ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಗಂತ್ ಅವರಿಗೆ ಸಿಸಿಬಿ ಅಧಿಕಾರಿಗಳು ಎರಡನೇ ಬಾರಿ ವಿಚಾರಣೆಗೆ ಹಾಜರಾಗುವಂತೆ ಬುಲಾವ್ ನೀಡಿದ್ದಾರೆ.
ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದಿಗಂತ್ ತಂದೆ, ಮಗ ಮನೆಯಲ್ಲಿ ಇಲ್ಲ. ನೋಟಿಸ್ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ಇಬ್ಬರನ್ನೂ ಸಿಸಿಬಿ ವಿಚಾರಣೆ ನಡೆಸಿ ಕಳುಹಿಸಿತ್ತು. ಇಬ್ಬರ ಮೊಬೈಲ್ ನ್ನು ಕೂಡ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದ ಸಿಸಿಬಿ, ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗಬೇಕು ಎಂದು ಹೇಳಿತ್ತು. ಅಂತೆಯೇ ದಂಪತಿ ಕೂಡ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಮತ್ತೆ ಸಿಸಿಬಿ ಅಧಿಕಾರಿಗಳು ಕರೆದರೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು.
ಮೊಬೈಲ್ ಪಾಸ್ ವರ್ಡ್ ಪಡೆದುಕೊಂಡಿದ್ದ ಸಿಸಿಬಿಗೆ ದಿಗಂತ್ ಮೊಬೈಲ್ ನಲ್ಲಿ ಹಲವು ಮಾಹಿತಿಗಳು ಲಭ್ಯವಾಗಿದೆ. ದಿಗಂತ್ ಹೇಳಿಕೆ ಆಧಾರದ ಮೇಲೆ ಕೆಲ ಡ್ರಗ್ಸ್ ಪೆಡ್ಲರ್ಸ್ ಗಳನ್ನು ಸಿಸಿಬಿ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ದಿಗಂತ್ ವಿರುದ್ಧ ಕೆಲ ಮಾಹಿತಿ ಮತ್ತು ಸಾಕ್ಷಿಗಳು ಸಿಕ್ಕ ಮಾಹಿತಿ ಲಭ್ಯವಾಗಿದೆ.
ಮೊಬೈಲ್ ನಲ್ಲಿ ನಡೆಸಿದ್ದ ಚಾಟಿಂಗ್ ರಿಟ್ರೀವ್ ಮಾಡಲಾಗಿದೆ. ಸದ್ಯ ದಿಗಂತ್ ವಿರುದ್ಧವೇ ಹಲವು ಸಾಕ್ಷಿಗಳು ಸಿಸಿಬಿಗೆ ಲಭ್ಯವಿರುವ ಹಿನ್ನೆಲೆ ಇಂದು ಮತ್ತೆ ವಿಚಾರಣೆ ನೋಟಿಸ್ ನೀಡಲಾಗಿದ್ದು, ನಟ ವಿಚಾರಣೆಗೆ ಹಾಜರಾಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆಗೆ ವೇಗ ನೀಡಿರುವ ಸಿಸಿಬಿ ಪೊಲೀಸರು, ಮತ್ತೊಮ್ಮೆ ನಟ ದಿಗಂತ್ ಅವರಿಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಈಗಾಗಲೇ ಒಂದು ಬಾರಿ ಸಿಸಿಬಿ ಎದುರು ಹಾಜರಾಗಿದ್ದ ದಿಗಂತ್, ಐಂದ್ರಿತಾ ದಂಪತಿ ಮತ್ತೆ ಸಿಸಿಬಿ ವಿಚಾರಣೆಗೆ ಕರೆದರೆ ಹಾಜರಾಗುತ್ತೇವೆ ಎಂದು ಹೇಳಿದ್ದರು. ಮೊದಲ ವಿಚಾರಣೆ ನಡೆದ 6 ದಿನಗಳ ಬಳಿಕ ದಿಗಂತ್ ಮತ್ತೆ ನೋಟಿಸ್ ನೀಡಲಾಗಿದೆ. ಇಂದು 11 ಗಂಟೆಗೆ ಕಚೇರಿಗೆ ಆಗಮಿಸುವಂತೆ ದಿಗಂತ್ ಅವರಿಗೆ ಮಾತ್ರ ನೋಟಿಸ್ ತಲುಪಿದೆ ಎಂಬ ಮಾಹಿತಿ ಲಭಿಸಿದೆ. ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ಅವರ ಎದುರು ದಿಗಂತ್ ವಿಚಾರಣೆಗೆ ಹಾಜರಾಗಬೇಕಿದೆ.
ನಿನ್ನೆಯೇ ವಾಟ್ಸಾಪ್ ಮೂಲಕ ನಟ ದಿಗಂತ್ ಅವರಿಗೆ ನೋಟಿಸ್ ನೀಡಲಾಗಿದೆ. ಈ ಹಿಂದೆ ದಿಗಂತ್ ಮತ್ತು ಐಂದ್ರಿತಾ ರೇ ವಿಚಾರಣೆಗೆ ಹಾಜರಾಗಿದ್ದ ಸಂದರ್ಭದಲ್ಲಿ ಸಿಸಿಬಿ ಅಧಿಕಾರಿಗಳು 4 ರಿಂದ 5 ಗಂಟೆ ವಿಚಾರಣೆ ನಡೆಸಿದ್ದರು. ಆ ಬಳಿಕ ಇಬ್ಬರ ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆದಿದ್ದರು.
ಸದ್ಯ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿರುವ ಫೋನ್‍ನಲ್ಲಿದ್ದ ಮಾಹಿತಿಯನ್ನು ಸಿಸಿಬಿ ಪೊಲೀಸರು ರೀಟ್ರೀವ್ ಮಾಡಿದ್ದಾರೆ ಎನ್ನಲಾಗಿದೆ. ಈ ಮಾಹಿತಿಯನ್ನ ಆಧರಿಸಿ ಪೊಲೀಸರು ಸದ್ಯ ಮತ್ತೊಮ್ಮೆ ವಿಚಾರಣೆ ನಡೆಸಲು ನೋಟಿಸ್ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ವಿಚಾರಣೆ ಅಂತ್ಯವಾದಾಗ ಈ ಸಾಕ್ಷಿಗಳೇ ಸ್ಟಾರ್ ದಂಪತಿಗೆ ಮುಳುವಾಗ ಬಹುದು ಎನ್ನಲಾಗಿದ್ದು, ಸದ್ಯ ದಿಗಂತ್ ವಿಚಾರಣೆ ತೀವ್ರ ಕುತೂಹಲ ಮೂಡಿಸಿದೆ.
ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿರುವ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಟಿ ಐಂದ್ರಿತಾ ರೇ, ನಟ ದಿಗಂತ್ ಸಿಸಿಬಿ ಎದುರು ಮೊದಲ ದಿನದ ಪ್ರಾಥಮಿಕ ವಿಚಾರಣೆಯನ್ನು ಪೂರ್ಣಗೊಳಿಸಿದ್ದಾರೆ. ಇದರ ಬೆನಲ್ಲೇ ಸ್ಟಾರ್ ದಂಪತಿಗೆ ಬಿಗ್ ಶಾಕ್ ಎದುರಾಗಿದೆ.
