Tag: diggajaru 2

  • ಒಂಟಿಯಾಗಿರುವುದು ಉತ್ತಮ ಎಂದ ದರ್ಶನ್- ಕಿಚ್ಚನ ಜೊತೆ ಮತ್ತೆ ಒಂದಾಗಲ್ವಾ ದಚ್ಚು?

    ಒಂಟಿಯಾಗಿರುವುದು ಉತ್ತಮ ಎಂದ ದರ್ಶನ್- ಕಿಚ್ಚನ ಜೊತೆ ಮತ್ತೆ ಒಂದಾಗಲ್ವಾ ದಚ್ಚು?

    ಸ್ಯಾಂಡಲ್‌ವುಡ್‌ನಲ್ಲಿ(Sandalwood)  ದಿಗ್ಗಜರ ದೋಸ್ತಿ ಜಪ ಜೋರಾಗಿದೆ. ದಚ್ಚು-ಕಿಚ್ಚ ಮತ್ತೆ ಒಂದಾಗಲಿ ಎಂಬ ಕೂಗು ಹೆಚ್ಚಾಗಿದೆ ಕಿಚ್ಚನ ಜೊತೆ ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಳಿಕ ದರ್ಶನ್ (Darshan) ಮತ್ತೊಂದು ಹೊಸ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ:ವಿನೋದ್ ಪ್ರಭಾಕರ್ ಅಭಿನಯದ ‘ಫೈಟರ್’ ಟೀಸರ್ ಗೆ ಫ್ಯಾನ್ಸ್ ಫಿದಾ

    ಏಕಾಂಗಿಯಾಗಿರುವುದೇ ಒಳ್ಳೆಯದು. ಅಭಿಮಾನಿಗಳ ಜೊತೆ ಒಂಟಿಯಾಗಿರುತ್ತೀನಿ, ಅದೇ ಉತ್ತಮ ಎಂದು ಡಿ ಬಾಸ್ ದರ್ಶನ್ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್ (Sudeep) ಜೊತೆ ಒಂದಾಗಲ್ಲ ಎಂದು ಸುಳಿವು ನೀಡಿದ್ರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ದಾಸನ ಬಾಯಲ್ಲಿ ಏಕಾಂಗಿ ಪದ ಕೇಳಿದ ಅಭಿಮಾನಿಯೊಬ್ಬರು ಏನೋ ಮಿಸ್ ಹೊಡಿತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.

    ನಿನ್ನೆಯಷ್ಟೇ (ಆಗಸ್ಟ್ 28) ದರ್ಶನ್ ಕಾಲಾಯ ತಸ್ಮೈ ನಮಃ ಎಂಬ ಅಡಿಬರಹ ಜೊತೆ ಜೋಡೆತ್ತುಗಳ ಜೊತೆ ನಿಂತಿರುವ ಫೋಟೋ ಶೇರ್ ಮಾಡಿದ್ದರು. ಈ ಮೂಲಕ ಒಂದಾಗುವ ಸುಳಿವು ನೀಡಿದ್ದರು. ಈಗ ನನ್ನ ಸೆಲೆಬ್ರಿಟಿಗಳ ಜೊತೆ ಒಂಟಿಯಾಗಿರುವುದೇ ಉತ್ತಮ ಎಂದು ನಯಾ ಪೋಸ್ಟ್ ಶೇರ್ ಮಾಡಿ, ಶಾಕಿಂಗ್ ಸಂದೇಶ ನೀಡಿದ್ದಾರೆ. ಇದನ್ನೂ ಓದಿ:ವಿನೋದ್ ಪ್ರಭಾಕರ್ ಅಭಿನಯದ ‘ಫೈಟರ್’ ಟೀಸರ್ ಗೆ ಫ್ಯಾನ್ಸ್ ಫಿದಾ

    ಒಂಟಿಯಾಗಿರುವುದರಲ್ಲಿ ಸಂತೋಷ ಇದೆ ಎಂಬ ಪೋಸ್ಟ್ ಸುದೀಪ್ ಜೊತೆ ಒಂದಾಗೋದಿಲ್ಲ ಎಂಬ ಅರ್ಥ ಕೊಡುತ್ತಿದೆಯಾ? ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿದೆ. ದಚ್ಚು- ಕಿಚ್ಚ ಒಂದಾಗುವ ಕನಸು ಕಂಡ ಅಭಿಮಾನಿಗಳಿಗೆ ನಿರಾಸೆಯಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿಗ್ಗಜರು- 2 ಸಿನಿಮಾಗಾಗಿ ಮತ್ತೆ ಜೊತೆಯಾಗ್ತಾರಾ ಸುದೀಪ್-‌ ದರ್ಶನ್?‌

