್ರವನ್ನು ಮುಟ್ಟುಗೊಳ್ಳುವ ಅಧಿಕಾರವನ್ನು ಹೊಂದಿರುತ್ತಾರೆ. ಅಧಿಕಾರಿಗಳು ಕಾನೂನು ರೀತಿ ಡಿಎಲ್ ಮತ್ತು ಆರ್ ಸಿ ಜಪ್ತಿಮಾಡಬೇಕಾದ ಪ್ರಕರಣಗಳಲ್ಲಿ ದಾಖಲೆಯ ಮೂಲ ಪ್ರತಿ ಅಗತ್ಯವಾಗಿರಲಿದೆ.

    ಏನಿದು ಡಿಜಿ ಲಾಕರ್?
    ಕೇಂದ್ರ ಸರ್ಕಾರವು ಆನ್‍ಲೈನ್‍ಗಳಲ್ಲಿ ಡಿಜಿಟಲ್ ರೂಪದಲ್ಲಿ ದಾಖಲೆಗಳನ್ನು ಶೇಖರಣಾ ಮಾಡಿ ನಮಗೆ ಯಾವಾಗ ಬೇಕಾದರೂ ಪಡೆಯಬಹುದಾದ ನೂತನ ಡಿಜಿ ಲಾಕರ್ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಈ ಡಿಜಿ ಲಾಕರ್ ವೆಬ್‍ಸೈಟ್‍ನಲ್ಲಿ ಒಟ್ಟು 1 ಜಿಬಿವರೆಗಿನ ದಾಖಲೆಗಳನ್ನು ಶೇಖರಿಸಿಡಬಹುದಾಗಿದೆ. ಅಲ್ಲದೇ ಯಾವುದೇ ದಾಖಲೆಗಳ ಪರಿಶೀಲನೆಗೆ ಈ ಡಿಜಿ ಲಾಕರ್ ವ್ಯವಸ್ಥೆ ಬಲು ಸುಲಭವಾಗಿದೆ. ಇದರಲ್ಲಿ ಶೈಕ್ಷಣಿಕ ಪ್ರಮಾಣ ಪತ್ರ, ಅಂಕಪಟ್ಟಿ, ಗುರುತಿನ ಚೀಟಿ, ವಾಹನ ಚಾಲನಾ ಪರವಾನಿಗೆ, ವಿಮೆ ಹಾಗೂ ಮೊದಲಾದ ದಾಖಲೆಗಳನ್ನು ಇಮೇಜ್ ರೂಪದಲ್ಲಿ ಸಂಗ್ರಹಿಸಿಡಬಹುದಾಗಿದೆ.

    ಡಿಜಿ ಲಾಕರ್ ಪಡೆಯುವುದು ಹೇಗೆ?
    ಸಾರ್ವಜನಿಕರು ತಮ್ಮ ಸ್ಮಾರ್ಟ್ ಫೋನ್‍ಗಳಲ್ಲಿ ಪ್ಲೇ ಸ್ಟೋರ್ ಹಾಗೂ ಆಪಲ್ ಐಓಎಸ್ ಮುಖಾಂತರ ಡಿಜಿಲಾಕರ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿ, ಸೈನ್ ಅಪ್ ಆಯ್ಕೆ ಒತ್ತಬೇಕು, ನಂತರ ಹೊಸ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಹಾಕಿ, ಆಧಾರ್ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಂಡು ಸುಲಭವಾಗಿ ಬಳಸಿಕೊಳ್ಳಬಹುದಾಗಿದೆ.

    ದಿನ ನಿತ್ಯ ಜೀವನದಲ್ಲಿ ಡಿಜಿ ಲಾಕರ್ ಉಪಯೋಗವೇನು?

    ಆಧಾರ್ ಮೂಲಕ ಡಿಜಿ ಲಾಕರ್ ಬಳಸುವುದು ಹೇಗೆ?

    https://youtu.be/27U4XUl-nyg

    ಡಿಜಿ ಲಾಕರ್ ನಲ್ಲಿ ದಾಖಲೆಗಳನ್ನು ಸಂಗ್ರಹಿಸುವುದು ಹೇಗೆ?

    https://youtu.be/7P17ZJdKmts

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಪಿಯು ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್!

    ಪಿಯು ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್!

    ಬೆಂಗಳೂರು: ರಾಜ್ಯದ ಎಲ್ಲಾ ಪಿಯು ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್. ಆನ್ ಲೈನ್ ನಲ್ಲಿ ಮಾರ್ಕ್ಸ್  ಕಾರ್ಡ್ ಸಿಗುವಂತೆ ಮಾಡಿದ್ದ ಪಿಯು ಮಂಡಳಿ, ಅನ್ ಸೇಫ್ ಟೆಕ್ನಾಲಜಿ ಮೊರೆ ಹೋಗಿದೆ. ಇದರಿಂದಾಗಿ ಲಕ್ಷಾಂತರ ಮಕ್ಕಳ ಭವಿಷ್ಟ ಆತಂಕಕ್ಕೆ ಸಿಲುಕಿದೆ.