ಇಂದು ಬೆಳಗ್ಗೆ ಐಂದ್ರಿಯಾ ಹಾಗೂ ದಿಗಂತ್ ಸಿಸಿಬಿ ಕಚೇರಿಗೆ ಆಗಮಿಸಿದ್ದರು. ಅವರು ಕಚೇರಿಗೆ ಆಗಮಿಸುತ್ತಿದ್ದಂತೆ ಸಿಸಿಬಿ ಪೊಲೀಸರು ಅವರ ಬಳಿ ಇದ್ದ ಮೊಬೈಲ್‍ಗಳನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಸದ್ಯ ವಶಕ್ಕೆ ಪಡೆದಿರುವ ಮೊಬೈಲ್‍ಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‍ಎಸ್‍ಎಲ್) ಕಳುಹಿಸಿಕೊಡಲಿದ್ದಾರೆ ಎನ್ನಲಾಗಿದೆ. ದಿಗಂತ್ ಬಳಿ ಇದ್ದ ಎರಡು ಮೊಬೈಲ್ ಹಾಗೂ ಐಂದ್ರಿತಾ ಬಳಿ ಇದ್ದ ಒಂದು ಮೊಬೈಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ ಮೊಬೈಲ್ ಹಿಂದಿರುಗಿಸುವ ಸಾಧ್ಯತೆ ಇದೆ.
ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದಿಗಂತ್ ಹಾಗೂ ಐಂದ್ರಿತಾ, ಪ್ರಕರಣದ ವಿಚಾರಣೆ ನಡೆಯುತ್ತಿದೆ. ನಾವು ಕೂಡ ಪೊಲೀಸರ ವಿಚಾರಣೆಗೆ ಸಹಕಾರ ನೀಡುತ್ತೇವೆ. ಮತ್ತೆ ವಿಚಾರಣೆಗೆ ಕರೆದರೆ ಬರುತ್ತೇವೆ. ತನಿಖೆ ಕುರಿತು ಬೇರೆ ಯಾವುದೇ ಮಾಹಿತಿಯನ್ನು ಹೇಳಬಾರದು ಎಂದು ಸಿಸಿಬಿ ಅವರು ಹೇಳಿದ್ದಾರೆ ಎಂದು ತಿಳಿಸಿದರು. ಸುಮಾರು 4 ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಸ್ಟಾರ್ ದಂಪತಿಗೆ ಮೊಬೈಲ್ ಸಾಕ್ಷ್ಯವೇ ಕಂಟಕವಾಗುತ್ತಾ ಎಂಬ ಅನುಮಾನ ಮೂಡಿದೆ. ಇದನ್ನೂ ಓದಿ: ಸ್ಟಾರ್ ದಂಪತಿ ದಿಗಂತ್, ಐಂದ್ರಿತಾ ರೇಗೆ ಬಿಗ್ ರಿಲೀಫ್
ಸಿಸಿಬಿ ಪೊಲೀಸರು ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್, ಆಫ್ರಿಕಾ ಮೂಲದ ಬೆನಾಲ್ಡ್ ಉಡೇನ್ ಎಂಬಾತನನ್ನು ನಿನ್ನೆಯೇ ಬಂಧಿಸಿದ್ದರು. ಈತ ನಗರದಲ್ಲಿ ನಡೆಯುತ್ತಿದ್ದ ದೊಡ್ಡ ದೊಡ್ಡ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ಆರೋಪಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ದಿಗಂತ್ ಹಾಗೂ ಐಂದ್ರಿತಾ ಅವರಿಗೆ ನೋಟಿಸ್ ನೀಡಿದ್ದರು ಎನ್ನಲಾಗಿದೆ. ಸದ್ಯ ದಂಪತಿಯಿಂದ ವಶಕ್ಕೆ ಪಡೆದಿರುವ ಮೊಬೈಲ್‍ಗಳಲ್ಲಿ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿರುವ, ಸೇವನೆ ಮಾಡಿರುವ ಕುರಿತ ತಾಂತ್ರಿಕ ಮಾಹಿತಿಗಳನ್ನು ಕಲೆ ಹಾಕುವ ಉದ್ದೇಶವನ್ನು ಹೊಂದಿದ್ದಾರೆ.
ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಇಂದು ಸಿಸಿಬಿ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ವಿಚಾರಣೆ ಕುರಿತಂತೆ ಮಾಹಿತಿ ನೀಡಿದ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು, ಡ್ರಗ್ಸ್ ಪ್ರಕರಣದಲ್ಲಿ ದಿಗಂತ್ ಮತ್ತು ಐಂದ್ರಿತಾ ಅವರಿಗೆ ನೋಟಿಸ್ ನೀಡಿದ್ದೆವು. ಅವರು ಕೂಡ ಇಂದು ವಿಚಾರಣೆಗೆ ಹಾಜರಾಗಿದ್ದರು. ಬೆಳಗ್ಗೆಯಿಂದ ಅವರ ವಿಚಾರಣೆ ನಡೆಸಿದ್ದು, ಸಾಕಷ್ಟು ಮಾಹಿತಿ ಲಭಿಸಿದೆ. ಇನ್ನೂ ಸ್ವಲ್ಪ ಸಮಯ ವಿಚಾರಣೆ ನಡೆಯಲಿದ್ದು, ಆ ಬಳಿಕ ಅವರಿಗೆ ಸಮನ್ಸ್ ನೀಡಿ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡುತ್ತೇವೆ ಎಂದರು.
ಈ ಹಿಂದೆ ನಟಿ ರಾಗಿಣಿ ಹಾಗೂ ಸಂಜನಾ ಅವರಿಗೆ ನೋಟಿಸ್ ನೀಡಿದ್ದ ಸಿಸಿಬಿ ಪೊಲೀಸರು ವಿಚಾರಣೆಗೆ ನಡೆಸಿ ಅವರನ್ನು ಬಂಧಿಸಿದ್ದರು. ಇಂದು ಕೂಡ ದಿಗಂತ್ ಹಾಗೂ ಐಂದ್ರಿತಾ ಅವರ ಬಂಧನವಾಗುತ್ತಾ ಎಂಬ ಅನುಮಾನ ಮೂಡಿತ್ತು. ಸದ್ಯ ಸಂದೀಪ್ ಪಾಟೀಲ್ ಅವರು ಸ್ಪಷ್ಟನೆ ನೀಡಿರುವುದರಿಂದ ಸ್ಟಾರ್ ದಂಪತಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಡ್ರಗ್ಸ್ ಪ್ರಕರಣದ ತನಿಖೆ ಕುರಿತಂತೆ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಗೃಹ ಸಚಿವ ಬೊಮ್ಮಾಯಿ ಅವರು, ಮುಂದಿನವಾರ ಡಗ್ಸ್ ಪ್ರಕರಣದ ವಿಚಾರಣೆ ಮಹತ್ವದ ಪಡೆದಿದೆ ಎಂದಿದ್ದರು. ಇತ್ತ ದಿಗಂತ್, ಐಂದ್ರಿತಾ ವಿಚಾರಣೆ ಬಳಿಕ ಮಾತನಾಡಿರುವ ಸಂದೀಪ್ ಪಾಟೀಲ್ ಅವರು, ವಿಚಾರಣೆಯ ಸಂದರ್ಭದಲ್ಲಿ ಸಾಕಷ್ಟು ಮಾಹಿತಿಗಳು ಸಿಕ್ಕಿದ್ದು, ಕೆಲವೊಂದು ಮಾಹಿತಿ ಹೇಳಿದ್ದಾರೆ ಎಂದಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೊಬ್ಬ ಪೆಡ್ಲರ್ ಅನ್ನು ಬಂಧಿಸಿದ್ದಾಗಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಆಫ್ರಿಕನ್ ಪ್ರಜೆ ಬೆನಾಲ್ಡ್ ಉಡೆನ್ನ ಎಂಬಾತನನ್ನು ಕಾಟನ್ ಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ತನಿಖೆ ನಡೆಸಿದ ಸಂದರ್ಭದಲ್ಲಿ ಆರೋಪಿಯನ್ನು ಬಂಧಿಸಿದ್ದು, ಆತನಿಂದ ಕೊಕೇನ್ ಕೂಡ ವಶಕ್ಕೆ ಪಡೆದಿದ್ದಾರೆ. ಮೂರು ಮೊಬೈಲ್ ಬಳಕೆ ಮಾಡುತ್ತಿದ್ದ ಆರೋಪಿ, ಬೇರೆ ಬೇರೆ ಹೆಸರುಗಳೊಂದಿಗೆ ದೊಡ್ಡ ದೊಡ್ಡ ಪಾರ್ಟಿಗಳಿಗೆ ನಗರದಲ್ಲಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ.