    ದಿಗ್ಗಜರು- 2 ಸಿನಿಮಾಗಾಗಿ ಮತ್ತೆ ಜೊತೆಯಾಗ್ತಾರಾ ಸುದೀಪ್-‌ ದರ್ಶನ್?‌

    ಸ್ಯಾಂಡಲ್‌ವುಡ್ (Sandalwood) ಕುಚಿಕು ಜೋಡಿ ಕಿಚ್ಚ ಸುದೀಪ್ – ದರ್ಶನ್ (Darshan) ಆರು ವರ್ಷಗಳ ನಂತರ ಮತ್ತೆ ಮುಖಾಮುಖಿ ಆಗಿದ್ದಾರೆ. ಸುಮಲತಾ (Sumalatha) ಬರ್ತ್ ಡೇ ಪಾರ್ಟಿಯಲ್ಲಿ ಇಬ್ಬರ ರಾಜಿ ಸಂಧಾನದ ಸುದ್ದಿ ನಡುವೆ ದಿಗ್ಗಜರು 2 ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದೆ. ಮತ್ತೆ ಇಬ್ಬರು ಜೊತೆಯಾಗಿ ನಟಿಸುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

    ಸುದೀಪ್ – ದರ್ಶನ್ ಇಬ್ಬರಿಗೂ ಆಪ್ತರಾಗಿರೋ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ (Rockline Venkatesh) ಸಾರಥ್ಯದಲ್ಲಿ ದಿಗ್ಗಜರು 2 ಸಿನಿಮಾ ಬರುತ್ತಾ? ಇಬ್ಬರನ್ನೂ ಜೊತೆಯಾಗಿಸಿ ಸಿನಿಮಾ ಮಾಡ್ತಾರಾ? ಎಂಬ ಕೌತುಕ ಸ್ಯಾಂಡಲ್‌ವುಡ್ ಅಂಗಳದಲ್ಲಿ ಗುಸು ಗುಸು ಚರ್ಚೆ ಶುರುವಾಗಿದೆ. ಇದನ್ನೂ ಓದಿ:6 ವರ್ಷದ ಬಳಿಕ ಕಿಚ್ಚ, ದಚ್ಚು ಮುಖಾಮುಖಿ- ಮನಸ್ತಾಪಕ್ಕೆ ತೆರೆ ಎಳೆದ್ರಾ ಸುಮಲತಾ?

    ಜ್ಯೂ.ಅಂಬರೀಶ್ – ಜ್ಯೂ.ವಿಷ್ಣುವರ್ಧನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ದರ್ಶನ್- ಸುದೀಪ್ (Sudeep) ಮತ್ತೆ ಒಂದೇ ವೇದಿಕೆಯಲ್ಲಿ ಜೊತೆಯಾಗಿರೋದು ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿದೆ. ಈ ಹಿಂದೆ ಅಂಬರೀಶ್ 60ನೇ ವರ್ಷದ ಬರ್ತ್‌ಡೇ ಕಾರ್ಯಕ್ರಮದಲ್ಲಿ ಕುಚಿಕು ಕುಚಿಕು ಡ್ಯಾನ್ಸ್ ಮಾಡಿ ಕಿಚ್ಚ-ದಚ್ಚು ಗಮನ ಸೆಳೆದಿದ್ದರು.

    2012ರಲ್ಲಿ ದರ್ಶನ್ ನಟನೆಯ ‘ಸಂಗೊಳ್ಳಿ ರಾಯಣ್ಣ’ ಚಿತ್ರಕ್ಕೆ ಸಂಪೂರ್ಣ ಸಹಕರಿಸಿದ್ದ ಕಿಚ್ಚ. ದರ್ಶನ್ ಈ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದರು. ಮುಂದೆ ಒಂದೊಳ್ಳೆ ಘಳಿಗೆ ಬಂದರೆ ಒಟ್ಟಿಗೆ ಆಕ್ಟ್ ಮಾಡೋದಾಗಿ ಇಬ್ಬರು ಹೇಳಿದ್ರು. ಅಂಬಿ ಇದ್ದಿದ್ರೆ ಇಷ್ಟೊತ್ತಿಗಾಗ್ಲೇ ಸುದೀಪ್-‌ ದರ್ಶನ್ ಒಂದಾಗುತ್ತಿದ್ದರು.

    ಆಗಸ್ಟ್ 27ರಂದು ತಡರಾತ್ರಿ ಸುಮಲತಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ದರ್ಶನ್-ಸುದೀಪ್ ಮುನಿಸಿಗೆ ಸುಮಲತಾ ತೆರೆ ಎಳೆದಿದ್ದಾರೆ ಎನ್ನಲಾಗುತ್ತಿದೆ. 6 ವರ್ಷಗಳ ನಂತರ ಈ ವೇದಿಕೆಯ ಮೂಲಕ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಅದರಂತೆಯೇ ದಿಗ್ಗಜರು -2 (Diggajaru 2) ಸಿನಿಮಾದಲ್ಲಿ ಈ ಸೂಪರ್ ಸ್ಟಾರ್ಸ್ ಸಮ್ಮೀಲನ ಆಗುತ್ತಾ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]