    ಇತ್ತೀಚೆಗಷ್ಟೆ ರಾಜ್ಯ ಪಿಯು ಮಂಡಳಿ ವಿದ್ಯಾರ್ಥಿಗಳ ಮಾರ್ಕ್ಸ್ ಕಾರ್ಡ್ ಆನ್ ಲೈನ್ ನಲ್ಲಿ ಸಿಗುವಂತೆ ಮಾಡಿದೆ. ಡಿಜಿ ಲಾಕರ್ ಎಂಬ ನೂತನ ಟೆಕ್ನಾಲಜಿ ಬಳಸುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಆದರೆ ಇಲ್ಲಿ ಯಾವ ಮಾರ್ಕ್ಸ್ ಕಾರ್ಡ್ ಕೂಡ ಸೇಫ್ ಆಗಿಲ್ಲ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ.

    ಡಿಜಿ ಲಾಕರ್ ಕೇಂದ್ರೀಕೃತ ಸರ್ವರ್ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು, ಯಾವುದೇ ಹ್ಯಾಕರ್ ಬೇಕಾದರು ಸರಳವಾಗಿ ಇದನ್ನು ಕ್ರಾಕ್ ಮಾಡಬಹುದು. ನ್ಯಾಶನಲ್ ಅಕಾಡಿಮೆಕ್ ಡೆಪಾಸಿಟರಿ (ನ್ಯಾಡ್) ಎಂಬ ಸಂಟ್ರಲೈಸಡ್ ಸರ್ವರ್ ಈ ಹಿಂದೆ ಹ್ಯಾಕ್ ಮಾಡಲಾಗಿತ್ತು. ಅದೇ ರೀತಿಯ ತಂತ್ರಜ್ಞಾನವನ್ನು ಡಿಜಿಲಾಕರ್ ಬಳಸುತ್ತಿದೆ. ಹಾಗಾಗಿ ಡಿಜಿಲಾಕರ್ ನಲ್ಲಿ ಅಂಕಪಟ್ಟಿ ಸೇವ್ ಮಾಡಿ ಆನ್ ಲೈನ್ ನಲ್ಲಿ ಲಭ್ಯವಾಗುವಂತೆ ಮಾಡುವ ಪಿಯು ಮಂಡಳಿ ವಿದ್ಯಾರ್ಥಿಗಳ ಭವಿಷ್ಯವನ್ನು ಆತಂತಕ್ಕೆ ಸಿಲುಕಿಸಿದೆ.

    ಪಿಯು ಮಂಡಳಿ ನಿರ್ದೇಶಕಿ ಸಿ.ಶಿಖಾ ಅವರು ಕಳೆದ ತಿಂಗಳಷ್ಟೆ ಈ ತಂತ್ರಜ್ಞಾನದ ಬಳಕೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಇವರು ಆತುರದಲ್ಲಿ ನಿರ್ಣಯ ಕೈಗೊಂಡಂತಿದೆ. ಈ ರೀತಿ ಕೇಂದ್ರೀಕೃತ ಸರ್ವರ್ ಬಳಸುದರಿಂದ ದಾಖಲೆಗಳನ್ನು ತಿರುಚುವ ಸಾಧ್ಯತೆ ಇದೆ. ಜೊತೆಗೆ ತಿದ್ದುಪಡಿ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಐಟಿ ಪರಿಣಿತ ಮಧಸೂಧನ್ ಹೇಳಿದ್ದಾರೆ.

    ಸೆಂಟ್ರಲೈಸಡ್ ಸರ್ವರ್ ಬಳಸದೆ ಆನ್ ಲೈನ್ ನಲ್ಲಿ ಡಾಕ್ಯೂಮೆಂಟ್ ಸೇವ್ ಮಾಡುವುದಕ್ಕೆ ಬೇರ ಅವಕಾಶವಿದ್ದು, ಸದ್ಯಕ್ಕೆ ಹ್ಯಾಕರ್ ಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಮುಕ್ತಿ ಪಡೆಯಲು ಬ್ಲಾಕ್ ಚೈನ್ ಟೆಕ್ನಾಲಜಿ ಬಳಸಬೇಕಾಗುತ್ತದೆ.