ಬೆಂಗಳೂರು: ದಿಗಂತ್-ಐಂದ್ರಿತಾ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ತುಂಬಾ ಸಭ್ಯ ಮತ್ತು ಸಜ್ಜನ ಕುಟುಂಬ ಅವರದ್ದು. ಆದರೆ ಒಮ್ಮೆ ದಿಗಂತ್ ಮತ್ತು ಐಂದಿತ್ರಾ ಮಧ್ಯರಾತ್ರಿ ದೊಡ್ಡ ಸಂಭ್ರಮಾಚರಣೆ ಮಾಡಿದ್ದರು ಎಂದು ಹಿರಿಯ ಕಲಾವಿದರಾದ ಸುಚೇಂದ್ರ ಪ್ರಸಾದ್ ಹೇಳಿದರು. ಇದನ್ನೂ ಓದಿ: ಸಿಸಿಬಿ ವಿಚಾರಣೆಗೆ ಹಾಜರಾದ ಗುಳಿ ಕೆನ್ನೆ ದಂಪತಿ
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟ ಸುಚೇಂದ್ರ ಪ್ರಸಾದ್, ಡ್ರಗ್ ಮಾಫಿಯಾ ಏಕಾಏಕಿ ಹುಟ್ಟಿದ್ದಲ್ಲ. ಯಾರ‍್ಯಾರ ಬಳಿ ಮಾಹಿತಿ ಇದಿಯೋ ಅವರನ್ನು ಒಬ್ಬೊಬ್ಬರಾಗಿ ಕರೆಸಿ ಪ್ರಶ್ನೆ ಮಾಡುವ ಕೆಲಸವನ್ನು ಇದಕ್ಕೆ ಸಂಬಂಧಪಟ್ಟ ಇಲಾಖೆ ಮಾಡುತ್ತಿದೆ. ನಾವು ನಮ್ಮ ಕೆಲಸ ಆಯಿತು ಎಂದು ಇದ್ದವರು. ಹೀಗಾಗಿ ನಮಗೆ ಇದರ ಬಗ್ಗೆ ಗೊತ್ತಿಲ್ಲ. ಆದರೆ ಇದೆಲ್ಲವನ್ನು ಗಮನಿಸಿದಾಗ ಐಷಾರಾಮಿ ಬದುಕು ಈ ರೀತಿ ಮಾಡಿಸುತ್ತಿದೆ ಎಂದರು. ಇದನ್ನೂ ಓದಿ: ರಾಗಿಣಿಗೆ ಬಿಗ್ ಶಾಕ್- ಜಾಮೀನು ಅರ್ಜಿ ಮುಂದೂಡಿಕೆ
ದಿಗಂತ್-ಐಂದ್ರಿತಾ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ಒಂದು ಸಿನಿಮಾದಲ್ಲಿ ಮಾತ್ರ ಅವರ ಜೊತೆ ತೆರೆ ಹಂಚಿಕೊಂಡಿದ್ದೇನೆ. ತುಂಬಾ ಸಭ್ಯ ಮತ್ತು ಸಜ್ಜನ ಕುಟುಂಬ ಅವರದ್ದು. ಅವರ ತಂದೆ ಪ್ರಾಂಶುಪಾಲರು ಎಂದು ಗೊತ್ತು. ಅದನ್ನು ಬಿಟ್ಟು ಅಷ್ಟೇನು ಗೊತ್ತಿಲ್ಲ. ನಮ್ಮ ಮನೆ ಇರುವ ಏರಿಯಾದ ಕೊನೆಯಲ್ಲಿ ಅವರ ಮನೆ ಇದೆ. ಆದರೆ ನಾನು ಹೆಚ್ಚಾಗಿ ಅವರಿಬ್ಬರನ್ನೂ ನೋಡಿಯೇ ಇಲ್ಲ. ಇತ್ತೀಚೆಗೆ ಆ ಮನೆಗೆ ದಂಪತಿ ಬಂದಿದ್ದರು. ಒಂದು ದೊಡ್ಡ ಸಂಭ್ರಮಾಚರಣೆ ಮಾಡಿದ್ದರು ಎಂದು ಸುಚೇಂದ್ರ ಪ್ರಸಾದ್ ತಿಳಿಸಿದರು.
ಮಧ್ಯರಾತ್ರಿ ಆದರೂ ಸಂಭ್ರಮಾಚರಣೆಯ ಸದ್ದು ಕೇಳಿಸಿತ್ತು. ಜೋರು ಧ್ವನಿಗೆ ಮಧ್ಯರಾತ್ರಿ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದರು. ಆಗ ನಾನು ನಟರಾಗಿರುವುದರಿಂದ ಈ ಬಗ್ಗೆ ಮಾತನಾಡಿ ಎಂದು ನಮ್ಮ ನೆರೆಹೊರೆಯವರು ಹೇಳಿದ್ದರು. ಆದರೆ ನಾನು ಬೆಳಗ್ಗೆ ಹೋಗಿ ಮಾತನಾಡುತ್ತೇನೆ ಎಂದಿದ್ದೆ. ನಮ್ಮ ಏರಿಯಾದಲ್ಲಿ ಕಾಣಿಸಿಕೊಂಡರೆ ಮಾತನಾಡೋಣ ಎಂದುಕೊಂಡಿದ್ದೆ. ಆದರೆ ದಂಪತಿ ನನಗೆ ಏಲ್ಲೂ ಕಾಣಿಸಿಕೊಂಡಿಲ್ಲ. ತುಂಬಾ ಸಭ್ಯ ರೀತಿಯಲ್ಲಿ ದಂಪತಿ ನಡೆದುಕೊಂಡಿದ್ದಾರೆ. ಮಧ್ಯರಾತ್ರಿ ಯಾಕೆ ಸಂಭ್ರಮಾಚರಣೆ ಮಾಡಬೇಕು ಎಂದು ನನಗೆ ಆಶ್ವರ್ಯ ಆಯಿತು. ಆದರೆ ಮತ್ತೆ ಆ ರೀತಿಯ ಘಟನೆಯ ಸಂಭವಿಸಿಲ್ಲ ಎಂದು ತಿಳಿಸಿದರು.
ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರು ಈಗಲಾದರೂ ನಾವು ಈ ರೀತಿ ಮಾಡುವುದು ತಪ್ಪು ಎಂದು ತಿಳಿದುಕೊಳ್ಳಲಿ. ಯಾರೇ ಈ ದಂಧೆಯಲ್ಲಿ ಭಾಗಿಯಾಗಿದ್ದರೂ ಅವರಿಗೆ ಶಿಕ್ಷೆ ಆಗಬೇಕು. ನಮ್ಮ ಕ್ಷೇತ್ರ ಮಾತ್ರವಲ್ಲದೇ ಯಾವುದೇ ವಲಯದಲ್ಲಿ ಇದ್ದರೂ ಪರವಾಗಿಲ್ಲ ಅವರ ಹೆಡೆಮುರಿ ಕಟ್ಟಿ ಅವರಿಗೆ ಶಿಕ್ಷೆಯಾಗುವ ರೀತಿ ಸರ್ಕಾರ ಅಥವಾ ಅದಕ್ಕೆ ಸಂಬಂಧಪಟ್ಟ ಇಲಾಖೆ ಮಾಡಬೇಕು ಎಂದು ನಾನು ಆಶಿಸುತ್ತೇನೆ ಎಂದರು.
ನನಗೆ ಸಿನಿಮಾ ಹೊಟ್ಟೆ ತುಂಬಿಸಿದೆ, ನನ್ನ ಜೀವನಕ್ಕೆ ಒಂದು ದಾರಿ ಮಾಡಿಕೊಟ್ಟಿದೆ. ನಾವು ಬೇರೆಯವರಿಗೆ ಉಪಕಾರ ಮಾಡದಿದ್ದರೂ ಸಮಾಜಕ್ಕೆ ಅಪಕಾರ ಮಾಡಬಾರದು. ಆದರೆ ಹಿಂದಿನಿಂದಲೂ ಸಿನಿಮಾ ಎಂದಾಕ್ಷಣ ಹಣ ಎಂಬ ಭಾವನೆ ಇದೆ. ನನಗಿದು ಗೊತ್ತಿಲ್ಲದ ಸಂಗತಿ. ಇದು ನಾಗರೀಕರು ಮಾಡುವಂತ ಕೆಲಸವಲ್ಲ. ಸಾಮಾಜಿಕ ಸ್ವಾಸ್ಥ್ಯವನ್ನು ಇವೆಲ್ಲ ಹಾಳು ಮಾಡುತ್ತಿದೆ. ಇಂತಹ ಪ್ರಕರಣದಿಂದ ಮುಂದಿನ ಯುವ ಜನತೆ ಎಚ್ಚರವಾಗಿರುತ್ತಾರೆ ಎಂದು ಹೇಳಿದರು.
ಮಾಹಿತಿ ಇದೆ ಎಂದು ಹೇಳುವರು ಬಹಿರಂಗವಾಗಿ ತನಿಖೆ ಮಾಡುವ ಇಲಾಖೆಗೆ ತಿಳಿಸಬೇಕು. ಈ ಮೂಲಕ ಅವರಿಗೆ ಸಹಕರಿಸಬೇಕು. ನಿಜವಾದ ಸಮಾಜ ನಿರ್ಮಾಣ ಮಾಡಲು ಯಾರಾದರೂ ಆಗಲಿ ಸಹಕರಿಸಬೇಕು. ಯಾರೇ ಈ ದಂಧೆಯಲ್ಲಿ ಭಾಗಿಯಾಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು. ಇಲ್ಲವಾದಲ್ಲಿ ಮುಂದಿನ ತಲೆಮಾರಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸುಚೇಂದ್ರ ಪ್ರಸಾದ್ ತಿಳಿಸಿದರು.
ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಕುರಿತಂತೆ ನಟ ದಿಗಂತ್ ಹಾಗೂ ಐಂದ್ರಿತಾ ರೇಗೆ ಸಿಸಿಬಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಆದರೆ ಇದುವರೆಗೂ ನಮ್ಮ ಮನೆಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ದಿಗಂತ್ ತಾಯಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಿಸಿಬಿ ನೋಟಿಸ್ ಕುರಿತಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ದಿಗಂತ್ ತಾಯಿ ಅವರು, ಸಿಸಿಬಿ ನೋಟಿಸ್ ವಿಚಾರದ ಕುರಿತು ಯಾವುದೇ ಮಾಹಿತಿ ಲಭಿಸಿಲ್ಲ. ಅವರು ನಿನ್ನೆ ಬೆಳಗ್ಗೆ ಕೇರಳಗೆ ಹೋಗುತ್ತೇವೆ ಎಂದು ಹೇಳಿ ತೆರಳಿದ್ದಾರೆ. ಅವರು ಮೂರು ದಿನ ಆಗುತ್ತೆ ಎಂದು ತಿಳಿಸಿದ್ದರು. ಆ ಬಳಿಕ ಅವರು ನನಗೆ ಫೋನ್ ಮಾಡಿಲ್ಲ. ನಮ್ಮ ಸ್ನೇಹಿತರೊಬ್ಬರು ಮಾಧ್ಯಮಗಳಲ್ಲಿ ಸುದ್ದಿ ನೋಡಿ ನನಗೆ ಮಾಹಿತಿ ನೀಡಿದ್ದಾರೆ. ಇದನ್ನು ಬಿಟ್ಟು ನನಗೆ ಬೇರೆ ಮಾಹಿತಿ ಗೊತ್ತಿಲ್ಲ ಎಂದರು. ಇದನ್ನೂ ಓದಿ: ವಿಚಾರಣೆಗೆ ಹಾಜರಾಗುತ್ತೇವೆ ಎಂದ ದಿಗಂತ್, ಐಂದ್ರಿತಾ
ಡ್ರಗ್ಸ್ ಮಾಫಿಯಾ ಕುರಿತಂತೆ ಸಾಕಷ್ಟು ದಿನಗಳಿಂದ ಚರ್ಚೆ ಆಗುತ್ತಿದೆ. ಆ ಬಗ್ಗೆಯೂ ನಾನು ಪ್ರಶ್ನಿಸಿದ್ದೆ, ಆಗ ಅವರು ನಮಗೇ ಅಂತಹ ವ್ಯಕ್ತಿಗಳ ಪರಿಚಯ ಇಲ್ಲ ಎಂದಿದ್ದರು. ಶ್ರೀಲಂಕಾ ಪ್ರವಾಸಕ್ಕೆ ನಾವು ಹೋಗಿದ್ದೇವು. ಆ ವೇಳೆ ನಮ್ಮ ಡಾನ್ಸ್ ಕಾರ್ಯಕ್ರಮ ಇದೆ ಎಂದು ಐಂದ್ರಿತಾ ಹೇಳಿದ್ದರು. ಹಿಂದಿ ಸಿನಿಮಾವೊಂದರ ಪ್ರಚಾರದ ಸಂದರ್ಭದಲ್ಲಿ ಅಲ್ಲಿಗೆ ತೆರಳಿದ್ದರು. ಸಾಕಷ್ಟು ಸ್ಟಾರ್ ನಟ-ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕುರಿತು ನಮಗೆ ಹೇಳಿದ್ದರು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ನಾನೊಬ್ಬಳೇ ಅಲ್ಲ ಐಂದ್ರಿತಾ ಕೂಡ ಹೋಗಿ ಬರುತ್ತಿದ್ದಳು
ಘಟನೆ ಕುರಿತಂತೆ ನಮಗೆ ಯಾವುದೇ ಭಯವಿಲ್ಲ. ನಮ್ಮ ಕುಟುಂಬದಲ್ಲಿ ಸಂಪ್ರದಾಯವಾಗಿ ನಡೆದುಕೊಂಡು ಬಂದಿರುವುದರಿಂದ ಅವರು ಅಂತಹ ಯಾವುದೇ ತಪ್ಪು ಮಾಡಿರುವುದಿಲ್ಲ ಎಂಬ ಭರವಸೆ ಇದೆ. ಈ ಬಗ್ಗೆ ಸಾಕ್ಷಿ ಇದ್ದರೆ ಪೊಲೀಸರೆ ವಿಚಾರಣೆ ನಡೆಸುತ್ತಾರೆ. ಇಂತಹ ವಿಚಾರದ ಬಗ್ಗೆ ನಮ್ಮ ಮನೆಯಲ್ಲಿ ಚರ್ಚೆ ಕೂಡ ನಡೆಯುವುದಿಲ್ಲ. ಈ ಹಿಂದೆಯೂ ಕೆಲ ಆರೋಪಗಳು ಕೇಳಿ ಬಂದಿದ್ದವು. ಇಂತಹ ಆರೋಪಗಳಿಂದ ಹೊರ ಬರುತ್ತೇವೆ ಎಂದರು.