    ಏನಿದು ಬ್ಲಾಕ್ ಚೈನ್ ಟೆಕ್ನಾಲಜಿ?
    ಇಲ್ಲಿ ದಾಖಲೆಗಳು ಲಿಂಕ್ ಮೂಲಕ ಸೇವ್ ಮಾಡಲಾಗುತ್ತದೆ. ಲಕ್ಷಗಟ್ಟಲೆ ಕಂಪ್ಯೂಟರ್ ಬಳಕೆದಾರರು ಈ ಡೇಟಾ ಅನ್ನು ನಿರ್ವಹಿಸುತ್ತಾರೆ. ಇಲ್ಲಿ ಯಾವುದೇ ಮಾರ್ಕ್ಸ್ ಕಾರ್ಡ್ ನ ಡೇಟಾ ಬದಲಾವಣೆ ಮಾಡಲು ಸಾಧ್ಯವಿಲ್ಲ. ಜೊತೆಗೆ ಯಾವುದೇ ಮೂರನೇ ವ್ಯಕ್ತಿ ಸರ್ವರ್ ಬಳಕೆ ಮಾಡುವುದಿಲ್ಲ. ಓಪನ್ ಸೋರ್ಸ್ ಡೇಟಾ ಮೈಂಟೈನೆನ್ಸ್ ತಂತ್ರಜ್ಞಾನದ ಮೂಲಕ ಮಾಹಿತಿಯನ್ನು ಕ್ರೋಢಿಕರಿಸಲಾಗುತ್ತದೆ.

    ಹ್ಯಾಕರ್ಸ್ ನಿಂದ ನಿಮ್ಮ ದಾಖಲೆಗಳನ್ನು ರಕ್ಷಿಸಿಕೊಳ್ಳಬೇಕಿದಾರೆ ಬ್ಲಾಕ್ ಚೈನ್ ತಂತ್ರಜ್ಞಾನದ ಬಳಸಬಹುದಾಗಿದೆ. ಇದರಲ್ಲಿ ಯಾರೂ ಕೂಡ ಹ್ಯಾಕ್ ಮಾಡಿ ದಾಖಲೆಗಳನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಅಲ್ಲದೆ ಇಲ್ಲಿ ಮಾಹಿತಿ ನಿರ್ವಹಣೆ ಮಾಡಲು ಲಕ್ಷಾಂತರ ಕಂಪ್ಯೂಟರ್ ಪರಿಣಿತರು ಕಾರ್ಯ ನಿರ್ವಹಿಸುತ್ತಾರೆ. ಯಾವುದೇ ಮೂರನೇ ವ್ಯಕ್ತಿಯ ಸರ್ವರ್ ಸೇವೆಗೆ ಇಲ್ಲಿ ಅವಕಾಶವಿರುವುದಿಲ್ಲ. ಹಾಗಾಗಿ ಇದು ಅತಿ ಸುರಕ್ಷಿತ ತಂತ್ರಜ್ಞಾನ ಎಂದು ಐಟಿ ಪರಿಣಿತ ರಜತ್ ತಿಳಿಸಿದ್ದಾರೆ.

    ಡಿಜಿಲಾಕರ್ ಹಾಗೂ ನ್ಯಾಡ್ ಬಳಸಿದ್ರೆ ಎದುರಾಗೋ ತೊಂದರೆಗಳೇನು?

    * ಇವುಗಳಲ್ಲಿ ಸೆಂಟ್ರಲೈಸ್ಡ್ ಸರ್ವರ್ ಮೂಲಕ ಎಲ್ಲಾ ಮಾಹಿತಿ ಕ್ರೋಢೀಕರಿಸಲಾಗುತ್ತದೆ.
    * ಥರ್ಡ್ ಪಾರ್ಟಿ ಸರ್ವರ್ ಬಳಕೆ ಮಾಡುವುದರಿಂದ ಬಳಕೆದಾರರಿಗೆ ಆತಂಕವಿರುತ್ತದೆ.
    * ಹ್ಯಾಕರ್ಸ್ ಸಹಾಯದಿಂದ ಸರ್ವರ್ ಹ್ಯಾಕ್ ಮಾಡಬಹುದು.
    * ಮೇಲಿನ ಸಂಸ್ಥೆಗಳಲ್ಲಿನ ಸಿಬ್ಬಂದಿಗಳ ಸಹಾಯದಿಂದ ಡೇಟಾ ಬದಲಾಯಿಸಬಹುದು.
    * ಮಾರ್ಕ್ಸ್ ಕಾರ್ಡ್ ಗಳನ್ನು ದುರುಪಯೋಗ ಪಡೆಸಿಕೊಳ್ಳಬಹುದು.