ದಿಗಂತ್ ಮನೆಯಲ್ಲಿ ಸರಿ ಸುಮಾರು 3 ಗಂಟೆ ವ್ಯಾಯಾಮ ಮಾಡುತ್ತಾರೆ. ಡ್ರಗ್ಸ್ ತೆಗೆದಕೊಳ್ಳುತ್ತಿದ್ದಾರೆ ಆ ರೀತಿ ಅಭ್ಯಾಸ ಮಾಡಲು ಸಾಧ್ಯವಿಲ್ಲ. ನೀವು ನೋಡಿದಂತೆ ಸೈಕ್ಲಿಂಗ್ ಸೇರಿದಂತೆ ಹಲವು ಕ್ರೀಡೆಗಳಲ್ಲಿಯೂ ದಿಗಂತ್ ತೊಡಗಿಸಿಕೊಳ್ಳುತ್ತಾರೆ. ಆದರೆ ಡ್ರಗ್ಸ್ ತೆಗೆದುಕೊಂಡರೆ ಹೇಗಿರುತ್ತಾರೆ ಎಂಬುವುದು ಎಲ್ಲರಿಗೂ ತಿಳಿದಿದೆ. ಸದ್ಯ ಅವರಿಗೆ ಫೋನ್ ಮಾಡಿದ್ದೆ ಅವರು ಫೋನ್ ರಿಸೀವ್ ಮಾಡಿಲ್ಲ. ಜನರು ಈ ಬಗ್ಗೆ ತಪ್ಪು ತಿಳಿದುಕೊಳ್ಳಬಾರದು ಎಂದು ನಾನು ಸ್ಪಷ್ಟಪಡಿಸಿದ್ದೇನೆ ಎಂದರು.
ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆಗೆ ವೇಗ ತುಂಬಿರುವ ಸಿಸಿಬಿ ಪೊಲೀಸರು ಸದ್ಯ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇಗೆ ನೋಟಿಸ್ ನೀಡಿ ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ನಗರದ ಸೆಂಟ್ ಜಾನ್ಸ್ ರೋಡ್‍ನಲ್ಲಿರುವ ರಹೇಜ ಆರ್ಬರ್ ಅಪಾರ್ಟ್‍ಮೆಂಟ್‍ನಲ್ಲಿ ದಿಗಂತ್-ಐಂದಿತ್ರಾ ವಾಸಿಸುತ್ತಿದ್ದಾರೆ. ಸಿಸಿಬಿ ದಂಪತಿಗೆ ನೋಟಿಸ್ ನೀಡಿ ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದು, ಸದ್ಯ ದಂಪತಿ ಬೆಂಗಳೂರಿನಲ್ಲಿ ಇಲ್ಲ ಎಂಬ ಮಾಹಿತಿ ಲಭಿಸಿದೆ. ಲಾಕ್‍ಡೌನ್ ಸಮಯದಲ್ಲಿ ಆರ್ಬರ್ ಅಪಾರ್ಟ್‍ಮೆಂಟ್‍ನಲ್ಲಿಯೇ ದಂಪತಿ ಕಾಲ ಕಳೆದಿದ್ದರು. ಈ ಅಪಾರ್ಟ್‍ಮೆಂಟ್ ಮಾತ್ರವಲ್ಲದೇ ಆರ್.ಆರ್ ನಗರದಲ್ಲಿರುವ ಮತ್ತೊಂದು ಫ್ಲಾಟ್‍ಅನ್ನು ದಂಪತಿ ಹೊಂದಿದ್ದಾರೆ.
ಸಿಸಿಬಿ ನೋಟಿಸ್ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಐಂದ್ರಿತಾ ಮತ್ತು ದಿಂಗತ್, ನಾಳೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಲು ಸಿಸಿಬಿಯಿಂದ ನೋಟಿಸ್ ಬಂದಿದೆ. ದೂರವಾಣಿ ಕರೆ ಮೂಲಕ ನೋಟಿಸ್ ನೀಡಲಾಗಿದೆ. ನಾವು ವಿಚಾರಣೆಗೆ ಹಾಜರಿರುತ್ತೇವೆ ಮತ್ತು ಸಿಸಿಬಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದಿದ್ದಾರೆ.
We have received a telephonic notice from the Central Crime Branch for an ongoing enquiry at 11am tomorrow. We will be present and fully cooperate with the CCB.
ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಈಗಾಗಲೇ ಸಿಸಿಬಿ ಪೊಲೀಸರ ಕಸ್ಟಡಿಯಲ್ಲಿರುವ ನಟಿ ಸಂಜನಾ ಕೂಡ ಆರಂಭದಲ್ಲಿ ನಾನು ಕ್ಯಾಸಿನೋ ಈವೆಂಟ್‍ಗೆ ಹೋಗಿದ್ದೆ ಎಂದಿದ್ದರು. ಕ್ಯಾಸಿನೋ ಪಾರ್ಟಿ ಕುರಿತ ವೈರಲ್ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದ ಐಂದ್ರಿತಾ, ಸಿನಿಮಾ ಪ್ರಚಾರಕ್ಕಾಗಿ ಈವೆಂಟ್‍ಗೆ ಹೋಗಿದ್ದೆ ಎಂದಿದ್ದರು. ಸಂಜನಾ ವಿಚಾರಣೆಯ ಸಂದರ್ಭದಲ್ಲಿ ಸಿಸಿಬಿ ಪೊಲೀಸರ ಎದುರು ಐಂದ್ರಿತಾ ಅವರ ಹೆಸರನ್ನು ಬಾಯ್ಬಿಟ್ಟಿದ್ದು, ಫಾಝಿಲ್ ಜೊತೆಗೆ ನಾನು ಮಾತ್ರವಲ್ಲ ಐಂದ್ರಿತಾ ಕೂಡ ಕ್ಯಾಸಿನೋಗೆ ಬರುತ್ತಿದ್ದಳು. ಆದರೆ ಐಂದ್ರಿತಾ ಡ್ರಗ್ಸ್ ತೆಗೆದುಕೊಳ್ಳುತ್ತಾರಾ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಅಲ್ಲಿ ಬಂದವರಲ್ಲಿ ಬಹುತೇಕರು ಡ್ರಗ್ಸ್ ತಗೋತಿದ್ದರು ಎಂದು ಹೇಳಿದ್ದರು ಎಂಬ ಮಾಹಿತಿ ಲಭಿಸಿದೆ.
We will be appearing to a telephonic notice sent by the CCB tomorrow at 11 am. We will fully cooperate with the ongoing investigation.
ಆರೋಪಿ ಫಾಝಿಲ್ ಸ್ಟಾರ್ ಆಟ್ರಾಕ್ಷನ್ ಮೂಲಕ ಕೊಲಂಬೋದಲ್ಲಿದ್ದ ತನ್ನ ಕ್ಯಾಸಿನೋಗೆ ಹೆಚ್ಚಿನ ಪ್ರಮೋಷನ್ ಪಡೆದುಕೊಳ್ಳುತ್ತಿದ್ದ. ಈ ಪ್ರಮೋಷನ್‍ಗಾಗಿಯೇ ಐಂದ್ರಿತಾ ಪಾರ್ಟಿಯಲ್ಲಿ ಹೆಜ್ಜೆ ಹಾಕಿದ್ರು. ನಟಿ ಸಂಜನಾ ರೀತಿಯೇ ಐಂದ್ರಿತಾ ಕೂಡ ಶೇಕ್ ಫಾಝಿಲ್ ಕ್ಯಾಸಿನೋದ ಸ್ಟಾರ್ ಆಟ್ರಾಕ್ಷನ್ ಆಗಿದ್ದರು ಎನ್ನಲಾಗಿದೆ. ಸದ್ಯ ಪಾರ್ಟಿಯಲ್ಲಿ ಡಾನ್ಸ್ ಮಾಡಿದ್ದೇ ಐಂದ್ರಿತಾಗೆ ಮುಳುವಾಗುತ್ತಾ ಎಂಬುವುದನ್ನು ಕಾದುನೋಡಬೇಕಿದೆ.
ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಟಿ ಐಂದ್ರಿತಾ, ‘ಮೇ ಝರೂರ್ ಅವುಂಗಾ’ ಸಿನಿಮಾ ಪ್ರಚಾರಕ್ಕೆ ಮಾತ್ರವಲ್ಲದೇ ಅದಕ್ಕೂ ಮುನ್ನ ಹಲವು ಬಾರಿ ಕ್ಯಾಸಿನೋಗೆ ದಂಪತಿ ಭೇಟಿ ನೀಡಿದ್ದರು ಬಗ್ಗೆಯೂ ಸಾಕ್ಷಿಗಳನ್ನು ಕಲೆಹಾಕಲಾಗುತ್ತಿದೆ. ಈ ಹಿಂದೆಯೂ ಹಲವು ಬಾರಿ ದಿಗಂತ್ ಅವರ ಹೆಸರು ಲೇಟ್ ನೈಟ್ ಪಾರ್ಟಿಗಳಲ್ಲಿ ಕೇಳಿಬಂದಿರುವ ಕುರಿತು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈಗಾಲೇ ಸಮನ್ಸ್ ನೀಡಿರುವ ಸಿಸಿಬಿ, ದಂಪತಿಯನ್ನು ವಿಚಾರಣೆಗೆ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದೆ ಎನ್ನಲಾಗಿದೆ. ಇತ್ತ ಐಂದ್ರಿತಾ, ದಿಗಂತ್ ಮಾತ್ರವಲ್ಲದೇ ಇನ್ನು ಹಲವು ತಾರೆಯರಿಗೆ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆ ಇದೆ.
– ವಿಚಾರಣೆ ವೇಳೆ ಬಾಯಿಬಿಟ್ಟಿದ್ದ ಸಂಜನಾ – ಡ್ರಗ್ ಪೆಡ್ಲರ್ಸ್‌ಗಳ ಜೊತೆ ಐಂದ್ರಿತಾ ಫೋಟೋ
ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಐಂದ್ರಿತಾಗೆ ಸಂಜನಾ ಮುಳುವಾದ್ರಾ ಎಂಬ ಪ್ರಶ್ನೆ ಎದ್ದಿದೆ.
ಈ ಪ್ರಕರಣ ಬೆಳಕಿಗೆ ಬಂದ ಆರಂಭದಿಂದಲೂ ತಾರಾ ದಂಪತಿ ಹೆಸರು ಕೇಳಿ ಬರುತ್ತಿತ್ತು. ಆ ತಾರಾ ದಂಪತಿ ದಿಗಂತ್, ಐಂದ್ರಿತಾ ಆಗಿದ್ದರು. ಆದರೆ ಸಿಸಿಬಿ ಇವರಿಗೆ ನೋಟಿಸ್ ನೀಡಿರಲಿಲ್ಲ. ಆದರೆ ಈಗ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿಕೊಂಡಿರುವ ಪೊಲೀಸರು ಬುಧವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಈ ನೋಟಿಸ್ ನೀಡಲು ಸಂಜನಾ ನೀಡಿದ ಹೇಳಿಕೆಯೇ ಕಾರಣ ಎನ್ನಲಾಗುತ್ತಿದೆ. ಸಿಸಿಬಿ ವಿಚಾರಣೆಯಲ್ಲಿ ಐಂದ್ರಿತಾ ಹೆಸರನ್ನು ಸಂಜನಾ ತಿಳಿಸಿದ್ದರು. ಶೇಖ್ ಫಾಝಿಲ್ ಜೊತೆ ಜೊತೆ ನಾನೊಬ್ಬಳೇ ಅಲ್ಲ, ಐಂದ್ರಿತಾ ಕೂಡ ಕ್ಯಾಸಿನೋಗೆ ಬರುತ್ತಿದ್ದಳು. ಆದರೆ ಆಕೆ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾಳಾ ಇಲ್ಲವೋ ಗೊತ್ತಿಲ್ಲ. ಆದ್ರೆ ಪಾರ್ಟಿಗೆ ಬರುತ್ತಿದ್ದವರೆಲ್ಲ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದು ತಿಳಿಸಿದ್ದರು. ಇದನ್ನೂ ಓದಿ: ಸಿಸಿಬಿ ಮುಂದೆ ತಮ್ಮ ಲವ್ ಬ್ರೇಕಪ್ ಸ್ಟೋರಿ ಬಿಚ್ಚಿಟ್ಟ ನಟಿಯರು
ಶಿವಪ್ರಕಾಶ್ ಜೊತೆ ಐಂದ್ರಿತಾ
ವಿಚಾರಣೆಯ ಸಂದರ್ಭದಲ್ಲಿ ಈ ಪ್ರಕರಣದಲ್ಲಿ ಬಂಧಿತನಾಗಿರುವ ಮೊದಲ ಆರೋಪಿ ಶಿವಪ್ರಕಾಶ್ ಜೊತೆಗೂ ಐಂದ್ರಿತಾ ಫೋಟೋ ಇರುವುದು ಬೆಳಕಿಗೆ ಬಂದಿತ್ತು. ಡ್ರಗ್ ಪೆಡ್ಲರ್ ಸಂಜನಾ ಆಪ್ತ ರಾಹುಲ್ ಜೊತೆಯೂ ಐಂದ್ರಿತಾ ಇದ್ದ ಫೋಟೋ ಲಭ್ಯವಾಗಿತ್ತು. ಐಂದ್ರಿತಾ ಮತ್ತು ದಿಗಂತ್
2017ರಲ್ಲಿ ಐಂದ್ರಿತಾ ಶೇಖ್ ಫಾಝಿಲ್ ಒಡೆತನದಲ್ಲಿರುವ ಕೊಲಂಬೋ ಕ್ಯಾಸಿನೋಗೆ ತೆರಳಿ ಡ್ಯಾನ್ಸ್ ಮಾಡಿದ್ದರು. ಈದ್ ಸಮಯದಲ್ಲಿ ನಡೆದಿದ್ದ ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಐಂದ್ರಿತಾ ರೇ ಬರಲಿರುವ ಮಾಹಿತಿಯನ್ನು ನೀಡಲಾಗಿತ್ತು.
ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್ ದಂಪತಿ ದಿಗಂತ್, ಐಂದ್ರಿತಾ ರೇಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ.
ಬುಧವಾರ ಬೆಳಗ್ಗೆ 11 ಗಂಟೆಗೆ ಸಿಸಿಬಿ ಕಚೇರಿಗೆ ಹಾಜರಾಗಿ ವಿಚಾರಣೆಗೆ ಎದುರಿಸಬೇಕೆಂದು ಸೂಚಿಸಿಲಾಗಿದೆ.
ಎರಡು ದಿನಗಳ ಹಿಂದೆ ನಟಿ ಐಂದ್ರಿತಾ ರೇಯವರು ಶ್ರೀಲಂಕಾದ ಕ್ಯಾಸಿನೋಗೆ ಹೋಗಿದ್ದ ವಿಡಿಯೋ, ಫೋಟೋ ವೈರಲ್ ಆಗಿತ್ತು. ಈ ವೇಳೆ ಈ ಪ್ರಕರಣದ ಆರೋಪಿ ಶೇಖ್ ಫಾಝಿಲ್ ಜೊತೆ ಇದ್ದ ಫೋಟೋಗಳು ಸಹ ಸಿಕ್ಕಿತ್ತು.
ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದ ಐಂದ್ರಿತಾ ರೇ, ನಾನು ಸಿನಿಮಾ ಪ್ರಮೋಶನ್ ಗಾಗಿ ಕೊಲಂಬೋದಲ್ಲಿರುವ ಕ್ಯಾಸಿನೋಗೆ ಹೋಗಿದ್ದೆ. ಚಿತ್ರ ಪ್ರಚಾರಕ್ಕಾಗಿ ನಮ್ಮ ಮ್ಯಾನೇಜರ್ ಹೋಗಬೇಕು ಅಂತ ಹೇಳಿದ್ದರಿಂದ ಸೊಹೈಲ್ ಮತ್ತು ಅರ್ಬಾಜ್ ಖಾನ್ ಜೊತೆ ಹೋಗಿದ್ದೇನೆ. ಶೇಖ್ ಫಾಝಿಲ್ ನನಗೆ ವೈಯಕ್ತಿಯ ಪರಿಚಯವಿಲ್ಲ ಎಂದು ತಿಳಿಸಿದ್ದರು.
ಅರ್ಬಾಜ್ ಖಾನ್ ಜೊತೆ ‘ಮೇ ಜರೂರ್ ಆವೂಂಗಾ’ ಸಿನಿಮಾ ಮಾಡುತ್ತಿರುವಾಗ ಕ್ಯಾಸಿನೋಗೆ ಹೋಗಿದ್ದೇನೆ. ಅಲ್ಲಿ ಸಿನಿಮಾ ಪ್ರಮೋಶನ್ ಚೆನ್ನಾಗಿ ಆಗುತ್ತೆ ಅಂತಾ ಹೇಳಿದ್ದರಿಂದ ಚಿತ್ರತಂಡ ನಮ್ಮನ್ನ ಕ್ಯಾಸಿನೋಗೆ ಕಳುಹಿಸಿದ್ದರು. ಕ್ಯಾಸಿನೋ ಪಾರ್ಟಿಗೆ ತೆರಳಿರುವ ಫೋಟೋಗಳು ನನ್ನ ಇನ್‍ಸ್ಟಾಗ್ರಾಂನಲ್ಲಿವೆ. ಯಾವ ಫೋಟೋ ಮತ್ತು ವಿಡಿಯೋಗಳನ್ನ ಡಿಲೀಟ್ ಮಾಡಿಲ್ಲ. ಪ್ರೊಫೆಷನಲ್ ಗಾಗಿ ಕ್ಯಾಸಿನೋಗೆ ಹೋಗಿದ್ದೆ, ಎರಡು ಬಾರಿ ಸ್ಟೆಪ್ ಹಾಕಿ ಬಂದಿದ್ದೇನೆ. ಕರೀಷ್ಮಾ ಕಪೂರ್, ಸೊಹೈಲ್ ಖಾನ್, ಅರ್ಬಾಜ್ ಖಾನ್ ಜೊತೆ ನನ್ನ ಜೊತೆ ಬಂದಿದ್ದರು ಎಂದು ವಿವರಿಸಿದ್ದರು.
ಎರಡನೇ ಬಾರಿ ಅರ್ಬಾಜ್ ಖಾನ್ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನ ಹೋಟೆಲ್ ನಲ್ಲಿ ಪಾರ್ಟಿ ಮಾಡಲಾಗಿತ್ತು. ಬರ್ತ್ ಡೇ ಪಾರ್ಟಿ ವೇಳೆ ಫಾಝಿಲ್ ಬಂದಿದ್ದ. ಆದ್ರೆ ಅವನನ್ನ ನಾನು ಭೇಟಿಯಾಗಿರಲಿಲ್ಲ. ಪಾರ್ಟಿಯಲ್ಲಿದ್ದಾಗ ಸಹಜವಾಗಿ ಫಾಝಿಲ್ ಜೊತೆ ಫೋಟೋ ತೆಗೆಸಿಕೊಳ್ಳಲಾಗಿತ್ತು. ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿವೆ. ಎರಡು ಬಾರಿಯೂ ಅರ್ಬಾಜ್ ಖಾನ್ ಮೂಲಕವೇ ಫಾಝಿಲ್ ಭೇಟಿಯಾಗಿದೆ. ಅರ್ಬಾಜ್ ಖಾನ್ ಬರ್ತ್ ಡೇ ಪಾರ್ಟಿ ವೇಳೆ ಮಾಧ್ಯಮದವರು ಸಹ ಇದ್ರು. 10 ರಿಂದ 20 ನಿಮಿಷ ನಾನು ಅಲ್ಲಿದ್ದು ಹೊರ ಬಂದಿದ್ದೇನೆ. ಆಗ ಯಾರಿಗೂ ಫಾಝಿಲ್ ಬಗ್ಗೆ ನಮಗೂ ಗೊತ್ತಿರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ರಾಗಿಣಿ ಜೈಲು ಸೇರುತ್ತಿದ್ದಂತೆ ಪ್ರೀತಿಯ ಮನೆ ಸೇಲ್ – 2 ಕೋಟಿಗೆ ಸೇಲಿಗಿಟ್ಟ ನಟಿಯ ತಂದೆ
ಶ್ರೀಲಂಕಾದ ಕ್ಯಾಸಿನೋಗೆ ಹಬ್ಬದ ಸಮಯದಲ್ಲಿ ಸಿನಿಮಾದ ದೊಡ್ಡ ದೊಡ್ಡ ತಾರೆಯರನ್ನ ಕರೆಸುತ್ತಾರೆ. ನಮಗೂ ಆ ರೀತಿಯ ಆಹ್ವಾನಗಳು ಬರುತ್ತವೆ. ಆಹ್ವಾನ ಬಂದಾಗ ಆ ವ್ಯಕ್ತಿಯ ಹಿನ್ನೆಲೆ ಚೆಕ್ ಮಾಡಲು ಆಗಲ್ಲ. ಪಾರ್ಟಿಗಳಲ್ಲಿ ಫೋಟೋ ತೆಗೆದುಕೊಳ್ಳುವಾಗ ಪ್ರತಿಯೊಬ್ಬರ ಹಿನ್ನೆಲೆ ಕೇಳಲು ಆಗಲ್ಲ. ಫೋಟೋ ತೆಗೆದುಕೊಂಡವರು ತಪ್ಪು ಮಾಡಿದ್ರೆ ನಮ್ಮನ್ನ ಪ್ರಶ್ನೆ ಮಾಡೋದು ಎಷ್ಟು ಸರಿ ಎಂದು ಐಂದ್ರಿತಾ ಪ್ರಶ್ನಿಸಿದ್ದರು.