    ಪಿಯು ನಿರ್ದೇಶಕರು ಎಷ್ಟೇ ಒಳ್ಳೆಯ ಉದ್ದೇಶದಿಂದ ಡಿಜಿಲಾಕರ್ ನಂತ ಸೇವೆ ವಿದ್ಯಾರ್ಥಿಗಳಿಗೆ ನೀಡಿದರು ಹ್ಯಾಕರ್ಸ್ ಗಳ ಹಾವಳಿ ವಿದ್ಯಾರ್ಥಿಗಳನ್ನು ಕಾಡುತ್ತಿದೆ.

  • ಆನ್‍ಲೈನ್ ನಲ್ಲೇ ಅಂಕಪಟ್ಟಿ ಪಡೆಯಿರಿ: ಪಿಯುಸಿ ಬೋರ್ಡ್ ಈಗ ಮತ್ತಷ್ಟು ಹೈಟೆಕ್

    ಆನ್‍ಲೈನ್ ನಲ್ಲೇ ಅಂಕಪಟ್ಟಿ ಪಡೆಯಿರಿ: ಪಿಯುಸಿ ಬೋರ್ಡ್ ಈಗ ಮತ್ತಷ್ಟು ಹೈಟೆಕ್

    ಬೆಂಗಳೂರು: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಮತ್ತಷ್ಟು ಹೈಟೆಕ್ ಆಗಿದ್ದು, ಈ ಬಾರಿಯ ಪಿಯು ಅಂಕಪಟ್ಟಿಗಳನ್ನು ಡಿಜಿ ಲಾಕರ್ ನಲ್ಲಿ ಪಡೆಯುವ ಅವಕಾಶ ಕಲ್ಪಿಸಿದೆ.

    ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯು ಮೊದಲ ಬಾರಿಗೆ ಡಿಜಿ ಲಾಕರ್ ಮೂಲಕ ಅಂಕಪಟ್ಟಿ ನೀಡುವ ಯೋಜನೆ ರೂಪಿಸಿಕೊಂಡಿದ್ದು, ಮತ್ತಷ್ಟು ಹೈಟೆಕ್ ಸೌಲಭ್ಯವನ್ನು ಜಾರಿಗೊಳಿಸಲು ಸಜ್ಜಾಗಿದೆ.

    ಕಳೆದ ಮಾರ್ಚ್ ನಲ್ಲಿ ನಡೆದ ದ್ವೀತಿಯ ಪಿಯುಸಿ ಪರೀಕ್ಷೆಯ ಅಂಕಪಟ್ಟಿಗಳನ್ನು ಡಿಜಿ ಲಾಕರ್ ನಲ್ಲಿ ಅಪ್‍ಲೋಡ್ ಮಾಡಿದೆ. ವಿದ್ಯಾರ್ಥಿಗಳು ತಮ್ಮ ತಮ್ಮ ಅಂಕಪಟ್ಟಿಗಳನ್ನು ಡಿಜಿ ಲಾಕರ್ ವೆಬ್ ಸೈಟ್ ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಪದವಿ ಪೂರ್ವ ಮಂಡಳಿಯ ನಿರ್ದೇಶಕಿ ಶಿಖಾರವರು ತಿಳಿಸಿದ್ದಾರೆ.

    ಏನಿದು ಡಿಜಿ ಲಾಕರ್?
    ಕೇಂದ್ರ ಸರ್ಕಾರವು ಆನ್‍ಲೈನ್‍ಗಳಲ್ಲಿ ಅಂಕಪಟ್ಟಿ ಶೇಖರಣಾ ಮಾಡಿ ನಮಗೆ ಯಾವಾಗ ಬೇಕಾದರೂ ಪಡೆಯಬಹುದಾದ ನೂತನ ಡಿಜಿ ಲಾಕರ್ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಈ ಡಿಜಿ ಲಾಕರ್ ವೆಬ್‍ಸೈಟ್‍ನಲ್ಲಿ ಒಟ್ಟು 5 ಜಿಬಿವರೆಗಿನ ದಾಖಲೆಗಳನ್ನು ಶೇಖರಿಸಿಡಬಹುದಾಗಿದೆ. ಅಲ್ಲದೇ ಯಾವುದೇ ದಾಖಲೆಗಳ ಪರಿಶೀಲನೆಗೆ ಈ ಡಿಜಿ ಲಾಕರ್ ವ್ಯವಸ್ಥೆ ಬಲು ಸುಲಭವಾಗಿದೆ. ಇದರಲ್ಲಿ ಶೈಕ್ಷಣಿಕ ಪ್ರಮಾಣ ಪತ್ರ, ಅಂಕಪಟ್ಟಿ, ಗುರುತಿನ ಚೀಟಿ ಮೊದಲಾದ ದಾಖಲೆಗಳನ್ನು ಇಮೇಜ್ ರೂಪದಲ್ಲಿ ಸಂಗ್ರಹಿಸಿಡಬಹುದಾಗಿದೆ.