ಮಡಿಕೇರಿ: ಈಶ ಫೌಂಡೇಶನ್ ಆಶ್ರಯದಲ್ಲಿ ‘ಕಾವೇರಿ ಕೂಗು’ ಅಭಿಯಾನದ ಆರಂಭಗೊಂಡಿದ್ದು, ಇಂದು ತಲಕಾವೇರಿಯಿಂದ ಶುರುವಾಗುವ ಬೈಕ್ ರ‍್ಯಾಲಿಗೆ ಫೌಂಡೇಶನ್‍ನ ಅಧ್ಯಕ್ಷ ಜಗ್ಗಿ ವಾಸುದೇವ್ ಚಾಲನೆ ನೀಡಿದರು.
ಇಂದಿನಿಂದ ಆರಂಭವಾಗಿರುವ ಕಾವೇರಿ ಕೂಗು ಬೈಕ್ ರ‍್ಯಾಲಿ 8ರಂದು ಬೆಂಗಳೂರು ತಲುಪಲಿದೆ. ಕೊಡಗಿನ ಕಾವೇರಿ ಉಗಮ ಸ್ಥಾನದಿಂದ ಸಂಚಾರ ಪ್ರಾರಂಭವಾಗಿ ಪೊಂಪು ಹಾರ್ ನಲ್ಲಿರುವ ತಿರುವರೂರ್ ಮೂಲಕ ಸಾಗಿ, ಚೆನ್ನೈನಲ್ಲಿ ಮುಕ್ತಾಯವಾಗಲಿದೆ. ರ‍್ಯಾಲಿ ಸಾಗುವ ಮಾರ್ಗಮಧ್ಯೆ ಕಾವೇರಿ ಕೂಗಿನ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಕಾವೇರಿ ಕೂಗು ಬೈಕ್ ಜಾಥಾಕ್ಕೆ ಸ್ಯಾಂಡಲ್‍ವುಡ್ ನಟರಾದ ನಟ ದಿಗಂತ್ ಮತ್ತು ರಕ್ಷಿತ್ ಶೆಟ್ಟಿ ಸಾಥ್ ನೀಡಿದರು. ಈ ಬಗ್ಗೆ ಮಾತಾನಾಡಿದ ರಕ್ಷಿತ್ ಹಾಗೂ ದಿಗಂತ್, ಕಾವೇರಿ ಕೊಳ್ಳ ಪ್ರದೇಶದಲ್ಲಿ ಮರಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಫಲವತ್ತತೆ ಕಡಿಮೆಯಾಗಿ ಭೂ ಕುಸಿತ, ಪ್ರವಾಹಗಳು ಸೃಷ್ಟಿ ಆಗುತ್ತಿವೆ. ಫಲವತ್ತತೆ ಹೆಚ್ಚಿಸಲು ಮರಗಳನ್ನು ನೆಡಬೇಕಾದ ಅಗತ್ಯವಿದೆ ಎಂದು ನಟ ದಿಗಂತ್ ತಲಕಾವೇರಿಯಲ್ಲಿ ಹೇಳಿದರು. ಅಲ್ಲದೆ ಕಾವೇರಿ ಕೊಳ್ಳಪ್ರದೇಶದಲ್ಲಿ 1 ಲಕ್ಷ ಗಿಡನೆಟ್ಟು ಬೆಳೆಸುತ್ತೇವೆ ನಟ ರಕ್ಷಿತ್ ಶೆಟ್ಟಿ ತಿಳಿಸಿದರು.
ಈ ಕಾವೇರಿ ಕೂಗು ಬಗ್ಗೆ ಮಾತಾನಾಡಿದ ಈಶ ಫೌಂಡೇಶನ್ ಅಧ್ಯಕ್ಷ ಜಗ್ಗಿ ವಾಸುದೇವ್, ಇಷ್ಟು ಮಳೆ ಬರುತ್ತಿದ್ದರೂ ದೇಶದಲ್ಲಿ ಕುಡಿಯಲು ನೀರಿಲ್ಲದಾಗಿದೆ. ನೂರು ವರ್ಷಗಳ ಹಿಂದೆ ಬರುತ್ತಿದ್ದ ಪ್ರಮಾಣದಲ್ಲೇ ಮಳೆ ಬರುತ್ತಿದೆ. ಇದಕ್ಕೆ ಕಾರಣ ಭೂಮಿಗೆ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಕಳೆದುಕೊಂಡಿದೆ. ಹೀಗಾಗಿಯೇ ಕೊಡಗಿನಲ್ಲಿ ಕಳೆದ ಬಾರಿ ಭೂ ಕುಸಿತ ಮತ್ತು ಪ್ರವಾಹ ಸೃಷ್ಟಿ ಆಯಿತು. ಸಹಜವಾಗಿ ಕಾಡು ಇರುವಲ್ಲಿ ಭೂ ಕುಸಿತವಾಗಿಲ್ಲ. ಬದಲಾಗಿ ನಾವು ಎಲ್ಲೆಲ್ಲಿ ಕೈ ಇಟ್ಟಿದ್ದೇವೊ ಅಲ್ಲಿ ಭೂಕುಸಿತವಾಗಿದೆ ಎಂದರು.
ಬಳಿಕ ಮಾತನಾಡಿದ ಅವರು, ಕಾವೇರಿ ಕೊಳ್ಳ ಪ್ರದೇಶದಲ್ಲಿ ಕಳೆದ 10 ವರ್ಷದಲ್ಲಿ 47 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾವೇರಿ ನದಿಯ ನೀರಿ ಸರಿಯಾಗಿ ಸಮುದ್ರ ಸೇರುತ್ತಿಲ್ಲ. ಸಮುದ್ರ ಸೇರುವ ಮೊದಲೇ ನೀರು ಬತ್ತು ಹೋಗುತ್ತಿದೆ. ಈ ಉದ್ದೇಶಕ್ಕಾಗಿಯೇ ಕಾವೇರಿ ಕೂಗು ಅಭಿಯಾನ ಆರಂಭವಾಗಿದೆ ಎಂದು ತಿಳಿಸಿದರು.